Friday, December 11, 2009

ಯಾರಲ್ಲಿ ಹೇಳಿಕೊಳ್ಳಲಿ ನನ್ನ ಗೋಳು..??

ನಾನು ಗಂಡಾಗಿ ಹುಟ್ಟಿದ್ದೇ ತಪ್ಪೇ??...ನನ್ನ ನೋವನ್ನೇಕೆ ಈ ಹೆಣ್ಣುಗಳು ಅರ್ಥಮಾಡಿಕೊಳ್ಳುವುದಿಲ್ಲ..??!! ದೇವರೇ..ಯಾವ ಜನ್ಮಕ್ಕೂ ಬೇಡ ಈ ಗಂಡಾಗುವ ಕರ್ಮ... ಹಯವದನ ಮನಸ್ಸಿನಲ್ಲೇ ನೋವು ಅನುಭವಿಸುತ್ತಾ...ದೇವರಲ್ಲಿ ಬೇಡಿಕೊಳ್ಳತೊಡಗಿದ... ಅಂದು.. ಹೊರಗಡೆ ಅಡ್ಡಾಡಿ...ಮನೆಗೆ ಅಲ್ಪಸ್ವಲ್ಪ ಏನಾದರೂ ತರೋಣ ಅಂತ ಹೊರಟಿದ್ದ ಹಯವದನ... ಇಡೀ ಕಾಲೊನಿಯಲ್ಲೇ ಬಹುಸ್ಫುರದ್ರೂಪಿ ಕಟ್ಟುಮಸ್ತಾದ ಅಂಗಸೌಸ್ಠವ ಹೊಂದಿದ್ದ ಯುವ ಚೇತನ ಪುಟಿಯುವ ನವ ಯುವಕ ಇವನು. ಎಲ್ಲ ಹೆಣ್ಣುಗಳ ಕಣ್ಣೂ ಇವನಮೇಲೆಯೇ.. ಆಜಾನುಬಾಹು ವ್ಯಕ್ತಿತ್ವ...ಮುಖದಲ್ಲಿ ಬಹು ಆಕರ್ಷಣೀಯ ಕಾಂತಿ, ನಡೆದಾಡಿದರೆ ರಾಜಗಾಂಭೀರ್ಯ ತುಳುಕುತ್ತಿತ್ತು. ಯಾವುದೇ ಹೆಣ್ಣು ಆಸೆ ಪಡುವ ಎಲ್ಲ ಗುಣ ಅವನಲ್ಲಿದ್ದುದರಿಂದಲೇ ಎಲ್ಲ ಹೆಣ್ಣುಗಳ ಕಣ್ಣೂ ಇವನ ಮೇಲೆ. ಕಾಲೋನಿಯ ಬಹು ಕ್ವಾಲಿಫೈಯ್ಡ್ ಗಂಡುಗಳಲ್ಲಿ ಒಬ್ಬನಾದರೂ ಇವನ ರೂಪಕ್ಕೆ ಎಲ್ಲ ಹೆಣ್ಣುಗಳೂ ಮಾರುಹೋಗಿದ್ದವು. ತನ್ನ ಮನೆಗೆ ಬೇಕಾದ ಸಾಮಾನು ಸರಂಜಾಮನ್ನು ಹುಡುಕುವ ಅವನ ಕಣ್ಣಿಗೆ ಮೂರು ನವ ಯುವತಿಯರ ಕಣ್ಣುಗಳು ಹಿಂಬಾಲಿಸುವುದನ್ನು ಕಂಡುಕೊಳ್ಳಲು ಬಹಳ ಸಮಯ ಬೇಕಾಗಲಿಲ್ಲ. ಬೇಗ ಬೇಗ ..ಅವಸವಸರದಲ್ಲಿ ಸಾಮಾನನ್ನು ತೆಗೆದುಕೊಂಡು ಕಡೆದಾಗಿ ಬೇಕಾಗಿದ್ದ ವಸ್ತುವಿಗೆ ಸ್ವಲ್ಪ ಬಿಕೋ ಎನ್ನುವ ಜಾಗಕ್ಕೆ ಬಂದಿದ್ದ...ಸಂಜೆ ಗತ್ತಲು ..ಅವರಿಸಿದ್ದರಿಂದ..ಭಯ ಆವರಿಸಿತು. ಹಯವದನ ಹಿಂಬಾಲಿಸಿದ ಕಣ್ಣುಗಳು ಕತ್ತಲಲ್ಲಿ ಇನ್ನೂ ಹೆಚ್ಚಾಗಿ ಮಿನುಗುತ್ತಾ ಘೋರವೆನಿಸತೊಡಗಿತು.. ತನ್ನ ಬೇಕಾದ ಸಾಮಾನನ್ನು ಇನ್ನೇನು ತಗೆದುಕೊಳ್ಳಬೇಕು ಎನ್ನುವಾಗ ಮೂವರು ಯುವತಿಯರೂ ಸುತ್ತುಗಟ್ಟಿದರು..ಅವನ ಅಂಗಗಳ ಬಗ್ಗೆ ವಿವರಿಸುತ್ತಾ ಛೇಡಿಸತೊಡಗಿದರು.. ಒಬ್ಬಳು ಅವನ ಮೈಮೇಲೆ ಮೃದುವಾಗಿ ಕೈಯಾಡಿಸಿದಳು...ಇನ್ನೊಬ್ಬಳು ತನ್ನ ಬಾಹುಗಳಿಂದ ಗಟ್ಟಿಯಾಗಿ ತಬ್ಬಿಕೊಳ್ಳಲು ಮುಂದಾದಳು...ಕೊಸರಿಕೊಂಡ ಹಯವದನ..ತಪ್ಪಿಸಿಕೊಂಡು ಸತ್ತೆನೋ ಕೆಟ್ಟೆನೋ ಎಂದು.. ಓಡಲಾರಂಭಿಸಿದ...ಕತ್ತಲಾಗಿತ್ತು.. ಗಾಭರಿಯಲ್ಲಿ ದಾರಿ ತಪ್ಪಿದ..ಕುರುಚುಲು ಗಿಡ ಎತ್ತರ ಹುಲ್ಲಿನ ಬಯಲಿಗೆ ಬಂದಿದ್ದ...ದಾರಿತಪ್ಪಿದ ಗಂಡು ಈಗ ಸುಲಭವಾಗಿ ಸಿಗುವಂತಾದ... ಇಬ್ಬರು ಹೆಣ್ಣುಗಳು ಅವನಮೇಲೆ ಬಿದ್ದು ಕೆಡಹಿದರು..ಹಯವದನನ ಕೊಸರಾಡಿದರೂ ಆಗಲಿಲ್ಲ .. ವಿಲಕ್ಷಣ ಮತ್ತು ಬಿಡೆವೆಂಬ ಛಲ ಆ ಹೆಣ್ಣುಗಳಲ್ಲಿತ್ತು...ಹಯವದನನ ಶಕ್ತಿ ಕುಗ್ಗತೊಡಗಿತು....ಕತ್ತಲೂ ಹೆಚ್ಚಾಯಿತು...ಸೋಲತೊಡಗಿದ..ಹೆಣ್ಣುಗಳು ಗೆಲ್ಲತೊಡಗಿದವು......ಏನಾಗಬಾರದೆಂದು ಜಾಗರೂಕನಾಗಿದ್ದನೋ ಅದು ಅಂದು ಆಗೇ ಹೋಯಿತು..ಹಯವದನನ ಜೀವನದಲ್ಲಿ.....ಛೇ..ದೈವವೇ..ಗಂಡಿಗೇಕೆ ಇಂಥ ಶಿಕ್ಷೆ ಎಂದು..ಗೋಳಾಡಿದ. ಈಗ..ಪಾಪದ..ಫಲ ಬೆಳೆಯುತ್ತಿದೆ ಇವನ ಹೊಟ್ಟೆಯಲ್ಲಿ..ಅದಕ್ಕೆ ಕಾರಣರಾದ ಆ ಮೂರೂ ಹೆಣ್ಣುಗಳು...ರಾಜಾರೋಷವಾಗಿ ತಿರುಗುತ್ತಿವೆ..ಊರಲ್ಲೆಲ್ಲಾ... ತನ್ನ ಪ್ರಸವ ವೇದನೆಯನ್ನು ನೆನೆದು ಹಲುಬುತ್ತಿದ್ದಾನೆ ಹಯವದನ..... ಇಗೋ ಇಲ್ಲಿದೆ ನೀವೇ ನೋಡಿ ಅವನ ಗೋಳು ಎಂತಹುದೆಂದು....

ಸ್ನೇಹಿತರೇ..ಇದು ಹೆರುವ ಗಂಡು....ಸಮುದ್ರಕುದುರೆ...ಇದೊಂದು ಮೀನು......ಇದರ ಬಗ್ಗೆ ವಿವರ ನನ್ನ ಮೇ ಬ್ಲಾಗ್ ಪೋಸ್ಟ್ ನೋಡಿ.....ಹಹಹಹ...

43 comments:

 1. ಅಜ್ಜಾ ಏನಿದು??? :-)

  ಇಲ್ಲಿ ಎಲ್ಲಾ ಉಲ್ಟಾ ಆಗಿದ್ಯಲ್ಲ??? ಆತನ ಗೋಳು ಎಲ್ಲಿ ನೋಡಲಿ??? ಅಲ್ಲಿ ಏನೂ ಇಲ್ಲ ನೋಡಲು.. :-)..

  ಅಕಟಕಟಾ ಏನಿದು ಮಾಯೆ??? :-)

  ReplyDelete
 2. Ravikanth...Sorry ree, matte nodi..
  Eevaaga Hakiddene video
  nimma comments haaki

  ReplyDelete
 3. ಏನು ಸರ್,
  ಏನೋ ಹೇಳ್ತಿದಿರಾ ಅಂದ್ರೆ ಇನ್ನೆನ್ನೋ ಅಂದ್ರಿ
  ಚೆನ್ನಾಗಿದೆ ವಿಡಿಯೋ

  ReplyDelete
 4. ಸರ್ ಲೇಖನದ ಮೊದಲ ಸಾಲು ಓದುತ್ತಿದ್ದಂತೆ ಅನುಮಾನ ಶುರುವಾಗಿತ್ತು . ಮುಂದೆ ಓದುತ್ತ ಹೋದಂತೆ ಇದು ಸಮುದ್ರಕುದುರೆ ಬಗ್ಗೇನೇ ಬರೆದಿರೋದು ಅಂತ ಅಂದುಕೊಂಡಿದ್ದು ನಿಜವಾಯಿತು. ಚೆನ್ನಾಗಿದೆ ಲೇಖನ ವಿಡಿಯೊ ಎರಡೂ. ಎಲ್ಲರ ತಲೆಗೆ ಹುಳ ಬಿಡುವುದರಲ್ಲಿ ನೀವು ನಂ ೧ .

  ReplyDelete
 5. ಗುರು, ಸಮುದ್ರ ಕುದುರೆ ಒಂದು ವಿಶಿಷ್ಟ ಸಮುದ್ರ ಜೀವಿ, ಇದರ ಅಕಾರ ನೋಡಿ ಇದು ಮೀನೇ ? ಎನ್ನುವವರು ಇಲ್ಲದಿಲ್ಲ... ಸಮುದ್ರ ಕುದುರೆಯನ್ನು ಜಪಾನ್ ಚೀನಾ ಗಳಲ್ಲಿ ಸಾಕಿ ಬೆಳೆಯುತ್ತಾರೆ..ಎಲ್ಲ ಜಲಕೃಷಿ ವಿಧಾನಗಳನ್ನು ಉಪಯೋಗಿಸಿ ಇವುಗಳ ಬೆಳೆ-ಬೆಳೆಯುತ್ತಾರೆ. ಇವು ಬಹೋಪಯೋಗಿ ..ಅದರಲ್ಲೂ ಇವುಗಳ ವೈದ್ಯಕೀಯ ಗುಣಗಳು ಬಹಳ ಜನಜನಿತ ಈ ರಾಷ್ಟ್ರಗಳಲ್ಲಿ.

  ReplyDelete
 6. ಸುಮ ಪ್ರಾಣಿ ಮತ್ತು ಸಸ್ಯ ಸಂಕುಲದ ವಿಶೇಷ ತಿಳುವಳಿಕೆಯಿರುವ ನಿಮಗೆ ಇದು ಮುಂಚೆಯೇ ಗೊತ್ತಾಗುವುದೆಂದು ನನಗೆ ತಿಳಿದಿತ್ತು..ಇವುಗಳ ಸಾಕಣೆ ಕುರಿತು ಅರಬ್ ಜಲ ಕೃಷಿಯಲ್ಲಿ ಆಸಕ್ತರ ಪತ್ರಗಳು ಬರುತ್ತಿರುತ್ತವೆ.

  ReplyDelete
 7. ಯಾಕೆ ಇವತ್ತು ಬ್ಲಾಗ್ನಲ್ಲಿ ಜಲಾನಯನ ಅವರು ಬೇರೆ ಏನ್ ಏನೋ ಬರ್ದಿದ್ದಾರೆ ಅಲ್ವ ಅನ್ನಿಸಿತು... ಫಸ್ಟ್ ಗೆ ಗಂಡು ಬಂತು ನಂತರ ಹೆಣ್ಣು ಬಂತು.. ಮುಂದೆ ದಾರಿ ತಪ್ಪಿದರು ಅಂತ ವೋದುವಾಗ ತಿಳೀತು ಇದು 'ಫಾರ್ a ಚೇಂಜ್' ಅವರ ಹೊಸ ಕಾನ್ಸೆಪ್ಟ್ ಅಂತ... :)
  ತುಂಬಾ ಇಂಟರೆಸ್ಟಿಂಗ್ ಆಗಿ ಇತ್ತು.. ವಿಷಯ ಸೂಪರ್ ! ನನ್ನ ಸ್ನೇಹಿತನೊಬ್ಬ ಲಿಂಕ್ ಕಳಿಸು ಅಂತ ಕೂತಿದ್ದಾನೆ.. ಡನ್ ಅಂತ ಹೇಳಿದ್ದೇನೆ.. :)
  ನಿಮ್ಮವ,
  ರಾಘು.

  ReplyDelete
 8. ರಾಘು, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ...ಜೀವಿಗಳಲ್ಲಿ ವೈವಿಧ್ಯತೆ ನೋಡಬೇಕೆಂದರೆ...ಅದು ಜಲಜೀವಿಗಲಲ್ಲಿ..ಅದರಲ್ಲೂ ಮೀನುಗಳು....ಧನ್ಯವಾದ

  ReplyDelete
 9. ಮೀನುಗಳ ಬಗ್ಗೆ ನಿಮ್ಮ ಕವನ ಓದಿದ ನ೦ತರ ಈ ಬರಹದಲ್ಲೂ ಏನೋ ಬೇರೇನೆ ಇದೆ ಅನ್ನಿಸ್ತು..
  ಮಾಹಿತಿಗಾಗಿ ಧನ್ಯವಾದಗಳು.....

  ReplyDelete
 10. ಡಾ. ಅಜ಼ಾದರೇ ಒಳ್ಳೇ ಲೇಖನ. ನಾನು ತಮ್ಮ ಲೇಖನದ ಕೊನೇ ಸಾಲು ನೋಡಿ ಅಮೆಲೆ ಲೇಖನ ಓದಿದೆ. ಏಕೆ೦ದರೇ ನ೦ದು ಜಸ್ಟ್ ಫ಼ಾರ್ ಚೆ೦ಜ್ ಹಾ.. ನನಗೆ ಗ೦ಡು ಸಮುದ್ರ ಕುದುರೆ ಹೆರುವ ವಿಷಯ ಗೊತ್ತಿರಲಿಲ್ಲ. ಉಪಯುಕ್ತ ಮಾಹಿತಿ ವಿಭಿನ್ನವಾಗಿ ರಸವತ್ತಾಗಿ ವರ್ಣಿಸಿದ್ದಿರಾ... ಹೆಣ್ಣಿನ ಗೋಳು ಗ೦ಡುಗಳಿಗು ಗೊತ್ತಾಗಲಿ ಎ೦ದು ಈ ಗ೦ಡು ಸಮುದ್ರ ಕುದುರೆ ಕಥೆ ಹೊಸೆದಿದ್ದಿರಾ.... ನೈಸ್

  ReplyDelete
 11. ಮನಮುಕ್ತರವರೇ, ಮೀನಿನ ವೈವಿಧ್ಯತೆ ಬಗ್ಗೆ..ಸಮಯ ಸಿಕ್ಕಾಗ ಒಂದೊಂದು ಲೇಖನ ಹಾಕುತ್ತಿರುತ್ತೇನೆ..ನಿಮ್ಮ ಅಭಿಪ್ರಾಯ ನನಗೆ ಬ್ಲಾಗ್ ದೃಷ್ಟಿಯಲ್ಲೇ ಅಲ್ಲದೇ ನನ್ನ ಸಂಶೋಧನಾ ಕೋನದಿಂದಲೇ ಮುಖ್ಯ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ

  ReplyDelete
 12. ಸೀತಾರಾಂ ಸರ್, ನಿಜ..ಹೆಣ್ಣುಗಳಿಗೇ ಗೋಳು ಅಂತಲ್ಲ..ಗಂಡಿಗೂ ಎನ್ನೋದು ಸೂಚ್ಯ..ಅದು ಪ್ರಸವ ವೇದನೆಯೇ ಆಗಿರಬೇಕು ಎಂದಲ್ಲ...ಅಲ್ಲವೇ? ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ

  ReplyDelete
 13. ಅಬ್ಬಾಬ್ಬ ಪ್ರಸವವೇದನೆ ಬರೀ ಹೆಣ್ಣಿಗೇ ಮೀಸಲಾಗಿಲ್ಲ ಹಾಗಿದ್ರೆ... ಒಳ್ಳೇ ಕುತೂಹಲಕರವಾಗಿ ವಿವರಿಸುತ್ತ ಹೋಗಿದ್ದೀರಿ... ನಡುವೆ ಅನುಮಾನ ಬರುತ್ತಿತ್ತಾದರೂ, ಸಮುದ್ರಕುದುರೆ ಬಗ್ಗೆ ಗೊತ್ತೇ ಇರಲಿಲ್ಲ ಹೊಸ ವಿಷಯ ತಿಳಿದ ಹಾಗಾಯ್ತು...

  ReplyDelete
 14. ಗ೦ಡು ಸಮುದ್ರ ಕುದುರೆ ಹೆರುವ ವಿಷಯ ಗೊತ್ತಿರಲಿಲ್ಲ.... ಮಾಹಿತಿಗಾಗಿ ಧನ್ಯವಾದಗಳು

  ReplyDelete
 15. ಪ್ರಭು, ನಿಮಗೆ ಆ ಜೊಕ್ ನೆನೆಪಿರಬೇಕು..ಬ್ರಹ್ಮ ಹೆಂಗಸರಿಗೆ ವರಕೊಟ್ಟಿದ್ದು, ಹೆರಿಗೆ ಹೆಂಗಸರಿಗೇ ಆದ್ರೂ ನೋವು.. ಹುಟ್ಟುವ ಮಗುವಿನ ತಂದೆಗೇ ಆಗುತ್ತೆ ಅಂತ..ಆಮೇಲೆ ಗುಂಡನ ಬಾಸ್ ಹೆಂಡತಿ ಹೆರಿಗೆಗೆ ಆಸ್ಪತ್ರೆಗೆ ಹೋಗೋದು..ಶತಪಥ..ಲೇಬರ್ವಾರ್ಡಿನ ಮುಂದೆ ಅಡ್ಡಡೋ ಗುಂಡನ ಬಾಸ್....ಲೇಬರ್ ವಾರ್ಡ್ ಮಗು ಅಳೋ ಸದ್ದು..ಗುಂಡ..ಅಯ್ಯಯ್ಯೋ..ಸತ್ತೆ..ಹೊಟ್ಟೆ ನೋವು ಅಂತ ಬಿದ್ದು ಹೊರಳಡೋದು...ಹಹಹಹ...
  ಇದರ ಪರಿಷ್ಕೃತ ವರ ಸಮುದ್ರ ಕುದುರೆಗೆ ಕೊಟ್ಟ ಅಂತ ಕಾಣುತ್ತೆ..ಧನ್ಯವಾದ..ನಿಮ್ಮ ಪ್ರತಿಕ್ರಿಯೆಗೆ.

  ReplyDelete
 16. ಆಜಾದ್ ಸರ್,

  ನೀವು ಕತೆಯನ್ನು ವಿವರಿಸಿದ ರೀತಿಯನ್ನು ನೋಡಿ ನನಗೊಂದು ತೆಲುಗು ಸಿನಿಮ ನೋಡಿದ ನೆನಪಾಯಿತು. ಪಾಪ ಆ ಗಂಡಿನ ಕತೆ ಹೀಗಾಗಬಾರದಿತ್ತು ಅಂದುಕೊಳ್ಳುವಷ್ಟರಲ್ಲಿ ಅದು ಒಂದು ಸಮುದ್ರ ಕುದುರೆಯ ಬದುಕು ಅಂತ ಗೊತ್ತಾಯಿತು.

  ಅದರ ವಿಡಿಯೋ ನೋಡಿದೆ. ಚೆನ್ನಾಗಿದೆ. ಐದು ನಿಮಿಷ ತಾಳ್ಮೆಯಿಂದ ರೇಕಾರ್ಡ್ ಮಾಡಿದ್ದೀರಿ..

  ReplyDelete
 17. ಸುಧೀಂದ್ರ ಸ್ವಾಗತ ಜಲನಯನಕ್ಕೆ...ನಿಮ್ಮ ಪ್ರೋತ್ಸಾಹ ನಮಗೆ ದಾರಿದೀಪ..ಬರುತ್ತಿರಿ.

  ReplyDelete
 18. ನಾನೇ ಏನೋ ಕಷ್ಟ ಬಂದುಬಿಟ್ಟಿದೆ ಯಾಕೆ ಹೆಣ್ಣಾಗಿ ಹುಟ್ಟಬೇಕ್ಕಿತ್ತು ಅಂತ ಅನ್ನಿಸಿತ್ತೇನು ಎಂದುಕೊಂಡೆ ಹಹಹಹ ಕೊನೆಗೆ ಅರ್ಥವಾಯಿತು, ಹೇಗೋ ಹೆಣ್ಣಿನ ಕಷ್ಟ ಗಂಡು ಕುದುರೆಗಾದರೂ ಗೊತ್ತಾಗುತ್ತಾಲ್ಲ ಬಿಡಿ ಹಹಹ ಒಳ್ಳೆಯ ಮಾಹಿತಿ ಧನ್ಯವಾದಗಳು.

  ReplyDelete
 19. ಶಿವು, ಸಮುದ್ರ ಕುದುರೆ ನಮ್ಮ ಸಂಶೊಧನೆಗೆ ಬಹು ಉಪಯುಕ್ತ ಜೀವಿ...ಇಲ್ಲಿ ಗಂಡು ಕುದುರೆಯ ಕಾವು ಚೀಲದಲ್ಲಿ ಮರಿ ಬೆಳೆಯುತ್ತವೆ..ಅಂಡ-ರೇತ್ರಾಣು ಫಲಗೊಂಡು ಬೆಳೆಯುವ ಚೀಲವಷ್ಟೇ ಇದು..ಶರೀರಕ್ರಿಯಾಧಾರಿತವಲ್ಲ ಮರಿ ಮತ್ತು ಗಂದಿನ ಮಧ್ಯದ ಸಂಬಂಧ. ಇದೇ ರೀತಿ ಹಲವು ಮೀನುಗಳು ಮರಿಯನ್ನು ತಮ್ಮ ಬಾಯಲ್ಲಿಟ್ಟು ಕಾವುಕೊಡುವ ಅಥವಾ ರಕ್ಷಿಸುವ ಪೋಷಕಗುಣ ಹೊಂದಿರುತ್ತವೆ.

  ReplyDelete
 20. ಮನಸು..ಮೇಡಂ..ಹೌದು ನೋಡಿ..ಹೆಣ್ಣಿನ ಕಷ್ಟ ಗೊತ್ತಾಗಲೆಂದೇ ಬ್ರಹ್ಮ ಒOದು ಉದಾಹರಣೆ ಮಾಡಿದ ಜೀವಿಗಳಲ್ಲೇ...ಇನ್ನೊಂದು ಜಾತಿಯ ಗಂಡು...ಎಷ್ಟು ಚಿಕ್ಕದಾಗಿರುತ್ತದೆಂದರೆ ಅದು ಹೆಣ್ಣಿನ ಮೈಮೇಲೆ ಪರೋಪಜೀವಿ (parasite)ಯಂತೆ ಜೀವಿಸುತ್ತದೆ... ಸೃಷ್ಠಿಯ ಸೋಜಿಗಗಳಿಗೆ ಎಣೆಯಿಲ್ಲ ಅಲ್ಲವೇ..?

  ReplyDelete
 21. ಜಲನಯನ,
  ನನ್ನ ದಾರಿ ತಪ್ಪಿಸಿ ಬಿಟ್ಟಿದ್ರಿ. ಇದೇನಪ್ಪಾ ಹೀಗೆ?-ಅಂತ ಚಕಿತನಾಗಿದ್ದೆ. ಕೊನೆಗೆ ಹೊರಬಿತ್ತಲ್ಲಾ ಗುಟ್ಟು! ತುಂಬಾ ಸ್ವಾರಸ್ಯಕರವಾಗಿದೆ!

  ReplyDelete
 22. ಸುನಾಥ್ ಸರ್, ಇದೇ ವಿಷಯ ಹಿಂದೆ ಬ್ಲಾಗಿನಲ್ಲಿ ಹಾಕಿದ್ದೆ...(ಇದೇ ಜಲನಯನದ ಮೇ ತಿಂಗಳ- ಗರ್ಭಧಾರೀ ಗಂಡುಗಳು- ಅನ್ನೋ ಶೀರ್ಷಿಕೆ) ...ಸ್ವಾರಸ್ಯಕರ ಆದರೂ ಹೆಚ್ಚು ಪ್ರತಿಕ್ರಿಯೆ ಸಿಗಲಿಲ್ಲ...ಹೇಳಿವ ವಿಷಯಕ್ಕೆ -ಸನ್ಸನೀಯತೆ- ಮಿಕ್ಸ್ ಮಾಡಿದ್ರೆ ಹೇಗೆ ಮಾರಾಟ ಆಗುತ್ತೆ ಅನ್ನೋದಕ್ಕೆ ಇದು ಒಂದು ಉದಾಹರಣೆ....ಕಥೆಯಲ್ಲಿ ಗಂಡು ಹೆಣ್ಣಿನಿಂದ ಶೋಷಿತನಾಗಿ ಗೋಳಿಡುತ್ತಾನೆ ಅಂದರೆ..ಯಾಕಪ್ಪಾ ಇವ ಹೀಗೆ ಅಂತ ಗಂಡಸರು...ಕೊನೆಗೂ ಪುಣ್ಯಾತಿಗಿತ್ತಿ ಒಬ್ಬಳು ಗಂಡಿಗೆ ಸೆಡ್ಡು ಹೊಡೆದಳಲ್ಲಾ ಅಂತ ಹೆಂಗಸರು...ಈ ಲೇಖನವನ್ನು ಗಮನ ಇಟ್ಟು ಓದಿದ್ದಾರೆ...ಅಲ್ಲವೇ...?? ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

  ReplyDelete
 23. ಅಜಾದ್ ಸರ್,
  ಯಾಕೋ ಅನಿಸಿತ್ತು ಇದು ಮನುಷ್ಯರ ವಿಷಯ ಅಲ್ಲ ಅಂತ..... ಯಾಕಂದ್ರೆ..... ನಿಮ್ಮ ಹಿಂದಿನ ಕೆಲವೊಂದು ಪೋಸ್ಟ್ ಗಳೂ ಸಹ ಮೀನಿನ, ಮತ್ತೆ ಬೇರೆಯ ಹೀಗಿನ ವಿಷಯ ಬರೆದಿದ್ದೀರಿ.... ಚೆನ್ನಾಗಿರತ್ತೆ ನಿಮ್ಮ ಲೇಖನಗಳು ಸರ್.... ಏನಾದರು ಮಾಹಿತಿ ಹೊತ್ತೇ ಬರತ್ತೆ..... ವಿಡಿಯೋ ಸಹ ಚೆನ್ನಾಗಿದೆ....

  ReplyDelete
 24. ಆಜಾದ್ ,
  ಕಳೆದ ಸಲ ನೀವು ಫೂಲ್ ಮಾಡಿದ್ದು ನೆನಪಿತ್ತು. ಅದಕ್ಕೆ ಹುಷಾರಾಗಿಯೇ ಓದಿದೆ !
  ಚೆನ್ನಾಗಿ ವಿವರಿಸಿದ್ದೀರ. ಇದು ಜೀವ ಸಂಕುಲದಲ್ಲಿನ ಒಂದು ಅಪರೂಪದ ವಿಷಯವೇ ಸರಿ. ಮಾಹಿತಿ ಹಾಗೂ ವಿಡಿಯೋಲಿಂಕ್ ಗಾಗಿ ಧನ್ಯವಾದಗಳು.

  ReplyDelete
 25. ದಿನಕರ್, ನಿಜ ನಾನು ಸ್ವಲ್ಪ ಸಮಯ ಬಿಟ್ಟು ಬೇರೆ ಪೋಸ್ಟ್ ನಂತರ ಹಾಕಿದ್ರೆ ಚನ್ನಾಗಿರ್ತಿತ್ತು..ಅಲ್ವಾ..? ...ನಿಸರ್ಗವೆಂಬ ವಿಷಯ ಮತ್ತು ಸಂಪತ್ತು ಎರಡೂ ಅಪಾರ..ಅದರಲ್ಲಿ ಬಿಂದುಗಳನ್ನು ಹೆಕ್ಕುವಲ್ಲಿ ಸಮರ್ಥನಾದ್ರೆ ಅದೇ ನನ್ನ ಪುಣ್ಯ...ಧನ್ಯವಾದ.

  ReplyDelete
 26. ಚಿತ್ರಾ, ...ಈಗ ಕನ್ಫ್ಯೂಜನ್ ನನಗೆ..ಚಿತ್ರಾ ಕರ್ಕೆರಾ...ಚಿತ್ರಾ...ನಿಮ್ಮ ಜೋಗ ನನ್ನ ಕನ್ಫ್ಯೂಜನ್ ಅನ್ನ ದೂರ ಮಾಡಿತು....
  ವಿಷಯಕ್ಕೆ ಬರೋಣ... ಫೂಲ್ ಮಾಡೋದ್ರಲ್ಲಿ ಮೀನು ನಿಸ್ಸೀಮ...ಗೊತ್ತೇ ನಿಮಗೆ...ತಮ್ಮ ಜೀವನದ ಮೊದಲ ಅರ್ಧವನ್ನು ಹೆಣ್ಣಾಗಿಯೂ ನಂತರ ಅರ್ಧ ಜೀವನ ಭಾಗದಲ್ಲಿ ಗಂಡಾಗಿಯೂ ಜೀವಿಸುವ ಅನೇಕ ಮೀನುಗಳಿವೆ...!! ಇದಕ್ಕೆ ಅನುಕ್ರಮ ಬಹುಲಿಂಗತ್ವ (sequencial hermophroditism) ಎನ್ನುತ್ತಾರೆ.....ನಿಮ್ಮ ಮಾಹಿತಿಗೆ,,,

  ReplyDelete
 27. ಆಜಾದ್ ಸರ್,

  ಸಮುದ್ರಕುದುರೆ ಬಗ್ಗೆ ಬಹಳ ಹಿಂದೆಯೇ ಓದ್ದಿದ್ದೆ, ನಿಮ್ಮ ಮೇ ತಿಂಗಳ ಪೋಸ್ಟ್ ನಿಂದ ಇನ್ನಸ್ಟು ಮಾಹಿತಿ ತಿಳಿಯಿತು. ವೀಡಿಯೊ ಸೊಗಸಾಗಿ ಬಂದಿದೆ. ಧನ್ಯವಾದಗಳು.

  ReplyDelete
 28. ಆಜಾದ್ ಸಾರ್,

  ಅದ್ಭುತ!!!!! ನನಗೆ ಈ ವಿಷಯಾನೇ ಗೊತ್ತಿರಲಿಲ್ಲ... ವೀಡಿಯೊ ನೋಡಿದೆ... ನಂಬಲಿಕ್ಕೆ ಆಗಲಿಲ್ಲ ಅದು ಗಂಡು ಸಮುದ್ರ ಕುದೆರೆಯೆಂದು... ಈ ಸೃಷ್ಟಿಯಲ್ಲಿ ಅದೆಷ್ಟೊಂದು ವೈಚಿತ್ರಗಳಲ್ಲವೇ??? ಲೇಖನ ತುಂಬಾ ಮಾಹಿತಿಪೂರ್ಣ... ನಿಮ್ಮ ಮೇ ತಿಂಗಳ ಬ್ಲಾಗ್ ಕೂಡ ಓದುವೆ...

  "ತಮ್ಮ ಜೀವನದ ಮೊದಲ ಅರ್ಧವನ್ನು ಹೆಣ್ಣಾಗಿಯೂ ನಂತರ ಅರ್ಧ ಜೀವನ ಭಾಗದಲ್ಲಿ ಗಂಡಾಗಿಯೂ ಜೀವಿಸುವ ಅನೇಕ ಮೀನುಗಳಿವೆ...!! " ಅಂತ ಒಂದು ಕಡೆ ಬರೆದಿದ್ದೀರಿ... ದಯವಿಟ್ಟು ಅವುಗಳ ಬಗ್ಗೆ ವಿಸ್ತಾರವಾಗಿ ತಿಳಿಸಿ... ತಿಳಿಯಲು ಕುತೂಹಲಕಾರಿಯಾಗಿದ್ದೇನೆ..

  ReplyDelete
 29. ನಿಶಾ, ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ. ಸಮುದ್ರ ಕುದುರೆಯ ಜಾತಿಯದೇ ಸಮುದ್ರ ದೈತ್ಯ (sea dragon) ಇದು ತನ್ನ ದೇಹಾಕೃತಿ ಮತ್ತು ರೆಕ್ಕೆಗಳನ್ನು ತನ್ನ ಸುತ್ತಲ ಸಮುದ್ರ ಸಸ್ಯಗಳ ಎಲೆಯನ್ನು ಹೋಲುವಂತೆ ಬೆಳೆಸುತ್ತದೆ..ಇದು ಪರಿಸರಕ್ಕನುಗುಣವಾದ ಹೊಂದಿಕೆ ಮಾರ್ಪಾಡು..ತನ್ನನ್ನು ಬೇಟೆಯಾಡುವ ಇತರ ಸಮುದ್ರ ಜೀವಿಗಳಿಂದ ರಕ್ಷಿಸಿಕೊಳ್ಲಲು ಹೂಡುವ ಉಪಾಯ ಇವುಗಳದ್ದು.

  ReplyDelete
 30. ರವಿಕಾಂತ್, ನನಗೆ ಗೊತ್ತಾಯಿತು ಮೊದಲಿಗೆ ನಿಮ್ಮ ಪ್ರತಿಕ್ರಿಯೆ ಬಂದಾಗ ವಿಷಯದ ಬಗ್ಗೆ ನಿಮ್ಮ ಆಸಕ್ತಿ ತಿಳಿಯಿತು..ಹೌದು ಕೆಲ ಮೀನುಗಳು ಮೊದಲು ಗಂಡು ನಂತರ ಹೆಣ್ಣಾಗುತ್ತವೆ ಇವಕ್ಕೆ ಪ್ರೊಟಾಂಡ್ರಸ್ ಹರ್ಮಾಫ್ರೊಡೈಟಿಸಮ್ (protandrous hermaphroditism) ಅದೇ ಮೊಅದಲಿಗೆ ಹೆಣ್ಣು ನಂತರ ಗಂಡಾದರೆ ಪ್ರೋಟೋಗೈನಸ್ (protogynous hermaphroditism) ಎನ್ನುತ್ತಾರೆ. ಇದರ ಬಗ್ಗೆ ಇನ್ನೊಮ್ಮೆ ವಿವವ್ರವಾಗಿ ಬರೆದು ನನ್ನ science & share ಬ್ಲಾಗ್ ನಲ್ಲಿ ಹಾಕಿ ನಿಮಗೆ ತಿಳಿಸುತ್ತೇನೆ...ಆಯ್ತಾ?

  ReplyDelete
 31. ನಮಸ್ಕಾರ್ ಸಾರ್,
  ಲೇಖನ ತುಂಬಾ ಚನ್ನಾಗಿದೆ ಓದುತ್ತಿದ್ದಂತೆ ಮೊದ ಮೊದಲು ಅನುಮಾನ ಸುರುವಾಗಿತ್ತು ಹಾಗೂ ಇದ್ಯಾವುದೇ ಕಥೆಯ ಭಾಗವಾಗಿಬಹುದು ಎಂದು ಭಾವಿಸುತ್ತಿದ್ದೆ ಆದರೆ ಅದೊಂದು ಮೀನು ಎಂದು ತಿಳಿದು ಆಶ್ಚಯವಾಗಿತು, ನಿಮ್ಮ ಕಲ್ಪನೆ ಅದ್ಬುತ
  *ಮಂಜುನಾಥ ತಳ್ಳಿಹಾಳ
  ಗದಗ ಜಿಲ್ಲೆ

  ReplyDelete
 32. ಮೊದಲಿಗೆ ಇದ್ಯಾವುದೋ ಹೊಸ ಸಿನಿಮಾ ಕಥೆ ಇರಬೇಕು ಅನ್ದುಕೊ೦ಡೆ, ಚೆನ್ನಾಗಿದೆ.

  ReplyDelete
 33. ಜಲನಯನ ಸರ್ .
  ನಿಮ್ಮ ಈ ಸ೦ಚಿಕೆ ಓದುತ್ತಿರುವ೦ತೆ ಸಮುದ್ರ ಕುದುರೆ ಅ೦ತಲೆ ಅ೦ದುಕೊ೦ಡೆ. ಕೆಲವು ದಿನಗಳ ಮೊದಲು ನನ್ನ ಮಗಳು ಅವಳ ಸೀ ಅನಿಮಲ್ಸ್ ಪುಸ್ತಕದಲ್ಲಿ ತೋರಿಸಿದ್ದಳು.
  ನೀವು ಹಾಕಿದ ವೀಡಿಯೊ ತೋರಿಸಿದೆ ಅವಳಿಗೆ. ಅವಳೇ ವಿವರಣೆ ಕೊಟ್ಟಳು. ಒಳ್ಳೆಯ ಮಾಹಿತಿಗೆ ಧನ್ಯವಾದಗಳು.

  ReplyDelete
 34. ಮಂಜು, ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ, ಮೀನಿನ ಜೀವನ ಚರಿತ್ರೆಯನ್ನು ಓದುತ್ತಿದ್ದರೆ ಯಾವ ಕಥೆಯನ್ನೂ ಸರುಗಟ್ಟುವ ಹಾಗಿರುತ್ತವೆ. ೩೫೦೦ ಸಾವಿರ ಕಿ.ಮೀ. ಪಯಣದಲ್ಲಿ ಯೂರೋಪಿನ ನದಿಗಳಿಂದ ಶಾಂತಸಾಗರದ ಸರ್ಗ್ಯಾಸೋ ಸಮುದ್ರದಲ್ಲಿ ಮರಿ ಮಾಡಿ ಸತ್ತುಹೋಗುವ ಈಲ್ ಮೀನು..ತನ್ನ ಮರಿಗಳು ತಮ್ಮ ತಾಯನದಿಗೆ ಹಿಂದಿರುಗತ್ತವೆ ಎಂದರೆ ನಂಬುತ್ತೀರಾ?
  ಇದು ಜೀವ ಮತ್ತು ಜೀವಿ ವಿಸ್ಮಯ.

  ReplyDelete
 35. ಪರಾಂಜಪೆಯವರೇ, ತಪ್ಪದೇ ಜಲನಯನಕ್ಕೆ ಬರುವ ಮತ್ತು ನಿಮ್ಮ ಅಮೂಲ್ಯ ಪ್ರತಿಕ್ರಿಯೆ ನೀಡುವ ನಿಮ್ಮ ಆತ್ಮೀಯತೆಗೆ ನಮನ

  ReplyDelete
 36. ಚುಕ್ಕಿ ಚಿತ್ತಾರದಲ್ಲಿ..ನಮ್ಮ ಮೀನಿನ ಕಥೆ ಮೂಡಿದರೆ ಅದು ಜಲನಯನಕ್ಕೆ ಸಿಕ್ಕ ಪುರಸ್ಕಾರ. ಇದನ್ನು ಮೊದಲೇ ಊಹಿಸಿದ್ದಿರೆಂದರೆ...ನಿಮ್ಮ ಆಸಕ್ತಿಯನ್ನು ಮೆಚ್ಚಬೇಕಾದ್ದೇ. ಧನ್ಯವಾದ. ನಿಮ್ಮ ಮಗಳಿಗೆ ನನ್ನ science and Share blog ಬಗ್ಗೆ ತಿಳಿಸಿ. ಅಥವಾ ನೀವು ನೋಡಿ ಯಾವುದ್ದಾದರೂ interesting ವಿಷಯವಿದ್ದರೆ ತೋರಿಸಿ.

  ReplyDelete
 37. ಅಣ್ಣ :-
  ನನಗೆ ಈ ಕುದುರೆ ಬಗ್ಗೆ ಇವತ್ತೇ ಗೊತ್ತಾಗಿದ್ದು
  ಅಬ್ಬ ತಳದ ಜಲದ ಜಾಲದಲ್ಲಿ ಏನೆಲ್ಲಾ ಅಡಗಿದೆ "ವಿಸ್ಮಯ ಜಗತ್ತು"
  ಏನೆ ಆಗಲಿ ನಿಮಗೆ ಎಷ್ಟು ಧನ್ಯವಾದಗಳು ಹೇಳಿದ್ರು ಸಾಲದು.

  ReplyDelete
 38. This comment has been removed by the author.

  ReplyDelete
 39. see dragon ge mythology yalli bereyade staanvideyalla...
  The blog is so informative ,

  ReplyDelete
 40. ಮಂಜು, ನಿನ್ನ ಆಸಕ್ತಿಗೆ ಅಭಿನಂದನೆ ಮತ್ತು ಆತ್ಮೀಯತೆಗೆ ಧನ್ಯವಾದ....ಸಮುದ್ರ ಮತ್ತಿತರ ಜಲ ಗರ್ಭದಲ್ಲಿ ಇನ್ನೂ ನನಗೆ ತಿಳಿದ ಸೋಜಿಗಗಳನ್ನು ಹೆಕ್ಕಿ ತರುತ್ತೇನೆ...

  ReplyDelete
 41. ಗೌತಮ್ ಹೆಗ್ಡೆ ಯವರಿಗೆ ಧನ್ಯವಾದಗಳು...ಶೃಷ್ಠಿಯ ವಿಚಿತ್ರಗಳ ಗಣಿ ಅಗೆದಷ್ಟೂ ಇನ್ನೂ ಸೋಜಿಗಗಳು ಹೊರಬರುತ್ತವೆ...

  ReplyDelete
 42. ಶ್ವೇತ, ನಿಮ್ಮ ಅನಿಸಿಕೆ ನಿಜ, ಪುರಾಣಗಳಲ್ಲಿನ ವಿಷ್ಣುವಿನ ಅವತಾರಗಳಲ್ಲಿ ಮತ್ಸ್ಯ, ಮತ್ತು ಕೂರ್ಮಗಳು ಇವನ್ನೇ ಪ್ರತಿಪಾದಿಸುತ್ತವೆ, ವಿಕಾಸವಾದದ ಕೊಂಡಿಗಳು ಈ ಜೀವಿಗಳು. ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

  ReplyDelete