Tuesday, May 4, 2010

ಸುರ-ಸುಂದರ ರಂಗೋಲಿ
“ನಮಸ್ಕಾರ...ಸುರೇಸಣ್ಣ...ಹೆಂಗಿದ್ದೀಯಾ...?”ಮನೆ ಬಾಗಿಲು ಅಗುಳಿ ತೆರೆದೇ ಇತ್ತು, ಬಾಗಿಲನು ತಳ್ಳುತ್ತಾ ಒಳಕ್ಕೆ ಬಂದ- ಸಲೀಂ....!! ಗಾಬರಿಯಾಗಿ ನಿಂತು ಬಿಟ್ಟ...


ಅರೆರೆ ಏನಿದು ಹೋಳಿ ಹಬ್ಬ ಹೋಗಿ ಜಮಾನಾ ಆಯ್ತು..


“ಸರ್..ನೀವು..ಚಾಟ್ ನಲ್ಲಿ ಹೇಗಾದ್ರೂ ಕರೀರಿ..ಇಲ್ಲಿ ಬಂದು... ನನಗಿಂತ 10-15 ವರ್ಷ ದೊಡ್ಡೋರು ನೀವು..ಹಿಂಗ್ ನನ್ನ ಸುರೇಸಣ್ಣ ಅಂತ ಅಣ್ಣ ಅನ್ನಬಾರ್ದು...... ನಿಮಗೆ ಪಾನಿನೀನೂ ಪರ್ಮಿಶನ್ ಕೊಡೊಲ್ಲಾ...ಕನ್ನಡ ಪಂಡಿತರೂ ಅನುಮತಿ ಕೊಡೊಲ್ಲಾ....”


ತಲೆಮೇಲೆ...ಬಿಳಿ, ಹಳದಿ, ಕೆಂಪು ಬಣ್ಣ ಹಾರಿಸಿಕೊಂಡಿದ್ದ..ಸುರೇಶ್ ಸಲೀಂ ನ ಸ್ವಾಗತಿಸಿದ್ದು ಹೀಗೆ...


“ಅಲ್ಲ ಸುರೇಶ್ ಹೋಳೀ ಹೋಗಿ ಕಾಲ ಆಯ್ತು..., ಇದೇನು ಬಣ್ಬಣ್ಣ ತಲೇ ಮೇಲೆ...ಅಂದಹಾಗೆ ...ಪಾಂಡುರಂಗ ವಿಠಲನ್ನ ಹೆಚ್ಚುನೋಡ್ಬೇಡಿ...ಆಮೇಲೆ...ಭಾಭಿನ ಸುಂದಲಿ..ಸುಂದಲಿ ಅಂತ...ಅಂದ್ರೆ ಕಷ್ಟ....”


ನಗ್ತಾ ಮತ್ತೆ ಕೇಳಿದ ಸಲೀಂ ...


“ಅಲ್ಲಾ..ಇದೇನು ಬಣ್ಣ ಅಂತೀನಿ...?!!”


“ಅಯ್ಯೋ ಸಲೀಂ ಸರ್...ನಮ್ಮ ಸಂಘ ಮಾಡೋ ರಂಗೋಲಿ ಕಾಂಪಿಟೇಶನ್ ಗೆ ಸುಂದರೀನೂ ಭಾಗವಹಿಸ್ತೀನಿ ಅಂದ್ಲು...ಸರಿ ಮಾರಾಯ್ತಿ ..ಮಾಡು..ಅಂದೆ...


ಅಲ್ಲ ಸರ್...ನೀವೇ ಹೇಳಿ..., ಅಭ್ಯಾಸಾನೇ ಇಲ್ದೇ ಇದ್ರೆ ರಂಗೋಲಿ ಹಾಕಿ ಗೆಲ್ಲೋಕಾಗ್ತದಾ...?”


ತನ್ನ ಪ್ರಶ್ನೆ ಸಲೀಂ ಮುಂದೆ ಇಟ್ಟ ಸುರೇಶ ...ತನ್ನ ಕಥೆ ಮುದುವರೆಸಿದ


“ನಿಮಗ್ಯಾಕೆ ನಾನು ಪ್ರಾಕ್ಟೀಸ್ ಮಾಡ್ತೀನಿ, ತಂದುಕೊಡಿ ಬಣ್ಣದ ಪುಡಿ.. ಅಂತ ಹಠ ಇವಳದ್ದು....ಹೇಳಿ ಕೇಳಿ..ಕುವೈಟ್ನಂಥಾ ದೇಶದಲ್ಲಿ ಎಲ್ಲಿಂದ ತರೋದು ರಂಗೋಲಿ ರಂಗಿನ ಪುಡಿ...?? ಹುಡ್ಕಾಡ್ದೆ ಎಲ್ಲೂ ಸಿಗ್ಲಿಲ್ಲ.....!!”


ಆಶ್ಚರ್ಯದಿಂದ ಸಲೀಂ ಕೇಳಿದ..


“ಮತ್ತೆ ...ಈ ಬಣ್ಣ ಎಲ್ಲಿಯದು ?”


ಸುರೇಶ ಹೇಳ್ದ “ಅದೇ ಸರ್...ಕಲರ್ ಕಲರ್ ಚಾಕ್ ತಂದಿದ್ನಲ್ಲ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸೋಕೆ...ಅದನ್ನೇ ಒಂದೊಂದು ಬಣ್ಣದ್ದೂ ಹತ್ತು ಹನ್ನೆರಡು ಚಾಕ್ ನ ಮಿಕ್ಸರ್ ಗೆ ಹಾಕಿ ಪುಡಿ ಮಾಡಿದ್ದು ...”


“ಅದು ಸರಿ ಪುಡಿಮಾಡಿದ್ರೆ..ಮುಖ.. ತಲೆಗೆಲ್ಲಾ ಯಾಕೆ ಮೆತ್ತಿಕೊಂಡ್ರಿ?” ಸಲೀಂ ಅರ್ಥವಾಗದೆ ಪ್ರಶ್ನಿಸಿದ..


“ಅಯ್ಯೋ..ಮಿಕ್ಸೀಗೆ ಹಾಕಿ ..ತಿರುವುತ್ತಾ ಇದ್ನಾ..ಇವ್ಳು ಸ್ವಿಚ್ ಆಫ್ ಮಾಡಿದ್ದು ನೋಡ್ಲಿಲ್ಲ ..ಅರೆ..!! ಯಾಕೋ ಮಿಕ್ಸಿ ನಿಲ್ತಲ್ಲಾ ಅಂತ ಲಿಡ್ ತೆಗೆದು ನೊಡೋಕೆ ಹೋದೆ.......”


“ಅಯ್ಯೋ ಸಲೀಮಣ್ಣ ...ನಾನು ಹೀಟರ್ ಆಫ್ ಮಾಡೋದ್ರ ಬದ್ಲು ಮಿಕ್ಸಿ ಸ್ವಿಚ್ ಆಫ್ ಮಾಡಿದ್ದೆ...ಆಮೇಲೆ ..ಗೊತ್ತಾಗಿ ಮತ್ತೆ ಸ್ವಿಚ್ ಆನ್ ಮಾಡಿದೆ...ಇವರು ಜೋರಾಗಿ ’ಥತ್ ತೇರಿ’..ಅಂತ ಅಂದಾಗ ಹಾಲ್ ಗೆ ಬಂದು ನೋಡಿದ್ರೆ ಈ ಅವ್ತಾರ ಮಾಡ್ಕೊಂಡಿದ್ರು...”


ಇವರ ಸಂಭಾಷಣೇನ ಕೇಳಿದ ಸುಂದರಿ ನಗ್ತಾ ಹಾಲ್ ಗೆ ಬರುತ್ತಾ...ಸಲೀಂ ಗೆ ಏನಾಯ್ತು ಎನ್ನುವುದರ ವಿವರ ಕೊಡ್ತಾ.. “ನಮಸ್ಕಾರ...ಬನ್ನಿ ಸಲೀಮಣ್ಣ” ಎಂದಳು.


“ಸುಂದರಮ್ಮನವರೇ...ನೀವು ಸಲೀಂ ಅನ್ನಿ ಇಲ್ಲ ಸಲೀಮ್ ಸರ್ ಅನ್ನಿ...ಸಲೀಮಣ್ಣ ಅನ್ಬೇಡಿ...ಜೇಡಿ ಮಣ್ಣ...ಕೆಂಪು ಮಣ್ಣ ಅಂದಂಗಿರುತ್ತೆ.....” ಎಂದ ಸಲೀಮ ನಗ್ತಾ....


“ನೋಡಿದ್ರಾ...? ನಿಮ್ಮ ತಂಗಿ ತರ ನಾನು, ನನ್ನ ಸುಂದರ ಅಮ್ಮ ಅಂತ ಕರೀತೀರಲ್ಲಾ...ಇದು ಸರೀನಾ...?”


ಎಂದಳು ಸುಂದರಿ ನುಸು ಮುನಿಸಿಂದ.


“ಸರಿ ಬಿಡಿ ಸುಂದರಿದೇವಿ ಅನ್ತೀನಿ ಇನ್ಮೇಲೆ....ಹಹಹ...” ರೇಗಿಸೋ ಹಾಗೆ ಸಲೀಮ್ ಹೇಳಿದಾಗ..


ಹುಸಿಕೋಪದಿಂದ ಹುಬ್ಬು ಮೇಲೇರಿಸಿ ಸಲೀಮನನ್ನು ನೋಡುತ್ತಿದ್ದ ತನ್ನ ಅರ್ಧಾಂಗಿಯನ್ನು ನೋಡಿದ ಸುರೇಶ...ಹೌದಲ್ಲಾ ..ನಾನೂ ಹಾಗೇ ಕರೀಬಹುದು ಇನ್ಮೇಲೆ... ಎನ್ನುವಾಗ ..”ಏನ್ರೀ ನೀವೂ ..???!!” ಎನ್ನುತ್ತ ಗಂಡನ ಬೆನ್ನಮೇಲೆ ಹುಸಿಮುನಿಸಿನ ಗುದ್ದು ಕೊಡಲು ಹೋದಾಗ ಸುರೇಶ ನಕ್ಕುಬಿಟ್ಟ.


“ಅಂದಹಾಗೆ ರಂಗೋಲಿಸ್ಪರ್ಧೆಲಿ .ಯಾರು ಭಗವಹಿಸೋದು? ..” ಸಲೀಂ ಕೇಳಿದ್ದಕ್ಕೆ...


ಸುರೇಶ-ಸುಂದರಿ ಇಬ್ಬರೂ ನಕ್ಕುಬಿಟ್ರು...


“ಏನ್ ಸರ್ ಈ ಅವತಾರ ನೊಡೀನೂ ಕೇಳಿದ್ದೀರಲ್ಲಾ...? ಎಲ್ಲ ರಂಗೋಲಿ ಹಿಟ್ಟೂ ಅಭಿಷೇಕ ಆಗೋಯ್ತು...ಇವ್ರನ್ನೇ ಅಲ್ಲಿ ಕೂತ್ಕೋಳೋಕೆ ಹೇಳ್ಬೇಕು ಅಷ್ಟೇ ಇದೇ ಅವತಾರದಲ್ಲಿ...ಹಹಹ...ಇವ್ರೇ ಕೂತ್ರೆ ಬಹುಮಾನ ಗ್ಯಾರಂಟಿ”


ಗಂಡನ ಅವತಾರದತ್ತ ನೋಡ್ತಾ ಹೆಂಡತಿ ನಕ್ಕು ...ಆ ಬಣ್ಣವನ್ನು ಕೊಡಹಿ...


“ಹೋಗ್ರಿ ನೀವು, ಮುಖ ತೊಳ್ಕೊಂಡು ಬನ್ನಿ ..ತಿಂಡಿ-ಕಾಫಿ ತರ್ತೀನಿ...ಸಲೀಮ್ ಸರ್ ಜೊತೆ ಮಾತನಾಡ್ತಾ ನಮ್ಮ ಪತ್ರಿಕೆ ಬರಹಗಳನ್ನ ಫೈನಲ್ ಮಾಡೋಣ” ಎನ್ನುತ್ತಾ.. “ಕೂತ್ಕೋಳಿ ಸರ್ ನೀವು...ಈ ಫೈಲ್ ನೋಡ್ತಾ ಇರಿ, ಇವ್ರೂ ಫ್ರೆಶ್ ಆಗಿ ಬರ್ತಾರೆ, ಅಷ್ಟೊತ್ತಿಗೆ ರಂಜನಾ, ವಿನಯ್ ಸರ್ ಮತ್ತೆ ಸಂಜಯ ಸರ್ ಬರ್ತಾರೆ ಎಲ್ಲ ಕುಳಿತು ತಿಂಡಿ-ಕಾಫಿ ತಗೊಳ್ತಾ ಫೈನಲ್ ಮಾಡೋಣ ನಮ್ಮ ಪತ್ರಿಕೇನಾ”


ಎನ್ನುತ್ತ ಅಡುಗೆಮನೆಯತ್ತ ಸುಂದರಿ ಹೋದರು..ಸಲೀಂ ಸೋಫಾದ ಮೇಲೆ ಆಸೀನನಾದ..ಸುರೇಶ ಮುಖ ತೊಳೆಯಲು ಬಾತ್ ರೂಮಿನತ್ತ ನಡೆದ. ಎಲ್ಲ ಬಣ್ಣಗಳ ಹಿತ ಮಿತ ಮಿಶ್ರಣದ ಹೋಳಿಯಂತೆ ಸಮರಸ ತುಂಬಿದ ಸಂಸಾರ ಎಲ್ಲ ಜಂಜಾಟವನ್ನೂ ಮರೆಸಿದರೆ, ಪರಸ್ಪರ ಹೊಂದಾಣಿಕೆ ಸಹಬಾಳ್ವೆಗಳು ಮತಭೇದವನ್ನು ಇಲ್ಲದಂತಾಗಿಸುತ್ತವಲ್ಲ ..??!! ಎಂದು ಯೋಚಿಸುತ್ತಾ ಸಲೀಂ ಫೈಲ್ ನ ಪುಟಗಳನ್ನು ತಿರುವಿದ.

31 comments:

 1. Azadre, adbhutavaada baraha... jaati, bedha, bhava ella.. naav maadakondirodu.. irodu erade jaati.. ondu gandu, innondu hennu... baduke ondu sundar rangoli aritu beretu nadedare :) ... Hasya purNavaad baraha.. OLLeya sandhesha :)

  ReplyDelete
 2. ತುಂಬಾ ದಿನದ ಮೇಲೆ blogನಲ್ಲಿ ನೋಡ್ತಾ ಇದ್ದೀನಿ... ಇದೇನಪ್ಪ ಹೋಳಿ ಆದಮೇಲೂ ಬಣ್ಣದ ಬಗ್ಗೆ ಬರೆದಿದ್ದಾರಲ್ಲಾ ಅಂದ್ಕೊಂಡೆ..ಚೆನ್ನಾದ ವಿವರಣೆ

  "ಎಲ್ಲ ಬಣ್ಣಗಳ ಹಿತ ಮಿತ ಮಿಶ್ರಣದ ಹೋಳಿಯಂತೆ ಸಮರಸ ತುಂಬಿದ ಸಂಸಾರ ಎಲ್ಲ ಜಂಜಾಟವನ್ನೂ ಮರೆಸಿದರೆ, ಪರಸ್ಪರ ಹೊಂದಾಣಿಕೆ ಸಹಬಾಳ್ವೆಗಳು ಮತಭೇದವನ್ನು ಇಲ್ಲದಂತಾಗಿಸುತ್ತವಲ್ಲ"...ಬಹಳ opt ಆಗಿ ಹೇಳಿದ್ದೀರ!

  ReplyDelete
 3. ಸಮರಸವೇ ಜೀವನ, ನಾನೆಲ್ಲೋ ಕನ್ನಡ ಕೂಟದ ಹೆಂಗಳೆಯರ ರಂಗೋಲಿ ಸ್ಪರ್ಧೆಗೆ ಯಾರೋ ಈ ರೀತಿ ಕಷ್ಟ ಪಟ್ಟಿರಬೇಕು ಎಂದು ಮಾಡಿದ್ದೆ ಹಹಹ...... ಒಳ್ಳೆ ಲೇಖನ ಭೇದಬಾವ ನಾವೇ ಮಾಡಿಕೊಂಡಿರೋದು ತಿಳಿದವರು ನಾವುಗಳು ಅರ್ಥಮಾಡಿಕೊಂಡು ನೆಡೆದರೆ ಜೀವನ ಸುಮಧುರವಾಗಿರುತ್ತೆ ನಮ್ಮ ಸುತ್ತಲಿನ ಜನರ ಜೀವನವೂ ಸುಂದರವಾಗಿರುತ್ತೆ

  ReplyDelete
 4. ಅಜಾದ್,

  ಒಂದು ಒಳ್ಳೆಯ ನವಿರು ಹಾಸ್ಯದ ಶೈಲಿ. ಬದುಕಿನಲ್ಲಿ ಎಲ್ಲರ ಜೊತೆ ಸಿಹಿಕಹಿ ಹಂಚಿಕೊಳ್ಳುತ್ತಾ, ಹೀಗೇ ಭಾವನಾತ್ಮಕವಾಗಿ ಬದುಕುವುದು ಎಷ್ಟು ಚೆನ್ನಾ ಅಲ್ವಾ...ಮನಸ್ಸಿನ ಸಂತೋಷಗಳನ್ನು ಹಂಚಿಕೊಳ್ಳಲು ಮತಭೇದಗಳುಂಟೆ....

  ಒಂದು ಅನುಭವದ ಮೂಲಕ ಅದನ್ನು ಸೊಗಸಾಗಿ ಹೊರಗೆಡಹಿದ್ದೀರಿ...

  ReplyDelete
 5. ಮಾನಸ...ಹೇಗಿದ್ದೀರಿ..? ನಿಮ್ಮ ವಿದ್ಯಾಭ್ಯಾಸದ ವ್ಯಸ್ತತೆಯಲ್ಲೂ ನನ್ನ ಬ್ಲಾಗಿಗೆ ಭೇಟಿ ಕೊಟ್ರಲ್ಲಾ ಅದೇ ಹೆಚ್ಚು ಇನ್ನು ಉತ್ತಮ ಪ್ರತಿಕ್ರಿಯೆಗೆ ಧನ್ಯವಾದ ಕೂಡಾ..

  ReplyDelete
 6. ಸುಮನಾವ್ರೆ, ಹೌದು ನೋಡಿ ನಾವು ಬೆಳೆದಂತೆ ಕ್ಷುಲ್ಲಕ ವಿಷಯಗಳು ದೊಡ್ಡದಾಗುತ್ತವೆ..ದೊಡ್ದ ವಿಚಾರಮಾಡುವ ವಿಷಯಗಳು ..ನಗಣ್ಯವಾಗುತ್ತವೆ..ಅದಕ್ಕೆ ಈ ತಿಕ್ಕಾಟ ವೈಮನಸ್ಯ...ಅಲ್ಲವೇ..?

  ReplyDelete
 7. ಮನಸು ಮೇಡಂ, ನಿಮ್ಮ ಮಾತಿಗೆ..ಪ್ರತಿಕ್ರಿಯೆಗೆ ಅಭಿ-ಸಹಮತಕ್ಕೆ ಧನ್ಯವಾದ...ಸುಮ್ನೇ ಹಾಗೆ ಒಂದೆರಡು ಮನಸಿಗೆ ಬಂದ ವಿಷಯಗಳನ್ನು ಇಟ್ಟು ಪ್ರಹಸನ ಹೆಣೆವ ಪ್ರಯತ್ನ...ಅದರಲ್ಲಿ ಯಶಸ್ವಿಯಾಗಿದ್ದರೆ ಅದು ಪ್ಲಸ್...

  ReplyDelete
 8. ಶಿವು,
  ಭಾವನೆಗಳಿಗೆ ಧರ್ಮ, ಮತ ಪಂಗಡ ಅಡ್ದ ಬರುವುದಿಲ್ಲ ಒಂದುಗೂಡಲು ಸಹ್ಬಾಳ್ವೆಗೆ ಅಡ್ಡ ಬರೊಲ್ಲ ಅದೇ ಮನಸ್ಥಿತಿಯನ್ನು ಪೂರ್ವಾಗ್ರಹ ಪೀಡಿತ ಮಾಡಿಕೊಂಡರೆ..ಎಲ್ಲದಕ್ಕೂ ಧರ್ಮ, ಮತ, ಪಂಗಡ ಅಷ್ಟೇ ಏಕೆ ಲಿಂಗವೂ ಅಡ್ಡ ಬರಬಹುದು...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

  ReplyDelete
 9. ಎಲ್ಲ ಬಣ್ಣಗಳ ಹಿತ ಮಿತ ಮಿಶ್ರಣದ ಹೋಳಿಯಂತೆ ಸಮರಸ ತುಂಬಿದ ಸಂಸಾರ ಎಲ್ಲ ಜಂಜಾಟವನ್ನೂ ಮರೆಸಿದರೆ, ಪರಸ್ಪರ ಹೊಂದಾಣಿಕೆ ಸಹಬಾಳ್ವೆಗಳು ಮತಭೇದವನ್ನು ಇಲ್ಲದಂತಗಿಸುತ್ತವೆ ಎಂಬ ಮಾತು ಎಷ್ಟು ನಿಜ ಅಲ್ವಾ?
  ನವಿರಾದ ಹಾಸ್ಯದೊಂದಿಗೆ ಸತ್ಯದ ಸಂದೇಶವೊಂದನ್ನು ನೀಡಿದ್ದೀರಾ
  ಸಂಯವಾದಗಳು.

  ReplyDelete
 10. ಪ್ರವೀಣ್...ಧನ್ಯವಾದ..ಹೌದು ಸಾಮರಸ್ಯಕ್ಕೆ ಒಮ್ಮತ ಮನದಾಳದಿಂದ ಆಗಬೇಕು....ಮಾನವೀಯತೆ ಪ್ರಮುಖವಾಗಬೇಕು...ಮಿಕ್ಕೆಲ್ಲ ಅಂಶ ಗೌಣವಾದರೆ...ಎಲ್ಲ ಸುರ-ಸುಂದರ ರಂಗೋಲಿ...

  ReplyDelete
 11. ಡಾ. ಗುರು...ಧನ್ಯವಾದಾನಪ್ಪಾ...ಹಾಗೇ ನಿಮ್ಮ ಸ್ವದೇಶಪ್ರಯಾಣ ಸುಖಕರವಾಗಿರಲಿ ಅಂತ ಆಶಿಸುತ್ತೇನೆ....

  ReplyDelete
 12. EllindaLo praaramba aagiddu sundaravaagi samaapthiyaayithu... ishta aayithu Ajaadh sir!

  ReplyDelete
 13. ಸುಧೇಶ್ ಧನ್ಯವಾದ...ಹೇಗಿದ್ದೀರಿ...? ನಿಮ್ಮ ಪ್ರತಿಕ್ರಿಯೆಗೆ ನಿಮ್ಮ ಆತ್ಮೀಯತೆಗೆ...ಮತ್ತೊಮ್ಮೆ ನನ್ನಿ.

  ReplyDelete
 14. ಆಜಾದ್ ಭಯ್ಯಾ..ನಾನು ಕೂಡ ಸುಗುಣ ಮೇಡಂ ತರಾನೆ ಅನ್ಕೊಂಡೆ,ಇತ್ತೀಚಿಗಷ್ಟೇ ಮುಗಿದ ನಿಮ್ಮ KKKಯಲ್ಲಿನ ಫೋಟೋ ಎಫೆಕ್ಟ್..!
  ಚೆನ್ನಾಗಿ ಬರೆದಿದ್ದೀರ:)
  ನನ್ನ ಮಾವ (ವಿನೋದ್ ತಂದೆ) transferable jobನಲ್ಲಿದ್ದ ಕಾರಣ ಹೋದಲ್ಲೆಲ್ಲ ಮನೆ ಬಾಡಿಗೆಗೆ ಕೇಳುವಾಗ ಬರುವ ಫಸ್ಟ್ ಪ್ರಶ್ನೆ.."ನೀವು ಯಾವ ಜಾತಿ" ಎಂದು..ಇವರು 'ಮನುಷ್ಯ ಜಾತಿ, ನೀವು?' ಎಂದು ಸೀರಿಯಸ್ ಆಗಿನೆ ಮರುಪ್ರಶ್ನೆ ಹಾಕ್ತಿದ್ರು!!!
  ಮತ್ತೆ ರಂಗೋಲಿ ಪುಡಿ ಮಾಡೋಕ್ಕೆ Easy method ಇದೆ..:-)

  ReplyDelete
 15. ವನಿತಾ, ಧನ್ಯವಾದ ... ನಮ್ಮ kkk ಗೆ ಇಂತಹ ಹಲವು ಚಟುವಟಿಕೆಗಳು ಜೀವಾಳ ಆದರೆ...ಇವುಗಳಿಂದ ಪ್ರೇರಣೆ ಪಡೆದ ನಮಗೆ ಇಂತಹ ಲೇಖನದ ತುಣುಕುಗಳನ್ನು ನೀಡುವುದು ಕಷ್ಟವಲ್ಲ,,,, ನಿಮ್ಮ ತಂದೆಯವರಿಗೆ ಎದುರಾದ ಪ್ರಶ್ನೆಯೇ ನನಗೂ ಮಂಗಳೂರಿನಲ್ಲಿ ಮನೆ ಹುಡುಕಲು ಹೋದಾಗ ಎದುರಾಗಿತ್ತು...
  ವನಿತಾ...ರಂಗೋಲಿ ಪುಡಿಯ ನಿಮ್ಮ ಸುಲಭ ವಿಧಾನ ಉಪ್ಯೋಗಿಸಿದ್ದಿದ್ದರೆ...ನನ್ನ ಪ್ರಹಸನ ಏನಾಗ್ತಿತ್ತು..?

  ReplyDelete
 16. ಧನ್ಯವಾದ ಗುರು..ಮತ್ತೆ ಏನು ವಿಶೇಷ..? ನಮ್ಮ ಬ್ಲಾಗಿಗರ ಕೂಟ ಆಗಸ್ಟ್ ೨೨ ಕ್ಕೆ ಬರಿತ್ತೀರಲ್ಲಾ..?

  ReplyDelete
 17. ಪ್ರಹಸನ ಸೊಗಸಾಗಿದೆ.ಅಭಿನಂದನೆಗಳು.

  ReplyDelete
 18. ಡಾ. ಕೃಷ್ಣಮೂರ್ತಿಯವರಿಗೆ ಧನ್ಯವಾದ ಪ್ರತಿಕ್ರಿಯೆಗೆ...

  ReplyDelete
 19. For a change Mayeshannaa...Endlish naage haakibittaa commentaaa

  ReplyDelete
 20. Nice one Sir, tumba sundara lekhana....

  ReplyDelete
 21. ವಿ.ಆರ್. ನಿಮ್ಮ ಬಜ್ ಗಳನ್ನು ನೋಡ್ತೀರ್ತೇನೆ..ಸಮಯದ ಅಭಾವ ಪ್ರತಿಕ್ರಿಯೆಗೆ.. ಧನ್ಯವಾದ ನಿಮ್ಮ ಈ ಪ್ರತಿಕ್ರಿಯೆಗೆ.

  ReplyDelete
 22. This comment has been removed by the author.

  ReplyDelete
 23. ಅಶೋಕ್ ಜಲನಯನಕ್ಕೆ ಸ್ವಾಗತ ನಿಮ್ಮ ಅಭಿಪ್ರಾಯ ಪ್ರತಿಕ್ರಿಯೆಗೆ ಧನ್ಯವಾದ.

  ReplyDelete
 24. ರವಿಕಾಂತ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...ನಾವೆಲ್ಲ ಬ್ಲಾಗಿಗಳು ಒಂದೆಡೆ ಸೇರುವ ಒಂದು ಸದವಕಾಶದ ಸಾಧ್ಯತೆಯಿದೆ ಆಗಸ್ಟ್ ನಲ್ಲಿ...ನಿರೀಕ್ಷಿಸಿ.

  ReplyDelete
 25. ಸಹಬಾಳ್ವೆ ಸಾರುವ ಸು೦ದರ ತಿಳಿಹಾಸ್ಯದ ಪ್ರಹಸನ ಚೆನ್ನಾಗಿ ಬ೦ದಿದೆ ಅಜ಼ಾದರೇ.

  ReplyDelete
 26. ಸೀತಾರಾಂ ಸರ್ ಧನ್ಯವಾದ....ಒಂದುಗೂಡಿ ಬಾಳೋದ್ರಲ್ಲಿ ಒಂದು ಮಜಾ ಇರುತ್ತೆ...ಅವಿಭಕ್ತ ಕುಟುಂಬದಲ್ಲಿದ್ದವರಿಗೆ ಇದು ಅನಿಭವಕ್ಕೆ ಬಂದಿದೆ..

  ReplyDelete