Sunday, January 31, 2010

ಗೊತ್ತಿಲ್ಲ ಮಗು

ವ್ಯತ್ಯಾಸ
ಅಪ್ಪಾ..ಒಂದ್ಮಾತು..
ಏನಪ್ಪ ಮಗ ಹೊಸ ವರ್ಸೆ?
ಮೊನ್ನೆ ಚಿತ್ರ ಕಲಾ ಉದ್ಘಾಟನೆ ನಡೀತು
ಹೌದು, ಟಿ.ವಿ.ಯಲ್ಲೂ ಬಂತಲ್ಲ
ಚಿತ್ರ ಕಲೆಗೂ ಚಲನ ಚಿತ್ರಕ್ಕೂ ವ್ಯತ್ಯಾಸ ಇಲ್ಲವಾ?
ಯಾಕಿಲ್ಲ..ನೀನು, ನಿನ್ನ ಸ್ನೇಹಿತ್ರು
ಮೊನ್ನೆ ಸ್ಕೂಲಲ್ಲಿ ಭಾಗವಹಿಸಿದ್ದರಲ್ಲಾ...??
ಗೊತ್ತಪ್ಪ...ಆದ್ರೆ...ಚಿತ್ರಕಲಾ ಉದ್ಘಾಟನೆ ಮಾಡ್ತಾ
ನಮ್ಮ ಮಾನ್ಯ ಸಚಿವರು ನಮ್ಮ ಚಲನಚಿತ್ರಗಳು
ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡ್ತಿವೆ
ಅಂತೆಲ್ಲಾ ಭಾಷಣ ಮಾಡಿದ್ರಲ್ಲಾ ಕಟ್ಟುಮಸ್ತಾಗಿ..
ಸಚಿವರಿಗೆ ಅಷ್ಟೂ ಗೊತ್ತಾಗಲಿಲ್ಲವಾ
ಚಿತ್ರ ಕಲೆ ಬೇರೆ, ಚಲನ ಚಿತ್ರ ಬೇರೆ ಅಂತ...??
ಗೊತ್ತಿಲ್ಲ ಮಗು.

ಮುಖ ನೋಡಿ ಮಣೆ
ಅಪ್ಪಾ...ಬೆಳ್ಳಾರೀಲಿ ಕಟ್ಟಡ ಉರುಳಿ
ಎಷ್ಟು ಅಮಾಯಕರು ಪ್ರಾಣ ಕಳ್ಕೊಂಡ್ರು..!!
ಹೌದು ನೋಡು...ಎಷ್ಟು ಜೀವ ಹಾನಿ ಅಲ್ಲವಾ?
ಅಕ್ರಮ ಕಟ್ಟಡ ಎಲ್ಲಾ ಒಡೆದು ಕೆಡವಬೇಕು ಅನ್ನುತ್ತಲ್ಲ ಸರ್ಕಾರ?
ಹೌದಲ್ಲ ..? ಪ್ರಾಣ ಹಾನಿ ತಡಿಯಬಹುದಲ್ಲವಾ?
ಅಲ್ಲಪ್ಪ ಮತ್ತೆ ಅಕ್ರಮ ಗಣಿಗಾರಿಕೆಯಿಂದ
ರಾಜ್ಯದ ಸಂಪತ್ತು ಮತ್ತು ಪರಿಸರಕ್ಕೆ
ಹಾನಿಯಾಗ್ತಿದೆಯಲ್ಲ ಅದನ್ನ ಯಾಕೆ ನಿಲ್ಲಿಸ್ತಿಲ್ಲ ಸರ್ಕಾರ?
ಇದು ಮುಖ ನೋಡಿ ಮಣೆ ಹಾಕೋದಲ್ಲವಾ?
ಗೊತ್ತಿಲ್ಲ ಮಗು.

ಶಾಸ್ತ್ರೀಯ ಭಾಷೆ
ಅಪ್ಪಾ...ಕನ್ನಡ ಬಲು ಸಿರಿವಂತ ಭಾಷೆ ಅಲ್ಲವೇನಪ್ಪ?
ಹೌದು..ಮತ್ತೆ..ಬಹು ಪುರಾತನ ಸಹಾ...
ಏಳು ಜ್ಜಾನಪೀಠ ಸಿಕ್ಕಿದೆ..ಯಾವ ಭಾಷೆಗೂ ಸಿಕ್ಕಿಲ್ಲ ಹೀಗೆ..
ಮತ್ತೆ ಶಾಸ್ತ್ರೀಯ ಭಾಷೆ ಪಟ್ಟ ಇನ್ನೂ ಅಧಿಕೃತವಾಗಿಲ್ಲವಲ್ಲ
ಹೌದು ಕಣೋ, ಕೋರ್ಟ್ ನಲ್ಲಿ ಇತ್ಯರ್ಥ ಆಗಬೇಕು
ಅಲ್ಲಪ್ಪ ನಮ್ಮ ಮನೆಯಲ್ಲಿ ನಮ್ಮ ಭಾಷೇನಾ
ಅಧಿಕೃತಗೊಳಿಸಿಕೊಂಡ್ರೆ..ಪಕ್ಕದ್ಮನೆಯೋರ್ಗೆ ಏನು ತೊಂದರೆ?
ಅವರ ಮನೆಯವರು ನಮ್ಮ ಮನೆಯಲ್ಲಿ ಅವರ ಭಾಷೇನೇ
ಅಷ್ಟೊಂದು ಧೀಟಾಗಿ ಮಾತನಾಡೋವಾಗ...?
ಗೊತ್ತಿಲ್ಲ ಮಗು

46 comments:

 1. ಗೊತ್ತಿಲ್ಲ ಸರ್ !!...ಅವ್ಯವಸ್ಥೆ ಯಾವಾಗ ಬದಲಾಗುತ್ತದೆ ಅಂತ..:).. Nice

  ReplyDelete
 2. ಮಗು ಆಗ್ಲೆ ವಾರ್ತೆ ನೋಡಿ ಒಳ್ಳೆ ಪ್ರಶ್ನೆ ಕೇಳಿದೆ....
  ಚೆನ್ನಾಗಿದೆ ಮುಂದುವರೆಸಿ....

  ReplyDelete
 3. ಆಝಾದ್ ಭಾಯ್...

  ಮನೋಜ್ಞ ಪ್ರಶ್ನೆಗಳು...

  ಮಾರ್ಮಿಕ ಉತ್ತರಗಳು..

  "ಗೊತ್ತಿಲ್ಲ ಮಗು" ಅನ್ನುವಲ್ಲಿ ಸ್ಪಷ್ಟವಾದ ಉತ್ತರ ಅಡಗಿದೆ...

  ಅಭಿನಂದನೆಗಳು...

  ReplyDelete
 4. ಸುಬ್ರಮಣ್ಯರೇ, ವ್ಯವಸ್ಥೆಗೆ ಒಂದು ವ್ಯವಸ್ಥೆ ಆಗುವವರೆಗೂ ಹೀಗೇನೇ...? ಕ್ರಾಂತೀನೇ ಆಗಬೇಕೋ ಏನೋ?...ಧನ್ಯವಾದ ಮೊದಲ ಮಾತಿಗೆ

  ReplyDelete
 5. ಮಗುವಿಗೆ ವಾರ್ತೆ ಕೇಳಿ ಪ್ರಶ್ನೆ ಕೇಳಬೇಕು ಅನ್ನಿಸಿದೆ ಅಂದ್ರೆ ಶುಭ ಸೂಚನೆ ಅಲ್ಲವೇ ಮಹೇಶ್...? ಎಲ್ಲ ದೊಡ್ಡವರೂ ತಮ್ಮ ದಡ್ಡತನ ಬಿಟ್ರೆ..ಅವರೂ ಕೇಳುವಂತಾದರೆ...??

  ReplyDelete
 6. ಪ್ರಕಾಶ್, ನಮ್ಮ ಮಕ್ಕಳ ಹಲವು ಪ್ರಶ್ನೆಗಳಿಗೆ ಗೊತ್ತಿಲ್ಲ ಎನ್ನುವ ಮೂಲಕ ಮಕ್ಕಳಲ್ಲಿ ನಾವೆಷ್ಟು ಮೂಢರು ಎಂದು ತೋರಿದರೆ...ನಮ್ಮ ಸಮವಯಸ್ಕರಿಗೆ...ನಮ್ಮ ನಿರ್ವಿಣ್ಣತೆಯನ್ನು ತೋರಿದಂತೆ..ಅದೇ ಹಿರಿಯರಿಗೆ...ನೋಡಿ ನೀವು ಮಾಡಿತ್ತಿರುವುದಕ್ಕೆ ನಾವು ನಿರುತ್ತರಿಗಳಾಗುತ್ತಿದ್ದೇವೆ...ತಿದ್ದಿಕೊಳ್ಳಿ ಎಂದಂತಾಗುತ್ತೆ...ಅಲ್ಲವೇ..? ಉತ್ತರ ಒಂದೇ - ಗೊತ್ತಿಲ್ಲ ಮಗು- ಆದರೆ ಅದರ ಉತ್ತರ ನಿಜಕ್ಕೂ ಮೂರು

  ReplyDelete
 7. ಆಜಾದ್ ಸರ್ ,,,, ನಿಮ್ಮ ಗೊತ್ತಿಲ್ಲದ ಮಗುವಿನ ಕಾನ್ಸೆಪ್ಟ್ ತುಂಬ ಚೆನ್ನಾಗಿ ಇದೆ... ಪ್ರತಿ ಬಾರಿ, ವಾಸ್ತವಾಂಶದ ನೈಜತೆಯನ್ನ ಪ್ರಶ್ನಿಸುತ್ತ... ಯೋಚನೆ ಮಾಡುವ ಹಾಗೆ ಮಾಡುತ್ತೆ ನಿಮ್ಮ ಗೊತ್ತಿಲ್ಲದ ಮಗು.. ಗುಡ್,, ಮುಂದುವರಿಸಿ.....

  ReplyDelete
 8. ಗುರು ನಿಮ್ಮ ಪ್ರತಿಕ್ರಿಯೆ ಮತ್ತು ಪ್ರೋತ್ಸಾಹಕ್ಕೆ ನನ್ನಿ, ನಮ್ಮ ವ್ಯವಸ್ಥೆಯತ್ತ ಒಮ್ಮೆ ನೋಡುವ ಮತ್ತು ಸಾಧ್ಯವಾದರೆ ಜಾಗೃತಿ ಮೂಡಿಸುವ ಪ್ರಯತ್ನ ಅಷ್ಟೇ...

  ReplyDelete
 9. 'ಗೊತ್ತಿಲ್ಲ ಮಗು' ತುಂಬಾ ಚೆನ್ನಾಗಿದೆ...ಇದು ಸರಣಿಯಾಗಿ ಬರಲಿ.

  ReplyDelete
 10. ನಮಗೂ ಗೊತ್ತಿಲ್ಲ ಸರ್, ಒಳ್ಳೆಯ ಪ್ರಶ್ನೆ ಉತ್ತರ ಮಾತ್ರ ಯಾರಿಗೂ ಗೊತ್ತಿಲ್ಲ

  ReplyDelete
 11. "ಗೊತ್ತಿಲ್ಲ ಮಗು" ಅನ್ನುವ ಉತ್ತರದೊಳಗೆ ಅಡಗಿರುವ ವ್ಯಂಗ್ಯ, ವಿಡಂಬನೆ, ಹಾಸ್ಯ ಹಾಗೂ ನೋವು ಮನಸನ್ನು ತಟ್ಟುತ್ತವೆ.

  ReplyDelete
 12. ಚೆನ್ನಾಗಿದೆ ಸರ್ , ನಿಮ್ಮ ಮಗು ಹೀಗೆ ಇನ್ನಷ್ಟು ಪ್ರಶ್ನೆಗಳೊಂದಿಗೆ ಜನರನ್ನು ಎಚ್ಚರಿಸಲಿ.

  ReplyDelete
 13. ಮಗುವಿನ ಮುಗ್ಧ ಪ್ರಶ್ನೇಗಳಿಗೆ ಗೊತ್ತಿಲ್ಲ ಮರಿ ಮುಖಾ೦ತರ ಚೆನ್ನಾಗಿ ನಮ್ಮ ವ್ಯವಸ್ಥೆಯ ಅವ್ಯವಸ್ಥೆಯನ್ನ ಹಿಡಿದಿಟಿದ್ದಿರಾ!!
  ಚೆ೦ದದ ಬರಹ.

  ReplyDelete
 14. "ಅಪ್ಪಾ!"
  "ಏನ್ ಮಗಾ, ಮತ್ತೆ ಪ್ರಶ್ನೆನಾ"
  "ಅಲ್ಲ ಅಪ್ಪಾ, ನಮ್ಮ ರಾಜ್ಯದಲ್ಲಿ ಎಷ್ಟೊಂದು ಲೇಖಕರಲ್ವ..ಪ್ರತಿಯೊಬ್ಬರೂ ಬ್ಲಾಗ್ ಬರೆಯೋರೆ"
  "ಹೌದು ಮಗಾ.. ಅದೊಂಥರಾ ಸಮಾಧಾನ ನೀಡುತ್ತೆ, ಈ ಬ್ಯುಸಿ ರಾಜಕಾರಣದಲ್ಲಿರುವಾಗಲೂ ನಾನು ಬ್ಲಾಗ್ ಬರೆಯುತ್ತಿಲ್ಲವೇ "
  "ಹೌದಪ್ಪ , ನೀವೇನೋ ಚೆನ್ನಾಗಿ ಬರೀತೀರಿ ಆದರೆ ಈ ಮಂದಿಗೆ ಸೋಲ್ಪಾನೂ ಬುದ್ಧಿ ಬೇಡವಾ"
  "ಯಾಕ್ ಮಗಾ ಏನಾಯಿತು ?"
  "ಅಲ್ಲ ಅಪ್ಪ.. ಪ್ರತಿಯೊಂದು ಬ್ಲಾಗ್ ನಲ್ಲಿ , ನಿನ್ನಂಥಾ ರಾಜಕಾರಣಿಗಳ ಮೇಲೆ ದಾಳಿ.. ಆತ ಅದು ಮಾಡಿದ, ಇದು ಮಾಡಿದ, ಅಷ್ಟು ದುಡ್ಡು ತಿಂದ, ಇಷ್ಟು ಹಗರಣ ಮಾಡಿದ , ಹಾಗೆ ಹೀಗೆ ಅಂತೆಲ್ಲ ವಾಚಾಮ ಗೋಚರ ವಾಗಿ ಬೈತಾರೆ, ಬರೀತಾರೆ.. ಅವರೆಷ್ಟೇ ಬರ್ದ್ರೂ ನಾವು ದುಡ್ಡು ಮಾಡೋದು, ಹಗರಣ, ದೊಂಬಿ, ಕೋಮುಗಲಭೆ, ದುಡ್ಡು ಮಾಡೋದು ಇದೆಲ್ಲ ನಿಲ್ಸೋಲ್ಲ ಅಂತ ಈ ಜನಕ್ಕೆ ಯಾಕೆ ಅರ್ಥ ಆಗಲ್ಲಪ್ಪ??"
  "ಗೊತ್ತಿಲ್ಲ ಮಗಾ"!!!

  ಹಿಹಿಹಿ...

  ನಿಮ್ಮ ಈ ಸರಣಿ ಚೆನ್ನಾಗಿದೆ ಸಾರ್.."ಇದು ಮುಖ ನೋಡಿ ಮನೆ ಹಾಕೋದಲ್ಲವಾ?" ಹೀಗಂತ ಇದೆ..ಇಲ್ಲಿ "ಮನೆ" ಯನ್ನು "ಮಣೆ" ಮಾಡಿ ಸಾರ್..

  ReplyDelete
 15. your thinkings are so nice..
  n main thing creative mind..

  ReplyDelete
 16. ಆಜಾದ್ ಸರ್,
  ''ಗೊತ್ತಿಲ್ಲ ಮಗು '' ಸರಣಿ ಚೆನ್ನಾಗಿದೆ..... ಮಗುವಿನ ಕೈಯಲ್ಲಿ ಚಾಟಿ ಕೊಟ್ಟು ಹೊಡೆಸುವ ರೀತಿ ಚೆನ್ನಾಗಿದೆ..... ಮೂರು ವಿಷಯದ ಬಗ್ಗೆ ವಿಭಿನ್ನವಾಗಿ , ಮಗುವಿನ ಬಾಯಿಂದ ಹೊರತರಿಸಿದ್ದೀರಾ........ ನಮ್ಮ ಅಸಹಾಯಕತೆಯೂ, ಮಗುವಿನ ಮೂಲಕ ಹೇಳಿಸಿದ್ದೀರ ಅನಿಸುತ್ತದೆ.......

  ReplyDelete
 17. ಜಲನಯನ,
  ‘ಗೊತ್ತಿಲ್ಲ ಮಗು’ ಮಾಲಿಕೆ ಮತ್ತೆ ಪ್ರಾರಂಭವಾಗಿದ್ದಕ್ಕೆ ಖುಶಿ ಆಗ್ತಿದೆ.
  Carry on!

  ReplyDelete
 18. 'ಜಲನಯನ' ಅವರೇ..,

  ಪ್ರಶ್ನೆಗಳೇನೋ ಸರಿ.. ಉತ್ತರ ಹುಡುಕಬೇಕು..

  ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ:http://manasinamane.blogspot.com/

  ReplyDelete
 19. ವನಿತಾ, ಧನ್ಯವಾದ ನಿನ್ನ ಪ್ರತಿಕ್ರಿಯೆಗೆ...ಇದು ನನ್ನ ಸರಣಿಯಂತಹುದೇ ಮಾಲಿಕೆ....ಅಗಾಗ ಗೊತ್ತಿಲ್ಲ ಮಗು ಬರುತ್ತಿರುತ್ತೆ...ನಿಮ್ಮೆಲ್ಲರ ಪ್ರೋತ್ಸಾಹ ಇರುವವರೆಗೆ

  ReplyDelete
 20. ನಾರಾಯಣ್ ಭಟ್ ಸರ್, ಧನ್ಯವಾದ..ನಿಮ್ಮೆಲ್ಲರ ಪ್ರೋತ್ಸಾಹ ಇದ್ರೆ...ಖಂಡಿತಾ ಮುಂದುವರೆಯುತ್ತೆ

  ReplyDelete
 21. ಅಜಾದ್,

  ನಮ್ಮ ಮನದೊಳಗಿನ ತುಮುಲಗಳು, ಪ್ರಶ್ನೆಗಳಿಗೆ "ಗೊತ್ತಿಲ್ಲ ಮಗು" ಒಂದು ಉತ್ತಮ ವೇದಿಕೆ. ಎಲ್ಲರ ಮನದ ಪ್ರಶ್ನೆಗಳನ್ನು ಇಲ್ಲಿ ಚೆನ್ನಾಗಿ ಹೊರಹೊಮ್ಮಿಸುತ್ತಿದ್ದೀರಿ...

  ಧನ್ಯವಾದಗಳು.

  ReplyDelete
 22. ಮನಸು ಮೇಡಂ...ಇಲ್ಲಿ ಗೊತ್ತಿಲ್ಲ ಮಗು..ಎನ್ನೋದು ಒಂದು ರೀತಿ ಉತ್ತರ ಗೊತ್ತಿದ್ದರೂ ಹೇಳುವರೀತಿ..ಯಾಕಂದ್ರೆ ಉತ್ತರ ಕೊಟ್ಟೂ ಪ್ರಯೋಜನವಿಲ್ಲ ಎನ್ನೋ ಭಾವ, ಧನ್ಯವಾದ...ನಿಮ್ಮ ಪ್ರತಿಕ್ರಿಯೆಗೆ

  ReplyDelete
 23. ತೇಜಸ್ವಿನಿ, ಉತ್ತರ ಕೊಡಬೇಕು ಮಗುವಿಗೆ ಎನ್ನುವ ಮಾತಿಗಿಂತ..ಏನು ಉತ್ತರ ಕೊಡಬೇಕು..ಎನ್ನುವುದು...ಎಲ್ಲಾ ಸುತ್ತಿ..ಬಳಸಿ..ಮಗು..ಹೌದು..ಇವರನ್ನೆಲ್ಲಾ ದೂರ್ತೀರಲ್ಲಾ ..ಇವರನ್ನ ಆರಿಸೋದು ನೀವೇ ತಾನೇ...? ಎಂದು ಬಾಣ ಬಿಟ್ರೆ...ಅದಕ್ಕಿಂತ .....

  ReplyDelete
 24. ಸುಮ...ನಿಮ್ಮ ಮಾತಿಗೆ ನನ್ನ ಒಪ್ಪಿಗೆ...ಅಷ್ಟೇ ಏಕೆ...ನನ್ನ ಮಗಳು ಕೇಳಿದ ಒಂದು ಪ್ರಶ್ನೆ ನನಗೆ ಈಗಲೂ ಗೊಂದಲಕ್ಕೆ ಹಾಕಿದೆ...ನೀನು ಮಂಗನಿಂದ ಮಾನವ ವಿಕಾಸವಾದದ ಫಲವಾಗಿ ಆಗಿದ್ದು ಅಂತೀಯಲ್ಲ ಅಪ್ಪ...ಹಾಗಾದ್ರೆ ಇನ್ನೂ ಭೂಮಿಮೇಲೆ ಮಂಗಗಳು ಯಾಕಿವೆ ?? ಏನಂತೀರಾ...ಹಹಹ

  ReplyDelete
 25. ಸರ್
  ಪ್ರತಿಯೊಂದು ಪ್ರಷೆನಯ ಹಿಂದೂ ಬಹಳಷ್ಟು ಗಹನವಾದ ವಿಚಾರ ಅಡಗಿದೆ
  ವ್ಯವಸ್ಥೆ ನಮ್ಮನ್ನು ತಿಂದಿದೆಯೋ ನಾವು ವ್ಯವಸ್ಥೆಯನ್ನು ತಿನ್ನುತ್ತಿದ್ದೆವೆಯೋ ತಿಳಿಯುತ್ತಿಲ್ಲ
  ಒಂಥರಾ ಕೋಳಿ ಮೊದಲೋ, ಮೊಟ್ಟೆ ಮೊದಲೋ ಎಂಬ ಸಿದ್ದಾಂಥದ ಹಾಗೆ

  ReplyDelete
 26. ಸೀತಾರಾಂ ಸರ್, ವ್ಯವಸ್ಥೆಯೋ ಅವಸ್ಥೆಯೋ ಏನೂ ಹೇಳದ ಪರಿಸ್ಥಿತಿ ನಮ್ಮದು...ಇದನ್ನು ನಿರ್ಮಿಸಿದ್ದು ನಾವೇ ಎನ್ನುವುದು ವಿಪರ್ಯಾಸವೇ ಸರಿ...ಅಲ್ಲವೇ?

  ReplyDelete
 27. ರವಿಕಾಂತ್...ನಿಮ್ಮ ಮಗಾನೂ ಪ್ರಶ್ನೆ ಕೇಳೋಕೆ ಪ್ರಾರಂಭ್ಸಿದ್ದಾನೆ...ನಾನು ಹುಷಾರಿರಬೇಕು..ನಿಮ್ಮ ಮಗ ನನ್ನ ಮಗ ಜೊತೆ ಸೇರಿದ್ರೆ ಮುಗೀತು ನಮ್ಮಿಬ್ಬರ ಜನ್ಮಾನೂ ಜಾಲಾಡಿಬಿಡ್ತಾರೆ....ವ್ಯವಸ್ಥೆಯನ್ನ ಜಾಲಾಡೋದಕ್ಕೆ ಮೊದಲು...ಹಹಹಹ.....ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ, ಹೌದು..ಮನೆ ಅಂತ ತಪ್ಪಾಗಿತ್ತು...ಅದನ್ನ ಸರಿ ಮಾಡಿದ್ದೇನೆ...

  ReplyDelete
 28. ಕೀರ್ತಿ, ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...ಬರುತ್ತಿರಿ...

  ReplyDelete
 29. ದಿನಕರ್ ಇದನ್ನು ಸರಣಿ ರೀತೀಲೇ ಆದ್ರೆ ನಿರ್ದಿಷ್ಟ ಅವಧಿಯ ಮೇಲಲ್ಲ...ಬರೆಯುವ ನನ್ನ ಯೋಚನೆಗೆ ನಿಮ್ಮ ಪ್ರೋತ್ಸಾಹ ಸಿಕ್ಕರೆ ಖಂಡಿತ

  ReplyDelete
 30. ಸುನಾಥ ಸರ್, ನಿಮ್ಮ ಮಾತು ನನಗೆ ಟಾನಿಕ್ಕು...
  ನೀವು ಪ್ರತಿಕ್ರಿಯೆ ಹಾಕಿದರೆ ಸಿಗುವುದು ಕಿಕ್ಕು
  ಅದನ್ನ ಆಧರಿಸಿ ಹಾಕಿದ ಪೋಸ್ಟ್ ಎಲ್ಲ ನೋಡಿದರೇ ಅದೇ ಲಕ್ಕು
  ಧನ್ಯವಾದ ಸರ್

  ReplyDelete
 31. ಗುರುದೆಶೆ, ಶುರುವಾಗಿದೆ...ಹಹಹ. ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ..ನಿಮ್ಮಲ್ಲಿಗೆ ಬರುತ್ತಿದ್ದೇನೆ...ನಿರೀಕ್ಷಿಸಿ..ಶೀಘ್ರದಲ್ಲಿ...

  ReplyDelete
 32. ಶಿವು, ಇದು ನನ್ನ ಬಹಳ ದಿನಗಳ ಹಿಂದಿನ ಕಲ್ಪನೆ..ಅದಕ್ಕೆ ಬ್ಲಾಗಿನ ಮೂಲಕ ಮುಕ್ತಿ ಸಿಕ್ಕಿದ್ದು...ಅದಕ್ಕೆ ನಿಮ್ಮಂಥ ಸ್ನೇಹಿತರ ಪ್ರೋತ್ಸಾಹ ಸಿಗುತ್ತಿರುವುದು ನನ್ನ ಸುಕೃತ.

  ReplyDelete
 33. ಡಾಕ್ಟರ್, ಪ್ರಶ್ನೆಯ ಹಿಂದೆ ಗಹನತೆ ಇರೋದು ವ್ಯವಸ್ಥೆಯಲ್ಲಿನ ಅವ್ಯವಸ್ಥೆ ನಮ್ಮನ್ನು ಕಾಡೋದು ನಿಜ ಆದ್ರೆ ನಮ್ಮ ನಡುವಳಿಕೆ ಮಕ್ಕಳಿಗೂ ಅಸಹ್ಯ ಎನಿಸುವಂತಾಗಿದೆ...ಅಲ್ಲವೇ...?

  ReplyDelete
 34. ಆಝಾದ್ ಸರ್, ನಾನೂ ಕೂಡ ಟಿವಿಯಲ್ಲಿ ಮಂತ್ರಿಗಳ ಭಾಷಣ ನೋಡಿ ತುಂಬ ನಕ್ಕಿದ್ದೆ. ಚಿತ್ರಕಲಾ ಪ್ರದರ್ಶನದಲ್ಲಿ ಚಲನಚಿತ್ರದ ಬಗ್ಗೆ ಭಾಷಣ ಮಾಡಿದ್ದನ್ನು ನೋಡಿ. ಯಾವುದೋ ಕಾರ್ಯಕ್ರಮದಲ್ಲಿ ಇನ್ಯಾವುದೋ ಭಾಷಣ ಮಾಡುವ ರಾಜಕಾರಣಿಯ ಜೋಕ್ ಗಳು, ವ್ಯಂಗಚಿತ್ರಗಳು ಯಾವಾಗಲೂ ಓದುತ್ತಿದ್ದೆವು, ಈಗ ನಿಜವಾಗಿದೆ.

  ReplyDelete
 35. ನಿಜ ದೀಪಸ್ಮಿತಾವ್ರೆ...ಆ ದಿನ ನ್ಯೂಸ್ ನೋಡುತ್ತಾ ..ನನಗೆ ಗೊತ್ತಿಲ್ಲ ಮಗುವಿಗೆ ಒಂದು ಮಿಕ ಸಿಕ್ಕಂತಾಯಿತು...ತಕ್ಷಣ ಹಾಕೇ ಬಿಟ್ಟೆ ಪೋಸ್ಟು...ಲೇಖಕರು, ವ್ಯಂಗ್ಯಚಿತ್ರಕಾರರು, ಎಲ್ಲರೂ ರಾಜಕಾರಣಿಗಳಿಗೆ ಋಣಿಗಳಾಗಿರಬೇಕು.

  ReplyDelete
 36. ಆಜಾದ್ ,
  ಏನು ಹೇಳೋದೋ ' ಗೊತ್ತಿಲ್ಲ ' ! " ಗೊತ್ತಿದ್ದರೂ ನಿನಗೆ ಅದನ್ನು ತಿಳಿಸಿ ಹೇಳುವುದು ಸಾಧ್ಯವೇ ಇಲ್ಲ ಮಗೂ" ಎನ್ನ ಬಹುದೇ?
  ತುಂಬಾ ಚೆನ್ನಾಗಿದೆ

  ReplyDelete
 37. ಚಿತ್ರಾ, ನಿಮ್ಮ ಮಾತು ನಿಜ, ಮಗುವಿಗೆ ಅದು ಹೀಗಲ್ಲ ಹೀಗೆ ಅಂತ ವಿವರಣೆ ಕೊಟ್ಟರೆ ಅದನ್ನ ಅರಗಿಸಿಕೊಳ್ಳುವ ಸಾಧ್ಯತೆ ಕಡಿಮೆ..ಹೀಗಿರುವಾಗ..ಗೊತ್ತಿಲ್ಲ ಎನ್ನೋದೇ ಉತ್ತಮ ಅಂತ ನಾವು ಅಂದುಕೊಂಡರೂ...ಮಗುವಿಗೆ ಅನ್ನಿಸೋದು ನಿಜ ಅಲ್ಲವಾ...??

  ReplyDelete
 38. ಪ್ರಸ್ತುತವನ್ನು ನಿರೂಪಿಸಿದ್ದು ತುಂಬಾ ಚನ್ನಾಗಿ ಮೂಡಿಬಂದಿದೆಮಗುವಿನ ಪಾತ್ರದಾರಿ ನಾವೇಅಲ್ಲವೆ?ಕಾನ್ಸೆಪ್ಟ್ ಚನ್ನಾಗಿದೆ.

  ReplyDelete
 39. ನಿಮ್ಮ "ಗೊತ್ತಿಲ್ಲ ಮಗು" ಕವನ ನನಗೆ ತು೦ಬಾ ಇಷ್ಟ, ಮತ್ತೆ ಓದಿ ಖುಷಿಯಾಯ್ತು

  ReplyDelete
 40. ಜಗದೀಶ್ ನನ್ನ ಗೂಡಿಗೆ ಬಮ್ದಿರಿ, ತುಂಬಾ ಧನ್ಯವಾದಗಳು...ಮಗುವಿಗೆ ಉತ್ತರ ಕೊಡದೇ ಗದರಿಬಿಡ್ತೇವಲ್ಲ ..ನಮ್ಮ ಅಸಹಾಯಕತೆಗಿಂತ ನಮ್ಮ ನಿರುತ್ತರತೆ ನಮ್ಮ ಮೌಢ್ಯದ ಪ್ರದರ್ಶನಮಾಡುತ್ತಿದ್ದೇವೆ..ಎನ್ನಬಹುದೇ..?

  ReplyDelete
 41. ಪರಾಂಜಪೆಯವರೇ, ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.., ಮಗುವಿನ ಮಾಧ್ಯಮದಿಂದ ಕೆಲ ಕಹಿ ಸತ್ಯಗಳನ್ನು ಮುಂದಿಡುವ ಪ್ರಯತ್ನ.

  ReplyDelete
 42. ಕೆಲವೊಮ್ಮೆ ನಮಗೆ ಮಕ್ಕಳು ಕೇಳುವ ಪ್ರಶ್ನೆಗೆ ಉತ್ತರಿಸುವುದು ಎಷ್ಟು ಕಷ್ಟವಾಗುತ್ತಲ್ಲ . ಮಗುವಿನ ಮೂಲಕ ಗೊತ್ತಿಲ್ಲ ಅನ್ನುವುದನ್ನು ಚೆನ್ನಾಗಿ ಹೇಳಿಸಿದಿರಿ

  ReplyDelete
 43. ಶಶಿ, ಮಕ್ಕಳ ಪ್ರಶ್ನೆಗಳಿಗೆ ನಮ್ಮ ಉತ್ತರ ಅವರ ಮನಸ್ಸಿನ ಗೊಂದಲಗಳನ್ನು ಪರಿಹರಿಸಬೇಕು..ಆದರೆ ನಮ್ಮ ವ್ಯವಸ್ಥೆ ನಮ್ಮನ್ನು ನಮ್ಮ ಮಕ್ಕಳ ಮುಂದೆ -ಗೊತ್ತಿಲ್ಲ ಮಗು- ಮಾಡೋದು ವಿಪರ್ಯಾಸ ಅಲ್ಲವೇ?

  ReplyDelete
 44. nanna manassinallidda preshnegale illi moodi bandiruvantide

  ReplyDelete
 45. ದಿವ್ಯಾ ನಿನ್ನ ಮನಸಿನ ಪ್ರಶ್ನೆ ಬಂದಿವೆ ಎಂದರೆ..ನಿನ್ನದು ಮಗುವಿನ ಮನಸ್ಸಾಯಿತು...ಆದರೆ ನನಗೆ ನಿನ್ನ ಪ್ರಶ್ನೆ ಉತ್ತರಿಸೋದು ಸ್ವಲ್ಪ ಕಷ್ಟನೇ..

  ReplyDelete