ಕಣ್ಣಲಿ ಕುಳಿತಿರುವ ಸಂಚು
ಎರಗಲಿವೆ ಹೊಡೆದಂತೆ ಮಿಂಚು
ಕುರಿಗೇನು ಗೊತ್ತು ಪೊದೆಯ
ಒಳಕುಳಿತಿವೆ ತೋಳ-ದ್ವಯ
ನಡೆದೇ ಇದೆ ಕುರುಬ ಕಾಯುವುದು
ಆಗೊಮ್ಮೆ ಈಗೊಮ್ಮೆ ಮೈಮರೆವುದು
ಸಮಯಕಾದಿವೆ ಸದ್ದಿಲ್ಲದೆ ಎರಗಲು
ಜೋಡಿ ತೋಳಗಳು ಕೊಟ್ಟು ಹೆಗಲಿಗೆ-ಹೆಗಲು
ಅಧಿಕಾರದ ನಿಲ್ಲದ ದರ್ಪ
ಅಧಿಕ-ಬೇಕೆನ್ನುವ ವಿಷ ಸರ್ಪ
ಎರಡೂ ನೋಡವು ಬಡವ-ಬಲ್ಲಿದ
ಕೊಬ್ಬಿ ಬೆಳೆದಿವೆ ತುಂಬಿಕೊಂಡು ಮದ
ಕೇಳುವುದಿಲ್ಲ ನಿಮ್ಮ ಸಹಮತ
ಬೇಕಾಗಿಲ್ಲ ನಿಮ್ಮ ಅಭಿಮತ
ಕಾರಣವಿರದ ಆಳುವ ರಾಜ
ಹೂರಣ ನೋಡುವ ಅಧಿಕಾರಿ ಭೋಜ
ಅನ್ನದಾತನ ಸಾಲವೇ ನೆಪ
ಹಣದಾತ ಚರ್ಮ ಸುಲಿವ ಭೂಪ
ಒಂದೆಡೆ ಕಿತ್ತು ತಿನ್ನುವ ಮಧ್ಯವರ್ತಿಗಳ ವರ್ತನೆ
ಮಗದೆಡೆ ಕುಣಿಕೆ ಹಗ್ಗಗಳ ಬೆಂಬಿಡದ ನರ್ತನೆ
ಇದ್ದ ಬದ್ದದ ಮಾರಿ ಮದು-ಮಗಳಮಾಡಿ
ಕಣ್ಣೀರು ಕುಡಿದರು ಅಮ್ಮ-ಅಪ್ಪನ ಜೋಡಿ
ಅತ್ತೆ ಮಾವನ ವರದಕ್ಷಿಣೆಯ ಕಿರುಕುಳ
ಉರಿಸಿ ಹಿಂಡುವರು ಹೆತ್ತವರ ಕರುಳ
ಕಛೇರಿಯಲ್ಲಿ ಹೇಳಿದ್ದೇ ವೇದ ಎನುವ ಬಾಸು
ಹೆಣ್ಣೆಂದರೆ ಏಕೆ ಎಲ್ಲಆಗುವರು ಪೀಪಾಸು ?
ತೋಳಗಳು ಅನ್ನಕಾಗಿ, ಉಳಿವಿಗಾಗಿ ಎರಗಿದರೆ
ತಮ್ಮರಕ್ಷಣೆಗೆ ಸರ್ಪಗಳು, ತಪ್ಪೇನು ಬುಸುಗುಟ್ಟಿದರೆ?
ತೃಷೆ, ಪೀಪಾಸೆ ಅಧಿಕಾರ ಹಣದಾಸೆ
ಕಾಡಿ-ಪೀಡಿಸುವುದೇ ಮಾನವನ ವರಸೆ
ಕೇಡ ಮಾಡಲು ಬೇಧವಿಲ್ಲ ಒಂದಾಗುವರು
ಅಪವಾದ ಜೋಡಿತೋಳ - ಇವರಾಗುವರು
ಇರೋ ಸಮಾಜದ ಸ್ತಿತಿ- ದುಸ್ತಿತಿಯನ್ನ ಎಷ್ಟು ಚೆನ್ನಾಗಿ ಕವನದಲ್ಲಿಟಿದ್ದೀರಿ ಭೈಯ್ಯ .. ತುಂಬಾ ಚೆನ್ನಾಗಿದೆ :)
ReplyDeleteಇಂದಿನ ಸಮಾಜದ ಕನ್ನಡಿಯಂತಿರುವ ಕವನ ಕಗ್ಗದ ಈ ಸಾಲುಗಳನ್ನು ನೆನಪು ತರುತ್ತವೆ;
ReplyDeleteಕನಲ್ದ ಹುಲಿ ಕೆರಳಿದ ಹರಿ ಮುಳ್ ಕರಡಿ ಛಲನಾಗ,
ಅಣಕು ಕಪಿ ಸೀಳ್ನಾಯಿ ಮೊದಲಾದ ಮೃಗದ,
ಸೆಣಸುಮುಸುಡಿಯ ಘೋರದುಷ್ಟ ಚೇಷ್ಟೆಗಳೆಲ್ಲ,
ಅಣಗಿಹವು ನರಮನದಿ-ಮಂಕು ತಿಮ್ಮ !!
ವಾಸ್ತವವೇ ಕವನವಾಗಿ ಬಂದಿದೆ. ಇದಕ್ಕೆಲ್ಲಾ ಪರಿಹಾರವಿದೆಯೇ ?
ReplyDeleteಜಲನಯನ,
ReplyDeleteಉತ್ತಮ ಕವನ..
Vaastava kavanavaagi chennaagi moodibandide...
ReplyDeleteಜಲನಯನ,
ReplyDeleteಕಟು ಸತ್ಯವನ್ನ ಅಸ್ಟೇ ಕಟುವಾಗಿ ಹೇಳಿದ್ದೀರ.. ತುಂಬಾ ಚೆನ್ನಾಗಿದೆ .. ವಾಸ್ತವತೆಗೆ ಹಿಡಿದ ಕೈಗನ್ನಡಿ ...
ಪ್ರವಿ
ಜಲನಯನ,
ReplyDeleteಜೋಡಿ ತೋಳಗಳು ತುಂಬಿದ ನಮ್ಮ ಸಮಾಜದ ಬಗೆಗೆ ಚೆನ್ನಾಗಿ ಕವನಿಸಿದ್ದೀರಿ.
God help us!
ಚೆ೦ದದ ಕವನ. ಜೋಡಿ ತೋಳಗಳ ಮುಖಾ೦ತರ ನಮ್ಮ ವ್ಯವಸ್ಥೆಯ ಕ್ರೌರ್ಯವನ್ನ ವಿವರಿಸಿದ್ದಿರಾ....
ReplyDeleteತೋಳಗಳನ್ನು ಬೇಟೆ ಆಡೋ ಬಗ್ಗೆನೂ ಬರೆಯಬೇಕಿತ್ತು.
ಅಜಾದ್ ಸರ್,
ReplyDeleteವಾಸ್ತವಿಕತೆಗೆ ಹಿಡಿದ ಕನ್ನಡಿಯಂತಿದೆ ಕವನ.
ಇಂದಿನ ಸಮಾಜದ ಹರಿದು ತಿನ್ನುವ ಬುದ್ಧಿ ಪ್ರತಿಯೊಬ್ಬರಿಗೂ ತುಂಬಿದೆ. ಸಮಾಜದಲ್ಲಿ ಹಸಿದ ತೋಳದಂತವರು ತುಂಬಿ ತುಳುಕುತ್ತಿದ್ದಾರೆ. ಯಾರಿಗೆ ಏನಾದರೆ ನಮಗೇನು? ನಮ್ಮ ಹೊಟ್ಟೆ ತುಂಬಿದರೆ ಸಾಕಲ್ವಾ?
chennagidhe kavana jalanayana sir...
ReplyDeleteyaavudho thoLagaLa kathe hELuttirEno kavanadalli antha andukonde modaleradu saalugaLannu Odidaaga.... aamELe samaajadha vairudhyagaLa bagge hELidiri chennagi :)
This comment has been removed by the author.
ReplyDeleteರಂಜು, ತುಂಬಾ ಥ್ಯಾಂಕ್ಸ್...ನಿನ್ನ ಬ್ಲಾಗಲ್ಲಿ ಹೊಸದು ಹಾಕದಿದ್ದ್ರೂ ನಿನ್ನ ಪ್ರೋತ್ಸಾಹದ ಹಾರೈಕೆ ನಿಲ್ಲೊಲ್ಲ...ಧನ್ಯವಾದ....
ReplyDeleteಡಾ. ಕೃಷ್ಣಮೂರ್ತಿಯವರಿಗೆ ಧನ್ಯವಾದ...ಹೌದು ಸರ್..ಕಗ್ಗದ ಬಗ್ಗೆ ಮತ್ತು ಕೆಲಸಾಲುಗಳನ್ನು ನೀಡಿ ಕಗ್ಗದ ಹಿರಿಮೆಯನ್ನು ತಿಳಿಸಿದ್ದಕ್ಕೆ ಮತ್ತೊಮ್ಮೆ ನನ್ನಿ
ReplyDeleteಸುಬ್ರಮಣ್ಯ ಧನ್ಯವಾದ...ನಿಜವಾಗಿಯೂ ಇವಕ್ಕೆ ಪರಿಹಾರ ಇದೆಯೇ ಎಂದು ನನಗೂ ಸಮ್ಶಯ ಪ್ರಾರಂಭವಾಗಿದೆ...ಲೋಕಾಯುಕ್ತರ ದಾಳಿಗಳ ನಂತರ ಎಲ್ಲಾ ತೋಳಗಳೂ ಮಾಯವಾಗಬೇಕಿತ್ತು...ಆದ್ರೆ......
ReplyDeleteಗುರು, ಥ್ಯಾಂಕ್ಸ್...ನಿಮ್ಮ ಪ್ರತಿಕ್ರಿಯೆಗೆ...
ReplyDeleteThis comment has been removed by the author.
ReplyDeleteರವಿಕಾಂತ ಸರ್ ವಾಸ್ತವ ಪೂರ್ತಿ ಬಿಂಬಿತವಾಗಿಲ್ಲ....ಇದು ಪ್ರಯತ್ನ ಅಷ್ಟೇ...ಧನ್ಯವಾದ ನಿಮ್ಮ ಆಗಮನ ಮತ್ತು ಪ್ರತಿಕ್ರಿಯೆಗೆ
ReplyDeleteಪ್ರವೀಣ್ ಭಟ್ ನಿಮ್ಮ ಪ್ರೋತ್ಸಾಹದ ಮಾತಿಗೆ ನನ್ನ ಧನ್ಯವಾದ...
ReplyDeleteಸುನಾಥ ಸರ್, ಕವನಿಸೋದು ಸಿಗದಿದ್ದುದರ ಬಗ್ಗೆ ಕನವರಿಸೋದು ನಮ್ಮ ಕರ್ಮ...ಹಹಹ ನಿಮ್ಮ ಪ್ರತಿಕ್ರಿಯೆ ಮತ್ತು ಪ್ರೋತ್ಸಾಹಕ್ಕೆ ನನ್ನ ಧನ್ಯವಾದಗಳು.
ReplyDeleteಪ್ರವೀಣ್ ಮನದಾಳದ ನಿಮ್ಮ ಮಾತಿಗೆ ನನ್ನ ಮನಃಪೂರ್ವಕ ಧನ್ಯವಾದಗಳು...
ReplyDeleteಸುಧೇಶ್ ನನಗೂ ಬರೆವಾಗ ಇದೇ ವಿಷಯ ಸ್ವಲ್ಪ ಗೋಜಲಾಯಿತು..ನಂತರ ಹೀಗೆ ಇದ್ದರೇ ಚೆನ್ನ ಅನ್ನಿಸಿ ಈ ರೂಪ ಪಡೆದಿದ್ದು ಕವಿತೆ...ಧನ್ಯವಾದ...
ReplyDeleteಸೀತಾರಾಂ ಸರ್, ತೋಳದ ಹೆಸರಲ್ಲಿ ಮಾಡಿದ ರಾಜಕೀಯ ತೋಳವನ್ನೇ ನಾಚಿಸುವಂತಹುದು...ತೋಳದ ಬೇಟೆ...ಹಾಂ ಇದೂ ಸ್ವಾರಸ್ಯಕರ ...ಆದ್ರೆ ತೋಳಗಳನ್ನು ಬೇಟೆಯಾಡೋದು...??!!!! ಎಲ್ಲಿವೆ ಸರ್ ತೋಳಗಳು....ಸದ್ಯಕ್ಕೆ ಲೋಕಾಯುಕ್ತ ಹೆಗಡೆಯವರು ಬೇತೆಯಾಡ್ತಿದ್ದಾರೆ ಒಂದುರೀತಿಯ ತೋಳಗಳನ್ನು...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ
ReplyDeletejodi toLagaLa mukhantara... news paper odidantayatu Azadre... Bharatiya raajakiya annade vidhi illa...
ReplyDeleteGood description about politics
ಬಹುಶಃ ಎಲ್ಲರ ಅಸಮಧಾನ ಇಲ್ಲಿದೆ . . . ಅಸಾಹಯಕತೆ ಕೂಡ
ReplyDeleteಮಾನಸ..ಧನ್ಯವಾದ..ನಮ್ಮ ವ್ಯವಸ್ಥೆ ಯಾಕೆ ಅವಸ್ಥೆ ಆಗ್ತಿದೆಯೋ ಗೊತ್ತಿಲ್ಲ...ನಿಜ ...ಇದು ಜನ್ಮದಿಂದ ಬರಬೇಕು.
ReplyDeleteಎನ್ನಾರ್ಕೆ ಸರ್ ಜಲನಯನಕ್ಕೆ ಸ್ವಾಗತ ಮತ್ತು ಪ್ರತಿಕ್ರಿಯೆಗೆ ಧನ್ಯವಾದ....
ReplyDeleteವ್ಯವಸ್ಥೆ ಬಗೆ ಚೆಂದದ ಕವನ ಹೆಣೆದಿದ್ದೀರ...
ReplyDeleteಇದಕ್ಕೆ ಪರಿಹಾರ....?
ಧನ್ಯವಾದ ಮಯೇಸಣ್ಣ...ಪರಿವಾರ....ಹೌದು..ಇದಕ್ಕೆ ಪರಿವಾರ ಐತೆ...ದೊಡ್ಡ ಪರಿವಾರ...
ReplyDeleteಅದ್ಕೇಯಾ ಇಂಗಾಗೀರೋದು ದೇಸ, ಯಕ್ಕುಟ್ಟೋಗೈತೆ.......ಏನು...ಓ..ಪರಿಹಾರಾನಾ...??!! ಮಯೇಸಣ್ಣ...ಪರಿ ಆರ ಸಿಕ್ಕಿದ್ ತಕ್ಷಣ ತಿಳಿಸ್ತೀನಿ...
tumba chandada holike..namma samajakke..namma darpada adikarigalige...:)
ReplyDeleteRaaghu
Dhanyavaada Raaghu...namma samajadalli maanava roopada tolagalu bahala...allave...hahaha
ReplyDelete