Wednesday, April 21, 2010

ಹುಚ್ಮುಂಡೆ ಮದ್ವೆ..ಉಂಡವನೇ....


ಭಸ್ಮಾಸುರನ ಪವರ್ರು ಶಿವನಿಗೇ ಗೊತ್ತು

ಏನೋ..ಪಾಪ ಭಕ್ತ ಅಂದಿದ್ದೇ ವಿಪತ್ತು

ವರ ಕೊಟ್ಟ, ಬಂತು ಶಿವನ ಅಸ್ತಿತ್ವಕ್ಕೇ ಆಪತ್ತು

ಅದಕ್ಕೇ ನೋಡಿ ಬಿ.ಸಿ.ಸಿ.ಐಗೇ ಬಂದಿದೆ ಕುತ್ತು

ಐಪಿಎಲ್ ಅನ್ನೋ ಅಸುರ ಹುಟ್ಕೊಂಡ

ಹಣ, ಹೆಂಡ ಹುಡ್ಗೀರು, ಬೆಟ್ಟಿಂಗು ಉಂಡ

ಬೆಳೆದ ಅಗಾಧ..ಆಗಿ ಟೆಸ್ಟು-ಒಂಡೇಗೇ ಗಂಡ

ಜನಕ್ಕೆ, ಆಟ ಆಡೋರ್ಗೆ ಅನ್ನಿಸ್ತು ಬೇರೆಲ್ಲಾ ದಂಡ

ನಿಜವಾದ ಆಟ, ನಟರ ನಟನೆ ತೂರಿತ್ತು ಗಾಳಿಗೆ

ಸಿಕ್ಕಿಬಿದ್ರು, ಬೇರೇನೂ ಕಾಣ್ಲಿಲ್ಲ ಐಪಿಎಲ್ ದಾಳಿಗೆ

ಭಾವಿ ಇಂಜನೀಯರೊಬ್ಬ ಬಲಿಯಾದ ಆಸೆಗೆ

ಸಿಡಿಸಿದ್ರು ಬಾಂಬು.. ಸೆಮಿಫೈನಲ್ಲು ಬಾಂಬೆಗೆ

ಈಗ ನೋಡಿ ಮೋದಿ-ಐಪಿಎಲ್ ದೇ ಎಲ್ಲೆಲ್ಲೂ ಮೋಡಿ

ಬರ್ತಾರೆ ದುಡ್ಮಾಡೋಕೆ ವಿದೇಶದಿಂದ ಆಟ್ಗಾರ್ರು ಓಡಿ

ಟಿಕೆಟ್ ದುಡ್ಡು, ಪ್ರೇಕ್ಷಕರ ರಕ್ತ ಹರಿದೈತೆ ಕೋಡಿ

ಹುಚ್ಮುಂಡೆ ಮದ್ವೇಲಿ ಉಂಡವನೇ ಜಾಣ.. ಅದ್ಕೇ ಹೇಳೋದು ನೋಡಿ

42 comments:

  1. IPL ಕೊಳಕನ್ನು ಸರಿಯಾಗಿ ಹೇಳಿದ್ದೀರಿ. ಆಟದ ಹೆಸರಲ್ಲಿ ನಡೆಯುತ್ತಿರುವ ಮೋಜು-ಮಸ್ತಿ, ಭ್ರಷ್ಟಾಚಾರಗಳು ವಾಕರಿಕೆ ತರಿಸುವಂತಿದೆ. ಇನ್ನೂ ಆ ಅಂಬಾನಿ, ಮಲ್ಯ, ಲಲಿತ್ ಮೋದಿಗಳಂತೂ ...ಥೇಟ್ ಭಸ್ಮಾಸುರರೇ...ಎಂದು ಬುದ್ದಿ ಬರುವುದೋ ಜೊಲ್ಲು ಸುರಿಸುವ ನಮ್ಮ ಜನರಿಗೆ..!

    ReplyDelete
  2. ಸರ್,
    ನಿನ್ನೆಯ ಮತ್ತು ಇಂದಿನ i p l ಸುದ್ದಿ ನೋಡಿದ್ರೆ ಎಲ್ಲರೂ ಕಳ್ಳರೇ ಎಂದು ಗೊತ್ತಾಗತ್ತೆ........... ನಮಗೆ ಕ್ರಿಕೆಟ್ , ಹುಡ್ಗೀರು ತೋರ್ಸಿ ಅವರು ಬರೀ ಹಣ ಮಾಡ್ತಾ ಇದ್ದಾರೆ........... ಥೂ ಹೇಸಿಗೆ ಹುಟ್ಟಿಸ್ತಾ ಇದೆ............. ಕವನ ಸಮಯೋಚಿತವಾಗಿದೆ ಸರ್..........ಚೆನ್ನಾಗಿದೆ..............

    ReplyDelete
  3. ಹಾ ಹಾ ..IPL ರಾಮಾಯಣ ದ ಮೇಲೆ ಒಳ್ಳೆ ಕವಿತೆಯನ್ನೇ ಬರೆದಿದ್ದೀರಿ ಭಯ್ಯಾ. ಚೆನ್ನಾಗಿದೆ. ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ ಅಲ್ವಾ ...

    ReplyDelete
  4. ಸುಬ್ರಮಣ್ಯ, ನಿಜ ನೋಡಿ ನಮ್ಮಂಥವರ ಹಣ ಸುಲಿಯೋ ಈ ಐಷಾರಾಮಿಗಳು...ಆಟ ಅನ್ನೋದು ಬರೀ ಹೆಸರಿಗೆ...ಹೆಂಡ ಹುಡ್ಗೀರನ್ನ ತೋರ್ಸಿ ತಲೆಹಿಡುಕರು...ಹೇಸಿಗೆ..ಹೌದು ನಿಮ್ಮ ಮಾತು ದಿಟ

    ReplyDelete
  5. This comment has been removed by the author.

    ReplyDelete
  6. ದಿನಕರ್, IPL ದರೋಡೆ ಹೊಸ ತಿರುವು ಪಡೆಯುತ್ತಿದೆ...IT raid ನಡೆದಿದೆ...ಎಷ್ಟು ಹೊಲಸು ಇದ್ಯೋ ಯಾರಿಗೊತ್ತು..??

    ReplyDelete
  7. ತಂಗ್ಯವ್ವಾ...ನಮ್ಮ ಅಭಿಮಾನ ಆಟದ ಬಗ್ಗೆ ನಮಗಿರುವ ಚಟಗಲನ್ನ ಚನ್ನಾಗಿ ಕ್ಯಾಶ್ ಮಾಡ್ಕೋತಾ ಇರೋರು .....ದುಡ್ಡಿರೋರು..ನಾವು ಕಳ್ಕೋತಾ ಇದೀವಿ...ಭಾವೀ ಇಂಜನೀಯರೊಬ್ಬ ಹಣ ಗಳಿಸೋಕೆ ಅಂತ ದುಡ್ಡು ಹಾಕಿ ಪ್ರಾಣ ಕಳ್ಕೊಂಡ...

    ReplyDelete
  8. ಹುಚ್ಚಿ ಮದುವೇಲಿ ಉಂಡವನು ಜಾಣ! ಮದುವೆ ಮಾಡಿಸಿದವನು ಪ್ರಳಯಾಂತಕ !ಚೆನ್ನಾಗಿದೆ .ನನ್ನ ಬ್ಲಾಗಿಗೆ ಒಮ್ಮೆ ಭೇಟಿ ಕೊಡಿ.

    ReplyDelete
  9. ಚೆನ್ನಾಗಿದೆ..ನಿಜ ನೀವು ಹೇಳಿದ್ದು ಹಣ ಮನುಷ್ಯನನ್ನು ಹೇಗೆ ಮಾಡಿಸುತ್ತಲ್ಲ ..!!

    ReplyDelete
  10. ಹಹಹ ಚೆನ್ನಾಗಿದೆ, ನಿಮ್ಮ ಮಾತು ಸತ್ಯ.... ಸಮಯಕ್ಕೆ ತಕ್ಕಂತ ಕವನ

    ReplyDelete
  11. ಭಸ್ಮಾಸುರ ಕೊನೆಗೆ ತನ್ನನ್ನೇ ಸುಟ್ಟುಕೊಂಡ. ಲಲಿತ ಮೋದಿಗೂ ಅದೇ ಗತಿ,

    ReplyDelete
  12. ತುಂಬಾ ಚೆನ್ನಾಗಿ ಆಟದ ವರದಿ ಹೇಳಿದ್ದಿರಾ
    ಎಲ್ಲ ಹಣಮಯ
    ಆಟ ಕೇವಲ ನಾಟಕ ವಾಗಿದೆ

    ReplyDelete
  13. ಅಜಾದ್,

    ಐಪಿಎಲ್ ಬಗ್ಗೆ ಸರಿಯಾಗಿ ಹೇಳಿದ್ದೀರಿ...ಇದು ನೀವು ಹೇಳಿದಂತೆ ಎಲ್ಲರಿಗೂ ಟೆಂಪ್ಟ್ ಮಾಡಿದರಬಹುದು. ಅದರ ಪರೋಕ್ಷ ಪರಿಣಾಮಗಳು ತುಂಬಾ ಆಗಿವೆ. ಈ ಪಂದ್ಯವಳಿಗಳು ಪ್ರಾರಂಭವಾಗುವುದು ರಾತ್ರಿ ಎಂಟುಗಂಟೆಗೆ ಮತ್ತು ಮುಗಿಯುವುದು ೧೨ ಗಂಟೆಗೆ. ಅದನ್ನು ನಿತ್ಯ ನೋಡುವ ನಮ್ಮ ಬೀಟ್ ಬಾಯ್ಸ್ ದಿನಾ ಬೆಳಿಗ್ಗೆ ಪತ್ರಿಕೆ ಹಂಚಿಕೆ ಕೆಲಸಕ್ಕೆ ಚಕ್ಕರ್. ಹೀಗೆ ನನ್ನಂತ ಅನೇಕ ವೆಂಡರುಗಳು ಮಾತ್ರವಲ್ಲ ಲಕ್ಷಾಂತರ ಜನ ಸಣ್ಣ ಉದ್ಯೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕೊನೆಗೆ ಮುಗಿಯುವ ಹಂತಕ್ಕೆ ಬಂತಲ್ಲ...ಅದೇ ಖುಷಿ ನನಗೆ.

    ಐಪಿಎಲ್ ನಂತ ಹುಚ್ಚುಮುಂಡೆ ಗಂಡನ ಮದುವೆಯಲ್ಲಿ ಉಂಡವರು ಜಾಣರು, ಆದ್ರೆ ನಮ್ಮಂಥವರು ಪಡಪೋಸಿಗಳು.

    ReplyDelete
  14. ಹರೀಶ್ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...ನನ್ನ ಬ್ಲಾಗಿಗೆ ಬಂದದ್ದಕ್ಕೂ...

    ReplyDelete
  15. ಡಾ. ಕೃಷ್ಣಮೂರ್ತಿಯವರಿಗೆ ಜಲನಯನಕ್ಕೆ ಸ್ವಾಗತ...ಹೌದು ಸರ್, ನಮ್ಮನ್ನ ಮೂರ್ಖರನ್ನಾಗಿಸಿ...ಬೇಳೆ ಬೇಯ್ಸಿಕೊಳ್ತಾಯಿರೋರು...ಹಣದಾಹಿಗಳು...ಅಲ್ವಾ...?

    ReplyDelete
  16. ಶಶಿ ಧನ್ಯವಾದ ಹಣವೇ ನಿನ್ನಯ ಗುಣವೇ...!!!

    ReplyDelete
  17. ಮನಸು ಮೇಡಂ ಏನಪ್ಪಾ ನೀವೇನಾ...?? ಜಲನಯನಕ್ಕೆ ಬಂದಿದ್ದು ಅಂತ ಆಶ್ಚರ್ಯ ಆಯ್ತು... ಧನ್ಯವಾದ ಬಂದ್ರಲ್ಲಾ...ಮತ್ತೆ ಪ್ರತಿಕ್ರಿಯೆನೂ ನೀಡಿದ್ರಿ....

    ReplyDelete
  18. ಸುನಾಥ್ ಸರ್, ಭಸ್ಮಾಸುರನಿಗೆ ಮೋಹಿನಿ ಕೊಟ್ಲು ಕೈ...ಈ ಐಪಿಎಲ್ ಭಸ್ಮಾಸುರನಿಗೆ...ಯಾರು ಮೋಹಿನಿರೂಪಿ...? ಹಹಹ....ಧನ್ಯವಾದ...

    ReplyDelete
  19. ಗುರು, ನಿಜ ಆಟದ ಚಾಣಾಕ್ಷತೆ, ಧೈರ್ಯ, ಸ್ಥೈರ್ಯ ಎಲ್ಲ ಸೊನ್ನೆ ಇಲ್ಲಿ...ಬಂದು ಅಡ್ಡ ದಿಡ್ಡಿ ಬೀಸಿ ರನ್ ಮಾಡಿದವನೇ ಹೀರೋ...ಇನ್ನು ಆ ಹುಡ್ಗೀರು...ಅರ್ಧಂಬರ್ಧ ಬಟ್ಟೆ...ಇದನ್ನ ನೋಡೊಕೆ ಬರೋ ಜನ...ಆಟ..ಬರೀ ಕಾಟಾಚಾರ...ಅಲ್ವಾ....

    ReplyDelete
  20. ಶಿವು, ಹೌದು ನೋಡಿ...ಬೆಟ್ಟಿಂಗ್ ಕಟ್ಟಿ ಕಷ್ತಪಟ್ಟು ಉಳಿಸಿಟ್ಟ ಹಣ ನೀರಲ್ಲಿ ಹುಣಿಸೇ ಹೊಸೆದಹಾಗೆ ...ಇನ್ನು ಹುಚ್ಚು ಹಿಡಿದವರ ತರಹ ಕೆಲಸ ಕಾರ್ಯ ಬಿಟ್ಟು ಓಡಾಡೋ ಪಡ್ಡೆ ಹುಡುಗ್ರು ...ಒಂದು ಹೆಸರು ನೂರಾರು ಕೆಸರು....
    ಧನ್ಯವಾದ...

    ReplyDelete
  21. ತುಂಬಾ ಚನ್ನಾಗಿದೆ ಲೇಖನ :-)

    ReplyDelete
  22. IPL ಜಾತಕನ ಜಾಲಾಡಿ ಬಿಟ್ಟಿದಿರಲ್ಲ . ಪೋಸ್ಟ್ ಟೈಟಲ್ ಸಕತ್ತಾಗಿದೆ , ಹಾಗೂ ಕರೆಕ್ಟ್ ಆಗಿ ಸೂಟ್ ಆಗುತ್ತೆ ಬಿಡ್ರಿ . ದಿನ ಬೆಳಗಾದ್ರೆ ಎಲ್ಲ ಪೇಪರ್ ಗಳಲ್ಲಿ ಮೋದಿ , ತರೂರ್ , IPL ಗಳ ಹಾವಳಿ .
    ಸರ್ ಪ್ರಸ್ತುತ ಕೊಳಕನ್ನ ಚೆನ್ನಾಗಿ ಹೇಳಿದ್ದಿರ . ಆದ್ರೆ ಈ ಅಸುರ ಚಿರಂಜೀವಿ ರೀ ...ಯಾವತ್ತಲು ಇರ್ತಾನೆ ಬೇರೆ ಬೇರೆ ರೂಪದಲ್ಲಿ ಹುಟ್ತಾನೆ .

    ಮನಸಾರೆ

    ReplyDelete
  23. ಸಮಯೋಚಿತ ಕವನ..
    ನಿನ್ನೆ NDTVಯಲ್ಲಿ ಹೇಳ್ತಿದ್ರು ಅದು 'ಇಂಡಿಯನ್ ಪೈಸ ಲೀಗ್' ಅಂತ!!

    ReplyDelete
  24. ಮನಸ್ವಿಯವರೇ, ಸ್ವಾಗತ ಮತ್ತು ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...

    ReplyDelete
  25. ಸೀತಾರಾಂ ಸರ್ ಇದು ಈಗ ಪಾರ್ಲಿಮೆಂಟ್ ನಲ್ಲೂ ಪ್ರತಿಧ್ವನಿ....ಈ ರಾಜಕಾರಣಿಗಳು ಯಾವ ಕ್ಷೇತ್ರವನ್ನೂ ಬಿಡೊಲ್ಲ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  26. ಮನಸಾರೆ ಹೇಳಿದ್ರಿ....ಈ ರಾಜಕಾರಣಿ ಅನ್ನೋ ಕಳೆ ಯಾವ ಹೊಲವನ್ನೂ ಗದ್ದೆಯನ್ನೂ ಕೊಳ...ಇಳೆ ..ಯಾವುದನ್ನೂ ಬಿಡೊಲ್ಲ....ಇವರು ನಿಜ ರಾಕ್ಷಸರು... ಹೌದು ಚಿರಂಜೀವಿಗಳು,....

    ReplyDelete
  27. Thanks Vanitha.....so you get to see NDTV...?
    go on watching...U will see more to come...or erupt...!!!!

    ReplyDelete
  28. ಆಝಾದ್...

    ಇನ್ನೇನೂ ಹೇಳುವದು ಬೇಡ..

    "ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೇ.. ಜಾಣ..."
    ಇದರಲ್ಲಿ ಎಲ್ಲವೂ ಅಡಗಿದೆ..

    ದಿನ ಕಳೆಯುತ್ತಿದ್ದ ಹಾಗೆ ಬಣ್ಣವೆಲ್ಲ ಗೊತ್ತಾಗುತ್ತಿದೆ...

    ಬಹಳ ಸೊಗಸಾಗಿ, ಸಮಯೋಚಿತವಾಗಿದೆ...

    ReplyDelete
  29. IPL ರಾದ್ಧಾಂತ ನೋಡಿದರೆ ಎಲ್ಲರೂ ಕಳ್ಳರೇ ಅನಿಸುತ್ತದೆ. ಸ್ಟೇಡಿಯಂ ಒಳಗಿನ ಆಟಕ್ಕಿಂತ ಹೊರಗಿನ ಆಟವೇ ಹೆಚ್ಚು ಸ್ವಾರಸ್ಯಕರವಾಗಿದೆ

    ReplyDelete
  30. ಪ್ರಕಾಶ...ನನಗೆ ಚಿಕ್ಕಂದಿನಲ್ಲಿ ನನ್ನಜ್ಜ ಹೇಳುತ್ತಿದ್ದ ಮಾತು ಸರ್ವಕಾಲಕ್ಕೂ ಅನ್ವಯ ಅನಿಸುತ್ತೆ...ಅವರು ಏನಾದರೂ ಗೊಂದಲದ ವಿಷಯ ಕೆದಕಿದಾಗ "ಈಗ ಕ್ಷೌರಿಕನ ತಿಪ್ಪೆಯನ್ನು ಕೆದಕೋದು ಬೇಡ" ಅಂತ ...ಎಷ್ಟು ದಿಟ ಎನಿಸುತ್ತೆ ಈ ಮಾತು ...ಅದನ್ನು ಕೆದಕಿದರೆ ಕೂದಲಿನ ಹೊರತು ಮತ್ತೇನೂ ಪಡೆಯಲಾಗದು ಎನ್ನುವುದು....ಆಗ ನಾವೆಲ್ಲಾ ನಗಾಡಿ ಸುಮ್ಮನಾದೆವು...ಈಗ ..ಎಂತಹ ಅನುಭವದ ನುಡಿ ಎನಿಸುತ್ತದೆ..

    ReplyDelete
  31. ಕಳ್ಳರ ಸಂತೇಲಿ ದರೋಡೆ ಮಾಡೋನು ಮಹಾ ಕಳ್ಳ ಅಲ್ಲ್ವಾ ದೀಪಸ್ಮಿತಾವರೇ...ಇದು ಇನ್ನೂ ಎಲ್ಲಿಗೆ ಹೋಗಿ ಮುಟ್ಟುತ್ತೋ ತಿಳಿಯದು...

    ReplyDelete
  32. ಅಜಾದ ಸರ್,
    IPL ನ ಟೀಮ್ owner ಬಗೆಗೆ ಮತ್ತು ಅವರ ಅವ್ಯವಹಾರದ ಬಗೆಗೆ ಓದಿ ಭ್ರಷ್ಟಾಚಾರ ಮಾಡುವ ಹೊಸ ಹೊಸ ಹಾದಿ ಕಂಡುಕೊಳ್ಳುವವರು ಹೆಚ್ಚಾಗ್ತಾ ಇದ್ದಾರೆ ಆದ್ರೆ ಕ್ರಿಕೇಟ್ ಪ್ರೇಮಿಗಳು(ಪ್ರೇಮಿಗಳೋ ಹುಚ್ಚರೋ?) ಕಣ್ಣೀದ್ದೂ ಕುರುಡಾಗಿ ವರ್ತಿಸುತ್ತಿದ್ದರೆ. ಬಹಳ ಚೆನ್ನಾಗಿ ipl ನ ಕಪಟವನ್ನು ಹೇಳಿದ್ದೀರಿ.

    ReplyDelete
  33. In the Mad widow's wedding,
    engrossed in eating, drinking and betting,
    swalpa acting, swalpa cheer leading,
    suffer agiddu paapa "classic cricketing"....

    ಚೆನ್ನಾಗಿದೆ ಆಝಾದ್ ಭಾಯ್. ಹೀಗೆ ಬರಿತಾ ಇರಿ....

    ReplyDelete
  34. ಧನ್ಯವಾದ ಸಾಗರಿಯವರೇ...ನಾವು ಸ್ವಾಮಿಗಳು, ಲಂಚಗುಳಿ ಆಫೀಸರ್ರು ಇವರ ಹಿಂದೆ ಕಾಳಜಿ ತೋರಿಸ್ತೀವಿ..ಈ ರಾಜಕಾರಣಿಗಳಿಗೆ..ಇದ್ರೂ ಇನ್ನೂ ಬಾಚೋ ಬಕಾಸುರರಿಗೆ...ಹೇಗೆ ಬುದ್ಧಿ ಕಲಿಸೋದು ??? ಹೆಚ್ಚು ಹೆಚ್ಚು ಇವರ ಬಣ್ಣ ಬಯಲು ಮಾಡ್ಬೇಕಿದೆ...

    ReplyDelete
  35. Ramesh idondu vishya visha aaging

    haage ellaa raajakaarnigalgoo kirkiri aaging
    thanks Ramesh nimma abhipraayakke...

    ReplyDelete
  36. IPL aavantharagaLannu nimmadhe sogadina bhaasheyalli vivarisiddeeri... ishta aaythu :)

    ReplyDelete
  37. ಜಲನಯನ,
    ಐ.ಪಿ.ಎಲ್. ಬಗ್ಗೆ ಉತ್ತಮವಾಗಿ ಬರೆದಿದ್ದೀರಿ..
    ನನಗಂತೂ ಈ ಸೋಮಾರಿ ಆಟ ಕಂಡ್ರೆ ಆಗಲ್ಲ..

    ReplyDelete
  38. ಸುಧೇಶ್ ಹೌದುರೀ ನಿಮಗೆ ಮುಂಚೆನೇ ನಾನು ಒಂದು ಕಾಮೆಂಟಿನಲ್ಲಿ ಹಾಕಿದ್ದೆ...ನಿಮ್ಮ ಕಥೆ ಬರೆಯುವ ಶೈಲಿ ನೋಡಿದ್ರೆ ನಿಮ್ಮನ್ನ ಯಾರಾದ್ರೂ ಟಿಇ ಸೀರಿಯಲ್ ನವ್ರೋ ಇಲ್ಲ ಸಿನಿಮಾ ಪ್ರೊಡ್ಯೂಸರ್ರೋ ಎತ್ತಿಹಾಕ್ಕೊಂಢೋಗ್ತಾರೆ ಅಂತ....ಹಹಹ...ಚೆನ್ನಾಗಿದೆ ಕಥೆ ಮುಂದುವರೀಲಿ...

    ReplyDelete
  39. ಗುರು...ನಿಮ್ಮ ಮಾತು ನಿಜ ಬರ ಬರ್ತಾ ಇದು ಹುಚ್ಚುಮುಂಡೆ ಮದ್ವೇನೇ...ಹಹಹ....ಧನ್ಯವಾದ ನಿಮ್ಮ್ಮ ಪ್ರತಿಕ್ರಿಯೆಗೆ...

    ReplyDelete
  40. Tumbaa chennagi helidri....nice one sir.....

    ReplyDelete