Thursday, February 11, 2010

ಹಳ್ಳಿಯಾದರೇನು, ಡೆಲ್ಲಿಯಾದರೇನು ?


(ಚಿತ್ರಕೃಪೆ: ಅಂತರ್ಜಾಲ)
(ನನ್ನ ಮಿತ್ರ ರೆಲ್ಲರಿಗೆ ಶಿವರಾತ್ರಿಯ ಶುಭಕಾಮನೆಗಳು)
ಕ್ಷೀರ ಸಾಗರ ಮಂಥನ, ಎಂಥ ಚಿಂತನ?
ಮನದ ದುಗುಡಗಳ ನಿರಂತರ ಕದನ
ನಿನ್ನ-ಅವಳ, ನಿಮ್ಮ-ಮನೆಯವರ
ನಿನ್ನಮನೆ ಮನಗಳ-ಊರ ಮನದಂಗಳ
ನಿನ್ನ ಧರ್ಮ-ಪರ ಧರ್ಮ ಯಾಕೀ ಕರ್ಮ?
ನಿನ್ನಲ್ಲಿ ನೀನೇ ಹುಟ್ಟಿಸಿ ಬೆಳೆದು
ಎಲ್ಲೆಡೆ ಹರಿಸಿ ಸಲ್ಲ ಜಗವನೇ ಹಳಿದು
ಕೊನೆಯಾಗಲಿ ಚಿರವಾಗಲಿ ಮನು ಧರ್ಮ
ಅಂದು ಸುರಾಸುರ ಮನು ಕಲ್ಯಾಣಕೆ
ಕುಡಿದ ಶಿವ ಹಾಲಾಹಲವ ವಿಷಕಂಠನಾದ
ಬೂಟಾಟಿಕೆ ತೋರುವರು ಶಿವನ ಪೂಜೆ ಮಾಡಿ
ಕಾಟಾಚಾರ, ಢಾಂಬಿಕರು ಸಮಾಜವ ಕಾಡಿ
ಸುಡುವರು ಆಸ್ತಿ, ಕೋಲಾಹಲವೇ ಪೂಜೆ
ತಿಳಿಯದೇ ಕೊನೆಗಿದು ಬಡವನಿಗೇ ಆಗುವ ಸಜೆ?
ಲಯಕ್ಕೆ ಶಿವನ ಹೆಸರು ಕೊಟ್ಟವನು ನೀನಲ್ಲವೇ?
ನಿನಗೆ ಬೇಕು ನೆವ ಅವನ ಹೆಸರಲಿ ಮುಗ್ಧರ ಕಾಡಲಿಲ್ಲವೇ?
ಬಿಡು ಮಾನವ ಸ್ವಾರ್ಥವ, ಕಲಿ ಪಾರಮಾರ್ಥವ
ಮನೆ ಮನ ಸಮಾಜ ದೀನ ದಲಿತಂಗೆ ಆಗು ಪರಮಶಿವ
ಇದಲ್ಲವೇ ನಿನ್ನ ದೇವನೊಲಿಸಿಕೊಳ್ಳುವರೀತಿ?
ಮರೆತು ಕೋಲಾಹಲ, ಕಾದಾಟ ಕಾಡುವ ನೀತಿ.

44 comments:

  1. ಆಜಾದ್ ಸರ್,
    ಸಮಯೋಚಿತ ಕವನ.... ಟೊಳ್ಳು ಭಕ್ತಿಯ ಬಗ್ಗೆ ಹೇಳಿದ್ದೀರಿ.....
    ಸುಡುವರು ಆಸ್ತಿ, ಕೋಲಾಹಲವೇ ಪೂಜೆ
    ತಿಳಿಯದೇ ಕೊನೆಗಿದು ಬಡವನಿಗೇ ಆಗುವ ಸಜೆ?
    ಲಯಕ್ಕೆ ಶಿವನ ಹೆಸರು ಕೊಟ್ಟವನು ನೀನಲ್ಲವೇ?
    ನಿನಗೆ ಬೇಕು ನೆವ ಅವನ ಹೆಸರಲಿ ಮುಗ್ಧರ ಕಾಡಲಿಲ್ಲವೇ?
    ಬಿಡು ಮಾನವ ಸ್ವಾರ್ಥವ, ಕಲಿ ಪಾರಮಾರ್ಥವ
    ಮನೆ ಮನ ಸಮಾಜ ದೀನ ದಲಿತಂಗೆ ಆಗು ಪರಮಶಿವ
    ಮೇಲಿನ ಸಾಲುಗಳಂತೂ ಸೂಪರ್....

    ReplyDelete
  2. ಸುಂದರ ಸಂದೇಶವನ್ನು ನೀಡುವ ಕವನ ಚೆನ್ನಾಗಿದೆ. ‘ಶಿವ’ ಎಂದರೆ ‘ಮಂಗಳ’ ಎಂದರ್ಥ. ಈಶ್ವರನನ್ನು ಭಕ್ತಿಯಿಂದ ಪೂಜಿಸುವವರ ಮನಸೂ ಬದುಕೂ ಮಂಗಳಕರವಾಗಿರುತ್ತದೆ.

    ಎಲ್ಲರಿಗೂ ಮಹಾ ಶಿವರಾತ್ರಿಯ ಹಾರ್ದಿಕ ಶುಭಾಶಯಗಳು.

    ನಿಮಗೂ ಕೂಡ.

    ReplyDelete
  3. dhanyavaadagaLu, olleya kavana tumba chennagide

    ReplyDelete
  4. ಅಜ್ಹಾದ್ ಸರ್
    ಒಳ್ಳೆಯ ಸಮಯೋಚಿತ ಕವನ
    ಶಿವರಾತ್ರಿಯ ಸಂಧರ್ಭದಲ್ಲಿ ಇಂಥಹ ಕವನ ಬರೆದಿರುವುದು ಕವನದ ಶೋಭೆ ಹೆಚ್ಚಿಸಿದೆ
    ನಿಮ್ಮ ಶುಭ ಹಾರೈಕೆಗೆ ಧನ್ಯವಾದಗಳು

    ReplyDelete
  5. Sir,
    kavana tumba chennagide.
    satyam shivam sundarm - edu nana mechchina nudi.
    nanna blog nalli nodi, neevu helida haage poorti kannada dalli bardidni ondu lekhanana :)...hegide heli.

    ReplyDelete
  6. ದಿನಕರ್, ಎಲ್ಲರಿಗೂ ಶಿವರಾತ್ರಿ ಶುಭಾಷಯ ಕಳಿಸ್ಬೇಕು ಅಂದ್ಕೊಂಡೆ..ಕವನದ ಮೂಲಕ ಆಗ್ಲಿ ಅಂತ ಈ ಪ್ರಯತ್ನ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.

    ReplyDelete
  7. ತೇಜಸ್ವಿನಿ, ಶಿವ-ಮಂಗಳಗಳ ಮಧ್ಯೆ ಹೆಂಡಕುಡಿದ ಮಂಗಗಳು ಹರಿದಾಡಿ ಎಲ್ಲವನ್ನೂ ಅಸಹ್ಯ ಮಾಡುತಿವೆ..ಈ ಸಮಯದಲ್ಲಾದರೂ ಆ ಮಂಗಳ ಮೂರುತಿ ಇವರಿಗೆ ಸನ್ಮತಿಕೊಡಲಿ ಎಂದು ಆಶಿಸೋಣವೇ?

    ReplyDelete
  8. ಮನಸು ಮೇಡಂ, ಶಿವರಾತ್ರಿ ಹೇಗೆ ನಡೆದಿದೆ..? ರಾತ್ರಿಗೆ ಜಾಗರಣೆಗೆ ಹೊಸ ಅರ್ಥ ಸಿಗುತ್ತೆ ನಿಮಗೆ ಈ ರಾತ್ರಿ...ಮರಳ ಮಲ್ಲಿಗೆಯ ರೂಪ ತಿದ್ದುವಲ್ಲಿ ಎಲ್ಲವೇ..? ನಿಮ್ಮೆಲ್ಲರಿಗೆ ಶುಭಕಾಮನೆಗಳು

    ReplyDelete
  9. ಡಾ. ಗುರುಮೂರ್ತಿ ನಿಮಗೆ ನಿಮ್ಮ ಕುಟುಂಬ ವರ್ಗಕ್ಕೆ ಮಹಾಶಿವರಾತ್ರಿ ಶುಭ ಮಂಗಳವನ್ನುಂಟುಮಾಡಲಿ ಎಂದು ಹಾರೈಸುತ್ತೇನೆ, ನಿಮ್ಮ ಪ್ರೋತ್ಸಾಹಕ ಮಾತಿಗೆ ನನ್ನಿ...

    ReplyDelete
  10. ಶ್ವೇತ, ಸುಸ್ವಾಗತ ಜಲನಯನಕ್ಕೆ, ಮನದಾಳಕ್ಕೆ, ಭಾವನದಲೆಮೇಲೆ ತೇಲುವ ಪಯಣಿಗರ ಕೂಟಕ್ಕೆ...
    ಸತ್ಯಂ ಶಿವಂ ಸುಂದರಂ...ನಿಜ...ಹಾಗೆ ಆಚರಣೆ ನಮ್ಮದಾದರೆ...ಅಲ್ಲವೇ..? ಧನ್ಯವಾದ ನಿಮ್ಮ ಭೇಟಿಗೆ..ಕಾಮೆಂಟಿಗೆ..ನಿಮ್ಮಲ್ಲಿಗೂ ಬರುತ್ತೇನೆ..ಈ ವರೆಗೂ ಬರದೇ ಇದ್ದರೆ..ಕ್ಷಮಿಸಿ...

    ReplyDelete
  11. ನಿಮಗೂ ಶಿವರಾತ್ರಿಯ ಶುಭಾಷಯಗಳು . ಸುಂದರ ಕವನ ಚೆನ್ನಾಗಿದೆ ರೀ.

    ReplyDelete
  12. ಸಾಗರಮಂಥನದ ಸೊಗಸಾದ ವಿವರಣೆ. ಶಿವರಾತ್ರಿಯ ಶುಭಾಶಯಗಳು.

    ReplyDelete
  13. ತಮ್ಮ ಕವನದಲ್ಲಿ ಅಡಕವಾದ ತತ್ವ ತುಂಬಾ ಹಿಡಿಸಿತು ! ಧನ್ಯವಾದಗಳು

    ReplyDelete
  14. ಆಜಾದ ಸರ್, ಶಿವರಾತ್ರಿ ಹಬ್ಬದ ಶುಭಾಶಯಗಳನ್ನ ತುಂಬಾ different ಆಗಿ ಹಾಗು ಒಳ್ಳೆಯ ಸಂದೇಶದ ಮೂಲಕ ಹೇಳಿದಿರಾ . ತುಂಬಾ ಅರ್ಥಗರ್ಬಿತ ಹಾಗೂ ಮಾನವನ ಒಣ ಬೂಟಾಟಿಕೆ , ಸ್ವಾರ್ಥ್ ತ್ಯಜಿಸಿ ನಿಜವಾದ ರೀತಿಯಲಿ ಶಿವಚರಣೆ ಮಾಡೋಕೆ ಸಂದೇಶ್ ಕೊಟ್ಟಿದಂತು ಅದ್ಭುತವಾಗಿ ಕವನದಲ್ಲಿ ಮೂಡಿಬಂದಿದೆ.

    ReplyDelete
  15. ಸು೦ದರ ಸಾಲುಗಳಲ್ಲಿ ..ಸೊಗಸಾದ ಸ೦ದೇಶ..
    ಧನ್ಯವಾದಗಳು.

    ReplyDelete
  16. ಸತ್ವಯುತ, ಸಾತ್ವಿಕ, ಸುಂದರ ಕವನ ಕೊಟ್ಟ ನಿಮಗೆ ಕೃತಜ್ಞತೆಗಳು. ಶಿವರಾತ್ರಿಯು ಸರ್ವರಿಗೂ ಸನ್ಮಂಗಳವನ್ನು ತರಲಿ.

    ReplyDelete
  17. ಭಾವಮ೦ಥನದಲ್ಲೊ೦ದು....
    ಸಮುದ್ರ ಮಥನ...
    ಸು೦ದರ ಸ೦ದೇಶ.....
    ಶಿವರಾತ್ರಿ ವಿಶೇಷ....

    ReplyDelete
  18. ಸುನಾಥ ಸರ್, ಸಾಗರ ಮಂಥನದಲ್ಲಿ ಶಿವನ ಪಾತ್ರ, ಕಣ್ಣಪ್ಪ ಕೊಟ್ಟ ಮಾಂಸವನ್ನೇ ಮಹಾಪ್ರಸಾದವೆಂದು ಸ್ವೀಕರಿಸಿದ ಶಿವ, ಇವೆಲ್ಲ ಸೋಗಿನಲ್ಲಿ ಮೆರೆವವರಿಗೆ ಕಾಣೋಲ್ಲ...ಕೇವಲ ಅವನು ಲಯಕರ್ತ..ಅವನ್ನ ಪೂಜಿಸೋ ನಾವು ಎದುರಾದವರನ್ನು ಕೊಚ್ಚಬೇಕು ಎನ್ನುವುದು..ಕೇವಲ ಮೂರ್ಖತನ ಮತ್ತು ಭಂಡತನ. ಧನ್ಯವಾದ ನಿಮ್ಮ ಟಾನಿಕ್ಕಿಗೆ.

    ReplyDelete
  19. ಶಶಿ, ಧನ್ಯವಾದ..ನಿಮಗೂ ಶುಭಾಷಯಗಳು

    ReplyDelete
  20. ವಿಆರ್ ಭಟ್, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ..ತತ್ವಪಾಲನೆ ಯಾವುದೇ ಧರ್ಮದ ಮೂಲದ್ದು, ಕಾಲುಭಾಗವಾದರೂ ನಮ್ಮಲ್ಲಿ ಈ ಆರಾಜಕತೆ ಇರುತ್ತಿರಲಿಲ್ಲ ಅಲ್ಲವೇ?

    ReplyDelete
  21. ಮನಸಾರೆ ಧನ್ಯವಾದ, ನಮ್ಮ ನಡುವಿನ ಚಿಕ್ಕ ಗೊಂದಲ ತಿಳಿಯಾಯಿತು ಎನ್ನಲೇ, ಧನ್ಯವಾದ...ನಿಮ್ಮ ಮನಸಾರೆ ಮಾತಿಗೆ ಮತ್ತು ಪ್ರತಿಕ್ರಿಯೆಗೆ.

    ReplyDelete
  22. ಮನಮುಕ್ತಾ..ನಿಮ್ಮ ಮತ್ತು ಮನಸಾರೆ ಪ್ರತಿಕ್ರಿಯೆಗಳು ಜೊತೆ-ಜೊತೆ...ಎರ್ಡೂ ಮನಕ್ಕೆ ಸಂಬಂಧಿಸಿದ್ದು...ಹಹಹ...ಧನ್ಯವಾದ, ನಿಮಗೆ.

    ReplyDelete
  23. ನಾರಾಯಣ್ ಭಟ್ ಸರ್, ಹೇಗಿತ್ತು ಶಿವರಾತ್ರಿಯ ಜಾಗರಣೆ...ಶುಭದಿನ ನಿಮ್ಮ ಶುಭ ಪ್ರತಿಕ್ರಿಯೆಗೆ ನನ್ನ ಧನ್ಯವಾದ ಪೂರಕ ಶುಭಾಷಯ.

    ReplyDelete
  24. ಚುಕ್ಕಿಚಿತ್ತಾರದ ಪ್ರತಿಕ್ರಿಯೆಗೆ ಧನ್ಯವಾದ, ಸಮುದ್ರ ಮಂಥನಕ್ಕೂ ಶಿವನಿಗೂ ನೇರ ಸಂಬಂಧದಕಾರಣ ಪ್ರಸ್ತಾಪ ಮಾಡಬೇಕಾಯಿತು.

    ReplyDelete
  25. ಸೀತಾರಾಂ ಸರ್, ನಿಮ್ಮ ಕವನ ನೋಡಿದೆ...ಜಲಚಕ್ರ ಚನ್ನಾಗಿದೆ...ಹಾಗೆಯೇ ಮಾನವ ಚಕ್ರ ನಿರಾತಂಕವಾಗಬೇಕಾದರೆ ಮಾನವನಲ್ಲಿ ಸಾಮರಸ್ಯ ಅಗತ್ಯ ಅಲ್ಲವೇ? ಧನ್ಯವಾದ

    ReplyDelete
  26. ಶಿವರಾತ್ರಿ ಹಾರೈಕೆಯೇ ನಿಮ್ಮ ಕವನದ ವಿಶೇಷ...
    ಸದಾಶಯಗಳು ಹೀಗೆ ನಿಮ್ಮಿಂದ ಬರುತ್ತಿರಲಿ..ಮಂಥನವಾಗುತ್ತಿರಲಿ...ಧನ್ಯವಾದಗಳು

    ReplyDelete
  27. ಅಜಾದ್,

    ಶಿವರಾತ್ರಿಯ ಶುಭಕಾಮನೆಗಳು. ಅದರ ಪ್ರಯುಕ್ತ ನಿಮ್ಮ ಕವನ ಇಂದಿನ ಸುಳ್ಳು ಭಕ್ತಿ, ಬಡವನ ಬೇಗೆಗಳು....ಇತ್ಯಾದಿಗಳ ಮೇಲೆ ಬೆಳಕುಚೆಲ್ಲುತ್ತದೆ..
    ಮುಂದುವರಿಯಲಿ.

    ReplyDelete
  28. ಸುಬ್ರಮಣ್ಯ ಸರ್, ಧನ್ಯವಾದ...ಹೇಗಾಯ್ತು ಶಿವರಾತ್ರಿ? ನಿಮ್ಮ ಪ್ರೋತ್ಸಾಹ ನಮ್ಮನ್ನು ಇನ್ನೂ ಹುಮ್ಮಸ್ಸಿನಿಂದ ಮುನ್ನಡೆಯಲು ಸಹಾಯಕ.

    ReplyDelete
  29. ಶಿವು, ಮತ್ತೊಮ್ಮೆ ಶಿವರಾತ್ರಿ ಶುಭಕಾಮನೆಗಳು. ಹೇಗಿತ್ತು ಜಾಗರಣೆ? ನಮ್ಮ ಬೇಗೆ ಬವಣೆಗೆ ಕೊನೆ..ಗೊತ್ತಿಲ್ಲ? ಪ್ರಯತ್ನ ವಿವಿಧ ರೂಪದಲ್ಲಿ ಬಂದಷ್ಟೂ ಜನಜಾಗೃತಿ ಹೆಚ್ಚಾಗುತ್ತೆ,

    ReplyDelete
  30. ಜಲನಯನ್ ಸಾರ್ , ನಮ್ಮ ನಡುವೆ ಚಿಕ್ಕ ಗೊಂದಲವೇ ? ಅದೇನೋ ಗೊತ್ತಾಗಲಿಲ್ಲ ಸಾರ್ . ನೀವು ಸ್ವಲ್ಪ confuse ಮಾಡ್ಕೊಂದಿರ ಅನ್ನಿಸುತ್ತೆ .

    ReplyDelete
  31. ಆಜಾದ್ ಸರ್, ಅರ್ಥಗರ್ಬಿತ ಕವನ. ಆಚರಣೆಯ ಅರ್ಥವೇ ಗೊತ್ತಿಲ್ಲದೆ ಬೂಟಾಟಿಕೆಯ ಭಕ್ತಿಯೇ ಈಗ ಹೆಚ್ಚಾಗಿದೆ

    ReplyDelete
  32. ಮನಸಾರೆಯವರೇ.....ಈಗ ನನಗೆ ಖಚಿತ ಆಯ್ತು ಯಾವ್ದೇ ಗೊಂದಲ ಇಲ್ಲ ಅಂತ...ಹಹಹ...

    ReplyDelete
  33. ದೀಪಸ್ಮಿತಾ ಶಿವರಾತ್ರಿ, ರಾಮನವಮಿ ಯಾವ್ದೂ ನಮ್ಮಲ್ಲಿ ಗಲಾಟೆ, ಆತಂಕ ಹುಟ್ಟಿಸುವ ಯಾವುದೇ ಸಂಸ್ಕೃತಿಯನ್ನು ಕಲಿಸಿಲ್ಲ.....ಪ್ರೇಮದ ಹೆಸರಲ್ಲೂ ಈ ಮಧ್ಯೆ ಗಲಭೆ ಹುಟ್ಟಿಸುತ್ತಿರುವುದು...ಕೆಲವರ ಕಸುಬಾಗಿದೆ.....

    ReplyDelete
  34. Thanks Kirti
    Good for people?? Goop meaning??

    ReplyDelete
  35. ಸೂಪರ್ ಭೈಯ .. tumba chennagide

    ReplyDelete
  36. wow tumba artha garbhita kavana
    aa shivanu olleyadannu maadali

    ReplyDelete
  37. 'ಜಲನಯನ' ಅವ್ರೆ..,

    ವಿಚಾರಧಾರೆಯ ಕವನವಿದು...

    ನನ್ನ 'ಮನಸಿನಮನೆ'ಗೆ ಬನ್ನಿ:http//manasinamane.blogspot.com

    ReplyDelete
  38. ರಂಜು, ಥ್ಯಾಂಕ್ಸ್...ನಿಮ್ಮ ಪ್ರತಿಕ್ರಿಯೆಗೆ..ಹೇಗಿತ್ತು ನಿಮ್ಮ ಶಿವರಾತ್ರಿ ಆಚರಣೆ?

    ReplyDelete
  39. ದಿವ್ಯಾ, ಗೂಡಿಗೆ ಬಂದ ಅತಿಥಿಗೆ ಮತ್ತು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ..ಶಿವರಾತ್ರಿಯ ಶುಭ ವರ್ಷವಿಡೀ ಹರಡಲಿ.

    ReplyDelete
  40. ಗುರುದೆಸೆಯ ದೆಸೆ ಶಿವರಾತ್ರಿಯಿಂದ ಉಜ್ವಲವಾಗಲಿ ಎಂದು ಹಾರೈಕೆ...ಧನ್ಯವಾದ ಪ್ರತಿಕ್ರಿಯೆಗೆ.

    ReplyDelete
  41. ಚೆನ್ನಾಗಿದೆ ಸಾರ್..

    ReplyDelete