Friday, November 27, 2009

ನಿಸರ್ಗದ ಮೂರು ಶಕ್ತಿಗಳು

ಕಿರಣ
ಚುಮು ಚುಮು ಛಳಿಯಲಿ
ತೂರಿ ಬಂದ ಹೊಂಗಿರಣಕೆ
ಮೈಯೊಡ್ಡು ತವಕದಮನ
ನೆತ್ತಿ ಏರಿ ಸುಡು ಸುಡುವಲಿ
ಹರಡುವ ಕೊಡೆಯಡಿಯಲಿ
ಮೈಮನ ಚೆಲ್ಲುವ ಬಯಕೆ
ಮನಮಾತ್ರವಲ್ಲದೇ
ತನುವಿಗೂ ಧಗಿಸುವ ಬೇಗೆ
ಸಂಜೆ ಇದ್ದರೂ ಇಲ್ಲದೆ
ಕದ್ದೋಡಿದಂತೆ ಸೂರ್ಯ
ದಿನವಿಡೀ ಕಾದು ಕೆಂಪಾಗಿ
ಮುಳುಗುವ ಸೊಂಪಾಗಿ.....
ಒಂದು ಬೇಕೆನ್ನುವ ಹಿತಕಿರಣ
ಇನ್ನೊಂದು ಹೋಗೆನ್ನುವ ಚರಣ


ಅಲೆ
ಆಟದ ಅಲೆ
ಬೀಳುವ ಅಲೆ
ಮಲಗಿರುವುದಲೆ
ಒಮ್ಮೆಲೇ ಎದ್ದುದಲೆ
ಭೋರ್ಗಯುತ್ತಲೇ
ಪರ್ವತವಾಯಿತಲೆ
ತೋಯಿಸಿತಲೆ
ಕೊಚ್ಚಿಕೊಂಡೊಯ್ಯಿತಲೆ
ಸುನಾಮಿ, ಕತ್ರಿನಾ,
ಚಂಡಮಾರುತ, ಫಯಾನ
ಅದೇ ಅಲೆ.....
ಎಷ್ಟು ವಿಭಿನ್ನ? ವ್ಯತ್ಯಾಸ


ಬೆಳಕು
ಮಿಂಚುಹುಳು-ಚೆಲ್ಲಿಬೆಳಕು
ದೀಪ, ಕತ್ತಲ ಕಳೆವ ಮಂದ ಬೆಳಕು
ಒಂದು ಆಂತರಿಕೆ ನೆಲೆಯ ಸೆಲೆ
ಇನ್ನೊಂದು ಆಗಬಹುದು ಜ್ವಾಲೆ

ಬೆಳಕು ದಾರಿಕಾಣಲು, ದಿಕ್ಕುತೋರಲು
ಬೆಳಕು ನೋಡಲು ನೋಡಿ ನಲಿಯಲು
ಬೆಳಕು ಆಗಬಾರದು ಜ್ವಾಲೆ ಸುಡಲು
ಬಡವನ ಒಲೆ ಉರಿಯಲು ಅಲ್ಲ ಉರಿಸಲು

17 comments:

  1. ಅಜಾದ್ ಸರ್,
    ನಿಸರ್ಗದ ಮೂರು ಶಕ್ತಿಗಳ ಬಗ್ಗೆ ನವಿರಾಗಿ, ಸರಳವಾಗಿ, ಕಿರಣದ ಹಾಗೆ ನಯವಾಗಿ, ಅಲೆಯ ಹಾಗೆ ಲಯವಾಗಿ, ಹೇಳಿದ್ದೀರಾ...... ತುಂಬಾ ಚೆನ್ನಾಗಿದೆ ಸರ್,,,, ಈ ಮೂರು ಶಕ್ತಿಗಳ ಮುಂದೆ ಜಗತ್ತಿನ ಯಾವುದೇ ಶಕ್ತಿಯೂನಿಲ್ಲಲಾರದು .....

    ReplyDelete
  2. ಅಝಾದಣ್ಣ,

    ಹುಟ್ಟು ಹಬ್ಬದ ಶುಭಾಷಯಗಳೊಂದಿಗೆ ಈದ್ ಮುಬಾರಕ್.....

    ಶುಭದಿನದಂದು ಅದ್ಭುತ ಶಕ್ತಿಗಳ ಬಗೆ ಸೊಗಸಾಗಿ ಕವನವನ್ನು ಎಣೆದಿದ್ದೀರ....
    ಮೂರು ಪ್ರಕೃತಿಯ ಶಕ್ತಿಗಳು ಅದ್ಭುತ....
    ಚೆಂದದ ಕವನಕ್ಕೆ ಅಭಿನಂದನೆಗಳು.....

    ReplyDelete
  3. ಈ ಮಧ್ಯೆ ನಮ್ಮಲ್ಲಿಯ ಪ್ರವಾಹಗಳ, ಅದಕ್ಕೂ ಮುಂಚೆಯ ಸುನಾಮಿ, ಮುಂಬಯಿಯ ಭಯಂಕರ ಆತಮ್ಕವಾದದ ಬೆಂಕಿಯ ಅಟ್ತಹಾಸ ಹೀಗೆ ಎಲ್ಲದರ ಬಗ್ಗೆ ಒಂದು ಪುಟ್ಟದಾಗಿ ಬರೆಯಬೇಕೆಂದು ಕೊಂಡಿದ್ದೆ ಅದೇ ಪ್ರಯತ್ನ ದಿನಕರ್ ಇದು.....ಇಷ್ಟವಾದುದಕ್ಕೆ ..ಧನ್ಯವಾದ..

    ReplyDelete
  4. ಮಹೇಶ್, ಆತ್ಮೀಯ ಶುಭಹಾರೈಕೆಗೆ ನನ್ನ ನಮನ...ಕವನಗಳು ನಿಮಗಿಷ್ಟವಾದರೆ...ನನ್ನ ನಮನ...ಕಷ್ಟವಾಗಿದ್ದರೆ...ಎಲ್ಲಿ ಅಂತ ಹೇಳಿ....ಇಷ್ಟಬರೋಹಾಗೆ ಮುಂದೆ ಬರೆಯೋಕೆ ಪ್ರಯತ್ನಿಸುತ್ತೇನೆ..

    ReplyDelete
  5. ಶಕ್ತಿಯ ಮೃದುತ್ವ.. ಹಾಗೂ ಕಠಿಣತೆ ಎರಡರ ಭಾವವೂ ಮಿಳಿತವಾದ ಈ ಕವಿತೆಗಳು ತು೦ಬಾ ಚೆನ್ನಾಗಿವೆ....

    ReplyDelete
  6. ವಾಹ್!!! ಎಷ್ಟು ಚೆಂದವಾಗಿ ತಿಳಿಸಿದ್ದೀರಿ... ಮೂರು ಶಕ್ತಿ ನಿಸರ್ಗದ ಶಕ್ತಿ ಅಲ್ಲವೆ?
    ತಡವಾಗಿ ನಿಮ್ಮ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸುತ್ತಲಿದ್ದೇನೆ.
    ಹಾಗೆ ಈದ್ ಮುಬಾರಕ್..!! ಜೋರಾ ಹಬ್ಬ ಅಥವಾ ಕುವೈಟ್ ಮಳೆ ನಿಮ್ಮ ಆಚರಣೆಗಳಿಗೆ ಅಡ್ಡಿ ಪಡಿಸಿತೆ?

    ReplyDelete
  7. ಜಲನಯನ ಅವ್ರೆ..

    ಭಾವದಲೆ ಎದ್ದಾಗ ಕಣ್ ಬೆಳಕಿನ ಮಂದಹಾಸದ ಕಿರಣಗಳು... ಚಂದ ಅಲ್ಲವೇ..
    ಅಲೆ,ಬೆಳಕು,ಕಿರಣಗಳ ನಿಮ್ಮ ವರ್ಣನೆ ಸುಂದರ..

    ----http://balipashu.blogspot.com/

    ReplyDelete
  8. ನೀವು ಹೇಳಲಿಲ್ಲ ಬಿಡಿ ಪರ್ವಾಗಿಲ್ಲ....ವಿಜಯಶ್ರೀ..ಅಲ್ವಾ..ನಿಮ್ಮ ಪೋಸ್ಟ್ ಗೆ ಪ್ರತಿಕ್ರಿಯೆ ಹಾಕುವಾಗ ಚಿತ್ರ ಅಂತ ಸಂಬೋಧಿಸಿದ್ದು..ನಿಮಗೆ ಮುಸಿ-ಮುಸಿ ನಗು ತರಿಸಿರಬೇಕು..ಈಗ ಹುಬ್ಬೀರಿಸುವ ಸರದಿ ನಿಮ್ಮದು...
    ನಿಜ ನೀವು ಹೇಳಿದ ಮಾತು..ಮಾತು..ಹಾಂ..!! ಪ್ರೀತಿಯ ಪಿಸು ಮಾತು, ತಾಯಿಗೆ ಅಪ್ಪನ ಕಿವಿವರೆಗೂ ಹೋಗದಂತೆ ಕಿವಿಯಲ್ಲೆ ಹೇಳುವ ಲಲ್ಲೆ ಮಾತು, ಹೆಂಡತಿಯೊಡನೆ ಸರಸ-ವಿರಸಗಳ ಮಾತು..ಹೀಗೆ,,,,ಎಲ್ಲದಕ್ಕೂ ಒಂದೊಂದು ಸ್ಕೇಲ್ ಇರುತ್ತೆ...ಧನ್ಯವಾದ

    ReplyDelete
  9. ಸುಗುಣ, ಮಯೇಸಣ್ಣ ಯೋಳಿಯಾಯ್ತು..ನೀನ್ಯಾಕ್ ಮುಜುಗ್ರ ಪಟ್ಕೋತೀ ಬುಡು..ಈ ಪಾಟಿ ಮಳೆ ಬಂದ್ರೆ..ಅಬ್ಬ--ಅಬ್ಬಬ್ಬ ಆಗೈತೆ...ಪರ್ದೇಸ್ದಾಗೆ ಯಾವ ಅಬ್ಬ ಬಿಡ್ತಂಗಿ..ನಮ್ಮಬ್ಬ ಮುಗ್ದೋಯ್ತಲ್ಲ ನವಂಬರ್ ೧೩ಕ್ಕೇ..ಎಲ್ಲಾರೂ ಒಟ್ಗೆ ಇದ್ರೆ ಅಬ್ಬ..
    ಧನ್ಯವಾದ ಪ್ರತಿಕ್ರಿಯೆಗೆ..ಹಾರೈಕೆಗೆ

    ReplyDelete
  10. ರಾದೆಯವರೇ...!! ನೀವು ಹೆಸರು ತಿಳಿಸೋವರ್ಗೂ ಹೀಗೇ ಹೇಳೋದು ನಾನು...ಓಕೆ..ಮತ್ತೆ ಆಕ್ಷೇಪಣೆ ಮಾಡ್ಬೇಡಿ...??!!!
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ..ಸ್ವಾಮಿ ನಿಮಗೆ ಬರಿಯುವಾಗ ಸ್ವಲ್ಪ ಹುಷಾರಾಗೇ ಇರ್ಬೇಕು..ಆದ್ರೂ ತಪ್ಪು ಒಪ್ಪು ಇದ್ರೆ ಕ್ಷಮಿಸಿ..ಮತ್ತು ತಿಳಿಸಿ ತಿದ್ದಿಕೊಳ್ಳೊದು ಒಳ್ಳೇದು..ಅಲ್ವೇ..?

    ReplyDelete
  11. ಅಜಾದ್ ಸರ್,

    ಹುಟ್ಟುಹಬ್ಬದ ಖುಷಿಯಲ್ಲಿ ಮೂರು ಸೊಗಸಾದ ಕವನ ರಚನೆಯೇ! ಅಲೆ ಕವನದ ಪ್ರಯೋಗ ಪದಗಳು ಚೆನ್ನಾಗಿವೆ. ಉಳಿದೆರಡು ಕೂಡ ಚೆನ್ನಾಗಿವೆ.

    ReplyDelete
  12. ಶಿವು, ಹಿತ ತಪ್ಪಿದರೆ ಅಮೃತವೇ ವಿಷವಾಗುವುದು ನಿಜವೇ ಅಲ್ಲವೇ?? ಇನ್ನು ನಿಸರ್ಗ ಸಮತೋಲನಕ್ಕೆ ಇರುವ ಈ ಶಕ್ತಿಗಳು ಮಿತಿ ಮೀರಿದರೆ ಅಪಾಯ ತಂದೊಡ್ಡುವುದು ಖಂಡಿತ.

    ReplyDelete
  13. ಅಜಾದ್ ಅವರೇ ,
    ನಿಸರ್ಗದ ಮುಂದೆ ಯಾರು ಇಲ್ಲ... ಅದು ಏನೆಲ್ಲಾ ಹೇಳತ್ತೋ ಅದೆಲ್ಲಾ ನಾವು ಕೇಳಬೇಕು... ಅಲ್ವ ಸರ್? ಚೆನ್ನಾಗಿ ಬರೆದಿದ್ದೀರ.. ಶಿವೂ ಅವರು ಬರೆದ ಕಾಮೆಂಟ್ ಓದಿದ ನಂತರ ಒಂದು ಪ್ರಶ್ನೆ ಕಾಡ್ತಾ ಇದೆ.. ನಿಮ್ಮ ಹುಟ್ಟು-ಹಬ್ಬವೇ .........??
    ನಿಮ್ಮವ,
    ರಾಘು.

    ReplyDelete
  14. ನಲ್ಮೆಯ ರಾಘು,...ಹೌದು..ನವೆಂಬರ್ ೨೭ ....ಆರ್ಕುಟ್ ನಲ್ಲಿ ಶಿವು ಇರುವುದರಿಂದ ಅವರಿಗೆ ಗೊತ್ತಾಯ್ತು...ನಿಮ್ಮ ಆರ್ಕುಟ್ ಅಕೌಂಟ್ ಓಪನ್ ಮಾಡಿ..ಅಥವಾ ನಿಮ್ಮ ಜಿ-ಮೈಲ್ ಐ.ಡಿ.ಕಳಿಸಿ ನಾನು ಆರ್ಕುಟ್ ಗೆ ಆಮಂತ್ರಣ ಕಳಿಸುತ್ತೇನೆ.
    ನಿಮ್ಮ ಮಾತು ನಿಜ..ನಿಸರ್ಗದ ಮುಂದೆ ನಾವೆಲ್ಲಾ ಸೊನ್ನೆ...

    ReplyDelete
  15. ಬಾಳ ಚಂದ ಬರದೀರಿ ಸರ.. ನೀವ್ ಹೇಳೋದು ಖರೆ ಅದ... ನಿಸರ್ಗ ಶಕ್ತಿ ಮುಂದ ನಮ್ದೇನು ನಡೀವಲ್ದು... ಅದಕ್ಕ ನಮಗ ಉಸ್ರು ಕೊಡೋದು, ಉಸ್ರು ನಿಲ್ಸೋದು ಎರಡೂ ಗೊತ್ತದ...

    ReplyDelete
  16. ದಿಲೀಪ್, ಪ್ರಕೃತಿಯ ನಿಯಮ ಪ್ರಕೃತಿಗೇ ಗೊತ್ತು..ನಾವೇನೋ ಯೋಜಿಸಿದರೆ ಅದೇನೋ ಯೋಚಿಸುತ್ತೆ....ಅಲ್ಲವೇ...?

    ReplyDelete