ನಾನು ಹೈಸ್ಕೂಲಿಗೆ ಹೋಗುತ್ತಿದ್ದ ದಿನಗಳು, ಹಳ್ಳಿಲಿ ಆರೇಳು ಅಂಗಡಿಗಳಲ್ಲಿ ನಮ್ಮ ಸೋದರಮಾವನದ್ದೂ ಒಂದು. ನನ್ನ ಸೋದರಮಾವ ಎರ್ಡನೇ ಸರ್ತಿಗೆ ಎಸ್ಸೆಸ್ಸೆಲ್ಸಿ ಮುಗಿಸಿದ್ದ..ಕಾಲೇಜಿಗೆ ಹೋಗೋಕೆ ಮನಸ್ಸಿರಲಿಲ್ಲ..ನಮ್ಮ ತಾತ.. "ನೀನು ಓದಿ ಮುಂಡಾಮೋಚಿದ್ದು ಸಾಕು, ಅಂಗಡಿ ಹಾಕ್ಕೊಡ್ತೀನಿ..ಕೂತು ಒಂಚೂರು ವ್ಯಾಪಾರ ಕುದುರಿಸಿಕೋ" ಅಂತ..ಒಂದು ದಿನಸಿ ಅಂಗಡಿ ಹಾಕಿ ಕೊಟ್ಟಿದ್ದರು. ನಮ್ಮ ಮಾವ ಇನ್ನೂ ಮದುವೆ ಆಗಿರಲಿಲ್ಲ. ಸಂಜೆ ಆರರ ನಂತರ ಹೊಲ ಗದ್ದೆಯಲ್ಲಿ ಕೆಲಸಮಾಡಿ ಬಂದ ನನ್ನ ಮಾವನ ಸ್ನೇಹಿತ ಮಿತ್ರರು, ರೈತಾಪಿಗಳು ನಮ್ಮ ಅಂಗಡಿಯ ಜಗುಲಿ ಮೇಲೆ ಕೂತು ಲೋಕಾಭಿರಾಮ ಮಾತಿಗೆ ಕೂತರೆ..ಅವರೆದ್ದು ಹೋಗುವ ಹೊತ್ತಿಗೆ ರಾತ್ರಿ ಹತ್ತು-ಹತ್ತೂವರೆ ಆಗ್ತಿತ್ತು. ಇವರ ಮಾತಿಗೆ ಅಂಗಡಿ ವ್ಯಾಪಾರ ನೊಡ್ಕೋತಾ ನಮ್ಮ ಮಾವ ಚರ್ಚೆಗೆ ಸ್ವಾರಸ್ಯಕರ ವಿಷಯಗಳನ್ನ ಹಾಗೇ ಪ್ರಾರಂಭಿಸಿ ಚರ್ಚೆ ಮುಂದುವರೆಯೋಕೆ ಬಿಡ್ತಿದ್ದ..ಮಧ್ಯೆ ಮಧ್ಯೆ ತನ್ನ expert comments ಹಾಕೋದನ್ನ ಮರೀತಿರಲಿಲ್ಲ...ರಾತ್ರಿಯ ಎಂಟೂವರೆ ನಂತರ ವ್ಯಾಪಾರ ಸ್ವಲ್ಪ ಕಡಿಮೆ ಇರ್ತಿತ್ತು..ಆಗ ನಮ್ಮ ಮಾವನ ಸ್ನೇಹಿತರು “ಲೇ ..ಅತಾವುಲ್ಲ..ಯಾವುದಾದ್ರೂ interesting story ಇದ್ರೆ ಹೇಳೋ..” ಅಂತ ಗೋಗರೆಯೋದು ಮಾಮೂಲಾಗಿರ್ತಿತ್ತು..ನಾನು ನನ್ನ ಸ್ಕೂಲಿನ ಮನೆಕೆಲಸ ಮುಗಿಸಿ ಮಾವನ್ನ ಊಟಕ್ಕೆ ಕಳುಹಿಸೋಕೆ ಅಂಗಡೀಗೆ ಬರ್ತಿದ್ದೆ...ಹಾಗನ್ನೋದಕ್ಕಿಂತಾ ಅವರ ಸ್ವಾರಸ್ಯಕರ ಮಾತುಕತೆ ಕೇಳೋಕೆ ಬರ್ತಿದ್ದುದು ಅಂದ್ರೆ ತಪ್ಪಾಗದು.
ಹೀಗೇ ಒಮ್ಮೆ, ಎಂಟೂವರೆ ಸಮಯಕ್ಕೆ ಮಾವ ಊಟ ಮುಗಿಸಿಬಂದ..ಸರಿ ಸೇರಿದ್ದ ಅವರ ಸ್ನೇಹಿತರು ಎಂದಿನಂತೆ ದಂಬಾಲು ಬಿದ್ದಾಗ...ಮನೆ ಕೆಲಸದಿಂದ ಬೇಸತ್ತ ನಾರಾಯಣ ಎನ್ನುವ ರೈತನೊಬ್ಬನ ಕಥೆ ಹೇಳತೊಡಗಿದ.
“ನಾರಾಯಣ ಮದುವೆ ಯಾಗಿ ಮನೆಗೆ ಹೆಂಡತೀನೇನು ತಂದ..ಮನೆಗೆ ಮಾರೀನೇ ತಂದುಕೊಂಡ...ಮನೆ ಕೆಲಸ ಎಲ್ಲ ನಾರಾಯಣನಿಗೆ ಮಾಡ್ಬೇಕಾಗ್ತಿತ್ತು..ಸರಿ ದಿನವೆಲ್ಲಾ ಹೊಲ ಗದ್ದೆ ಕೆಲಸ ಮಾಡಿ ದಣಿದು ಬಂದರೆ ಮನೆ ಕೆಲಸಕ್ಕೆ ಹೆಂಡತಿ ಪೀಡಿಸ್ತಿದ್ದಳು...ಬೇಸತ್ತ ನಾರಾಯಣ.. ಗುಡ್ದದಮೇಲಿನ ಬಾಬಾನ ಬಳಿ ಪರಿಹಾರ ಕೇಳೋಕೆ ಹೋದ. ಬಾಬಾ ಅವನಿಗೆ ಒಂದು ಮಂತ್ರ ಹೇಳಿಕೊಟ್ಟು “ಅದನ್ನು ಪ್ರಯೋಗಿಸಿ ಕೆಲಸ ಮಾಡೋ ದೆವ್ವಾನ ಹುಟ್ಟುಹಾಕಬಹುದು..ಆದರೆ ಅದರ ಎಲ್ಲಾ ಶರತ್ತುಗಳನ್ನು ಪಾಲಿಸಬೇಕು, ತಪ್ಪಿದರೆ ಅದು ತನ್ನ ಶರತ್ ಪೂರೈಕೆಮಾಡಿ ಮಾಯವಾಗಿಬಿಡುತ್ತೆ.. “ ಎಂದ ಬಾಬ. ನಾರಾಯಣ ಮಂತ್ರದಿಂದ ದೆವ್ವವನ್ನು ತರಿಸಿದ..ಅದು..ನಾರಾಯಣ ಏನೇ ಕೆಲಸ ಹೇಳಿದರೂ ಮಾಡುವುದಕ್ಕೆ ಒಪ್ಪಿತು, ಆದ್ರೆ ನಾರಾಯಣ ಕೆಲಸ ಹೇಳಲು ಅಸಮರ್ಥನಾದರೆ ದೆವ್ವ ಅವನ ಕಿವಿಯನ್ನು ಕಚ್ಚಿ ತಿನ್ನುವ ಶರತ್ ಹಾಕಿತು. ಸರಿ.. ಅಂತ ಒಪ್ಪಿಕೊಂಡ ನಾರಾಯಣ. ಅವನ ಎಲ್ಲ ಕೆಲಸ ಮಾಡುತ್ತಾ ಬಂತು ದೆವ್ವ...ಕೊನೆಗೆ ಒಮ್ಮೆ ನಾರಾಯನನಿಗೆ ಕೆಲಸ ಹೇಳಲಾಗಲಿಲ್ಲ. ದೆವ್ವ ನಾರಾಯನ ಕಿವಿಯನ್ನು ಕತ್ತರಿಸಿ ಕಚ್ಚಿತಿಂದು ಮಾಯವಾಯಿತು.
ಕಥೆ ಪೂರ್ಣವಾಗುತ್ತಿದ್ದಂತೆ..ಸ್ವಲ್ಪ ಹೆಡ್ದನಂತಹ..ರೈತ ಗೋವಿಂದ.... “ಹಂಗಾದ್ರೆ ನಾರಾಯಣನ ಕಿವಿ ಕಚ್ಚಿತಾ?...ಅವನ ಕಿವಿ ಹೋಯಿತಾ..? ” ಎಂದ. ಅವನು ಹಾಗೆ ಕೇಳುತ್ತಿರುವಂತೇ.. ಅಂಗಡಿಗೆ ಒಳಬರುತ್ತಿದ್ದಾತ ಜಗುಲಿ ಮೇಲೆ ಕುಳಿತಿದ್ದ ಗೋವಿಂದನ್ನ ಎಳೆದು ಬೀಳಿಸಿ... ಬೋ..ಮಗನೆ...ನಿನಗೇನೋ...?? ನನ್ನ ಕಿವೀನಾದ್ರೂ ಕಚ್ಚತಾನೆ...ತಲೇನಾದ್ರೂ ಹೊಡಿತಾನೆ...ನಮ್ಮ್ ಸಂಸಾರದ ಇಷ್ಯ ನಿನಗ್ಯಾಕೋ..??” ಎನ್ನುತ್ತಾ ಗೋವಿಂದನ್ನ ಗುದ್ದಿ ಹಲ್ಲೆ ಮಾಡಿದ... ನಮ್ಮಾವ ಮತ್ತೆ ಇತರರು ಗೋವಿಂದನ್ನ ಬಿಡಿಸುವಾಗ... "ನೋಡು ಅತ್ತಾವುಲ್ಲ..ಇವನಿಗ್ಯಾಕೆ ನಮ್ಮ ಮನೆ ಸಮಾಚಾರ..?" ಎನ್ನುತ್ತ ನ್ಯಾಯ ಒಪ್ಪಿಸತೊಡಗಿದ. ಎಲ್ಲರೂ ಆಶ್ಚರ್ಯ ಗಾಬರಿಯಿಂದ ಮೂಕರಾಗಿ ನೋಡುವುದೇ ಆಯಿತು. ನಮ್ಮ ಮಾವ ಮತ್ತೆ ಇನ್ನೊಂದಿಬ್ಬರಿಗೆ ಕ್ಷಣ ಕಾಲ ಆಶ್ಚರ್ಯ, ಹೀಗೇಕೆ ಎನ್ನುವುದರ ಕಾರಣ ತಿಳಿದದ್ದು ಹಿಂದಿನ ದಿನದ ಘಟನೆ ನೆನಪಾದಾಗಲೇ.
'ನಾರಾಯಣ'...ಒಳಕ್ಕೆ ಬಂದಾತನ ಹೆಸರು; ಅವನು ಮತ್ತು ಅವನ ತಮ್ಮ ಹಿಂದಿನ ದಿನವಷ್ಟೇ ಮನೆಯ ಒಂದು ಯಾವುದೋ ಸಮಸ್ಯೆಯ ಕುರಿತು ಜೋರು ಜಗಳಾನೇ ಆಡಿದ್ರು ...ಆ ಜಗಳದಲ್ಲಿ..ನಾರಾಯಣನ ತಮ್ಮ ತನ್ನ ಅಣ್ಣನ ಕಿವಿಯನ್ನು ಕಚ್ಚಿಬಿಟ್ಟಿದ್ದ. ಇದು ಎಲ್ಲಾ ಕಡೆ ಗುಲ್ಲಾಗಿತ್ತು. ಆತ ಅಂಗಡಿಯೊಳಕ್ಕೆ ಬಂದಾಗ ಗೋವಿಂದ ಕೇಳಿದ್ದ ಮಾತು..ನಾರಾಯಣನು ರೇಗುವಂತೆ ಮಾಡಿತ್ತು... ಅದೇ ಕಾರಣಕ್ಕೆ ನಾರಾಯಣ ಗೋವಿಂದನ್ನ ಹೊಡೆದಿದ್ದು. ವಿಷಯ ತಿಳಿಸಿ ನಾರಾಯಣನನ್ನು ಸಮಾಧಾನ ಮಾಡುವ ಹೊತ್ತಿಗೆ ಸಾಕುಸಾಕಾಗಿ ಹೋಯಿತು ಎಲ್ಲರಿಗೂ...ಆಮೇಲೆ ..ನಾರಾಯಣ ಗೋವಿಂದನಲ್ಲಿ ಕ್ಷಮೆ ಕೇಳಿದ್ದ ಅದು ಬೇರೆ ವಿಷಯ.

ಆಜಾದ್ ಸರ್, ಸಕತ್ತಾಗಿದೆ.
ReplyDeleteಪಾಪ ಗೋವಿಂದ :)
ಹೌದೂ, ನಾರಾಯಣನ ಕಿವಿ ಹೋಯಿತಾ? :D
ಭೈಯ್ಯ ಸ್ಟೋರಿ ಸೂಪರ್ ...
ReplyDeleteಸಿಟ್ಟಿಗೆದ್ದ ನಾರಾಯಣ ಬಂದು ಗೋವಿಂದನ್ನಾ ಗೋ.... ವಿಂದ ಅನ್ನಿಸ್ಲಿಲ್ಲಾ ತಾನೆ ! :)
ಆಝಾದ್ ಭಾಯ್...
ReplyDeleteನಾರಾಯಣ... ನಾರಾಯಣ.....
ಕಥೆ ಮಸ್ತ್ ಆಗಿದೆ..
ನಮ್ಮ ಹಳ್ಳಿಯಲ್ಲೂ ಈ ಥರಹ ಕಿವಿ ಕಚ್ಚಿದ ಪ್ರಸಂಗ ನಡೆದಿತ್ತು...
ಜಗಳ.. ಕುಸ್ತಿ ಆಡುವಾಗ ..
"ಈ ಕಿವಿ ಕಚ್ಚೋದು ಬಹಳ ಕಷ್ಟ" ಅಲ್ಲವಾ...?
ಆದಿನಗಳಲ್ಲಿ ಬಹಳ ತಲೆ ಕೆಡಿಸಿಕೊಂಡಿದ್ದೆ...
ಉತ್ತರ ಇನ್ನೂ ಸಿಕ್ಕಿಲ್ಲ...
ನಮ್ಮನ್ನೆಲ್ಲ ನಗಿಸಿದ್ದಕ್ಕೆ ಅಭಿನಂದನೆಗಳು
ಹ್ಹ ಹ್ಹ..!!!ಕಥೆ ಚೆನ್ನಾಗಿದೆ..:)
ReplyDeleteಅಜಾದ್ ಸರ್,
ReplyDeleteನಮ್ಮ ಕಡೆ ' ನರ ಸತ್ತ ನಾರಾಯಣ' ಎಂದು ಒಳ್ಳೆ ಕಥೆ ಸುಳಿದಾಡುತ್ತಿತ್ತು ..... ಆ ಕಥೆ ನೆನಪಾಯಿತು ನಿಮ್ಮ ಲೇಖನ ಓದಿ..... ಪಾಪ ನಾರಾಯಣ, ಕಿವಿ ಕಚ್ಚಿಸಿಕೊಂದಿದ್ದೂ ಅಲ್ಲದೆ ಊರವರೆಲ್ಲಾ ಗೇಲಿ ಮಾಡುವ ಹಾಗಾಯಿತು...... ಅದ್ಸರಿ, ನೀವು ಅವರ ಮನೆ ವಿಷಯ ನಮಗ್ಯಾಕೆ ಹೇಳ್ತಾ ಇದ್ದೀರಾ...... .....ಹ ಹಾ ಹಾ.......
ಜಲನಯನ ಸರ್..
ReplyDeleteನಡೆದದ್ದು ಕಾಕತಾಳೀಯವಾದರೂ...
ನಗಲೊ೦ದು ನೆವವಾಯ್ತು....
ಚೆನ್ನಾಗಿದೆ..
ಮೋಜಿನ ಪ್ರಸ೦ಗ -ಚೆನ್ನಾಗಿದೆ. ನಮಗೇಕೆ ಅವರಿವರ ಸುದ್ಧಿ-ಹೊಡೆಸಿಕೊಳ್ಳೊಕೆ! ಅಲ್ಲವಾ!!
ReplyDeleteಚೆನ್ನಾಗಿದೆ...ನಾರಾಯಣ ಗೋವಿ೦ದ ಪ್ರಹಸನ...
ReplyDeleteಅತ್ತ ನಾರಾಯಣ, ಪಾಪ ಕಿವಿಕಚ್ಚಿಸಿಕೊ೦ಡ...ಇತ್ತ ಏನೂತಿಳಿಯದ ಗೋವಿ೦ದ, ಪಾಪ... ಗುದ್ದು ತಿ೦ದ...
ಅತ್ತ ಇತ್ತ ಇರುವವರು, ಪಾಪ...ಗುದ್ದಾಟ ಬಿಡಿಸುವಲ್ಲಿ ಸುಸ್ತು...ಒಟ್ಟಿನಲ್ಲಿ ಕೇಳಿದವರು ನಗುವ೦ತಹ ಪ್ರಸ೦ಗ...
ಆಝಾದಣ್ಣ,
ReplyDeleteಕಥೆ ಮಸ್ತ್ ಮಜವಾಗಿದೆ.....
ಪಾಪ ಗೋ.......ವಿಂದ :)
ಹಳ್ಳಿ ಅಂಗಡಿಗಳ ಮುಂದೆ ಇಂತಹ ಅನೇಕ ಘಟನೆಗಳು ನಡೆಯುತ್ತವೆ....ಒಳ್ಳೆ ಮಜಾ ಇರುತ್ತೆ....
ಕಥೆ ಚೆನ್ನಾಗಿದೆ ಸರ್ :) ಹ್ಹ ಹ್ಹ :)
ReplyDelete:D ಅಯ್ಯೋ ಪಾಪ ಗೋವಿಂದನ ಕಥೆ ಗೋಓಓಓಓಓವಿಂದ ಆಗೋದ್ರಲ್ಲಿತ್ತು! ಚೆನ್ನಾಗಿದೆ. ಏನು ಕೆಲ್ಸ ಹೇಳಿದ್ರೂ ಮಾಡಿಕೊಡುವ ದೆವ್ವದ ಮಂತ್ರ ನಿಮಗೆ ತಿಳಿದಿದ್ದರೆ ದಯವಿಟ್ಟು ಮೈಲ್ ಮಾಡಿ ಸರ್ :)
ReplyDeletehahah enta kathe akideeri chalo aytri...sira govinda naaryaNaaya.. super ide
ReplyDeleteಗೋವಿಂದ ಈಗ್ಲೂ ಹಾಸ್ಯಕ್ಕೆ ಈಡಾಗ್ತಾನಂತೆ...ಊರಲ್ಲಿ...ಯಾರ್ದಾದ್ರೂ ವಿಷಯಕ್ಕೆ ಬಾಯಿಹಾಕಿದ್ರೆ...ಮುಚ್ಕೊಂಡಿರೋಕಾಗೊಲ್ಲ್ವಾ ನಾರಾಯಣನ ಒದ್ದಿದ್ದು ಸಾಲ್ದ?? ಅಂತಾರಂತೆ...ಹಹಹ...ಊರಿಗೆ ಹೋದಾಗ ಈ ಪ್ರಸ್ತಾಪ ಬರ್ತದೆ ನನ್ನ ಹಲೆ ಸ್ನೇಹಿತರಜೊತೆ ಮಾತನಾಡುವಾಗ....
ReplyDeleteಆನಂದ್...ಪ್ರಶ್ನೆ ಜೋರಾಗಿ ಕೇಳ್ಬೇಡಿ...ಅಕ್ಕ ಪಕ್ಕ ನಾರಾಯನ ಇದ್ರೆ....ಗೋsssವಿಂದಾsss...ಗೋವಿಂದ...
ರಂಜು ಥ್ಯಾಂಕ್ಸ್ ಅಂತೂ ಇಲ್ಲಾದ್ರೂ ಬಂದ್ಯಲ್ಲಾ...??!! ಇಂಥ ಕಥೆಗಳು ಸುಮಾರು ಇವೆ..ಹೌದು ಆ ದಿನ ನಾರಾಯಣ ಕೆಂಡಾಮಂಡಲ ಆಗಿದ್ದ...ನಮ್ಮ ಸೋದರ ಮಾವ ಮತ್ತೆ ಅವರ ಸ್ನೇಹಿತರು ಇಲ್ದೇ ಇದ್ದಿದ್ದ್ರೆ..ಕೈಕಾಲಂತೂ ಮುರೀತಿದ್ದ...ಗೋವಿಂದ..ಪಾಪ....
ReplyDeleteಪ್ರಕಾಶ್ ನನಗೊತ್ತು ನಿಮ್ಮಲ್ಲೂ ಇಂತಹ ಪ್ರಸಂಗ ಇರುತ್ವೆ...ಅದಕ್ಕೆ ಸ್ವಲ್ಪ ..ಟಚ್ ಸಿಗ್ಬೇಕು..ಹೊರಕ್ಕೆ ಬರೋಕೆ..
ReplyDeleteಕಿವಿ ಕಚ್ಚೋದು ಕೆಲವರ ಸಂಪ್ರದಾಯ ಅನ್ನಿಸುತ್ತೆ...ನಾರಾಯಣನ ಮಗನೂ ಸ್ಕೂಲ್ನಲ್ಲಿ ಮೇಸ್ಟ್ರಕೈಯಿಂದ ಹೊಡಸ್ಕೋಂಡಿದ್ದ ಲಾತಾ...ಅವನು ತನ್ನ ಸ್ನೇಹಿತ ಬಳಪ ಕೊಡ್ಲಿಲ್ಲ ಅಂತ ..ಕಚ್ಬಿಟ್ಟಿದ್ದ...ಹಹಹ....
ಹೌದು ಕಿವಿ ಕಚ್ಚೋದು ಸುಲಭವಾ??..ನನಗೂ ಯೋಚ್ನೆ ಬರ್ತಿದೆ ..ನೀವು ಹೇಳಿದ ಮೇಲೆ...ಆದ್ರೆ ಒಮ್ಮೆ ಹಿಡಿದ್ರೆ ಸುಲಭ ಯಾಕಂದ್ರೆ..ಮೆದು ಮೂಳೆ ಅಲ್ಲ್ವಾ???ಹಹಹ
ವನಿತಾ...ಆಗ ಜಗಳ ಆದ್ರೆ ಊರ್ನಲ್ಲಿ ...ನಾರಾಯಣ..ನಾರಾಯಣ ಅನ್ನೋ ತಮಾಶೆ ಮಾತು ಹೆಚ್ಚಾಗ್ಬಿಟ್ಟಿತ್ತು ಅದೂ ಮಕ್ಕಳಲ್ಲಿ...ಹಹಹ....ನಾರಾಯಣ...ನಾರಾಯಣ,,,
ReplyDeleteದಿನಕರ್, ಹುಶಾರಾಗಿರೀಪ ....ನಾನು ಯಾಕೆ ಹೇಳಿದೆ ಅಂತ್ಲೇ...?? ಯಾಕಂದ್ರೆ ನಾರಾಯಣ ಕುವೈತಿಗೆ ಬರೋಕೆ ಸಾಧ್ಯ ಇಲ್ಲ ಅದಕ್ಕೆ....ಹಹಹ
ReplyDeleteವಿಜಯಶ್ರೀ ಮೇಡಂ ಹಳ್ಳಿಯಲ್ಲಿ ಒಂದೆಡೆ ಸೇರೋದು ಲೋಕಾಭಿರಾಮ ಮಾತನಾಡೋದು ಮಾಮೂಲಿ ವಿಷಯ ಆಗಿತ್ತು..ಹಾಗಾಗಿ ಒಂದು ರೀತಿಯ ಬಾಂಧವ್ಯ ನಮ್ಮಲ್ಲಿತ್ತು..ಈಗ ಟಿ.ವಿ. ಬಂದು ನಮ್ಮನ್ನು ನಾವೇ ಕನ್ನಡಿ ನೋಡಿದಾಗ ಗುರುತಿಸಲು ಸ್ವಲ್ಪ ಒದ್ದಾಡಬೇಕಾಗುತ್ತೆ...
ReplyDeleteಸೀತಾರಾಂ ಸರ್ ಪಾಪ ಗೋವಿಂದ ಅವರಿವರ ಸುದ್ದಿಗೆ ಹೋಗಲಿಲ್ಲ...ಆದ್ರೆ ಅಂತಹ ಸುದ್ದಿ ಅವನ ಬಾಯಿಂದ ಬಂದದ್ದು..ಮತ್ತು ನಾರಾಯಣ ವಕ್ಕರಿಸಿದ್ದು...ಕಾಕತಾಳೀಯ...ಆದ್ರೆ ತತ್ತಬಕು ತಬಕು ಗುಡ್ರ್ ಗುಬಕು ಗುಬಕು ಆಗಿದ್ದು ..ಗೋವಿಂದ...ಪಾaaaಪ.
ReplyDeleteಮನಮುಕ್ತರವರೇ, ಇನ್ನೂ ಒಂದು ನೋಡಿ, ನಾರಾಯಣ ಮತ್ತೆ ಗೋವಿಂದ....ಎರಡೂ ವಿಷ್ಣು ಸ್ವರೂಪಗಳೇ...ಆದ್ರೆ ಗುದ್ದು...ಗೋವಿಂದಾ.. ಗೋವಿಂದ.
ReplyDeleteತೇಜಸ್ವಿನಿ...ಗೋವಿಂದ ಪಾಪ ನಾರಾಯಣನ ಕಿವಿ ಕಚ್ಚಿದ ಪ್ರಸಂಗದಂದು ಊರಲ್ಲಿರಲಿಲ್ಲ...ಪಾಪ ವನಿಗೆ ಎಲ್ಲಾ ಬಿಡಿಸಿ ಹೇಳಿ ಸಮಾಧಾನ ಮಾಡೋದ್ರಲ್ಲಿ ಎಲ್ಲರಿಗೆ ಸಾಕು ಸಾಕಾಗಿ ಹೋಯ್ತು....
ReplyDeleteನಿಮಗೆ ಮಂತ್ರ ಬೇಕಾ..sss....ನಿಮ್ಮ ಹತ್ರ ೨-೩ ಕೋಟಿ ಆಸ್ತಿಯಿದೆ....ಅಂತ ಗುಲ್ಲೆಬ್ಬ್ಸಿ...ನೋಡಿ ಆಮೇಲೆ ಒಂದೇಕೆ..ಹತ್ತಾರು ಹೆಲ್ಪ್ ಮಾಡೋ ಭೂತಗಳು ಬಂದೇ ಬಿಡ್ತಾವೆ.
ಏನು ಮಯೇಸಣ್ಣ...ನಿಂಗೂ ಕೆಲ್ಸ ಮಾಡೋ ಬೂತ ಬೇಕಾ...?? ಆದ್ರೆ ಉಸಾರಿ...ಕೆಲ್ಸ ಮಾತ್ರಾ ನಿಲ್ಸೋವಂಗಿಲ್ಲ...ಎಡ್ವಟ್ಟಾಗೋಯ್ತದೆ ಇಲ್ಲ ಅಂದ್ರೆ...ಹಾಂ..
ReplyDeleteಮಂಜುಶ್ವೇತೆಗೆ ಧನ್ಯವಾದ ಪ್ರತಿಕ್ರಿಯೆಗೆ. ಹಳ್ಳಿಗಳಲ್ಲಿ ಇಂತಹ ಪ್ರಸಂಗಗಳು ಮನರಂಜನಾ ಘಟನೆಗಳು ನಡೆಯುತ್ತವೆ..ಅವನ್ನು ಜನ ಅಸ್ವಾದಿಸುವ ಮುಗ್ದ ಗುಣವೂ ಇರುತ್ತದೆ ಹಳ್ಳಿಗರಲ್ಲಿ.
ReplyDeleteಮನಸು ಮೇಡಂ ...ಪಾಪ ಗೋವಿಂದ ಒಂದೆರಡು ದಿವಸ ಹಳ್ಳೀಲಿ ಸರಿಯಾಗಿ ತಲೆ ಎತ್ತಿ ಓಡಾಡೋಕೂ ಹಿಂಜರೀತಿದ್ದ,
ReplyDeleteಸರ್,
ReplyDeleteನಾರಾಯಣ ನ ಕಿವಿ ಕಥೆ ಏನಾಯ್ತು,
ತುಂಬಾ ಸಕತ್ತಾಗಿದೆ ಬರಹ
ಸರ್,
ReplyDeleteನವು ಚಿಕ್ಕವರಿದ್ದಾಗ ಕೇಳಿದ ಹರಿ ನರಾಯಣ , ಹರಿ ನಾರಯಣ ಕಥೆಯಂತೆ ಇತ್ತು.ಅಲ್ಲಿ ನರಾಯಣ ಎನ್ನುವವನು ಸ್ವಾಮಿಜಿ ಜಪ ಮಾಡುವಾಗ ಹರಿ ನಾರಯಣ ಅಂದಿದ್ದು ತನಗೆ ಎಂದು ಕೊಂಡು , ಸ್ವಾಮಿಜಿಯವರ ಮಂತ್ರ ಪುಸ್ತಕ ಹರಿದಿದ್ದನಂತೆ ಇಲ್ಲಿ ನಿಮ್ಮ ನಾರಯಣ , ಗೋವಿಂದನ ಮಾತು ತನಗೆ ಅಂದುಕೊಂಡು ಬಿಟ್ಟ.ಪಾಪ .....
ಮಜವಾಗಿದೆ ನಿಮ್ಮ ಈ ಬರಹ.
ಜಲನಯನ,
ReplyDeleteಸ್ವಾರಸ್ಯಕರವಾದ ಕತೆ.
ಡಾಕ್ಟರ್...ನಾರಾಯಣನ ಕಿವಿ ಪೂರ್ತಿ ಕಚ್ಚಿ ಹರಿಯಲಿಲ್ಲ..ಸ್ವಲ್ಪ ಕಚ್ಚಿದ್ದ ಅಷ್ಟೆ..ಅದನ್ನ ಹೊಲಿಗೆ ಹಾಕಿಸಿ ಸರಿಮಾಡ್ಕಂಡಿದ್ದ ನಾರಾಯಣ. ಗೋವಿಂದನಿಗೆ ಬಡಿತ ಸಿಕ್ಕಾಗ ನಾರಾಯಣನ ಕಿವಿಯ ಬ್ಯಾಂಡೇಜ್ ಹಾಗೇ ಇತ್ತು...ಗೋವಿಂದನಿಗೆ ಸಮಜಾಯಿಷಿ ಹೇಳೋವಾಗ ಅದು ಕೆಲಸಕ್ಕೆ ಬಂತು..ಇಲ್ಲ ಅಂತ ಇದ್ದಿದ್ದ್ರೆ....ನಂಬ್ತಿರಲಿಲ್ಲ ಗೋವಿಂದ....
ReplyDeleteಶ್ರೀಧರ್ ಹೌದು ಇದು ಹರಿನಾರಾಯಣನ ಪ್ರಕಾರದ್ದೇ..ಕಥೆಗಳು ಒಂದೊಂಡು ಕಡೆ ಒಂದೊಂದು ರೂಪದಲ್ಲಿ ಪ್ರಚಲಿತವಿರುತ್ತವೆ.
ReplyDeleteಸುನಾಥ್ ಸರ್...ಹ್ಯಾಪಿ ನ್ಯೂ ಯಿಯರ್...ಹಹಹ ಇಲ್ಲಿ ಇಯರ್ ಅಂತ ಬರೀಲಿಲ್ಲ...ಯಾಕಂದ್ರೆ...ನಾರಾಯಣ ಅಕ್ಕಪಕ್ಕ ಇದ್ರೆ ಕಷ್ಟ...ಇಯರ್ ಅಂದ್ರೆ ಕಿವಿ..ಕಿವಿ ಬಗ್ಗೆ ಹೇಳೋನು ನೀನ್ಯಾರೋ ಅಂತ ..ಗಬಕ್ ಅಂತ ನನ್ನ ಕಿವಿಗೆ ಬಾಯಿಹಾಕಿದ್ರೆ...??!! ಬೇಡಪ್ಪಾ ರಿಸ್ಕು....ಹಹಹ್ಹ
ReplyDelete:) ಚೆನ್ನಾಗಿದೆ ನಾರಾಯಣನ ಕಿವಿ ಕಚ್ಚಿದ ಕಥೆ. ಪಾಪ ಗೋವಿಂದ :)
ReplyDeleteನಿಶಾ, ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ ಮತ್ತು ಅದಕ್ಕೂ ಹೆಚ್ಚಾಗಿ ನನ್ನ ಗೂಡಿಗೆ ಬಂದಿದ್ದಕ್ಕೆ....
ReplyDeleteಗೋವಿಂದ..ಗೋssssವಿಂದ... ಅಂತ ಬಹಳ ಫ್ರೆನ್ದ್ಸ್ ಬರೆದಿದ್ದಾರೆ...ಹಹಹ
saar... Nijavaagloo naarayanana kiwi hoytaa??? :-)
ReplyDeleteRavikaanth....yaakree nimage istondu aasakti...uttarakke Govindanna kelbeku...hahaha
ReplyDeleteಈ ಬ್ಲಾಗ್ ಅನ್ನೂ ಜಗುಲೀ ಮ್ಯಾಲ ಕೂತ ಗೆಳ್ಯಾರ್ಗೆಲ್ಲಾ ಅಗದೀ ಸ್ವಾರಸ್ಯದ ಕಥೀ ಹೇಳಿದ್ರಿ. ಇದನ್ನ ಇಲ್ಲೇ ನಿಲ್ಸು ಹಂಗಿಲ್ಲ ನೋಡ್ರಿ.. ಮತ್ತ ಹುಷಾರ್ .. ಅಲ್ಲೂ ಒಂದ್ ದೆವ್ವ ಅದ ಅಂತ ಕೇಳೀನ್ರಿ .. ಎಲ್ಲಾ ನಿಮ್ಮ ಒಳ್ಳೆದಕ್ಕss ಹೇಳಾಕ್ ಹತ್ತೇನ್ರಿ.
ReplyDeleteಅಗದೀ ಛಲೋ ಮಾತ್ ಹೇಳಿದ್ರಿ ಬಿಡ್ರಿ ನಾರಾಯಣ್ ಸರ.....ಭೂತ ...ನನಗೆ ಏನ್ಮಾಡ್ಲಿಕ್ಕಿಲ್ ಬಿಡ್ರಿ...ಆದ್ರ ಅದ್ರ್ ಜೊತ್ಯಾಗಿರ್ತಾದಲ್ಲ ... ಗೀತ....ಅದರ್ದೇ ಕಣ್ರೀ ಯೋಚ್ನಿ ನನ್ಗಾ...
ReplyDeleteಚೆನ್ನಾಗಿದೆ.. ಹಳೇ ಗಾದೆನ ಹೀಗೆ ತಿರುಚಬಹುದೆ.. ಕಿವಿಯಾರೆ ಕೇಳಿದರೂ ಪರಾಂಬರಿಸಿ ಕೇಳು :)
ReplyDeleteಶ್ರವಣಗೆ ಸ್ವಾಗತ ನನ್ನ ಗೂಡಿಗೆ...ಜಲನಯನಳ ಸೋದರರಾದ ಭಾವಮಂಥನ, science & share ಸಹ ನೋಡಬೇಕಾಗಿ ಕೋರಿಕೆ...
ReplyDeleteನಿಜ ಕೇಳಿದರೂ ಪರಾಂಬರಿಸಬೇಕು...ವಿಶ್ಲೇಷಿಸಬೇಕು...ಇಲ್ಲ ಅಂದ್ರೆ..ಒದಿಸ್ಕೋಬೇಕು....ಹಹಹಹ
ಅಜಾದ್ ಸರ್,
ReplyDeleteನಾರಾಯಣನ ಕತೆ ಸ್ವಾರಸ್ಯವಾಗಿದೆ. ಹಳ್ಳಿ ಮಾತ್ರವಲ್ಲ ನಮ್ಮ ನಗರಗಳಲ್ಲಿ ಇಂಥ ಅಂಗಡಿ, ಕಟ್ಟೆಗಳಲ್ಲಿ ಈಗಲೂ ಈ ರೀತಿ ಹರಟೆಹೊಡೆಯುತ್ತಿರುತ್ತಾರೆ. ಅಲ್ಲೇ ಇಂಥ ಎಲ್ಲಾ ಅನಾಹುತಗಳು ಜರುಗುತ್ತವೆ...
ಇಂಥವು ಮತ್ತಷ್ಟು ಬರೆಯಿರಿ...
ಇದೇನು ಶಿವು ದರ್ಶನ ಆಗಲಿಲ್ಲ ? ಅಂದುಕೊಳ್ಳುತ್ತಿರುವಾಗೇ ನಿಮ್ಮ ಪ್ರತಿಕ್ರಿಯೆ...ಹೌದು ಹಳ್ಳಿ ಕಟ್ಟೆ, ಜಗುಲಿ, ಪಂಚಾಯಿತಿ ಕಟ್ಟೆ, ಪಟ್ಟಣಗಳಲ್ಲಿ ಪಾರ್ಕು ಇತ್ಯಾದಿ...ಎಲ್ಲ ಗುಸು-ಗುಸು, ಪಿಸು-ಪಿಸು..ಎಲ್ಲ ಹುಟ್ಟೋದೂ ಇಲ್ಲೇ...
ReplyDelete