Wednesday, November 4, 2009

ಪ್ರಾಚೀನ ವೇದ, ಪುರಾಣ, ಖಗೋಳಶಾಸ್ತ್ರದ ನಮ್ಮ ಪ್ರಕಾರ...೨೦೧೨...ಏನು??

ಸ್ನೇಹಿತರೇ...(ಭಾವ ಮಂಥನಕ್ಕೆ ಭೇಟಿ ಕೊಟ್ಟಿರುವ ಮಿತ್ರರಿಗೆ ವಿಶೇಷತಃ) ಇದೇನು ಭಾವಮಂಥನದ ಪೋಸ್ಟ್ ತೆಗೆದು ಇಲ್ಲಿ ಹಾಕಿದ್ದಾನಲ್ಲ...??!! ಎಂದುಕೊಳ್ಳಬೇಡಿ..ನಿಜ ಅದನ್ನ ಹಾಕಿದ್ದು ..ಕಾರಣ ಜಲನಯನದಲ್ಲಿ ಈ ಬಗ್ಗೆ ಮಾಹಿತಿ ಕೊಟ್ಟಿದ್ದೆ ಆದರೂ ಹಲವು ಜಲನಯದ ಓದುಗ ಮಿತ್ರರು ಭಾವಮಂಥನವನ್ನು ನೋಡಲಾಗಿಲ್ಲ....ಆ ಕಾರಣಕ್ಕೆ ಈ ಉಪ-ಲೇಖನ.
"ಅರೆ ಇವನ..!! ಪ್ರಳಯದ ಇವನ ಸಂಶಯ ನಿವಾರಿಸಿ ಮೂರುದಿನ ಆಗಿಲ್ಲ, ಇನ್ನೊಬ್ಬರನ್ನ ಕರೆತರ್ತಾ ಇದ್ದಾನಲ್ಲ...ಇವರೇನಾದ್ರೂ ಅವರ್ದ್ದೇ ತರ್ಕ ತಂದರೋ ಹೇಗೆ..? ಎ0ಮ್ದು ಕೊಳ್ಳುತ್ತಾ ರಾಮಣ್ಣ ತನ್ನ ಮನೆಕಡೆ ಬರುತ್ತಿದ್ದ ಗೋಪಾಲ ಮತ್ತು ಅವರ ಜೊತೆಯಿದ್ದವರನ್ನು ಬರ ಮಾಡಿಕೊಳ್ಳುತ್ತಾ...‘ಬಪ್ಪಾ ಗೋಪಲ...ಬನ್ನಿ ಒಳಗ್ಬನ್ನಿ....ಅಂದಹಾಗೆ ಇವರು ಯಾರು ಗೊತ್ತಾಗಲಿಲ್ಲ..?‘
ರಾಮು ಇವರು ನಮ್ಮ ವೇದ ಪುರಾಣಗಳನ್ನು ಅಧ್ಯಯನ ಮಾಡ್ತಿರೋರು..ಇವರು ನಿನ್ನ ಮಾತು ಒಪ್ತಾರೆ..ಅಷ್ಟೇ ಅಲ್ಲ..ನಮ್ಮ ವೇದ ಪುರಾಣಗಳ ಪ್ರಕಾರ ಇದು ಕೇವಲ ಯುಗದ ಪ್ರಾರಂಭ ಆಗಿರೋಕೆ ಸಾಧ್ಯ ಅನ್ತಿದ್ದಾರೆ...ಅದೂ ನಮ್ಮ ಯುಗದ್ದಲ್ಲ..ಮಾಯನ್ ಯುಗದ್ದು..ನಮ್ಮ ಪ್ರಕಾರ ಯುಗ ಮುಗಿಯೋಕೆ...ಇನ್ನೂ ದೂರ ಇದೆ...ಪ್ರಳಯ ಹಾಗಿರ್ಲಿ...ಅಂತಾರೆ....ಅಂದಹಾಗೆ ಇವರು ವಿದ್ವಾನ್ ಸಿದ್ಧರಾಮ್. ಎಂದು ತನ್ನ ಜೊತೆಯಿದ್ದವರನ್ನು ರಾಮಣ್ಣನಿಗೆ ಪರಿಚಯಿಸಿದ.

ಸರ್ ನೀವೊಬ್ಬ scientist ಅಂತ ಹೇಳಿದ್ರು ಗೋಪಾಲ್ ..ಹಾಗೇ ಇವರ ಪ್ರಳಯದ ಬಗ್ಗೆ ಎದ್ದಿರುವ ಊಹಾ ಪೋಹಾ ನಿಜವಲ್ಲ ಅಂತ ಹೇಳಿದ್ದಿರಂತೆ...ಎಂದರು ವಿದ್ವಾನ್
ನೋಡಿ ನನ್ನ ಅಧ್ಯಯನ ಈಗಷ್ಟೇ ಪ್ರಾರಂಭವಾಗಿದೆ ನನಗೆ ತಿಳಿದಿರುವುದನ್ನು ಹೇಳ್ತೇನೆ...
ನಮ್ಮ ವೇದ-ಪುರಾಣಗಳ ಪ್ರಕಾರ...ಬ್ರಹ್ಮ ನಮ್ಮ ಸೃಷ್ಠಿಕರ್ತ...ಇಡೀ ಬ್ರಹ್ಮಾಂಡದ ಸೃಷ್ಠಿಕರ್ತ ಎಂದೇ ಹೇಳಬೇಕು. ಅಲ್ಲವೇ?
ಹೌದು...ಎಂದು ಗೋಣು ಹಾಕಿದರು ರಾಮಣ್ಣ ಮತ್ತು ಗೋಪಾಲ್ ..
ಮುಂದುವರಿದ ವಿದ್ವಾನರು...

ಮಾಯನ್ ಪ್ರಕಾರ ಅವರ ಪಂಚಾಂಗ 2012 ಕ್ಕೆ ಕೊನೆಯಾದರೆ ಬೇರೆ ಯುಗ ಪ್ರಾರಂಭವಾಗಬೇಕು...ಅದು ಪ್ರಳಯ ಅನ್ನುವುದಾದರೆ...ಮನುಕುಲದ ಸಮಾಪ್ತಿ ಎಂದಾಯಿತು...ಆದರೆ ಹಿಂದೂ ಪುರಾಣಗಳ ಪ್ರಕಾರ ಇದು ಅಸಾಧ್ಯ..ಇದು ಕೇವಲ ಒಂದು ಯುಗದ (ಮಾಯನ್) ಅಂತ್ಯ ಮತ್ತು ಮತ್ತೊಂದರ ಪ್ರಾರಂಭ...!!!
ಹೇಗೆ??

ಇದರ ಪ್ರಕಾರ ಬ್ರಹ್ಮನ ಆಯಸ್ಸು 100 ಭ್ರಹ್ಮ ವರ್ಷಗಳು. ಬ್ರಹ್ಮನ ವರ್ಷದ ಒಂದುದಿನವನ್ನು ‘ಕಲ್ಪ‘ ಎನ್ನುತ್ತೇವೆ...ಇದರ ಅವಧಿ 4.32 ದಶಕೋಟಿ ವರ್ಷಗಳು (ಇದು ಪೃಥ್ವಿಯ ಆಯಸ್ಸಿಗೆ ಸಮ). ಪ್ರತಿ ಕಲ್ಪದಲ್ಲಿ (ಆತನ ಒಂದು ದಿನ) ಬ್ರಹ್ಮ ಹದಿನಾಲ್ಕು ಮನು ವಂಶಗಳನ್ನು ಸೃಷ್ಠಿಸುತ್ತಾನಂತೆ. ಒಂದು ಮನು ವಂಶ (ಮನ್ವಂತರ) ಎಪ್ಪತ್ತೊಂದು ಚತುರ್ಯುಗಗಳನ್ನು ಹೊಂದಿರುತ್ತದಂತೆ...ಚತುರ್ಯುಗಗಳು ಅಂದರೆ ಸತ್ಯ, ತ್ರೇತ, ದ್ವಾಪರ ಮತ್ತು ಕಲಿ.
ಸತ್ಯಯುಗ - 1,728,000 ಮಾನವ ವರ್ಷಗಳ ಅವಧಿ ಹೊಂದಿರುತ್ತೆ
ತ್ರೇತ ಯುಗ- 1,296,000 ಮಾ.ವ.
ದ್ವಾಪರ ಯುಗ- 864,000 ಮಾ.ವ.
ಕಲಿಯುಗ - 432,000 ಮಾ.ವ.
ನಮ್ಮ ಆರ್ಯಭಟನ ಪ್ರಕಾರ ಕಲಿಯುಗ ಪ್ರಾರಂಭವಾಗಿದ್ದು 3102 ಕ್ರಿಸ್ತ ಪೂರ್ವ ಅಂದರೆ 3102+2009=5111 ವರ್ಷ ಕಳೆದಿದೆ. ಅಂದರೆ ಕಲಿಯುಗದ 432,000 ವರ್ಷ ಅವಧಿಯಲ್ಲಿ ನಾವು ಕಳೆದಿರುವುದು ಕೇವಲ 5111 ವರ್ಷ ಅಂದರೆ ಯುಗಾಂತ್ಯಕ್ಕೆ ಇನ್ನೂ 427,889 ವರ್ಷ ಇದೆ ನಂತರ ಒಂದು ಚತುರ್ಯುಗ ಮುಗಿದಂತೆ. ಈಗ ನಡೆಯುತ್ತಿರುವ ಮನು ವಂಶ ಏಳನೇ ಮನುವಂಶ ಇದಕ್ಕೆ ವೈಸ್ವತ್ ಮನುವಂಶ ಎನ್ನುತ್ತಾರೆ. ಹೀಗೆ ಹದಿನಾಲ್ಕು ಮನು ವಂಶಕಾಲ ಮುಗಿದ ಮೇಲೆ ಪ್ರಳಯ...!!!! ಅಂದ್ರೆ ಕಲಿಯುಗದ ಉಳಿದಿರುವ 427,889 ವರ್ಷದ ನಂತರ ಇನ್ನೂ ಏಳು ಮನುವಂಶಗಳು ಉಳಿದಿವೆ..ಪ್ರತಿ ಮನು ವಂಶಕ್ಕೆ 71 ಚತುರ್ಯುಗಗಳು ಅಂದರೆ 71 x 7 = 497 ಚತುರ್ಯುಗಗಳು. ಒಂದು ಚತುರ್ಯುಗ = 4,320,000 ವರ್ಷ ಅಂದರೆ ಉಳಿದಿರುವ 497 ಚತುರ್ಯುಗಕ್ಕೆ ತಗಲುವ ಅವಧಿ 2,147,040,000 ವರ್ಷ...!!!!! ಅಲ್ಲಿಗೆ ಬ್ರಹ್ಮನ ಒಂದು ದಿನ (ಕಲ್ಪ) ಮುಗಿಯುತ್ತೆ ಅಂದರೆ ಪ್ರಳಯ, ಬ್ರಹ್ಮ ನಿದ್ರಿಸುತ್ತಾನೆ..ಬೆಳಗೆದ್ದು ಮತ್ತೊಂದು ಸೃಷ್ಠಿ ಅಂದರೆ 14 ಮನುವಂಶಗಳು...ಹೀಗೆ ಬ್ರಹ್ಮನ ೧೦೦ ವರ್ಷ..ಒಬ್ಬ ಬ್ರಹ್ಮನ ಪತನ ಮತ್ತೊಬ್ಬನ ಉಗಮ...

ಇಲ್ಲಿ ಇನ್ನೊಂದು ಅಂಶ ಗಮನಿಸಿದಿರಾ? ಸತ್ಯಯುಗದ ಬರೋಬ್ಬರಿ ಅರ್ಧ ಮಾತ್ರ ದ್ವಾಪರ..ಅಂದರೆ ಧರ್ಮ ಒಂದು ಕಾಲಲ್ಲಿ ನಡೆದ ಯುಗ...ಅದರಲ್ಲಿ ಅರ್ಧ ಕಲಿಯುಗ..ಅಲ್ಲವಾ..? ಇಲ್ಲಿ scientific ಆಗಿ ನೋಡೊದಾದರೆ.. ಸತ್ಯ ಜನಸಂಖ್ಯೆ ಕಡಿಮೆ..ನಿಸರ್ಗ ಸಂಪದ್ಭರಿತ..ತ್ರೇತಾ..ಅದರ ನಂತರದ್ದು..ಜನ ಸಮ್ಖ್ಯೆ ಸ್ವಲ್ಪ ಜಾಸ್ತಿ ಅವರ ಅಧರ್ಮಾಚರಣೆ ಹೆಚ್ಚುತ್ತೆ..ಆದ್ರೂ ಪ್ರಕೃತಿ ಮಾನವನ ಮೇಲೆ ಹಾಗೇ ಕೃಪೆ ಮುಂದುವರಿಸುತ್ತೆ..ದ್ವಾಪರ..ಹೆಚ್ಚು ಜನಸಂಖ್ಯೆ..ಪ್ರಕೃತಿ ಹುಸಿ ಮುನಿಸು ಮತ್ತು ಮಾನವನ ಉದ್ಧಟತನ..ಅಧರ್ಮ..ಹೆಚ್ಚುತ್ತೆ..ಅಧರ್ಮಿಗಳು ಹೆಚ್ಚುತ್ತಾರೆ..ಕಲಿ ಪ್ರಕೃತಿಯ ವಿಕೋಪ ಹೆಚ್ಚುವ ಕಾಲ..ಮಾನವ ತನ್ನ ಸಜಾತಿಯಲ್ಲದೇ ಪ್ರಕೃತಿಯ ಇತರ ಜೀವಿಗಳಮೇಲೆ ಕ್ರೂರಿಕ್ರಮಕ್ಕೆ ಮುಂದಾಗುವುದು..ಪ್ರಕೃತಿಯ ವ್ಯಾಪಕ ಪ್ರಕೋಪ..ಆಗ ಹಲವೆಡೆ ನಾಶ ಕೆಲವೆಡೆ ಶಾಂತ..ಇದು ಮುಂದುವರೆದು..ಮಾನವ ಸಂತತಿ ಕಡಿಮೆಯಾಗಿ..ದುಷ್ಠನಾಶ..ಅಂದರೆ ಜನಸಂಖ್ಯೆಯಲ್ಲಿ ಹೆಚ್ಚಿರುವ ದುಷ್ಟರ ದಮನ...ಉಳಿಯುವವರು ಸತ್ಯಕ್ಕಾಗಿ ಧರ್ಮಕ್ಕಾಗಿ ನಿಲ್ಲುವವರು...ಅಂದರೆ...ಸತ್ಯಯುಗದ ಪುನರಾರಂಭ....ಹೀಗೆ..೭೧ ಬಾರಿ..ಪ್ರತಿ ಬಾರಿಯೂ ಸತ್ಯವಂತರ ನೆರಳಲ್ಲಿ ಮೊದಲಿಗೆ ಕೆಲಪಾಪಿಗಳು ಉಳಿದುಬಿಡುತ್ತಾರೆ..ನಂತರದ ಚತುರ್ಯುಗದ ಕೊನೆಗೆ ಮೊದಲ ಚತುರ್ಯುಗಕ್ಕಿಂತ ಸ್ವಲ್ಪ ಹೆಚ್ಚು ಪಾಪಿಗಳು...ಹೀಗೆ..೧೪ ಮನುವಂಶಗಳು ಮುಗಿಯುವ ವೇಳೆಗೆ ಭೂಭಾರ ಹೆಚ್ಚಾಗಿ ಪಾಪಿಗಳೇ ತುಂಬಿಹೋಗಿ..ಸೃಷ್ಟಿಕರ್ತನಿಗೆ ಯುಗಗಳ ಮೂಲಕ ರಿಪೇರಿಮಾಡಲಾಗದು ಎನಿಸಿ..ಪೂರ್ತಿ ಪ್ರಳಯವಾಗಿ...ಮತ್ತೊಂದು ಪೃಥ್ವಿ ರೂಪ ಹೊರ ಹೊಮ್ಮುತ್ತೆ..ಅದರೊಂದಿಗೆ ಬ್ರಹ್ಮನ ಎರಡನೇ ಕಲ್ಪದ ಪ್ರಾರಂಭ..ಅಂದರೆ ಹದಿನಾಲ್ಕು ಮನುವಂಶಗಳಲ್ಲಿ ಏಳು ಮುಗಿದಿವೆ ಎಂಟನೆಯ ಮನು ವಂಶದ ಸೃಷ್ಟಿ.........ಹೀಗೆ ನೋಡಿದರೆ..??!!
ನನ್ನ ತರ್ಕದಿಂದ.....ಏನು ಪ್ರತಿಕ್ರಿಯೆ ಬರುತ್ತೋ ನೋಡೋಣ......


ಯಾವುದಕ್ಕೆ ಅಂತ್ಯ? ಯಾರದ್ದು ಅಂತ್ಯ? ವಿಚಾರ ವೈಶಾಲ್ಯತೆಯ ಆಧಾರಕ್ಕೆ ಬಂದರೆ 2012..ಅಂದರೆ ಇನ್ನು ಉಳಿದಿರುವ ಮೂರು ವರ್ಷ...ಉಳಿದಿರುವ ಕಲಿಯುಗದ ಅವಧಿಯಲ್ಲಿ ತೃಣಮಾತ್ರ!!!

18 comments:

 1. ಮಾಯನ್ ಒಂದೇ ಅಲ್ಲ.. ನಾಷ್ಟ್ರಡಾಮಸ್ ಕೂಡ ನಾಶ ಆಗುತ್ತೆ ಅಂತ ಪದ್ಯ ಬರೆದು ಇದ್ದಾನೆ ಅಂತೆ.

  ನಾಷ್ಟ್ರಡಾಮಸ್ ಅಮೆರಿಕ ದ ಮೇಲೆ ಧಾಳಿ ಕೂಡ ಹೇಳಿದ್ದ ಅಂತ ಸಾರುತ್ತಾ ಇದ್ದಾರೆ, ಅವನು ಏನು ಹೇಳಿದನೋ, ಇವರು ಏನು ಅರ್ಥ ಮಾಡಿಕೊಂಡರೆ ದೇವರೇ ಬಲ್ಲ.

  ಮಾಯನ್ಸ್ ಭೂಮಿಗೂ ಚಂದ್ರಂಗು ಇರೋ ದೂರ ನ ಕ್ಯಾಲ್ಚುಲತೆ ಮಾಡಿದ್ರು ಅನ್ನೋ ಕಾರಣಕ್ಕೆ ಆವರಣ ನಂಬಬೇಕ? ನಮ್ಮ ಭಾರತೀಯ ಗಣಿತ ಶಾಸ್ತ್ರ ಉನ್ನತ ಮಟ್ಟದ್ದು ಅಂತ ವಿಶ್ವವೇ ಒಪ್ಪುವುದರಿಂದ ಸಧ್ಯಕ್ಕೆ ನಾವು ಸಾಯೊಲ್ಲ ಅಂತ ಅಂದುಕೊಬಹುದು.

  ಒಳ್ಳೆ ವಿಚಾರ, ಅಂಕಿ ಅಂಶಗಳೊಂದಿಗೆ ಚೆನ್ನಾಗಿ ವಿವರಿಸಿದ್ದೀರಿ.

  ReplyDelete
 2. ವೇದದ ಮೂಲಕ ಪ್ರಳಯದ ಬಗ್ಗೆ ಚೆನ್ನಾಗಿ ವಿವರಿಸಿದ್ದೀರಿ. ಧನ್ಯವಾದಗಳು.

  ReplyDelete
 3. superaagi bardidini....

  e article na save maditkondidini...

  chennagi artha aythu.. haage marethu hogidda kelavu nenapu aadavu.. thank u..

  with regards,

  shivashankara vishnu yalavathi

  http://shivagadag.blogspot.com

  ReplyDelete
 4. ಬಾಲು ಸ್ವಾಗತ ಮತ್ತು ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ
  ನಾಸ್ಟ್ರಡಾಮಸ್ ಮತ್ತು ೨೦೧೨ ಚಲನಚಿತ್ರ ಮತ್ತು ಇಂತಹ ಹಲವು ಜಾಹೀರಾತುಗಳು ತಮ್ಮ ಸರಕನ್ನು ಮಾರಾಟಮಾಡುವ ಏಕಮಾತ್ರ ಉದ್ದೇಶದ ಪ್ರಚಾರಗಳು ಎಂದು ಮಾಯನ್ ಎಕ್ಸ್ಪರ್ಟ್ ಹೇಳಿದ್ದಾರೆ..ಹಾಗೆಯೇ ಮಾಯನ್ ಅಂದಿನ ಜನಾಂಗದ ಸಮಯ-ಸೀಮಿತ ತಿಳುವಳಿಕೆಗೆ ಮಾತ್ರ ೨೦೧೨ ನಿದರ್ಶನ ಹೊರತು...ಪ್ರಳಯ ಅಥವಾ ಸರ್ವನಾಶ ಎಂದೇನೂ ಅಲ್ಲ ಎಂದೂ ಹೇಳಿದ್ದಾರೆ..

  ReplyDelete
 5. ಚುಕ್ಕಿಗೆ ಚಿತ್ರ ಮೂಡಿಸುವ ಮತ್ತೊಂದು ಅವಕಾಶ ..ನಿಜ ನಿಮ್ಮ ಚಿತ್ರ ನನ್ನ ಭಾವವನ್ನೇ ಪ್ರತಿಬಿಂಬಿಸಿದೆ...ಧನ್ಯವಾದ

  ReplyDelete
 6. ಶಿವಶಂಕರ್...ನೀವು ಸ್ಕ್ರೋಲ್ ಮಾಡಿ ಹಿಂದಿನ ಪೋಸ್ಟ್ ನೋಡಿದಿರಿ ಅನ್ನಿಸುತ್ತೆ...ಧನ್ಯವಾದ ಬಂದಿರಿ..ಪ್ರತಿಕ್ರಿಯಿಸಿದಿರಿ ಮತ್ತು ಪ್ರೀತ್ಸಾಹಿಸಿದಿರಿ.

  ReplyDelete
 7. ಯಾವುದು ಅಂತ್ಯವೋ, ಯಾವುದು ಆರಂಬವೋ,
  ಇವತ್ತಿರುವುದೇ ಜೀವನ, ನಾಳೆ ಅನ್ನೋದೇ ಅಂತ್ಯ, ಏನಂತಿರ ಸರ್,
  ಮುಂದಿನ ಒಂದು ಕ್ಷಣ ಎನ್ನಗುತ್ತೆ ಅನ್ನೋದೇ ನಮಗೆ ಗೊತ್ತಿಲ್ಲ,
  ಆದ್ದರಿಂದ ೩ ವರ್ಷ ತುಂಬಾ ದೊಡ್ಡದು ಬಿಡಿ

  ReplyDelete
 8. ಗುರು, ಇದು ಸಂತೃಪ್ತಭಾವದ ಸಂಕೇತ ಅಸಂತೃಪ್ತ ಭವವಿದ್ದರೆ ಮಾತ್ರ ಮುಂದೇನು ಎನ್ನುವ ಆತಂಕ..ಹೆದರಿಕೆ ಎಲ್ಲ..ಅಲ್ಲದೇ (individualistic) ವ್ಯಕ್ತಿ ಅಥವಾ ಜೀವಿಯೊಂದರ ಪರಿಧಿಯಲ್ಲಿ ನೋಡಿದರೆ ಜೀವ-ನಿರ್ಜೀವ ಎನ್ನುವುದೇ ಆಕಸ್ಮಿಕ..ಈ ಕ್ಷಣ..ಮತ್ತೊಂದು ಕ್ಷಣಗಳ ಅಂತರದಲ್ಲಿ ಏನಾದರೂ ಆಗಬಹುದು..ಇನಂತಹ ಅನೂಹ್ಯದ ಸತ್ಯವನ್ನು ಅರಿತಮೇಲೆ..ನಾಳೆ ಏನಾದರೇನು..? ಅಲ್ಲವೇ?? ಆದರೂ ನೋಡಿ ಮನುಷ್ಯನ ಯೋಜನೆ ಮತ್ತು ಯೋಚನೆಗಳಿಗೆ ವಿರಾಮ ಎನ್ನುವುದೇ ಇಲ್ಲ...ಧನ್ಯವಾದ..ನಿಮ್ಮ ಪ್ರತಿಕ್ರಿಯೆಗೆ..

  ReplyDelete
 9. ಒಳ್ಳೆಯ ತರ್ಕ ಸರ‍್. ಯಾರೇನೇ ಭವಿಷ್ಯ ನುಡಿದರೂ ಇರುವಷ್ಟು ಕಾಲ ಬೇರಾರಿಗೂ ತೊಂದರೆ ನೀಡದೆ ಸಂತೋಷದಿಂದ ಕಳೆಯುವುದೊಳ್ಳೆಯದಲ್ಲವೆ.

  ReplyDelete
 10. ಸುಮ ಆಕ್ಷರಶಃ ನಿಜ ನಿಮ್ಮ ಮಾತು...
  ನಿನಗಪಕಾರ ಮಾಡಿದರೂ ಅವರಿಗುಪಕಾರ ಮಾಡುವುದು ಮಹಾತ್ಮನ ಲಕ್ಷಣ.. (ಇದು ಬಹು ಅಸಾಧ್ಯ ಮಾತು)
  ನೀನು ಉಪಕಾರಿಯಾಗು...(ಹೀಗಿದ್ದರೆ ಉತ್ತಮ...ಆದರೆ...ಆಚರಿಸುವುದು ಎಲ್ಲಕಾಲಕ್ಕೂ ಕಷ್ಟ)
  ಇರರರಿಗೆ ಉಪಕಾರ ಮಾಡಲಾಗದಿದ್ದರೂ ಚಿಂತೆಯಿಲ್ಲ...ಅಪಕಾರವೆಸಗಬೇಡ... (ಇದು ಸಾಧ್ಯ್ ಮತ್ತು ಹಾಗೆ ಮಾಡಬೇಕೆಂದು ಆಸೆ...ಇತರರಿಂದ ಅಪೇಕ್ಷೆ)

  ReplyDelete
 11. ಸರ್,
  ಜಗತ್ತು ಎಷ್ಟೇ ದಿನ ಇದ್ದರೂ ಮುಂದಿನ ಕ್ಷಣ ನಮಗೆ ಎನ್ನಗುತ್ತೊ ಅರಿಯದ ನಾವು ಮೇಲೆ ಸುಮ ಅವರು ಹೇಳಿದಂತೆ ಇರುವಷ್ಟು ಕಾಲ ಬೇರಾರಿಗೂ ತೊಂದರೆ ನೀಡದೆ ಸಂತೋಷದಿಂದಿರುವುದೆ ಒಳ್ಳಿಯದು ಅಂತ ನನ್ನ ಅನಿಸಿಕೆ....
  ಒಳ್ಳೆ ಮಾಹಿತಿಯುಕ್ತ ಲೇಖನಕ್ಕೆ ಅಭಿನಂದನೆಗಳು...

  ReplyDelete
 12. ನಿಮ್ಮ ಮಾತು ನಿಜ...ಮೊಟಕಾಗುತ್ತಿರುವ ಜೀವನ ವಿಧಾನ..ಎಲ್ಲದಕ್ಕೂ ರೆಡಿ ಮೇಡ್..ಸರಿಹಾರ...
  ಇರುವಷ್ಟು ದಿನ ಸಂತೋಷವಾಗಿದ್ದು...ಸಾಧ್ಯವಾದರೆ ಉಪಕಾರ ಮಾಡು ಸಾಧ್ಯವಾಗಲಿಲ್ಲವೆಂದರೆ...ಅಪಕಾರವನ್ನು ಮಾಡಬೇಡಿ...

  ReplyDelete
 13. ಸಾರ್....
  ಸರಳವಾಗಿ ಅರ್ಥವಾಗುವಂತೆ ಬರೆದಿದ್ದೀರಿ. ಎರಡೂ ಬರಹಗಳನ್ನು ಒಟ್ಟಿಗೆ ಓದಿದೆ. ಮುಂದಿನ ಕ್ಷಣ ಏನಾಗುವುದೆಂದು ಗೊತ್ತಿಲ್ಲದ ಜೀವನ ನಡೆಸುತ್ತಿರುವ ನಾವು... ೩ ವರ್ಷಗಳ ನಂತರದ ಕಥೆ ಚಿಂತಿಸಿದರೇನು ಉಪಯೋಗ ? ಆದರೂ ನಾವು ಯಾರಿಗೂ ನೋವುಂಟುಮಾಡಬಾರದೆಂದು ಎಷ್ಟು ಪ್ರಯತ್ನಿಸಿದರೂ... ಯಾರೂ ಯಾರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲ ಅನ್ನಿಸುತ್ತೆ ಅಲ್ವಾ ಸಾರ್?

  ಶ್ಯಾಮಲ

  ReplyDelete
 14. ಶ್ಯಾಮಲಾವ್ರೇ ನನ್ನ ಬ್ಲಾಗ್ ಕಡೆ ಬಂದಿರಿ ಎರಡೂ ಪೋಸ್ಟ್ ಗಳನ್ನು ನೋಡಿ ನಿಮ್ಮ ಅನಿಸಿಕೆಯನ್ನ ನಮೂದಿಸಿದಿರಿ.. ಧನ್ಯವಾದಗಳು.
  ನಿಜ ನಾವು ಬೇಕೆಂದೇ ಯಾರನ್ನದರೂ ಪೀಡಿಸಿದರೆ ತಪ್ಪು..ಗೊತ್ತಿಲ್ಲದೇ ಆಗುವುದಕ್ಕೆ ಕ್ಷಮೆಯಿದೆ...ಇರುವಷ್ಟು ದಿನ ಎಲ್ಲರಿಗೆ ಒಪ್ಪುವಹಾಗೆ ಇದ್ದರೆ ಸಾಕು..

  ReplyDelete
 15. ಆಜಾದ್ ಸರ್, ವಿವರಗಳು ತುಂಬಾ ಚೆನ್ನಾಗಿವೆ. ನಿಜ ಹೇಳಬೇಕೆಂದರೆ ನಾನೂ ಕೂಡ ಈ ಯುಗಗಳ ಬಗ್ಗೆ, ಅವುಗಳ ಅವಧಿಯ ಬಗ್ಗೆ ನನ್ನ ಬ್ಲಾಗಿನಲ್ಲಿ ಬರೆಯಬೇಕೆಂದಿದ್ದೆ. ಈಗ ನಿಮ್ಮ ಲೇಖನ ನೋಡಿ ಅದನ್ನು ಸದ್ಯಕ್ಕೆ ಬಿಡುತ್ತಿದ್ದೇನೆ.

  ಏನೇ ಇರಲಿ, ನಮ್ಮ ಭಾರತೀಯರು ವಿಜ್ಞಾನ ಮತ್ತು ಗಣಿತದಲ್ಲಿ ಎಷ್ಟು ಪರಿಣಿತಿ ಪಡೆದಿದ್ದರು ಎಂದು ಈ ಮಾಹಿತಿ ತೋರಿಸುತ್ತದೆ. ಇಷ್ಟು ದೀರ್ಘಾವಧಿಯ (ಕಲ್ಪ) ಕಲ್ಪನೆ ಕೂಡ ನಮಗೆ ಮಾಡಲು ಕಷ್ಟ, ಅದು ಹೇಗೆ ಆ ಕಾಲದಲ್ಲೆ ಈ ಕಾಲಾಮಾನಗಳನ್ನು ಯೋಚಿಸಿದರೋ ಆಶ್ಚರ್ಯವಾಗುತ್ತದೆ.

  ReplyDelete
 16. ದೀಪಸ್ಮಿತಾವ್ರೆ ಭಾರತದ ಸನಾತನ ಶಾಸ್ತ್ರಗಳ ಕೊಡುಗೆ..ಅಪಾರವಾದುದು ಎನ್ನುವುದಕ್ಕೆ ಶೂನ್ಯವನ್ನ ಗಣಿತಕ್ಕೆ ನೀಡಿದುದರಲ್ಲೇ ಅರ್ಥವಾಗುತ್ತದೆ. ಇಲ್ಲಿ ಇವುಗಳ ಕಾಲಮಾನವನ್ನು ಮಾಯನ್ ಗೆ ಹೋಲಿಸಿ ನೋಡಿದರೆ ...ಬಹುಷಃ ಹಲವಾರು ವಿಷಯಗಳು ಮೊದಲೇ ಗೊತ್ತಿದ್ದ ಜನಾಂಗವಿತ್ತು ಎನ್ನುವುದು ತಿಳಿಯುತ್ತದೆ. ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

  ReplyDelete
 17. ಚೆನ್ನಾಗಿ ಬರೆದಿದ್ದೀರಿ. ಬ್ರಹ್ಮನ ಆಯುಷ್ಯವನ್ನು ಮಾನವ ವರ್ಷಗಳಲ್ಲಿ ಲೆಕ್ಕ ಮಾಡಲು ಹೋಗಿ ತಲೆ ಕೆಟ್ಟುಹೋಯಿತು. ಇದೆಲ್ಲಾ ಯಾವ ಗ್ರಂಥದಲ್ಲಿದೆ ದಯವಿಟ್ಟು ತಿಳಿಸುತ್ತೀರಾ ? ಮೊದಲೆಲ್ಲೋ ಓದಿದ್ದೇನೆ, ಎಲ್ಲಿ ಎಂದು ನೆನಪಾಗುತ್ತಿಲ್ಲ.

  ReplyDelete
 18. ಸಪ್ತವರ್ಣಕ್ಕೆ ಸುಪ್ತ ಮಾಹಿತಿಯ ಬಗ್ಗೆ ಹೇಳಬೇಕೆಂದರೆ....ಸುಮ್ನೆ ವಿಕಿಪೇಡಿಯಾ ನೋಡಿ..ತಿಳಿಯುತ್ತೆ...ಆಧಾರ ಗ್ರಂಥಗಳೂ ತುಂಬಾ ಇವೆ..ಆದ್ರೆ ಒಂದೆಡೆ ಮಾಹಿತಿ ಬೇಕಂದ್ರೆ ಇದೇ ಬೆಸ್ಟು.

  ReplyDelete