Tuesday, March 16, 2010

ನಂಗೊತ್ತಿಲ್ಲ...ಹೋಗೋ ತರ್ಲೆ... ಓದ್ಕೋ ಹೋಗು


ಚಿತ್ರಗಳು ಅಂತರ್ಜಾಲ ಕೃಪೆ...
(ಒಂದು ಚಿತ್ರ ಅಚಾತುರ್ಯದಿಂದ ಕ್ಲಿಕ್ ಆಗಿತ್ತು ಕ್ಷಮೆ ಇರಲಿ)

ಅಂಕಲ್


ಏನು ಪುಟ್ಟಾ..?


ಬಿಡದಿಗೆ ಹೋಗಿದ್ರಾ...?


ಇಲ್ಲಲ್ಲಪ್ಪಾ..ಯಾಕೋ..ಹಾಗೆ ಕೇಳ್ದೆ..?


ಅಲ್ಲ ಯಾರೋ ಎಳೆ ವಯಸಿನ ಸ್ವಾಮಿಗಳು ಅವ್ರಂತೆ ಅಲ್ಲಿ...!!


ಏನೋ ಗೊತ್ತಿಲ್ಲ ಪುಟ್ಟ...ಹೂಂ..ಯಾರೋ ಹೇಳಿದ್ದು ನೆನಪೈತೆ...


ಅಲ್ಲ ಅಂಕಲ್ ಟಿವಿ, ಪೇಪರ್ ಎಲ್ಲದ್ರಲ್ಲೂ ಅದೇ ಸುದ್ದಿ ನೀವು ನೋಡಿಲ್ಲ್ವಾ..?


ಇಲ್ಕಣ್ ಪುಟ್ಟ...ಕಬ್ಬು ಕೊಯ್ಲಾಗೈತೆ ..ಗಾಣ ಆಡಿಸ್ಬೇಕು...ಪುರ್ಸತ್ತಿಲ್ಲ


ಅದೇ ಅಂಕಲ್ ಅಲ್ಲಿ ಉಗಾದಿ ಸಮಯದಲ್ಲಿ ರಾಸಲೀಲೆ ಯಾಕಾಯ್ತು ನಿಮ್ಮನ್ನ ಕೇಳೋಕೆ..


ಜನ್ಮಾಷ್ಠಮೀಲೀ..ರಾಸಲೀಲೆ ಓಕೆ...ಉಗಾದಿ ಸಮಯದಲ್ಲಿ ಯಾಕೆ...?


ಅಯ್ಯೋ ಅಂಕಲ್ ನಿಮಗೆ ಬೇಸಾಯ..ನೈಸ್ ರೋಡು ಹೊಲ ಗದ್ದೆ ಕಬಳಿಕೆ ಇದೇ ಚಿಂತೆ


ಅಯ್ಯೋ ದೊಡ್ಡ ಕತೇನೇ ಆಗಿದೆ ಅಲ್ಲಿ ....ಗೊತ್ತಿಲ್ಲವಾ...?


ನಮ್ಗೊತ್ತಿಲ್ಲ ಮಗು... ಅಗೋ ನಿಮ್ಮಪ್ಪ ಬಂದ ಅವ್ರನ್ನೇ ಕೇಳು...


ಅಯ್ಯೋ ನಮ್ಮಪ್ಪಂಗೆ ಇವೆಲ್ಲಾ ಗೊತ್ತಾಗೊಲ್ಲ..ನಂಗೊತ್ತಿಲ್ಲ ಮಗು ಅಂತಾರೆ..


ಏನೋ ಅದು ತರ್ಲೆ ನಿಂದು....ಏನು ಶಂಕರೇಗೌಡ್ರ ತಲೆ ತಿನ್ತಾ ಇದ್ದಾನೆ ,,?


ಅಯ್ಯೋ ಅದೇನೋ ಸ್ವಾಮಿ ಅಂತೆ ಯುಗಾದಿ ಸಮಯದಾಗೆ ರಾಸಲೀಲೆ ಅಂತೆ...


ನನಗೇನೂ ಗೊತ್ತಿಲ್ಲ ಅಂದೆ.......
ಏನದು...ಮೇಷ್ಟ್ರೆ...?


ಅಯ್ಯೋ ಅದೊಂದು ಅವಾಂತರ ಬಿಡಿ ವಾಕ್ ಹೋಗ್ತೀವಲ್ಲ ಆಗ ಹೇಳ್ತೀನಿ..


ಅದಲ್ಲಪ್ಪಾ.....!!!


ಅದೇನೋ ನಿನ ರಾಗ....?


ಮತ್ತೆ ಟಿವಿ ಸಂದರ್ಶನ ಕೊಟ್ಟು ಸ್ವಾಮಿಗಳು ಎರಡೇ ಮಾತು ಕನ್ನಡದಲ್ಲಿ ಹೇಳಿದ್ದು


ಆಮೇಲೆ ಪೂರ್ತಿ ಇಲಿ ತಿಂದಹಾಗೆ ಇಂಗ್ಲೀಷು..ಯಾಕಪ್ಪಾ ಬಿಡದಿ ಕರ್ನಾಟಕದಲ್ಲೇ ಅಲ್ವಾ ಇರೋದು..?


ಹೌದು ಕಣೋ...


ಮತ್ತೆ ಅವ್ರಿಗೆ  ಸರಿಯಾಗಿ ಕನ್ನಡಾನೇ ಬರೋಲ್ಲ ಇನ್ನು ಭಕ್ತರಿಗೆ ಏನು ಉಪದೇಶ ಮಾಡ್ತಾರೆ..?


ಗೊತ್ತಿಲ್ಲ ಕಣೋ...


ಮತ್ತೆ..ಯಾಕೆ ಹೀಂಗಾಯ್ತು ಅಂತ ಟಿ.ವಿ.ಯವರು ಕೇಳಿದ್ರೆ...ಇನ್ನುಮುಂದೆ ಕೇರ್ಫುಲ್ ಆಗಿ ಇರ್ತೀನಿ..


ಎಲ್ಲಾ ಕೇರ್ ಫುಲ್ ಆಗಿ ಮಾಡ್ತೀನಿ ಅಂದ್ರಲ್ಲಾ...??


ಅಂದ್ರೆ..ವೀಡಿಯೋ ..ಫೋಟೋ ತೆಗೆಯೋಕೆ ಆಗದ ಹಾಗೆ ಅಂತಾನಾ...?


ಲೇ...ತರ್ಲೆ ಕಣೋ ನೀನು,..ಹೋಗು ಓದ್ಕೋ.......................ನಿಜಕ್ಕೂ ಆಗ್ತಾ ಇರೋದು ಏನು...ಯಾರನ್ನ ಕೇಳಿದ್ರೂ ನಮಗೆ ಗೊತ್ತಿಲ್ಲ ಅಂತಾರಲ್ಲಾ ಈ ವಿಷಯದಲ್ಲಿ.....ಹಾಂ....??!!

51 comments:

 1. ಆಜಾದ್ ಸರ್,
  ನಿಜವಾಗಿಯೂ ನಂಗೊತ್ತಿಲ್ಲ ಸರ್, ನಮಗೆ ಅರ್ಥವಾಗದ, ಹೇಳಲಾಗದ, ಅರ್ಥವಾದರೂ ಹೇಳಲಾಗದ ವಿಷತವನ್ನ ನೀವು ಹೇಳಿದೀರಾ....... ಈ ಸರಣಿಗಳ ''ಮಗು'' ವಿಗೆ ಥ್ಯಾಂಕ್ಸ್..... ಹಾಗೆ ನಿಮಗೂ.....

  ReplyDelete
 2. ಹಾಹಾ..ಮಗು ತುಂಬಾ ಪ್ರಶ್ನೆ ಕೇಳುತ್ತಾ ಇದೆ....ಓದ್ಕೋಳೋಕೆ ಹೇಳಿ ..ಸರ್...
  ಚೆನ್ನಾಗಿದೆ...ಏನೋ ನಿತ್ಯಾನೋ? ಏನು ಆನಂದಾನೋ? ಒಟ್ಟು ನಮ್ಮೆಲ್ಲರ ನಂಬಿಕೆಗೆ ಮಾಡಿದ್ದು ಮೋಸ ನಿತ್ಯ ಮತ್ತು ನಿತ್ಯ ಸತ್ಯ.

  ReplyDelete
 3. ಸರ್,
  ನಿಮ್ಮ ಆ ಗೊತ್ತಿಲ್ಲದ ಮಗುವಿಗೆ ಹೇಳಿಬಿಡಿ ಕೆಲವು ಕಂಡರೂ ಕಾಣದಂಗೆ, ಗೊತ್ತಿದ್ದರು ಗೊತ್ತಿಲ್ಲದಂಗೆ ಇದ್ದು ಬಿಡಬೇಕು.... ಯಾಕೆ ಪಾಪ ಆ ಹುಡುಗನ ಹೆಸರೇಳಿ ಇಷ್ಟೋಂದು ಪ್ರಶ್ನೆ ಆಕ್ತೀರಿ ಹಹಹ....

  ReplyDelete
 4. ಎನ್ ಗುರುಗಳೆ,
  ಆನಂದನ ಜನ್ಮ ಜಾಲಾಡಿಸಿ ಬಿಡ್ತೀರ.....
  ಕಸ್ತೂರಿ ಚಾನಲ್ ಗೆ ಆಸ್ಸಾಮಿ ಸಿಕ್ಕಿದರೆ ಜನ್ಮಂತಾರದಲ್ಲಿ ತೋರಿಸುತ್ತಾರೆ ಸ್ವಾಮಿ ಯಾಕೆ ಹಿಂಗೆ ಮಾಡಿದ ಅಂತ......
  ಚೆನ್ನಾಗಿ ಬರೆದಿದ್ದೀರ....

  ReplyDelete
 5. chennagide... indina "paramahamsa" maadida parama paapada kathe..

  ReplyDelete
 6. "ಇನ್ನು ಮೇಲೆ ಕೇರ್ ಫುಲ್ ಆಗಿರ್ತೀನಿ"!
  ಹಹ್ಹಹ್ಹಾ!
  ಇವರು ಗಾದೆ ಕೆಳಗೆ ಸುಳಿದರೆ,ಮೀಡಿಯಾದವರು ಬೆಡ್ ಶೀಟ್ ಕೆಳಗೆ ಸುಳೀತಾರೆ!

  ReplyDelete
 7. 'ಜಲನಯನ' ಅವ್ರೆ..,

  ಮನಸು ಮೇಡಂ ಹೇಳಿದಂತೆ ಕೆಲವನ್ನು ಮಕ್ಕಳಿಗೆ ಹೇಳದೆ ಇದ್ದರೇ ಒಳಿತು..

  ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ..: http://manasinamane.blogspot.com (ಮಾರ್ಚ್ ೧೫ ರಂದು ನವೀಕರಿಸಲಾಗಿದೆ)

  ReplyDelete
 8. ದಿನಕರ್ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ..

  ReplyDelete
 9. ಬಾಲುರವರೇ ನಿಮ್ಮ ಜೈಕಾರ ಕೇಳಿಸ್ಬಿಟ್ರೆ ಕಷ್ಟ ಸರ್...ಮತ್ತೆ ಶಿಷ್ಯನಾಗು ಅಂದ್ರೆ ಏನು ಮಾಡ್ತೀರಾ..?

  ReplyDelete
 10. ಶ್ವೇತ..ಮಗು ಪ್ರಶ್ನೆ ಗೆ ಉತ್ತರ ಕೆಲವು ಸಲ ಕೊಡೋಣಾ ಅಮ್ದ್ರೂ ಮುಜುಗರ ಆಗುತ್ತೆ ಅನ್ನೋದಕ್ಕೆ ಈ ಘಟನೆಯೂ ಒಂದು ನಿದರ್ಶನ...ಮಗು..ಅಪ್ಪಾ..ರಾಸಲೀಲೆ ಅಂದ್ರೆ ಏನು..? ಅಂತ ಕೇಳಲಿಲ್ಲ ಸದ್ಯ...

  ReplyDelete
 11. ಸೀತಾರಾಂ ಸರ್..ಉತ್ತರ ಪ್ರದೇಶದಲ್ಲಿ ಇದೇ ತರಹದ್ದು ಇನ್ನೊಂದು ಪ್ರಕರಣ ಇದೇ ದಿನ ಆಗಿದ್ದು ನಂಬಿಕೆ ಇಟ್ಟವರಿಗೆ ಆಘಾತ...ಅಲ್ಲವಾ...?

  ReplyDelete
 12. ಮನಸು ಮೇಡಂ...ಮಕ್ಕಳಿಗೆ ಹೇಳೋಕೆ ನಾವು ಇಲ್ದೇ ಇದ್ರೂ ಟಿ.ವಿ. ಇದ್ಯಲ್ಲಾ..ಅದರಲ್ಲೂ ಅವರ ಪ್ರಶ್ನೆ ಹತ್ತಿಕ್ಕೋದೂ ಅಷ್ಟು ಸುಲಭ ಅಲ್ಲ.

  ReplyDelete
 13. ಮಹೇಶ್ ದೊರೆ..ಸ್ವಾಮಿಗೆ ಸ್ವಲ್ಪ ಆತುರ ಬುದ್ಧಿ...ಅದಕ್ಕೆ ಮನ್ಸ್ಸು ಸಹಕರಿಸಿರೊಲ್ಲ...ಹಹಹ..ನೋಡಿ ಏನಾಗುತ್ತೋ ಏನೋ ರೀಸರ್ಚ್ ಮಾಡ್ತಿದ್ದರಂತೆ.

  ReplyDelete
 14. ರಮೇಶ್..ಪರಮ ಹಂಸ ಪ್ರೇಮ ಹಂಸ ಆಗಿಬಿಟ್ಟ ಅನಿಸಿರಬೇಕು,,,

  ReplyDelete
 15. ಸುನಾಥ್ ಸರ್, ಆ ಸ್ವಾಮೀಜಿಯ TV interview ನೋಡಿದ್ರಾ..? ಇನ್ನುಮುಂದೆ ಎಚ್ಚರ ವಹಿಸ್ತೀವಿ ಅಣ್ದಿ ಅನ್ನೋದೇ...ಹಹಹ.....

  ReplyDelete
 16. This comment has been removed by the author.

  ReplyDelete
 17. ಗುರು..ನಿಮ್ಮ ಅಭಿಮಾನಕ್ಕೆ ನಾನು ತಲೆಬಾಗ್ತೀನಿ..ನಿಮ್ಮ ಬ್ಲಾಗಿಗೆ ಬಂದಿದ್ದೆ... ಮತ್ತೆ ಭೇಟಿ ಮಾಡ್ತೇನೆ,,.....ತಪ್ಪದೇ...

  ReplyDelete
 18. ಚೆನ್ನಾಗಿದೆ, ಹೊಟ್ಟೆ ತುಂಬಾ ನಕ್ಕೆ, ನಗು ಈಗ, ಆದರೆ ಅದೇ ಪುನರಾವರ್ತನೆ ಆದ್ರೆ ಸಮಾಜದ ಸ್ಥಿತಿ ಏನು ಅಲ್ವೇ?

  ReplyDelete
 19. ಆಝಾದೂ...

  ಕಳ್ಳ ಸ್ವಾಮಿಗಳ ಬಗೆಗೆ ತುಂಬಾ ಎಚ್ಚರ ವಹಿಸಬೇಕು...
  ಜನರ ಮುಗ್ಧತೆಯನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ...

  ನನಗಂತೂ ಓದಿ ಸಿಕ್ಕಾಪಟ್ಟೆ ನಗು ಬಂತು...

  ನಾನಂತೂ ಎಚ್ಚರ ವಹಿಸುತ್ತೇನೆ...

  ಹ್ಹಾ..ಹ್ಹಾ...

  ReplyDelete
 20. Sir ಅಪ್ಪ ಮಗನ ಜೊತೆ ಅಂಕಲ್ ಸೇರ್ಕೊಂಡ್ ಮೇಲೆಂತು ಸಂವಾದ ಇನ್ನು ಸ್ವಾರಸ್ಯಕರವಾಗಿದೆ . ಮಗು ಎಲ್ಲೊ ಮೀಡಿಯಾ reporter ಆಗೋ ಲಕ್ಷಣಗಳು ಕಾಣ್ತಾ ಇವೆ . ಇಸ್ಟೆಲ್ಲಾ ಅದಮೇಲು ಆ ಸ್ವಾಮಿ ರಾಶಾರೋಷವಾಗಿ ಕುಂಬ ಮೇಳ ಆಚರಿಸೋಕೆ ಬೇರೆ ಹೋಗಿದ್ದಾನೆ , ಇಲ್ಲಿ ಅವನ ಶಿಷ್ಯರು so called highly educated and employed in big big companies ಪ್ರೆಸ್ conference ಬೇರೆ ಮಾಡಿ ಸ್ವಾಮಿ ನ ಸಾಚ ಅಂತ ತೋರಿಸೋ ಕೆಲಸ ಮಾಡ್ತಾ ಇದ್ದಾರೆ .
  ಇವೆಲ್ಲ ಕಂಡು ಕಾಣದಂಗೆ ನಾವು ಮೂಕ್ ದರ್ಶಕಗಳಾಗಿ ಇನ್ನು ಸ್ವಲ್ಪ ದಿನ ಎಲ್ಲ ಮರೆತು ಹೋಗ್ತಿವಿ . ಮತ್ತೆ ಇಂಥ ಸ್ವಾಮಿಗಳು ಚಮಕಯಿಸೋಕೆ ಶುರು ಮಾಡ್ತಾರೆ . ಈ ಒಬ್ಬ ಸ್ವಾಮಿಗೆ ಸರಿಯಾಗಿ ಬುದ್ದಿ ಕಲಿಸಿದರೆ , ಇನ್ನೊಮ್ಮೆ ಮತ್ತೊಬ್ಬ ಸುಳ್ಳು ಸ್ವಾಮಿ ಹುಟ್ಟೋಕೆ ಯೋಚನೆ ಮಾಡ್ತಾನೆ .

  ಮನಸಾರೆ

  ReplyDelete
 21. ಅಪ್ಪಾ......?

  ಏನೋ ನಿ೦ದು ತರಲೆ!

  ನಾನಲ್ಲಪ್ಪಾ......ಅದ್ಯಾವನೋ ನಿತ್ಯಾನ೦ದ ಸ್ವಾಮಿ ಅ೦ತ ಇದಾನ೦ತಲ್ಲ ನಿ೦ಗೆ ಗೊತ್ತಾ!

  ಅವನು ಬಲು ತರಲೆ ಅ೦ತೆ!

  ಏ ಹೋಗೊ ಓದ್ಕೋ ಹೋಗೋ

  ನಿ೦ಗ್ಯಾಕೋ ಅದೆಲ್ಲಾ!

  ಅಪ್ಪಾ!

  ಏನೋ ಮತ್ತೆ ನಿ೦ದು?

  ಸ್ವಾಮಿ ವಿವೇಕಾನ೦ದ ಅವರೂ ಸ್ವಾಮೀನೇ ಅಲ್ವೇನಪ್ಪಾ!

  ಹೂ; ಕಣೋ ಯಾಕೋ!

  ಅಲ್ಲಾ ಅ೦ತಹ ಮಹಾನ್ ಮೇಧಾವಿ ಯೊಬ್ಬ ಹುಟ್ಟಿದ ದೇಶದಲ್ಲಿ

  ಈ ನಿತ್ಯಾನ೦ದ ನ೦ತಹ ಸ್ವಾಮಿ ಎ೦ಗಪ್ಪಾ ಹುಟ್ಟಿದ!

  ಅ೦ತಹ ಪರಮ ಪವಿತ್ರ ಕಾವಿ ತೊಟ್ಟು ಹಲ್ಕಾ ಕೆಲ್ಸಾ ಮಾಡ್ತಾ ಅವನಲ್ಲಾ!

  ಏ... ನೀನಿನ್ನು ಚಿಕ್ಕವನು ಹೋಗಿ ಓದ್ಕೋಳೋ......

  ಅಪ್ಪಾ ಓದಿದವರೆಲ್ಲಾ ಇ೦ತಹ ದರಿದ್ರ ಸ್ವಾಮಿಗಳ ಕಾಲ ಮೇಲೆ ಬೀಳ್ತಾರಲ್ಲಾ!

  ನ೦ಗ್ಯಾಕೋ ಓದ್ಕೋಳೋಕೇ ಬೇಜಾರಾಗ್ತಿದೆ.....

  ದೊಡ್ದವರಾಗಿ ಇದನ್ನೆಲ್ಲಾ ನೋಡ್ಕೋ೦ಡು ಸುಮ್ಮನಿರೋದಕ್ಕಿ೦ತ

  ಹೀಗೇ ಮಗುವಾಗೇ ಉಳಿದುಬಿಡ್ತೀನಪ್ಪಾ!

  ReplyDelete
 22. ವಿ.ಆರ್.ಬಿ. ಸರ್, ಹೌದು ನೋಡಿ ಆ ದಿನ ಆ ಸ್ವಾಮಿ ಮಾತನಾಡಿದ್ದು ನೋಡಿ ನನಗೂ ಬಂತು ಟಿ.ವಿ. ನೋಡ್ತಾ ಇದ್ದಾಗ....
  One thing is sure...we need to be more careful ಹಹಹಹ...ನೋಡಿದ್ರಾ...careful ಆಗಿ ಈ ತರಹ ಕೆಲ್ಸ ಮಾಡ್ಬೇಕು ಅನ್ನೋ ವಾದ..ಸ್ವಾಮೀಜೀದು...

  ReplyDelete
 23. ಪ್ರಕಾಶ...ಯಾಕೋ ಜನ ಮರುಳೋ ಜಾತ್ರೆ ಮರುಳೋ ಅನ್ನೋದ್ರಲ್ಲಿ ಜನಾನೇ ಮರುಳು ಅನ್ನಿಸುತ್ತೆ ..ಈ ತರಹ ಎಷ್ಟು ಆಗಿಲ್ಲ ಈ ಹಿಂದೆ...ಆದ್ರೂ ನಾವು ಕಲಿಯೊಲ್ಲ ಅಲ್ವಾ...ಥ್ಯಾಂಕ್ಸ್ ಕಣೋ...ನಿನ್ನ ಅಭಿಪ್ರಾಯಕ್ಕೆ...

  ReplyDelete
 24. ಮನಸಾರೆ ಮೇಡಂ ನಿಜ ನೋಡಿ...ಇವರು ಇವರ ಚೇಲಾಗಳು ಎಲ್ಲಾ ಏನೇ ಹೇಳಿದ್ರೂ ಹೊಗೆ ಅಂತೂ ಎದ್ದಿದ್ದು ನಿಜ ಆದ್ಮೇಲೆ ಕಿಡಿಯಾಡಿರಬೇಕಲ್ಲ್ವಾ,.....ನೋಡೋಣ ಕಾದು..ನಮ್ಮ ನೆನೆಪಿನ ಶಕ್ತಿಯ ಆಯಸ್ಸು ನಿಜಕ್ಕೂ ಚಿಕ್ಕದಾ ಅನ್ನೂದಕ್ಕೆ...

  ReplyDelete
 25. ಶ್ರೀ...ಮುಂದುವರೆಸಿ ನನ್ನ ಸಂಭಾಷಣೇನ..ಇನ್ನೊಂದು ಘಟ್ಟ ತಲುಪಿಸಿದ್ದೀರಿ...ನಿಜ ಅಲ್ವಾ..ಸ್ವಾಮಿ ವಿವೇಕಾನಂದರೂ ಬಹು ಚಿಕ್ಕ ವಯಸ್ಸಿನಲ್ಲೇ ಸನ್ಯಾಸಿಯಾದವರು...ಆದರೆ ಅವರ ಧ್ಯೇಯ ಉದಾತ್ತತೆ ಮಹಾನ್ ಮುನಿಗಳೂ ಸಾಧಿಸಲಾಗಿಲ್ಲ...ಇವರೆಲ್ಲ ಮನೋಕಾಮನೆಗಳ ದಾಸರು...
  ಮಗು ಮಗುವಾಗೇ ಉಳೀತೀನಿ ಅನ್ನೋ ಮಾತು ಚಾಟಿ ಏಟು ಬೆಳೆದು ನಿಂತ ನಮಗೆಲ್ಲಾ....ಧನ್ಯವಾದ ನಿಮ್ಮ ಮಾತಿಗೆ.

  ReplyDelete
 26. ನಿಜ ಸಾರ್. " ಜನ ಮರುಳೇ ". ಒಮ್ಮೊಮ್ಮೆ ನಾವು ಮರುಳಾಗಿ ಬಕರಾ ಆಗಿಬಿಡುತ್ತೇವೆ. ಅದ್ಕ್ಕೆ ಉದಾಹರಣೆಯೆಂಬಂತೆ..ನನ್ನ ಬ್ಲಾಗ್ನನಲ್ಲಿ ನನ್ನದೊಂದು ಅನುಭವ ಬರೆದಿದ್ದೇನೆ...ಹಾಗೇ ಬಂದು ಕಣ್ಣು ಹಾಯಿಸಿ..:)
  ಧನ್ಯವಾದ

  ReplyDelete
 27. ಶಂಭುಲಿಂಗವ್ರೇ...ನೋಡೋಣ ಜನ ಎಲ್ಲಿವರೆಗೆ ಇದನ್ನು ನೆನೆಪಿಟ್ಟುಕೊಳ್ಳುತ್ತಾರೋ ಇಲ್ಲವೋ ತಿಳಿಯದು...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

  ReplyDelete
 28. ರೀ ಸ್ವಾಮಿ,
  ನಮ್ಮ ದೇಶದಲ್ಲಿ ಸ್ವಾಮಿಗಳೆಂದರೆ ಪವಾಡ ಪುರುಷರು. ದೇವರ ಪ್ರತ್ಯಕ್ಷ ರೂಪ. ಕೆಲವು ಕಾವಿ ತೊಟ್ಟ ಕದೀಮರು ಇಂತಹ ಕೆಲಸ ಮಾಡಿದರೂ ನಾವು ಮತ್ತೆ ಅವರ ಕಾಲಡಿಯಲ್ಲಿ ನಮ್ಮ ತಲೆಯನಿಟ್ಟಿರುತ್ತೇವೆ. ಇಲ್ಲಿ ಜನ ಮರುಳೇ ಹೊರತು ಜಾತ್ರೆ ಮರುಳಲ್ಲ. ಯಾಕಂದ್ರೆ ನಮ್ಮ ಜನರಿಗೆ ಜಾಣ ಮರೆವು ನೋಡಿ! ಅದಕ್ಕೆ.
  ಆದ್ದರಿಂದಲೇ ನಮ್ಮಲ್ಲಿ ಡಕಾಯಿತ ಮಂತ್ರಿಯಾದದ್ದು, ಕಳ್ಳ ಸ್ವಾಮಿಯಾಗಿದ್ದು, ಕೊಲೆಗಾರನಿಗೆ ನಾಯಕನ ಪಟ್ಟ ಸಿಕ್ಕಿದ್ದು.
  ಹೀಗೆ ಮುಂದುವರೆಯಲಿ ತಂದೆ ಮಗನ ಸಂಭಾಷಣೆ.

  ReplyDelete
 29. Thanks Praveen...nimma abhipraayakke mattu nanna maatina anumOdanege....

  ReplyDelete
 30. ಹ್ಹೀ ಹ್ಹೀ ಹ್ಹೀ ಬೈಯ್ಯ ಈ ಮಗು ಯಾಕೋ ಬರ್ತಾ ಬರ್ತಾ ಸಿಕ್ಕಾಪಟ್ಟೆ Question ರಾಯ ಆಗ್ತಾ ಇದಾನಪ್ಪಾ :)) next ಇಯರ್ text ಬುಕ್ ಲಿ ಅದೇ ಪಾಠ ಮಾಡಿದ್ರೆ ಆಯಿತು .. ಈಗ ಈ ವರ್ಷದ್ದು ಓದ್ಕೊಳಕ್ಕೆ ಹೇಳಿ ..

  ReplyDelete
 31. ರಂಜು...ಧನ್ಯವಾದ ನಿನ್ನ ಪ್ರತಿಕ್ರಿಯೆಗೆ...ಆದ್ರೆ..ಮಕ್ಕಳ ಪ್ರಶ್ನಾವಳಿ ಇದ್ದಕ್ಕಿದ್ದಂತೆ ಪ್ರಾರಂಭ ಆಗುತ್ತೆ..ನಮ್ಮ ಮೂಡ್ ಅಥವಾ ಕೆಲಸಕ್ಕೂ ಅವರ ಕುತೂಹಲ ನಿವಾರಣೆಗೂ ಸಂಬಂಧ ಇರೊಲ್ಲ...ಕೆಲವೊಮ್ಮೆ ನಾನೂ ರೇಗಿದ್ದುಂಟು,..ಈಗ ಏನೋ ಕೆಲ್ಸ ಮಾಡ್ತಿದ್ದಿನಿ ಆಮೇಲೆ ಕೇಳು ಅಂತ...ಅದು ತಪ್ಪು ಅಂತಾನೂ ಗೊತ್ತು...ಹಾಗೇ ಅವ್ರ ಪ್ರಶ್ನೆಗೆ ಥಟ್ ಅಂತ ಹೇಳಿ ಅಂತಾರಲ್ಲ ಹಾಗೂ ಉತ್ತರಿಸೋದೂ ಯಾವ ವಿಪತ್ತಿಗೂ ಕಡಿಮೆ ಅಲ್ಲ...

  ReplyDelete
 32. ಶಿರಸಿಯ ಪಾದುಕಾಶ್ರಮದ ಗುರುಗಳ ಕತೆಯೂ ಹಿಗೇ ಇತ್ತಲ್ವಾ? ಅಪ್ಪ, ಮಗು, ಅಂಕಲ್ ಸಂಭಾಷಣೆ ತುಂಬಾ ಚೆನ್ನಾಗಿ ಮೂಡಿಬಂದಿದೆ.

  ReplyDelete
 33. ಈಗ ನೋಡಿ. ನಾವು ನಿತ್ಯಾನಂದನ ನಾಮವನ್ನು ನಿತ್ಯವೂ ಜಪಿಸುವಂತಾಗಿದೆ. ಅಷ್ಟೇ ಸಧ್ಯಕ್ಕೆ ಗೊತ್ತಿರುವುದು. ನಿಮಗೆ ನಿಜ ಗೊತ್ತಾದಾಗ ನಮಗೂ ತಿಳಿಸಿ.

  ReplyDelete
 34. ಪ್ರಶ್ನಾವಳಿ ಚೆನ್ನಾಗಿದೆ, ಪ್ರಸ್ತುತ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲಿದ್ದೀರಿ. ಚೆನ್ನಾಗಿದೆ,

  ReplyDelete
 35. super sir
  appa magu enella vishaya horage hakta iddaare

  ReplyDelete
 36. ಸಾಗರಿಯವರೇ,
  ಕೆಲವೊಮ್ಮೆ ನಮ್ಮವರೇ ನಮ್ಮ ಅವನತಿಗೆ ಕಾರಣರಾಗುತ್ತಾರೆ ಎನ್ನುವುದಕ್ಕೆ ಹಲವು ಉದಾಹರಣೆಗಳಿವೆ...ತಮ್ಮ ಕುಕೃತ್ಯಗಳಿಂದ ಜನಸಾಮಾನ್ಯನ ನಂಬಿಕೆಗೆ ವಿಶ್ವಾಸಕ್ಕೆ ದ್ರೋಹ ಮಾಡುವವರು ಸತ್ಯವಂತರನ್ನೂ ಅನುಮಾನದಿಂದ ನೋಡುವಹಾಗೆ ಮಾಡಿಬಿಡುತ್ತಾರೆ...ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ

  ReplyDelete
 37. ಡಾ.ಬಿ.ಆರ್. ಸರ್...ಬಹಳ ದಿನಗಳಿಂದ ನಿಮ್ಮನ್ನು ಕಾಣಲಿಲ್ಲ...ಉಗಾದಿಯ ಹಾರ್ದಿಕ ಶುಭಾಷಯಗಳು....ಧನ್ಯವಾದ ನಿಮ್ಮ ಭೇಟಿಗೆ ಹಾಗೇ ಪ್ರತಿಕ್ರಿಯೆ ಪ್ರೋತ್ಸಾಹಕ್ಕೆ

  ReplyDelete
 38. ಪರಾಂಜಪೆಯವರೇ.... ಈ ಪ್ರಸಂಗಗಳು ಪ್ರಾಮಾಣಿಕರಿಗೆ ಮುಜುಗರ ತರುವಂತಹವು...ಅಲ್ಲವೇ...ಜನಜಾಗೃತಿ ಬೇಕು ಇಂತಹವರನ್ನು ಬೆತ್ತಲು ಮಾಡಲು...

  ReplyDelete
 39. ಸಾಗರದಾಚೆಯಿಂದ ಬರಲಿದ್ದೀರಿ ನಾಡಿನೆಡೆಗೆ...ಈ ಘಟನೆಗಳು...ಛೇ..ಎಂತಹ ಜನ ಎನಿಸಿದೆಯೇ..ಡಾಕ್ಟ್ರೇ...? ಏನುಮಾಡುವುದು...ಗೋಮುಖವ್ಯಘ್ರರು...ಎನ್ನಬೇಕೇ..ಅಥವಾ..ಗೊತ್ತಿಲ್ಲ ಏನಿದೆಯೋ ಒಳಗುಟ್ಟು

  ReplyDelete
 40. :) ಚೆನ್ನಾಗಿದೆ. ಆದರೆ ಇಂತಹವರಿಂದ ಅಳಿದುಳಿದ ಉತ್ತಮ ಖಾವಿ ಜನರಿಗೂ ಮರ್ಯಾದೆ ಸಿಗದಂತಾಗುತ್ತಿದೆ.!:(

  ReplyDelete
 41. ನಿಮ್ಮ ಮಾತು ನಿಜ ತೇಜಸ್ವಿನಿ...ಇದು ಬಹಳ ಯೋಚಿಸುವ ವಿಚಾರ...ಆದ್ರೆ ಢೋಗಿ..ಕಪಟಿಗಳನ್ನು ಗುರುತಿಸುವುದು ಬಹಳ ಕಷ್ಟ...ನಮ್ಮಲ್ಲಿ ಅಂಧಾನುಕರಣೆ ಹೋಗುವವರೆಗೂ...ಅಥವಾ ನಿಜ-ಸುಳ್ಳಿನ ವಿಶ್ಲೇಷಣಾ ಸಾಮರ್ಥ್ಯ ಬರುವವರೆಗೆ...ಇದನ್ನೆಲ್ಲ ನಿಜ ಭಕ್ತರೂ..ಸನ್ಮಾರ್ಗಿ ಸಾಧು ಸಂತರೂ ಸಹಿಸಿಕೊಳ್ಳಬೇಕಾಗುತ್ತದೆ...ಅಲ್ಲವೇ...?

  ReplyDelete
 42. ಆಜಾದ್,

  ನನಗೂ ಇದರ ತಲೆ ಬುಡ ಸರಿಯಾಗಿ ಅರ್ಥವಾಗಿಲ್ಲ ಇನ್ನೂ. ಮೊದಲಿಗೆ ನನಗೆ ಇದನ್ನು ತಿಳಿದುಕೊಳ್ಳೋದಿಕ್ಕೆ ಪುರುಸೊತ್ತು ಇರಲಿಲ್ಲ ಬಿಡಿ. ಆದ್ರೂ ಕಳೆದ ವಾರದಲ್ಲಿ ನಾಲ್ಕೈದು ಬಾರಿ ಬಿಡದಿಗೆ ಹೋಗಿಬಂದಿದ್ದೆ. ಯಾಕೆ ಅಂತೀರಾ...ಖಂಡಿತ ಸ್ವಾಮಿ ಬಗ್ಗೆ ವರದಿಗಾಗಿ ಅಲ್ಲ ಸ್ವಾಮಿ, ಮದುವೆ ಫೋಟೊ ತೆಗೆಯಲಿಕ್ಕೆ ಅಲ್ಲಿ [ಕೆಂಗೇರಿ-ಬಿಡದಿ ಓಡಾಟ]ಹೋಗಿದ್ದೆ..ಅಷ್ಟೇಯಾ...

  ReplyDelete
 43. ಶಿವು, ಅಬ್ಬಾ...ಕಡೆಗೂ ನಮಗೆ ಚನ್ನಗಿ ಪರಿಚಯವಿರುವ ಮತ್ತು ನಮ್ಮ ವಿಶ್ವಾಸಿ ಗೆಳೆಯ ಹೋದ್ರಲ್ಲಾ first hand information ಸಿಗುತ್ತೆ ಅಂದುಕೊಂಡ್ರೆ...disappoint ಮಾಡಿಬಿಟ್ರಿ...ಹಹಹ...
  ಆದ್ರೂ ಮದುವೆ ಕವರೇಜು ಲಕ್ಷ ಪಾಲು ಬೆಟರ್ ದ್ಯಾನ್ ಈ ಗಲಿಜು.....ಹಹಹ... ಹೇಗಿತ್ತು ನಿಮ್ಮ ಟ್ರಿಪ್ಪು...?

  ReplyDelete
 44. innu munde swaamigalu tumbaa hushaaraagirbeku!!!! :-)

  ReplyDelete
 45. ರವಿಕಾಂತ್ ಸರ್, ಸ್ವಾಮಿಗಳು ಹುಶಾರಾಗಿರಬೇಕೋ...ಅಥವಾ..ಜನಾನೋ.....ನಿಮ್ಮ ಮಾತು ನಿಜ ಪ್ರಾಮಾಣಿಕ ಸ್ವಾಮಿಗಳೂ ಹುಷಾರಾಗಿರಬೇಕು..ಅನ್ನೋದು....

  ReplyDelete
 46. Hi, Nana blogge betti kotidake danyavadagalu,ege kodtha eri,nimma blog tumba interesting agide!bookmark madikondidini!

  ReplyDelete
 47. Azad!!!
  nice one. really enjoyed...ತರ್ಲೆ ನನ್ನ್ ಮಗಂದು ಬಂದ್ ಬಿಟ್ಟು....
  :-)
  ಮಾಲತಿ ಎಸ್.

  ReplyDelete
 48. Azadre, naanu eede time ge Indiadallidde... Yaav chanell on maadidru Nityanandara guNa gaana... chenaagide :)

  ReplyDelete
 49. naanu bidadi avne...aadre naanu aa raithaniddanella haage ee vishyadalli swalpa agna.. nanna blogigu omme bheti needi papuputa.blogspot.com

  ReplyDelete