ಮಂಗಳೂರಿಗೆ ಕಾರ್ಯನಿಮಿತ್ತ ಡಿಸೆಂಬರ್ ೨೨ಕ್ಕೆ ಹೋಗಿದ್ದಾಗ ದಿನಕರ್ ಮೊಗೇರ್ ನನಗಾಗಿ ಕಾಯುತ್ತಿರುವಂತೆ ಫೋನ್ ಮಾಡಿದರು, ಭೇಟಿಗೆಂದೇ ನಮ್ಮ ಮೀನುಗಾರಿಕಾ ಮಹಾವಿದ್ಯಾಲಯದ ಆವರಣಕ್ಕೆ ಬಂದು ಕಾದಿದ್ದರು. ತಮ್ಮ ಶ್ರೀಮತಿಯವರೊಂದಿಗೆ ಬಂದಿದ್ದ ಅವರ ಆತ್ಮೀಯತೆಗೆ ನಾನು ಮೂಕನಾಗಿದ್ದೆ. ಯಾವುದೋ ಸಂದರ್ಭದಲ್ಲಿ "ನಿಮ್ಮ ಊರಿಗೆ ಬರುವೆ" ಎಂದು ತಾರೀಖು ತಿಳಿಸಿದ್ದೆ ಅಷ್ಟೇ. ಇದನ್ನು ಯಾವ ರೀತಿಯ ಬಾಂಧವ್ಯ ಎನ್ನಬೇಕು? ಕಾಲೇಜಿನಲ್ಲಿ ನನ್ನ ಸ್ನೇಹಿತರಂತೂ ಈ ರೀತಿಯ ಉತ್ಕಟ ಬಂಧ-ಬಾಂಧವ್ಯ ಬ್ಲಾಗಿನ ಮೂಲಕ ಬರಲು ಸಾಧ್ಯವೇ ಎಂದು ಆಶ್ಚರ್ಯ ಪಟ್ಟರು. ನನ್ನ ಘನಿಷ್ಟ ಮಿತ್ರ ಡಾ.ಶಿವಪ್ರಕಾಶ್ ಅಂತೂ ಮೂಕನಾಗಿದ್ದ ಅವರ ಆತ್ಮೀಯತೆ ಕಂಡು..ಅವನು ಆಗಲೇ ನಿರ್ಧರಿಸಿದ ತಾನೂ ಬ್ಲಾಗ್ ರಚಿಸಬೇಕೆಂದು. ಈ ಚಿತ್ರದಲ್ಲಿ ನಾನು, ದಿನಕರ್, ವನಿತಾ (ಶ್ರೀಮತಿ ದಿನಕರ್) ಮತ್ತು ನನ್ನ ಮಿತ್ರ ಡಾ. ಶಿವಪ್ರಕಾಶ್, ಎಸ್.ಎಮ್.
ಚಾಟ್ನಲ್ಲಿ ಡಿ.೨೪ಕ್ಕೆ ತನ್ನ ಹುಟ್ಟುಹಬ್ಬ ನೀವು ಬಂದಾಗ ಖಂಡಿತಾ ಮನೆಗೆ ಬರಬೇಕು ಎಂದು ಒತ್ತಾಯಿಸಿದ್ದ ಶಿವುವನ್ನು ಕಾಣಲು ಅವರ ಮನೆಗೆ ಹೊರಟೆ. ಮಲ್ಲೇಶ್ವರಂ ಸರ್ಕಲ್ ನಿಂದ ಹೊರಟು ನವರಂಗ ಟಾಕೀಸಿನ ದಾರಿಯಲ್ಲಿ ಪಾರ್ಕಿನ ಬಳಿ ಬಸ್ಸಿನಿಂದಿಳಿದೆ. ಶಿವುಗೆ ಫೋನ ಮಾಡಿದೆ..ತಮ್ಮ ಸ್ಕೂಟಿಯಲ್ಲಿ ಬಂದೇ ಬಿಟ್ತರು ಶಿವು ನನ್ನ ಪಿಕ್-ಅಪ್ ಮಾಡಲು...ಅವರ ಮತ್ತು ಹೇಮಾಶ್ರೀ (ಶ್ರೀಮತಿ ಶಿವು) ಅವರ ಸಂಭ್ರಮ ನನ್ನನ್ನು ಮೂಕನ್ನನ್ನಾಗಿಸಿದವು. ಅವರ ಮನೆಯಲ್ಲಿ ಒಪ್ಪವಾಗಿ ಜೋಡಿಸಿದ್ದ ಶಿವುಗೆ ಸಂದಿದ್ದ ಪ್ರಶಸ್ತಿಗಳ ಮತ್ತು ಮನೆಯ ವೀಡಿಯೋ ಕ್ಲಿಪ್ ತೆಗೆದೆ.. ನನ್ನ, ಶಿವು ಮತ್ತು ಅವರ ಶ್ರೀಮತಿಯರ ಜೊತೆ ಫೋಟೋ ತೆಗೆದರು. ಬಿಸಿ ಬಿಸಿ ದೋಸೆಯ ಸೇವೆ, ಹಬೆಯಾಡುವ ಕಾಫಿ..ನನ್ನ ಹೊಟ್ಟೆ ತುಂಬಿಸಿದರೆ ನನ್ನ ಮನದಾಳಕ್ಕೆ ಅವರ ಅತ್ಮೀಯತೆ ಹೊಕ್ಕಿತ್ತು..
ಬೆಂಗಳೂರಿನ ಸಿಟಿ ಟ್ಯಾಕ್ಸಿಯಲ್ಲಿ ಕುಳಿತು ಸಹಕಾರನಗರಕ್ಕೆಂದು ಹೇಳಿದಾಗ ಹರೀಶ್ (ಟ್ಯಾಕ್ಸಿ ಚಾಲಕ) ಕೇಳಿದ್ದು "ಸ್ಥಳದ ಪರಿಚಯ ನಿಮಗಿದೆಯಾ ಎಂದು. ಇಲ್ಲ ಎಂದಾಗ "ಸಹಕಾರ ನಗರ ಗೊತ್ತು ಅಲ್ಲಿ ಯಾವ ನಿಗದಿತ ಜಾಗ ಎಂದು ತಿಳಿದುಕೊಳ್ಳಿ" ಎಂದಾಗ ಪ್ರಕಾಶ್ ಗೆ ಫೋನಾಯಿಸಿದೆ. ಪಾರ್ಕಿನ ಬಳಿ ಎಂದಾಗ "ಆ ಜಾಗ ಗೊತ್ತು ಅಲ್ಲಿಗೆ ಹೋಗೋಣ ನಂತರ ನಿಮ್ಮ ಸ್ನೇಹಿತರಿಗೆ ಫೋನು ಮಾಡಿ" ಎಂದು ಟ್ಯಾಕ್ಸಿ ಹೊರಡಿಸಿದ ಹರೀಶ. ಅ ಜಾಗಕ್ಕೆ ಬಂದಾಗ..ಕಾರಿನಲ್ಲಿ ಕುಳಿತಲ್ಲಿಂದಲೇ ನಮ್ಮೆಡೆ ಕೈಬೀಸಿದ್ದರು ಪ್ರಕಾಶ್...!!! ಹರೀಶನಿಗೆ ನಾವು ಒಬ್ಬರನ್ನೊಬ್ಬರು ನೋಡುತ್ತಿರುವುದು ಇದೇ ಮೊದಲಿಗೆ ಎಂದಾಗ ನಂಬಲಿಲ್ಲ...ಅದುಹೇಗೆ..ಈ ರೀತಿಯ ಸ್ನೇಹ-ಬಂಧ ಹೇಗೆ ತಿಳಿಯಿತು ಇವರೇ ಎಂದು? ಎಂದೆಲ್ಲಾ ಅವನಿಗೆ ಪ್ರಶ್ನೆ ಕಾಡತೊಡಗಿದುವಂತೆ.
ಮೀನು, ಮತ್ಸ್ಯಶಾಸ್ತ್ರ ಮತ್ತು ಮತ್ಸ್ಯಕೃಷಿಗಳಲ್ಲಿ ಮುಳುಗಿದ್ದ ನನಗೆ ... ಇಷ್ಟೇ ಅಲ್ಲ ಪ್ರಪಂಚ ಎನ್ನುವುದನ್ನು ಸಾದರಪಡಿಸುವಂತೆ ಪರಿಚಯಿಸಿದ ಶ್ರೇಯ -ಮೃದುಮನಸು- ಗೆ ಸಲ್ಲಬೇಕು. ಬಹುಶಃ ಒಂದು ವರ್ಷದ ನನ್ನ ಗಳಿಕೆ... ಆತ್ಮೀಯರ, ನನ್ನ ಲೇಖನ ಅದು ಹೇಗೇ ಇದ್ದರೂ ಮೆಚ್ಚಿ ಪ್ರೋತ್ಸಾಹಿಸುವ ಬ್ಲಾಗು-ಮಿತ್ರರ ಸ್ನೇಹ. ತುಂಬು ಮನಸ್ಸಿನಿಂದ ಅಣ್ಣ ಎನ್ನುವ ತಂಗಿಯರು, ತಮ್ಮಂದಿರು, ಅಲ್ಪಸ್ವಲ್ಪ ಹತ್ತಿರ ವಯಸ್ಕರು, ಹೀಗೆ ಹಲವಾರು ಸ್ನೇಹಿತರು...ಜೊತೆಗಿದ್ದು ಹುಟ್ಟಿನಿಂದ ಪರಿಚಿತ ಬಂಧುಗಳಿಗಿಲ್ಲದ ಆಪ್ಯಾಯತೆ ಇವರಲ್ಲಿ ಕಂಡೆ...
ಬ್ಲಾಗು ಬ್ರಹ್ಮ ಬ್ಲಾಗು ವಿಷ್ಣು ಬ್ಲಾಗುದೇವೋ ಮಹೇಶ್ವರಃ ಬ್ಲಾಗೇ ಸಾಕ್ಶಾತ್ ಪರ ಬ್ರಹ್ಮ ತಸ್ಮೈಶ್ರೀ ಬ್ಲಾಗುವೇ ನಮಃ...........ಅಲ್ಲವೇ...??.
ಅಜಾದ್ ಸರ್,
ReplyDeleteನಾನು ಬ್ಲಾಗ್ ಲೋಕಕ್ಕೆ ಹೊಸಬ, ನಿಮ್ಮನ್ನು ಭೇಟಿಯಾದದ್ದು ನನ್ನ ಸೌಭಾಗ್ಯ ಎಂದೇ ಹೇಳಬೇಕು..... ನನ್ನ ಬ್ಲಾಗ್ ಪೋಸ್ಟ್ ತುಂಬಾ ಸಾರಿ ಸರಿಪಡಿಸಿ, ತಿದ್ದಿದ್ದೀರಾ... ಹಿರಿಯ ಅಣ್ಣನಾಗಿ ನನ್ನ ಸಂಶಯಗಳನ್ನು ನೀಗಿಸಿದ್ದೀರಾ..... ನೀವು ಮಂಗಳೂರಿಗೆ ಬರುತ್ತೀರಾ ಎಂದರೆ ನಾನು ಭೇಟಿಯಾಗಲೇ ಬೇಕು ಎಂದು ನಿರ್ಧಾರ ಮಾಡಿ, ಆ ದಿನಕ್ಕಾಗಿ ಕಾಯ್ತಾ ಇದ್ದೆ.... ನಿಮ್ಮನ್ನು ಭೇಟಿಯಾಗಲು ಸಾದ್ಯಾನಾ ಅಂತ ಅನುಮಾನಾನೂ ಇತ್ತು.... ಯಾಕಂದ್ರೆ ನೀವು ತುಂಬಾ ಬ್ಯುಸಿ ಇರ್ತೀರಾ ಅಂತ.... ಕೊನೆಗೂ, ನಿಮ್ಮನ್ನು ಭೇಟಿ ಮಾಡುವಲ್ಲಿ ಯಶಸ್ಹ್ವಿಯಾದೆವು..... ನಿಮ್ಮ ಪ್ರೀತಿಗೆ ತುಂಬು ಹೃದಯದ ಧನ್ಯವಾದಗಳು, ನಮ್ಮಿಬ್ಬರಿಂದಲೂ ...... ಹಾಗೆ, ಶಿವೂ ಸರ್, ಮತ್ತೆ ಪ್ರಕಾಶಣ್ಣ ರನ್ನು ಭೇಟಿ ಯಾದಿರಿ ಎಂದು ನೋಡಿ ಖುಷಿಯಾಯಿತು..... ಒಮ್ಮೆ ಎಲ್ಲಾ ಬ್ಲಾಗ್ ಸ್ನೇಹಿತನ್ನು ಸೇರಿಸುವ ಬಗ್ಗೆ ಯೋಚನೆ, ಯೋಜನೆ ಮಾಡಿ ಸರ್....
ಹಹಹ ಹೌದು ಬ್ಲಾಗೇ ಎಲ್ಲಾ!!! ನೀವು ಊರಿಗೆ ಹೋಗಿದ್ದಾಗ ಅವರನ್ನೆಲ್ಲಾ ಭೇಟಿ ಮಾಡಿದ್ದು ಸಂತಸದ ಸುದ್ದಿ. ಬ್ಲಾಗ್ ನಮಗೆ ಎಷ್ಟೋ ಭಾಂದವ್ಯವನ್ನು ತಂದುಕೊಟ್ಟಿದೆ.
ReplyDeleteಜಲನಯನ,
ReplyDeleteಬ್ಲಾಗ್ ಲೋಕದ ಬಾಂಧವ್ಯಕ್ಕೆ ನಮೋನಮಃ!
ಅಝಾದಣ್ಣ,
ReplyDeleteನನಗೂ ನಿಮ್ಮ ತರಹನೆ ಆಗಿದೆ.....ಬ್ಲಾಗು ಬಹಳ ಜನ ಸ್ನೇಹಿತರನ್ನು ಕೊಟ್ಟಿದೆ.....
ದಿನಕರ್ ಅಪೇಕ್ಷೆಯಂತೆ ಒಮ್ಮೆ ಎಲ್ಲಾ ಬ್ಲಾಗ್ ಸ್ನೇಹಿತನ್ನು ಸೇರಿಸುವ ಬಗ್ಗೆ ಯೋಚನೆ ಯೋಜನೆ ಮಾಡಿ....
ನಲ್ಮೆಯ ದಿನಕರ್, ನಿಮ್ಮ ಆತ್ಮೀಯತೆಗೆ ಧನ್ಯವಾದಗಳು. ನನಗೂ ಹೆಮ್ಮೆ ಮತ್ತು ಸಮ್ತೋಷದ ವಿಷಯ ನನ್ನ ಸ್ನೇಹಿತರಿಗಂತೂ ಆಶ್ಚರ್ಯವಾಯ್ತು ನನ್ನ ಬ್ಲೊಗ್ ಮಿತ್ರರು ನನ್ನ ನೋಡಲು ಬಂದಿದ್ದಾರೆ ಎಂದಾಗ. ನನಗೂ ಆಸೆಯಿದೆ ಎಲ್ಲ ಬ್ಲಾಗ್ ಮಿತ್ರರನ್ನೂ ಒಮ್ಮೆ ಒಂದೆಡೆ ಸೇರಿಸುವ ಆಸೆ ನನಗೂ ಇದೆ. ಬಹುಶಃ ಮುಂದಿನ ಜೂನ್ ಕೊನೆಯ ವೇಳೆಗೆ ಸಾಧ್ಯವಾದರೆ...ಎಲ್ಲರೊಂದಿಗೆ ಚರ್ಚಿಸೋಣ, ನಿಮಗೆ ತಿಳಿದವರಿಗೂ ಹೇಳಿ..ಇದೊಂದು ಒಳ್ಳೆಯ ಅವಕಾಶ ಆಗುತ್ತೆ ಎಲ್ಲರನ್ನೂ ಕಾಣಲು.
ReplyDeleteಮನಸು ಮೇಡಂ ಹೌದು ನೋಡಿ ಬ್ಲಾಗಿಗೆ ಮುಂಚೆನೂ ನಿಮ್ಮ ಪರಿಚಯ ಮತ್ತು ಮಹೇಶ್ ಪರಿಚಯ ಇತ್ತು ಆದರೆ ನಿಮ್ಮ ಆತ್ಮೀಯತೆ ಬೆಳೆದಿದ್ದು ಬ್ಲಾಗ್ ನ ಮುಖಾಂತರ..ಅಲ್ವಾ?
ReplyDeleteಸುನಾಥ್ ಸರ್, ನನ್ನ ವಿದ್ಯಾಮಂದಿರ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ಅಲುಮಿನಿ ಗ್ಲೊಬಲ್ ಮೀಟ್ ಇತ್ತು ಅಲ್ಲಿ ೨೦-೩೦ ವರ್ಷಗಳ ನಂತರ ಮತ್ತೆ ಭೆಟ್ಟಿಯಾದ ಸ್ನೇಹಿತರ ಆ ನೆನೆಪು ಒಂದು ತೂಕವಾದರೆ ಮುಖಪರಿಚಯವಿಲ್ಲದೇ ಎಷ್ಟೋ ಪರಿಚಯಸ್ಥರಂತೆ ಭೆಟ್ಟಿಯಾಗುವ ಬ್ಲಾಗ್ ಮಿತ್ರರ ಆ ಆತ್ಮೀಯತೆಯ ತೂಕ ಮತ್ತೊಂದೆಡೆ..ನಿಜಕ್ಕೂ ಧನ್ಯವೆನಿಸಿತು ನನ್ನ ಈ ಬಾರಿಯ ಸ್ವದೇಶ/ಸ್ವನಾಡ ಪಯಣ. ಸರ್, ಮುಂದಿನ ಜೂನ್-ಜುಲೈ ನಲ್ಲಿ ಎಲ್ಲ ಬ್ಲಾಗ್ ಮಿತ್ರರೂ ಒಮ್ದೆಡೆ ಸೇರೋಣ ..ಏನಂತೀರಿ..?
ReplyDeleteಮಹೇಶ್ ನಿಮ್ಮ ಮಾತು ನಿಜ..ದಿನಕರ್ ಮತ್ತು ನಾನು ಭೆಟ್ಟಿಯಾದದ್ದು ಆ ರೀತಿ ನೋಡಿ ನನ್ನ ಮಿತ್ರರು ಬಹುದಿನದ ಪರಿಚಯ ಎಮ್ದುಕೊಂಡಿದ್ದರು. ಶಿವು ಭೇಟಿಯಾದಾಗ ನನಗೆ ಅವರು ಹೊಅಸಬರು ಎನ್ನಿಸಲೇ ಇಲ್ಲ..ಹತ್ತಿರದ ಅತ್ಮೀಯರನ್ನು ಭೆಟ್ಟಿಯಾದಂತಾಯಿತು ಅವರ ಮನೆಗೆ ಹೋದಾಗ ಅವರ ಶ್ರೀಮತಿಯವರೂ ಹಾಗೆಯೇ ..ಇನ್ನು ಪ್ರಕಾಶ್ (ಇಟ್ಟಿಗೆ ಸಿಮೆಂಟ್ ನಲ್ಲಿ ಬೆರೆತು ಹೊರಬರದಷ್ಟು ಮೆತ್ತಿ ಕೊಂಡಿದ್ದರೂ) ನನ್ನು ಭೇಟಿ ಮಾಡುವ ನನ್ನ ತವಕಕ್ಕಿಂತ ಅವರಿಗೇ ತವಕ ಹೆಚ್ಚಿತ್ತು.....ಇದೊಂದು ನವ ವ್ಯಾಖ್ಯಾನಯೋಗ್ಯ ಬಂಧ.
ReplyDeleteಜಲನಯನ ಅವರೆ,
ReplyDeleteನಿಮ್ಮ ಭಾರತ ಪ್ರವಾಸದ ಆತ್ಮೀಯ ಭಾ೦ಧವ್ಯದ ಸಿಹಿಗಳಿಗೆಗಳನ್ನು ನಮ್ಮೊ೦ದಿಗೆ ಹ೦ಚಿಕೊ೦ಡಿದ್ದಕ್ಕೆ ಕೃತಜ್ನತೆಗಳು..
ನಿಜ ಸರ್.
ReplyDeleteನನಗೂ ಬಹಳಷ್ಟು ಸ್ನೇಹಿತರನ್ನು ಕೊಟ್ಟಿದ್ದೆ. ನಮ್ಮದೊಂದು team ಎನ್ನುವ ಹಾಗೆ ಆಗಿಬಿಟ್ಟಿದೆ.
ಬ್ಲಾಗಿಗೆ, ಬ್ಲಾಗ್ ಮಿತ್ರರಿಗೆ ಜೈ ಹೋ.... :)
ಭೈಯ್ಯ ..
ReplyDeleteಫೋಟೋ ನೋಡಿ ತುಂಬಾ ಖುಷಿಯಾಯ್ತು ..ಹೀಗೆ ಎಲ್ಲ ಬ್ಲಾಗ್ ಮಿತ್ರರೂ ಒಂದು ಕಡೆ ಸೇರುವಂತಾದರೆ ಅದು ಇನ್ನು ಖುಷಿಯ ವಿಷಯ ಅಲ್ಲವೇ ?
ಮನಮುಕ್ತ, ನಿಮ್ಮ ಮುಕ್ತ ಮಾತಿಗೆ ನನ್ನ ಮುಕ್ತ ಧನ್ಯವಾದ...ನಮ್ಮ ಹಲವು ಬ್ಲಾಗ್ ಮಿತ್ರರು ನಮ್ಮ ಒಂದು ಸಭೆಗೆ ಆಸಕ್ತಿ ತೋರಿದ್ದಾರೆ...ನಿಮ್ಮ ಅನಿಸಿಕೆಯನ್ನು ನನ್ನ ಮೈಲ್ ಐಡಿ- azadis@hotmail.com ಗೆ ಹಾಕಿ.
ReplyDeleteಶಿಪ್ರ, ನಿಮ್ಮ ಮಾತು ನಿಜ ದಿನಕರ್ ಅವರ ಶ್ರೀಮತಿ, ಪ್ರಕಾಶ್ ಮತ್ತು ಶಿವು ಮತ್ತು ಶ್ರೀಮತಿ ಶಿವು ಎಲ್ಲರೂ ಎಷ್ಟೋ ಪರಿಚಯಸ್ಥರಂತೆ ಕಂಡಿದ್ದು ನಿಜಕ್ಕೂ ನನಗೆ ಸೋಜಿಗ ಎನಿಸುತ್ತಿದೆ ಈಗಲೂ... ನಿಮ್ಮನ್ನು ನೋಡಲಾಗಲಿಲ್ಲ...ಶರಧಿ (ಧರಿತ್ರಿ) ನನ್ನ ಮೇಲೆ ಕೋಪ-ಮುನಿಸು ಎರಡನ್ನೂ ತೋರಿಸಿದ್ದಾರೆ...ಶಿವು ಮನೆ ಹತ್ರನೇ ಅವರ ಮನೆಯಂತೆ...ಬೇಸರ ಆಗಿರೋದು ಸಹಜ.
ReplyDeleteರಂಜು, ನೀನು ಊರಿಗೆ ಬರುವ ಸಮಯವನ್ನ ಜೂನ್ ಜುಲೈಗೆ ಇಟ್ಟುಕೋ ಆಗ ನಾವೆಲ್ಲ ಸೇರಬಹುದು...ಏನಂತೀಯಾ? ನಿನ್ನ ಪ್ರತಿಕ್ರಿಯೆಗೆ ಧನ್ಯವಾದ
ReplyDeleteಅರೇ!!! ತಾವು ಭಾರತಕ್ಕೆ ಬ೦ದು ಹೋದದ್ದು ಗೊತ್ತಾಗಲೇ... ಇಲ್ಲ. ತಮ್ಮ ಅನುಭವ ಹ೦ಚಿಕೊ೦ಡದ್ದಕ್ಕೆ ಭನ್ಯವಾದಗಳು. ಬ್ಲೊಗ್ ಗೆಳೆಯರೆಲ್ಲಾ ಒದು ಸರ್ತಿ ಒ೦ದೆಡೆ ಸೇರುವ ಯೋಚನೆ ಒಳ್ಳೇಯದೇ. ಹೊರದೇಶದ ಹೆಚ್ಚಿನ ಮಿತ್ರರ ಅನುಕೂಲ ನೋಡಿ ಒ೦ದು ದಿನ ನಿರ್ಧರಿಸಿ. ಇಲ್ಲಿನವರೆಲ್ಲಾ ಆ ದಿನಕ್ಕೆ ಪ್ರಾಯಶ: ಸಿದ್ದ ಅನ್ಕೊ೦ತೇನೆ....
ReplyDeleteಸೇರೋ ಸ್ಥಳ ಬೆ೦ಗಳೂರು ಹೆಚ್ಚಿನವರಿಗೆ ಅನುಕೂಲ ಇರಬಹುದು... ಆದರೇ ಐತಿಹಾಸಿಕ ಹ೦ಪೆ ಹೇಗೆ ? ನೀವೆಲ್ಲಾ ಸರಿ ಅ೦ದರೇ ನಾನು ಸಿದ್ಧತೆಗೆ ತಯಾರು..
ಆಜಾದ್ ಸರ್,
ReplyDeleteಬ್ಲಾಗಿನಲ್ಲಿ ನಿಮ್ಮ ಫೋಟೊ ನೋಡಿದಾಗ ನಿಮಗೆ ಖಂಡಿತ ಐವತ್ತು ಆಗಿದೆ ಅಂತ. ಆದ್ರೆ ನಿಮ್ಮನ್ನು ನೋಡಿದಾಗಲೇ ಮೊದಲು ಆಶ್ಚರ್ಯವಾಗಿದ್ದು ನೀವು ಯಂಗ್ ಆಗಿ ಕಾಣುತ್ತಿರುವುದು. ಮತ್ತೆ ನಿಮ್ಮ ಹರಳು ಉರಿದಂತ ಮಾತುಗಳು, ನಿಮ್ಮ ಚಟುವಟಿಕೆ, ಓದು ಮತ್ತು ಕೆಲಸ ನಿಮಿತ್ತ, ನೀವು ಅಲೆದಾಡಿದ ಊರುಗಳು, ನಿಮ್ಮ ಬಾಲ್ಯದ ಆಟಪಾಟಗಳು, ನಿಮ್ಮ ವೃತ್ತಿ, ಇತ್ಯಾದಿಗಳನ್ನೆಲ್ಲಾ ನಮ್ಮ ಮನೆಯಲ್ಲಿ ನೀವು ಮುಕ್ತ ಮನಸ್ಸಿನಿಂದ ಹಂಚಿಕೊಂಡಾಗ ನಮಗೆ ನೀವು ಹೊರಗಿನವರು ಅನ್ನಿಸಲೇ ಇಲ್ಲ. ನಿಮ್ಮ ಇಷ್ಟು ಕ್ರಿಯಾಶೀಲತೆಯೇ ನಿಮ್ಮ ವಯಸ್ಸಿಗಿಂತ ನಿಮ್ಮನ್ನು ಚಿಕ್ಕವರನ್ನಾಗಿ ಮಾಡಿದೆ. ಅವತ್ತು ನಮಗಂತೂ ತುಂಬಾ ಖುಷಿಯಾಗಿತ್ತು. ನಿಮ್ಮ ಗಿಪ್ಟು ಕೂಡ ಇಷ್ಟವಾಗಿತ್ತು. ಮತ್ತೆ ಖಂಡಿತ ನಾವೆಲ್ಲಾ ಬ್ಲಾಗ್ ಗೆಳೆಯರು ಒಂದು ದಿನ ಸೇರೋಣ. ಸೇರುವುದು ಮಾತ್ರವಲ್ಲ, ಎಲ್ಲರೂ ಸೇರಿ ಒಂದೆರಡು ದಿನ ಟೂರ್ ಹೋಗಿ ಅಲ್ಲಿ ನಮ್ಮ ಕಷ್ಟ ಸುಖ, ಆನಂದ, ಖುಷಿ, ಸಂಭ್ರಮಗಳನ್ನು ಅನುಭವಿಸೋಣ. ಅದಕ್ಕೆ ಎಲ್ಲರೂ ಸೇರಿ ಪ್ಲಾನ್ ಮಾಡಬೇಕು. ಸ್ಥಳವನ್ನು ಆಯ್ಕೆಮಾಡಿ. ಇದೊಂದು ಮರೆಯಲಾಗದ ನೆನಪಾಗಿ ಉಳಿಯಬೇಕು ಅನ್ನೋದು ನನ್ನ ಆಸೆ. ಇದಕ್ಕೆ ನೀವೇನು ಅನ್ನುತ್ತೀರಿ...
ಸೀತಾರಂ ಸರ್, ನಿಮ್ಮ ಮಾತನ್ನೇ ಹಲವು ಮಿತ್ರರು ಪ್ರತಿಪಾದಿಸಿದ್ದಾರೆ, ಹೌದು ನಾವು ಎಲ್ಲಾ ಒಂದೆಡೆ ಸೇರಿದರೆ ನಿಜಕ್ಕೂ ಇದು ಅವಿಸ್ಮರಣೀಯ ಆಗುವುದು ಖಂಡಿತಾ,
ReplyDeleteನನಗೆ ಕಾನಫರೆನ್ಸ್ ಇದ್ದಿದ್ದರಿಂದ ಒಮ್ದು ವಾರದ ಮಟ್ತಿಗೆ ಬಂದಿದ್ದೆ..ಇದೇ ಅವಧಿಯಲ್ಲಿ ಶಿವು, ದಿನಕರ್ ಮತ್ತು ಪ್ರಕಾಶರನ್ನು ಭೆಟ್ಟಿಯಾಗಿದ್ದು ಬಹಳ ಸಂತೋಷದಾಯಕವಾಗಿತ್ತು.
ನಾನು ಎಲ್ಲರಿಗೂ ತಿಳಿಸುತ್ತಿದ್ದೇನೆ ಜೂನ್ ಕಡೆಯ ವಾರ ಅಥವಾ ಜುಲೈ ಮೊದಲೆರಡು ವಾರಗಳಲ್ಲಿ ನಮಗೆ ಸೂಕ್ತ..ಇತರ ಮಿತ್ರರನ್ನೂ ಕೇಳೋಣ...ಅಲ್ಲರ ಅನುಕೂಲ ಮತ್ತು ಅತ್ಯಧಿಕ ಬ್ಲಾಗಿಗಳು ಸೇರಿದರೆ ಅದೇ ಹಬ್ಬ..
ಶಿವು ನಿಮ್ಮ ಅಭಿಮಾನ, ಅಪ್ಯಾಯತೆ, ಬಿಚ್ಚುಮನಸು ಆದರಾತಿಥ್ಯ ಎಲ್ಲಾ ನನ್ನನ್ನು ಮೂಕನನ್ನಾಗಿಸಿದವು. ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ, ಚಟುವಟಿಕೆ, ಒಬ್ಬರಿಗೆ ಒಳ್ಲೆಯದನ್ನು ಬಯಸುವ ಮನೋಭಾವ ಮತ್ತು ಎಲ್ಲರೊಳಗೊಂದಾಗುವ ಗುಣ ಇದ್ದರೆ ಎಲ್ಲ ಅನಾರೋಗ್ಯ ಕಳೆದು ಲವಲವಿಕೆ ತುಂಬಿರುತ್ತೆ.
ReplyDeleteಆಜಾದ್ ಸರ್,
ReplyDeleteನಂಗೆ J...ಆಗ್ತಿದೆ..ನಮ್ಮೂರು, ಶಿವು, ಪ್ರಕಾಶಣ್ಣ ಎಲ್ಲರನ್ನು ಮೀಟ್ ಮಾಡಿ ಬಂದಿದ್ದು ಅಲ್ಲದೆ ಪುನ ಜೂನ್ ನಲ್ಲಿ ಊರಿಗೆ ಹೋಗೋ ಪ್ಲಾನ್ ಬೇರೆ ಮಾಡ್ತಿದ್ದೀರ..!!!!..ಊರಿಗೆ ಬಂದ್ರೆ ಜೂನ್-ಜುಲೈ ನಲ್ಲಿ
ಮೀಟ್ ಮಾಡೋಕ್ಕೆ ಟ್ರೈ ಮಾಡ್ತೇನೆ..
ha ha ha..ಬ್ಲಾಗು ಬ್ರಹ್ಮ ಬ್ಲಾಗು ವಿಷ್ಣು ಬ್ಲಾಗುದೇವೋ ಮಹೇಶ್ವರಃ ಬ್ಲಾಗೇ ಸಾಕ್ಶಾತ್ ಪರ ಬ್ರಹ್ಮ ತಸ್ಮೈಶ್ರೀ ಬ್ಲಾಗುವೇ ನಮಃ...
ವನಿತಾ ಮೇಡಂ, ಯು ಆರ್ ಮೋಸ್ಟ್ ವೆಲ್ಕಮ್ ...ನಿಮಗೆ ಜೆ ಆಗ್ತಿರೋದು ನಾನು ಹೋಗಿ ಬಂದುದ್ದಕ್ಕ ಅಥವಾ ನಿಮ್ಮ ಊರಿಗೆ (ಮಂಗಳೂರಿಗೆ) ಹೋಗಿ ಬಂದುದ್ದಕ್ಕ...ನಾನು ಓದಿದ್ದು ಅಲ್ಲೇ ರೀ... ನಮ್ಮ ಆರ್ಕುಟ್ ಗೆ ಜಾಯಿನ್ ಆಗಿ....
ReplyDeleteಧನ್ಯವಾದ ನಿಮ್ಮ ಅನಿಸಿಕೆಗೆ, ಪ್ರತಿಕ್ರಿಯೆಗೆ...ನಿಮ್ಮ ಅಪಾಯಿಂಟ್ ಮೆಂಟ್ ಫಿಕ್ಸ್ ಎಂದುಕೊಳ್ಳಲೇ ಜೂನ್ ಜುಲೈ ಗೆ.....?
ಇದು ತುಂಬಾ ಅನ್ಯಾಯ ಸರ್ :( ನೀವು ಭಾರತಕ್ಕೆ ಅದರಲ್ಲೂ ಬೆಂಗಳೂರಿಗೆ ಬಂದಿದ್ರಿ...ನನಗೆ ಗೊತ್ತೇ ಆಗಲ್ಲಿಲ್ವಲ್ಲ!! ಪ್ರಕಾಶ್ ನೋಡಕ್ಕೆ ಸಹಕಾರ ನಗರಕ್ಕೆಬಂದಿದ್ರ? ನಮ್ಮನೆ ಐರ್‌ಪೋರ್ಟ್‌ನಿಂದ ಹೋಗುವ ದಾರಿಲೆ ಬರುತ್ತೆ! ಮುಂದಿನ ಸಾರಿ ನಾವು ಮಿಸ್ ಮಾಡಿಕೊಳ್ಳೋದು ಬೇಡ.. ಏನಂತೀರಾ? 'ಬ್ಲೋಗ್ ಗೆಳಯರ ಸಂಗಮ' ಒಳ್ಳೇ ಆಲೋಚನೆ!
ReplyDeleteನಮ್ಮ ನಿಮ್ಮ ಭಾಂಧವ್ಯ ಇನ್ನ್ನು ಹೆಚ್ಚಾಗಲು ನಾವೆಲ್ಲಾ ಸೇರಿ ಬ್ಲಾಗಿಗರ ಒಕ್ಕೂಟ (ಸಂಘ)ಮಾಡಲೇ ಬೇಕು ಸರ್ ..!
ReplyDelete