ನಮ್ಮದು ಒಂದು ಹೆಸರಾಂತ ಕುಟುಂಬ ಎಲ್ಲ ಸದಸ್ಯರೂ ಒಂದಲ್ಲೊಂದು ಸಾಧನೆ ಮಾಡಿದವರು..ಹತ್ತು ಕುಟುಂಬಗಳಲ್ಲಿ ನಮ್ಮ ಕುಟುಂಬ ಅದರಲ್ಲಿ ನಾನು ಅಂದ್ರೆ ನನ್ನ ಸುತ್ತ ಮುತ್ತಣ ಮತ್ತೆ ಕಾಲೇಜಿನ ಹುಡ್ಗೀರೆಲ್ಲಾ ನನ್ನ ಹೃತಿಕ್ ರೋಶನ್ ನೋಡೋ ಹಾಗೆ ಕಣ್ಣಲ್ಲೇ ಆರಾಧಿಸೊರು...ನಮ್ಮ ಕಸಿನ್ ಗಳಿಗೆ ನನ್ನ ಕಂಡ್ರೆ ಹೊಟ್ಟೆ ಕಿಚ್ಚು...ನನ್ನದೂ ಕಟ್ಟುಮಸ್ತು ದೇಹ ನನ್ನ ಸ್ವಿಮ್ಮಿಂಗ ಸ್ಟೈಲಿಗೂ ಮಾರುಹೋಗ್ದೇ ಇರೋರೇ ಇಲ್ಲ...ಅದಕ್ಕೆ ನನ್ನ ಕಟ್ಟುಮಸ್ತು ದೇಹ ಸಾಥ್ ನೀಡಿತ್ತು ಅಂದ್ರೆ ತಪ್ಪಲ್ಲ....
ಆ ದಿನ ಪ್ರತಿವರ್ಷ ದಂತೆ ನಡೆಯೋ ಈಜು ಸ್ಪರ್ಧೆಯ ಫೈನಲ್ ನಡೆಯುವ ದಿನ...ಪೂರ್ತಿ ಕೊಳ ಸಜ್ಜುಗೊಳಿಸಲಾಗಿತ್ತು ...ಹಲವಾರು ಸಹ ಈಜುಗಾರ್ತಿಯರೂ ಇದ್ದರು..ಪಕ್ಕದ ಕೊಳದಲ್ಲಿ.. (ಕೆಲವರಂತೂ ನನ್ನ ಮೆಚ್ಚಿಸಲೆಂದೇ..ಮೈಮಾಟ ಎದ್ದು ಕಾಣೋ ಹಾಗೇ ಕೊಳದಲ್ಲೇ ಇಜಾಡ್ತಾ..ನನ್ನ ಗಮನ ಸೆಳೀತಿದ್ದುದು ಈಗ್ಲೂ ನೆನಪಿಸಿಕೊಂಡ್ರೆ...ಏಹ್..!! ಪರ್ವಾಯಿಲ್ಲ ಕಣಯ್ಯ ..ನೀನು..ಒಳ್ಳೆ ಫ್ಯಾನ್ ಫಾಲೋಯಿಂಗ್ ಇದೆ ನಿನಗೆ..ಅಂತ ನನ್ ಬೆನ್ನ ನಾನೇ ತಟ್ಕೊಂಡಿದ್ದೂ ಉಂಟು...ಹಹಹ).
ಅಂದಹಾಗೆ ಮರೆತಿದ್ದೆ ಹೇಳೋದು...ನನ್ನ ಸ್ನೇಹಿತರೇ ಏಕೆ..ಹುಡ್ಗೀರೂ..ನನ್ನ "ಲವ್ಲಿ ಬಾಸ್" ಅಂತಾನೇ ಕರೀತಿದ್ದುದು....
ಸರಿ ಸ್ಪರ್ಧೆ ಶುರು ಆಯ್ತು ...ಎಲ್ಲರಿಗೂ ಗೊತ್ತಿತ್ತು ಸ್ಪರ್ಧೆ ಹೆಸರಿಗೆ ಮಾತ್ರ...ಗೆಲುವು.."ಲವ್ಲಿ ಬಾಸ್" ದೇ.. ಅಂತ....ನನಗೆ ಯಾಕೋ ಇದು ಒಂದು ತರಹ ನಿರಾಸೆ ಮೂಡಿಸಿತ್ತು.."ಅಲ್ಲಾ..ಇದೊಂದು ಸ್ಪರ್ಧೆನಾ...? ಥ್ರಿಲ್ ಇಲ್ದೇ ಇರೋ ಸ್ಪರ್ಧೆ..ಸರ್ಧೆನೇ ಅಲ್ಲ.." ಅನ್ನಿಸಿತ್ತು...
ಆದ್ರೂ ಎಲ್ಲ ಹುಡ್ಗೀರನ್ನ ಇನ್ನಷ್ಟು 'ದಿವಾನ' ಮಾಡೋ ಚಾನ್ಸು ನಾನು ಬಿಡ್ತೀನಾ...ವೈಯಕ್ತಿಕ ದಾಖಲೆ ಮಾಡೋಣ ಅನ್ನಿಸಿ...ರೆಡಿಯಾದೆ.....
ಆಗ ಸ್ಪರ್ಧಿಗಳ ಹೆಸ್ರು ಕರೆದ್ರು.... ಸಿಲ್ವಸ್ಟರ್ ಉರ್ಫ್ "ಲವ್ಲಿ ಬಾಸ್" ಎಂದಾಗ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು...ಕಡೆಯ ಸ್ಪರ್ಧಿ ಬ್ರೇವ್ ಬ್ರೀಮ್ ಎಂದಾಗ ನನಗೆ ಸಿಕ್ಕಷ್ಟಲ್ಲದಿದ್ದರೂ ಒಳ್ಲೆಯ ಕರತಾಡನ ಗಿಟ್ಟಿಸಿದ ಆ ಕಡೆಯ ಲೇನಿನ ಸ್ಪರ್ಧಿ..ಯಾರಿದು..? ಎಂದು ನೋಡಿದಾಗ ಹದಿಹರೆಯದ "ಬ್ರೀಮ" ನ್ನು ನೋಡಿದ್ದೆ..... ’ಇವನೂ ಜೋರಿದ್ದಾನೆ’ ಎನಿಸಿತ್ತು ಮನದಲ್ಲೇ...
ನಾಲ್ಕು ಬಾರಿ ದಡ ತಲಪುವ ಇನ್ನೂರು ಮೀಟರ್ ಸ್ಪರ್ಧೆ...ಸರಿ...ಎಲ್ಲಾ ಅಣಿಯಾಯ್ತು...
ರೆಫರಿ..ಜೋರಾಗಿ...ಆನ್ ಯುವರ್ ಮಾರ್ಕ್ಸ್ ಗೆಟ್ ಸೆಟ್..ಎಂದು ಗನ್ ಶೂಟ್ ಮಾಡಿದ್ದೇ...ಜಿಗಿದಿದ್ದೆ ನೀರಿಗೆ...ಎಲ್ಲರೂ "ಉತ್ತಮ ಸ್ಟಾರ್ಟ್..ಉತ್ತಮ ಸ್ಟಾರ್ಟ್..ಕಮಾನ್ ಲವ್ಲಿಬಾಸ್" ಎನ್ನುತ್ತಾ ಹುರಿದುಂಬಿಸ್ತಾ ಇದ್ರು....ಇನ್ನೂ ಐದಾರು ಮೀಟರ್ ಅಂತರ ಇರುವಂತೆ ಮೊದಲ ಲ್ಯಾಪ್ ಮುಗಿಸಿ ಎರಡನೇ ಲ್ಯಾಪ್ ಗೆ ಹಿಂದಿರುಗಿದೆ....ಲೀಲಾಜಾಲವಾಗಿ..ಎರಡನೇದು...ಹಾಗೇ ಮೂರನೇದು ಮುಗಿಸಿ ತಿರುಗಿದಾಗಲೇ ಗೊತ್ತಾದದ್ದು ಬ್ರೀಮ್ ನನ್ನ ಸಮಕ್ಕೆ ಬಂದಿದ್ದ ಎಂದು..!!ಅರ್ಧ ದೂರ ಕ್ರಮಿಸಿದ್ದೆ..ಯಾಕೋ ..ವೀಕ್ ಆಗ್ತಾ ಇದ್ದೇನೆ ಎನಿಸಿತ್ತು...ಬ್ರೀಮ್ ಒಂದು ಕೈ ಅಳತೆ ನನ್ಗಿಂತ ಮುಂದಿದ್ದ..ಎಲ್ಲರೂ "ಕಮಾನ್ ಲವ್ಲಿ ಬಾಸ್..ಕಮಾನ್...ಏನಾಯ್ತು..??!! ..ಛೇ...ಹೋಯ್ತು..ಇಲ್ಲ ಆಗ್ತಿಲ್ಲ...ನನ್ನಿಂದ...ಸೋಲ್ತಾ ಇದೆ ಮೈಕೈ..ಕಡೆಗೆ ಅಂಚು ತಲುಪುವಾಗ..ಬ್ರೀಮ್ ಮೊದಲ ಸ್ಥಾನ ಮತ್ತು ಇಷ್ಟು ವರ್ಷ ಮೂರು ನಾಲ್ಕರ ಸ್ಥಾನ ಪಡೀತಿದ್ದ ಸಿಲ್ವಸ್...ಎರಡನೇ ಸ್ಥಾನ...ನನ್ನದು ಅವಮಾನ ತುಂಬುವ ಮೂರನೇ ಸ್ಥಾನ...!!!???
ಛೇ..ಈ ಕೊಳ ಬಾಯ್ಬಿಟ್ಟು ನನ್ನ ನುಂಗಬಾರದೇ ..ಎನಿಸುವಷ್ಟು ನಾಚಿಕೆಯಾಗಿತ್ತು... ಕೊಳದಲ್ಲೇ..ನಿಂತು ಅಜ್ಜನ ಕಡೆಗೆ ನೋಡಿದೆ...ಅಜ್ಜ ಮುಗುಳ್ನಗ್ತಿದ್ದ...!!!
ನನಗೆ ..ಅವಮಾನ...ಆಶ್ಚರ್ಯ...ಎಲ್ಲ ಒಟ್ಟಿಗೆ...ನನ್ನ ಎಲ್ಲ ಗೆಲುವಲ್ಲೂ ಬೀಗುತ್ತಿದ್ದ ನನ್ನಜ್ಜ ನಗುವುದೇ...ಛೇ.....
ಈ ಹೊತ್ತಿಗಾಗ್ಲೇ...ಛಾಂಪಿಯನ್ "ಬ್ರೀಮ್" ಅನ್ನು ಚಲುವೆಯರೆಲ್ಲಾ ಸುತ್ತುವರೆದಿದ್ದರು.. ನಾನು ವಿಕ್ಟರಿ ಸ್ಟಾಂಡನ ಮೇಲೂ ಮನಸ್ಸಿಲ್ಲದ ಮನಸಿಂದ ನಿಂತೆ..ಕಾಟಾಚಾರದಂತೆ ಪದಕ ಪಡೆದು..ಅಜ್ಜನನ್ನ ತಬ್ಬಿಕೊಂಡು ಅತ್ತೆ...ಈಗ್ಲೂ ಅಜ್ಜನ ಮುಗುಳ್ನಗು ಮಾಯವಾಗಿರಲಿಲ್ಲ.....
ಮನೆಯ ಕಡೆ ಹೋಗ್ತಾ...ಅಜ್ಜನ್ನ ಪ್ರಶ್ನಾರ್ಥಕವಾಗಿ ನೋಡಿದಾಗ.." ಲವ್ಲಿ ಬಾಸ್" ನೀನು ಬಾಸ್ ಹೋಗಿ ಬರೀ "ಲವ್ಲಿ" ಆಗೋ ಕಾಲ ಬರ್ತಿದೆ...ಅಂದ..
ನಾನು "ಏನಜ್ಜ ನೀನು ಹೇಳ್ತಿರೋದು...?" ಅಂದೆ..
"ಹೌದು...ನಿನಗೆ ಐದು ವರ್ಷ ತುಂಬಿತಲ್ಲಾ....? .ಕೆಲ ಬಾಸ್ ಜಾತಿಯ ಮೀನುಗಳು ೫-೬ ವರ್ಷ ತುಂಬುತ್ತಿದ್ದಂತೆ ಗಂಡು ಬಾಸ್ ಹೆಣ್ಣಾಗಿ ಮಾರ್ಪಡುವ ಸಮಯ ..ಆಗ ಶರೀರ ಕ್ರಿಯೆಯಲ್ಲಿ ವಿಚಿತ್ರ ಬದಲಾವಣೆಗಳು ಆಗಿ ಗಂಡು-ಹೆಣ್ಣಾಗುವ ಮಹತ್ತರ ಘಟ್ಟಮುಟ್ಟುತ್ತೇವೆ, ಆಗ ಹೀಗಾಗುತ್ತದೆ...ಎಲ್ಲ ಬಾಸ್ ಗಳಂತೆ ನೀನೂ ಈಗ ಹೆಣ್ಣಾಗುವ ಸಮಯ ಹತ್ತಿರವಾಯ್ತು...ಪರವಾಗಿಲ್ಲ ಬಿಡು ಬ್ರೇವ್ ಬ್ರೀಮ್ ನಿನಗೆ ಒಳ್ಳೆಯ ಜೋಡಿ ಆಗ್ತಾನೆ",,,,ಎನ್ನುತ್ತಾ ನನ್ನನ್ನು ಕೀಟಲೆ ಮಾಡುವಾಗ ನನ್ಗಾದ ನಾಚಿಕೆ ..ಓಹ್..ನಾನಾಗಲೇ ಹೆಣ್ಣಾಗಿಬಿಟ್ಟೆ ..ಎನಿಸತೊಡಗಿತ್ತು....ಬ್ರೇವ್ ಬ್ರೀಮ್ ನ ಕನಸೂ ಕಾಣತೊಡಗಿದೆ....
ಸ್ನೇಹಿತರೇ...ಮೀನುಗಳ ಕೆಲ ಜಾತಿಯಲ್ಲಿ ತಮ್ಮ ಜೀವನದ ಮೊದಲ ಘಟ್ಟ ಹೆಣ್ಣಾಗಿ ನಂತರ ಗಂಡಾಗಿ ಮಾರ್ಪಡುವುದು ಕಂಡುಬರುತ್ತದೆ ಇವುಗಳನ್ನು ದ್ವಿಲಿಂಗತೆ-ಅಥವಾ ಹರ್ಮಾಫ್ರೊಡೈಟಿಸಂ ಎನ್ನುತ್ತಾರೆ.. ಮತ್ತೆ ಕೆಲವು ಮೊದಲಿಗೆ ಗಂಡಾಗಿದ್ದು ನಂತರ ಹೆಣ್ಣಾಗುವ ಸ್ವಭಾವವನ್ನು ಹೊಂದಿರುತ್ತವೆ...ನಮ್ಮ ಕಥಾ ನಾಯಕ...ಏನು?..ನಾಯಕ ..ಅಂದೆನೇ...ಅಲ್ಲಲ್ಲ....ನಾಯಕಿ....ಛೇ...ಏನೋ ..ಒಂದು...,,ಲವ್ಲಿ ಬಾಸ್ ನಂತೆ...
ಎರಡೂ ಲಿಂಗಗಳು ಒಮ್ಮೆಲೇ ಒಂದೇ ಜೀವಿಯಲ್ಲಿ ಕಂಡುಬಂದರೆ ಅದನ್ನು ಏಕಕಾಲಿಕ ದ್ವಿಲಿಂಗಿಗಳು (simultaneous or synchronous hermophrodites) ಎಂದೂ...ಸರದಿಯ ಮೇಲೆ ಅಂದರ ಒಂದರ ನಂತರ ಒಂದು ಬಂದರೆ ಅದಕ್ಕೆ ಸರದಿ ದ್ವಿಲಿಂಗಿ (alternate hermophrodiism) ಎನ್ನಲಾಗುತ್ತೆ........
ಹೇಗಿತ್ತು...ಈ science information ..ಸೇರಿದ ಕಥೆ..ಆತಂಕಥೆ....???
nice info..
ReplyDeletethank u very much..sir..
Chikki chittara madam...idu..one of the amazing facts in Aquatic world..modlige nimma pratikriye bartide..dhanyawaada...
ReplyDeleteಉತ್ತಮ ಮಾಹಿತಿಗಾಗಿ ಧನ್ಯವಾದಗಳು.
ReplyDeleteಒಳ್ಳೆಯ ಮಾಹಿತಿ ಭೈಯ್ಯ .. thanks :)
ReplyDeleteSir
ReplyDeleteeno heltidira annovahstaralli olle information kotri
thanks for the info
tumba olleya lekhana
ಮನಮುಕ್ತಾ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...
ReplyDeleteರಂಜು ..ಮತ್ಸ್ಯ ಲೋಕದ ವಿಸ್ಮಯಗಳನ್ನು ಆದಷ್ಟೂ ಜನಸಾಮಾನ್ಯರಲ್ಲಿಗೆ ತಲುಪಿಸಬೇಕೆಂದೇ ಕನ್ನಡದ ಡೈಜಸ್ಟ್ ಎಂದೇ ಹೆಸರಾಗಿದ್ದ ಕಸ್ತೂರಿಯಲ್ಲಿ ಪ್ರಕಟಿಸುವ ಮೂಲಕ ಇಪ್ಪತ್ತು ವರ್ಷಕ್ಕೆ ಹಿಂದೆಯೇ ನನ್ನ ಪ್ರಯತ್ನ ಸಾಗಿತ್ತು ..ಇದೇ ದಿಕ್ಕಿನ ಮುಂದಿನ ಹೆಜ್ಜೆ ಅಷ್ಟೇ
ReplyDeleteಗುರು...ಮೀನಿನ ವಿಷಯ ಅಂತ ಪ್ರಾರಂಭ ಮಾಡಿದ್ರೆ...ಅಥವಾ ಲಿಂಕಿನಲ್ಲಿ ನೋಡಿದ್ರೆ ನನ್ನ ಮಿತ್ರರು ಲೇಖನ ಓಡುತ್ತಾರೋ ಇಲ್ಲವೋ ಅಂತ ಸ್ವಲ್ಪ inetersting ಮಾಡೋ ಪ್ರಯತ್ನ...ಧನ್ಯವಾದ
ReplyDeleteಓಹ್ ಆತಂಕಥೆ ಚೆನ್ನಾಗಿದೆ ಭಯ್ಯಾ . ಒಂದು ಕಥೆ ಹೆಣೆದು ಆ ಕಥೆಯ ಮೂಲಕ ದ್ವಿಲಿಂಗಿ ಮೀನಿನ ಮಾಹಿತಿಯನ್ನು ಕೊಟ್ಟ ನಿಮ್ಮ ರೀತಿ ಚೆನ್ನಾಗಿದೆ. ಮೀನಿನಲ್ಲಿ ಇಂಥದೊಂದು ಪ್ರಬೇಧ ಇರುತ್ತೆ ಅಂತ ಗೊತ್ತೇ ಇರ್ಲಿಲ್ಲ . ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು.
ReplyDeleteಆಝಾದ್...
ReplyDeleteಇದೇನು ಗೆಳೆಯ ಕಥೆ ಬರೆದಿದ್ದಾನೆ ಅಂದುಕೊಂಡೆ.. !
ತುಂಬಾ ಸೊಗಸಾಗಿ ಬೆಸ್ತು ಬೀಳಿಸಿದ್ದೀಯಾ..
ಹಾಗೆ ಒಳ್ಳೆಯ ಮಾಹಿತಿ ಕೊಟ್ಟಿದ್ದೀಯಾ...
ನೀನೂ ಯಾಕೆ ಕಥೆ ಬರಿಬಾರದು ?
ಬರಿ...
ಓದಲು ನಾವಿದ್ದೇವೆ...
ಜಲನಯನ,
ReplyDeleteಕತೆಯ ಹೊದಿಕೆಯಲ್ಲಿ ವಿಸ್ಮಯಕರ ಮಾಹಿತಿ ನೀಡಿದ್ದೀರಿ. ತುಂಬಾ interesting!
ಅಜಾದ್,
ReplyDeleteತೇಜಸ್ವಿಯವರು ಒಂದು ಮಾಹಿತಿಯನ್ನು ತಮ್ಮದೇ ಅನುಭವವೆನ್ನುವಂತೆ, ಕತೆಯಂತೆ ಸರಳವಾಗಿ ಬರೆಯುತ್ತಿದ್ದರು. ನಿಮ್ಮ ಲೇಖನದಲ್ಲಿ ಮೀನುಗಳ ಬಗ್ಗೆ ನೀವು ಹಾಗೆ ಬರೆದಿರುವುದು ನನಗೆ ಇಷ್ಟವಾಯಿತು...
ಮತ್ತಷ್ಟು ಮಾಹಿತಿಗಳು ಹೀಗೆ ಬರುತ್ತಿರಲಿ...ನಾವು ನೀರಿನಲ್ಲಿ ಈಜಾಡಬಹುದು...
ಉಪಯುಕ್ತ ಮಾಹಿತಿ! ಆಸಕ್ತಿಕರ ಕಥೆ ಹೆಣಿಕೆಯಲ್ಲಿ!!! ಮತ್ತೆ ಚೌಕಾಯಿಸಿಬಿಟ್ಟಿರಲ್ಲಾ ಅಜ಼ಾದಣ್ಣ!!!!
ReplyDeleteಓ ಮನಸೇ ...ತಂಗ್ಯಮ್ಮ ...ನಿಂಗೆಯ ಇಷ್ಟ ಆಯ್ತಲ್ಲ ..ಸಂತೋಷ...
ReplyDeleteಪ್ರಕಾಶ ನಿನ್ನ ತರಹ ಕಥೆ ಹೆಣೆಯೋಕೆ ಬರಲ್ಲಪ್ಪ ..ವಿಷಯ ತಿಳ್ಸೋಕೆ ಆಸಕ್ತಿ ಹುಟ್ಸೋಕೆ ಇದು ಒಂದು ಮಾರ್ಗ ಅಷ್ಟೇ..ನೀನು ಹೇಳಿದ್ದೀಯಲ್ಲಾ ತಗೋ ಬರೀತೀನಿ ನೀನೂ ಬೇಸ್ತು ಬೀಳ್ಬೇಕು..ಯಾಕಾದ್ರೂ ಹೇಳ್ದೆ ಇವನಿಗೆ..ಸುಮ್ನೆ ಕೋರಿಯೋಕೆ ಶುರುಹಚ್ಚಿಬಿಟ್ಟ ಅನ್ನಬಾರ್ದು ಆಮೇಲೆ..ಹಹಹ
ReplyDeleteಸುನಾಥ್ ಸರ್, ಕಷೇರುಕಗಳ (ವರ್ಟಿಬ್ರೇಟ್ಸ್ )ಬಗ್ಗೆ ಯಾವುದೇ ಸಂಶೋಧನೆಗೆ ಮೂಲ ಮೀನುಗಳು..ಆವೇ ಅಲ್ಲವೇ ಜೀವದ ಈ ಮೂಲದ ಬೇರು...ಪ್ರಯತ್ನ ಮುಂದುವರೆಯುತ್ತೇ ನಿಮ್ಮೆಲ್ಲರ ಆಶೀರ್ವಾದ ಇದ್ರೆ...ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ.
ReplyDeleteಶಿವು, ಧನ್ಯವಾದ ವಿಸ್ಮಯಗಳ ಗಣಿ ಜಲಚರಗಳು ಅಂದರೆ ಇಲ್ಲಿನ ಅಮೂಲ್ಯ ರತ್ನಗಳು..ಇಲ್ಲಿ ವಿಸ್ಮಯಗಳಿಗೆ ಕೊರತೆಯಿಲ್ಲ. ನಿಮ್ಮ ಆತ್ಮೀಯತೆಗೆ ಶರಣು.
ReplyDeleteಸೀತಾರಾಂ ಸರ್ ಹಹಹ ...ನಿಮ್ಮದು ಅಭಿನಂದನೆನೋ ಅಥವಾ ...? ಚೌಕಾಸಿ ಅಂದ್ರೆ ಪೂರ್ತಿ ವಿಷಯ ತಿಳಿಸಿಲ್ಲ ಅಂತಲೇ...? ಹಾಗಿದ್ರೆ...ತಿಳಿಸಿ..
ReplyDeleteamazing info, thanks.
ReplyDeleteಅಬ್ಬ!!!ಹೀಗೂ ಇದೆಯಾ, ಗೊತ್ತೇ ಇರ್ಲಿಲ್ಲ..very nice info..well written..ಹೀಗೆ ನಿಮ್ಮ ಮೀನಿನ ಲೋಕವನ್ನು ಹೇಳ್ತಾ ಹೋಗಿ..ನಮಗೂ ಸ್ವಲ್ಪ ತಿಳಿಯುತ್ತದೆ:)
ReplyDeleteThank you Nisha...for your comments...and appreciation.
ReplyDeleteವನಿತಾ, ಮೀನಿನ ಅಗಣ್ಯ ಗುಪ್ತ ವೈವಿಧ್ಯಮಯ ವಿಷಯಗಳು ಬಿತ್ತರ ಮಾಡೋಕೆ ನನಗೆ ಖುಷಿ..ಅದನ್ನು ಓದೋ ನಿಮ್ಮೆಲ್ಲರ ಪ್ರೋತ್ಸಾಹ ಇರೋವರೆಗೆ...ಧನ್ಯವಾದ.
ReplyDeletetumbaa sundara vivarane............ chennaagide sir.........
ReplyDeletevery good information sir.
ReplyDeleteನಿಜಕ್ಕೂ ಚೆನ್ನಾಗಿದೆ ಲೇಖನ, ಈ ರೀತಿ ಕಥೆಯ ಮುಖೇನ ತಿಳಿಸಿದ್ದೀರಲ್ಲ ಎಂತವರಿಗೂ ಅರ್ಥವಾಗುವಂತಾ ಕಥೆ.... ಹೀಗೆ ಸಾಗಲಿ ಮತ್ತಷ್ಟು ವಿವರಗಳು ನಿಮ್ಮ ಆ ಲವ್ಲಿಬಾಸ್ ಬಗ್ಗೆ.
ReplyDeleteವಂದನೆಗಳು
ಸರ್... ತುಂಬಾ ಚೆನ್ನಾಗಿದೆ. ಇಂತಹ ಉಪಯುಕ್ತ ಮಾಹಿತಿಗಳನ್ನು ಮತ್ತೆ ಮತ್ತೆ ಕೊಡುತ್ತಿರಿ ಜಲನಯನದಲ್ಲಿ. ಅತ್ಯಂತ ಕುತೂಹಲಭರಿತವಾಗಿದೆ ಮೀನುಗಳ ಜೀವನ. ಜೀವಿಯೊಂದ ಜೀವಿತದ ಕುರಿತು ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ಬಲು ಇಷ್ಟವಾಯಿತು.
ReplyDeleteಜಲನಯನ ಸಾರ್
ReplyDeleteಒಳ್ಳೆ ಮಾಹಿತಿ ಜೊತೆಗೆ ಚೆಂದದ ಕಥೆಯ ಜೋಡಣೆ. ಓದಿಸಿಕೊಂಡು ಹೋಗುವುದರ ಜೊತೆಗೆ ಯಾವ ಟ್ರಿಕ್ ಇದು ಅಂತ ಅನ್ನಿಸ್ತಾನೆ ಇತ್ತು ಅಂತ್ಯ ಓದುವವರೆಗೆ. ಇಂತಹ ಮೀನಿನ ವಿಷಯ ಕೇಳಿದ್ದು ಇದೇ ಮೊದಲು
ದಿನಕರ್, ಮೀನನ್ನು ತಿಳ್ಕೊಳ್ಳೊದು ನೀರಲ್ಲಿ ಹೆಜ್ಜೆ ಹುಡುಕಿದ ಹಾಗೆ...ಆದ್ರೂ ಅವುಗಳ ವೈವಿಧ್ಯತೆ ಬಹು ರಮಣೀಯ ಮತ್ತು ರೋಮಾಂಚಕ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ
ReplyDeleteಸುಭ್ರಮಣ್ಯ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ...ಮೀನು ಮತ್ತಿತರ ಜಲಚರಗಳ ವೈಚಿತ್ರ್ಯಗಳೂ ಬಹಳ ಆಸಕ್ತಿ ಹುಟ್ಟಿಸುವಂತಹ ವಿಷಯಗಳು.
ReplyDeleteಮನಸು ಮೇಡಂ....ಧನ್ಯವಾದ..ಏನು ಮಾಡೋದು ನನ್ನ ಉದ್ಯೋಗ ನನಗೆ ಇಂತಹ ಪೋಸ್ಟ್ ಹಾಕೋಕೆ ಪ್ರೇರೇಪಿಸುತ್ತೆ...
ReplyDeleteತೇಜಸ್ವಿನಿ, ಮೀನಿನಲ್ಲೊಂದು ಬಗೆಯ ಮೀನಿಗೆ (ಅನಾಬ್ಲೆಪ್ಸ್ ಎನ್ನುತ್ತಾರೆ ಇದಕ್ಕೆ) ನೀರಿನಿಂದ ಹೊರಗೆ ಮತ್ತು ನೀರಿನ ಒಳಗಿನ ಎರ್ಡನ್ನೂ ನೋಡುವ ಸಾಮರ್ಥ್ಯವಿರುತ್ತದಂತೆ. ಅದೇ ರೀತಿ ಕೆಲ ಮೀನುಗಳು ಸುಮಾರು ೧೦೦ ವೋಲ್ಟ್ ನಷ್ಟು ವಿದ್ಯುತ್ ಪ್ರವಾಹವನ್ನೂ ಹರಿಸುವ ಸಾಮರ್ಥ್ಯ ಹೊಂದಿರುತ್ತವೆ....ಹೀಗೇ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.
ReplyDeleteರೂಪಾವ್ರೇ....ಇನ್ನೊಂದು ವಿಶೇಷ ಜಾತಿಯಲ್ಲಿ ಗಂಡು ಅಗಾಧಗಾತ್ರದ್ದಾಗಿದ್ದು ಒಂದು ಹೆಣ್ಣಿನ ಸಮೂಹವನ್ನೇ "ಮ್ಯಾನೇಜ್" ಮಾಡುತ್ತಾ ಇರುತ್ತದಂತೆ...ಆ ಗಂಡು ಸತ್ತರೆ ಇದ್ದ ಹೆಣ್ಣುಗಳಲ್ಲಿ ಅತಿ ದೊಡ್ಡ ಗಾತ್ರದ ಹೆಣ್ಣು ಗಂಡಾಗಿ ಬದಲಾಗುತ್ತದಂತೆ...ಹೇಗೆ...?? ಈ ವ್ಯ್ವಸ್ಥೆ...?? ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ
ReplyDeleteKathe chennaagittu.. Ee information hindomme nimma blog nalle odida nenapu..
ReplyDeletejalanayana sir...
ReplyDeletesuper aagittu kathe!
srushti vaividhyakke thale baagabEku :)
Amazing fact.
ReplyDelete:-)
malathi S
ರವಿಕಾಂತ್ ರೂಪಾಂತರದ ಬಗ್ಗೆ ಇರ್ಲಿಕ್ಕಿಲ್ಲ ಅದು ಸಮುದ್ರ ಕುದುರೆ ಗರ್ಭ ಧರಿಸೋ ಬಗ್ಗೆ...ಅಲ್ಲಿ ಗಂಡಾಗಿದ್ರೂ ಸಮುದ್ರ ಕುದುರೆ ಮಕ್ಕಳನ್ನು ಹೊರುತ್ತೆ ಮತ್ತು ಹೆರುತ್ತೆ ಸಹ...ಧನ್ಯವಾದ ನಿಮ್ಮ ಆಸಕ್ತಿಗೆ ಮತ್ತು ಪ್ರತಿಕ್ರಿಯೆಗೆ...
ReplyDeleteಸುಧೇಶ್ ...sRuಷ್ಟಿಯ ಮುಂದೆ ನಾವೆಲ್ಲ ಶೂನ್ಯರು ಅಲ್ಲವಾ...ಧನ್ಯವಾದ
ReplyDeleteಮಾಲತಿಯವರೇ ಧನ್ಯವಾದ ...ಹತ್ತು ಹಲವು ಪ್ರಕ್ಱೂತಿ ಸೋಜಿಗಗಳಲ್ಲಿ ಇದು ಒಂದು ಕಣ ಮಾತ್ರ...ನನಗೆ ತಿಳಿದುದ್ದನ್ನ ಹಂಕಿಕೊಳ್ಳೋದರಿಂದ ಬೆಳೆಯುವ ವಿಷಯ ಇದು...
ReplyDeleteಏನ್ ಸರ್,
ReplyDeleteಈ ತರನ ಹಳ್ಳಕ್ಕೆ ಬೀಳಿ ಸೋದು!!!! .
ನಾನೇನೋ ನಿಮ್ಮ ಕಾಲೇಜ್ ದಿನದ ಕತೆ ಅಂತ ಓದುತ್ತಾ ಹೋದರೆ ಏಕ ದಮ್ ಮೀನಿನ ಕತೆಗೆ ತಿರುಗಿದಿರಲ್ಲ .ಹ್ಹಾ ಹ್ಹಾ ಚೆನ್ನಾಗಿತ್ತು ಮೀನಿನ ಜೀವನದ ಬಗ್ಗೆ ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ..
ಎನಣ್ಣ ಚೆನ್ನಾಗಿ ಯಮಾರಿಸ್ತಿಯಾ ನಮ್ಮನ್ನು.....
ReplyDeleteಸಕ್ಕತ್ ಕಥೆ ಬಿಡಣ್ಣೊ.....
ಯಾವುದೋ ಒಂದು ಒಳ್ಳೆ ಕತೆ ಅಂತ ಓದುತ್ತಾ ಹೋದಂತೆ ಒಳ್ಳೆಯ ರೀತಿಯಲ್ಲೇ ನಾಮ ಹಾಕಿದ್ದೀರ!
ReplyDeleteಒಳ್ಳೆ ಮಾಹಿತಿಯೊಂದಿಗೆ ಮೂಡಿಬಂದ ನಿಮ್ಮ ಕತೆ ಸುಂದರವಾಗಿದೆ
ದೇವರಾಣೆ ಹೇಳ್ತೀನಿ. ಮೀನಿನ ಈ ವಿಸ್ಮಯ ನನಗೆ ಈಗಲೇ ಗೊತ್ತಾಗಿದ್ದು!
ನಗಬೇಡಿ ಆಯ್ತಾ!!!!!!!!!!!!!!!
ಶಶಿ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.. ಅಂದ ಹಾಗೆ ನಾನು ಮೀನಿನ ಬಗ್ಗೆ ಬರೀತಿದ್ದೀನಿ ಅಂದ್ರೆನೇ ನಿಮ್ಮಲ್ಲಿ ಕೆಲವರು ಒದದೇ ಇರಬಹುದು ಅಂತ ಈ ತರಹ ಬರೆದಿದ್ದು.. ಅ ತ್ರಿಕ್ಕ್ ಆಫ್ ಸೆಲ್ಲಿಂಗ್ ಆಲ್ವಾ ..?
ReplyDeleteಮಯೇಷಣ್ಣ ಮರ್ತೇ ಒದ್ಯೋನೋ ಅನ್ದ್ಕೋಂಡೆ ....ನೆಪ್ಪೈತಲ್ಲಾ ಅಷ್ಟೇ ಸಾಕು ಬಿಡು.. ತಾಂಕು ನಿನ್ನ ಮೆಚ್ಕೆ ಮಾತ್ಗೇ...
ReplyDeleteಪ್ರವೀಣ್ ಧನ್ಯವಾದ ರೀ ನಿಮ್ಮ ಪ್ರತಿಕ್ರಿಯೆಗೆ...ನಗೋದೇನು ಬಂತು...ಇವು ಹೆಚ್ಚು ಜನಕ್ಕೆ ಗೊತ್ತಿಲ್ಲದ ವಿಷಯ..ಮಾಹಿತೀನ ತಲುಪಿಸೋದ್ರಲ್ಲಿ ಯಶಸ್ವೀ ಅನಿಸಿದ್ರೆ ಅದೇ ಸಾರ್ಥಕತೆ ಆಲ್ವಾ...?
ReplyDeleteWonderful way of narration.. and amazing info.. :)
ReplyDeleteThank you Shravana nimma abhipraaya mattu pratikriyege..
ReplyDeleteಸಸ್ಪೆನ್ಸು, ನಗು ಎರಡರ ಜೊತೆಗೆ ಮಾಹಿತಿಯನ್ನು ಕೊಡೋದ್ರಲ್ಲಿ ನಿಮ್ಮನ್ನ ಹಿಂದೆ ಹಾಕೋಕ್ಕಾಗೊಲ್ಲ!! ತುಂಬಾ ಚೆನ್ನಾಗಿ ಓದಿಸಿಕೊಂಡು ಹೋಗುತ್ತೆ!!ಹೀಗೂ ಇದೆಯಾ ಅಂತ ಆಶ್ಚರ್ಯ ಮೂಡಿಸುತ್ತೆ!
ReplyDeleteವೈಜ್ಞಾನಿಕ ವಿಷಯವನ್ನು ನೀವು ತಿಳಿಸುತ್ತಿರುವ ರೀತಿ ಇಷ್ಟವಾಯ್ತು. ಆದರೆ ನಿಮ್ಮ ಬರಹದಲ್ಲಿ ವ್ಯಕ್ತವಾಗಿರುವಂತೆ, ಗಂಡಿನಿಂದ ಹೆಣ್ಣಾಗಿ ಬದಲಾವಣೆಯಾಗುವ ಹಂತದಲ್ಲಿ (Protandry) ಅದರ ದೈಹಿಕ ಸಾಮರ್ಥ್ಯ ಕುಂಠಿತಗೊಳ್ಳುವುದೇ ಅಥವಾ ಅದು ಹೆಣ್ಣಾಗಿದ್ದಕ್ಕೆ ಅದರ ದೈಹಿಕ ಸಾಮರ್ಥ್ಯ ಗಂಡಿಗಿಂತ ಕಡಿಮೆ ಎಂದು ಊಹಿಸಿ ಅದನ್ನು ಸ್ಪರ್ಧೆಯಲ್ಲಿ ಸೋಲಿಸಿದ್ದೆ?
ReplyDeleteಅಜಾದ್ ಸರ್,
ReplyDeleteಕತೆಯೂ ಚೆನ್ನಾಗಿದೆ, ಮಾಹಿತಿಯಂತೂ ರೋಚಕವಾಗಿದೆ.
ಸುಮನ ಮೇಡಂ ಧನ್ಯವಾದ ..ಬಿಡುವು ಮಾಡಿಕೊಂಡ್ರಲ್ಲಾ ಜಲನಯನದ ದರ್ಶನಕ್ಕೆ...ಹಹಹ...
ReplyDeleteವಿಷಯ ಮೀನಿಂದು ಅಂದಿದ್ರೆ ಎಷ್ಟೋ ಜನ ಬ್ಲಾಗ್ ಓದ್ತಿರಲಿಲ್ಲ...ಅಲ್ವಾ..ಟ್ರಿಕ್ಕು..ಅಷ್ಟೆ...ಹಹಹ...ಇನ್ನೂ ಎಷ್ಟೋ ವಿಸ್ಮಯಗಳು ಈ ಸಾಗರ-ಜಲ ಗಳಲ್ಲಿ..ನಿರೀಕ್ಷಿಸಿ..ಇನ್ನೂ ಬಂದರೂ ಬರಬಹುದು...
ಪಾಲರೇ...ಧನ್ಯವಾದ...ನಿಮ್ಮ ಅಸಕ್ತಿಯ ಮಾತಿಗೆ...ಹೌದು ಆ transition ಎನಿಸುವ ಸಮಯದಲ್ಲಿ ಗಂಡು-ಹೆಣ್ಣಾಗಿ ಮಾರ್ಪಡುವ ಅಥವಾ ಹೆಣ್ಣು- ಗಂಡಾಗುವಾಗಲೂ ಶಕ್ತಿ ಕುಗ್ಗುತ್ತದೆ...ಇಂತಹ ಸ್ಥಿಯಲ್ಲಿ ಇವುಗಳಲ್ಲಿ ರೋಗ ಉಲ್ಭಣತೆಯೂ ಹೆಚ್ಚು...
ReplyDeleteಸಾಗರಿಯವರೇ...ಧನ್ಯವಾದ ನಿಮಗಿಷ್ಟವಾಯ್ತಲ್ಲ ಅದು ಬೋನಸ್...ನನಗೆ ಸಿಗುವ ಮತ್ತೂ ಸ್ವಾರಸ್ಯದ ವಿಷಯಗಳನ್ನು ಹಂಚಿಕೊಳ್ಳೋದೇ ನನ್ನ ಧ್ಯೇಯ..
ReplyDeleteಸ್ವಾರಸ್ಯಕರ ವಿಷ್ಯ ಸರ್ ಧನ್ಯವಾದ..
ReplyDeleteಧನ್ಯವಾದ ಪಾಲ ನಿಮ್ಮ ಈ ಪರ್ತಿಕ್ರಿಯೆಗೆ...ಹಾಗೇ ಬ್ಲಾಗರ್ಸ್ ಮೀಟ್ ಗೆ ಖಂಡಿತಾ ಬನ್ನಿ...ಆಗಸ್ಟ್ ೨೨ ಕ್ಕೆ ಇಟ್ಟುಕೊಳ್ಳುವ ಯೋಜನೆಯಿದೆ.
ReplyDelete