Saturday, November 28, 2009

ಅಂದ ಚೆಂದದ ವಯಸ್ಸಿನ ಹುಡುಗೀರನ್ನ ಹಿಡೀತಿದ್ದ ಅವನು...!!!

“ಲೇ...ಈ ಕಡೆ ಬಾರೆ...ಆ ಗಡವ ಏನು ತಿನ್ನೋತರಹ ನೋಡ್ತಿದ್ದಾನೆ...??!! ಅಲ್ಲ ನಿಮ್ಮ ಸ್ಕೂಲ್ ನಲ್ಲಿ ಇಷ್ಟೊಂದು ಹುಡುಗೀರು ಇದ್ದೀರಲ್ಲಾ...?? ನೀವು ಎಲ್ಲಾದ್ರೂ ಹೋದ್ರೂ ಗುಂಪು ಗುಂಪಾಗೇ ಹೋಗ್ತೀರಾ....? ಅದೇ ಒಳ್ಳೆದು ಕಣೆ...ಮೊನ್ನೆ ಮೂರ್ನಾಲ್ಕು ದಿನದಿಂದ ಒಬ್ಬ ತನ್ನ ಕಾರಿನಲ್ಲಿ ಆ ಕಡಿಯಿಂದ ಈ ಕಡೆ..ಈ ಕಡೆಯಿಂದ ಆ ಕಡೆ ಸುಮಾರು ಐದಾರು ಸರ್ತಿ ಓಡಾಡ್ತಿದ್ದ...ಮಧ್ಯೆ ಮಧ್ಯೆ ಅದೇನೋ ಟಾರ್ಚ್ ತರಹ ಇದ್ದದ್ದನ್ನು ನಮ್ಮ ಕಡೆ ಹಾಕ್ತಿದ್ದ...ನಾವೆಲ್ಲ ತಪ್ಪಿಸ್ಕೊಂಡು ಅವನ ಕಣ್ಣಿಗೆ ಭೀಳ್ದ ಹಾಗೆ ಇದ್ವಿ....”
“ಹೌದೇ..ನಮಗೂ ಹಾಗೇ ಅನ್ನ್ಸಿತು..ನಿಮ್ ಸ್ಕೂಲ್ ಕಡೆ ಜಾಸ್ತಿ ಇದ್ದದ್ದು ಅವನು...ನಮ್ಮದು ಹೈಸ್ಕೂಲು ನಿಮ್ಮದು ಹೈಸ್ಕೂಲು-ಕಾಲೇಜು...ವಯಸ್ಸಿಗೆ ಬಂದ ಅಂದ ಚಂದ ಇರೋ ನಿಮ್ಮನ್ನೇ ಹಿಡೀಬೇಕು ಅಂತ ಇರ್ಬೇಕು...
ಅಷ್ಟೇ ಅಲ್ಲ ಕಣೆ...ಅವನ ತರದ ಕಾರೇ ಇನ್ನೊಂದೂ ಇತ್ತು..ಅದರಲ್ಲಿ ಇಬ್ಬ್ರು ಮೂವರು ಇದ್ದರು...ನಮಗೆಲ್ಲಾ ಬಹಳ ಗಾಬರಿಯಾಗಿತ್ತು...ಕಣ್ರೇ...ಇವರು ಹೊಂಚಾಕಿ ವಯಸ್ಸಿನವರನ್ನೇ ಹಿಡೀಯೋದು...ಒಂದು ವಾರಕ್ಕೆ ಹಿಂದೆ..ಪಕ್ಕದ ಹೈಸ್ಕೂಲಿನಿಂದ ಒಬ್ಬ ಮದುವೆ ವಯಸ್ಸಿನವಳನ್ನ ಇಂತಹವನೇ ಯಾರೋ ಹಿಡ್ಕಂಡ್ ಹೋದನಂತೆ...ಎಲ್ಲ ಗಾಬರಿಯಾಗವ್ರೆ ಆ ಸ್ಕೂಲಿನಲ್ಲಿ..”
“ಚೆನ್-ಚೆನ್ನಗಿ ಇರೋರೇ ಬೇಕು ಅಂತ ಯಾರೋ ಫಾರಿನ್ ನವ್ರು ಬಂದವ್ರಂತೆ..ಪಕ್ಕದ ಮೊಹಲ್ಲಾದ ಕಪ್ಪು ಬುರ್ಕಾ ಹಾಕಿರೋ ವಯಸ್ಸಿಗೆ ಬಂದ ಇಪ್ಪ್-ಇಪ್ಪತ್ತೈದು ಹಿಡ್ಕೊಂಡೋಗಿ ಮಾರ್ಕಂಡ್ರಂತೆ ಈ ಮೋಟಾರ್ ನಲ್ಲಿ ಬರೋರು...ನಮ್ಮನ್ನ ನಾವೇ ನೋಡ್ಕೋ ಬೇಕು ...ಹುಷಾರಾಗಿರಬೇಕು.......”

ಇದು.. ಅಕ್ವೇರಿಯಂ ಮೀನನ್ನು ಬೆಳೆಯುತ್ತಿದ್ದ ದೊಡ್ಡದೊಂದುಕೊಳದಲ್ಲಿನ ಬಣ್ಣ ಬಣ್ಣದ ಮೀನುಗಳು ತಮ್ಮ ತಮ್ಮಲ್ಲಿ ಮಾತನಾಡಿಕೊಳ್ಳುತ್ತಿದ್ದಾಗ ಕದ್ದು ಅವರ ಮಾತುಗಳನ್ನು ಅಲೈಸಿ ನಿಮಗೆ ತಿಳಿಸ್ತಾ ಇದ್ದೀನಿ...ಮೋಟಾರ್ ನಲ್ಲಿ ಬರೋದು ಅಂದ್ರೆ...ಮೋಟಾರ್ ಬೋಟಿನಲ್ಲಿ ಬರುತ್ತಿದ್ದ ಮೀನುಗಾರ-ಕೆಲಸದಾಳು....!!! ಹೈಸ್ಕೂಲು-ಕಾಲೇಜು ಹುಡ್ಗೀರು ಅಂದ್ರೆ...ಕೋಯಿ ಕಾರ್ಪ್ ಮೀನು (ಇವು ಸ್ವಲ್ಪ ದೊಡ್ಡಗಾತ್ರದಲ್ಲಿದ್ದರೇ ಚೆನ್ನ...ಅಂಕಾರಕ್ಕೆ). ಕಪ್ಪು ಬುರಖಾದಲ್ಲಿದ್ದವು....ಬ್ಲಾಕ್ ಮೋಲಿ ಮೀನು....
ಸ್ಕೂಲು ಅನ್ನೋದು ಗುಂಪು-ಗುಂಪಾಗಿ ಇರೋ ಮೀನಿನ ಗುಂಪನ್ನ........ಇವಕ್ಕೆ ಅಂದ ಹೆಚ್ಚು ಮತ್ತು ಬೆಲೆಯೂ ಸಿಗುತ್ತೆ.......ನಿಮ್ಮ ಅನ್ನಿಸಿಕೆ.....??? !!!!!

27 comments:

 1. first enoo arthavaagalillavaadaru, nantara nimma minina purana odi bahala nagu bantu. tumbane chennagide sir.

  ReplyDelete
 2. ಬೈಯ್ಯಾ ಕಲ್ಪನೆ ಸೂಪರ್ .. ಮೊದಲು ತುಂಬಾ ತಲೆ ಕೆಡಸ್ಕೊಂಡೆ .. ಇದು ಕತೇನಾ ಇಲ್ಲಾ.. ನಿಜ ಘಟನೆ ಇರಬಹುದೇನೋ ಅಂತ ..ಕೊನೇಲಿ ಓದ್ತಾ ಇರೋವಾಗ ನಗು ಬಂತು..
  ಜಲಾನಯನ ಸರ್ ಅಂದ್ರೆ ಸೂಪರ್ ಬಿಡಿ :)

  ReplyDelete
 3. ಅಜಾದ್ ಸರ್,
  as usual sooooper ....... ಮೋಡ ಮೊದಲು ಏನ್ ಕತೆ ಇದು ಅಂತ ಅರ್ಥ ಆಗ್ಲಿಲ್ಲ...... ಹೊಸ ಕತೆ ಬರೀತಾ ಇರ್ಬೇಕು ಅಂತ ಅಂದ್ಕೊಂಡೆ..... ನಂತರ ಯಾವುದೇ ಘಟನೆನ ಕಥೆಯಾಗಿ ಹೇಳ್ತಾ ಇದೀರಾ ಅಂದ್ಕೊಂಡೆ...... ಕೊನೆಗೆ..... ನಗು ಬಂತು....... ಚೆನ್ನಾಗಿದೆ..... ನೀವು ಬಿಡಿ, ಮೀನಿನ ಮಾತೂ ನಿಮಗೆಕೇಳಿಸತ್ತೆ......

  ReplyDelete
 4. ಅಜಾದ್,
  ಹ್ಹ ಹಹ್ಹ ಹ್ಹ ಹಹ್ಹ... ಏನ್ ಇರಬಹುದು ನಮ್ಮ ಊರಲ್ಲಿ ಇಂಥಹ ಗಾಳಿ ಸುದ್ದಿ ಕೇಳಿದ್ದೀನಿ ಆ ನೆನಪು ಅಗುವಸ್ಟರಲ್ಲಿ... ಮೀನುಗಳ ಹರಟೆ ಕೇಳಿ ನಗುವೋ ನಗು... ಸ್ಪೆಷಲ್ edition ತರ ಇದೆ..
  ನಿಮ್ಮವ,
  ರಾಘು.

  ReplyDelete
 5. ಅಝಾದಣ್ಣ,
  ಕಥೆ ಸೂಪರ್
  ನಿಜ ಘಟನೆ ಇರಬಹುದೇನೋ ಅಂದುಕೊಂಡೆ........
  ಕೊನಗೆ ನಗು ಬಂತು....

  ReplyDelete
 6. ಆದಿತ್ಯ ಹಹಹ...ನನಗೂ ನಗು ಬಂತು...ಬರೆದ ಮೇಲೆ...ನಿಜವಾಗಿ ಏನೋ ಬರೆಯಲು ಕುಳಿತವನಿಗೆ....ಡಾ.ಬಿ.ಆರ್. ಅವರ ಮೀನು ಹಿಡಿಯೋ ಬ್ಲಾಗ್ ಪೋಸ್ಟ್ ನೋಡಿದಮೇಲೆ ಈ ಐಡಿಯಾಬಂತು...ನಿಮಗೆ ಹಿಡಿಸ್ತಾ ...ಥ್ಯಾಂಕ್ಸ್...

  ReplyDelete
 7. ಹಾ ಹಾ ಹಾ ..
  ಆಜಾದ್ ,
  ಸಖತ್ ಆಗಿ ಗಾಳ ಹಾಕಿದೀರ ! ನಾನು ಏನೋ ಸೀರಿಯಸ್ ವಿಷಯ ಅಂತ ಗಂಭೀರವಾಗಿ ಓದ್ಕೋತಾ ಇದ್ದೆ !!! ಕೊನೆಯಲ್ಲಿ ನೋಡಿದ್ರೆ ..... ಹಾ ಹಾ ಹಾ ..
  ಲೇಖನ ಓದಿ ಮಜಾ ಬಂತು !

  ReplyDelete
 8. ಹ್ಹ..ಹ್ಹ..ಹ್ಹಾ ಚೆನ್ನಾಗಿದೆ .

  ReplyDelete
 9. ಏನ್ಸಾರ್ ಮೀನಿನ ಕಥೆ ಬರ‍್ದಿದ್ದೀರಾ... ನಾನ್ ಏನೋ ಅಂತ ತಿಳ್ಕಂಡಿದ್ದೆ ..... ಚೆನ್ನಾಗಿದೆ ಮತ್ಸ್ಯ ಪುರಾಣ :)

  ReplyDelete
 10. ಚಿತ್ರಾ, ಇದು ಗಾಳ ಮಾತ್ರ ಲ್ಲ ಮಹಾ ಗಾಳ....ಹಹಹ
  ನಿಮಗೆ ಹಿಡಿಸ್ತಲ್ಲ...ಗಾಳ ಸಫಲ ಅಲ್ವೇ....??

  ReplyDelete
 11. ನಗು ತರಿಸ್ತೇ...? ಸುಮ, ನನ್ನ ಬ್ಲಾಗ್ ಹೊಸ ಡಿಸೈನ ಟೈಟಲ್ ನಲ್ಲಿ ಏನು ಹಾಕಿದ್ದೇನೆ ನೋಡಿ...
  ಅಲ್ಲಿಗೆ ಸಾರ್ಥಕ ಅಲ್ಲವಾ?

  ReplyDelete
 12. ಮತ್ಸ್ಯ ಪುರಾಣದ ಇದು ಒಂದು ಸಣ್ಣ ಝಲಕ್ ಅಷ್ಟೇ ಆನಂದ್..ನಿಮಗೆ ಇಷ್ಟ ಆದುದ್ದಕ್ಕೆ ಹಾಗೇ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...

  ReplyDelete
 13. ಸುಧೇಶ್ ನಿಮಗೆ ಏನಾದರೂ ಐಡಿಯಾ ಹೊಳೀತಿದೆಯಾ..?? ಬರೀ !!!! ಹಾಕಿ ಬಿಟ್ಟಿದ್ದೀರಾ...ಹಾಗಿದ್ದರೆ...ಒಮ್ದು ಪೋಸ್ಟು ಜಡಿದುಬಿಡಿ..

  ReplyDelete
 14. ಹ್ಹೋ....ಮೀನುಗಳಾ ? ಈ ಲವ್-ಜಿಹಾದ್ ಗಲಾಟೆಯಲ್ಲಿ ನಾನು ಏನೇನೋ ಕಲ್ಪಿಸಿಕೊಂಡು...ಛೇ ! ಅಂದಹಾಗೆ ನಿಮ್ಮ ಹುಟ್ಟುಹಬ್ಬ ಅಂತ ಗೊತ್ತಿರಲಿಲ್ಲ ಸಾರ್! ತಡವಾಗಿಯಾದರೂ ಶುಭಾಶಯಗಳು, ಅರ್ಧ ಸೆಂಚುರಿ ಬಾರಿಸಿದ್ದಕ್ಕೆ!

  ReplyDelete
 15. ಜಲನಯನ ಅಂತ ಹೆಸರಿಟ್ಟುಕೊಂಡಿದ್ದಕ್ಕೆ ಸಾರ್ಥಕವಾಯ್ತು!! ನಮಗೆ ಕಾಣದಿದ್ದು ನಿಮಗೆ ಗೋಚರಿಸಿತು. ತುಂಬಾ ಇಂಟ್ರೆಸ್ಟಿಂಗ್ ಬರಹ!
  ನನ್ನ 'ಸಿಂಗಾರಿ'ಗು (ನನ್ನ ಅಕ್ವೇರಿಯಮ್ ನಲ್ಲಿರೋ ಗೋಲ್ಡ್‌ಫಿಶ್ !!) ಹುಷಾರಾಗಿರೋಕ್ಕೆ ಹೇಳ್ತೀನಿ!!

  ReplyDelete
 16. ಸುಪ್ತವರ್ಣಕ್ಕೆ ಧನ್ಯವಾದಗಳು ಪ್ರತಿಕ್ರಿಯೆ ಮತ್ತು ಹಾರೈಕೆಗೆ...ಮೀನು ಮಾತನಾಡುವ ಮತ್ತು ವಿಭಿನ್ನ ಕಥೆಗೆ ನಿಮ್ಮ ಮೆಚ್ಚುಗೆಗೆ ನನ್ನ ಆಭಾರ...

  ReplyDelete
 17. ಸುಪ್ತವರ್ಣಕ್ಕೆ ಧನ್ಯವಾದಗಳು ಪ್ರತಿಕ್ರಿಯೆ ಮತ್ತು ಹಾರೈಕೆಗೆ...ಮೀನು ಮಾತನಾಡುವ ಮತ್ತು ವಿಭಿನ್ನ ಕಥೆಗೆ ನಿಮ್ಮ ಮೆಚ್ಚುಗೆಗೆ ನನ್ನ ಆಭಾರ...
  ನಿಮ್ಮ ಸಿಂಗಾರಿಯ ಸಂಸಾರ ಎಷ್ಟು ದೊಡ್ಡದು ಸುಮನ ಮೇಡಂ..? ಹಾಗೇ ಕಪ್ಪು ಬುರ್ಖಾದವರನ್ನು ಇಟ್ಟಿಲ್ಲವೇ..?? ಹುಶಾರಾಗಿರೋಕೆ ಹೇಳಿ ನಿಮ್ಮ ಸಿಂಗಾರಿಗೆ....ಲವ್-ಜೆಹಾದ್ ನವರು ಬಂದರೂ ಕಷ್ಟಾನೇ...ಹಹಹಹ

  ReplyDelete
 18. ಅಜಾದ್ ಸರ್, ಈ ಪ್ರೇರಣೆಯೇ ಹಾಗೆ ನೋಡಿ, ಎಲ್ಲಿ ಯಾವುದರಿಂದ ಯಾವಾಗ ಉಂಟಾಗುತ್ತದೆ ಎಂದು ಹೇಳಲು ಬರುವುದಿಲ್ಲ. ಈ ಗಾಳ ಹಾಕುವ ಮೀನುಹಿಡಿಯುವುದರ ಹೊಸ ಆವೃತ್ತಿಯನ್ನು ಚುಟುಕಾಗಿ ಅಷ್ಠೇ ಅರ್ಥವತ್ತಾಗಿ ನಿರೂಪಿಸಿದ್ದೀರ. ಅಭಿನಂದನೆಗಳು

  ReplyDelete
 19. ಒಳ್ಳೇ ಪ೦ಚ್. ನಾನು ಮೊದಲು ಹೆಣ್ಣುಗಳನ್ನ ಹಾರಿಸಿ ಕೊಲೆ ಮಾದ್ಥ ಇದ್ದ ಮೇಸ್ತ್ರ ಬಗ್ಗೆ ಅನ್ಕೊ೦ಡೆ. ಅಮೇಲೆ ತಮ್ಮ ಕಾಲೇಜ ಪ್ರಸ೦ಗ ಅನ್ಕೊ೦ಡೆ. ಅಮೇಲೆ ದುಬೈ-ಗೆ ಮುಸ್ಲಿ೦ ಹೆ೦ಗಸರನ್ನು ಮೋಸದಲ್ಲಿ ಸಾಗಿಸೋ ರಾಕೆಟ್ ಬಗ್ಗೆ ಅನ್ಕೊ೦ಡೆ. ಕಡೇಗೆ ಗೊತ್ತಗಿದ್ದು ಮೀನಗಳ ಮಾತೆ೦ದು-ಒಳ್ಳೇ ಚ್ಗೌಕಾಯಿಸಿಬಿಟ್ಟಿರಿ ಅಜ಼ಾದಣ್ಣ.
  ಚೆ೦ದ ಕಲ್ಪನೆ.

  ReplyDelete
 20. ಡಾ. ಬಿ.ಆರ್. ಮೊದಲಿಗೆ ನಿಮಗೆ ಧನ್ಯವಾದ ..ಯಾಕಂದ್ರೆ ಅದರ ಪ್ರೆರ‍ಣೆ ಬಂದದ್ದು ನಿಮ್ಮ ಪೋಸ್ಟಿನಿಂದ....

  ReplyDelete
 21. ಸೀತಾರಂ ಸರ್, ಎಲ್ಲೆಲ್ಲಿಂದ ಎಲ್ಲೆಲ್ಲಿಗೆ ಹೋಯಿತು ನಿಮ್ಮ ಊಹಾ-ಪೋಹ....ಹಹಹ...ಹಾಗಾದ್ರೆ..ಪಂಚ್ ಕೊಡೊದ್ರಲ್ಲಿ ಯಶ್ಸ್ವಿ ಆಗಿದೆ ನನ್ನ ಪೋಸ್ಟ್ ಅಂತ ಆಯ್ತು...ಧನ್ಯವಾದ

  ReplyDelete
 22. ಜಲನಯನ ಅವರೇ..

  ಮಸ್ತ್ ಕಣ್ರೀ..

  ತಡವಾದ ಹುಟ್ಟುಹಬ್ಬದ ಹಾರೈಕೆಗಳು:ನಿಮಗೆ ದೇವರು "ಇಷ್ಟಾರ್ಥ ಪ್ರಾರ್ಥಿರಸ್ತು" ಎಂದು ಹಾರೈಸಲಿ..

  ReplyDelete
 23. This comment has been removed by the author.

  ReplyDelete
 24. ರಾದೆಯವರೇ, ಧನ್ಯವಾದ...ನಿಮ್ಮ ಪ್ರತಿಕ್ರಿಯೆಗೆ ಮತ್ತು ನಮನ ನಿಮ್ಮ ಶುಭ ಹಾರೈಕೆಗೆ...

  ReplyDelete
 25. ಭಾರೀ ತಿರುವು ಕಣ್ರೀ!

  ReplyDelete
 26. ಸುನಾಥ್ ಸರ್, ಧನ್ಯವಾದ ಸಾಥ್ ನೀಡಿದ್ದಕ್ಕೆ....

  ReplyDelete