ಅಪ್ಪಾ...ಅಪ್ಪಾ...
ಅಪ್ಪಾ.....sss
ನಿನ್ ಮಗ ಕೂಗ್ತಾನೇ ಇದ್ದೀನಿ
ಕೇಳಿಸ್ತಾ ಇಲ್ಲ್ವೇ ಅಪ್ಪಾ..??...
ಪ್ರವಾಹದಲ್ಲಿ ಮನೆಮಠ ಕಳ್ಕೊಂಡೋವ್ರು
ಸಹಾಯಕ್ಕೆ ಕೂಗಿದ್ರೂ..
ಗರ ಬಡ್ದಿರೋ ಸರ್ಕಾರದ್ ಥರಾ....
ಎದ್ದೇಳಪ್ಪಾ...ನನಗೆ ಉತ್ತರಾ ಕೊಡು..
ಹಾ..ಆಂ....ಏನ್ಮಗಾ.....
ಅಲ್ಲಪ್ಪಾ..ಅಮ್ಮನಜೊತೆ ರಾತ್ರಿ
ಜಗಳಮಾಡ್ಕಂಡು ನಾನ್ ಕರೆದ್ರೂ ಕೇಳ್ತಿಲ್ಲವಾ?
ಇಲ್ಲ ಕಣೋ..ಏನೋ ಯೋಚಿಸ್ತಿದ್ದೆ..
ಹೇಳು ಏನು ನಿನ್ನ ಗೋಳು..??
ಹೆಣ್ಣು ದೋಷ ಬಡಿದಿದೆಯಂತೆ
ಮಂತ್ರಿ ಮಂಡಳಕ್ಕೆ ಮತ್ತೆ ಸರ್ಕಾರಕ್ಕೆ ಹೌದಾಪ್ಪಾ..?
ನಂಗೊತ್ತಿಲ್ಲ ಮಗ..
ಅಲ್ಲಪ್ಪಾ ..ನೆರೆಪೀಡಿತರು
ಸಹಾಯ ಕೇಳಿದ್ರೆ .. ಸರ್ಕಾರ ಉಳೀಲಿ
ಅಂತಾರಲ್ಲಾ..
ಹೌದು ಕಣೋ ಆವಾಗ್ಲೇ ಅಲ್ಲವಾ
ಪರಿಹಾರ, ಪುನರ್ವಸತಿ ಸಾಧ್ಯ ಆಗೋದು..?
ಮತ್ತೆ ..ಎತ್ತು ಏರಿಗೆಳದ್ರೆ
ಕೋಣ ನೀರಿಗೆಳೀತಿದೆಯಲ್ಲಪ್ಪಾ..?
ನೀನೇ ಜಾಣ ಕಣೋ ..
ಸರ್ಕಾರ ಉಳಿಯೋದು ಮುಖ್ಯಾನಾ..
ಅನ್ನ, ವಸ್ತ್ರ ಸೂರಿಲ್ಲದೇ ಪರದಾಡ್ತಿರೋರಿಗೆ
ಪರ್ಯಾಯ ವ್ಯವಸ್ಥೇನಾ...?
ನನಗೆ ಮಂಕು ಕವಿದೈತೆ ಮಗಾ
ನಿಜವಾಗ್ಲೂ ನಂಗೊತ್ತಿಲ್ಲ ಮಗು
ಆಜಾದ್ ಸರ್,
ReplyDeleteಸದ್ಯದ ಪರಿಸ್ಥಿತಿಯನ್ನು ನೇರವಾಗಿ ಸಂಭಾಷಣೆಯ ಮೂಲಕ ಚೆನ್ನಾಗಿ ಹೇಳಿದ್ದೀರಿ...
ಅಜ್ಜಿಗೆ ಅರಿವೆ ಕಾಟ ಆದ್ರೆ,
ಮೊಮ್ಮಗಳಿಗೆ ಮಿಂಡನ ಕಾಟವಂತೆ.[ನನ್ನ ಶ್ರೀಮತಿ ಹೇಳಿದ್ದು]
ಅನ್ನುವ ಹಾಗೆ ಆಗಿದೆ ಈ ನಮ್ಮ ಸರ್ಕಾರದ ಪ್ರತಿನಿಧಿಗಳು-ಜನರ ಪರಿಸ್ಥಿತಿ.
This comment has been removed by the author.
ReplyDeleteಶಿವು ಮೊದಲಿಗೆ ನಿಮ್ಮ ಮತ್ತು ಪ್ರಕಾಶ್ (ಮತ್ತೂ ಸ್ನೇಹಿತರು ಇರಬಹುದು ಅವರಿಗೂ) ಪುಸ್ತಕ ಬಿಡುಗಡೆಸಮಾರಂಭಕ್ಕೆ ಶುಭಕೋರಿ ನಿಮ್ಮನ್ನು ಅಭಿನಂದಿಸುತ್ತೇನೆ.
ReplyDeleteನಿಜ ನೋಡಿ, ಯಾವುದೇ ರೀತಿಯಲ್ಲಿ ತೊಂದರೆಯಿಲ್ಲದ ನಮಗೇ ಹೀಗೆ ಕಸಿವಿಸಿ ಸಂಕಟ ಆಗುತ್ತಿದ್ದರೆ..ಅನ್ನ-ನೀರು-ಸೂರು ಕಳೆದುಕೊಂಡು ಬವಣೆಪಡುವವರ ಪಾಡೇನು..ಯೋಚಿಸಿ...ಅವರ ಆಕ್ರೋಶ ಎಷ್ಟಿರಬಹುದು..?? ಅದಕ್ಕೇ ಬಸ್ಸುಗಳಲ್ಲಿ ಹೈದರಾಬಾದಿಗೆ ಹೋಗಿ ರೆಸಾರ್ಟುಗಳಲ್ಲಿ ಮೋಜು-ಮಸ್ತಿಯಲ್ಲಿರುವವರಿಗೆ ಘೇರಾವ್ ಹಾಕುವ ಯೋಜನೆ ಮಾಡಿದ್ದಾರಂತೆ..!!!
ನಿಮ್ಮ ಮೊದಲ ಪ್ರತಿಕ್ರಿಯೆಗೆ ಮೊದಲ ನಮನ
ನಿಜ ಸರ‍್ ಈ ರಾಜಕಾರಣಿಗಳ ದೊಂಬರಾಟ ರೇಜಿಗೆ ಹುಟ್ಟಿಸುತ್ತಿದೆ.
ReplyDeleteಅಝಾದಣ್ಣ,
ReplyDeleteಅಲ್ಲಿ ಸಾಯುತ್ತಿರುವವರ ಬಗ್ಗೆ ಯೋಚಿಸೋಲ್ಲ ಇವರುಗಳ ಕುರ್ಚಿ ಉಳಿಸಿಕೊಳ್ಳುವುದರತ್ತಲೇ ಒಲವು.... ಅತ್ತ..ಯೆಡ್ಡಿ ರೆಡ್ಡಿಗಳ ಸಮರ, ಇತ್ತ ಕೊಳು ತುತ್ತಿಗೊ ನಲುಗುತ್ತಿದ್ದಾನೆ ಕನ್ನಡ ಕುವರ.....
ದೊರೆ ಮಾಡಿದ್ದಕ್ಕೆ ದಂಡವಿಲ್ಲವೇ..? ಇಂತ ರಾಜಕಾರಣಿಗಳಿಗೆ ದಂಡಿಸಲೇಬೇಕು.... ಅಪ್ಪ ಅಮ್ಮನ ಜಗಳದಲಿ ಕೊಸುಬಡವಾಯ್ತು ಎಂಬಂತಾಗುತ್ತಿದೆ... ಕರ್ನಾಟಕದ ಪರಿಸ್ಥಿತಿ ಅದೋಗತಿಯತ್ತ ಸಾಗಿದೆ...
ಅಝಾದಣ್ಣ,
ReplyDeleteಮಗುಗೆ ಇರೋ ಬುದ್ದಿ ಸಹ ನಮ್ಮ ರಾಜಕಾರಣಿಗಳಿಗೆ ಇಲ್ಲದಂತಾಗಿದೆ.......
ಈಗಿನ ಪರಿಸ್ಥಿತಿಯನ್ನು ಬಹಳ ಚೆನ್ನಾಗಿ ಅಪ್ಪ ಮಗು ಸಂಭಾಷಣೆಯ ಮೂಲಕ ಹೇಳಿದ್ದೀರಿ.....
ಯಾವಾಗ ಕಲಿಯುತ್ತಾರೊ ನಮ್ಮ ಸರ್ಕಾರದ ಪ್ರತಿನಿಧಿಗಳು......
ಆಝಾದರೆ,
ReplyDeleteಸೂಪರ್ ಫೋಟೋಗಳ ಜೊತೆಗೇ ಸೂಪರ್ ವ್ಯಾಖ್ಯಾನ ನೀಡಿದ್ದೀರಿ. ಮಂತ್ರಿಗಳೇ ಈಗ ಸಂತ್ರಸ್ತರಾಗಿದ್ದಾರೆ! ಅವರ ಪುನರ್ವಸತಿಯೇ ಈಗ ಮುಖ್ಯವಾಗಿದೆ!
ಯಡ್ಡಿ ರೆಡ್ಡಿಗಳ ಜಗಳದಳಲ್ಲಿ ಪಾಪ ನೆರೆಗೆ ಎಲ್ಲ ಕಳೆದುಕೊಂಡಿರುವವರನ್ನು ಕೇಳುವವರಿಲ್ಲವಾಗಿದೆ. ವ್ಯವಸ್ಥೇಯ ಅವ್ಯೆವಸ್ಥೆ...
ReplyDeleteನಿಮ್ಮವ,
ರಾಘು.
ನಿಮ್ಮ ಮಾತು ನಿಜ ಸುಮ..ದೊಂಬರಾಟದವರೂ ತಮಗೆ ಹೊಟ್ಟೆ ತುಂಬುವಷ್ಟು ಸಿಕ್ಕರೆ ದಿನದ ಆಟ ಮುಗಿಸಿ ಹೆಂಡತಿ ಮಕ್ಕಳೊಂದಿಗೆ ಸುಖನಿದ್ರೆ ಮಾಡ್ತಾರೆ...ಆದ್ರೆ ಇವರ ಆಸೆಬುರುಕತನಕ್ಕೆ ಕೊನೆಯೇ ಇಲ್ಲವೇ...?? ಇಂತಹವರನ್ನು ನೋಡಿ..2012..selective ಆಗಿ ಇವರಮೇಲೇನೇ ಬೀಳ್ಬಾರ್ದ ಅನ್ನಿಸುತ್ತೆ....ಛೆ..ಹೇಸಿಗೆ.....media ಮುಂದೆ ಅಳುವಷ್ಟು ಸ್ವಾಭಿಮಾನ ಕಳೆದುಕೊಳ್ಳಬೇಕೆ..??
ReplyDeleteಎಂಥವರ ’ಮನಸಿ’ ಗೂ ವಾಕರಿಕೆ ಬರುವಂತಿದೆ ಮನಸು ಮೇಡಂ ಇವರ ನಡೆ-ನುಡಿ...ಅವರ ಟಿ.ವಿ. ಸಂದರ್ಶನ ನೋಡಿ...ಅವರು ಹೇಳೋ ಮಾತಿಗೂ ಅವರ ನಡೆಗೂ ಎಲ್ಲಿಯ ಹೋಲಿಕೆ..??
ReplyDeleteಮಹೇಶ್..ನಿಮ್ಮ ಮೂರನೇ ಕಣ್ಣು ತೆಗೆದು..ಒಬ್ಬೊಬ್ಬರನ್ನೇ ..ಚುನ್..ಚುನ್..ಕೆ ಮಾರೂಂಗಾ..ಅಂತ ಸುಟ್ಠಾಕಿ ..."ನ ರಹೇಗಾ ಬಾಂಸ್ ನ ಬಜೇಗೀ ಬಾಂಸುರಿ".......ಹಹಹ
ReplyDeleteಸುನಾಥ್ ಸರ್...ಮಂತ್ರಿಗಳು ಬೇರೆರೀತಿಯಲ್ಲಿ someತ್ರಸ್ತರು....!!! ನಮ್ಮ ಮನೆಯವರು ಊಟ ಇಲ್ಲದೇ ಸುರಿಲ್ಲದೇ ಇದ್ದರೆ ನಮಗೆ ಹೇಗೆ ತಾನೆ ಗಂಟಲಿಗೆ ಅನ್ನ ಸೇರುತ್ತೆ..ನಿದ್ದೆ ಹತ್ತುತ್ತೆ..?? ಇವರ ಮಕ್ಕಳುಮರಿ ತಿಂದುಂಡೂ ಕರಗದ ಆಸ್ತಿ ಕೊಡುವ ಮತದಾರ ಒಪ್ಪೊತ್ತಿನ ಅನ್ನಕ್ಕೆ ಕೈಚಾಚಬೇಕೆಂದರೆ...ಅವನ ಸ್ಥಿತಿಯ ಕಲ್ಪನೆಯೂ ಇರುವುದಿಲ್ಲವೇ ಈ ..ತಿರುಪೆ (ಓಟ್) ತಿನ್ನೋರಿಗೆ.??
ReplyDeleteರಘು ಖುಷಿಯಾಯ್ತು ನಿಮ್ಮ ಪ್ರತಿಕ್ರಿಯೆ ನೋಡಿ..ಎಲ್ಲ ಮಾಯ ಇಂದು ಜನಸಾಮಾನ್ಯನೇ ಮಾಯ...ಎಡ್ದಿ-ರೆಡ್ಡಿ ಗುದ್ದಾಟದಲಿ ಚಡ್ಡಿ ಹರ್ದವರನ್ನು ಕೇಳೋರ್ಯಾರು...?
ReplyDeleteಆಜಾದ್ ಸರ್, ಪ್ರವಾಹದಂತಹ ವಿಕೋಪದ ಪರಿಸ್ಥಿತಿಯಲ್ಲೂ ರಾಜಕಾರಣಿಗಳು ತಮ್ಮ ಜಗಳದಲ್ಲೇ ಮೈಮರೆತಿದ್ದಾರೆ ಎಂದು ನಿಮ್ಮ ಕವನ ಮಾರ್ಮಿಕವಾಗಿ ಸೂಚಿಸುತ್ತದೆ
ReplyDeleteದೀಪಸ್ಮಿತಾ, ಅಧಿಕಾರ, ಹಣ ಇವೆರಡನ್ನು ಬಿಟ್ಟರೆ ಜನಸಾಮಾನ್ಯ ಕಸಕ್ಕೆ ಸಮ ಎನ್ನುವುದನ್ನ ಈ ವಿದ್ಯಮಾನಗಳು ತೋರಿಸಿವೆ....
ReplyDeleteಎತ್ತು ಏರಿಗೆ ಕೋಣ ನಿರಿಗೆ
ReplyDeleteನಮ್ಮ ರಾಜಕಾರಣಿಗಳ ಪರಿ ಇದು.
ಮೂದೇವಿಗಳಿಗೆ ಇವೆಲ್ಲಾ ಅರ್ಥವಾಗೊಲ್ಲ ಇವಕ್ಕೆ. ಎಲ್ಲಾದರಲ್ಲೂ ಹಣ ಮಾಡೋದು/ಹಣ ಉಳಿಸೋದು ಒ೦ದೇ ಅವಕ್ಕೆ ಗೊತ್ತಿರೋದು. ಏನೇ ಮಾಡೋದಕ್ಕೂ ಅಧಿಕಾರ ಬೇಕು ನೋಡಿ ಅದಕ್ಕೆ ಕಿತ್ತಾಟ. ಇನ್ನು ಬರ/ನೆರೆ ಅ೦ತೀರಾ ಅದೆಲ್ಲಾ ಅವರ ಹಣೆಬರಹ. ನಾವೇನು ಪುಕ್ಕಟ್ಟೆ ಆರಸಿ ಬ೦ದಿವಾ ಅದಕ್ಕೆ ಚಿ೦ತೆ ಮಾಡೋಕ್ಕೆ. ಜ಼ಣ ಜ಼ಣ ಹಣ ಎಣಿಸಿದ್ದೀವಿ ಸಾಲ ಸೊಲ ಮಾಡಿ ಎಲೆಕ್ಶನ-ನಲ್ಲಿ ಗೆಲ್ಲೊಕ್ಕೆ ಅ೦ಥಾವ್ವು ನಚಿಕೆ ಬಿಟ್ಟೋವು. ಅವುಗಳ ಕಥೆ ಚೆನ್ನಾಗಿ ಹೇಳಿದ್ದಿರ್‍ಆ ಮಗನೋಟ್ಟಿಗಿನ ಸ೦ವಾದದಲ್ಲಿ.
ಹಾಸ್ಯದೊಳಗಿನ ವ್ಯಂಗ್ಯ ಚೆನ್ನಾಗಿದೆ. ಯಡ್ಡಿ-ರೆಡ್ಡಿ ಜಗಳದ ನಡುವೆ ಬಡ ಜನತೆ ಪರಿಹಾರಕ್ಕಾಗಿ ಹೆಣ(ವಾ)ಗುತ್ತಿದ್ದಾರೆ.
ReplyDeleteವೋಟು ನೀಡಿ ಗೆಲ್ಲಿಸಿ ಮಂತ್ರಿ ಪದವಿ ಕರುಣಿಸಿದ್ದು ನಾವುಗಳು...
ReplyDeleteಈಗ ಇವರು ಕಿತ್ತಾಡಿ ಕೊಂಡು ಒಬ್ಬರ ಮೇಲೊಬ್ಬರು ರಾಡಿ ಎರಚಿಕೊಂಡು ಕೊನೆಗೆ ಮಾಧ್ಯಮದೆದುರು ನಾವೆಲ್ಲಾ ಭಾಯಿ ಭಾಯಿ ಅಂತ ಕೈ ಕೈ ಹಿಡಿದು ನಿತ್ತರೆ ಕಾರಣ ಕೇಳುವ ಅಧಿಕಾರ ನಮಗಿಲ್ಲವಂತೆ... ಎಂತಹ ಮಾನಗೇಡಿ ಜನಾ ಸರ್ ಇವ್ರೆಲ್ಲಾ...
ಬರವಣಿಗೆಯಲ್ಲಿನ ಮೊನಚು, ವ್ಯಂಗ್ಯ ಸಕ್ಕತ್ ಆಗಿದೆ.. ಅಭಿನಂದನೆಗಳು...
ಸೀತಾರಾಂ ಸರ್, ನಾಡಿನ ಅಭಿವೃದ್ಧಿ ಯೋಜನೆ ಎನ್ನೋ ನೇಗಿಲಿಗೆ ಬೆಳವಣಿಗೆ ಹೊಲವನ್ನ ಬಿತ್ತೋಕೆ ಮುಂಚೆ ಉಳಬೇಕು ಅಂತ ನೊಗಕ್ಕೆ ಒಂದು ಎಮ್ಮೆ ಮತ್ತೊಂದು ಎತ್ತು ಕಟ್ಟಿದರೆ ಆಗೊದೇ ಹೀಗೆ...ಅದನ್ನ ರೈತ ಅರಿತ್ಕೋ ಬೇಕು...ನಿಮ್ಮ ಅನಿಸಿಕೆ ಮತ್ತು ಪ್ರತಿಕ್ರೆಯೆಗೆ ಧನ್ಯವಾದ
ReplyDeleteಅಪ್ಪ-ಮಗನ ಸಂವಾದಕ್ಕೆ ಪ್ರೇರಣೆ ನನಗೆ Indian Expressನ ನನ್ನ ಕಾಲೇಜ್ ದಿನಗಳಲ್ಲಿ ಬರುತ್ತಿದ್ದ " Idont know son" (ಲೇಖಕರು ಯಾರು ಅಂತ ನೆನೆಪಿಲ್ಲ). ತೇಜಸ್ವಿನಿ, ಇಲ್ಲಿ ಮಗುಗೆ ಅರ್ಥವಾಗೋದನ್ನ ಬುದ್ಧಿ ಇದ್ದವರು ಯಾಕೆ ಅರ್ಥ ಮಾಡ್ಕೊಳ್ಳಲ್ಲ ಎನ್ನುವುದನ್ನ ತಿಳಿಸೋದರ ಜೊತೆಗೆ ಪ್ರಸ್ತುತ ವಿದ್ಯಮಾನದ ಬಗ್ಗೆ ಮನೆಯಲ್ಲೇ ಹೇಗೆ ದ್ವಂದ್ವಗಳು ಕಾಡುತ್ತೆ ಎನ್ನೋದು..ನಿಮಗೆ ಇಷ್ಟ ಆದುದ್ದಕ್ಕೆ ಸಂತೋಷ...
ReplyDeleteನಿಮ್ಮ ಹಾಸ್ಯ, ಅದರೊಂದಿಗೆ ವಿಷಯ ನಿವೇದನೆ ಮನಸ್ಸಿಗೆ ನಾಟಿತು.
ReplyDeleteನಮ್ಮ ನಾಯಕರಿಗೆ ಇದು ಅರ್ಥವಾಗಿದ್ದರೆ ಸಾಕಿತ್ತು ಅಲ್ಲವೇ
ಡಾ. ಗುರು...ನಮ್ಮ ನಾಯಕರು ಎಷ್ಟು ಎಮ್ಮೆ ಚರ್ಮ ಅಂದ್ರೆ ಅವ್ರಿಗೆ ಏನೂ ನಾಟೋದಿಲ್ಲ...
ReplyDeleteನಾವು ಕವನಗಳು..ಬ್ಲಾಗ್ ಬರಹಗಳು..ಪತ್ರಿಕೆ ಪ್ರಚಾರ, ಜನ ಪ್ರತಿಭಟನೆ ಎಲ್ಲಾ...ನಮ್ಮನ್ನ ನಾವೇ ಎಚ್ಚರಿಸಿಕೊಳ್ಳೋಕೆ ಆದ್ರೆ ಅದೇ ಒಂದು ಪ್ಲಸ್ ಪಾಯಿಂಟ್...ಏನಂತೀರಾ??