Saturday, November 21, 2009

ನಂಗೊತ್ತಿಲ್ಲ ಮಗು


ಅಪ್ಪಾ..
ಏನು ಮಗು?
ನಮ್ಮ ನಾಡು ನಮಗೆ ಮುಖ್ಯ ಅಲ್ಲ್ವಪ್ಪಾ?
ಹೌದು ಕನ್ನಡ ನಾಡು -ಗಂಧದ ಬೀಡು ಅನ್ನೋಲ್ಲ್ವೇ?
ಮತ್ತೆ ದೇಶಭಕ್ತಿ ತೋರ್ಸಿದ್ರೆ ತಪ್ಪಾಗುತ್ತ?
ನಾಡು ಕನ್ನಡಿಗರದು-ದೇಶ ಎಲ್ಲರದ್ದು ತಪ್ಪೆಲ್ಲಿ??
ಮತ್ತೆ ಸಚಿನ್ ಮಾಡಿದ್ದು ತಪ್ಪಂತೆ,
ನಂಗೊತ್ತಿಲ್ಲ ಮಗು

ಅಪ್ಪಾ
ಹೇಳಪ್ಪ..ಏನು?
ಮದ್ಯ ಸರಾಯಿ ಕೆಟ್ಟದಲ್ಲವಾ?
ಹೌದು..ಅದೊಂದು ದುಶ್ಚಟ
ಮನೆ-ಮಠ ಅಷ್ಟೇ ಯಾಕೆ
ಪ್ರಾಣಾನೇ ಹೋದೀತು ಬಿದ್ರೆ ಚಟಕ್ಕೆ
ಮತ್ತೆ ಈಗ ಸರ್ಕಾದವರೇ ಮದ್ಯ
ಮಾರೋ ಸಾವಿರಾರು ಅಂಗಡಿ ತೆರೀತಿದಾರೆ
ಅದು ಅಬ್ಕಾರಿ ಇಲಾಖೆ ಯೋಜನೆ
ಮತ್ತೆ..ಮಕ್ಕಳ ಸ್ಕೂಲುಗಳೇ ಇಲ್ಲ
ಕೆಲವು ಕಡೆ ಅಂತಾರಲ್ಲಾ ಇದು
ಶಿಕ್ಷಣ ಇಲಾಕೆಯ ಯೋಜನೇಲಿಲ್ವಾ?
ನಂಗೊತ್ತಿಲ್ಲ ಮಗು

ಅಪ್ಪಾ,
ಇನ್ನೂ ಎನೋ ನಿನ್ನ ತರಲೆ
ಕೊಲೆ ಸುಲಿಗೆ ಮಾಡೋರನ್ನ ನಮ್ಮ ಪೋಲೀಸ್ರು
ಬಹಳ ಚಾಕ ಚಕ್ಯತೆಯಿಂದ ಹಿಡೀತಿದ್ದಾರೆ
ಹೌದು ಮಗು ನಮ್ಮವರು ದಕ್ಷರು
ಮತ್ತೆ ಮಂಗಳೂರಿನಲ್ಲೊಬ್ಬ ಕೇಡಿ
೨೦-೩೦ ಮದ್ವೆ ಆಗಿ, ಅವ್ರನ್ನ ಕೊಲೆನೂ ಮಾಡ್ದ
ಹೌದು ಮಗ..ಐದಾರು ವರ್ಷದಿಂದ
ನಡೆಸ್ದ ತನ್ನ ಧಂಧೆ ಅಂತ ಟೀವೀ ವಾರ್ತೆ ಬಂದಿತ್ತಲ್ಲ
ಮತ್ತೆ ಅಷ್ಟರವರೆಗೂ ದಕ್ಷತೆ ಮೇಯೋಕೆ ಹೋಗಿತ್ತಾ?
ನಂಗೊತ್ತಿಲ್ಲ ಮಗು

30 comments:

  1. ಆಜಾದ್ ಸರ್,
    ಕಹಿ ಸತ್ಯವನ್ನು ಮಗುವಿನ ಬಾಯಲ್ಲಿ ಹೇಳಿಸಿದ್ದೀರಿ. ವಾಸ್ತವದಲ್ಲಿರುವ ವಿಡಂಬನೆಗಳು ಮಕ್ಕಳ ಬಾಯಲ್ಲಿ ಪ್ರಶ್ನೆಗಳಾದಾಗ ದೊಡ್ಡವರು ದಡ್ಡರಾಗದೇ ವಿಧಿಯಿಲ್ಲ!!

    ReplyDelete
  2. ಮಲ್ಲಿ ಬಹಳ ದಿನಗಳ ನಂತರ ಜಲನಯನಕ್ಕೆ ನಿಮ್ಮ ದರ್ಶನವಾಗುತ್ತಿದೆ, ಧನ್ಯವಾದ. ನಮ್ಮ ಕಲಿಕೆ ನಾವು ಮಕ್ಕಳಾಗಿದ್ದಾಗ ಒಮ್ದು ಪ್ರಕಾರದ್ದಾದರೆ, ಮಕ್ಕಳಿಂದ ಕಲಿಯುವುದು ಇನ್ನೊಂದು ಪ್ರಕಾರದ್ದು. ಧನ್ಯವಾದ

    ReplyDelete
  3. Aditya
    U are right, Kelavu sarti naavu niruttarigalaaguttivi, they make ushelpless. My daughter asks if we have evolved from monkeys...then why monkeys are still around??
    I can give her a scientific juggling answer but we get puzzled..why they reamined monkeys??!!!

    ReplyDelete
  4. ಅಝಾದ್ ಸರ್,
    ಮಕ್ಕಳು ಸತ್ಯವನ್ನೆ ಹೇಳುತ್ತಾರೆ.....
    ಅವರ ಬಾಯಲ್ಲಿ ವಾಸ್ತವ ವಿಷಯವನ್ನು ಚೆನ್ನಾಗಿ ಹೇಳಿಸಿದ್ದೀರ....
    ಚೆನ್ನಾಗಿದೆ...

    ReplyDelete
  5. ಅಜಾದ್ ಸರ್,

    ಕಹಿಸತ್ಯಗಳನ್ನು ಮಗುವಿನ ಬಾಯಲ್ಲಿ ಹೇಳಿಸುತ್ತಾ ವಾಸ್ತವಗಳನ್ನು ಈ ಮೂಲಕ ಹೇಳುತ್ತಿದ್ದೀರಿ. ಧನ್ಯವಾದಗಳು

    ReplyDelete
  6. ಅಝಾದಣ್ಣ,
    ನಂಗೊತ್ತಿಲ್ಲ ಗೊತ್ತಿಲ್ಲ ಎಂದೇ ಇಷ್ಟೂಂದು ಬರೀತೀರಿ ಹಹಹ... ವಾಸ್ತವವನ್ನು ಚೆನ್ನಾಗಿ ತಿಳಿದುಕೂಂಡು ತುಂಬಾ ಪ್ರಶ್ನೆ ಆಕುತ್ತಲಿದ್ದಾನೆ ಅಲ್ಲವೇ ನಿಮ್ಮ ಆ ಗೊತ್ತಿಲ್ಲದ ಮಗು ಹಹಹ ತುಂಬಾ ಚೆನ್ನಾಗಿದೆ... ಮುಂದುವರಿಯಲಿ..

    ReplyDelete
  7. ಜಲನಯನ ಸರ್...

    ಈ ಪ್ರಶ್ನೆಗಳು ಎಲ್ಲಾ ಜನಸಾಮಾನ್ಯರಿಗೂ ಇದೆ ಅಲ್ವೇ.... ಅದನ್ನು ಮಗುವಿನ ಮೂಲಕ ಹೇಳಿಸಿದ್ದೀರಿ... ಯಾರು ಕೊಡುವರು ಉತ್ತರಗಳನ್ನು?

    ReplyDelete
  8. ಮಹೇಶ್ ನಿಮಗೆ ಇದು ಗೊತ್ತಿರಬೇಕು................
    ಆಪ್ಪ: ಸೀನಪ್ಪ ಬಂದ ಅನ್ಸುತ್ತೆ..ಲೋ ಪುಟ್ಟ ನಾನು ಮನೇಲಿಲ್ಲ ಅಂತ ಹೇಳ್ಬಿಡು ..
    ಸೀನಪ್ಪ: ಪುಟ್ಟ ಎಲ್ಲೋ ನಿಮ್ಮಪ್ಪಾ?
    ಪುಟ್ಟ: ನಾನು ಮನೇಲಿಲ್ಲ ಅಂತ ಹೇಳೌನೆ ......ಅಂತಾನೆ ಪುಟ್ಟ..
    ಅವನಿಗೆ ಗೊತ್ತಿಲ್ಲದೇ ಹೇಳಿದ್ರೂ ಪುಟ್ಟ ನಮಗೆ ಕಲಿಸೋ ಪಾಠ ಏನು ಗೊತ್ತೇ ಮಕ್ಕಳಿಗೆ ಸುಳ್ಳುಹೇಳೋದನ್ನ ಯಾಕೆ ಕಲಿಸ್ತೀರಿ ಅಂತ
    ಮಕ್ಕಳ ಪ್ರಶ್ನೆಗಳು ನಿಲ್ಲದ ಬಾಣಗಳು...ಎದುರಿಸಿದವನಿಗೇ ಗೊತ್ತು..ಅವು ಎಷ್ಟು ಹರಿತ ಅಂತ

    ReplyDelete
  9. ಶಿವು ನೀವೊಂದು ಗಮನಿಸಿದ್ದೀರಾ...ಗಂಡನ್ನ ಹೆಂದತಿ ಬೈಬೇಕು ಅನ್ಸಿದ್ರೆ...ಮನೇಲಿ ಹಬ್ಬದ ಸಮಯದಲ್ಲಿ..ಸಿನಿಮಾಕ್ಕೆ ಹೋಗಬೇಕು ಅನ್ಸೋದೇ ಇಲ್ಲವೇನೋ ದ್ರಾಬೆ ಮುಂಡೇದೇ...?? ಇಲ್ಲಿ ಮಗು ಹೆಂಡತಿಗೆ ಮಾರ್ಗ ವಿಷಯ ತಿಳಿಸ್ಲಿಕ್ಕೂ ಮತ್ತೆ ಅವಳ ಮಾತಿಗೆ ಸೊಪ್ ಹಾಕದೇ ಇದ್ರೆ ಗಂಡನ್ನ ಮೂದಲಿಸೋಕೂ...ಮಗುವಿನ ಮೂಲಕ ಏನೆಲ್ಲಾ ಸಾಧ್ಯ.....

    ReplyDelete
  10. ನನಗೆ ಗೊತ್ತಿಲ್ಲ ಅಂದ್ಕೊಂಡೇ ನಾನೂ ಕಲಿತ್ಕೋತಾ ಇದ್ದೀನಿ. ಆದ್ರೂ ಕೆಲವು ಮಗು ಕೇಳೋದಕ್ಕೆ ನೀವೂ ಉತ್ತರ ಕೊಡಲಾರ್ದೆ..ಏಯ್ ಸುಮ್ನೇ ಕೂತ್ಕೋಳ್ಳೋ ಅಂದಿರ್ತೀರ ..ಯಾವಾಗ್ಲಾದ್ರೂ....ನಮ್ಮ ಪರಿಸ್ಥಿತಿ ಮಗೂಗೆ ಕೆಲವೊಮ್ಮೆ ಅರ್ಥವಾಗೊಲ್ಲ ಅದನ್ನ ನಾವು ಅರಿತ್ಕೋ ಬೇಕು..ಕೊನೆ ಪಕ್ಷ ನಮ್ಮ ತಿಳ್ವಳಿಕೆ ಹೆಚ್ಚಬೇಕೂಂದ್ರೆ...ಅಲ್ಲ್ವೇ ಮನಸು ಮೇಡಂ

    ReplyDelete
  11. ಹಲವಾರು ಪ್ರಶ್ನೆಗಳನ್ನ ನಾವೂ ಹಾಕ್ತೀವಿ..ಯಾರು ಉತ್ತರಿಸೊರು ಅನ್ನೋದೇ ಗಿತ್ತಿಲ್ಲದೇ..ಅಲ್ವೇ...? ಉದಾಹರಣೆಗೆ: ಮನೇಲಿ ಕೂತಿರ್ತೀರ..ಎನೋ ಗಹನ ಚರ್ಚೆಮನೆಯವರೊಂದಿಗೆ ನಡ್ದಿರುತ್ತೆ...ಏಕಾ ಏಕಿ.. (ಈಗ ಮಾಮೂಲಿ ಅನ್ನಿ..ಅದು ಬೇರೆ ವಿಷಯ) ಲೈಟ್ ಹೊರ್ಟೋಗುತ್ತೆ...ನೀವೇನಂತೀರಿ..ಈ ಸರ್ಕಾರದವರಿಗೆ ಯಾರಪ್ಪಾ ಹೇಳೋರು..?? ಬಿಲ್ ಮಾತ್ರ ಫೈನು ಅದು ಇದು ಅಂತ ಕಟ್ಟಿಸ್ಕೋಂತಾರೆ ಕರೆಂಟ್ಮಾತ್ರ ಸರ್ಯಾಗೇ ಸಪ್ಲೈ ಮಾಡಲ್ಲ..? ಇತ್ಯಾದಿ..ಗೊತ್ತು ಅಲ್ಲಿ ಯಾರೂ ಉತ್ತರಿಸೋರು ಇಲ್ಲ ಅಂತ ಅಥವಾ ಎಲ್ಲರೂ ಉತ್ತರಿಸಬೇಕು ಅಂತ...ಅಲ್ಲವೇ..ಸುಧೇಶ್

    ReplyDelete
  12. ಚೆನ್ನಾಗಿದೆ ಪರಿಸ್ಥಿತಿಯ ವಿಡಂಬನೆ.. ಕೊನೆ ಪ್ರಶ್ನೆಯಲ್ಲಿ "ದಕ್ಷತೆ ಮೇಯೋಕೆ ಹೋಗಿತ್ತಾ" ಅಂತ ಕೇಳಿದ್ದಂತೂ ಸೂಪರ್, ಮಗುವಿನ ಪ್ರಶ್ನೇ ಸೀರೀಸ (ಸೀರಿಯಸ ಪ್ರಶ್ನೇ)ಮುಂದುವರೆಯಲಿ

    ReplyDelete
  13. ಅಜಾದ್ ಸರ್,,
    ನಿಮ್ಮ ಪ್ರಶ್ನಾವಳಿಯ ಮೂಲಕ,, ವಾಸ್ತವದ ಕಹಿ ಸತ್ಯವನ್ನು ತುಂಬ ಚೆನ್ನಾಗಿ ವಿವರಿಸುತ್ತ ಇದ್ದೀರಾ... ಬರಿ ಮಗುಗೆ ಮಾತ್ರ ಅಲ್ಲ,, ನಮಗೂ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಗೊತ್ತಿರೋದಿಲ್ಲ....

    ReplyDelete
  14. ಪ್ರಭು, ಮಗುವಿನ ಮೂಲಕ ನಮ್ಮ ಅಲ್ಪತೆ, ನಮ್ಮ ನಿರ್ವಿಣ್ಣತೆ ಮತ್ತು ನಮ್ಮ ಅವಿವೇಕಗಳನ್ನು ಮೂದಿಡುವಪ್ರಯತ್ನ ಇದು. ನಿಮ್ಮ ಪ್ರೋತ್ಸಾಹ ಇದ್ದು ಬೆನ್ನುತಟ್ಟುತ್ತಾ ಇದ್ದರೆ...ಖಂಡಿತಾ...
    ಮಗು ಪ್ರಶ್ನೆ ಕೇಳ್ತಾನೇ ಇರುತ್ತೆ...ನಾವು ಉತ್ತರಿಸಲಾಗದೇ ಮುಖ-ಮುಖ ನೋಡ್ತಾನೇ ಇರೋಣ.

    ReplyDelete
  15. ಗುರು, ಪ್ರತಿಯೊಬ್ಬ ಬ್ಲಾಗಿ ತನ್ನದೇ ಆದ ಛಾಪಿನ ಪೋಸ್ಟ್ ಒಂದನ್ನ ಬೆಳೆಸೋದಕ್ಕೆ ಇಚ್ಛಿಸ್ತಾನೆ..ನನ್ನದೂ ಅದೇ ಪ್ರಯತ್ನ ದರಲ್ಲಿ ಒಮ್ದು...ಮಗು-ಅಪ್ಪನ ಪ್ರಶ್ನೆ-ನಿರುತ್ತರಾವಳಿ.

    ReplyDelete
  16. ಪುಟ್ಟ ಮಗುವಿನ ಮುಗ್ದತೆಯ ಮಾತಿನಲ್ಲಿ-ನಮ್ಮ ವ್ಯವಸ್ಥೆಯ ವಿಡ೦ಬನೆಯ, ನಿರುತ್ತರದ ಪ್ರಶ್ನೆಗಳನ್ನು ತಾವು ಎತ್ತುವ ಪರಿ ಅಮೋಘ ಮತ್ತು ವಿನೂತನ.

    ReplyDelete
  17. ಸರ್,
    ತಂದೆ ಮಗುವಿನ ಸಂಭಾಷಣೆ ಏನೆಲ್ಲಾ ಸತ್ಯವನ್ನು ಹೊರಗೆ ಹಾಕುತ್ತಿದೆ,
    ನನಗೆ ಇದು ತುಂಬಾ ಇಷ್ಟವಾಯಿತು
    ಮಕ್ಕಳು ದೇವರು ಅಂತಾರಲ್ಲ ಹಾಗೆ ಸತ್ಯದ ದರ್ಶನ ಇಲ್ಲಿ

    ReplyDelete
  18. ಸೀತಾರಾಂ ಸರ್
    ನಮ್ಮಲ್ಲಿಯ ಕೆಲವು ಲೋಪಗಳನ್ನು ಬೇರೆಯವರು ತೋರಿಸಿದರೆ ಅದು ನಮ್ಮ ಅಹಂಗೆ ಬಿದ್ದ ಪೆಟ್ಟು ಎನ್ನುತ್ತೇವೆ..ಆಕ್ಷೇಪಣೆಯೂ ಮಾಡ್ತೇವೆ...ಅದು ಗಂಡ-ಹೆಂಡಿರ ಮಧ್ಯೆಯೂ ಆಗಬಹುದು...ಅದ್ರೆ ನಮ್ಮ ಮಗು ಅದನ್ನೇ ಬೊಟ್ಟು ಮಾಡಿ ತೋರಿಸಿದರೆ..ನಾಚಿಕೆಯೆನಿಸುತ್ತೆ ತಿದ್ದಿಕೊಳ್ಳಲು ಪ್ರಯತ್ನಿಸುತ್ತೇವೆ..ಇದೇ ಕಾರಣಕ್ಕೆ ನಾನು ಮಗುವನ್ನು ನೆಪವಾಗಿಸಿದ್ದೇನೆ ತಿದ್ದಲು..... ಅಲ್ಲಲ್ಲ ನನ್ನನ್ನು ನಾನೇ ತಿದ್ದಿಕೊಳ್ಳಲು.....ನಿಮ್ಮ ಅನಿಸಿಕೆಗೆ ಧನ್ಯವಾದ

    ReplyDelete
  19. ಡಾ. ಗುರು, ಮಕ್ಕಳು ದೇವರು ನಿಜ ನಿಮ್ಮ ಮಾತು...ಅವರ ಮಾತನ್ನು ಅಲ್ಲ ಗಲೆಯೋಕಾಗೊಲ್ಲ ಮನಸ್ಸಿನಲ್ಲೇ ಕುಟುಕುತ್ತೆ ನಮ್ಮದು ತಪ್ಪಿದ್ದರೆ.. ಧನ್ಯವಾದ

    ReplyDelete
  20. makkala prashnege uttara helodu kashta.

    navu kade paksha mundina peeligege ondu olleya samajana kodthaa illa ansutte.

    ReplyDelete
  21. ಬಾಲು, ನಿಜ ನೀವು ಹೇಳೋದು....ಈಗ ಬರ್ತಿರೋ ರಿಯಾಲಿಟಿ ಶೋಗಳನ್ನೇ ನೋಡಿ....
    ಮಕ್ಕಳು (೭-೧೦ ವರ್ಷಾನೂ ಆಗಿರೊಲ್ಲ) ಹಾಡು..ಜಿಂಕೆಮರೀನಾ...ಬಿನ್ ಲ್ಯಾಡನ್ ನಮ್ಮ ಮಾವ....
    ಇಲ್ಲಿ ನಮ್ಮ ಪಾತ್ರ ಏನೂ ಇಲ್ಲವೇ..?

    ReplyDelete
  22. ಎಲ್ಲ ಪ್ರಶ್ನೆಗಳಿಗೂ ಉತ್ತರ ಇರೋದಿಲ್ಲ, ಕೆಲವೊಮ್ಮೆ ಉತ್ತರಿಸಲು ಆಗಲ್ಲ ಅಲ್ವೇ ಸರ್..
    ನೀವು ಕೇಳಿರೋದನ್ನೆಲ್ಲಾ, ಸ್ವಲ್ಪವಾದರೂ ಯೋಚಿಸುವವರು ಒಂದಲ್ಲಾ ಒಂದ್ಸಲ ತಮ್ಮನ್ ತಾವೇ ಕೇಳ್ಕೊಂಡಿರ್ತಾರೆ. ಉತ್ತರ ನಮಗ್ಯಾರಿಗೂ ಸಿಕ್ಕಿಲ್ಲ ಅಲ್ವಾ...
    ನಾನೊಬ್ಬ ಜನಸಾಮಾನ್ಯ, ನನ್ನೊಬ್ಬನಿಂದೇನು ಆದೀತು ಅನ್ನೋದು ನಮ್ಮೆಲ್ಲರಲ್ಲಿ ಬೆಳೆದು ನಿಂತಿರೋ ಭಾವನೆ ಅಂತ ನನಗನ್ನಿಸುತ್ತೆ.
    ತಪ್ಪು ಮಾಡಿದಾಗ ಖಂಡಿಸೋದು, ಪ್ರತಿಭಟಿಸೋದು. ಏನೂ ಸಾಧ್ಯವಾಗದಾಗ ನಾವು, ನಮ್ಮ ಪರಿಸರ, ನಮ್ಮ ಕೈಗೆಟುಕುವ ಸಮಾಜ, ಇವಿಷ್ಟನ್ನು ಶುದ್ಧವಾಗಿಡೋದು.. ಹೀಗೆ ಒಂದು ಪ್ರಯತ್ನ ಮಾಡ್ತಾ ಬಂದರೆ ನಾಳಿನ ಮಕ್ಕಳು ಕೇಳೋ ಪ್ರಶ್ನೆಗಳೇ ಬದಲಾಗಬಹುದಲ್ವೇ?

    ReplyDelete
  23. ಜಲನಯನ,
    ಏನ್ ಸರ್ ಇದು.. ಪ್ರತಿ ಸರಿ ಏನಾದ್ರು ಹೊಸದು ಕೊಡ್ಬೇಕು ಅಂತ ಹರಕೆ ಹೊತ್ಕೊಂಡಿದ್ದಿರ... :) ಮಕ್ಕಳು ಯಾವಾಗಲು ಸತ್ಯ ವನ್ನೇ ಹೇಳ್ತಾರೆ ಎನ್ನೋದು ನಂಬಿಕೆ ಮಾತ್ರವಲ್ಲ ಅದು ವಾಸ್ತವ... ಮಕ್ಕಳು ಸುಳ್ಳು ಹೇಳೋಲ್ಲ ಹೇಳೋಲ್ಲ.. ಮಕ್ಕಳ ಕೈ ನಲ್ಲಿ ಎಲ್ಲರ ಜನ್ಮ ಜಾಲಾಡ್ಸಿಬಿತ್ರಿ.....
    ನಿಮ್ಮವ,
    ರಾಘು.

    ReplyDelete
  24. ಅಜಾದ್ ಸರ್.
    ಮಕ್ಕಳೆಂದರೆ ಸತ್ಯದ ಕನ್ನಡಿ ಅಂತಾರೆ..... ಹಾಗೆ ನಿಮ್ಮ ಮಗು ಸತ್ಯಕ್ಕೆ ಚಾಟಿ ಬೀಸಿ ಬೀಸಿ ಹೊಡೆದಿದೆ..... ಯಾರಿಗೂ ಇದರ ಉತ್ತರ ಗೊತ್ತಿಲ್ಲ ಅನಿಸತ್ತೆ ಸರ್.....

    ReplyDelete
  25. ರಾಘು..ನನಗೆ ಮಗುವಿನ ಮಾಧ್ಯಮದಲ್ಲಿ ನಿಜ ಹೇಳುವುದು ಸುಲಭ ಹಾಗೂ ದೊಡ್ಡವರೆನಿಸಿಕೊಂಡ ನಮಗೆ ನಾಚಿಕೆಯಿಂದಲಾದರೂ ಪಾಠಕಲಿಯುವುದು ಅನಿವಾರ್ಯವೆನಿಸಲಿ ಎಂದು...ನಿಮ್ಮ ಪ್ರತಿಕ್ರಿಯೆಗೆ ಪ್ರೋತ್ಸಾಹಕ್ಕೆ ಧನ್ಯವಾದ...

    ReplyDelete
  26. ಆನಂದ್ ನಿಜ ನಿಮ್ಮ ಮಾತು..ನಮ್ಮಲ್ಲಿ ಆ ಸ್ಥಿತಪ್ರಜ್ಜ್ನೆ ಬಂದು ವಿವೇಚನೆ ಜಾಗೃತಗೊಂಡರೆ...ಮಗುವಿನ ಪ್ರಶ್ನೆ ಬದಲಾಗಬಹುದು...ಧನ್ಯವಾದ

    ReplyDelete
  27. ದಿನಕರ್, ಸತ್ಯದ ಛಡಿಏಟು..ನಮ್ಮ ಮಗುವಿನಿಂದಲೇ ಆದರೆ ಎಚ್ಚೆತ್ತುಕೊಳ್ಳಲು ಸುಲಭ..ಅಲ್ವೇ..? ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  28. ಜಲನಯನ ಅವ್ರೆ..

    ಇನ್ನೇನ್ ತಾನೇ ಹೇಳಕ್ಕಾಗುತ್ತೆ ಬಿಡಿ..

    ---http://balipashu.blogspot.com/2009/11/blog-post.html

    ReplyDelete
  29. ಧನ್ಯವಾದ ರಾದೆಯವರೇ...ನನ್ನ ಬ್ಲಾಗಿಗೆ ನಿಮ್ಮ ಪ್ರವೇಶ ಮತ್ತು ಪ್ರತಿಕ್ರಿಯೆ ಎರಡಕ್ಕೂ

    ReplyDelete