Tuesday, February 16, 2010

ಕನಸಿನರಸಿಯನರಸಿ


(ಚಿತ್ರ ಕೃಪೆ: ಅಂತರ್ಜಾಲ)

ಮಿತ್ರರೇ, ನನ್ನ ಆತ್ಮೀಯರು ಕೆಲವರು ನನ್ನಿಂದ ಅಪೇಕ್ಷಿಸಿದಂತಹ ಹೊಸ ಅಲೆ ಇಲ್ಲಿ ಎದ್ದುಬರುವಂತಾಗಿದೆಯೋ ಇಲ್ಲವೋ ತಿಳಿಯದು...ಪ್ರಯತ್ನ ನನ್ನದು..ಪ್ರತಿಕ್ರಿಯೆ ನಿಮ್ಮದು...


ಕನಸಿನರಸಿಯನರಸಿ
ನಿನ್ನೊಲವಿನಲಿವಿನಲಿ
ವಿಲವಿಲವಾಯಿತೆನ್ನೆದೆ
ಲವಲವಿಕೆಯನೆಡಹಿ ಕೆಡಹಿದೆ
ಹುಸಿಮುನಿಸಿನಂದ
ಚಂದವದನವನಾವರಿಸಿ- ಹೆಚ್ಚಿಸಿ
ನಿನ್ನವದನಾರವಿಂದದಂದ
ಚೆಲುವೆ ಸೋಲಿಸಿ ನೋಟದಿ
ಗೆಲುವಿನೋಟದೋರೆಗಣ್ಣು
ಹುಬ್ಬಿನಂಬಿಗೆ ನೋಟ-ಬಾಣ
ಕೆನ್ನೆಯಂಗಳದ ಕುಳಿ
ಚಂದುಟಿ ರಕ್ತದೋಕುಳಿ
ಸಾಕಲ್ಲವೇ ಬೀಳಲು ಜಾರಿ
ನಿನ್ನಂದದ ಮತ್ತೇರಿರಲು...
ಅರಿತಿರುವೆ ಆದರೂ ಕಾಡಿರುವೆ
ತಿಳಿದೂ ...
ಮೊದಲೇ ಮರ್ಕಟ ಮೇಲೆ
ಮದ್ಯದ ಅಮಲೇರಿರಲು
ಮೈಮಾಟದ ಚೇಳನು
ಕುಟುಕಬಿಟ್ಟೇಕೆ ಕಟುವಾದೆ
ತರವಲ್ಲ ನಿನಗೆ, ಕೊಡುವರೇ
ಯಮಯಾತನೆ ಈತರದಿ ?
ಕನಸಿನರಸಿಯನರಸಿ ಬಂದವನಿಗೆ
ಬಂದುಬಿಡು ನನಸಲಿ- ಅಸಲಿ
ಬೇಗೆಯಲಿ ಬೆಂದು ಬಿರಿದಿದೆ ಮನ
ತೊರೆದುಬಿಡು ಗಗನ ಸಂಗ
ಹರಿದುಬಿಡು ಹನಿಯಾಗಿ
ತೊಯ್ದುಬಿಡು ಝರಿಯಾಗಿ
ಬೆಟ್ಟ-ಗುಡ್ಡ ನಿನಗಡ್ಡವೇ?
ನಾನಣಿಯಾಗಿರುವೆ
ತೊಯ್ದು, ಹರಿದು, ಹಂಚಿಹೋಗಲು
ನಿನ್ನೊಡನೆ ಹನಿಯಾಗಿ -ಇನಿದನಿಯಾಗಿ.

47 comments:

 1. ಆಜಾದ್ ಸರ್..ಸಕತ್ತಾಗಿದೆ ಹೊಸ ಪ್ರಯೋಗ!!

  ReplyDelete
 2. ಆಹಾಹಾಹಾ..! ಚೆನ್ನಾಗಿದೆ ಸರ್ ಕವನ..ಪದಪ್ರಯೋಗಳೂ ಹೊಸತಾಗಿವೆ..’ಮೈಮಾಟದ ಚೇಳನ್ನು ಕುಟುಕಬಿಟ್ಟೇಕೆ ಕಟುವಾದೆ’ ಎಂದಿರಲ್ಲ..ಚೆನ್ನಾಗಿದೆ..ಧನ್ಯವಾದ

  ReplyDelete
 3. ಆಜಾದ್ ಸರ್,
  ಅಪೇಕ್ಷೆಯಂತೆ ಬರೆದಿದ್ದೀರಾ..... ತುಂಬಾ ಚೆನ್ನಾಗಿದೆ... ಧನ್ಯವಾದ..... ಪದ ಪ್ರಯೋಗ ಅತ್ಯುತ್ತಮವಾಗಿದೆ,,,,,...
  ಗೆಲುವಿನೋಟದೋರೆಗಣ್ಣು
  ಹುಬ್ಬಿನಂಬಿಗೆ ನೋಟ-ಬಾಣ
  ಕೆನ್ನೆಯಂಗಳದ ಕುಳಿ
  ಚಂದುಟಿ ರಕ್ತದೋಕುಳಿ
  ಸಾಕಲ್ಲವೇ ಬೀಳಲು ಜಾರಿ
  ಈ ಸಾಲಂತೂ ಸೂಪರ್...... ಯಾವುದೇ ವಿಷಯದಲ್ಲೂ ಬರೆಯುತ್ತೀರಲ್ಲಾ ಹಾಟ್ಸ್ ಆಫ ಸರ್..... ನಾವೆಲ್ಲಾ ಬರೆದರೆ ಅದೇ ಸರಳ ಶಬ್ಧದಿಂದ ಬರೆಯುತ್ತಿದ್ದೆವು.... ನೀವು ಮಾತ್ರ ಯಾರೂ ಕೇಳದ ಶಬ್ದ ಹುಡುಕಿ ತಂದು ಬರೆಯುತ್ತೀರಾ...... ತುಂಬಾ ತುಂಬಾ ಧನ್ಯವಾದ.....

  ReplyDelete
 4. ಆಜಾದಣ್ಣ,
  ಹೊಸ ಪ್ರಯೋಗ ಸಂದಕೈತ್ತೆ....

  ReplyDelete
 5. ಚೆಲುವೆ ಸೋಲಿಸಿ ನೋಟದಿ
  ಗೆಲುವಿನೋಟದೋರೆಗಣ್ಣು
  ಹುಬ್ಬಿನಂಬಿಗೆ ನೋಟ-ಬಾಣ
  ಕೆನ್ನೆಯಂಗಳದ ಕುಳಿ
  ಚಂದುಟಿ ರಕ್ತದೋಕುಳಿ
  ಸಾಕಲ್ಲವೇ ಬೀಳಲು ಜಾರಿ

  ಭಾರೀ ಮಸ್ತ ಅದಾವ್ರಿ ಮ್ಯ್ಲಾಲಿನ್ ಸಾಲುಗಳು . ಹುಡುಗ ಜಾರಿ ಬೀಳಲು ಕೊಟ್ಟ್ ಕಾರಣಗಳಂತು ಅತ್ಯಧ್ಬುತ್.

  ReplyDelete
 6. ಆಜಾದ್ ಸಾರ್
  ಚೆನ್ನಾಗಿದೆ . ಶೀರ್ಷಿಕೆಯನ್ನು ನೋಡಿ ಕುತೂಹಲಗೊಂಡು ಬಂದೆ. ನಿಮ್ಮರಸಿ ನಿಮ್ಮನು ಅರಸಿ ಬರುವಾಗ ಈ "ಕನಸಿನರಸಿ ಅರಸಿ "ಯನ್ನು ತೋರಿಸಿ ನಿನಗೆಂದೇ ಎಂದುಬಿಡಿ . ಸಕ್ಕತ್ ಖುಷಿಯಾಗಿಬಿಡ್ತಾರೆ.

  ReplyDelete
 7. ಹುಬ್ಬಿನಂಬಿಗೆ ನೋಟ-ಬಾಣ
  ಕೆನ್ನೆಯಂಗಳದ ಕುಳಿ
  ಚಂದುಟಿ ರಕ್ತದೋಕುಳಿ
  ಸಾಕಲ್ಲವೇ ಬೀಳಲು ಜಾರಿ
  super kavana. Navaagale nimma aksharadokuli yalli jaari biddiddeve. Very nice.

  ReplyDelete
 8. ಸರ್
  ಪ್ರಯೋಗ ಸೂಪರ್
  ಶಬ್ದಗಳ ಜೋಡಣೆ, ಪ್ರಯೋಗ ಎಲ್ಲವೂ ಅತ್ಯದ್ಭುತ
  ಒಳ್ಳೆಯ ಕವಿತೆ

  ReplyDelete
 9. ವನಿತಾ..ನಿಮ್ಮದೇ ಮೊದಲ ಪ್ರತಿಕ್ರಿಯೆ??!! ವಾವ್..ರಾತ್ರಿ ೧೧.೩೦ ಇದನ್ನು ಹಾಕಿ ಬ್ಲಾಗಿಗೆ..ಧನ್ಯವಾದ

  ReplyDelete
 10. ಸುಭರವರೇ ಚೇಳು ಕುಟುಕುವ ಮುನ್ನ ಅಮಲೇರಿದ ಮರ್ಕಟ ನಾನಾಗಿದ್ದೆ ಎಂದರೆ..ಚೇಳಿನ ಕುಟುಕುವಿಕೆ..ಯಮಯಾತನೆ..ಆದ್ರೂ ಗೊತ್ತಾಗದು..ಅಮಲಿರುತ್ತಲ್ಲಾ..? ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

  ReplyDelete
 11. ದಿನಕರ್, ಅಬ್ಬಾ...ಅಂತೂ ..ನಿಮ್ಮ ಮಾತಿನಂತೆ ಪ್ರಯತ್ನ ಮಾಡಿದೆ...ಅದೇನೋ ಹೇಳ್ತಾರಲ್ಲ ..? ಟೆಸ್ಟ್ ಬ್ಯಾಟ್ಸಮನ್ ಗೆ ೨೦-೨೦ ಆಡೋಕೆ ಹೇಳಿದಹಾಗೆ ..ನನಗೆ ಡಕ್-ಔಟ್ ಆಗುವ ಭಯ ಇತ್ತು..ನೀವು ಅಂಪಯರ್ ಆದ್ರೆ ಅನ್ನೋ ಆತಂಕ ಬೇರೆ...ಇಷ್ಟವಾಯ್ತಲ್ಲ ..ಕಷ್ಟವಾದರೂ ಚಿಂತಿಲ್ಲ...
  ನಿಮ್ಮ ಗಮನಕ್ಕೆ..ನನ್ನ ಕಾಲೇಜ್ ದಿನಗಳಲ್ಲಿ debate, essay ನಲ್ಲಿ ಮುಂದಿರುತ್ತಿದ್ದೆ..ನನ್ನ ಸ್ನೇಹಿತರು..ತಾಕತ್ತಿದ್ದರೆ ಪ್ರೇಮಪತ್ರ ಸ್ಪರ್ಧೆಯಲ್ಲಿ ತೋರ್ಸು ನಿನ್ನ ಪೌರುಷ ಅಂತ ಸವಾಲೆಸದರು..ಬರ್ದೇ ಬಿಟ್ಟೆ ..ಮೊದಲ ಪ್ರಯತ್ನ ದಲ್ಲೇ ಯಶಸ್ವಿಯೂ ಆದೆ...ಅದೇ ಧೈರ್ಯದಮೇಲೆ ನಿಮ್ಮ ಮಾತಿಗೆ ಒಪ್ಪಿದ್ದು.....ಥ್ಯಾಂಕ್ಸ್

  ReplyDelete
 12. ಮನಮುಕ್ತಾರವರೇ ಮುಕ್ತವಾಗಿ ಚುಟುಕಾಗಿ ಗುಟುಕನ್ನು ಸವಿದು ಬೆನ್ನುತಟ್ಟಿದ್ದೀರಿ...ಧನ್ಯವಾದ

  ReplyDelete
 13. ಪರಾಂಜಪೆಯವರೇ...ನಿಮಗೂ ಇಷ್ಟವಾಯಿತಾ..ನಿಮ್ಮಿಂದ ಇನ್ನೂ ಏನಾದರೂ ಹೆಚ್ಚು ನಿರೀಕ್ಷಿಸಿದ್ದೆ.. "ತರವಲ್ಲ ತಗಿ ನಿನ್ನ ತಂಬೂರಿ ಸ್ವರ" ಅಂತೀರೇನೋ ಅಂದ್ಕೊಂಡೆ...ಧನ್ಯವಾದ

  ReplyDelete
 14. ಮಯೇಸಣ್ಣ ಸಂದಾಕೈತ ಅಂತ ಪಸಂದ ಮಾಡ್ದಂಗೇಯಾ ಎಲ್ಲಿ ಎಸಿ ನೋಡುಮಾ ಒಂದು ಚುಟ್ಕಾವಾ...ಹಹಹ

  ReplyDelete
 15. ಸೀತಾರಾಂ ಸರ್ my experiemnts with my college day truths ...ಹಹಹ..ಒಂದು ಮೆಲುಕು...ನಿಮಗೆ ಇಷ್ಟ ಆಗಿದ್ದಕ್ಕೆ ಧನ್ಯವಾದ

  ReplyDelete
 16. ಮನಸಾರೆಯವರೇ...ಯಾಕಪ್ಪಾ ಇಷ್ಟೊಮ್ದು ಅಂದದೊಡತಿಯಕಂಡ ಮುದ್ಕಾನೂ ಪಲ್ಟಿ ಹೊಡೀತಾನೆ...ಹಹಹ...ಧನ್ಯವಾದ ನಿಮ್ಮನಿಸಿಕೆಗೆ

  ReplyDelete
 17. ಮನಸು ಮೇಡಮ್...ಮಯೇಸಣ್ಣ ಪಸಂದ್ ಮಾಡ್ಕಂಡವ್ನೆ..ಹುಶಾರಿ...ಹಹಹ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

  ReplyDelete
 18. ರೂಪಾ...ಏನ್ರೀ..ಬಹಳ ಅಪ್ರೂಪ ಆಗ್ಬಿಟ್ರಿ ನಮ್ಮ ಗೂಡಿನಕಡೆ ಬಮ್ದೇ ಇಲ್ಲ ಈ ಮಧ್ಯೆ..? ನಿಮಗೆ ಇಂತಹ ಕವನ ಇಷ್ಟ ಅಂತ ಗೊತ್ತಿದ್ದಿದ್ದರೆ..ಮೊದಲೇ ಪ್ರಯತ್ನ ಮಾಡ್ಡ್ಬಿಡ್ತಿದ್ದೆ...ಹಹಹ..ಧನ್ಯವಾದ ನಿಮ್ಮ ಮನಸಾರೆ ಮೆಚ್ಚುಗೆಗೆ

  ReplyDelete
 19. ನಿಶಾ, ನಮ್ಮ ಬೀಸಣಿಗೆಗಳಲ್ಲಿ (Fans) ನೀವೂ ಒಬ್ಬರೆಂದುಕೊಳ್ಳಲೇ..? ಬಹಳ ಧನ್ಯವಾದಗಳು..ನಿಮ್ಮ ಪ್ರತಿಕ್ರಿಯೆಗೆ

  ReplyDelete
 20. ಡಾ. ಗುರುಮೂರ್ತಿ...ಮಿತ್ರರ ಅಪೇಕ್ಷೆಯಮೇರೆಗೆ ಬರೆದೆ..ಇದು ನನ್ನ ಕಾಲೇಜಿನ ಸಮಯದ ಇಷ್ಟವಾದ ವಿಷಯವೂ ಹೌದು..ಮೆಚ್ಚಿದ್ದಕ್ಕೆ ಧನ್ಯವಾದ

  ReplyDelete
 21. ಹೊಸ ಪ್ರಯೋಗ ಹೊಸತನದಿಂದ ಕೂಡಿದ್ದು ಬಲು ಚೆನ್ನಾಗಿದೆ. ಕೊನೆಯಲ ಕೆಲವು ಸಾಲುಗಳು ಮತ್ತೂ ಇಷ್ತವಾದವು.

  ReplyDelete
 22. ರವಿಕಾಂತ್ ನಿಮ್ಮ ಇಷ್ಟ ನಮಗೂ ಇಷ್ಟ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

  ReplyDelete
 23. ತೇಜಸ್ವಿನಿಯವರೇ, ಹೊಸತನ ..ನಿಮಗೆ ಹಿಡಿಸಿತೇ..ಇಲ್ಲಿ ಪ್ರೇಮಿಗಳಿಗೆ ಬೆಟ್ಟ ಗುಡ್ದಗಳು ಅಡ್ಡವಾಗುವುದಿಲ್ಲ ಎನ್ನುವುದನ್ನು ಪ್ರತಿಬಿಂಬಿಸುವ ಪ್ರಯತ್ನ ಮಾಡಿದ್ದೇನೆ...ನಮ್ಮ ಸಮಾಜ ಸುಧಾರಕರು ತಪ್ಪು ತಿಳಿದರೆ ಅವರದು ತಪ್ಪಿಲ್ಲ. ಧನ್ಯವಾದ ನಿಮ್ಮ ಎರಡು ನುಡಿ ಪ್ರೋತ್ಸಾಹಕ್ಕೆ.

  ReplyDelete
 24. ಜಲನಯನ,
  ನಿಮ್ಮ ಕನಸಿನ ಕನ್ಯೆ, ನಿಮ್ಮ ಕಾವ್ಯಕನ್ಯೆ ಇಬ್ಬರೂ ಚೆಲುವಾಗಿದ್ದಾರೆ. ಕಾವ್ಯಕನ್ಯೆ ಅಂತೂ ನಿಮ್ಮ ಕೈಯಲ್ಲೇ ಇದ್ದಾಳೆ. ಕನಸಿನ ಕನ್ಯೆಯೂ ಹತ್ತಿರದಲ್ಲೇ ಇದ್ದಾಳೆ ಎಂದು ಭಾವಿಸಲೆ?

  ReplyDelete
 25. ಸುನಾಥ್ ಸರ್....ಕನಸಿನ ಕನ್ಯೆ..ಕಾವ್ಯ್ ಕನ್ಯೆ ಎರಡೂ ನನ್ನಲ್ಲಿಯೇ ಇರುವರೆಂಬ ನಿಮ್ಮ ಊಹೆ ಮೆಚ್ಚತಕ್ಕುದೇ..ಆದ್ರೆ ಕವನದ ಗಹನತೆ ಬಗ್ಗೆ ಹೇಳಲಿಲ್ಲ ನೀವು...ಮಾತು ಮರೆಸಿ...ಇದೆಲ್ಲಾ ಯಾಕೆ ನಿಮಗೆ ಎನ್ನುತ್ತಿದ್ದೀರೋ ಹೇಗೆ...? ಹಹಹ...ಧನ್ಯವಾದ ನಿಮ್ಮ ಪ್ರತಿಯಿಲ್ಲದ ಪ್ರತಿಕ್ರಿಯೆಗೆ.

  ReplyDelete
 26. ನಿಮ್ಮ ಕನಸಿನ ಕನ್ಯೆಯನ್ನು ಎಲ್ಲಿ ಬಚ್ಚಿಟ್ಟು ಈ ಕವನ ಬರೆದಿರಿ? ಚೆನ್ನಾಗಿದೆ ಕಲ್ಪನೆ, ನವೋದಯದ ತಿಟ್ಟು,ಧನ್ಯವಾದ

  ReplyDelete
 27. ವಿಆರ್ ಸರ್, ಕನಸಿನ ಕನ್ಯೆ ಕನಸಲ್ಲೇ ಇದ್ದಾಳೆ ..ನನಸಿನವಳು ಅನುಮತಿ ಕೊಟ್ಟಿಲ್ಲ...ಹಹಹ...ಅದಕ್ಕೇ ಕವನದಲ್ಲಿ ಕನವರಿಕೆ.....ಧನ್ಯವಾದ

  ReplyDelete
 28. ಭೈಯ್ಯ ನಿಮ್ಮ ಕನಸಿನ ಕನ್ಯೆ ಸಕ್ಕತ್ತಾಗಿದಾಳೆ

  ReplyDelete
 29. ಹೊಸ ಪ್ರಯೋಗ ಚನ್ನಾಗಿದೆ...!!!!

  ReplyDelete
 30. ಆಜಾದ್ ಸರ್,
  ನಿಮ್ಮೊಳಗಿನ ರಸಿಕ ಕವಿ ಯನ್ನು ಎಲ್ಲಿ ಮುಚ್ಚಿಟ್ಟಿದ್ದಿರಿ.ಕವನ ತು೦ಬಾ ಚೆನ್ನಾಗಿದೆ,ಕಾಲೇಜು ದಿನಗಳನ್ನು ನೆನೆಸಿಕೊ೦ಡು ಬರೆದ೦ತಿದೆ.

  ಹುಬ್ಬಿನಂಬಿಗೆ ನೋಟ-ಬಾಣ
  ಕೆನ್ನೆಯಂಗಳದ ಕುಳಿ
  ಚಂದುಟಿ ರಕ್ತದೋಕುಳಿ
  ಸಾಕಲ್ಲವೇ ಬೀಳಲು ಜಾರಿ
  ನಿನ್ನಂದದ ಮತ್ತೇರಿರಲು...

  ಸೊಗಸಾಗಿದೆ ವರ್ಣನೆ.

  ReplyDelete
 31. 'ಜಲನಯನ' ಅವ್ರೆ..,

  ಮೊದಲ ಪ್ರಯತ್ನದಲ್ಲೇ ಗೆದ್ದಿದ್ದೀರಿ..

  ನನ್ನ 'ಮನಸಿನಮನೆ'ಗೆ ಬನ್ನಿ:http://manasinamane.blogspot.com/

  ReplyDelete
 32. ರಂಜು, ಥ್ಯಾಂಕ್ಸ್....ಕನಸಿನಕನ್ಯೆ ಬ್ಲಾಗಿಗೆ ಬಂದು ನಿಮ್ಮೆಲ್ಲರಿಗೆ ಆಶ್ಚರ್ಯವುಂಟುಮಾಡಿದ್ದಾಳೆ....ಅಲ್ಲವಾ?

  ReplyDelete
 33. ಚುಕ್ಕಿಚಿತ್ತಾರಕ್ಕೆ ಧನ್ಯವಾದ...ಹೊಸ ಪ್ರಯೋಗಕ್ಕೆ ನಿಮ್ಮ ಪ್ರೋತ್ಸಾಹ ಸಿಕ್ಕಿದ್ದಕ್ಕೆ...

  ReplyDelete
 34. ಶ್ರೀಧರ್...ತುಂಬಾ ದಿನ ಆಯ್ತು ನೀವು ಬಂದು...ಗೂಡಿಗೆ...ಅದೂ ಈ ವಿನೂತನ ಪ್ರಯೋಗಕ್ಕೆ ಪ್ರವೇಶ ಮತ್ತು ಪ್ರೋತ್ಸಾಹಕ ಎರಡು ಮಾತು...ಎಲ್ಲದಕ್ಕೂ ಧನ್ಯವಾದ

  ReplyDelete
 35. ಗುರು...ಏನು ಹೇಳಲಿ..ನಿಮ್ಮ ಪ್ರೋತ್ಸಾಹಕ್ಕೆ ..? ಧನ್ಯವಾದ ಎನ್ನುವುದೊಂದೇ ಅಲ್ಲ ನಿಮ್ಮ ಮನಸಿನ ಮನೆಗೂ ಬರುತ್ತೇನೆ, ಆಯ್ತಾ...

  ReplyDelete
 36. ಅಣ್ಣ ನೀವು ಒಲವ ದಾರಿಯಲ್ಲಿ ಒಹ್ ! ನನಗೆ ತುಂಬಾ ಖುಷಿ ಆಗಿದೆ ! ಈ ಕವನ ನಿಮ್ಮ ಬ್ಲಾಗ್ ಗೆ ಹೊಸತನ ತಂದಿದೆ :) ಇನ್ನು ಹೆಚ್ಚು ಮೂಡಿ ಬರಲಿ ಒಲವ ದಾರಿಯಲ್ಲಿ ಒಲವ ಕವನಗಳು

  ReplyDelete
 37. ಮಂಜು, ನಿನ್ನಂತಹ ನವಯುವಕವಿಗೆ ಖುಷಿ ತಮ್ದಿದೆ ಅಂದ್ರೆ ಇದರಲ್ಲಿ ಏನೋ ಇದ್ದಿರಬೇಕು ನಿನಗೆ ಇಷ್ಟವಾದದ್ದು...ಧನ್ಯವಾದ..ನಿನ್ನ ಪ್ರತಿಕ್ರಿಯೆ ಮತ್ತು ಅಭಿನಂದನೆಗೆ.

  ReplyDelete
 38. ಚೆನ್ನಾಗಿದೆ ಸರ್ ಕವನ :)

  ReplyDelete
 39. Nice One Sir....Tumbaa chennagide....iste helaballe...

  ReplyDelete
 40. ಅಶೋಕ್ ಧನ್ಯವಾದರೀ ನೀವು ನನ್ನ ಬ್ಲಾಗಿಗೆ ಬಂದಿರಿ ಪ್ರತಿಕ್ರಿಯಿಸಿದಿರಿ..

  ReplyDelete
 41. ಮನಸಿನ ಮಾತಿಗೆ ಪದಗಳ ಜೋಡಿ.. ಜೊತೆಯಲಿ ಮಾಡಿವೆ ಅದ್ಭುತ ಮೋಡಿ :-)

  ReplyDelete