Thursday, February 4, 2010

ಹೀಗೇ ಒಮ್ಮೆ.....

ಇತ್ತೀಚೆಗೆ ಯಾವುದೋ ಕಾನ್ಫರೆನ್ಸಿಗೆ ಅಂತ ಮಂಗಳೂರಿಗೆ ಅಂತ ಹೋಗಿದ್ದೆ. ನನ್ನನ್ನು ಬರಮಾಡಿಕೊಳ್ಳಲು ಯಾರಾದ್ರೂ ಕಾಲೇಜಿಂದ ಬಂದಿರ್ತಾರೇನೋ..ಎಂದು ಸ್ಟೇಷನ್ನಿಂದ ಹೊರಬಂದು ಕಾರ್ ಸ್ಟಾಂಡಿನತ್ತ ನೋಡತೊಡಗಿದೆ....

“ಸಾರ್....”
ದನಿ ಬಂದ ಕಡೆ ತಿರುಗಿದೆ.. ಚಿವುಟಿಕೊಂಡೆ...ಯಾಕಂದರೆ..ಗುಂಡನ ಆ ಗೊಗ್ಗರು ದನಿ ಮರೆಯಲು ಸಾಧ್ಯವೇ ಇಲ್ಲ!!. ಗುಂಡ..!! ..yes...!!!! ನನ್ನ ಯೋಚನಾ ಲಹರಿ ಹತ್ತು ವರ್ಷ ಹಿಂದಕ್ಕೆ ಹೋಯಿತು.

ನಾನು ಸುಮಾರು 10 ವರ್ಷ ಕೆಲಸ ಮಾಡಿ central Govt.ನ deputation ಮೂಲಕ ಪ.ಸಂ.ಮೀ. ಮಹಾವಿದ್ಯಾಲಯದಲ್ಲಿ ಪಿ.ಎಚ್.ಡಿ ಗಾಗಿ ಬಂದಿದ್ದಾಗ ಪರಿಚಯವಾದ ಬಹಳ ಪಗಡದಸ್ತ್ ಆಸಾಮಿ., ಆಗಲೇ ಬಿ.ಎಸ್ಸಿ. ಪದವಿಗಾಗಿ ಸೇರಿದ್ದ ಮಂಡ್ಯದ ಬಳಿಯ ಮಲ್ನಾಯಕನ ಕಟ್ಟೆ ಬೆಟ್ಟೇಗೌಡರ ಮಗ ಗುಂಡ..ಅಂದರೆ ..ಎಮ್.ಬಿ. ಗುಂಡ ರಾಜೇಗೌಡನ ಪರಿಚಯವಾಗಿದ್ದು. ನಾನು ಪಿ ಎಚ್ ಡಿ ಗೆ ಸೇರಿದಾಗ ಕಾಲೇಜಿನ ಆಫೀಸ್ ಆವರಣದಲ್ಲಿ ಮೊದಲಿಗೆ ಸಿಕ್ಕ ಸೀನಿಯರ್ student ಇವನೇ ಆಗಿದ್ದ. ಗುಂಡ ಅಂತಿಮ ವರ್ಷ ಬಿ. ಎಸ್ಸಿಯಲ್ಲಿದ್ದ (ಇದು ಗೊತಾಗಿದ್ದು ನಂತರ). ಆ ಕಾರಣಕ್ಕೆ..ಎಮ್. ಎಸ್ಸಿ ಮತ್ತು ಪಿ.ಎಚ್.ಡಿ. ಗೆ ಸೇರಲು ಬಂದಿದ್ದ ಎಲ್ಲ ಹೊಸಬರನ್ನ ಮುಲಾಜಿಲ್ಲದೇ ಕಾಡಲು, ರಾಗಿಂಗಿಗೇ ಇಳಿದಿದ್ದ. ನಾನು ನನ್ನ official formalities ಮುಗಿಸಿ course ಗೆ ಸೇರಲು ಬಂದಾಗ ನನ್ನ ಜೊತೆಯವರೆಲ್ಲಾ admit ಆಗಿಬಿಟ್ಟಿದ್ದರು. ಆಫಿಸಿನಿಂದ ಹೊರಬರುತ್ತಿದ್ದ ನನ್ನನ್ನು..ನೋಡಿ.. “ರೀ..ಏನ್ರೀ.. ಒಂದ್ಸೊಲ್ಪ..ನಿಂತ್ಕಳ್ಳೀ..” ಅಂತ ನಿಲ್ಲಿಸಿ.. “ಏನು ಪಿ.ಎಚ್.ಡೀನಾ..? ಡಾಕ್ಟ್ರು ಅನ್ನಿಸ್ಕೊಂಬೇಕಾ..?? ಎಲ್ಲಿ..ಎಮ್.ಎಸ್ಸಿ. ಮಾಡಿದ್ದು..??, ನ್ಯೂಟನ್ ಪ್ರಕಾರ ಆಕರ್ಷಣೆ ನಾಲ್ಕನೇ ನಿಯಮ..ಏನು ಹೇಳಿ ನೋಡೋಣ..?” ಪಕ್ಕದಲ್ಲಿದ್ದ ಇನ್ನೊಬ್ಬ ಸೀನಿಯರ್ ಹುಡುಗನ್ನ ಕರೆದು

“ಲೇ ಒಂದಿಬ್ಬರು ಮೂವರು ಈವೊತ್ತು ಜಾಯಿನ್ ಆಗ್ತಾವ್ರೆ ಅಂತ ಹೇಳಿ ನಾಲ್ಕೈದುಜನ ಸೀನಿಯರ್ಸ್ ನ ಕರ್ಕೊಂಡ್ಬಾ ಹೋಗು”.....
ನನ್ನ ಮೇಲಿಂದ ಕೆಳಕ್ಕೆ ನೋಡುತ್ತಾ...ನಾನು in-service candidate ಪಿ.ಎಚ್.ಡಿ ಗೆ ಅನ್ನೋ ಕಾರಣಕ್ಕೆ ... ಯಾವುದಕ್ಕೂ ಸಪೋರ್ಟಿಗೆ ಇರಲಿ ಅಂತ ಅನ್ನಿಸಿರಬೇಕು,

ನಾನು “ ಹೌದು ಸಾರ್‍... ಪಿ. ಎಚ್.ಡಿ.ಗೆ ಸೇರಿದ್ದೇನೆ..”

ನೋಡಲು ದಷ್ಠ-ಪುಷ್ಠವಾಗಿದ್ದ, ಬಹಳ ಸೀನಿಯರ್ ಪಿ.ಎಚ್.ಡಿ ಸ್ಕಾಲರ್ ಇರಬೇಕು ಎಂದುಕೊಂಡೆ.

..ಗಾಬರಿಯಲ್ಲಲ್ಲದಿದ್ದರೂ ಸ್ವಲ್ಪ ಗಲಿಬಿಲಿಗೊಂಡಂತೆ..ಉತ್ತರಿಸುವುದರಲ್ಲಿ.. ...

“ಲೋ ಹರೀಶ ....ಎಲ್ಲೆಲ್ಲೋ..ಹುಡ್ಕೋದು ನಿನ್ನ..?? ನೆನ್ನೆನೇ ಬಂದ್ಯಂತೆ..ಮನೆಕಡೆ ಬರೋದಲ್ಲವಾ..?”
ಎನ್ನುತ್ತಾ..ನನ್ನ ಪಿ.ಯು.ಸಿ. ಯಿಂದ ಎಮ್.ಎಸ್ಸಿ ವರೆಗಿನ ಸಹಪಾಠಿ..ಮತ್ತು ತನ್ನ ಉತ್ತಮ ಸಾಧನೆ-ಸಾಮರ್ಥ್ಯಗಳ ಮೂಲಕ ಪ್ರೊಫೆಸರ್ ಆಗಿದ್ದ ಘನಿಷ್ಠ ಗೆಳೆಯ ರೆಡ್ಡಿ ಕಾರಿಡರ್ ಗೆ ಬಂದು ನನ್ನ ಕೈಕುಲುಕಿದ.

“ಇಲ್ಲ ಕಣೋ...., ರವಿ ಸಿಕ್ಕಿದ್ದ..ಅವನ ಜೊತೆ ಹೋಟೆಲಲ್ಲೇ ಇದ್ದೆ..ಈಗ ಬೆಳಿಗ್ಗೆ..class ಶುರು ಆಗಿರಬಹುದು
ಅಂತ..fees ಕಟ್ಟಿ registration ಮಾಡ್ಬೇಕು ಅಂತ ಬೇಗ ಬಂದೆ” ಎಂದೆ.

ಆಗಲೇ ಗೊತ್ತಾಗಿದ್ದು.. ಗುಂಡ ಅಲ್ಲಿಂದ ಮಾಯವಾಗಿದ್ದ ಅಂತ. “ಗೌಡ ಏನೋ ಕೇಳ್ತಾ ಇದ್ದ ನಿನ್ಹತ್ರ.. ಏನಂತೆ?? ಅವನ ತಾಪತ್ರಯ..??” ನಾನು ಆಶ್ಚರ್ಯದಿಂದ ರೆಡ್ಡಿಯನ್ನು ಪ್ರಶ್ನಾರ್ಥಕವಾಗಿ ನೋಡಿದಾಗ..ಗುಂಡ ಬಿ. ಎಸ್ಸಿ ಗಾಗಿ ಏಳನೇ ವರ್ಷವೂ ಪರಿಶ್ರಮ ನಿರತನಾಗಿರುವುದು ರೆಡ್ಡಿ ಮೂಲಕ ತಿಳಿಯಿತು.

ಆನಂತರ ಒಂದೆರಡು ಬಾರಿ ಹಾಸ್ಟೆಲಿನಲ್ಲಿ..ಕಾಲೇಜು ಕಾರಿಡಾರುಳಲ್ಲಿ..ಗುಂಡ ನನ್ನ ಕಣ್ತಪ್ಪಿಸಿ ಓಡಾಡುವುದನ್ನು ಗಮನಿಸಿದ್ದೆ. ಒಂದು ದಿನ ಹಾಸ್ಟಲಿನಲ್ಲಿ ಸ್ವಲ್ಪ ಲೇಟಾದ್ದರಿಂದ ಊಟದ ತಟ್ಟೆಯನ್ನು ಪಡೆದು ಗುಂಡ ಒಬ್ಬನೇ ಕುಳಿತಿದ್ದ ಟೇಬಲ್ಲಿಗೇ ಹೋಗಿ ಕುಳಿತೆ. ಅವನೇ ವಿಷಯವನ್ನು ಸ್ವಲ್ಪ ಹಿಂಜರಿಕೆಯಿಂದಲೇ ಪ್ರಾರಂಭಿಸಿದ. “ಸಾರ್..ನೀವು ರೆಡ್ಡಿ ಸಾರ್ class-mateಉ ಅಂತಾ ಗೊತ್ತಿರಲಿಲ್ಲ.. ಅಲ್ಲದೇ ನಿಮ್ಮನ್ನ ನೋಡಿದರೆ ತುಂಬಾ young ಆಗಿ ಕಾಣ್ತೀರ..ಸಾರಿ ಸಾರ್..” ಎಂದು ಹಲ್ಲು ಗಿಂಜಿದ. “ಪರವಾಗಿಲ್ಲ ಗೌಡರೇ.. ಹೊಸದಾಗಿ ಕಾಲೇಜಿಗೆ ಬರೋವರನ್ನ ಒಂದುರೀತಿ ಚುಡಾಯಿಸೋ ತರಹ ಬರಮಾಡ್ಕೊಳ್ಳೋದು ನಾವೂ ಮಾಡ್ತಿದ್ದದ್ದೇ...ಆದರೆ ಅವರಿಗೆ ಅವಮಾನ-ಹಿಂಸೆ ಆಗೋಥರಾ ನಾವು ಯಾವತ್ತೂ ಮಾಡಿದ್ದಿಲ್ಲ..ಅವರಿಗೆ ಅತಿ ಮುಜಗರ ಅನ್ನಿಸ್ತಾ ಇದೆ ಅಂತ ಗೊತ್ತಾದ್ರೆ..ಸಮಾಧಾನ ಮಾಡಿ ಫ್ರೆಂಡ್ ಮಾಡ್ಕೊತಿದ್ವಿ. ragging ಆನ್ನೋದು ಹೊಸಬರನ್ನು ಕೀಟಲೆ ಮಾಡಲು ಮತ್ತು ಆ ಮೂಲಕ ಪರಿಚಯಿಸಿಕೊಂಡು ಉತ್ತಮ ಮಿತ್ರರಾಗಲು ಮಾಡಿಕೊಂಡ ನಮ್ಮದೇ ಆದ ವ್ಯವಸ್ಥೆ...ಆದ್ರೆ ಅದನ್ನೇ ನಾವು ಗೂಂಡಾಗಿರಿ ಮೆರೆಯಲು, ಕಾಟಕೊಡಲು ಮತ್ತು ಹಿಂಸಿಸಲು ಮಾಡೋದು ಅಪರಾಧ ಅಲ್ಲವೇ ಗುಂಡ ಅವರೇ..?” ಎಂದಾಗ...

“ಹೆ..ಹೆ..ಹೆ..ಏನ್ಸಾರ.? ಎಷ್ಟು ಜೂನಿಯರ್ ನಾನು..?? ನೀವು ತಾವು ಅಂತೀರ..ಗುಂಡ ಅನ್ನಿ ಸರ್..ಪರ್ವಾಗಿಲ್ಲ..” ಅಂತ ಮತ್ತೆ ಹಲ್ಲು ಗಿಂಜಿದ.

“ಹೌದು.. ಗುಂಡೇ ಗೌಡ್ರೆ.., ನಿಮ್ಮದು ಯಾವ ಊರು..?” ಒಮ್ಮೆಲೇ ಏಕವಚನಕ್ಕೆ ಬರೋದು ಕಷ್ಟ ಅನ್ನಿಸ್ತು.

“ಅಂದಹಾಗೆ ನನ್ನ ಪೂರ್ತಿ ಹೆಸರು..ಗುಂಡ ರಾಜೇಗೌಡ ಅಂತ ಸಾರ್.. ನಮ್ಮದು ಮಂಡ್ಯ” ಅಂದ.

ನನಗೆ ಕುತೂಹಲ ಆಯಿತು.. “ಏನು..ಮಂಡ್ಯನೇ..? ನಾನು ಮಂಡ್ಯದ V.C.Farm ನಲ್ಲಿ ಕೆಲ್ಸ ಮಾಡ್ದೆ...ಎಲ್ಲಿ ಯಾವ ಏರಿಯಾ ಮಂಡ್ಯದಲ್ಲಿ..? ”

“ಹೆ..ಹೆ..ಹೆ..ಔದಾ ಸಾರ್..!!?? ಹೆ..ಹೆ.ಹೆ..ಮಂಡ್ಯ ಅಂದ್ರೆ.. ಮಂಡ್ಯ ಅಲ್ಲ ಸಾರ್ ಪಕ್ಕದಲ್ಲಿ ..... ಹಳ್ಳಿ..”

ನಾನು..
“ಅಲ್ಲಪ್ಪ ಯಾಕೆ ಹಳ್ಳಿ ಅನ್ನೋಕೆ ನಾಚ್ಕೇನಾ..? ನಾನೂ ಹಳ್ಳೀಲೇ ಹುಟ್ಟಿದ್ದು ಬೆಳೆದಿದ್ದು..ಅನ್ನಕೊಡೋ ಅನ್ನದಾತರು ನಮ್ಮ ಹಳ್ಳಿ ರೈತರು...ರೈತನ ಮಗ ಅನ್ನೋದು ಹೆಮ್ಮೆ ಪಡೋ ವಿಷಯ...ಅಲ್ಲವಾ?” ..ಈಗ ಏಕವಚನಕ್ಕೆ ಬರೋದು ಕಷ್ಟ ಅನಿಸಲಿಲ್ಲ.
ಮತ್ತೆ ಕೇಳಿದೆ... “ಯಾವ ಹಳ್ಳಿ?”

“ಮಲ್ನಾಯಕನ ಕಟ್ಟೆ..ಅಂತ ಸಾರ್..” ಎಂದ ಮತ್ತೆ ಹಲ್ಲು ತೋರಿಸುತ್ತಾ....

“ಹೌದಾ..?” ಮತ್ತೂ ಅಶ್ಚರ್ಯವಾಯಿತು.
“ಹೌದು ಸಾರ್..ಬೆಟ್ಟೇಗೌಡರು ಗೊತ್ತಿರಬೇಕು ನಿಮಗೆ..ಅವರ ಮಗ ನಾನು.” ಎಂದ.

“ಏನು ಕಟ್ಟೆ ಮನೆ ಬೆಟ್ಟೇ ಗೌಡರ ಮಗಾನೇ..? ..ಚಂದ್ರು ನ ನೋಡಿದ್ದೆ....ನೀ...ನು...”

“ಸಾರ್ ಚಂದ್ರು ನಮ್ಮಣ್ಣ ಸಾರ್...”

“ಹೌದಾ? ಗೌಡ್ರು ಬಹಳ ಸಹಾಯ ಮಾಡಿದ್ರಪ್ಪಾ ನಾನು ಹೊಸದಾಗಿ ವಿ.ಸಿ, ಫಾರಂ ಗೆ ಹೋದಾಗ...
ಹೇಗಿದ್ದಾರೆ ನಿಮ್ಮಪ್ಪ.. ನಿಮ್ಮಣ್ಣ ಎಲ್ಲಾ.....? ನಿಮ್ಮಪ್ಪ ನಮ್ಮ ಸಂಶೋಧನಾ ಕೇಂದ್ರಕ್ಕೆ ಬರ್ತಿದ್ದ ಹೊಸ ಕೃಷಿ ಸಂಶೋಧಕರಿಗೆ ಮನೆ ಬಾಡಿಗೇಗೆ ಸಿಕ್ಕು ಹೊಸವೃತ್ತಿ ಜೀವನ ಪ್ರಾರಂಭಿಸೋ ಸಮಯದಲ್ಲಿ ೧೦-೧೫ ದಿನ ತಮ್ಮ ಕಡೆಯಿಂದ ಊಟದ ವ್ಯವಸ್ಥೆ ಮಾಡಿಸಿ ಅವರ ಬೇಕು ಬೇಡಗಳಿಗೆ ನೆರವಾಗ್ತಿದ್ದವರು...ರೈತ ಅಂದ್ರೆ ಅನ್ನದಾತ ಅನ್ನೋದನ್ನ ಮಾಡಿ ತೋರಿಸಿದವರು. ನಮ್ಮ ಸ್ನೇಹಿತರೆಲ್ಲಾ ರಾಜೇಗೌಡರು ಅಂದ್ರೆ ಬಹಳ ಗೌರವ ಕೊಡೋರು...” ಹಿಂದಿನ ಆ ದಿನಗಳ ನೆನಪಿಸಿಕೊಳ್ಳುತ್ತಾ ಹೇಳಿದೆ.

“ಅಯ್ಯೋ.. ಸಾರ್ ಅದು ಹಳೇ ಕಥೆ....ಯಾವ್ದೋ ..ತೊಂದರೇಗೆ ಸಾಲ ತಂಗಡ ನಮ್ಮಣ್ಣ.., ಬೇಸಾಯ ಕೈಕೊಡ್ತು, ಕಬ್ಬು ಬೆಲೆ ಇಳೀತು, ಹಾಕಿದ್ ಬಂಡವಾಳಾನೂ ಕೈಗತ್ತೋದು ಕಷ್ಟ ಆಗ್ತಿತ್ತು, ಅದ್ಕೆ ನಮ್ಮಪ್ಪ ಗದ್ದೆ ಮಾರ್ಬಿಟ್ಟ..ನಮ್ಮಣ್ಣ ಸರ್ಕಾರಿ ಕಂಟ್ರಾಕ್ಟರು .. ಆಗುವ್ನೆ...ಮೇಲದ್ಕಾರಿಗಳನ್ನ ಸರಿ ಮಾಡ್ಕಂಡವ್ನೆ..ಒಳ್ಳೆ ಆದಾಯ...” ಎಂದ ಗುಂಡ

“ಇದು ತಪ್ಪಲ್ಲವಾ ಗುಂಡ...ಕಂಟ್ರಾಕ್ಟ್ ತಗೊಂಡು ..ಕಳಪೆ ಕೆಲಸ ಮಾಡಿದ್ರೆ ಜನಕ್ಕೆ ತೊಂದರೆ ಅಲ್ಲ್ವಾ?” ನಾನು ಕೇಳಿದೆ.
“ಇಲ್ಲಾ ಸಾರ್ ..ಕೆಲ್ಸ ಚನ್ನಾಗೇ ಮಾಡಿಸ್ತಾನೆ..ಆದ್ರೆ...ಮಾಡಿರೋ ಕೆಲ್ಸಾನೇ ಎರಡು ಸರ್ತಿ ತೋರ್ಸೋ ಅದ್ಕಾರಿಗಳಹತ್ರ ಕಿತ್ಕೋತಾನೆ....ಹಹಹಹ....ಗುಂಡೀಲಿ ಹೋಗೋದು ಬಂಡೀಲಿ ಬರ್ತದೆ...”

ಇದೊಂದು ಸಾಧನೆ ಅನ್ನೋ ರೀತಿಯಲ್ಲಿ ಪೋಸ್ ಮಾಡ್ದ ಗುಂಡ......

ಲಂಚಕೋರ ಅಧಿಕಾರಿಗಳು, ಅವರನ್ನೇ ನಂಬಿ ದುಡ್ಡು ಮಾಡೋ ಪುಢಾರಿಗಳು ವ್ಯವಸ್ಥೆಯ ಮತ್ತು ಬೇಸಾಯದ ಹೊಡೆತ ತಿಂದು ಸೋತು ಸುಣ್ಣವಾಗೋ ರೈತನನ್ನ ಹೇಗೆ ತಪ್ಪು ದಾರಿಗೆ ಎಳೀತಾರಲ್ಲಾ..?! ಎನ್ನುತ್ತಾ ಯೋಚಿಸತೊಡಗಿದೆ. ಸೋತು..ಆತ್ಮಹತ್ಯೆಗೆ ಶರಣಾಗದೇ ನ್ಯಾಯಯುತವಾಗಿ ಬದುಕಲು ಸಾಧ್ಯವೇ? ಎನ್ನುವುದೂ ನನ್ನನ್ನು ಯೋಚನೆಗೆ ತಳ್ಳಿತು.


“ಸಾರ್..ಸಾರ್..”....

ಗಕ್ಕನೆ ಮತ್ತೆ ವಾಸ್ತವಕ್ಕೆ ಬಂದಿದ್ದೆ... “ಹೋ ಗುಂಡ ಹೇಗಿದ್ದೀಯಪ್ಪ..?” ಎಂದೆ ಅವನ ಕೈ ಕುಲುಕುತ್ತಾ..

“ನೆನಪಿದೆಯಲ್ಲ ಸಾರ್...!!!?? ಥ್ಯಾಂಕ್ಸ್... ಚನ್ನಾಗಿದ್ದೀನಿ...ಕಾಲೇಜಿನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದೀನಿ ಸರ್...” ಎಂದ...
ಗುಂಡ ಏಳನೇ ವರ್ಷ ಬಿಎಸ್ಸಿಯಲ್ಲಿದ್ದಾಗ..ಅವರಣ್ಣ ತೀರಿಹೋಗಿದ್ದು...ಒಮ್ಮೆಗೇ ಬಿದ್ದ ಜವಾಬ್ದಾರಿಯಿಂದ ತಡವಾಗಿಯಾದರೂ ಎಚ್ಚೆತ್ತುಕೊಂಡದ್ದು..ಛಲದಿಂದ ಅದೇ ವರ್ಷ ಬಿಎಸ್ಸಿ ಮುಗಿಸಿ ಎಂಟ್ರೆಂನ್ಸ್ ಪರೀಕ್ಷೆ ಮೂಲಕ ಫೆಲೋಶಿಪ್ ತಗೊಂಡು ಉತ್ತಮ ದರ್ಜೆಯಲ್ಲಿ ಎಮ್ ಎಸ್ಸಿ ಮುಗಿಸಿ, ಹಾಗೇ ಪಿಎಚ್ ಡಿ ಮಾಡಿ ಕಾಲೇಜಿನ ಲೆಕ್ಛರರ್ ಆದದ್ದು ರೆಡ್ಡಿ ಮೂಲಕ ನನಗೆ ತಿಳಿದಿತ್ತು.

36 comments:

  1. ಎ೦ತಹಾ ಉ೦ಡಾಡೀ ಗು೦ಡನಿಗೂ ಜೀವನದ ಅನಿವಾರ್ಯತೆ ಬುಧ್ಧಿ ಕಲಿಸುತ್ತದೆ...!ಚನ್ನಾಗಿ ಹೇಳಿದ್ದೀರಿ...
    ವ೦ದನೆಗಳು.

    ReplyDelete
  2. ಹಾ,, ಚೆನ್ನಾಗಿ ಇದೆ...ಗುಂಡನ ಕತೆ, ಅಂತು ಅವರು PHD ಮಾಡಿ ಪ್ರೊಫೆಸ್ಸರ್ ಬೇರೆ ಅದರಲ್ಲ

    ReplyDelete
  3. ವಿಆರ್.ಭಟ್ರೇ, ಧನ್ಯವಾದ...ನಾಲ್ಕು ವಿಷಯದ ಪ್ರಸ್ತಾಪ ಮಾಡಲು ಪ್ರಯತ್ನಿಸಿದ್ದೇನೆ ಇಲ್ಲಿ.
    Ragging ಪಿಡುಗಾಗುವ ಸಾಧ್ಯತೆ
    ರೈತ ಮತ್ತು ಸರ್ಕಾರಿ ನೌಕರರ ಸಂಬಂಧ ಹಿಂದೆ, ಇಂದು
    ಜೀವನ ಅತಿ ವಿಲಾಸಿಗೂ ಹೇಗೆ ಪಾಠಕಲಿಸಬಹುದು
    ಹೀಗೆ ....

    ReplyDelete
  4. ಧನ್ಯವಾದ ಚುಕ್ಕಿ ನನ್ನ ಕಥೆಗೆ ತನ್ನದೇ ಚಿತ್ತಾರ ಮೂಡಿಸಿದ್ದಕ್ಕೆ

    ReplyDelete
  5. ಗುರು, ಎಂದಿನಂತೆ ಮರೆಯದೇ ಹಾಕಿದಿರಿ ನಿಮ್ಮ ಪ್ರತಿಕ್ರಿಯೆ, ಧನ್ಯವಾದ

    ReplyDelete
  6. ಹೆಗಲಮೇಲೆ ಜವಾಬ್ದಾರಿ ಬೀಳೋವರೆಗೂ ಗಂಡು ಮಕ್ಕಳಿಗೆ ಬುದ್ದಿ ಬರೋದು ಅಪರೂಪ..ಅದಕ್ಕೆ ನಾನೂ ಒಂದು ಉದಾಹರಣೆಯೇ..! ಗುಂಡನಿಗೆ ಅಂತೂ ಬುದ್ದೀ ಬಂತಲ್ಲ..ಅದೇ ಸಮಾಧಾನ..ಚೆನಾಗಿದೆ ನಿರೂಪಣೆ. ಧನ್ಯವಾದಗಳು

    ReplyDelete
  7. ಉ೦ಡಾಡೀ ಗು೦ಡನ ಕಥೆ ಅಂತ ಓದುತ್ತ ಇದ್ದ ಹಾಗೆ ಗೌಡ್ರು ಪ್ರೊಫೆಸರ್ ಆಗಿರೋದು ಓದಿ ಖುಷಿಯಾಯಿತು....

    ಜೀವನ ಎಂತಹ ಪಾಠ ಕಲಿಸುತ್ತದೆ ಅಲ್ವ...

    ReplyDelete
  8. ಪ್ರತೀ ಬರಹದಲ್ಲೂ ಏನಾದರೊಂದು ನೀತಿಪಾಠ ಹೇಳುತ್ತೀರಲ್ಲ ಸರ್ . ಚೆನ್ನಾಗಿದೆ :)

    ReplyDelete
  9. ಆಝಾದ್ ಭಾಯ್...

    ನಮ್ಮದೇಶದ ಬೆನ್ನೆಲುಬು "ಕೃಷಿ"
    ಇದನ್ನು ನಂಬಿ ರೈತರು ಬದುಕುತ್ತಿದ್ದರು..
    ಈಗ ನಂಬಿಕೆ ಹುಸಿಯಾಗುತ್ತಿದೆ..

    ನಮಗೆ ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳಾದರೂ ರೈತನಿಗೆ ಬೆಳೆದ ಬೆಳೆಗೆ ನ್ಯಾಯವಾದ ಬೆಲೆ ಸಿಗುತ್ತಿಲ್ಲ..
    ಮಧ್ಯವರ್ತಿಗಳು ಶ್ರೀಮಂತರಾಗುತ್ತಿದ್ದಾರೆ..
    ರೈತ ನಂಬಿಕೆ ಕಳೆದುಕೊಂಡು ಬಿಟ್ಟಿದ್ದಾನೆ...

    ನಿಮ್ಮ ಬರವಣಿಗೆ..
    ರೈತ ಪರ ಕಾಳಜಿ ಇಷ್ಟವಾಯಿತು...

    ReplyDelete
  10. ಆಜಾದ್ ಸರ್,
    ನಿಮ್ಮ ಒಂದು ಬರಹ ಒಂದೇ ವಿಷಯ ಹೇಳಲ್ಲ.... ಹಲವಾರು ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತದೆ....... ಜೀವನದಲ್ಲಿ , ಜವಾಬ್ದಾರಿ ಬಂದರೆ 'ಗುಂಡ' ನೂ ಸಹ ಪ್ರೊಫೆಸ್ಸರ್ ಆಗುತ್ತಾನೆ..... ಕೃಷಿಯ ಬೆಳಕು ಚೆಲ್ಲುತ್ತಾ ಅದರ ಬಗ್ಗೆ ಕಾಳಜಿ ತೋರಿಸಿದ್ದೀರಿ......... ರಾಗಿಂಗ್ ಹೇಗಿದ್ದರೆ ಚೆನ್ನ ಎಂದೂ ಹೇಳಿದ್ದೀರಿ...... ಧನ್ಯವಾದ ಸರ್.....

    ReplyDelete
  11. -Struggle for existence
    -Survival of fittest
    -Natural selection
    -elimination of weak
    -exploitation of weak
    -Necessity knows no law. etc
    are the subjects dealt in the short story.
    It is the tragic & magic truth of evolution

    ReplyDelete
  12. ಜಲನಯನ,
    ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ Turning Point ಅನ್ನುವದು ಬಂದೇ ಬರುವದು. ಆ ಸಮಯದಲ್ಲಿ the sinner turns into a saint ಅನ್ನುವ ತತ್ವವನ್ನು ತುಂಬಾ ಚೆನ್ನಾಗಿ, ತಿಳಿಯಾಗಿ ವರ್ಣಿಸಿದ್ದೀರಿ. ಅಭಿನಂದನೆಗಳು.

    ReplyDelete
  13. ಜಲನಯನ ಅವರೆ,
    ವಿಫಲ ವ್ಯಕಿ ಎನಿಸಿಕೊ೦ಡವನೂ ಕೂಡಾ ಜವಾಬ್ದಾರಿ ಅರಿತಲ್ಲಿ ಸರಿಯಾದ, ಜವಾಬ್ದಾರಿಯುತ ವ್ಯಕ್ತಿ ಆಗಬಹುದು ಎ೦ಬ ನೈಜ ಉದಾಹಾರಣೆ ತಿಳಿಸಿದ್ದೀರಿ.
    ಬರಹ ..ಎ೦ದಿನ೦ತೆ ಸ್ವಾರಸ್ಯಮಯ..
    ಧನ್ಯವಾದಗಳು.

    ReplyDelete
  14. ಆಜಾದ್,

    ಗುಂಡನ ಕತೆ ಓದಿ ನಗು ಬಂತು. ಬದುಕು ಎಂಥವರಿಗೂ ಪಾಠ ಕಲಿಸುತ್ತದೆ ಎನ್ನುವುದು ಗೊತ್ತಾಗುತ್ತದಲ್ವಾ....ಜವಾಬ್ದಾರಿ ಎನ್ನುವುದು ಎಂಥವರನ್ನು ಸರಿದಾರಿಗೆ ತರುತ್ತದೆ ಅನ್ನುವುದಕ್ಕೆ ಗುಂಡ ಪ್ರೊಪೆಸರ್ ಆಗುವುದೇ ಸಾಕ್ಷಿ. ಬರವಣಿಗೆಯಲ್ಲಿ ಕೃಷಿಪರ ಕಾಳಜಿ ತೋರುತ್ತದೆ.

    ಧನ್ಯವಾದಗಳು.

    ReplyDelete
  15. ಸುಬ್ರಮಣ್ಯ ಭಟ್ ಸರ್, ಇದು ನನ್ನ ವಿಷಯದಲ್ಲೂ ನಿಜವಾಗಿದೆ..ಉಂಡಾಡಿಯಾಗಿರಲಿಲ್ಲ ಆದ್ರೂ ನನ್ನ professional degree ನೇ ದೊಡ್ಡದು ಇನ್ನು ಇದರಲ್ಲಿ ಪಿ.ಜಿ. ಪಿ.ಎಚ್.ಡಿ, ಎಲ್ಲ ಯಾಕೆ ಎಂದೇ ಗುಣಕ್ಕೆ ಬೆಲೆಕೊಡದೇ ಮೂರನೇ ವರ್ಷದ ಕಡೆಗೇ ಗೊತ್ತಾದದ್ದು ಗುಣಮಟ್ಟದ ಓದು ಎಂದಿಗೂ ತನ್ನದೇ ಮೌಲ್ಯ ಹೊಂದಿರುತ್ತದೆ ಎಂದು. ಅಲ್ಲಿಂದಲೇ ನನ್ನ ಶಕ್ತಿಮೀರಿ ಪ್ರಯತ್ನಿಸಿ ಪಿ.ಜಿ.ಗೆ all India Fellowship exam ನಲ್ಲಿ ಉತ್ತೀರ್ಣನಾಗಿ ಪಿ.ಜಿ. ಮಾಡಿದೆ ಅದೇ ನನ್ನ ಮುಂದಿನ ಯಶಸ್ಸಿಗೆ ಕಾರಣವಾಯಿತು.

    ReplyDelete
  16. ಮಹೇಶ್ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...ಉಂಡಾಡಿಯಾದರೂ ಎಚ್ಚೆತ್ತುಕೊಂಡದ್ದು ಸಕಾಲಿಕ ಅದಕ್ಕೇ ಗುಂದ ಉದ್ಧಾರವಾದ

    ReplyDelete
  17. ಸುಮ, ನೀತಿಪಾಠ ನನಗೂ ಜೀವನ ಕಲಿಸಿದೆ, ಅದನ್ನೇ ಒಂದು ನಿದರ್ಶನ ವಾಗಲಿ ನಮ್ಮ ಉದಯೋನ್ಮುಖ ಯುವ ಜನತೆಗೆ ಎನ್ನುವ ಉದ್ದೇಶ ನನ್ನದು. ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  18. ಪ್ರಕಾಶ್, ನಿಮ್ಮ ವ್ಯಸ್ತತೆ ನಡುವೆಯೂ ಜಲನಯನದ ಅಂಗಳಕ್ಕೆ ಬಂದು ನಿಮ್ಮ ಅನಿಸಿಕೆಯಲ್ಲದೇ ಪೂರಕ ವಿಷಯಗಳನ್ನೂ ಮುಂದಿಟ್ಟು ಲೇಖನದ ವ್ಯಾಪ್ತಿಯನ್ನು ಹೆಚ್ಚಿಸಿತ್ತೀರಿ..ಧನ್ಯವಾದ ಎನ್ನಲೇ..? ನಮನ.

    ReplyDelete
  19. ದಿನಕರ್, ಇದು ನನ್ನ ಲೇಖನವನ್ನು ಕೂಲಂಕುಶವಾಗಿ ಒದಿ ವಿಶ್ಲೇಷಿಸುವ ಮತ್ತು ಪ್ರೋತ್ಸಾಹದ ಎರಡು ವಾಕ್ಯ ಹಾಕುವ ನಿಮ್ಮ ಮನೋಭಾವಕ್ಕೆ ಅನುಗುಣವಾಗಿದೆ. ಧನ್ಯವಾದ ನನ್ನ ಲೇಖ್ನಕ್ಕೆ ದಿಕ್ಕುಗಳ ಸ್ಪಷ್ಠತೆಯನ್ನು ನೀಡಿದ್ದಕಾಗಿ.

    ReplyDelete
  20. ಸೀತಾರಂ ಸರ್, ಬಹಳ ಚೆನ್ನಾಗಿ ನನ್ನ ಲೇಖನವನ್ನ ಬುಲೆಟ್ ಗಳಲ್ಲಿ ಸಂಕ್ಷಿಪ್ತವಾಗಿ ಆದರೂ ಬಹಳ ವೈಶಾಲ್ಯತೆಯಲ್ಲಿ ತಿಳಿಸಿದ್ದೀರ. ಧನ್ಯವಾದ

    ReplyDelete
  21. ಸುನಾಥ್ ಸರ್, ನಿಮ್ಮ ಮಾತು ನಿಜ...ಎಂಥ ನಿಜ..sinner turns into a saint, ಇದೇ ಕಾರಣದಿಂದಲ್ಲವೇ ವಾಲ್ಮಿಕಿ ರಾಮಾಯಣ ರಚಿಸಿದ್ದು...ಧನ್ಯವಾದ ಸಾರ್ ನಿಮ್ಮ ಅಂಕಿತಕ್ಕೆ

    ReplyDelete
  22. ಮನಮುಕ್ತಾರವರೇ, ವ್ಯಕ್ತಿ ವಿಫಲನಾಗುವುದು ಅವನ ಕರ್ಮಗಳಿಂದ..mould can make a master piece art and a sharp killer sword, ಅಲ್ಲವೇ? ಧನ್ಯವಾದ.

    ReplyDelete
  23. ಅಜ್ಹಾದ ಸರ್
    ಬದುಕು ಎಂಥವನಿಗೂ ಪಾಠ ಕಲಿಸುತ್ತದೆ ಆಲ್ವಾ
    ಸುಂದರ ಲೇಖನ

    ReplyDelete
  24. ಶಿವು, ಹೌದು ಜವಾಬ್ದಾರಿ ಬಂದರೆ..ದಾರಿ ಹುಡುಕುತ್ತೇವೆ..ಅಂತ.. ಹಾಗೇ..ನನಗೆ ಕೃಷಿಯ ಬಗ್ಗೆ ಸಖ್ಯ ಮತ್ತು ಪ್ರಿಯವಾದ ವಿಷಯವಾಗಲು ಕಾರಣ ನನ್ನ ತಂದೆ ಕೃಷಿಕನಾಗಿದ್ದ ದಿನಗಳು, ಹಾಗೇ ನಾನು ಓದಿದ್ದು ಕೃಷಿ ವಿಶ್ವ ವಿದ್ಯಾಲಯದಲ್ಲಿ..ಆ ಕಾರಣ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

    ReplyDelete
  25. ಡಾ. ಗುರುಮೂರ್ತಿ...ಧನ್ಯವಾದ..ನಿಮ್ಮ ಪ್ರತಿಕ್ರಿಯೆಗೆ..ನಿಜ ಬದುಕು ಕಲಿಸುವ ಪಾಠ ಎಲ್ಲಕ್ಕಿಂತ ದೊಡ್ಡದು.

    ReplyDelete
  26. 'ಜಲನಯನ' ಅವರೇ..,

    ಮಂಡ್ಯ ಗೌಡರ ಜೊತೆ ನಿಮ್ಮ ಅನುಭವ ಚೆನ್ನ..

    ನನ್ನಣ್ಣ ಈಗ ವಿ.ಸಿ.ಫಾರಂ ನಲ್ಲಿ ಓದ್ತಾ ಇದ್ದಾನೆ..

    ನನ್ನ 'ಮನಸಿನಮನೆ'ಗೆ...:http//manasinamane.blogspot.com

    ReplyDelete
  27. F.M. ನಲ್ಲಿ ಒಂದು ಹಾಡು ಬರ್ತಾ ಇದೆ ಈಗ ’ನೆನಪುಗಳ ಮಾತು ಮಧುರ...’ ಅಂತ. ಚೆನ್ನಾಗಿದೆ ಗುಂಡನ ಕಹಾನಿ

    ಅಬ್ಬ!! ಸುಮಾರು ದಿನಗಳಾದ ಮೇಲೆ ಬರ್ತಾ ಇದ್ದೀನಿ ನಿಮ್ಮ ಬ್ಲಾಗ್ ಗೆ. ಎಷ್ಟೊಂದು ಹೊಸ post ಗಳನ್ನು ಹಾಕಿದ್ದೀರಾ?
    ಇರಲಿ ಪುರುಸೊತ್ತಲ್ಲಿ ಓದ್ತೇನೆ.thanks for the comments
    :-)
    ಮಾಲತಿ ಎಸ್.

    ReplyDelete
  28. ಜಲನಯನ ಅವರೇ ನೀವು ವಿ ಸಿ ಫಾರ್ಮ್ ಲ್ಲಿ ಯಾವ ವರ್ಷ ಇದ್ದಿರಿ. ನಮ್ಮ ತಂದೆ ಅಲ್ಲೇ ಕೆಲಸ ಮಾಡ್ತಿದ್ದರು.

    ReplyDelete
  29. ಗುರುದೆಸೆ, ಹೌದಾ ನಿಮ್ಮಣ್ಣ ಯಾವ ಕೋರ್ಸು ಮಾಡ್ತಿರೋದು..? ಅವರಿಗೆ ಶುಭಕೋರ್ತೇನೆ..ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.

    ReplyDelete
  30. ಮಾಲತಿಯವರೇ, ನಿಮ್ಮ ಅಪರೂಪದರ್ಶನಕ್ಕೆ ಮತ್ತು ಪ್ರತಿಕೆಯೆಗೆ..ಎರಡಕ್ಕೂ ಧನ್ಯವಾದ..
    ಹಾಡು..ಹಳೆಯದಾದರೇನು..ಭಾವ ನವ ನವೀನ..?
    ಏನಂತೀರಿ?

    ReplyDelete
  31. ಉಷಾ, ನಿಮ್ಮ ತಂದೆಯವರು..ವಿ.ಸಿ.ಫಾರಂ ನಲ್ಲಿ ಕೆಲಸ ಮಾಡಿದ್ರಾ? ನಾನು 1984 -1986 ರಲ್ಲಿ Regional Research Station ನಲ್ಲಿದ್ದೆ...
    ನನ್ನ ಬ್ಲಾಗಿಗೆ ಬಮ್ದು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ...ನನ್ನ mail ID ಮೇಲೆ ನಿಮ್ಮ ತಂದೆಯವರ ಬಗ್ಗೆ ತಿಳಿಸಿ...azadis@hotmail.com

    ReplyDelete
  32. ಜಲನಯನ ಸಾರ್ , ತುಂಬ ದೊಡ್ಡ ವಿಷಯಗಳನ್ನ ಅತ್ಯಂತ ಸರಳವಾಗಿ ಹೇಳಿದಿರಾ. ಜೀವನಪರ್ಯಂತ ಅರ್ಥವಾಗದ್ದು ಕೆಲವೊಮ್ಮೆ ಒಂದು ಘಟನೆ ಅಥವ ವಿಷಯ ಬದಲಾಯಿಸಿ ಬೀಡುತ್ತದೆ ಅನ್ನುವದು ನಿಜ. ಕೊನೆಗೂ ಗುಂಡನವರು ಬದುಕಿನ ಮೌಲ್ಯ ಅರ್ಥ ಮಾಡಿಕೊಂಡರಲ್ಲ ಅಸ್ಟು ಸಾಕ ಬಿಡಿ. ಜೀವನದಲ್ಲಿ ಎದುರಿಸಿದ , ಕಣ್ಣಿಗೆ ಕಾಣುವ ಸಂಗತಿಗಳನ್ನ ತುಂಬಾ ಸರಳವಾಗಿ ಹೇಳುವ ನಿಮ್ಮ ಶೈಲಿ ಇಷ್ಟವಾಯಿತು . ಹೀಗೆ ಬರೀತಾ ಇರಿ .

    ReplyDelete
  33. ಮನಸಾರೆ ಹೇಳ್ತೇನೆ ಧನ್ಯವಾದ, ಮನಸಾರೆಯವರೇ, ನನ್ನ ಮನಸಾರೆ ಬರೀಬೇಕು ಅನ್ನೋದನ್ನ ಯೋಚಿಸಿ ಬರ್ದಿದ್ದಕ್ಕೆ ಮನಸಾರೆ ಮೆಚ್ಚುವ ಪ್ರತಿಕ್ರಿಯೆಗಳು. ಹೌದು, ಜೀವನ ಕಲಿಸುವ ಪಾಠಕ್ಕೆ ಎಣೆಯಿಲ್ಲ..ದೇವರೇ ಇಲ್ಲ ಎನ್ನುವ ನಾಸ್ತಿಕನೂ ದೇವರನ್ನು ನಂಬುವಂಥ ಪಾಠವೂ ಕಲಿಸುತ್ತೆ ಜೀವನ...

    ReplyDelete
  34. ಕಥೆ ಚೆನ್ನಾಗಿದೆ... ಉಂಡಾಡಿ ಗುಂಡ ಕೊನೆಗೂ ಸರಿಯಾಡ್ನಲ್ಲ.. ಅಷ್ಟೇ ಸಂತೋಷ..:-)

    ReplyDelete
  35. ಧನ್ಯವಾದ ರವಿಕಾಂತರೇ ..ಉಂಡಾಡಿ ಆಗ ಈಗ ಗುಂಡ ಪ್ರೊಫೆಸರ್..ಏನಂತೀರಿ...? ಮನಸ್ಸಿದ್ದರೆ ಮಾರ್ಗ ಅಲ್ಲವೇ?

    ReplyDelete