Tuesday, January 26, 2010

ಒಂದು ಚಾಟ್ ನ ಕನ್ನಡಿಗರ ಇಂಗ್ಲೀಷ್ ಲಿಪ್ಯಾಲಾಪ

(ಕನ್ನಡೀಕೃತಲಿಪಿಯಲ್ಲಿ, ಸೂಚನೆ: ಶಿಫ್ಟ್-ಎಲ್ ಕೀಲಿಯ ಬಗ್ಗೆ ಇಬ್ಬರಿಗೂ ಗೊತ್ತಿರಲಿಲ್ಲ- ಇದು ಎಷ್ಟು ಅಭಾಸಪೂರ್ಣ ಆಗಬಹುದು ಅನ್ನೋದಕ್ಕೆ..)

ಆಕೆ: ಏನ್ರೀ? ಚೆನ್ನಾಗಿದ್ದೀರಾ?

ಆತ: ನೀವು ಹೇಲಿ..ನಾನು ಚೆನ್ನಾಗಿದ್ದೇನೆ...ಹೋದ ಸರ್ತಿ ಏನೋ ಹೇಲಬೇಕು ಅಂದ್ರಿ ..ಹೇಲಲಿಲ್ಲ

ಆಕೆ: ತುಂಬಾ ಹೇಲೋದಿದೆ..ಆದ್ರೆ ಹೇಗೆ ಹೇಲೋದೂ ಅಂತ ಗೊತ್ತಾಗ್ತಿಲ್ಲ..ಕಂಪ್ಯೂಟರ್ ನಲ್ಲಿ ಪೋನ್ ನಲ್ಲಿ ಹೇಲೋದು ಕಷ್ಟ..... ನೀವು ಬಂದ್ರೆ ನಿಮ್ಮ ಮುಂದೆ ಹೇಲ್ತೀನಿ...

ಆತ: ನಾನು ಹೇಲೋದೆಲ್ಲ ಹೇಲಿ ಆಗಿದೆ..ನಿಮಗಿನ್ನೂ ಹೇಲೋದಿದ್ರೆ ನಾನು ಬರ್ತೀನಿ ನನ್ನ ಮುಂದೇನೇ ಹೇಲಿ ಆಗ ನಿಮಗೂ ನಿರಾಳ ನನಗೂ ಸಮಾಧಾನ.

ಆಕೆ: ನಿಮ್ಮಾಕೆನೂ ನಮ್ಮವ್ರ ಹತ್ರ ಹೇಲ್ತಾ ಇದ್ರಂತೆ ಹಂಗಂತ ನಮ್ಮವ್ರು ನನಗೆ ಹೇಲಿದ್ರು, ನಿಮ್ಮಬ್ಬರಿಗೂ ಹೆಚ್ಚಿಗೆ ಹೇಲೋದಿದ್ರೆ ನಾವೆಲ್ಲ ಒಟ್ಟಿಗೆ ಕೂತಾಗ ಹೇಲೋನ...ಎನಂತೀರಿ..?

ಆತ: ಇದು ಸರಿಯಾದ ಸಲಹೆ ಒಟ್ಟಿಗೆ ಎಲ್ಲ ಕೂತು ಹೇಲಿಕೊಂಡ್ರೆ ಎಲ್ರಿಗೂ ಸಮಾಧಾನ

ಆಕೆ: ನಿನ್ನೆ ಮಿನಿಸ್ಟ್ರು ಫೋನ್ ಮಾಡಿದ್ರು..ನಮ್ಮವ್ರಿಗೆ

ಆತ: ಏನು ಹೇಲಿದ್ರು?

ಆಕೆ: ಅವ್ರೆಲ್ಲಿ ಹೇಲ್ತಾರೆ..? ನಿಮ್ಮಮನೆಗೇ ಬರ್ತೀನಲ್ಲ್ಲಾ ನಿಮ್ಮ್ ಮಿಸೆಸ್ ಹತ್ರ ಹೇಲ್ತೀನಿ ಅಂದರಂತೆ

ಆತ: ಬಂದಿದ್ರಾ ನಿಮ್ಮನೇಗೆ? ನಿಮ್ಮ ಹತ್ರ ಹೇಲಿದ್ರಾ?

ಆಕೆ: ಇಲ್ಲಾ ರೀ ..ಅವರ ಮಿಸೆಸ್ ಬಂದಿರ್ಲಿಲ್ಲ ..ಅದಕ್ಕೆ ಹೇಲ್ಲಿಲ್ಲ..!!

ಆತ: ಅಲ್ಲ, ಅವ್ರ ಮಿಸೆಸ್ ಬರ್ದೆಇದ್ರೆ ಹೇಲೋಕೆ ಅವ್ರಿಗೆ ತೊಂದರೆ ಏನಂತೆ?

ಆಕೆ: ಅವ್ರ ಮಿಸೆಸ್ ಹತ್ರ ಸಿ.ಎಮ್. ಏನೋ ಹೇಲಿದ್ರಂತೆ..ಅದನ್ನ ನಮ್ ಮಿಸೆಸ್ ಹತ್ರ ಹೇಲಿಸ್ತೇನೆ ಅಂದ್ರು..ಅದಕ್ಕೆ ನಾನು.. ’ಸಿ.ಎಮ್. ನಿಮ್ಮಾಕೆಹತ್ರ ಹೇಲಿದ್ದು ಏನೇ ಇದ್ರೂ ನೀವು ನಮ್ಮ ಹತ್ರ ಹೇಲ್ಬೇಕೂ ಅನ್ನೋದನ್ನ ಹೇಲಿ ಬಿಡಿ ಸಂಕೋಚ ಯಾಕೆ’ ಅಂತ ಹೇಲ್ದೆ..

ಆತ: ಸರಿ ಬಿಡಿ ನಾಡಿದ್ದು ಸಿ.ಎಮ್ ಮನೇಲಿ ಮೀಟಿಂಗ್ ಇದೆ, ಮಿನಿಸ್ಟ್ರು ಅವ್ರ ಮಿಸೆಸ್ಸು, ಸಿ.ಎಮ್ಮು, ನೀವು ನಾವು ಎಲ್ಲಾ ನಮ್ಮ ನಮ್ಮದು ಹೇಲೋಣ..ಅವ್ರು ಏನು ಹೇಲ್ತಾರೋ ನೋಡೋಣ ಆಮೇಲೆ ಅದನ್ನ ನೋಡಿ ನಿರ್ಧಾರ ತಗಲ್ಲೋಣ..ಏನು ಹೇಲ್ತೀರಿ..?

ಆಕೆ: ಸರಿ ನೀವು ಹೇಲೋ..ಹಾಗೇ ಮಾಡೋಣ.

ಆತ: ಓಕೆ..ಬೈ ಹಾಗಾದ್ರೆ..

ಆಕೆ: ಬೈ...

55 comments:

 1. ಏನ್ ಸರ್ ಏನೇನೋ ಹೇಲಿಬಿಟ್ರಿ....!
  ಚೆನ್ನಾಗಿದೆ... :)
  ಅವರಿಬ್ಬರಿಗೂ ಒಂದ್ಸಲ ಕನ್ನಡ ಕಲಿಸಿ ಕೊಡಿ ದಯವಿಟ್ಟು....
  ('Shift L' is must, along with that ) :D

  ReplyDelete
 2. This comment has been removed by the author.

  ReplyDelete
 3. ಆನಂದ್, ಈ ಪೋಸ್ಟ್ ಹಾಕ್ಬೇಕೋ ಬೇಡ್ವೋ ಅಂತ ಇದ್ದೆ...ಆದ್ರೆ ಬಹಳ ಕಡೆ ಈ ಹಾವಲಿ ನೋಡಿದಮೇಲೆ, ಹಾಕೇ ಬಿಡೋಣಾಂತ ಹಾಕಿದ್ದು. ನನ್ನ ಅನುಭವಕ್ಕೂ ಬಂದಿರೋದು ಎಷ್ಟೋ ಮಂದಿ (ನನ್ನಿಂದಾನೂ ಈ ತಪ್ಪು ಆಗಿರಬಹುದು) ಈ ತಪ್ಪನ್ನ ತಿಳಿದೋ ತಿಳೀದೆಯೋ, ಮತ್ತೊಮ್ಮೆ ನೋಡದೆಯೋ ಪೋಸ್ಟ್ ಮಾಡಿಬಿಡ್ತಾರೆ...ಏನಂತೀರಿ....
  ಹಾಂ....ಹೇಲೋದು ನನ್ನ ಕರ್ತವ್ಯ ಅದನ್ನ ಕೇಲಿ..ನಿಮ್ಮ ಸ್ನೇಹಿತರಿಗೆ ಇದನ್ನ ಹೇಲೋದು ಬಿಡೋದು ನಿಮ್ಮ ಇಷ್ಟ.....ಹಹಹಹ...

  ReplyDelete
 4. ಮನಸು ಮೇಡಂ..?? ಅನಿಸಿರ್ಬೇಕು....ಆದ್ರೆ ಅಭಾಸ ಹೇಗೆ ಆಗಬಹುದು ಅಂತ ತಿಳಿಸೋಕೆ...ಪೋಸ್ಟ್ ಮಾಡ್ಲೇ ಬೇಕಾಯ್ತು...

  ReplyDelete
 5. ಆಝಾದ್ ಭಾಯ್...

  ನೀವು ಹೇಲಿದ್ದು ಕಂಡು..
  ನನಗೂ ಹೇಲ ಬೇಕೆನ್ನಿಸ್ತಾ ಇದೆ..

  ನಾನು ಹೇಲ ಬಹುದಾ?
  ನಾನು ಹೇಲಿದ್ರೆ ನೀವು ಅಪಾರ್ಥ ಮಾಡ್ಕೋ ಬಾರ್ದು...
  " ಯಾವಾಗ್ಲೂ.. ಈ ಥರ ಹೇಲದೇ ಇರೋವ್ನು..
  ಯಾಕೆ ಈ ಥರ ಹೇಲ್ತಾನೆ? ಅಂತ.."

  ನಾನು ಹೇಲುವದರಿಂದ ನಿಮಗೆ ತೊಂದ್ರೆ ಆಗಬಾರದು ನೋಡಿ..

  ಇನ್ನೊಂದು ವಿಷಯ..

  ನಾನು ಹೇಲಿದ್ದು ನೀವು ಯಾರಿಗೂ ಹೇಲ ಬಾರದು..

  ನಾನು ಹೇಲೋದು ಸ್ವಲ್ಪ ಗುಟ್ಟಾಗಿ ಇರಬೇಕು..

  ಈಗ ಹೇಲಿ..

  "ನಾನು ಹೇಲ ಬಹುದಾ...?"

  ಆಝಾದ್ ಭಾಯ್ ಇದನ್ನು ಓದಿ ಯಾವ ಪರಿ ನಕ್ಕಿದೆ ಅಂದ್ರೆ..
  ನಮ್ಮಾಕೆ ಅಡಿಗೆ ಮನೆಯಿಂದ ಓಡಿ ಬಂದ್ರು..

  "ಆಗ ಅವರಿಗೂ .."ಹೇಲಿದೆ.."

  ಹ್ಹಾ... ಹ್ಹಾ...ಹ್ಹಾ....ಹ್ಹೋ... ಹ್ಹೋ....!!

  ReplyDelete
 6. ಹೋ...ಹ್ಹೋ..ಹೋ....

  ReplyDelete
 7. ಹಾ ಹಾ ಹಾ,, ಏನ್ ಆಜಾದ್ ಸರ್,,,,,ಏನೋ ಹೇಳಲು ಹೋಗಿ ಏನೋ ಹೇಲಿದಿರಲ್ವ? ತುಂಬ ಚೆನ್ನಾಗಿ ಇದೆ.....ನೈಸ್ ...ಸಕತ್ ನಕ್ಕಿ ಬಿಟ್ಟೆ....

  ReplyDelete
 8. ಪ್ರಕಾಶ್, ನನ್ನ ಹೇಳೋ ಪರಿ ನಿಮ್ಮ ಹೇಳೋ ಪರಿಗೆ ಹೋಲಿಸಿದರೆ ಬಹಳ ಕಡಿಮೇನೇ...ಹಹಹಹ....ಅಂತೂ ಆಶಾವ್ರಿಗೆ ಗುಟ್ಟು ಬಿಟ್ಟುಕೊಟ್ರಾ??
  ನಿಮ್ಮ ಕಾಮೆಂಟ್ ಓದ್ತಾ ನಗೋಕೆ ಶುರುಮಾಡಿದೆ...ಯಾವಾಗಲೂ ಗಂಭೀರವಾಗಿರೋ ನನ್ನವಳು..ನನಗೆ ಕಾಫಿ ಕೊಡೋಕೆ ಬಂದು ತಾನೂ ನಕ್ಕಳು..ಲ್ಯಾಪ್ಟಾಪ್ ನಿಂದ ಮುಖ ಎತ್ತಿ...ಹಾಂ..!! ಇವಳು ನಗ್ತಿದ್ದಾಳಾ..?? ಅಂತ ನೋಡುವಾಗ ಅವಳು ನನ್ನ ಮುಖ ನೋಡಿ ಏನು? ನಗು ಎನ್ನುವಂತೆ ಹುಬ್ಬನ್ನು ಕೊಚ್ಚನ್ ಮಾರ್ಕಿಗೆ ತಂದಾಗ ...ಒಮ್ದು ಜೋಕು ಕಳಿಸಿದ್ದಾರೆ ನನ್ನ ಫ್ರಂಡು ಅಂದೆ....ಸರಿ ಏನು? ಅದು..? ಅನ್ನೋದೇ ಇವಳು..ಇದೇನಪಾ ಯಾವತ್ತೂ ಇಲ್ಲದ ಆಸಕ್ತಿ..ಅಂತ..??!! ನಾನು...ನಿಮ್ಮ ಚಪಾತಿ ಕಥೆ ಹೇಳಿಬಿಟ್ಟೆ...ಅಪರೂಪಕ್ಕೆ ನನ್ನವಳ ಮುಖದತುಂಬ ನಗು ಕಂಡು...ಜೈ..ಚಪಾತಿಪ್ರಕಾಶ್ ಅಂತ ನನ್ನ ಮನಸು ಜೈಕಾರ ಹಾಕ್ತು ನಿಮಗೆ....ಹಹಹ

  ReplyDelete
 9. ಸುಮಾ, ಮೂಗು ಮುಚ್ಕೊಂಡು ಬ್ಲಾಗ್ ಓದಿ...ಉಸಿರು ಕಟ್ಟುವುದರೊಳಗೆ ಕಾಮೆಂಟ್ ಹಾಕಿ...ಗಪ್ ಅಂತ ವಿಂಡೋ ಮುಚ್ಚಿದಿರಿ ಅನ್ನಿಸ್ತಾ ಇದೆ...ಹಹಹಹ.

  ReplyDelete
 10. ಗುರು...ಹಹಹಹ್ಹಹ್ಹ...ನಿಮ್ಮ ಕಾಮೆಂಟಿಗೆ ಧನ್ಯವಾದ...ಒಂದಂತೂ ನಿಜ ನಾನು ಬ್ಲಾಗ್ ಟೈಪ್ ಮಾಡುವಾಗ ಈಗ ಹೇಳು ಎನ್ನುವುದನ್ನ ಸಾವಕಾಶವಾಗಿ ಟೈಪಿಸುತ್ತಿದ್ದೇನೆ...ಹಹಹಹ್

  ReplyDelete
 11. ನಾನೂ ಹೇಲಬೇಕು...ಈಗ ಬೇಡ ಬಿಡಿ..ಬೆಲಿಗ್ಗೆ ಹೇಲ್ತೀನಿ.....ಆಮೇಲೂ ಹೇಲ್ತಾನೆ ಇರ್ತೀನಿ...ಸಾರ್ ನೀವೂ ದಯವಿಟ್ಟು ಹೇಲ್ತಾನೇ ಇರಿ...ಮಧ್ಯ ನಿಲ್ಲಿಸ್ಬೇಡಿ.....ಬಾಯ್...ಹ್ಹ..ಹ್ಹಾ..

  ReplyDelete
 12. bahala sogasaada niroopane. kannada bhaasheya mahatva iruvude haage.

  ReplyDelete
 13. ಸುಬ್ರಹ್ಮಣ್ಯ ಭಟ್ ರೇ, ಹೇಲೋದೆಲ್ಲಾ ಹೇಲಿಬಿಡಿ....ಇಲ್ಲ ಮತ್ತೆ ತಾಪತ್ರಯ ಆಗಿಬಿಡುತ್ತೆ...ಹಹಹ....ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

  ReplyDelete
 14. ಬಾಲು, ನನಗೆ ಸುನಾಥ್ ರವರ ಇತ್ತೀಚಿನ ಬ್ಲಾಗ್ ಪೋಸ್ಟ್ ನೆನಪಾಯ್ತು..ಎಷ್ಟು ಚನ್ನಾಗಿ ಅವರು ನಮ್ಮ ಭಾಷೆಯ ಸಿರಿವಂತಿಕೆ ಮತ್ತು ಅಲ್ಪ ತಪ್ಪುಗಳು ಮಹಾಪರಾಧಗಳು ಭಾಷೆಯ ಬಳಕೆಯಲ್ಲಿ ಹೇಗೆ ಸಾಧ್ಯ್ ಅಂತ ತೋರಿಸಿದ್ದಾರೆ

  ReplyDelete
 15. ಹೊಟ್ಟೆ ಹುಣ್ಣಾಗುವಷ್ಟು ನಗು ಬರಿಸಿತು ಅಜಾದ್ ಸರ್...

  ಏನು ತಲೆ ನಿಮ್ಧು :):):)

  ReplyDelete
 16. ಬೈಯ್ಯ ನಕ್ಕು ನಕ್ಕು ಹೊಟ್ಟೆ ನೋವು ಬಂತು ಸಕ್ಕತ್ತಾಗಿದೆ :)

  ReplyDelete
 17. ಇದನ್ನ ಹೆಲ್ಕೊ೦ಡು ಹೆಲ್ಕೊ೦ಡು ನಕ್ಕಿದ್ದೇ ನಕ್ಕಿದ್ದು.

  ReplyDelete
 18. hi sir its so funny i m luvin it... just rock k.. ha ha ha..

  ReplyDelete
 19. ಅಜ್ಹಾದ್ ಸರ್
  ಏನಲ್ಲ ಹೇಲಿ ನಮಗೂ ಮುಂದೆ ಹೇಲಲು ಆಗದ ಹಾಗೆ ಮಾಡಿಬಿಟ್ರಿ
  ಸುಂದರ ವಿವರಣೆ

  ReplyDelete
 20. he he he,,chennagide nimma baraha azad bhai..

  ReplyDelete
 21. ಯಪ್ಪಾ ಯಪ್ಪಾ,

  ಅಂದ ಹಾಗೆ ಆ ಎರಡು ವ್ಯಕ್ತಿಗಳು ಏನು ಉದಯ ಟೀವಿ ಯಲ್ಲಿ ಕೆಲಸ ಮಾಡೋದ?

  ReplyDelete
 22. ಆಝಾದ್ ಅಂಕಳ್, ನಿಮ್ಮ ಪೋಷ್ಟ್ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕೆ,
  ಯಾರ್ಯಾರೋ ಏನೇನೋ ಮಾತಾಡಿಕೊಲ್ತಾರೆ ಅದನ್ನ ತಳೆಗೆ ಹಚ್ಚಿಕೊಳ್ಳಬಾರದು ಅಂದು ಕೊಳ್ತೇವೆ ಆದರೆ ಆಗುವುದಿಳ್ಳ ಅಳ್ಳವಾ?
  (ಅಪಾರ್ಥ ಆಗಬಾರದು ಎಂದು ಜಾಗರೂಕತೆ ವಹಿಸಿ ಬರೆದ ಕಾಮೆಂಟ್ ಇದು ಹಿ ಹಿ ಹಿ )

  ReplyDelete
 23. ಸುಧೇಶ್, ಮನೋರಂಜನೆಗೆ ಮನಸ್ಸಿದ್ದರೆ ದಿನನಿತ್ಯದ ಮಾತುಕತೆಯಲ್ಲಿ ಹುಡುಕಬಹುದು ಮನೋಲ್ಲಾಸದ ದಾರಿಯನ್ನ ಅಲ್ಲವೇ?

  ReplyDelete
 24. ರಂಜು, ನಿನ್ನ ಮನರಂಜನೆಯಾಗಿದ್ದು ನನಗೆ ಸಂತೋಷ ಆಯ್ತು..ನೀವೆಲ್ಲಾ ಇದೇನು?? ಛೀ..!!! ಅನ್ನದೇ ..ಮನಸ್ಸನ್ನ ಹಗುರ ಮಾಡಿಕೊಂಡಿದ್ದಕ್ಕೆ...ಹಹಹ

  ReplyDelete
 25. ಸೀತಾರಾಂ ಸರ್, ಧನ್ಯವಾದ..ಎಲ್ಲರ ಮನರಂಜನೆಗೆ ಸಾಧನ ಆಯ್ತಲ್ಲ ಬ್ಲಾಗು ಪೋಸ್ಟ್ ಅಷ್ಟು ಸಾಕು

  ReplyDelete
 26. ತೇಜಸ್ವಿನಿ, ಇದು ಯಾಕೋ ಮೂರು ಐಕಾನ್ ಹಾಕಿ ಸುಮ್ಮನಾದ್ರಿ...ಗಾಂಧೀಜಿಯನ್ನ ನೆನೆಪಿಸೋ ವರಸೇನಾ?

  ReplyDelete
 27. ಕೀರ್ತಿ, ಇದೇ ನೋಡಿ ಬೋನಸ್...ಬ್ಲಾಗು ಸಹವಾಸದ್ದು...ಹಹಹ..ಯಾವ ಮೆಡಿಸಿನ್ನೂ ಈ ಪರಿಣಾಮ ತರೋಲ್ಲ...

  ReplyDelete
 28. ಡಾಕ್ಟರೇ, ಯಾಕೋ ನೀವೂ ಅವಸ್ಥೆ ಪಡ್ತಿದ್ದೀರಾ? ಅದನ್ನ ಇಟ್ಕೋಬಾರ್ದು...ಹಹಹ...

  ReplyDelete
 29. ರವಿಕಾಂತ್, ನಿಮ್ಮ ಸ್ನೇಹಿತರ ಜೊತೆ ಈ ಬ್ಲಾಗು ಓದಿ ನಿಮ್ಮ ಸ್ನೇಹಿತರಿಗೆ ...ಪುಕ್ಕಟೆ ಮನರಂಜನೆ ಮಾಡಿದ್ರಿ ಅನ್ನಿ...?

  ReplyDelete
 30. ಜಯಶ್ರೀ ನಿಮ್ಮಲ್ಲೂ ಈ ತರಹ ಆಗುತ್ತಾ...ಹಹಹ...

  ReplyDelete
 31. ಯಾಕೋ ಮಯೇಸಣ್ಣ ...ನಕ್ಕು ಸುಮ್ಮನಾಗ್ಬಿಟ್ಟೆ...ಹೊಟ್ಟೆ ನೋಯ್ತಾಯಿದ್ಯಾ?? ಹಹಹ ನಕ್ಕುಬಿಡು...ಇಲ್ಲ ನಗೊಲ್ಲ ಅಂತ ಹೇಲಿಬಿಡು

  ReplyDelete
 32. ಬಾಲು ಇದು ಒಂದು ನಮೂನೆ ಹಾಸ್ಯ ಆಗೋಯ್ತಾ? ಇಲ್ಲ ನಿಜವಾಗೂ ಹೇಲೋರಿಗೆ ಕೇಲೋರು ಇಲ್ವ?

  ReplyDelete
 33. ಮೂರ್ತಿ (new banana) ರವರೇ, ಧನ್ಯವಾದ ನಿಮ್ಮ ಕಹ-ಕಹಕ್ಕೆ...ಇಂತಹ ಪೋಸ್ಟುಬರ್ತಾಇದ್ರೆ..ಮನಸ್ಸು ಶುಭ್ರ ಇರುತ್ತೆ ಅಲ್ಲವೇ..

  ReplyDelete
 34. Hotte huNNaguvastu nakkiddaithu. :-D :-D

  ReplyDelete
 35. ಅಜಾದ್ ಸರ್,
  ನಾನು ಈ ತಪ್ಪನ್ನು ತುಂಬಾ ಸಾರಿ ಮಾಡಿದೀನೆ...... ನೀವು ಈಗ ಹೇಳೋ ತನಕ ನನ್ನ ತಪ್ಪು ಗೊತ್ತೇ ಇರಲಿಲ್ಲ...... ತಪ್ಪನ್ನು ತುಂಬಾ ಚೆನ್ನಾಗಿ ತಿಳಿ ಹೇಳಿದ್ದೀರಿ........ ........ ಧನ್ಯವಾದ ಸರ್.....

  ReplyDelete
 36. ನಿಶಾ...ಹಹಹ...ನಿಮಗೆ ಇಷ್ಟವಾಯ್ತಾ?? ಹಹಹಹ್ ಸಂತೋಷ....ಹುಷಾರು ಇನ್ನುಮೇಲೆ ...ಶಿಫ್ಟ್ ಎಲ್ ಮರೀಬಾರ್ದು...ಳ ಟೈಪ್ ಮಾಡಲು

  ReplyDelete
 37. ದಿನಕರ್...ಮತ್ತೆ ನೀವು ನಗಸ್ತಾ ಇದ್ದೀರಿ....ಎರಡೂ ತಪ್ಪಲ್ಲ ಗುರುವೇ...ಹಹಹ....ಆದ್ರೆ ಅದು ಮಾಡೋಕಡೆ ಇದು ಮಾಡಿದ್ರೆ...ಹಹಹಹಹ ಬರುತ್ತೆ...ಅಲ್ವಾ??

  ReplyDelete
 38. ಸರ್ ಹಾಗೇ ಚಾಟಿನಿಂದ ಇಲ್ಲಿಗೆ ಬಂದೆ. ಓದಿ ನಕ್ಕು ಸುಮ್ಮನಾಗಿಬಿಟ್ಟಿದ್ದೆ. ಆದರೆ ನನ್ನ ಒಂದು ಅನುಭವವನ್ನು ಇಲ್ಲಿ ಹಂಚಿಕೊಳ್ಳಬೇಕೆನ್ನಿಸಿದೆ. ನಾನು ಬಿಎಸ್ಸಿಯಲ್ಲಿದ್ದಾಗ (1993) ಹೊಸ ತರಾ ಎಂದು ಕನ್ನಡವನ್ನು ರೋಮನ್ ಸ್ಚ್ರಿಪ್ಟಿನಲ್ಲಿ ಬರೆಯುತ್ತಿದ್ದೆ. ಹೆಚ್ಚೂ ಕಡಿಮೆ ಬರಹ ತಂತ್ರಾಂಶದ ಪ್ರಾರಂಭದ ಸ್ಟೈಲ್! ನನ್ನ ಗೆಳೆಯ ಗೆಳತಿಯರಿಗೆಲ್ಲಾ ಹಾಗೇ ಕಾಗದ ಬರೆಯುತ್ತಿದ್ದೆ. ಅದರಲ್ಲಿ ಒಬ್ಬ ಗೆಳತಿ, ಈ ಹೇಲು(!)ವ ಉಳುಕುಗಳನ್ನು ಎತ್ತತಿ ತೋರಿಸಿ ಇನ್ನು ಮುಂದೆ ಬರೆಯುವುದಾದರೆ ಕನ್ನಡ ಲಿಪಿಯಲ್ಲೇ ಬರೆ, ಇಲ್ಲವಾದರೆ ಬರೆಯಲೇ ಬೇಡ ಎಂದು ಹೇಲಿ(!)ದ್ದರಿಂದ ಆ ಪ್ರಯತ್ನ ಅಲ್ಲೇ ಬಿಟ್ಟೆ. ಆದರೆ ಮುಂದೆ 1998ರಲ್ಲಿ ಬರಹ ತಂತ್ರಾಶ ಪರಿಚಯವಾದಾಗ ನನ್ನ ೈಡಿಯಾ ಕದ್ದಿದ್ದಾರೆ ಎಂದು ತಮಾಷೆ ಮಾಡುತ್ತಿದ್ದೆ, ಅದೇ ಗೆಳೆಯರ ಹತ್ತಿರ.

  ReplyDelete
 39. ಹೇಲಿ ಹೇಲಿ, ಹೇಲಾದ ಮೇಲೆ ಹೇಲಿ ಮತ್ತೆ ಹೇಲಿ ಮತ್ತೆ ಹೇಲಿ ನೀವು ಹೇಳುವುದನ್ನು ಕೇಳಿ ಅಲ್ಲಲ್ಲ ಓದಿ ನಾವು ನಗುತ್ತೇವೆ

  ReplyDelete
 40. ಆಜಾದ್,

  ನಿಮ್ಮ ಲೇಖನದ ಸಂಭಾಷಣೆ ಓದಿದಾಗ ನಗು ಬಂತು. ಜೊತೆಗೆ ಒಂದು ಅಲೋಚನೆಯೂ ಬಂತು. ಅದೇನೆಂದರೆ ಅವರಿಬ್ಬರ ನಾಲಿಗೆಯನ್ನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿದರೆ ಸರಿಹೋಗಬಹುದಾ ಅಂತ!

  ReplyDelete
 41. ಡಾ.ಸತ್ಯ, ಸತ್ಯ ಹೇಳಿದ್ರಿ...ಕನ್ನಡವನ್ನು ಇಂಗ್ಲೀಷಿನಿಂದ ಓದಬಹುದು ಅನ್ನೋರಿಗೆ ಇದು ಸಮಸ್ಯೇನೇ...ಹಹಹ್ ಹಾಗೇ ಕೀಲಿಯನ್ನ ಸರಿಯಾಗಿ ಉಪ್ಯೋಗಿಸದಿದ್ದರೂ ಹೀಗೆ ಆಗುತ್ತೆ...ಸರ್ವ ಕಾಲಕ್ಕೂ ಸರ್ವ ಸಂದರ್ಭಕ್ಕೂ ಸರಿಹೊಂದುವ ಪ್ರೋಗ್ರಾಮನ್ನು ನಿಮ್ಮಂಥವರು ವಿಕಸಿಸಬೇಕು...

  ReplyDelete
 42. ವಿಆರ್ ಭಟ್ಟರೇ, ಸ್ವಾಗತ ನಿಮ್ಗೆ ಜಲನಯನಕ್ಕೆ...ಅಂತೂ ಹೇಲಿ ಹೇಲಿ ಸುಸ್ತಾದ್ರೆ ಏನೂ ಮಾಡೋಕಾಗೊಲ್ಲ ಬರೀಬೇಕಷ್ಟೆ...ಹಹಹ ಧನ್ಯವಾದ ಗೂಡಿಗೆ ಬಂದಿರಿ, ಪ್ರತಿಕ್ರಿಯೆ ನೀಡಿದ್ರಿ

  ReplyDelete
 43. ಶಿವು ಎಡವಟ್ಟು ಅವರ ನಾಲಿಗೇದಲ್ಲ...ಅವರು ಚಾಟ್ ಮಾಡುವಾಗ ಹೇಳು ಕನ್ನಡ ವಾಗುತ್ತಿರಲಿಲ್ಲ ಇಂಗ್ಲೀಷ ಆಗ್ತಿತ್ತು ಆದ್ರೆ ಭಾಷೆ ಕನ್ನಡ ಹಾಗಾಗಿ ಹೇಲು ಆಗ್ತಿತ್ತು...ಹಹಹಹ

  ReplyDelete
 44. ಅವರು ಹಾಗೆಲ್ಲ ಹೇಲಾಬರದಿತ್ತು :P

  ReplyDelete
 45. ಶಿಪ್ರ ಹಹಹ....ಹೌದು ನೋಡಿ..ಹೇಳಬೇಕು ಅಂತ ಇದ್ದದ್ದೇ ಆದ್ರೆ ಟೈಪ್ ಮಾಡ್ಬೇಕಾದ್ರೆ ...ಶಿಫ್ಟ್ ಕೀಲಿ ಒತ್ತದೇ ಅವರು ಮಾಡಿದ್ದು ಹೇಲು ಆಗೋಯ್ತು...ಹೇಳಬೇಕು ಅಂತ ಇದ್ದದ್ದೇ ಆದ್ರೆ ಟೈಪ್ ಮಾಡ್ಬೇಕಾದ್ರೆ ...ಶಿಫ್ಟ್ ಕೀಲಿ ಒತ್ತದೇ ಅವರು ಮಾಡಿದ್ದು ಹೇಲು ಆಗೋಯ್ತು...

  ReplyDelete
 46. ನನ್ನ ಸ್ನೇಹಿತರೊಬ್ಬರು ನನಗೆ ಫೋನ್ ಮಾಡಿ...ಭಾಷೆಯಲ್ಲಿನ ಸೂಕ್ಷ್ಮಗಳನ್ನು ಅರಿಯದೇ ತಕ್ಕ ಮಾರ್ಪಾಡುಗಳನ್ನು ಮಾಡಿಕೊಳ್ಳದೇ ಇಂಗ್ಲೀಷನ್ನ ಬಳಸೋದ್ರಿಂದ ಎಂಥ ಅನಾಹುತ ಆಗಬಹುದು ಅಂತ ತಿಳಿಸಿದ್ದೀರ...ಅಂತ ತಿಳಿಸಿದ್ದಾರೆ...ಅದನ್ನ ಹಂಚ್ಕೋತಿದ್ದೀನಿ ನಿಮ್ಮೊಂದಿಗೆ

  ReplyDelete
 47. hahaha ayyo deva nakku nakku saakaaytu

  ReplyDelete
 48. ಇಲ್ಲಿ ಬ್ಂದು ಹೋದವಿರಿಗೆ ನಗುವಿನ ಪರಿಮಳ...ಹಹಹ...ಧನ್ಯವಾದ

  ReplyDelete
 49. ಹ್ಹಾ ಹ್ಹಾ... ಹ್ಹಾ.. ಸೂಪರ್....

  ReplyDelete
 50. Thanks prabhu....but nothing like ur blog posts...hahaha

  ReplyDelete