Tuesday, December 29, 2009

ಬಾಷ್ಪಾಂಜಲಿ-ವಿಷ್ಣುಗೆ



ವಿಷ್ಣುವಾಗಿ ನಟನೆಯಲ್ಲಿ ಮೇರು ಸಂಪತ್
ಭಾವಕ್ಕೆ ಗೀತೆಕೊಟ್ಟು ಅವಿಸ್ಮರಣೀಯ ಅಶ್ವಥ್
ಒಂದೇ ದಿನದಂತರದಲ್ಲಿ ಎಂತಹ ನೋವು ಕಲೆಗೆ
ಎರಡು ಅಮೂಲ್ಯ ಪುತ್ರರತ್ನಗಳ ನಷ್ಟ ನಾಡಿಗೆ.

ಛಲ ತೋರಿ ಮಿಂಚಿ ನಟನೆಯಲಿ ಪುಟ್ಟಣ್ಣನ ನಾಗರಹಾವಾಗಿದ್ದು
ದಾರಿತಪ್ಪಿದ ಪಾತ್ರದ ಗಂಧದಗುಡಿಯಲ್ಲಿ ಅಣ್ಣನ ತಮ್ಮನಾಗಿದ್ದು
ಅಮೋಘ ನಟನೆ ದುರಂತ ಕಥೆಗೆ ಜೀವಾಳದ ಬಂಧನವಾದದ್ದು
ಕನ್ನಡ ಕುಲಕೋಟಿಗೆ ಸಾಹಸಿಂಹನಾಗಿ ಆಪ್ತಮಿತ್ರನಾದದ್ದು.

ಅಂದು ಮಾರ್ಪಟ್ಟ ಸಂಪತ್ ಇಂದು ಇಲ್ಲವಾದ ವಿಷ್ಣು
ಮಿತ ನುಡಿ ಹಿತ ನಡೆಯಿಂದ ಟೀಕೆಗೆ ಉತ್ತರಿಸಿದ ವಿಷ್ಣು
ನಾಡ-ನುಡಿಯ ರಕ್ಷಣೆಗೆ ಅಣ್ಣನಜತೆಗೂಡಿದ ವಿನಯಿ ವಿಷ್ಣು
ಎಂತಹ ನೋವು ನಾಡಿಗೆ ಅಶ್ವಥ್ ಹಿಂದೆಯೇ ಹೋದರು ವಿಷ್ಣು.

ಚಿತ್ರರಂಗ ಒಬ್ಬ ಮೇರು ನಟನನ್ನು ಕಳೆದುಕೊಂಡಿರಬಹುದು
ರಂಗದ ನಟರು ಆಪ್ತಮಿತ್ರನನ್ನು ಕಳೆದುಕೊಂಡಿರಬಹುದು
ಆದರೆ ವಿಷ್ಣು ಒಂದು ಗುರುತಾಗಿ ವ್ಯಕ್ತಿ ನಮ್ಮಲ್ಲಿ ಇಲ್ಲ
ನಟನಾಗಿ, ಯಜಮಾನನಾಗಿ ಸಿಂಹದ ಹೂಂಕಾರ ಇನ್ನಿಲ್ಲ.

ಚೇತನ ಹೊರಟಿದೆ ದೇಹ ಬಿಟ್ಟು ಇಹ ಲೋಕವ ತ್ಯಜಿಸಿ
ನೂತನ ಚಿರಂತನವಾಗಲಿ ಜನಿಸಿ ಮತ್ತೊಮ್ಮೆ ಪ್ರವೇಶಿಸಿ
ಕನ್ನಡ ಲೋಕವ, ಸಾರಸ್ವತವ ನಟನಾ ಪ್ರಪಂಚವ
ದೈವನೀಡಲಿ ಕುಟುಂಬಕೆ ಸಾಂತ್ವನ, ಆತ್ಮಕೆ ಸ್ವರ್ಗವ.


25 comments:

  1. ಅಜಾದ್ ಸರ್,
    ತುಂಬಾ ತುಂಬಾ ಧುಖವಾಯ್ತು..... ಅವರು ನನಗೆ ನಟನಿಗಿಂತ , ಮನುಷ್ಯನಾಗಿ ತುಂಬಾ ಇಸ್ಥವಾಗ್ತಾರೆ...... ಗಂಧದಗುಡಿ ಚಿತ್ರದಲ್ಲಿ ನಡೆದಿದೆ ಎನ್ನಲಾದ ರಾಜ್ ಕುಮಾರ್ ಜೊತೆ ಜಟಾಪಟಿ ಬಗ್ಗೆ ಎಲ್ಲೋ ಹೊರಗಡೆ ಅದರ ಬಗ್ಗೆ ಮಾತಾಡದೆ ತಮ್ಮ ಹಿರಿತನ ಮೆರೆದಿದ್ದಾರೆ....... ಮಕ್ಕಳನ್ನು ಪಡೆದು ಬೆಳೆಸಿದ ರೀತಿ, ಅವರನ್ನು ಅವರ ಇಷ್ಟದ ಹಾಗೆ ಮಾಡುವೆ ಮಾಡಿದ್ದು..... ಅಂಬರೀಶ್ ಸಂಗದ ಗೆಳೆತನ, ರಾಜಕೀಯದಿಂದ ಇದ್ದ ದೂರ ಎಲ್ಲಾ ಅನುಕರಣೀಯ.... ಅವರ ಬಗ್ಗೆ ನೀವು ಬರೆದ ಕವನ ನಿಜಕ್ಕೂ ಅವರಿಗೆ ಶ್ರದ್ದಾಂಜಲಿ..... ನಮ್ಮೆಲ್ಲರ ಸಂತಾಪ ಅವರ ಕುಟುಂಬದ ಜೊತೆಗೆ.......

    ReplyDelete
  2. ಹ್ಯಾಟ್ಸ್ ಆಫ್ ಟು ವಿಷ್ಣು ಆಜಾದ ಸರ್.ಹಿ ಹಿಸ್ ಎ ಜೆಮ್.

    ReplyDelete
  3. ಸಾಹಸ ಸಿ೦ಹ ವಿಷ್ಣುವರ್ಧನ್ ರ ಆತ್ಮಕ್ಕೆ ಚಿರಶಾ೦ತಿ ದೊರಕಲಿ..
    ಅವರನ್ನು ಕಳೆದುಕೊ೦ಡದ್ದು ಚಿತ್ರಜಗತ್ತು ಹಾಗು ಕನ್ನಡಿಗರಿಗೆ ಅಪಾರ ನಷ್ಟ.

    ಜಲನಯನ ಅವರೆ,
    ಕವನ ಮನಮಿಡಿಯುವ೦ತಿದೆ.

    ReplyDelete
  4. ದಿನಕರ್ ನನಗೆ ಇನ್ನೂ ಹಸಿರು ನೆನಪು...ಕಲ್ಪನಾ ಚಿತ್ರಮಂದಿರದಲ್ಲಿ The White Elephant ಇಂಗ್ಲೀಷ ಚಿತ್ರ ಬಂದಿತ್ತು, ಬಹುಶಃ ೧೯೭೭ ಇರಬೇಕು. ನಾನು ಬಾಲ್ಕನಿಯ ಟಿಕೇಟ್ ಕೊಂಡು ಮೊದಲಿಗೆ ಬೆಂಗಳೂರಿನಲ್ಲಿ ನೋಡಿದ ಚಿತ್ರ ಅದು. ವಿರಾಮದಲ್ಲಿ ವರಾಂಡದಲ್ಲಿ ಸಿಕ್ಕರು ವಿಷ್ಣು..ಸ್ವಲ್ಪ ಅಳುಕಿನಿಂದಲೇ ನಮಸ್ಕಾರ ಸರ್ ಎಂದೆ...ನನಗಾಶ್ಚರ್ಯವಾಗುವಂತೆ ಪ್ರತಿ ನಮಸ್ಕರಿಸಿ "ಚನ್ನಾಗಿದೆ ಅಲ್ವಾ ಪಿಕ್ಚರ್ ? ನಮ್ಮವರು ಕಲಿಯೋದು ಇದೆ ಅನ್ಸುತ್ತೆ ಅಲ್ವಾ?" ಎಂದರು..ನಾನು ದಂಗಾದೆ..ಎಷ್ಟೋ ಪರಿಚಯಸ್ಥರನ್ನು ಮಾತನಾಡಿಸುವ ರೀತಿ ಕಂಡು...ಕೈಕುಲುಕಿ ನಾನು ಕಾಲೇಜ್ ವಿದ್ಯಾರ್ಥಿ ಎಂದಿದ್ದಕ್ಕೆ "Best of luck ಓದಿ ಮುಂದೆ ಬನ್ನಿ" ಎಂದರು.....ಬೆಳಿಗ್ಗೆ ಟೀವಿ ನೋಡುವಾಗ ಕಣ್ಣು ತುಂಬಿ ಬಂತು.....ಹೌದು ಅಣ್ಣನವರಂತೆಯೇ ಗಾಂಭೀರ್ಯ ಮತ್ತು ಸಜ್ಜನ ಹಿತಮುಡಿ ಅವರದಾಗಿತ್ತು...ಬಹಳ ಅಪರೂಪ ಇಂತಹ ಚೇತನಗಳು..ಯಾಕಂದ್ರೆ..ದೇಹ ಇಮ್ದು ಇರುತ್ತೆ ನಾಳೆ ಹೋಗುತ್ತೆ..ಅಲ್ಲವೇ..?

    ReplyDelete
  5. ಶ್ರೀಧರ್ ನಿಮ್ಮ ಮೈಲ್ ನೋಡಿದೆ, ನಿಜ ಮಾನವತೆ ಮೆರೆವವರು ಅಮಾನವೀಯ ಸಮಾಜದ ಕೊಳಕನ್ನು ನೋಡಲಾಗದೆ ನಮ್ಮೊಂದಿಗೆ ಮುನಿದು ದೂರಾಗುತ್ತಿದ್ದಾರೆಯೇ ಎನಿಸುತ್ತದೆ..ಒಂದೇ ದಿನದ ಅಂತರದಲ್ಲಿ ಮೈಸೂರು ಇಬ್ಬರು ತನ್ನ ಕಂದಮ್ಮಗಳನ್ನು, ಕರುನಾಡಿ ಅಪೂರ್ವ ರತ್ನರನ್ನು ಕಳೆದುಕೊಂಡಿದೆ.

    ReplyDelete
  6. ಮನಮುಕ್ತ ಮೇಡಂ ನನ್ನ ಅವರ ಪ್ರತ್ಯಕ್ಷ ಬೇಟಿ ಅತಿ ನಿಕಟವಾಗಿ ಆಗಿದ್ದು ಒಮ್ಮೆಯೇ, ಆದರೂ ಅದು ನನ್ನ ನೆನಪಿನಲ್ಲಿ ಹಚ್ಚ ಹಸಿರಾಗಿದೆ. ದೇವರು ಅವರ ಮನೆಯವರಿಗೆ ಸಾಂತ್ವನ ಮತ್ತು ಅವರ ಆತ್ಮಕ್ಕೆ ಶಾಂತಿ-ನೆಮ್ಮದಿ ನೀಡಲಿ ಎಂದು ಪ್ರಾರ್ಥಿಸೋಣ

    ReplyDelete
  7. ನಿಜಕ್ಕೂ ಕನ್ನಡಿಗರಿಗೆ ತುಂಬಲಾರದ ನಷ್ಟ.... ಅಂತೆಯೇ ನಮ್ಮ ಜನ ಕುಪಿತರಾಗಿ ಸಾರ್ವಜನಿಕರಿಗೆ ತೊಂದರೆಮಾಡದೆ ಶಾಂತರೀತಿಯಲ್ಲಿದ್ದರೆ ಒಳ್ಳೆಯದು ಅದು ಯ್ಯಾಕೆ ಈ ನಮ್ಮ ಜನರು ಬಸ್ಸು ಕಾರು ಸುಟ್ಟು ಹಾನಿಮಾಡುತ್ತಾರೋ ಗೊತ್ತಿಲ್ಲ. ಇದೇನಾ ಶೋಕಾಚರಣೆ ಎಂದರೆ ಗೊತ್ತಿಲ್ಲ.
    ನಮ್ಮ ಜನ ಸ್ವಲ್ಪ ಸಹಕರಿಸಬೇಕು ಶಾಂತಚಿತ್ತರಾಗಬೇಕು. ಒಂದಂತು ಸತ್ಯ ವಿಷ್ಣುರವರಿಗೆ ಬಂದಸಾವು ಪುಣ್ಯವಂತರ ಸಾವು ಯಾರಿಗೂ ತೊಂದರೆಕೊಡದೆ ಆ ದೈವನಲ್ಲಿ ಲೀನವಾಗಿದ್ದಾರೆ. ಇವರ ಸ್ಥಾನ ತುಂಬುವವರು ಯಾರಿಲ್ಲ....ಕನ್ನಡಾಂಬೆಯ ನೋವು ಅತಿಯಾಗುತ್ತಲಿದೆ ೨೦೦೯ರ ಗಡಿಯೇ ಇಷ್ಟು ಕರಾಳ ಇನ್ನು ೨೦೧೦ ಆರಂಭಾನಂತರ ಹೇಗೆ ನೆನೆದರೆ ಭಯವಾಗುತ್ತೆ.
    ದೇವರು ಭಾರತಿ ಮತ್ತು ಅವರ ಕುಟುಂಬಕ್ಕೆ ದುಃಖಭರಿಸುವ ಶಕ್ತಿಕೊಡಲೆಂದು ನಾವುಗಳು ಪ್ರಾರ್ಥಿಸಬೇಕು.

    ReplyDelete
  8. ಮನಸು ಮೇಡಂ, ವಿಷ್ಣು ಎಂತಹ ಸಹಿಷ್ಣು ಎನ್ನುವುದನ್ನು ಅವರ ನಡೆ, ರಾಜಕೀಯ ತಮಗಲ್ಲ ಎನ್ನುವ ಅಭಿಮತ ಹೀಗೆ ರಾಜ್ ಗೆ ತಕ್ಕ ತಮ್ಮನಂತೆ ಸಕಲ ಕನ್ನಡ ಜನರ ಮನಸ್ಸಿನಲ್ಲಿ ಎಂದಿಗೂ ಉಳಿಯುವ ವ್ಯಕ್ತಿತ್ವ. ಅಶ್ವತ್ ನಂತರ ವಿಷ್ಣು ಒಂದೇ ದಿನದಂತರದಲ್ಲಿ ಮೈಸೂರಿಗೆ ಆಘಾತ ಕನ್ನಡ ಕಲೆಗೆ ತುಂಬಲಾರದ ನಷ್ಟ.

    ReplyDelete
  9. ತಮ್ಮ ಭಾವ ಪೂರ್ಣ ನುಡಿ ನಮನಗಳು ತು೦ಬಾ ಸ೦ಧರ್ಭ ಸೂಕ್ತ.
    ಕನ್ನಡ ನಾಡು ಕೇವಲ ಎರಡು ದಿನಗಳಲ್ಲಿ ಎರಡೆರದು ಅನರ್ಘ್ಯರತ್ನಗಳನ್ನು ಕಳೆದುಕೊ೦ಡಿದೆ.

    ReplyDelete
  10. ಸೀತಾರಾಂ ಸರ್, ಹೌದು ಸಹೃದಯೀ ಚೇತನಗಳು ಎರಡೂ, ಎರಡೂ ಮೈಸೂರಿಗೆ ಸಂಬಂಧಿಸಿದ್ದು ಇದು ತುಂಬಲಾಗದ ನಷ್ಟ ಮೈಸೂರಿಗೆ.

    ReplyDelete
  11. Big loss to kannada :(
    Let their soul rest in peace.

    ReplyDelete
  12. Yes Shivaprakash, this is indeed a big loss Two-Gems disappear into horizons within 24hrs.

    ReplyDelete
  13. ಆಜಾದ್ ನಿಮ್ಮ ಕವನ ಸಮಯೋಚಿತ, ಇಬ್ಬರು ಅಮೋಘರನ್ನು ಕಳೆದುಕೊಂಡ ವರ್ಷಾಂತ್ಯ.

    ReplyDelete
  14. ಸಿ.ಅಶ್ವತ್ಥ್ ನನ್ನ ಅಚ್ಚುಮೆಚ್ಚಿನ ಗಾಯಕರಲ್ಲಿ ಓರ್ವರು. ಅವರ ಹಾಡುಗಳು ಮನವನ್ನು ಹೊಕ್ಕಿ ಎದೆಯೊಳಗೆ ಕುಳಿತುಬಿಡುತ್ತವೆ. ಅಷ್ಟು ಭಾವಾತ್ಮಕವಾಗಿ ಜೀವ ತುಂಬಿ ಹಾಡುತ್ತಿದ್ದರು ಅವರು. ವಿಷ್ಣು ಅವರ ಅನೇಕ ಚಿತ್ರಗಳು ಇನ್ನೂ ನೆನಪಲ್ಲಿ ಹಸಿರಾಗಿವೆ. ಇಬ್ಬರೂ ವರ್ಷದ ಕೊನೆಯಲ್ಲೇ ಅಂತ್ಯಕಂಡಿದ್ದು ಮಾತ್ರ ತುಂಬಾ ಖೇದಕರ. ಹುಟ್ಟು ಸಾವು ಯಾರಿಗೂ(ಯಾರನ್ನೂ) ಕಾಯೊಲ್ಲ. ಪ್ರಕೃತಿ ನಿಯಮದ ಮುಂದೆ ಎಲ್ಲರೂ ಒಂದೇ.

    ನನ್ನ ಮನಃಪೂರ್ವಕ ಶೃದ್ಧಾಂಜಲಿ ಇವರಿಬ್ಬರಿಗೂ.

    ReplyDelete
  15. This comment has been removed by the author.

    ReplyDelete
  16. ಇದೇನು? ತೇಜಸ್ವಿನಿ ಕಾಮೆಂಟಿನ ಛಾಪು ಬೀಳಲಿಲ್ಲವಲ್ಲ ??!! ಬಹುಷಃ ಹೊಸ ವರ್ಷದ ಹರುಷದಲೆಯಲ್ಲಿ ತೇಲುತ್ತಿರಬೇಕು ಎಂದು ಕೊಳ್ಳುವಾಗಲೇ ನಿಮ್ಮ ಪ್ರತಿಕ್ರಿಯೆ...!! ಧನ್ಯವಾದ, ನಿಜ ಈ ಇಬ್ಬರ ಅಗಲುವಿಕೆಯಿಂದ ಕನ್ನಡಕ್ಕೆ ತಡೆದುಕೊಳ್ಳಲಾಗದ ಪೆಟ್ಟು....

    ReplyDelete
  17. ನಮಸ್ತೆ ಅಣ್ಣ :-

    ನಿಮ್ಮ ಈ ಕವನದ ಕೊನೆಯ ಸಾಲುಗಳು ತುಂಬಾ ಇಷ್ಟವಾಯಿತು, ನನ್ನ ಪ್ರೀತಿಯ ಅಪ್ಪಾಜಿ (ವಿಷ್ಣುವರ್ಧನ್) ರವರ ಅಗಲಿಕೆ ನಮ್ಮನ್ನ ತುಂಬಾ ನೋವು ಮಾಡಿದೆ. ಈಗಲೂ ನನಗೆ ನಂಬಿಕೆ ಬರ್ತಿಲ್ಲ ಅವರ ಪಾರ್ಥಿವ ಶರೀರ ನೋಡಿದಾಗಲೂ ಅಯ್ಯೋ ಯಾರೋ ಗೊಂಬೆ ಇಟ್ಟು ಎಲ್ಲರನ್ನು ಪೂಲ್ ಮಾಡ್ತಾ ಇದಾರೆ ಅನ್ಕೊಂಡೆ.............. ಅವೆಲ್ಲ ನನ್ನ ಭ್ರಮೆ ಅಲ್ವ ಅಣ್ಣ !
    ಇನ್ನು ನನ್ನ ನೆಚ್ಚಿನ ರೇ...ರೇ...ರೇ...ರಾ (ಸಿ. ಅಶ್ವಥ್)ರವರ ಬಗ್ಗೆ ಏನ್ ಹೇಳಬೇಕೋ ಗೊತ್ತಾಗ್ತಾ ಇಲ್ಲ ಇದನ್ನ ಬರೆವಾಗ್ಲೆ ನನ್ನ ಕಣ್ಣಲ್ಲಿ ನೀರು ತುಂಬಿಕೊಂಡಿದೆ ಅದಕ್ಕೆ ಇದನ್ನ ಇಲ್ಲಿಗೆ ನಿಲ್ಲಿಸ್ತ ಇದೀನಿ.ಏನೇ ಆಗಲಿ ಅವರಿಗೆ ಶಾಂತಿ ದೊರಕಲಿ ಅಂತ ನನ್ನ ಗೆಳೆಯರ ಜೊತೆ ಅವರ ಭಾವ ಚಿತ್ರಗಳಿಗೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದ್ವಿ ಅದು ರಾತ್ರಿ ೧೨ ಕ್ಕೆ ಈ ರೀತಿ ನಾವು ಹೊಸ ವರ್ಷವನ್ನ ಬರಮಾಡಿಕೊಂಡ್ವಿ..!

    ಇಂತಿ ನಿಮ್ಮ
    ~$ಮಂಜು$~

    ReplyDelete
  18. ಆಝಾದ್ ಭಾಯ್...

    ವಿಷ್ಣು ಅಕಾಲಿಕ ಮರಣ..
    ಹಾಗೆಯೇ ಅಶ್ವತ್ಥರವರ ಮರಣ..
    ಈ ವರ್ಷಾಚರಣೆಯಲ್ಲಿ ನಿರಾಸೆ ಮೂಡಿಸಿದ್ದಂತೂ ನಿಜ...

    ನೂರವೈತ್ತು ಚಿತ್ರದ ರಾಜಕುಮಾರ್ ಎದುರು..
    ವಿಷ್ಣು ಬೆಳೆದದ್ದು ಒಂದು ದೊಡ್ಡ ಸಾಹಸ...

    ಇನ್ನು ಅಶ್ವತ್ಥರವರ ಕಂಚಿನ ಕಂಠದ ಮೋಡಿಗೆ ಕನ್ನಡಿಗರೆಲ್ಲ.. ಮಾರು ಹೋಗಿದ್ದಾರೆ..
    ಅವರ "ಕನ್ನಡವೇ ಸತ್ಯ" ಕಾರ್ಯಕ್ರಮಕ್ಕೆ ಹೋಗಿದ್ದೆ...
    ಲಕ್ಷೋಪಾದಿಯಲ್ಲಿ ಜನ ಸೇರಿದ್ದರು...
    ಜಾಗ ಸಾಕಾಗದೆ.. ಕೊನೆಗೆ ಎಲ್ಲರಿಗೂ ಮುಕ್ತ ಪ್ರವೇಶ ಮಾಡಿಬಿಟ್ಟರು..

    ಅವರ ಹಾಡಿಗೆ ಜನ ಕುಣಿಯುವ ದೃಶ್ಯ ನೋಡಲು ನೂರು ಕಣ್ಣು ಸಾಲದಾಗಿತ್ತು...
    ಅವರ ಹಾಡಿನ ಮೋಡಿ ಎಷ್ಟಿತ್ತೆಂದರೆ.. ನಾನೂ ಕುಣಿಯಲು ತೊಡಗಿದ್ದೆ...!

    ನಿಮ್ಮದೇ ರೀತಿಯಲ್ಲಿ ಅವರಿಗೆ ಗೌರವ ಕೊಟ್ಟಿದ್ದೀರಿ..

    ಅವರ ಆತ್ಮಕ್ಕೆ ಶಾಂತಿ ಸಿಗಲಿ...

    ಧನ್ಯವಾದಗಳು...

    ReplyDelete
  19. ಆಜಾದ್ ಸರ್,

    ಇಬ್ಬರು ಮಹಾನ್ ಕಲಾವಿದರ ಸಾವು ನನಗೆ ಎಷ್ಟು ಬೇಸರ ತರಿಸಿತೆಂದರೆ ಯಾರ ಬ್ಲಾಗಿಗೂ ಕಾಮೆಂಟು ಹಾಕಲಾಗದಷ್ಟು. ಒಂಥರ ಏನೋ ಕಳೆದುಕೊಂಡ ಭಾವ. ಅದಕ್ಕಾಗಿ ಹೊಸವರ್ಷವನ್ನು enjoy ಮಾಡಲಾಗಲಿಲ್ಲ...ಈಗ ಸ್ವಲ್ಪ ರಿಲ್ಯಾಕ್ಸ್ ಆಗಿದೆ.

    ಇಬ್ಬರು ಮಹಾನ್ ಕಲಾವಿದರ ಆತ್ಮಕ್ಕೆ ಚಿರಶಾ೦ತಿ ದೊರಕಲಿ..

    ReplyDelete
  20. ಸುರೇಶ್ ಸರ್ (Surekavi), ತುಂಬಾ ಧನ್ಯವಾದಗಳು ನನ್ನ ಬ್ಲಾಗಿಗೆ ಬಂದಿರಿ ನಿಮ್ಮ ಪ್ರತಿಕ್ರಿಯೆಗೆ ಮತ್ತು ಮಾತಿಗೆ ನನ್ನಿ

    ReplyDelete
  21. ಮಂಜು ನಿನ್ನ ಕವನಗಳನ್ನು ನೋಡುವಾಗಲೆಲ್ಲಾ ನನಗೆ ಅನಿಸುವುದು ಈಗ ನಿನ್ನ ಪ್ರತಿಕ್ರಿಯೆಯಲ್ಲಿ ಪ್ರತಿಫಲಿತವಾಗಿದೆ....ನೀನು ಬಹು ಭಾವುಕ..ಮತ್ತು ನಿನ್ನ ಆಪ್ಯಾಯತೆ.. ಶಬ್ದಗಳಲ್ಲಿ ಮೂಡಿದೆ...ಹೊಸವರ್ಷ ನಿನಗೆ ಆ ಅಗಲಿದ ಚೇತನಗಳ ಆಶೀರ್ವಾದ ದೊರೆತು, ನಿನ್ನ ಎಲ್ಲ ಕೆಲಸಗಳೂ ಶುಭ ಮತ್ತು ಫಲಪ್ರದವಾಗಲಿ.

    ReplyDelete
  22. ಪ್ರಕಾಶ್, ಮೊದಲಿಗೆ ನಾನು ಪ್ರತಿಕ್ರಿಯಿಸುತ್ತಿದ್ದುದು ನಿಮ್ಮ ವ್ಯಕ್ತಿತ್ವವನ್ನು ಊಹಿಸಿಕೊಂಡು...ನನ್ನ ಊಹೆ ನಿಜವಾಗಿದ್ದು ನಿಮ್ಮನ್ನು ನೋಡಿದ ಮೇಲೆ...ಅದಕ್ಕೇ ಈಗ ಅಳುಕಿಲ್ಲದೇ ಪ್ರ-ಪ್ರತಿಕ್ರಿಯೆ ಕೊಡಬಹುದು. ನಿಜ ಚೇತನಗಳ ಘನತೆ ಅವು ತಮ್ಮ ಇಹಲೋಕದಯಾತ್ರೆಯನ್ನು ಮುಗಿಸಿದಮೇಲೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತೆ, ಆದರೆ ರಾಜ್, ವಿಷ್ಣು, ಅಶ್ವತ್ ಇಂತಹ ಹಲವು ಮೇರು ವ್ಯಕ್ತಿತ್ವಗಳು ಇರುವಾಗಲೇ ತಮ್ಮ ಘನತೆಯನ್ನು ಮೆರೆದವರು ವಿದಿತವಾದವರು. ಬಹಳ ದಿನಗಳವರೆಗೂ ಕಾಡುತ್ತೆ ನಮಗೆ ಇವರ ಕೊರತೆ.

    ReplyDelete
  23. ಶಿವು, ನಿಮ್ಮ ಮಾತು ನಿಜ, ಅವರ ಮರಣವಾರ್ತೆ ಬರುತ್ತಿದ್ದಂತೆ ನನ್ನ ಲೇಖನಿ ಹರಿಯಿತು, ಭಾವ ಹೊರಬಿತ್ತು...ನನಗೆ ಚಾಟ್ ನಲ್ಲಿ ಸಿಕ್ಕವರೂ ಇದೇ ಮಾತು ಹೇಳಿದ್ದು..ನೋಡಿದೆವು ಬ್ಲಾಗ್..ಪ್ರತಿಕ್ರಿಯೆ ಹಾಕ್ತೇವೆ ಬಿಡುವಾಗಿ ಎಂದು... ಕದಡಿದ ಮಾನಸಸರೋವರ ಸ್ವಲ್ಪ ತಿಳಿಯಾಗಲು ಮನ ಹಗುರಾಗಲು ಸಮಯಬೇಕು. ಧನ್ಯವಾದ ನಿಮ್ಮ ಅನಿಸಿಕೆಗೆ.

    ReplyDelete
  24. ಊರಿಗೆ ಹೋಗಿದ್ದರಿಂದ ಎಲ್ಲ ಸಂಪರ್ಕ ಕಡಿದಿತ್ತು. ಅಶ್ವಥ್ ಹೋದ್ರಂತೆ ಅಂತ ಕೇಳಿದೆ.. ತುಂಬಾ ಬೇಸರ ಆಯ್ತು! ಅದೇ ಮರುದಿನ ಇನ್ನೊಬ್ಬ ನೆಂಟರಮನೆಗೆ ಹೋದ್ರೆ ವಿಷ್ಣು ಅವರ ಅಂತಿಮ ಸಂಸ್ಕಾರದ telecast ಬರ್ತಾ ಇದ್ದಿದ್ದು ಇನ್ನೊಂದು shock... ಅನಿರೀಕ್ಷಿತವಾಗಿ ಆಗಲಿದ ಇಬ್ಬರು ಮೇರು ವ್ಯಕ್ತಿಗಳಿಗೆ ನನ್ನ ಭಾಷ್ಪಂಜಲಿ!

    ReplyDelete
  25. 2009 - the year to remember for losing some of the great artistes. The first month of the year, we lost Raju Ananthaswamy and the last month of the year took away 2 more gems, Sri. C. Ashwath and Dr. Vishnu. We can only pray that more such artistes are born and get the lime light to subside the loss we all have gone thru...

    ReplyDelete