Saturday, June 12, 2010

ಗೊತ್ತಿಲ್ಲ ಮಗು

ಅಪ್ಪಾ ..ಏನು ಮಗು?


ಮಳೆಗಾಲ ಮತ್ತೆ ಶುರು ಆಗಿದೆ ಅಲ್ಲಪ್ಪಾ


ಹೌದು ಮಗು, ಒಳ್ಳೆದಲ್ವೇ..?


ಮತ್ತೆ ಅದೇ ಉತ್ತರ ಕರ್ನಾಟಕದ ಕಡೆ..


ಹೌದು ಕಣೋ ರೈತರಿಗೆ ಖುಷಿ ತರುತ್ತೆ ಕೃಷಿ ಅದಕ್ಕೆ...


ಮತ್ತೆ ಹೋದ ವರ್ಷದ ಅತಿ ವೃಷ್ಠಿ ಪರಿಹಾರಾನೇ ತಲುಪಿಲ್ಲ ಅಂತಾರೆ..


ಗೊತ್ತಿಲ್ಲ ಮಗು.
ಮತ್ತೆ ಅಪ್ಪಾ..


ಹೇಳು ಮಗು..


ವಿರೋಧ ಪಕ್ಷದವರೂ ನಿಧಿ ಸಂಗ್ರಹ ಮಾಡಿದ್ರಲ್ಲಾ..?


ಹೌದು ಕಣೋ ಬಂದಿತ್ತಲ್ಲ ಪೇಪರಲ್ಲಿ.


ಮತ್ತೆ ಅದೇ ಪೇಪರಲ್ಲಿ ನಿಧಿ ಪರಿಹಾರಕ್ಕೆ ಹೋಗಿಲ್ಲ


ಮತ್ತೆ ಯಾವುದೋ ವ್ಯವಹಾರಕ್ಕೆ ಹೋಗಿದೆ ಅಂತ ಇತ್ತಲ್ಲಾ?


ಗೊತ್ತಿಲ್ಲ ಮಗು.


ಅಲ್ಲಪ್ಪಾ ..


ಮತ್ತೆ ಇನ್ನೇನೋ ..?


ಅದೇ ವಿರೋಧ ಪಕ್ಷದ್ದು ಕೇಂದ್ರದಲ್ಲಿ ಸರ್ಕಾರ


ಹೌದು ನಿನಗೂ ಗೊತ್ತಲ್ಲಾ


ಕೇಂದ್ರ ಕಳುಹಿಸಿದ ಪ್ರವಾಹ ಪರಿಹಾರದ ಖರ್ಚೂ


ನಮ್ಮ ಸರ್ಕಾರ ಮಾಡಿಲ್ಲ ಅಂತ ಲೋಕಾಯುಕ್ತರೂ ಹೇಳಿದ್ದಾರೆ


ಮತ್ತೆ ಆಕಡೆ, ಈ ಕಡೆ ಹಣ ಎಲ್ಲಾ ಯಾವ ಕಡೆ ಹೋಯ್ತು

ನಂಗೊತ್ತಿಲ್ಲ ಮಗು

48 comments:

 1. 'ಪರಿಹಾರದ ಹಣ ಹರೋ ಹರ ಆಯ್ತು ಮಗೂ!'
  'ಅದ್ಯಾಕಪ್ಪ ಸುತ್ತಿ ಬಳಸಿ ಮಾತಾಡ್ತೀಯ? ತಿಂದ್ ಹಾಕಿದ್ರೂ ಅನ್ನು'
  'ಆಯ್ತಪ್ಪಾ ,ಇನ್ನು ಮೇಲಿಂದ ಹಾಗೆ ಅಂತೀನಿ'.

  ReplyDelete
 2. ದೇಹಿ ಅಂತ ಬಂದಾಗ ಕೊಟ್ಟಿದ್ದೇ ತಪ್ಪಾಯ್ತು ಅಲ್ವಾ ?. ವೈಯಕ್ತಿಕವಾಗಿ ಕೈಲಾದಷ್ಟು ಸಹಾಯ ಮಾಡಿದ್ರೆ ಸರಿಯಾಗ್ತಿತ್ತೇನೋ..!!?.

  ReplyDelete
 3. subrahmanya sir nimma maatu nija .....

  ReplyDelete
 4. ಸ್ವಾವಲ೦ಬನೆ ಬೆಳೆಸಿಕೊಳ್ಳಲಿ.... ಎನ್ನುವ ಸದುದ್ದೇಶ...ಸರ್...
  !!!!!!!!!!!

  ReplyDelete
 5. ಕೊಡುವ ಕೈಗಳು ಇನ್ನು ಮುಂದೆ ಮೊಟುಕು ಮಾಡಿಕೊಳ್ಳುತ್ತಾರೆ... ಅಲ್ಲವೆ...? ಸುಬ್ರಮಣ್ಯರವರ ಮಾತು ಸತ್ಯ ಅದನ್ನೇ ಪಾಲಿಸಬೇಕು.....

  ReplyDelete
 6. yaavudakkoo nanagoo uttara gottilla sir.......

  ReplyDelete
 7. ಡಾ. ಕೃಷ್ಣಮೂರ್ತಿ ಸರ್, ಪರಿಹಾರ ಆಯ್ತು ಅಮ್ದ್ಕೊಳ್ಳೋಣ...ಪ್ರವಾಹಪೀಡಿತರದ್ದು ಅಲ್ಲದಿದ್ದರೂ ಪೀಡಿತರದ್ದು (ಪೂರ್ವಾಗ್ರಹ) ಅಲ್ಲವೇ...ಧನ್ಯವಾದ ಸರ್..

  ReplyDelete
 8. ಸುಬ್ರಮಣ್ಯಾವ್ರೆ..ದೇಹಿ ಅಂತ ಬಂದ್ರೆ ಇನ್ನ್ಮೇಲೆ..ಕೊಟ್ಟೆ ಬಿಡ್ಬೇಕು..ಅಲ್ಲವೇ ..ಮುಟ್ಟಿನೋಡ್ಕೊಳ್ಳೋ ಹಾಗೆ...ಹ್ಹಹಹಹ ಚನ್ನಾಗಿ ಹೇಳಿದ್ರಿ..

  ReplyDelete
 9. ರಂಜು, ಖಂಡಿತಾ..ದಿಟ ನಿನ್ನ ಮತ್ತು ಸುಬ್ರಮಣ್ಯರ ಮಾತು...ಇನ್ನು ಮುಂದೆ ಪ್ರಾಮಾಣಿಕರಿಗೂ ಗಿಟ್ಟೊಲ್ಲ ಪರಿಹಾರಕ್ಕೆ ಚಂದಾ...

  ReplyDelete
 10. ಚುಕ್ಕಿ ಮೇಡಂ ..ಹಹಹ ಎಂಥ ಕಿವಿಮಾತು ನುಂಗಣ್ಣಗಳಿಗೆ..ಇನ್ನೂ ನುಂಗಿ ಅಂತ...ನಿಮ್ಮ ಉಪಾಯ ಕೇಳಿಸ್ಕೊಂಡ್ರೆ ಕಷ್ಟ...

  ReplyDelete
 11. ಮನಸು ಮೇಡಂ ಹೌದು ಕೆಲವು ಸಂಘಟನೆಗಳು ತಾವೇ ಪರಿಹಾರ ಕಾರ್ಯ ಖುದ್ದು ಮಾಡಿದ್ದು ಇದೇ ಕಾರಣಕಾಗಿ ಎಂದುಕೊಳ್ಳುತ್ತೇನೆ.

  ReplyDelete
 12. ದಿನಕರ್, ಅರ್ಥ ತಿಂದವರಿಗೂ ಆಗಿಲ್ಲ...ಈ ವಿಷ್ಯಾ ಹೇಗೆ ಹೊರಕ್ಕೆ ಬಂತು ಅಂತ.!!! ಹಹಹಹ....ಸುಮ್ನಿರಬಾರ್ದಾ..ನಮ್ಮ ಲೋಕಾಯುಕ್ತರೂ ಬಾಯಿ ಬಿಟ್ಟು ಹೇಳಿ ಬಿಡೋದೇ..."ನೀನೇನು ಅವನ ಕಡೆ ಬೆರಳು ಮಾಡಿ ತೋರಿಸ್ತೀಯಾ...ನೀನೂ ಮಾಡಿರೋದು ಅದನ್ನೇ" ಅಂತ ಸರ್ಕಾರಕ್ಕೆ...???

  ReplyDelete
 13. ಮಹೇಶ್ ಮಗೂಗೆ ಗೊತ್ತಾಗದೇ ಇರೋದು ಒಂದೇ...ಕೇರಿ ಎಲ್ಲಾ ಅಯ್ಯಂಗಾರಿಗಳು...ನಾನು ಆಟ ಆಡ್ತಾ ಇದ್ದ ಕೋಳಿ ಎಲ್ಲೋಯ್ತು..??!! ಅನ್ನೋದು...ಹಹಹಹ.

  ReplyDelete
 14. ದೇವರು ಕೊಟ್ಟರೂ ಪೂಜಾರಿ ಬಿಡ ಅಂತ ಹೇಳೋದು ಇದಕ್ಕೆ ಅಲ್ಲವ ಸರ್....ಮಗುಗಾದ್ರೂ ಗೊತ್ತಾಗಿದೆ ನೋಡಿ....ತುಂಬಾ ಚೆನ್ನಾಗಿದೆ ಈ ಸಂಭಾಷಣೆ....

  ReplyDelete
 15. ಅಜಾದ್,

  ಮಳೆಗಾಲ, ಮತ್ತು ಬರಪರಿಹಾರ ವಿಚಾರಗಳ ಮೇಲೆ ಉತ್ತಮ ಸಂಭಾಷಣೆ..
  ಎಂದಿನಂತೆ ಸೊಗಸು.

  ReplyDelete
 16. ಅಜಾದ್ ಸರ್,
  ನಿಮ್ಮ ಮಗುವಿಗೆ ಇರುವಷ್ಟು ಬುದ್ಧಿ ನಿಮಗೆ.................?????????????
  ಅಂದ್ರೆ ನಿಮಗೆ ಗೊತ್ತಿಲ್ವಾ? ಪರಿಹಾರ ನಿಧಿ ಹಂಚಿ ಕೊಂಡವರಲ್ಲೇ ಭಿನ್ನಾಭಿಪ್ರಾಯಗಳು ಶುರುವಾಗಿ ಜಗಜ್ಜಾಹಿರವಾಯಿತಲ್ಲ!
  ಬೇಗ ಬುದ್ಧಿವಂತರಾಗಿ ಸ್ವಾಮಿ!!!!!!!!!!

  ReplyDelete
 17. ಅಮಾಯಕರು ನಾವು!

  ReplyDelete
 18. ಅಶೋಕ್, ಮಧ್ಯದಲ್ಲಿರೋರಿಗೆ ಹೊಟ್ಟೆದೊಡ್ಡದು ಅದಕ್ಕೆ ಕೈಗೆ ಬಂದದ್ದು ಕೊನೆವರೆಗೂ ತಲುಪೊಲ್ಲಾ..ಧನ್ಯವಾದ.

  ReplyDelete
 19. ಶಿವು ಬರ, ನೆರೆ ಯಾವುದಾದರೂ ಒಂದೇ ತಿನ್ನೋದೇ ಧರ್ಮ ಅನ್ನೋರಿಗೆ ಏನಾದರೂ ಒಂದೇ..ಮುಂದಿರುವುದು ಹಸುಗೂಸಾದರೂ ಒಂದೇ ಹಸಿದ ತಾಯಿಯಾದರೂ ಒಂದೇ ಅವರ ಅನ್ನ ಕಿತ್ತುಕೊಂಡು ತಿನ್ನುವುದು ಅವನ ಧರ್ಮ.....

  ReplyDelete
 20. ಪ್ರವೀಣ್...ಯಾಕೋ ನಮ್ಮ ಬುಡಕ್ಕೇ ಇಡ್ತೀರಲ್ಲಾ ಗೌಡ್ರು,,,,ಹಹಹ...
  ಹೌದು ನೋಡಿ ಕೆಲವೊಮ್ಮೆ ಮಕ್ಕಳಿಗೆ ತಿಳಿಯೋದು ನಮಗೆ ತಿಳಿಯೊಲ್ಲ...ಮತ್ತೆ ಹಲವಾರು ಸಮಯದಲ್ಲಿ ನಮಗೆ ತಿಳಿದರೂ ಮಕ್ಕಳಿಗೆ ಅದರ ಉತ್ತರ ಕೊಡೋಕಾಗೊಲ್ಲ...ಎಷ್ಟು ಚನ್ನ ಅಲ್ವಾ ಅಷ್ಟು ಬುದ್ಧಿವಂತರಾದರೆ ನಾವೆಲ್ಲಾ...?

  ReplyDelete
 21. ನಾರಾಯಣ್ ಭಟ್ ಸರ್, ನಾವು ಅಮಾಯಕರಲ್ಲ...ಮೂರ್ಖರು ರಾತ್ರಿಕಂಡ ಬಾವಿಗೆ ಹಗಲೇ ಬೀಳ್ತೀವಿ ಅಲ್ಲವಾ..? ಧನ್ಯವಾದ

  ReplyDelete
 22. ಅಯ್ಯಯ್ಯೋ, ಈ ಜಾಣ ಮಗು ನಮ್ಮನ್ನೆಲ್ಲಾ ಕೋಣರನ್ನಾಗಿ ಮಾಡ್ತಾ ಇದೆಯಲ್ರೀ!

  ReplyDelete
 23. ಸುನಾಥಣ್ಣ.....ನಮ್ಮ ರಾಜಕಾರಣದ... (ರಾಜರಿಗೆ ಅಪಮಾನ)...ಅವರೂ ಇಂತಹ ದೋಚುವಿಕೆಯನ್ನು ಮಾಡಿರಲಿಲ್ಲ ಎನಿಸುತ್ತೆ...ಅಲ್ಪ ಸ್ವಲ್ಪ ಮಾಡಿದ್ರೂ ಪ್ರಜೆಗಳನ್ನು ಚನ್ನಾಗಿಯೇ ನೋಡಿಕೊಂಡರು...ತಾರತಮ್ಯ ಇಲ್ಲದೇ....ಅಲ್ಲವೇ..? ಮಕ್ಕಳೂ ಕೇಳುವಂತಾಗುತ್ತಿದೆ ..

  ReplyDelete
 24. ವಿಡಂಬನೆ ಚೆನ್ನಾಗಿದೆ ಸರ್ , ನಮ್ಮ ರಾಜಕಾರಣಿಗಳು ಸುಧಾರಿಸುವುದೆಂದೋ..

  ReplyDelete
 25. naavu sudhaarisidare avaru sudhaarisuvaru. latte pettu kodbeku ii cha0ddaa janakke.

  ReplyDelete
 26. ಅಜಾದ್ ಸರ್,
  ನಿಜ ಹೇಳಬೇಕೆಂದರೆ ಯಾರಾದರೂ ನಿಧಿ ಸಂಗ್ರಹಕ್ಕೆ ಬಂದರೆ ಹಣವನ್ನು ಕೊಡಲು ಧೈರ್ಯ ಬರುವುದೇ ಇಲ್ಲ. ಹಣ ನಿಜಕ್ಕೂ ಸಲ್ಲಬೇಕಾದವರಿಗೇ ಸಲ್ಲುತ್ತದಾ ಅಂತ ಶಂಕೆಯೇ ಹೆಚ್ಚು. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇ ಬೇಕು ಅಂತಾರಲ್ಲ,, ಹಣ ಗುಳುಂ ಮಾಡಿದವ್ರಿಗೆಲ್ಲ ಶಿಕ್ಷೆ ಆಗೋದೇ ಇಲ್ವೆ?????

  ReplyDelete
 27. ಆವಿಯಾಗಿ ಹೋಯಿತು.......!!
  ಹ ಹ ಹ್ಹ ಹ್ಹ ಹ್ಹಾ ಹ್ಹಾ .......!!

  ReplyDelete
 28. magu always 'hits the nail on the head' alwaa Dr. Azad!!
  I like your gottillaa magu series
  malathi S

  ReplyDelete
 29. ಡುಂಡಿರಾಜರ ಹನಿಯೊಂದು ನೆನಪಾಯಿತು... ಅದು ನನಗೆ ನೆನಪಿರುವಂತೆ..

  ಲಕ್ಷ ಲಕ್ಷ ಸೇರಿತು ಹಣ

  ಬರ ಪರಿಹಾರ ನಿಧಿಗೆ..

  ಆದರೆ ಅದು ಸೇರಿದ್ದು ಸಾಹೇ-

  ಬರ ಪರಿಹಾರ ನಿಧಿಗೆ!!

  ReplyDelete
 30. ಸುಮಾ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...ನಿಮ್ಮ ಓತಿಕ್ಯಾತನ ಲೇಖನ ನೋಡಿ ಬಂದೆ..ಇಲ್ಲಿ ನಿಮ್ಮ ಪ್ರತಿಕ್ರಿಯೆ..ಸಿಕ್ತು..ಹಹಹ ನೋಡಿದ್ರಾ ಬರಪರಿಹಾರ, ನೆರೆಪರಿಹಾರ ತಿಂದವರು ಓತಿಕ್ಯಾತಗಳು ಅಂತ ನಾವು ಸುಮ್ನೇನೇ ಬೈತೀವಿ ಅವುಗಳನ್ನ...ಈ ಎರಡು ಕಾಲಿನ ಓತಿಗಳ ಖಾತೆ ..ಅವಕ್ಕೆ ಸಿಗೊಲ್ಲ ಬಿಡಿ...ಹಹಹ

  ReplyDelete
 31. Sitaaram sir, thanks for your comments...

  ReplyDelete
 32. ಹಣ ಗುಳುಂ ಮಾಡಿದವರಿಗೆ ಅದೆಲ್ಲಾ ಮಾಮೂಲು ಸಾಗರಿಯವರೇ...
  ಇವರಿಗೆ ಹಣದ ಮುಖ ಮಾತ್ರಗೊತ್ತು ಅದರ ಉದ್ದೇಶ ಬೇಕಾಗಿಲ್ಲ...ಧನ್ಯವಾದ

  ReplyDelete
 33. ಎಸ್ಸೆಸ್ಕೇ...ಏನ್ರೀ ನೀವು,,,ನಿಮ್ಮ ಮೈಲ್ ಐಡಿನಾದ್ರೂ ಕೊಡಿ...ಈ ತರಹ ಎಸ್ಸೆಸ್ಕೇ , ಅನ್ನೋದು ಯಾಕೋ ಸರಿಕಾಣ್ತಿಲ್ಲ...ಹಹಹ...ಧನ್ಯವಾದ...ಆವಿಯಾದದ್ದಕ್ಕೆ...ಇಲ್ಲ ಅಂದ್ರೆ ನೀರನ್ನೂ ಮಾರಿ ಹಣಮಾಡ್ಕೊಳ್ತಾರೆ...

  ReplyDelete
 34. ಮಾಲತಿ, ಏನು ಬಹಳ ಅಪರೂಪವಾಗಿಬಿಟ್ರಿ...?
  ಗೊತ್ತಿಲ್ಲ ಮಗುಗೆ ಗೊತ್ತಿಲ್ಲ ಅನ್ನೋದಕ್ಕಿಂತ ಗೊತ್ತು ಇದು ಹೀಗೆ ಅನ್ನೋ ಕಾಲ ಯಾವಾಗ ಬರುತ್ತೋ..ಗೊತ್ತಿಲ್ಲ

  ReplyDelete
 35. ರವಿಕಾಂತ್, ಹೌದು ನೋಡಿ...ಹಣ ಎಲ್ಲಿ ಹೋಯಿತು ಅಂದ್ರೆ...ಸಾಹೇ..
  ಬರಪರಿಹಾರಕ್ಕೆ....ಹಹಹ ಒಳ್ಲೆ ಪ್ರಯೋಗ.

  ReplyDelete
 36. ಡಾಕುಟ್ರೆ, ಏನು ನೀವು ಛಲ ಬಿಡದ ತ್ರಿವಿಕ್ರಮನಂತೆ ನನ್ನ ಹೆಸರ ಹಿಂದೆ ಹೊರಟಿದ್ದೀರಲ್ಲ........?!
  ಬಹುಶ ನೀವು ನಿಮ್ಮ ಪ್ರಶ್ನೆಗೆ ಉತ್ತರವನ್ನು ನನ್ನ ಬ್ಲಾಗಿನ ಕಾಮೆಂಟ್ ಬಾಕ್ಸ್ ನಲ್ಲಿ ನೋಡಿಲ್ಲಾ ಅನ್ನಿಸುತ್ತೆ.
  ಪರವಾಗಿಲ್ಲ ಇನ್ನೊಮ್ಮೆ ಹೇಳುತ್ತೇನೆ, ಅದೇನೆಂದರೆ ಆಗಸ್ಟ್ ೨೨ ರಂದು ನೀವೆಲ್ಲಾ ಯೋಜಿಸಿರುವಂತೆ ನಾವೆಲ್ಲರೂ
  ಬ್ಲಾಗಿಗರ ಕೂಟದಲ್ಲಿ ಭಾಗವಹಿಸಿದರೆ ಅಲ್ಲಿ ತಪ್ಪದೆ ನನ್ನ ಹೆಸರನ್ನು ತಿಳಿಸುತ್ತೇನೆ, ಅಕಸ್ಮಾತ್ ನಾವಲ್ಲಿ ಯಾವುದೇ ಕಾರಣಕ್ಕೆ
  ಭೇಟಿಯಾಗಲು ಸಾಧ್ಯವಾಗದಿದ್ದರೆ ನಂತರದಲ್ಲಿ ಒಂದು ದಿನ ನನ್ನ ಹೆಸರನ್ನು ತಿಳಿಸುವೆ ಎಂದು ಬರೆದಿದ್ದೆ... !

  ಹೋಗಲಿ ಈಗ ಅದೆಲ್ಲ ಬಿಡಿ. ನಿಮಗೆ ಒಂದು ಕೆಲಸ ಕೊಡುತ್ತೇನೆ (ಬೈದುಕೊಳ್ಳಬೇಡಿ) :)
  ಅದೇನೆಂದರೆ ನೀವೇ ನನ್ನ ಹೆಸರನ್ನು ಕಂಡುಹಿಡಿಯಿರಿ, ಮತ್ತೆ ನೋಡೋಣಾ.!!
  ಯೋಚಿಸಿ ನಿಮಗೆ ೨ ಕ್ಲೂ ಗಳನ್ನೂ ಕೊಡುವೆ. ಒಂದು, ನನ್ನ ಹೆಸರು 's ' ನಿಂದಾ ಶುರುವಾಗುತ್ತೆ ಮತ್ತು ಕನ್ನಡದಲ್ಲಿ ನನ್ನ ಹೆಸರು ಎರಡೇ ಅಕ್ಷರ ಅಷ್ಟೇ!!!
  ಮತ್ತಿನ್ನೇಕೆ ತಡ, ಶುರು ಮಾಡ್ಕೊಳಿ ನಿಮ್ಮ ಅನ್ವೇಷಣೆನಾ.......!!!! ಹ ಹ್ಹ ಹ್ಹ ಹ್ಹಾ ಹ್ಹಾ .......! :)

  ReplyDelete
 37. ನಿಯತ್ತಿನಿಂದ, ಬೆವರುಸುರಿಸಿ ದುಡಿಯುವ ನಮ್ಮ ದುಡ್ಡೆಲ್ಲಾ Tax ಮೂಲಕ ದೊಡ್ಡವರ ಬೊಕ್ಕಸಕ್ಕೆ ಹೋಗುತ್ತಿದೆ... ನಿರ್ಗತಿಕರ, ಅಸಹಾಯಕರ ಪರಿಹಾರಕ್ಕೆ ತಲುಪುತ್ತಲೇ ಇಲ್ಲ. ಎಲ್ಲವನ್ನೂ ತಿಳಿದೂ ಅಪ್ಪ, ಮಗ, ನೀವು, ನಾನು ಎಲ್ಲರೂ ಸುಮ್ಮನಿದ್ದೇವೆ :(

  ReplyDelete
 38. ಅಮ್ಮಾ,

  ಏನು ಮರೀ?

  ಮತ್ತೆ ಆಜಾದ್ ಮಾಮಾ ಬರೆದಿದಾರಲ್ಲಾ ಹಾಗೇ ಆಗತ್ತೆನಮ್ಮಾ?

  ಅವರು ಬರೆದ ಮೇಲೆ
  ನಿಜಾನೆ ಬರೀತಾರೆ ಮರೀ.

  ಮತ್ತೆ, ನಾವೆಲ್ಲಾ ಬಡವರಿಗೆ ಅಂತ ಕೊಟ್ಟ ದುಡ್ಡೆಲ್ಲ ಬೇರೆಯವರಿಗೆ
  ಹೋಯ್ತೆನಮ್ಮಾ ?

  ಇರಬಹುದು ಮರೀ

  ಈ ಥರ ಆದ್ರೆ ,ಹೀಗೆ ಕಷ್ಟದಲ್ಲಿರೋರ ಬಗ್ಗೆ ಸಂಕಟ ಪಟ್ಟುಕೊಂಡು ನಾವು ಯಾಕಮ್ಮಾ ದುಡ್ಡು ಕೊಡೋದು ?

  ನಂಗೊತ್ತಿಲ್ಲ ಮರೀ ......

  ಆಜಾದ್ ಮಾಮಾನ್ನೇ ಕೇಳ್ತೀನಿ ಬಿಡಮ್ಮಾ .

  ReplyDelete
 39. ಎಸ್ಸೆಸ್ಕೇ...ಏನು s ನಿಂದ ಮತ್ತು ಕನ್ನಡದಲ್ಲಿ ಎರಡಕ್ಷರವೇ....??? ಸುಧಾ, ಸುಮ, ಶಮ, ಶಶಿ, ಸೀತಾ, ಸೀಮಾ, ಶೀಲಾ, ಶೈಲಾ, ಷರ್ಮಿ, .......ಸರಿಬಿಡಿ ತಲೆಯಾಕೆ ಕೆಡಿಸಿಕೊಳ್ಳೋದು...? ಆಗಸ್ಟ್ ೨೨ಕ್ಕೆ ಸಿಗ್ತೀವಲ್ಲಾ ವಿಚಾರಿಸ್ಕೋತೀನಿ...ಹಹಹಹ....
  ಶಿವು, ನಾನು, ಮಲ್ಲಿಕಾರ್ಜುನ್ ಆ ದಿನ ಪುಸ್ತಕಗಳನ್ನು ಬಿಡುಗಡೆ ಮಾಡಿಸುತ್ತಿದ್ದೇವೆ... ನಿಮಗೆ ಆಹ್ವಾನ ಖಂಡಿತಾ ಸಿಗುತ್ತೆ..ಬರಲೇ ಬೇಕು...

  ReplyDelete
 40. ತೇಜಸ್ವಿನಿ...ನಿಜ ನೋಡಿ...ಇವರ ಹಣ ಮತ್ತು ಅಧಿಕಾರ ದಾಹಕ್ಕೆ ಎಲ್ಲೆಯೇ ಇಲ್ಲ....ನೀರು ಹೇಗೆ ಹರಿದರೂ ಹಳ್ಳಕ್ಕೇ ಹೋಗೋದು ಅನ್ನೋದನ್ನ ಇವರ ಚರ್ಯೆಗಳು ತೋರಿಸುತ್ತವೆ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

  ReplyDelete
 41. ಚಿತ್ರಾ...ನಿಮ್ಮ ಸರಣೀನೂ ಬಂದೇ ಬಿಡ್ತಲ್ಲ...ಆದ್ರೆ ನನ್ನ ಬುಡಕ್ಕೆ ಯಾಕೆ ನೀವು ನೀರಿ ಬಿಡೋದು...? ಆಜಾದ್ ಮಾಮ ತನ್ನ ಮಗೂಗೆ ಉತ್ತರ ಕೊಟ್ಟು ಕೊಟ್ಟು ಸುಸ್ತಾಗಿದ್ದಾನೆ...ಹಹಹ

  ReplyDelete
 42. maguvina prashneyante nanagu kooda sarakarakke bahala prashnegalive. namma krushikara samasyeyannu sundaravaagi bimbisiddeeri. uttama baraha.

  ReplyDelete
 43. ಚಾಂದ್ ಜೋ ಆಗಯಾ ಘಟಾ ಕೋ ಹಟಾಕರ್
  ಚಾಂದನಿ ಛಾ ಗಯೀ ಅಂಧೇರಾ ಭಾಗಾ ಚಿಲ್ಲಾಕರ್
  ಹಹಹ....ರಂಜನಾ..ಎಷ್ಟು ದಿನದ ನಂತರ...any way..
  ದೇರ್ ಆಯೆ ಪರ್ ದುರುಸ್ತ್ ಆಯೇ...ಅಲ್ಲವಾ..?
  ಧನ್ಯವಾದ ಪ್ರತಿಕ್ರಿಯೆಗೆ....

  ReplyDelete
 44. ಪ್ರಸ್ತುತ ವಿಷಯದ ಬಗ್ಗೆ ನಿಮ್ಮ ಮಾತುಗಳು ಚನ್ನಾಗಿ ಮೂಡಿ ಬಂದಿದೆ

  ಹೊನ್ನ ಹನಿ
  http://honnahani.blogspot.com

  ReplyDelete
 45. ಹರೀಶ್,
  ಧನ್ಯವಾದ ನೀವು ಜಲನಯನಕ್ಕೆ ಬಂದು ನಿಮ್ಮ ಅಮೂಲ್ಯ ಪ್ರತಿಕ್ರಿಯೆ ನೀಡುತ್ತಿರುವುದಕ್ಕೆ...ನಿಮ್ಮಲ್ಲಿಗೂ ಬರುತ್ತಿದ್ದೇನೆ...ಮತ್ತೊಮ್ಮೆ ಥ್ಯಾನ್ಕ್ಸ್..

  ReplyDelete
 46. ಅಪ್ಪ ಮಗನ ಸ೦ಭಾಷಣೆಯ ರೂಪದಲ್ಲಿ ಕಟು ವಾಸ್ತವವನ್ನು ಅರ್ಥ ಪೂರ್ಣವಾಗಿ ತೆರೆದಿಟ್ಟಿದ್ದೀರಿ

  ReplyDelete
 47. ಪ್ರಭಾಮಣಿಯವರೇ..ಧನ್ಯವಾದ...ನಿಜ ಬಹಳ ಕಟುವಂತೆ...ಆದ್ರೆ ಅದನ್ನು ಹೇಳೋಕೂ ಧೈರ್ಯ ಬೇಕು...ಅದು ಮಗುಗೆ ಕೊಡೋ ಉತ್ತರ ಆದ್ರೂ ಸರಿ...

  ReplyDelete