Monday, May 17, 2010

ಬ್ಲಾಗಿಗರ ಸಂತೋಷ ಕೂಟ

ಬ್ಲಾಗಿಗರ ಸಂತೋಷ ಕೂಟ



ಮಿತ್ರರೇ ಈಗಾಗಲೇ ಪ್ರಕಾಶ್ ಮತ್ತು ಶಿವು ತಮಗೆಲ್ಲ ಬ್ಲಾಗಿಗರ ಕೂಟದ ಬಗ್ಗೆ ತಿಳಿಸಿದ್ದಾರೆ. ಹೀಗೊಂದು ಕೂಟದ ಆಯೋಜನೆಗೆ ನಾವೆಲ್ಲಾ ಮುಂದಾಗುತ್ತಿರುವುದು ಕನ್ನಡದ ಬ್ಲಾಗಿಗಳು ಯಾರಿಗೂ ಕಡಿಮೆಯಿಲ್ಲ ಎನ್ನುವುದನ್ನು ತೋರಿಸುತ್ತದೆ. ಎಲ್ಲ ಸ್ನೇಹಿತರೂ ನನ್ನ ಮೊದಲ ಪ್ರಸ್ತಾಪದಲ್ಲೇ ಬಹಳ ಹುಮ್ಮಸ್ಸಿನ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಿರಿ. ಅದರಂತೆ ಪ್ರಕಾಶ್, ಶಿವು, ತೇಜಸ್ವಿನಿ, ದಿನಕರ್, ...ಹೀಗೆ ಹಲವರೊಂದಿಗೆ ಚರ್ಚಿಸಿ ಪ್ರಾರಂಭವಾಗಿಬಿಡಲಿ ಎಂದು ಮುಂಬರುವ ಆಗಸ್ಟ್ 22 ಕ್ಕೆ ಈ ಬ್ಲಾಗಿಗರ ಕೂಟದ ಆಯೋಜನೆಯನ್ನು ಹಮ್ಮಿಕೊಂಡಿದ್ದೇವೆ.


ಈ ಸಂದರ್ಭದಲ್ಲಿ ಬ್ಲಾಗಿಗರ ಆಯ್ದ ಲೇಖನಗಳ ಪುಸ್ತಕದ ಬಗ್ಗೆಯೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದ್ದರಿಂದ, ಇಂತಹ ಪುಸ್ತಕದ ಬಿಡುಗಡೆಯನ್ನೂ ಮಾಡುವುದೆಂದು ಯೋಚಿಸಿ ಎಲ್ಲ ಸ್ನೇಹಿತರಿಗೆ ಸಂದೇಶವನ್ನು ನಮ್ಮ ಸ್ನೇಹಿತರಾದ ಶಿವು, ದಿನಕರ್, ಶಿವಶಂಕರ್ ಎಳವತ್ತಿ, ಈಶ್ ಮತ್ತು ಹೊರನಾಡ ಕನ್ನಡಿಗರ ಸಂಚಾಲಕರಾಗಿ ಡಾ. ಗುರು ಹಾಗೂ ಶ್ರೀ ಉದಯ್ ಇಟ್ಟಿಗಿ ಯವರು ತಿಳಿಸಿರುತ್ತಾರೆ ಅಥವಾ ತಿಳಿಸಲಿದ್ದಾರೆ.


ಬ್ಲಾಗ್ ಕೂಟದ ಆಯೊಜನೆ ಮತ್ತು ಇತರ ವೆಚ್ಚ ಭರಿಸಲು ಬ್ಲಾಗಿಗಳ ಪುಸ್ತಕ ಪ್ರಕಟಣೆಯಲ್ಲಿ ಲೇಖನ ಪ್ರಕಟಿಸುವ ಬ್ಲಾಗು ಮಿತ್ರರಿಂದ ತಮ್ಮ ಲೇಖನದ 1 ಪುಟಕ್ಕೆ ರೂ 150/- ಅಥವಾ 2 ಪುಟದ ಲೇಖನವಾದರೆ ರೂ 250/- ಸಂಗ್ರಹಿಸುವುದೆಂದು ಯೋಚಿಸಿದ್ದೇವೆ. ಇದರ ಜೊತೆಗೆ ನಮ್ಮ ಕೆಲ ಬ್ಲಾಗು ಮಿತ್ರರು ಸ್ವಪ್ರೇರಿತ ದೇಣಿಗೆಯನ್ನೂ ಈ ಕಾರ್ಯಕ್ರಮಕ್ಕಾಗಿ ನೀಡಲಿದ್ದಾರೆ.


ಈ ಕೂಟದ ಕಾರ್ಯಕ್ರಮಗಳಲ್ಲಿ ಏನನ್ನು ನೀವು ಅಪೇಕ್ಷಿಸುತ್ತೀರಿ ಎನ್ನುವುದನ್ನೂ ತಿಳಿಸಿ...ನಿಮ್ಮ ಸಲಹೆ ಮತ್ತು ಹುಮ್ಮಸ್ಸಿನ ಸಹಕಾರ ನಮ್ಮ ಮುಂದಿನ ಹೆಜ್ಜೆಗೆ ಪ್ರೋತ್ಸಾಹ ನೀಡುವುದಂತೂ ಖಂಡಿತ.

ಲೇಖನ ಕಳುಹಿಸುವ ವಿಷಯದಿಂದ ಮೊದಲುಗೊಂಡು ಈ ಬ್ಲಾಗಿಗರ ಕೂಟದ ಯಶಸ್ಸಿಗೆ ನೀವೆಲ್ಲಾ ಕೈಜೋಡಿಸಬೇಕೆಂದು ವಿನಂತಿ..ನಿಮ್ಮ ನಿಮ್ಮ ಸ್ನೇಹಿತರ ವರ್ತು ಲದಲ್ಲಿ ಇದಕ್ಕೆ ಹೆಚ್ಚು ಪ್ರಚಾರ ಸಿಗಬೇಕು.. ..ಇದು ಒಂದು ಉತ್ತಮ ಪ್ರಾರಂಭವಾಗಬೇಕು..ಮುಂದಿನ ಅಮೋಘ ಕಾರ್ಯಕ್ರಮಗಳಿಗೆ.


ಈಗ ನನ್ನ ವಿನಂತಿಯೂ ಇಷ್ಟೇ..ತಮ್ಮ ಕೆಲಸದ ನಡುವೆಯೇ ಬ್ಲಾಗಿಗರ ನಮ್ಮ ಆಗಸ್ಟ್ 22 ರ ಕೂಟಕ್ಕೆ ಶಿವು (ಪ್ರಕಾಶ್ ಸಂಪೂರ್ಣ ಸಹಕಾರ ಸಿಗುತ್ತೆ ಎಂದಿದ್ದಾರೆ ತಮ್ಮ ಕಾರ್ಯವ್ಯಸ್ತತೆಯ ಕಾರಣ..ಹಾಗೆ ಹೇಳಿದ್ರೂ ಹಲವಾರು ಬಾರಿ ಅವರೇ ನಮ್ಮೊಂದಿಗೆ ಚರ್ಚಿಸಿದ್ದಾರೆ..) ಜೊತೆಗೆ ಶಿವಪ್ರಕಾಶ್ ತಮ್ಮ ಸಹಕಾರ ನೀಡುವ ಭರವಸೆ ನೀಡಿದ್ದಾರೆ..ಹಾಗೆಯೇ ವಿವಿಧ ಪ್ರದೇಶಗಳಿಂದ ಲೇಖನಗಳನ್ನು ಸಂಗ್ರಹಿಸಿ ಅವುಗಳ ಪೂರ್ವಭಾವಿ ಪರಿಶೀಲನೆ ಮಾಡಿ ಶಿವು ಗೆ ರವಾನಿಸಲು ಹಲವು ಬ್ಲಾಗು ಮಿತ್ರರು ಸಹಾಯಕ್ಕೆ ಮುಂದಾಗಿದ್ದಾರೆ..

ಕೆಳಕಂಡ ಮೈಲ್ ವಿಳಾಸಕ್ಕೆ ನಿಮ್ಮ ನಿಮ್ಮ ಪ್ರತಿಕ್ರಿಯೆ, ಕಾದಿರಸಬೇಕಾದ ಪುಟಗಳ ಸಂಖ್ಯೆ ಮತ್ತು ನಿಮ್ಮ ಲೇಖನಗಳನ್ನು ಕಳುಹಿಸಿಕೊಡಿ



Mail your responses to
shivuu.k@gmail.com (ಛಾಯಾಕನ್ನಡಿ) - ಬೆಂಗಳೂರು ಮತ್ತು ಸುತ್ತಮುತ್ತಲ ಬ್ಲಾಗಿಗಳು

dinakar.moger@gmail.com (ಮೂಕ ಮನದ ಮಾತು) - ಮಂಗಳೂರು, ಉಡುಪಿ, ಕುಂದಾಪುರ. ಇತ್ಯಾದಿ ಕರಾವಳಿ ಬ್ಲಾಗಿಗಳು.

hneshakumar@gmail.com (ಸಹಯಾತ್ರಿ) - ಮೈಸೂರು, ಹಾಸನ, ಚಿತ್ರದುರ್ಗ, ಮಂಡ್ಯ ಸುತ್ತ ಮುತ್ತಲ ಬ್ಲಾಗಿಗಳು
shivagadag@gmail.com (Shivashankar Elavatti) - ಧಾರವಾಡ, ಬೆಳಗಾವಿ, ಗುಲ್ಬರ್ಗ, ಬೀದರ್, ಗದಗ್ ಸುತ್ತಮುತ್ತಲ ಬ್ಲಾಗಿಗಳು

murthyhegde@gmail.com (ಸಾಗರದಾಚೆಯ ಇಂಚರ) ಮತ್ತು itagi.uday@gmail.com (ಉದಯ್)

- ಹೊರದೇಶದ ಬ್ಲಾಗಿಗಳು

27 comments:

  1. ಅಜಾದ್ ಸರ್,
    ಇದು ನಮ್ಮ ಬ್ಲಾಗ್ ಲೋಕ. ಕನ್ನಡ ಬ್ಲಾಗಿಗರ ಕೂಟ ನಮ್ಮ ಕಾರ್ಯಕ್ರಮ. ಇದೊಂದು ಮಾದರಿ ಕಾರ್ಯಕ್ರಮವಾಗಿ ಹೆಸರು ಪಡೆಯಬೇಕು. ಮುಂದಿನ ಎಷ್ಟೋ ಕಾರ್ಯಗಳಿಗೆ ಇದು ಬುನಾದಿಯಾಗಬೇಕು. ನಮ್ಮ ಕಾರ್ಯಕ್ರಮವನ್ನು ಚಂದಗಾನಿಸಲು ಖಂಡಿತಾ ನಾವು ನಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತೇವೆ.

    ReplyDelete
  2. ಪ್ರವೀಣ್ ನಿಮ್ಮ ಮೊದಲ ಮಾತಿಗೆ, ಪ್ರೋತ್ಸಾಹಿಸಿವ ಹುಮ್ಮಸ್ಸಿಗೆ ನಮ್ಮ ಧನ್ಯವಾದ..ಹೌದು ಇದು ನಮ್ಮ ಮನೆ ಕೆಲಸ ಎಂದು ಮಾಡಿದರೆ ಎಲ್ಲವೂ ಸುಸೂತ್ರವಾಗುತ್ತೆ ಮತ್ತು ನಮ್ಮದೆನ್ನುವ ಭಾವನೆ ಮೂಡುತ್ತೆ..ನಮ್ಮ ಪರಸ್ಪರ ಸಹಕಾರ ಗರಿಗೆದರಲಿ ಮತ್ತು ನಮ್ಮ ಕಾರ್ಯಕ್ರಮ ಸುಗಮವಾಗಿ ನಡೆಯಲಿ ಎಂದು ಆಶಿಸೋಣ.

    ReplyDelete
  3. ಸಂಪೂರ್ಣ ಬೆಂಬಲವಿದೆ..... ನೂರುಶೇಕಡ ಭಾಗಿಯಾಗಲು ಕೆಲವೊಂದು ಸಮಸ್ಯೆಗಳು ಅಡ್ಡಿಯಾಗಬಹುದು.... ಆದರೂ ನನ್ನ ಸಂಪೂರ್ಣ ಸಹಕಾರ ನೀಡಲು ಯತ್ನಿಸುವೆ. ನನ್ನಿಂದಾಗುವಷ್ಟು ಸಹಾಯ ಖಂಡಿತ ಮಾಡುವೆ.

    ReplyDelete
  4. ತುಂಬು ಹೃದಯದ ಧನ್ಯವಾದಗಳು ತೇಜಸ್ವಿನಿಯವರೇ...ನಿಮ್ಮ ಸಲಹೆ ಸಹಕಾರದ ಸಹಾಯದ ಭರವಸೆ ನಮ್ಮ ಪ್ರಯತ್ನಗಳಿಗೆ ಹೆಚ್ಚು ಹುಮ್ಮಸ್ಸು ತುಂಬಿದೆ....

    ReplyDelete
  5. ಆಝಾದ್ ಅವರೆ,
    ಬ್ಲಾಗಿಗರ ಭೇಟಿಯ ವಿಷಯವನ್ನು ‘ಅವಧಿ’ಯಲ್ಲಿ ಹಾಗೂ ಕನ್ನಡ ಬ್ಲಾಗಿಗರ ತಾಣದಲ್ಲಿ ಮತ್ತು ಬೇರೆ ಬೇರೆ ಕಡೆ ಪ್ರಕಟಿಸಿದರೆ ಇನ್ನಷ್ಟು ಪ್ರಚಾರ ಸಿಗುಬಹುದು ಎಂದು ನನ್ನ ಅನಿಸಿಕೆ. ಇದೇ ವಿಷಯವನ್ನು ಬೇರೆ ಬೇರೆ ಕಡೆ ಪ್ರಕಟಿಸಿ. ಬೇರೆಲ್ಲ ಸಹಾಯಕ್ಕೆ ನಾವೆಲ್ಲ ನಿಮ್ಮ ಜೊತೆ ಇರುತ್ತೇವೆ.

    ReplyDelete
  6. ಉದಯ್, ನಿಮ್ಮ ಸಲಹೆಗಳು ಅಮೂಲ್ಯ ನಮಗೆ, ನಿಮ್ಮ ಮಾತಿನಂತೆ ಇದನ್ನು ಕನ್ನಡ ಬ್ಲಾಗಿಗಳ ತಾಣದಲ್ಲಿ ಹಾಕಲು ಶಿವುಗೆ ಹೇಳುತ್ತೇನೆ....
    ದಯಮಾಡಿ ನಿಮಗೆ ಬರುವ ಲೇಖನಗಳ ಪೂರ್ವಭಾವಿ ಪರಿಶೀಲನೆ ಮಾಡಿ..ಡಾ.ಗುರುವಿನೊಂದಿಗೆ ಸಂಪರ್ಕದಲ್ಲಿರಿ ನನಗೆ ಈಗಾಗಲೇ ಚೇತನಾ (ಯು.ಕೆ.), ರಂಜಿತಾ (ಯು.ಎಸ್.ಎ), ಶ್ರೀಧರ್ (ಮ್ವಾಂಜಾ, ದ.ಆಫ್ರಿಕಾ), ಮಾನಸಾ (ಆಸ್ಟ್ರೇಲಿಯಾ) ಮತ್ತು ಇಲ್ಲಿಂದ (ಕುವೈತ್) ಮಹೇಶ್ (ಸವಿಗನಸು), ಸುಗುಣ (ಮನಸು) ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ. ನಿಮ್ಮಲ್ಲೂ ಕೆಲವರು ಸಂಪರ್ಕಿಸಿರಬೇಕು...ಗುರುಗೂ ಸಹ ಕೆಲವರ ಸಂಪರ್ಕ ಇದೆ..ಹಾಗಾಗಿ ವಿದೇಶೀ ಕನ್ನಡಿಗರು ಉತ್ತಮ ಪ್ರತಿಕ್ರಿಯೆ ಕೊಟ್ಟಿದ್ದಾರೆ.
    ಶಿವು ನಿಮ್ಮ ಸಂಪರ್ಕದಲ್ಲಿರುತ್ತಾರೆ...
    ನಾನೂ ನಿಮ್ಮ ಮೈಲ್ ಸಂಪರ್ಕದಲ್ಲಿರುತ್ತೇನೆ....ಶುಭವಾಗಲಿ

    ReplyDelete
  7. ಸರ್, ನಿಮ್ಮ ಹಾಗೂ ಪ್ರಕಾಶಣ್ಣ ಅವರ ಬ್ಲಾಗಿನಲ್ಲಿ ಬ್ಲೋಗಿಗರ್ ಕೂಟದ ಬಗ್ಗೆ ಓದಿ ಸಂತೋಷವಾಯಿತು . ಕೊನೆಗೂ ಈ ನಮ್ಮ ಎಲ್ಲರ ಭೆಟ್ಟಿ ಆಗುವ ಪ್ರಯತ್ನ ಒಂದು ರೂಪ ರೇಷೆ ಪಡೆದುಕೊಳ್ಳುತಿರುವದು ಅತಿ ಸಂತೋಷದ ವಿಷಯ. ಮೇಲೆ ಎಲ್ಲರು ಹೇಳಿದ ಹಾಗೆ ಇದು ನಮ್ಮ ಮನೆಯ ಕೆಲಸ ಅನ್ನೋ ಮಾತಿನಲ್ಲೇ ಎಸ್ಟೊಂದು ಆತ್ಮೀಯತೆ , ಪ್ರೀತಿ ತುಂಬಿದೆ . ನಮ್ಮ ಈಗಿನ ಫಾಸ್ಟ್ ,ಮೆಕ್ಯಾನಿಕಲ್ ಅಧಿನಿಕ ಜೀವನ ಶೈಲಿನಲ್ಲಿ ನಮಗೆಲ್ಲ ಇಂತ ಒಳ್ಳೆಯ ಫ್ರೆಂಡ್ಸ್ ಸರ್ಕಲ್ ಸಿಕ್ಕಿದ್ದು ನಿಜಕ್ಕೂ ನಮ್ಮೆಲ್ಲರ ಅದೃಷ್ಟು. ಮನಸ್ಸಿನ ಭಾವನೆಗಳನ್ನ ಮುಕ್ತವಾಗಿ ಹಂಚಿಕೊಳ್ಳೋಕೆ , ಕಂಡ ವಿಷಗಳನ್ನ ಕಂಡಂತೆ ಹೇಳಿ ಕೊಳ್ಳಕೆ , ನಮ್ಮಲಿರುವ ಒಬ್ಬ ಕಥೆಗರನ್ನ ಅಥವಾ ಸಾಹಿತಿ ಯನ್ನ ಪರಿಚಯಿಸೋಕೆ ಈ ಬ್ಲಾಗ್ ಒಂದು powerful ಮಾಧ್ಯಮ . ಹೀಗೆ ಮನಸ್ಸಿನ ಭಾವನೆಗಳನ್ನ ಹಂಚಿಕೊಳ್ಳುತ್ತ ಅದೆಷ್ಟು ನಾವೆಲ್ಲಾ ಹತ್ತಿರ ವಾಗಿದ್ದಿವಿ ಅಲ್ವಾ . ಕ್ಷಮಿಸಿ ಸ್ವಲ್ಪ ಭಾವುಕಳಾಗಿ ಬಿಟ್ಟಿದ್ದೆ ಹಹಹ
    ಆಜಾದ್ ಸರ್ , ನಂಗೆ ಇನ್ನು ಕಾರ್ಯಕ್ರಮ ಎಲ್ಲಿ ನಡಿಯುತ್ತೆ? ಎಷ್ಟು ಜನ ಖಂಡಿತವಾಗಿ ಬರಬಹುದು ? ಬೆಂಗಳೂರು ನಲ್ಲಿ ಆದ್ರೆ ಯಾವ್ ಸ್ಥಳದಲ್ಲಿ ? ಅದು ಬೂಕಿಂಗ್ ಮಾಡಬೇಕಾ ? ಫುಲ್ ಡೇ ಪ್ರೊಗ್ರಾಮ್ ಇರುತ್ತಾ?
    ಯಾರ್ಯಾರು ಏನೇನು ಕೆಲಸ ವಹಿಸ್ಕೋ ಬೇಕು ? ಇನ್ನು ಎಸ್ಟೊಂದು questions .. ಸಾದ್ಯ ಆದ್ರೆ ಒಂದು ಕಾರ್ಯಕ್ರಮದ ಡ್ರಾಫ್ಟ್ ಪ್ಲಾನ್ ರೆಡಿ ಮಾಡಿ .

    ಮನಸಾರೆ

    ReplyDelete
  8. ಮನಸಾರೆಯವರ ಮನದ ಮಾತು ಅಡೆ ತಡೆಯಿಲ್ಲದೆ ಹರಿದದ್ದು ಎನ್ನುವುದೇ ನಮ್ಮ ಎಲ್ಲರ ಸಾಮೂಹಿಕ ಈ ಪ್ರಯತ್ನ ಒಳ್ಲೆಯ ಫಲಿತ ಕಾಣುವುದು ಎನ್ನುವ ಸೂಚಕ ..ಧನ್ಯವಾದ ಮನಸಾರೆಯವರೇ...ಎಲ್ಲರೂ ತಮ್ಮ ತಮ್ಮ ಸ್ನೇಹಿತ ವರ್ತುಲದಲ್ಲಿ ಇದನ್ನು ಹೆಚ್ಚು ಪ್ರಚುರಪಡಿಸಿ...ಮತ್ತೆ ಅಯಾ ಕ್ಷೇತ್ರದವರು ಅಯಾ ಕ್ಷೇತ್ರದ ಸಂಚಾಲಕರಿಗೆ ತಮಗೆ ೧ ಅಥವಾ ೨ ಪುಟದ ಸ್ಥಳಾವಕಾಶ ಬೇಕೋ ತಿಳಿಸಬೇಕಾಗುವುದು. ಇನ್ನು ಕೆಲವೇ ದಿನಗಳಲಿ ಹಣ ಹೇಗೆ ಕಳುಹಿಸಬೇಕೆಂಬುದನ್ನು ತಿಳಿಸಲಾಗುವುದು. ಲೇಖನ ಕಳುಹಿಸಬಹುದಾದವರು ಆಯಾಕ್ಷೇತ್ರದ ಸಂಚಾಲಕರಿಗೆ ಮತ್ತು ಶಿವುಗೆ ಪ್ರತಿಯೊಂದನ್ನು ಕಳುಹಿಸುವುದರಿಂದ ಲೇಖನಗಳನ್ನು ಅಂತಿಮಗೊಳಿಸಲು ಅನುಕೂಲವಾಗುವುದು.
    ಕಾರ್ಯಕ್ರಮದ ವಿವರ ಕಾರ್ಯಕ್ರಮ ನಡೆಯುವ ಸ್ಥಳದ ಬಗ್ಗೆ ಶೀಘ್ರದಲ್ಲೇ ತಿಳಿಸಲಾಗುವುದು.

    ReplyDelete
  9. ಆಜಾದ್ ಸರ್, ಬ್ಲಾಗಿಗರ ಕೂಟ ನಿಜಕ್ಕೂ ಒಂದು ಒಳ್ಳೆ ಯೋಚನೆ. ಇಷ್ಟು ದಿನ ಬರೀ ಅಂತರ್ಜಾಲದ ಮೂಲಕ ಮಾತಾಡುತ್ತಿದ್ದ ನಾವೆಲ್ಲ ಮುಖಾಮುಖಿಯಾಗುವುದು ಸಂತೋಷದ ವಿಚಾರ. ನನ್ನಿಂದ ಏನಾದರೂ ಸಹಾಯವಾಗುವುದಿದ್ದರೆ ಖಂಡಿತ ಪ್ರಯತ್ನ ಮಾಡುವೆ

    ReplyDelete
  10. ಆಜಾದ್ ಸರ್,
    ನಿಮ್ಮ ಮಾತಿಗೆ ನನ್ನ ಪೂರ್ಣ ಸಹಮತಿ ಇದೆ............ ನೀವು ಹೇಳಿದ ಜವಾಬ್ದಾರಿ ನಾನು ಒಪ್ಪಿಕೊಂಡಿದ್ದೇನೆ........ ನನಗೆ ಬರುವ ಎಲ್ಲಾ ಪೋಸ್ಟ್ ಗಳನ್ನೂ ಶಿವೂ ಸರ್, ನಿಮಗೆ ಮತ್ತು ಪ್ರಕಾಶನ್ನನಿಗೆ ಕಳಿಸುತ್ತೇನೆ............ ನನ್ನ ಕೈಲಾದ ಕೆಲಸವನ್ನ ನಾನು ಮಾಡುತ್ತೇನೆ.............ಶುಭವಾಗಲಿ ನಮ್ಮ ಕೆಲಸಕ್ಕೆ........

    ReplyDelete
  11. Thank you Deepasmitha...Nimma Sahakaara khandita bekaagutte...khandita nimmanna naavu nenapisikollutteve..

    ReplyDelete
  12. ದಿನಕರ್ ಧನ್ಯವಾದ ನಿಮ್ಮ ಹುಮ್ಮಸ್ಸಿಗೆ ಮತ್ತು ಓಗೊಡುವ ಮನಸಿಗೆ...ಈಗ ಎಲ್ಲರಿಂದ ಪೇಜ್ ಬುಕಿಂಗ್ ಮಾಡಿಕೊಳ್ಲಬೇಕು, so you have to contact as many as possible..

    ReplyDelete
  13. saagali blog sammeLana......namma support idde irute

    ReplyDelete
  14. ಮನಸು ಮೇಡಂ...ನೀವು ಮತ್ತು ನಿಮ್ಮವ್ರು ಬೇಗ ಪೇಜ್ ಬುಕ್ ಮಾಡ್ಸಿ,,,ಡಾ.ಗುರು/ಉದಯ್ ಮತ್ತು ಶಿವುಗೆ ಮೈಲ್ ಹಾಕಿ...

    ReplyDelete
  15. ತುಂಬಾ ಒಳ್ಳೆ ಕಾರ್ಯಕ್ರಮ ಭಯ್ಯಾ....ಇದಕ್ಕೆ ನಮ್ಮ ಸಹಕಾರ ಖಂಡಿತಾ ಇದೆ.

    ReplyDelete
  16. Thank you O..manase...thangyamma....neevu bandre chennaagirutte...barteeri andkoteeni...

    ReplyDelete
  17. ಒಳ್ಳೆಯ ಸಲಹೆ ಮತ್ತು ಕಾರ್ಯ. ನನ್ನ ಕಡೆಯಿ೦ದ ಏನು ಮಾಡಲಾಗುವದೋ ಹೇಳಿ ಮಾಡುತ್ತೆನೆ.

    ReplyDelete
  18. ಬ್ಲಾಗಿಗರ ಕೂಟ ನಿಜಕ್ಕೂ ಒಂದು ಒಳ್ಳೆ ಯೋಚನೆ. ಇದಕ್ಕೆ ನಮ್ಮ ಸಹಕಾರ ಖಂಡಿತಾ ಇದೆ.

    ReplyDelete
  19. Sir,
    naan Mumbai nalliddini...naanu yaarannu contact maadbeku heli....idondu olle kaarya...elli yaavga antha tilisi...alliralu prayatnisuttene...kaaryakrama yashashwi aagalu yaavude tarada sahaayakku siddha...
    ph- 09821493445...

    ReplyDelete
  20. ಸೀತಾರಾಂ ಸರ್, ಧನ್ಯವಾದ ನಿಮ್ಮಂತಹ ಮಿತ್ರರಿಂದಲೇ ನಮ್ಮ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ...ಆಗುತ್ತದೆ ಕೂಡಾ...ನಿಮ್ಮೊಂದಿಗೆ ಸಂಪರ್ಕದಲ್ಲಿರುತ್ತೇವೆ...ಖಂಡಿತಾ ಎಲ್ಲರೂ ಕೂಡಿ ಈ ಕಾರ್ಯಕ್ರಮವನ್ನ ಯಶಸ್ವೀಗೊಳಿಸೋಣ...

    ReplyDelete
  21. ನಿಶಾವ್ರೆ...ನಿಮ್ಮ ಪುಟ ಕಾದಿರಿಸಿ ಶಿವುರವರಿಗೆ ಮೈಲ್ ಮಾಡಿ ನಂತರ ಜೂನ್ ೧೫ ರ ಒಳಗಾಗಿ ಲೇಖನ ಕಳುಹಿಸಿ...ಅದು ನಮ್ಮೆಲ್ಲರ ಮೊದಲ ಕೆಲ್ಸ ಆನಂತರದ ಕಾರ್ಯಕ್ರಮಗಳನ್ನು ವಿವರಿಸಿ ಮೈಲ್ ಕಳುಹಿಸುತ್ತೇವೆ...

    ReplyDelete
  22. ಅಶೋಕ್ ರವರೇ ನಿಮ್ಮ ಆತ್ಮೀಯತೆ ಮತ್ತು ಅಭಿಮ್ಮನಕ್ಕೆ ನಾವೆಲ್ಲಾ ಏಕೆ ಕನ್ನಡಿಗರೂ ಹೆಮ್ಮೆ ಪಡಬೇಕು...ನೀವು ನಿಮ್ಮ ಪುಟ ಕಾದಿರುಸುವ ಮಾತು ಲೇಖನ ಕಳುಹಿಸಲು ಶಿವಶಂಕರ್ ಎಳವತ್ತಿ
    shivagadag@gmail.com ಗೆ ನಿಮ್ಮ ಲೇಖನ ಹಾಗೂ ಶಿವು ರವರ ಬ್ಯಾಂಕ್ ಅಕುಂಟಿಗೆ ಹಣ ಕಳುಹಿಸಬಹುದು.. ಇದರ ವಿವರವನ್ನು ಶಿವಶಂಕರ್ ಎಳವತ್ತಿಯವರೂ ನಿಮಗೆ ತಿಳಿಸಬಹುದು....

    ReplyDelete
  23. Azad bhayya,

    tumba olle kelasa...naanu nimmodane iddene..
    :-)

    ReplyDelete
  24. idakke nann sahakaarvide. thank you.. naanu hosabalu aadru nann prayan maaduve.

    ReplyDelete