Monday, March 15, 2010

ಆತ್ಮೀಯರೇ ನಿಮಗೆಲ್ಲ ಯುಗಾದಿಯ ಮನಃಪೂರ್ವಕ ಹಾರ್ದಿಕ ಶುಭಾಷಯಗಳು


ಆದಿ ಅಂತ್ಯಕಾಗುವ ಗಾದಿ
ಗಾದಿಯೇರಲಿದೆ ಉಗಾದಿ
ಕಹಿಗಣಿಮಾಡೋ ಗಾದಿ
ವರುಷ ಹರುಷಕಿದು ಗಾದಿ
ಅಂದಿತ್ತು ಇಂದಿದೆ ಮುಂದಾಗುವುದು
ಬಲಿತು ನೆರೆತು ಬಂದರೂ ಸಾವು
ಮಳೆಯಿರಲಿ ಬರಬರಲಿ
ಚಿಗುರೊಡೆವುದು ಮಾವು
ಗರಿಗರಿಯಾಗಿ ಆಲೆಮನೆ ಬೆಲ್ಲ
ನೋವುಂಡವಗೆ ಬೇವೇನು..?
ತಾಳಿದವಗೆ ಬೆಲ್ಲದ ಜೇನು
ಬಿರಿದನೆಲ ಮತ್ತೆಜೀಗುಡುವುದು
ಕಾಲುವೆಗದ್ದೆ ನೀರುಣುವುದು
ಮಾವಿನ ತಳಿರು, ಬಾಳೆಯ ಹಸಿರು
ಕೆಸರುಂಡ ಕೈ, ಕೆನೆಹಾಲು ಮೊಸರು
ಮನವರಳಲಿ, ತನು ಚಿಗುರಲಿ
ನಮ್ಮನಿಮ್ಮಲ್ಲಿಗೆ ಚೈತ್ರ ಶುಭತರಲಿ
ನವ ವರ್ಷದ ಸೊಗಡಿನಂದಕೆ
ಸಾಕ್ಷಿಯಾಗಲಿ ಈ ಉಗಾದಿ
ಆದಿ ಅಂತ್ಯಕಾಗುವ ಗಾದಿ

32 comments:

  1. ಹೊಸವರ್ಷದ ಸ್ವಾಗತಕ್ಕೆ ಹರುಷದ ಕವನ. ಉಗಾದಿ ಎಲ್ಲರ ಮನ-ಮನೆ ಬೆಳಗಿ ಸ೦ತಸ ನೀಡಲಿ ಎ೦ದು ಹಾರೈಸುವೆ. ನೋವು೦ಡವಗೇ ಬೇವೇನು? ಅದ್ಭುತ ಸಾಲು. ಹೊಸವರ್ಷಕ್ಕೇ ಹೊಸಹುಮ್ಮಸಿನ ತೀವ್ರ ಅಶಾದಾಯಕ ಕವನ ಮನಕ್ಕೇ ತು೦ಬು ಮುದ ನೀಡಿತು.

    ReplyDelete
  2. ನಿಮಗೂ ಯುಗಾದಿಯ, ಹೊಸವರ್ಷದ ಹಾರ್ದಿಕ ಶುಭಾಶಯಗಳು
    .ಉಗಾದಿಯ ಗಾದಿ ಚೆನ್ನಾಗಿದೆ.

    ReplyDelete
  3. ಶುಭಾಶಯಗಳು ಸರ್ ನಿಮಗೂ. ಗಾದಿಯ ಕವನ ಯುಗಾದಿಯ ಶುಭ ಸ್ವಾಗತವೆ.

    ReplyDelete
  4. ಜಲಾನಯನ ಸರ್,
    ನಾಲ್ಕು ಸಾಲುಗಳ ಕವನದಲ್ಲಿ ನಾಲ್ಕು ಕೋಟಿ ಅರ್ಥಗರ್ಭಿತ ಸಂದೇಶಗಳು ಹೊತ್ತ ತಂದಿದೆ ನಿಮ್ಮ ಉಗಾದಿಯ ಕವನ . ಹೊಸ ವರ್ಷದ ಶುಭಾಶಯಗಳು . ಬೇವು ಬೆಲ್ಲ ತುಂಬಿದ ಇನ್ನೊಂದು ವರ್ಷ ನಮಗಾಗಿ ಬಂದಿದೆ .

    ಮನಸಾರೆ

    ReplyDelete
  5. ಆಜಾದ್ ಸರ್,
    ಉಗಾದಿ ಸಂದೇಶ ಹೊತ್ತು ತಂದ ಅರ್ಥಗರ್ಭಿತ ಕವನಕ್ಕೆ ಧನ್ಯವಾದಗಳು....... ನಿಮಗೂ ಹೊಸ ವರ್ಷದ ಶುಭಾಶಯಗಳು......

    ReplyDelete
  6. ಸರ್,
    ಉಗಾದಿಯ ಕವನ ಸುಂದರ
    ಹಬ್ಬಕ್ಕೆ ಬನ್ನಿ

    ReplyDelete
  7. ನನ್ನ ಜಲನಯನಕ್ಕೆ ಬಂದು ಬೇವು-ಬೆಲ್ಲ ಮೆದ್ದ ಸೀತಾರಾಂ ಸರ್...ಹಬ್ಬದ ತಯಾರಿ ಜೋರಾ..? ಶುಬಾಷಯಗಳು...

    ReplyDelete
  8. ಶಶಿ...ಬೆಲ್ಲದ ಅಚ್ಚು ಬೇವಿನ ಕುಚ್ಚು ನಿಮಗೆಲ್ಲ ಅಚ್ಚುಮೆಚ್ಚಾಗಿ ವರ್ಷದ ಸಿಹಿ ನಿಮಗೆ ಕಹಿಯ ಮನವರಿಕೆಯೇ ಆಗದಂತೆ ಮಾದಲಿ...

    ReplyDelete
  9. ಸಂಭುಲಿಂಗವ್ರೇ...ನಿಮ್ಮೆಲ್ಲ ಕುಟುಂಬವರ್ಗಕ್ಕೆ ಶುಭಾಷಯಗಳು

    ReplyDelete
  10. ಮನಸಾರೆ ನನ್ನ ಶುಭಕಾಮನೆಗಳು..ನಿಮಗೆ ನಿಮ್ಮ ಪರಿವಾರಕ್ಕೆ..ಎಲ್ಲ ಮಿತ್ರ ವೃಂದಕ್ಕೆ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

    ReplyDelete
  11. ದಿನಕರ್ ನಿಮಗೂ ನಿಮ್ಮ ಮನೆಯವರಿಗೂ ನಮ್ಮ ಮನದಾಳದ ಶುಭಕಾಮನೆಗಳು.....

    ReplyDelete
  12. ಡಾಕ್ಟ್ರೇ...ಮುಂದಿನ ಹಬ್ಬ ಸ್ವದೇಶ ಮತ್ತು ಕರುನಾಡಲ್ಲಿ ಅಲ್ಲ್ವಾ..? ಬೇವು-ಬೆಲ್ಲದ...ಸಮತೋಲನ ಕಲಿಸಿ ಜೀವನವನ್ನು ಸಿಹಿಯಾಗಿಸಲಿರುವ ಯುಗಾದಿಯ ಶುಭಾಷಯಗಳು.

    ReplyDelete
  13. ಅರ್ಥಗರ್ಭಿತ ಸಾಲುಗಳು.
    ಹೊಸವರುಷದ ಈ ಶುಭಗಳಿಗೆಯಲಿ
    ಮಧುರ ಕವನದ ಸಿಹಿ ಔತಣ
    ನಿಮಗಿದೋ ಶುಭಾಶಯ ಎಂದಿಗೂ
    ಹೀಗೆ ಮೂಡುತಿರಲಿ ಕವನ ಸಿಂಚನ

    ReplyDelete
  14. ಜಲನಯನ ಅವರೆ,
    ಶುಭಾಶಯ ಕೋರುತ್ತಾ ಬ೦ದ೦ತಹ ಕವನ ಆಲೆಮನೆ ಬೆಲ್ಲದ೦ತೆಯೇ ಸಿಹಿಯಾಗಿದೆ.
    ಯುಗಾದಿ ನಿಮಗೆ ಹಾಗೂ ಸಕುಟು೦ಬ ಪರಿವಾರಕ್ಕೆ ಶುಭವನ್ನು ತರಲಿ,ಹೊಸ ವರುಷ ಹರುಷದ ಕಾರ೦ಜಿಯನ್ನು ಉಕ್ಕಿ ಹರಿಸಲಿ ಎ೦ದು ಹಾರೈಸುತ್ತೇನೆ.

    ReplyDelete
  15. happy ugadi, nice kavana sir thanks

    ReplyDelete
  16. ಸೊಗಸಾದ ಕವನ...
    ನಿಮಗೆಲ್ಲರಿಗೂ ಯುಗಾದಿಯ ಶುಭಹಾರೈಕೆಗಳು....
    ಹೊಸ ವರುಷ ಇನ್ನಷ್ಟು ಹರುಷವನ್ನು ತರಲಿ...

    ReplyDelete
  17. ಹೊಸ ವರ್ಷವನ್ನು ಸುಂದರವಾದ ಕವನದೊಡನೆ ಸ್ವಾಗತಿಸಿರುವಿರಿ. ನಿಮಗೂ ಸಹ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

    ReplyDelete
  18. ಹೊಸ ಸಂವತ್ಸರಕ್ಕೆ , ಒಳ್ಳೆಯ ಕವನ ಕೊಟ್ಟು ಬರಮಾಡಿಕೊಂಡ್ ಇದ್ದೀರಿ.... ಇದೆ ರೀತಿ ಮುಂದುವರಿಯಲಿ ನಿಮ್ಮ ಲೇಖನಿ ಧಾರೆ....
    ನಿಮಗೂ ಕೂಡ ಯುಗಾದಿ ಹಬ್ಬದ ಹಾರ್ದಿಕ ಶುಬಾಶಯಗಳು
    ಗುರು

    ReplyDelete
  19. ಯುಗಾದಿಗಾಗಿ ಬರೆದ ಕವನ ತುಂಬಾ ಚೆನ್ನಾಗಿದೆ...

    ನಿಮಗೂ ಯುಗಾದಿ ಹಬ್ಬದ ಶುಭಾಶಯಗಳು.

    ReplyDelete
  20. ಮನದಾಳದಿಂದ ನಿಮ್ಮ ಮಾತು ಪ್ರತಿಕ್ರಿಯೆ ಹಾಗೂ ಪ್ರೋತ್ಸಾಹಕ್ಕೆ ಉಗಾದಿಯ ಶುಭಕಾಮನೆಗಳ ಜೊತೆ ಧನ್ಯವಾದ

    ReplyDelete
  21. ಮನಮುಕ್ತಾ ನಿಮಗೂ ಯುಗಾದಿಯ ಹಾರ್ದಿಕ ಶುಭಕೋರುತ್ತೇವೆ,

    ReplyDelete
  22. ಮನಸು ಮೇಡಂ ಯುಗಾದಿಯ ಗ್ರೀಟಿಂಗ ಬಹಳ ಚನ್ನಾಗಿ ಮೂಡಿ ಬಮ್ದಿದೆ...ಧನ್ಯ್ವಾದ ನಿಮ್ಮ ಪ್ರತಿಕ್ರಿಯೆಗೆ..

    ReplyDelete
  23. ಮಯೇಸಣ್ಣ...ಧನ್ಯವಾದ ಕಣಣ್ಣ...ಮತ್ತೆ ಹಬ್ಬ ಜೋರಾ...ಎಲ್ಲಿ ಚುಟ್ಕಗಳು ಕಾಣ್ತಿಲ್ಲ ಈ ಮಧ್ಯೆ...?

    ReplyDelete
  24. ಸುನಾಥ್ ಸರ್ ಧನ್ಯವಾದ ನಿಮ್ಮ ಅಭಿಮಾನಕ್ಕೆ...ಶುಭಾಷಯಗಳು ನಿಮ್ಮ ಎಲ್ಲ ಕುಟುಂಬ ವರ್ಗಕ್ಕೆ..

    ReplyDelete
  25. ಗುರು ಥ್ಯಾಂಕ್ಸ್ ರೀ..ಹೇಗೆ ನಡೆದಿದೆ ಕೆಲ್ಸ..ಹಬ್ಬ..ಹೇಗಿತ್ತು...ಧನ್ಯವಾದ ನಿಮ್ಮ ಅಭಿಮಾನಕ್ಕೆ.

    ReplyDelete
  26. ಶಿವು..ನಿಮಗೆ ಹೇಮಾಶ್ರೀ ಗೆ ಧನ್ಯವಾದ ಮತ್ತು ಯುಗಾದಿಯ ಹಾರ್ದಿಕ ಶುಭಾಷಯಗಳು..

    ReplyDelete
  27. ಒಳಗಿನಿಂದ ನೀವು ಬೇರೆ ನಾನು ಬೇರೆ ಅಲ್ಲದಿರುವಾಗ ನಾನು ನಿಮ್ಮನ್ನು ಹೇಗೆ ಮರೆತೇನು? ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ

    ReplyDelete
  28. power packed poem for Ugadi.

    thank you and wish you the same

    :-)

    malathi S

    ReplyDelete
  29. ವಿಆರ್ಬಿ. ಸರ್...ನಿಮ್ಮಮಾತಿಗೆ ಎದುರಿಲ್ಲ ಬಿಡಿ...ಹಹಹ...ನಿಜ ಮನಸು-ಮನಸು ಹತ್ತಿರವಾದರೆ..ಎಲ್ಲ ಸುಮಧುರ.....ಧನ್ಯವಾದ ನಿಮ್ಮ ಆತ್ಮೀಯತೆಗೆ.

    ReplyDelete
  30. ಮಾಲತಿಯವರೇ...ನಿಮ್ಮ ಹಬ್ಬದ ಸಂಭ್ರಮದಲ್ಲಿ ನಾವೂ ಭಾಗಿ...ಧನ್ಯವಾದ ನಿಮ್ಮ ಅಭಿಮಾನಕ್ಕೆ ಪ್ರತಿಕ್ರಿಯೆಗೆ...ಮತ್ತೆ..ಹಬ್ಬದ ಹೋಳಿಗೆ ಜೋರಾ...??

    ReplyDelete
  31. 'ಜಲನಯನ' ಅವರಿಗೆ "ಉಗಾದಿಯ ಶುಭಾಶಯಗಳು.."

    ಈ ಬಾಳು ಬೇವು-ಬೆಲ್ಲ
    ಎಲ್ಲಾನೂ ಸವಿಲೇಬೇಕು..

    ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ..: http://manasinamane.blogspot.com (ಮಾರ್ಚ್ ೧೫ ರಂದು ನವೀಕರಿಸಲಾಗಿದೆ)

    ReplyDelete
  32. Guru thanks. Will visit your blog ..also..
    azad

    ReplyDelete