Top Ecological Disasters so far......
ವಿಶ್ವ ಪರಿಸರದಿನಾಚರಣೆ ಆಚರಿಸಿಕೊಳ್ಳುತ್ತಿರುವ ನಾವು ನಿಜವಾಗಿಯೂ ಮಾಡಿರುವುದೇನು..? ಪರಿಸರದ ಬಗ್ಗೆ .., ನಮ್ಮ ಮನೆಯನ್ನೇ ನಾವು ಎಷ್ಟು ಮುತುವರ್ಜಿಯಿಂದ ನೋಡಿಕೊಳ್ಳುತ್ತೇವೆಂದು...ಯೋಚಿಸಬೇಕಾಗಿದೆ...ಪರಿಸರದ ದೂಷಣೆ -ನಮ್ಮ ಹಾಸುಗೆ, ನಮ್ಮ ಊಟದ ತಟ್ಟೆ, ನಮ್ಮ ಕುಡಿನೀರು ಅಷ್ಟೇಕೆ ನಮ್ಮ ಉಸಿರಾಡುವ ಪ್ರಾಣ ವಾಯು ಇವುಗಳನ್ನೇ ಮಲಿನ ಮಾಡಿಕೊಳ್ಳುತ್ತಿದ್ದೇವೆ.
ಈ ಸಂದರ್ಭದಲ್ಲಿ ನಮ್ಮಿಂದಾದ ತಪ್ಪುಗಳನ್ನು ನೆನಪಿಸಿಕೊಳ್ಳುವ ಮತ್ತು ಆತ್ಮವಿಮರ್ಶಿಸಿಕೊಳ್ಳುವ ಅವಕಾಶ ಸಿಕ್ಕಿದೆ...ಅದಕ್ಕೆ ..ನಮ್ಮಿಂದಾದ ಈ ಪ್ರಮುಖ ಪರಿಸರ ದೂಷಣೆಗಳ ಪುನರಾವಲೋಕನ ಮಾಡೋಣವೇ....?
1. (ಚೆರ್ನೋಬಿಲ್ ಅಂದಿನ ರಷ್ಯಾದ ಅಣುಸ್ಥಾವರ ವಿಸ್ಫೋಟ)
The Chernobyl Nuclear Plant Explosion
Chernobyl, Russia: Nuclear power plant explosion (ವೆಬ್ ಎಮ್.ಎಸ್.ಎನ್. ಕೃಪೆ)
The worst ever nuclear power plant accident in history, happened on the 26th of April in 1986 when a reactor at the Chernobyl plant, in the Ukrainian Soviet Socialist Republic, Released 400 times higher radioactive material than that happened during bombing of Hiroshima-Nagasaki.
ಅಂದಿನ ರಷ್ಯಾ ಸಂಯುಕ್ತ ಸಂಸ್ಥಾನಗಳ ಉಕ್ರೇನ್ ಪ್ರಾಂತದ ಚೆರ್ನೋಬಿಲ್ ಅಣುಸ್ಥಾವರ ೨೬ ಏಪ್ರಿಲ್ ೧೯೮೬ ರಲ್ಲಿ ಸ್ಫೋಟಗೊಂಡು ಮಾನವ ಇತಿಹಾಸದ ಅತಿ ಘೋರ ಪರಿಸರ ಪ್ರದೂಷಣೆಗೆ ದಾರಿಯಾಯಿತು. ಇದು ಎಷ್ಟು ತೀವ್ರತರವಾಗಿತ್ತೆಂದರೆ...ನಾಗಸಾಕಿ –ಹಿರೋಷಿಮಾ ನಗರಗಳ ಮೇಲೆ ಅಣುಬಾಂಬಿನ ಸ್ಪೋಟದಿಂದ ಉತ್ಪಾನೆಯಾದ ವಿಕಿರಣಪ್ರಸರಣಕ್ಕಿಂತ ೪೦೦ ಪಟ್ಟು ಹೆಚ್ಚು ವಿಕಿರಣ ಪರಿಸರಕ್ಕೆ ಬಿಡುಗಡೆಯಾಗಿ ಥೈರಾಯ್ಡ್ ಕ್ಯಾನ್ಸರ್ (೨.೪%) ರಕ್ತದ ಕ್ಯಾನ್ಸರ್ (೧೦೦ %) ಜನ್ಮವಿರೂಪತೆ ಹೃದಯ ಖಾಯಿಲೆಗಳು, ಹೀಗೆ ಹಲವಾರು ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಮೂಲವಾಯಿತು. ಈ ಸ್ಥಾವರಗಳಿದ್ದ ಪ್ರದೇಶ ಮಾನವ ಜೀವನ ಸಂಬಂಧಿತ ಯಾವುದೇ ಚಟುವಟಿಕೆ (ವ್ಯವಸಾಯ, ಹೈನುಗಾರಿಕೆ ಇತ್ಯಾದಿ) ಗೆ ಯೋಗ್ಯವಾಗಲು ಕನಿಷ್ಠ ಇನ್ನೂ ೬೦-೨೦೦ ವರ್ಷಕಾಲ ಅಯೋಗ್ಯವಾಗಿರುತ್ತದೆ. ಇನ್ನು ಅಣುಸ್ಥಾವರದ ಸ್ಫೋಟಿತ ಜಾಗ ೨೦,೦೦೦ ವರ್ಷಗಳವರೆಗೂ ಮಾನವ ಜೀವನಕ್ಕೆ ಅನರ್ಹವಾಗಿರುತ್ತಂತೆ....!!!!
2. The Union Carbide gas leak (ಚಿತ್ರ: ಎಮ್.ಎಸ್.ಎನ್. ಕೃಪೆ)
(ಭೋಪಾಲ್ – ಮಧ್ಯಪ್ರದೇಶ ದ ಯೂನಿಯನ್ ಕಾರ್ಬೈಡ್ ದುರಂತ)
The sun sets behind the Union Carbide Corp pesticide plant in Bhopal
1984, ಡಿಸೆಂಬರ್ 2ರ ರಾತ್ರಿ ಭರತದ ಇತಿಹಾಸದ ಕರಾಳ ರಾತ್ರಿ...ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ಪಾಲಿಗೆ. ವಿದೇಶೀ ಕಂಪನಿಯೊಂದರ ಪ್ರಮುಖ ಒಡೆತನದ ಯೂನಿಯನ್ ಕಾರ್ಬೈಡ್ ಕೀಟನಾಶಕ ತಯಾರಿಕಾ ಘಟಕದಿಂದ ಮೀಥೈಲ್ ಐಸೋ ಸಯನೇಟ್ ಎಂಬ ವಿಷಾನಿಲ ಸೋರಿಕೆಯಾದ ಫಲಸ್ವರೂಪ ಈ ವರೆಗೂ 20,000 ಜೀವಗಳ ಬಲಿತೆಗೆದುಕೊಂಡಿದೆ ಈ ಪರಿಸರ ಸಂಪಧಿಸಿದ ಮಾನವ ತಪ್ಪಿನ-ಕಾರಣದ ಅವಘಡ. ಈ ದುರ್ಘಟನೆಗೆ ಈಗಲೂ ಸುಮಾರು ೨ ಲಕ್ಷ ಜನ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರಭಾವಿತರಾಗಿದ್ದಾರೆ.
3. The death of the Aral Sea, Kazakhstan
(ಅರಲ್ ಸರೋವರ – ಇಲ್ಲವಾಗಿದೆ....ಚಿತ್ರ: ಎಮ್.ಎಸ್.ಎನ್ ಕೃಪೆ)sert which used to be the seabed of the Aral Sea
ಮೇಲಿನ ಚಿತ್ರದಲ್ಲಿರುವ...ಅಥವಾ...ಇಲ್ಲದಿರುವ...?? ಸರೋವರ.. ಒಮ್ಮೆ ವಿಶ್ವದ ನಾಲ್ಕನೇ ಅತಿ ವಿಶಾಲ ಸರೋವರವಾಗಿತ್ತೆಂದರೆ ನಂಬುವಿರಾ...?
ಹೌದು...ಇದು ಅಂದಿನ ರಷ್ಯಾದ ಕಜಾಕಿಸ್ತಾನ್ ನ ಅರಲ್ ಸರೋವರದ ಜಲತಲವಾಗಿದ್ದ ಚಿತ್ರ...ಸುಮಾರು 68,000 ಚದರ ಕಿಲೋಮೀಟರ್ ಇದ್ದ ಈ ಸರೋವರ 1960 ರಲ್ಲಿದ್ದ ತನ್ನ ಸ್ಥಿತಿಗಿಂತ ಶೇ 90 ರಷ್ಟು ಮಾಯವಾಗಿ ಒಮ್ಮೆ ಆಗಾಧ ಜಲಚರ, ಮೀನು ಸಂಕುಲದ ವಾಸಸ್ಥಾನವಾಗಿದ್ದ ಸರೋವರ ಈಗ ಕುರುಚಲು ಗಿಡ, ಮರಳುಗಾಡು..ಆಗಿದೆ ಎಂದರೆ...!!?? ಮಾನವ..ಎಷ್ಟು ನಿನ್ನ ಪ್ರತಾಪ...?? ನೀನು ಪರಿತಾಪ ಪಡುವ ದಿನ ದೂರವಿಲ್ಲ ಎನ್ನುತ್ತಿದೆ... ಇದಕ್ಕೆ ಕಾರಣ ಏನು ಗೊತ್ತೆ..? ಈ ಸರೋವರದ ಜೀವವಾಹಿನಿಗಳಾದ ನದಿಗಳನ್ನು ಅವುಗಳ ಉಪನದಿಗಳನ್ನು ...ಕಾಡಿ..ಅವುಗಳ ಹರಿವಿನ ದಿಶಾಬದಲಾವಣೆ ಮಾಡಿ ನೀರಾವರಿ ಉದ್ದೇಶದ ಜಲಾಶಯಗಳನ್ನು ಮಾಡಿದ್ದು...
4. Kuwaiti Oil fires, Gulf war
(ಕುವೈತಿನ ಖಾರಿಯುದ್ಧ ಪರಿಣಾಮದ ಎಣ್ಣೆ ಸೋರಿಕೆ ಮತ್ತು ಅನಿಲಾಗ್ನಿ)
ಇರಾಕಿನ ಮಹದಾಸೆ..ದುರಾಸೆ...ಪರಿಸರಕ್ಕೆ ಮಾಡಿದ ಅಪಾರ ಹಾನಿ...ಎಣ್ಣೆ ಮತ್ತು ಅನಿಲ ಸೋರಿಕೆ..ಪರಿಣಾಮ ಅನಿಲಾಗ್ನಿ...ಸುಮಾರು 600 ಎಣ್ಣೆಸ್ಥಾವರ/ಬಾವಿ ಗಳನ್ನು ಬೆಂಕಿಗಾಹುತಿಮಾಡಲಾಯಿತು. ಇವುಗಳ ಬೆಂಕಿ ಸುಮಾರು ಏಳು ತಿಂಗಳು ನಿಲ್ಲದೇ ಹತ್ತಿ ಉರಿಯಿತು. 1991 ರ ಜನವರಿ 23 ಕ್ಕೆ ಪ್ರಾರಂಭವಾಯಿತು ಈ ಸೋರಿಕೆ...ಇದು ಪರಿಸರಕ್ಕೆ ವಿಸರ್ಜಿಸಿದ (ಸೋರಿಸಿದ) ಎಣ್ಣೆಯಪ್ರಮಾಣ 11 ದಶಲಕ್ಷ ಬ್ಯಾರಲ್ಲುಗಳು..ಇದು ಸಮುದ್ರದ ನೀರಿನಮೇಲೆ ಹರಡಿದ ವಿಸ್ತೀರ್ಣ 6787 ಚದರ ಕಿಲೋ ಮೀಟರ್ ಮತ್ತು ಎಣ್ಣೆ ಪದರು 5 ಇಂಚ್ ದಪ್ಪವಿತ್ತು...!!! ಈ ಕಚ್ಚಾ ತೈಲದ ಪ್ರಮಾಣ ಭಾರತದ ಒಂದು ವಾರದ ಬೇಡಿಕೆಗೆ ಸಮ...!!!!!
ಇವು ಕೇವಲ ಕೆಲವೇ ನಿದರ್ಶನಗಳು ಮಾನವ ಪರಿಸರದ ಮೇಲಿನ ನಿಲ್ಲದ ದೂಷಣೆಗೆ...ನಾವು ಎಚ್ಚೆತ್ತುಕೊಳ್ಳದಿದ್ದರೆ..ಮುಂದೆ ..ಮಾನವ ಕುಲದ ವಿನಾಶ ನಿಸ್ಚಿತ...
che, manushyana swarthakke koneye illa. Kanthumbi banthu.
ReplyDeleteಸಮಯೋಚಿತ ಲೇಖನ.ತಿಳಿದೋ ತಿಳಿಯದೆಯೋ ಪರಿಸರಕ್ಕೆ ಎಷ್ಟೊಂದು ಹಾನಿ ಮಾಡುತ್ತೇವೆ,,ಭಾರತದಲ್ಲಿ ಯೋಜನೆಯಲ್ಲಿರುವ ನದಿ ದಿಕ್ಕು ಬದಲಾವಣೆ/ ಜೋಡಣೆ projectಗಳು ಮುಂದೊಂದು ದಿನ ಎಷ್ಟು ಹಾನಿ ಮಾಡಲಿದೆಯೋ..?! A fine balance between economic development and environment deterioration is must.
ReplyDeleteಆಜಾದ್,
ReplyDeleteನಮ್ಮ ವಿಶ್ವ ಪರಿಸರ ದಿನಕ್ಕೆ ಎಷ್ಟೊಂದು ಮಾಹಿತಿಯನ್ನು ಕೊಟ್ಟಿದ್ದೀರಿ. ರಷ್ಯಾ, ಭಾರತದ ದುರಂತ ಗೊತ್ತಿದ್ದರೂ ಇರಾಕ್ ಮಾಡಿದ ದುರಂತ ಪೂರ್ಣ ಅಂಕಿಅಂಶ ಗೊತ್ತಿರಲಿಲ್ಲ. ಅವೆಲ್ಲಾ ತಿಳಿದು ಬೇಸರವಾಯಿತು. ಹೇಗಾದರೂ ಇರಲಿ ಇನ್ನಾದರೂ ನಾವು ಎಚ್ಚೆತ್ತುಕೊಳ್ಳೋಣವಲ್ಲವೇ...
ಸರಿಯಾದ ಸಮಯಕ್ಕೆ ಉಪಯುಕ್ತ ಲೇಖನವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು.
ಅಜಾದ್ ಸರ್,
ReplyDeleteನಾವು ಎಷ್ಟೇ ಅನುಭವಿಸಿದರೂ ಒಂದಲ್ಲ ಒಂದು ರೀತಿಯಲ್ಲಿ ಪರಿಸರವನ್ನು ನಾಶಗೊಲಿಸುತ್ತಲೇ ಬಂದಿದ್ದೇವೆ. ಇಲ್ಲಿ ಒಬ್ಬರನ್ನೊಬ್ಬರು ದೂಶಿಸುವಂತೆಯೇ ಇಲ್ಲ. ಬಡವ-ಶ್ರೀಮಂತ, ಜ್ಞಾನಿ-ಅಜ್ಞಾನಿ ಮುಂತಾದ ಯಾವುದೇ ಭೇದವಿಲ್ಲದೆ ಇಡೀ ಮನುಜಕುಲವೇ ಪರಿಸರ ಮಾಲಿನ್ಯಕ್ಕೆ ದಾರಾಳ ಕೊಡುಗೆ ನೀಡಿದ್ದೇವೆ.
ಇನ್ನಾದರೂ ನಾವುಗಳು ಎಚ್ಚೆತ್ತು ಈ ದುರಾಚಾರಕ್ಕೆ ತಡೆ ಹಾಕದಿದ್ದರೆ ಈ ಭೂಮಿಯ ಅವನತಿ ಹೆಚ್ಚು ದೂರವಿಲ್ಲ!
ಮಾಹಿತಿಗೆ ಧನ್ಯವಾದಗಳು.
hedarike huttisida lekhana...... namagiruva onde bhoomiya bagge ishtu nirlakshyavaa sir....... idella noduttiddare, praLayavaagi innomme bhoomi huTTidare chenna enisuttade sir.....
ReplyDeleteನಿಶಾ, ಧನ್ಯವಾದ..ಒಬ್ಬ ಮಾನವ ಇನ್ನೊಬ್ಬ ಮಾನವನ ವಿರುದ್ಧ ಎತ್ತಿಕಟ್ಟುವುದು..ಕುಟುಂಬ ಇನ್ನೊಂದರ ವಿರುದ್ಧ ಜನಾಂಗ ಇನ್ನೊಂದರವಿರುದ್ಧ ಹೀಗೆ ನಮ್ಮ ಅವನತಿಗೆ ನಾವೇ ಸ್ವಾಗತ ಕೋರುತ್ತಿರುವುದು ವಿಪರ್ಯಾಸ....ಅಲ್ಲವೇ...?
ReplyDeleteದಿನಕರ್, ನಿಮ್ಮ ಕಾಳಜಿ ಅಥವಾ ಮನದಲ್ಲಿ ಆ ಭಾವನೆ ನಮ್ಮಲ್ಲಿ ಎಲ್ಲರಿಗೂ ಬಂದರೆ ...? ನಮ್ಮ ವ್ಯರ್ಥ ಬೂಟಾಟಿಕೆ ದೂರವಾಗಬಹುದು ಅಥವಾ ಕಡಿಮೆಯಾದರೂ ಆಗಬಹುದು...ಧನ್ಯವಾದ ನಿಮ್ಮ ಅನಿಸಿಕೆಗೆ..
ReplyDeleteಅರೆರೆ...ಯಾಕೋ... ಕೆಲವು ಕಾಮೆಂಟುಗಳು ಕಾಣಲೇ ಇಲ್ಲ.....ಮತ್ತೆ ಎಲ್ಲ ಸರಿಯಾಯ್ತು...ಹಹಹ...ಇಲ್ಲಿ ಬ್ಲಾಗ್ ಪರಿಸರವೂ ಉಲ್ಟಾ ಪಲ್ಟಾ...
ReplyDeleteನಿಜ ವನಿತಾ ನಿಮ್ಮ ಮಾತು.. ನದಿಗಳ ದಿಕ್ಕು ಪರಿವರ್ತನೆಗಿಂತಾ ನಾವು ಭಪಡುವಮ್ತಾಗುತ್ತಿರುವುದು..ಹಸಿರಿನ ವಿನಾಶ....ಈಗ ಜಾಗತೀಕರಣದ ನೆಪದಲ್ಲಿ ಕೃಷಿಯೋಗ್ಯ ಭೂಮಿಯನ್ನೂ ಉಪಯೋಗಿಸಿ ವಿಷಾನಿಲ (ಕಾರ್ಖಾನೆಗಳ ಮೂಲಕ) ಬಿಡುಗಡೆಗೆ ಅನುಕೂಲವಾಗುತ್ತಿರುವಂತೆ ಮಾಡುತ್ತಿದ್ದೇವೆ..
ಶಿವು, ಇರಾಕ್ ಮಾಡಿದ ಚೇಷ್ಟೆ ಅದರ ಸಮುದ್ರ ಜೀವಿಗಳಿಗೂ ಅಪಾಯಕಾರಿಯಾಗಿದ್ದು ಅದಕ್ಕೆ ಗೊತ್ತಿಲ್ಲ..ಸಮುದ್ರದಿಂದ ನದಿಮುಖವಾಗಿ ಹಲವಾರು ಜಲಚರಗಳು ವಲಸೆಹೋಗುತ್ತವೆ..ಇಲ್ಲಿ ನನಗೆ ಬಂಗಾಳದ ಫರಕ್ಕಾ ಜಲಾಶಯ ಪಶ್ಚಿಮಬಂಗಾಳದ ನದಿಗಳಲ್ಲಿ ಯಥೇಚ್ಛವಾಗಿ ಸಿಗುತ್ತಿದ್ದ ಹಿಲ್ಸಾ ಎಂಬ ಜಾತಿಯ ಮೀನಿನ ಸಂತತಿ ಈಗ ಕಡಿಮೆಯಾಗಿರುವುದು ನೆನೆಪಿಗೆ ಬರುತ್ತದೆ..ಈ ರೀತಿ ಇನ್ನೂ ಎಷ್ಟೋ ಜೀವಿಗಳ ಸಹಜ ಜೀವನ ಚಕ್ರಕ್ಕೆ ಅಡ್ಡಿಯನ್ನುಂಟುಮಾಡಿವೆ,,,...ನಿಮ್ಮ ಅನಿಸ್ಕೆಗೆ ಧನ್ಯವಾದ
ReplyDeleteಪ್ರವೀಣ್ ನಾವು ಅನುಭವಿಸುವಂತೆ ಇತರ ಜೀವಿಗಳಿಗೂ ಅವುಗಳ ಹುಟ್ಟು ಆ ಹಕ್ಕನ್ನು ನೀಡುತ್ತದೆ..ಅಲ್ಲವೇ ..ನಮ್ಮನ್ನು ನಾವೇ ನೋಡಿಕೊಳ್ಳುವಂತೆ, ನಮ್ಮವರ ಕಾಳಜಿ ನಾವು ಮಾಡುವಂತೆ..ನಮ್ಮ ಜಾಂಗದ ಹಿಅಕ್ಕೆ ಧಕೆ ಯಾದರೆ ಸಿಡಿಯುವಂತೆ..ನಮ್ಮ ಸಹ-ಜೀವಚರಗಳನ್ನು ನಾವೇಕೆ ಕಾಪಾಡುತ್ತಿಲ್ಲ,,,..? ಇದನ್ನು ಅರಿತ ದಿನ ಪರಿಸರದ ಹಲವು ಸಮಸ್ಯೆಗಳು ತಂತಾನೇ ಮಾಯವಾಗುತ್ತವೆ...
ReplyDeleteಮಾಹಿತಿಪೂರ್ಣ ಲೇಖನ ಭಯ್ಯಾ . ಈ ದಿನಕ್ಕೆ ಸೂಕ್ತವಾದ ಲೇಖನ. ಮಾನವ ಜಾತಿಯ ಆಸೆಗೆ ಕೊನೆಯೇ ಇಲ್ಲವೇನೋ ....?
ReplyDeletethnq sir oLLeya maahiti, manujaninda avanati embudu satya....
ReplyDeleteನಮ್ಮ ಸುಖಕ್ಕೆ, ನಮ್ಮ ವೈಭವಯುತ ಜೀವನಕ್ಕೆ ನಮ್ಮ ಹಳ್ಳ ನಾವೇ ತೊಡ್ಕೊಳ್ತಾ ಇದ್ದಿವಿ.ಪರಿಸರ ಎಲ್ಲಾ ನೋವನ್ನು ಸಹಿಸಿಕೊಳ್ಳುವ ತಾಯಿ. ಅವಳ ಸಹನೆ ಕೆಟ್ಟರೆ..ಮುಂದೆ ಎಲ್ಲಾ ಅದೋ ಗತಿ.
ReplyDeleteನಿಮ್ಮವ,
ರಾಘು.
ಓ ಮನಸೇ..ಏನೆಂದು ಹೇಳಲಿ..? ನಮ್ಮ ಬೆರಳು ನಮ್ಮ ಕಣ್ಣು ಆದರೆ ಏಕೆ ಅರಿವಾಗುತ್ತಿಲ್ಲ ಚುಚ್ಚಿಕೊಳ್ಳುತ್ತಿದ್ದೇವೆಂದು...ಅದಕ್ಕೇ ಇತರರನ್ನು ದೂರುತ್ತಿದ್ದೇವಾ..? ಆಗಲೇ ಅಂಧರಾಗಿದ್ದೇವಾ? ಧನ್ಯವಾದ ಪ್ರತಿಕ್ರಿಯೆಗೆ..
ReplyDeleteಮನಸು ಮೇಡಂ ನಮ್ಮ ಆಸೆಗಳಿಗೆ ಕಡಿವಾಣ ಬೀಳದೇ ಇದು ಅಸಾಧ್ಯ..ಧನ್ಯವಾದ ನಿಮ್ಮ ಅನಿಸಿಕೆಗೆ.
ReplyDeleteರಾಘು..ಮಾನವ ಭೂಮಿ ಮೇಲಿನ ಜಲವನ್ನು ಮಲಿನಗೊಳಿಸಿದ್ದಾಯ್ತು ಇನ್ನು ಚಂದ್ರನ ಮೇಲೆ ಕಣ್ಣು...ಅಬ್ಬಬ್ಬಾ ಮನುವೇ ನಿನ್ನಯ್ಯ ಗುಣವೇ..?,....ಧನ್ಯವಾದ ನಿಮ್ಮ್ ಅಭಿಪ್ರಾಯಗಳಿಗೆ.....
ReplyDeleteto err is human
ReplyDeleteforgiveness is environ
But how long & at what cost!
Nice article on our errs! & its cost!
Let us respect the all species & maintain environment eco-balance!
ಮೈ ಜುಮ್ ಅನಿಸ್ತು ಈ ವಿಷಯಗಳನ್ನು ಓದುವಾಗ!
ReplyDeleteಸಮಯೋಚಿತವಾದ ಬರಹ ಅಜಾದ್ ಸರ್...
Thanks Sitaaram sir...saw your blog post also...
ReplyDeleteWe need to create awareness among the public and not helplessness....
Sudhesh Thanks....for your comments..
ReplyDeletenamma hakkannu meju kutti keluvaaga ashte meju kutti kartavyaanaa yakke nibhaayisollaa..>? allavaa?
ಅಪೂರ್ವ ಮಾಹಿತಿಯುಳ್ಳ ಉತ್ತಮ ಲೇಖನವಿದು. ಸರ್
ReplyDeleteಪರಿಸರ ದಿನ ನಿಮಿತ್ತವಾಗಿಯೂ ಸಮಯೋಚಿತವಾಗಿ, ಪರಿಣಾಮಕಾರಿಯಾಗಿ ಮೂಡಿಬಂದಿದೆ.
ರಾಘವೇಂದ್ರ...ಜಲನಯನಕ್ಕೆ ಸ್ವಾಗತ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ....ಪರಿಸರದ ಕಳಕಳಿ ನಮಗಿಲ್ಲವಾದರೆ ಪರಿಸರಕ್ಕೂ ನಮ್ಮ ಮೇಲೆ ಕಳಕಳಿಯಿರದು...ಅದಕ್ಕೇ ಏನೋ...ವಿಕೋಪಗಳು ಹೆಚ್ಚುತ್ತಿವೆ...
ReplyDelete? ? ? ? ? , ): ): ); ): ): , . . . . . , ! ! ! ! !, * * * * *
ReplyDeleteಆಜಾದ್ ಅವರೇ,
ಈ ಚಿನ್ಹೆಗಳಿಗೆ ಪ್ರತ್ಯೇಕ ವಿವರಣೆ ಬೇಕಾಗಿಲ್ಲ ಅಲ್ವಾ!
ಆದರೂ ವಿವರಿಸುತ್ತೀನಿ, ಕೇಳಿ......
ಪ್ರಪಂಚದ ಯಾವ ಮೂಲೆಯಲ್ಲಾದರೂ, ಎಲ್ಲಿ ಯಾವ ಧುರ್ಘಟನೆ ಗಳಾದರೂ ...... ಜನರ ಹೊಣೆ ಮತ್ತು ಪರಿಣಾಮ ಸಾಮಾನ್ಯವಾಗಿ ಹೀಗೆ ಇರುತ್ತದೆ.... !!
????? - ಘಟನೆಗಳಾದಾಗ ಎಲ್ಲಿ, ಯಾವಾಗ ಮತ್ತು ಯಾಕೆ ಎಂಬ ತಳಮಳ, ಪ್ರಶ್ನೆ ಹುಟ್ಟುತ್ತದೆ, ಕಾಡುತ್ತದೆ.
): ): ); ): ): - ತಪ್ಪು ಯಾರದಾದರೂ, ದುಃಖ, ನೋವು, ನಿಂದೆ ಮತ್ತು ಅವಾಂತರದ ಅನುಭವ !
. . . . . - ಸ್ವಲ್ಪ ದಿನಗಳ ನಂತರ ನಡೆದ ಘಟನೆಗಳನ್ನು ಮರೆಯುತ್ತಾ, ಜೀವನ ಸಾದಾರಣ ಸ್ಥಿತಿಗೆ.
!!!!! - ಇನ್ನಷ್ಟು ದಿನಗಳ ನಂತರ ಏನೂ ನಡೆದೇ ಇಲ್ಲವೇನೋ ಎನ್ನುವ ಹಾಗೆ ಮತ್ತೆ ಬೇಜವಾಬ್ದಾರಿತನ........., ವಸ್ತು ಸ್ಥಿತಿಗಳ ಬಗ್ಗೆ ಅಸಡ್ಡೆ!!
***** - ಎಷ್ಟಾದರೂ ಕೊನೆಗೆ ಅದರ ಪರಿಣಾಮ ಅನುಭವಿಸುವುದು ಜನಗಳೇ....., ಬೆಲೆಯೇರಿಕೆ, ಜೀವನ ದುಸ್ತರ ಮತ್ತು ದುಬಾರಿ.
ಇದು ಭೂಮಿಯ ಮೇಲೆ ಹುಟ್ಟಿ ಬದುಕುತ್ತಿರುವ ಮಾನವ ಜೀವಿಯ ಬದುಕಿನ ಮತ್ತು ಗುಣಾ ಗುಣಗಳ ಕಹಿ ಸತ್ಯ ಅಲ್ಲವೇ?>
ಮನಕ್ಕೆ ಒಪ್ಪುವ, ಬುದ್ಧಿಗೆ ಚಿಂತಿಸುವ ಚೈತನ್ಯ ಕೊಡುವ ಬರಹ
ReplyDeleteಎಸ್ಸೆಸ್ಕೆಯವರೇ...ಎನ್ರೀ ನೀವು...ಹೆಸರಾದ್ರೂ ಹೇಳೀಪಾ....
ReplyDeleteಮತ್ತೆ...ಇದೇನು ಈ ಪಾಟಿ ತೀರ್ಸ್ಕೋತಾ ಇದ್ದೀರಿ...ನನ್ನ ಮೇಲೇನಾ ಸೇಡು..ಇಲ್ಲಾ ವ್ಯವಸ್ಥೆಯ ಅವಸ್ಥೆಯಮೇಲಾ...? ನಿಜ ನಿಮ್ಮ ಮಾತು...
ಅಂದಹಾಗೆ ನಿಮ್ಮ ಬ್ಲಾಗಲ್ಲಿ ನಾನು ಹೇಳಿದ ಮಾತು ನಿಜ ಮಾಡ್ತಿದ್ದೀರಿ...(ನಿಮ್ಮ ಬ್ಲಾಗ್ ಬಣಗಿಟ್ತಾ ಇದೆ..ಅಂತ...)
ಡಾ. ಗುರು...ಮನಕ್ಕೆ ಒಪ್ಪುವ ಮಾತು, ಚಿಂತನೆಗೆ ಯೋಗ್ಯವಾದ ಮಾತನ್ನು ನಮ್ಮ ದೇಶ-ರಾಜ್ಯ ಕಟ್ಟೋರು ನೆನಪಿಸಿವುದೂ ಇಲ್ಲ ಎಂತಹ ದುರಂತ ಅಲ್ಲವೇ...?
ReplyDeleteಸುಂದರವಾದ ಲೇಖನ
ReplyDelete