Thursday, June 3, 2010

ಅಸಹಾಯಕತೆ

ಮಂಕು ಕವಿದಂತೆ
ಬಿಂಕ ಬಿಡದಂತೆ
   ಭಾವನೆಗಳು ಮೂಕವಾಗಿರುವಾಗ
   ಮನಸ ಮುದಿಸುವ
   ಕನಸ ಹೊದಿಸುವ
   ಮಾತೊಂದ ಹೇಳುವುದೆಂತು?

ಮಂಜು ಕವಿದಿರುವಾಗ
ಸಂಜೆ ಕತ್ತಲಡವಿಯಲಿ
ತಡ-ತಡವಿ ಎಡವಿ ಮುನ್ನಡೆವಾಗ
ಕಲ್ಲಮುಳ್ಳಹಾದಿಯಲಿ
ಹುಲ್ಲಮೆತ್ತೆಯೆಂದೆಣಿಸಿ
ನಿನ್ನ ಬಳಿಗೋಡಿ ಬರುವುದೆಂತು?

   ಕಣ್ಣರೆಪ್ಪೆಯು ನೀನು
   ಮನದ ಮಿಡಿತವು ನೀನು
   ಬರಿದೇ ಉಬ್ಬಿಸಿ ಕಣ್ಣಮುಚ್ಚಿರುವಾಗ
   ಮನದ ಹಾಡನು
  ಎವೆಯ ಕನಸನು

  ಚಿತ್ತ ಚಿತ್ರವನು ನಾ ಬಿಡಿಸಲೆಂತು?

31 comments:

  1. ಯಾವುದೋ ಒಂದು ಬಾವನೆಯ ಬೆನ್ನು ಹಿಡಿದಂತಿದೆ.
    ನೆನಪುಗಳೇ ಪದಗಳಲ್ಲಿ ಕೂತಂತಿದೆ.
    ಚೆನ್ನಾಗಿದೆ.
    ನಿಮ್ಮವ,
    ರಾಘು.

    ReplyDelete
  2. ಮಂಜು ಕವಿದಿರುವಾಗ
    ಸಂಜೆ ಕತ್ತಲಡವಿಯಲಿ
    ತಡ-ತಡವಿ ಎಡವಿ ಮುನ್ನಡೆವಾಗ
    ಕಲ್ಲಮುಳ್ಳಹಾದಿಯಲಿ
    ಹುಲ್ಲಮೆತ್ತೆಯೆಂದೆಣಿಸಿ
    ನಿನ್ನ ಬಳಿಗೋಡಿ ಬರುವುದೆಂತು?

    SOOPAR SAALUGALU SIR............ TUMBAA SOGASAAGIDE.........

    ReplyDelete
  3. ಮಂಜು ಕವಿದಿರುವಾಗ
    ಸಂಜೆ ಕತ್ತಲಡವಿಯಲಿ
    ತಡ-ತಡವಿ ಎಡವಿ ಮುನ್ನಡೆವಾಗ
    ಕಲ್ಲಮುಳ್ಳಹಾದಿಯಲಿ
    ಹುಲ್ಲಮೆತ್ತೆಯೆಂದೆಣಿಸಿ
    ನಿನ್ನ ಬಳಿಗೋಡಿ ಬರುವುದೆಂತು?.....

    nanagoo ee saalugalu tumbaa ista aadavu...tumbaa sundara kavana..dhanyaavaadagalu...

    ReplyDelete
  4. ರಾಘು, ಯಾವುದೋ ಭಾವನೆಯ ಬೆನ್ನು ಹಿಡಿದಿಲ್ಲ ಎಲ್ಲ ಭಾವನೆ ನನ್ನ ಬೆನ್ನುಹತ್ತಿದ ಭೇತಾಳವಾಗಿ....ಆ..ಅಹ್..ಆತುರಬೇಡ...ವಿಕ್ರಮನ ಭೇತಾಳ ಅಲ್ಲ....ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

    ReplyDelete
  5. ದಿನಕರ್ ಮತ್ತು ಅಶೋಕ್ ಇಬ್ಬರಿಗೂ ಧನ್ಯವಾದಗಳು...
    ನಡೆಯಲು ಆಗದೇ ಇರುವಾಗ ..ಓಡುವುದು ಬರೀ ..ಕಲ್ಪನೆಯಾಗುತ್ತೆ ಎನ್ನುವುದರ ಭಾವ ತೋರಿಸುವ ಪ್ರಯಾಸ..ಅಷ್ಟೆ..

    ReplyDelete
  6. ಎಸ್ಸೆಸ್ಕೆಯವರೇ...(ನಿಮ್ಮ ಹೆಸರು ಗೊತ್ತಾಗೋವರ್ಗೂ ಹೀಗೇ ನಾನು ನಿಮ್ಮನ್ನ ಕರೆಯೋದು...ಹಹಹ)
    ಧನ್ಯವಾದ....simply Thanks....

    ReplyDelete
  7. ನವಿರಾದ ಭಾವನೆಗಳನ್ನು ನವಿರಾಗಿ ವ್ಯಕ್ತ ಪಡಿಸಿದ್ದೀರಿ.ಕವನಚೆನ್ನಾಗಿದೆ.'ಭಾವಗಳ ಪಯಣಕ್ಕೆ ಭಾಷೆ ಒರಟು ಯಾನ!'ಎನ್ನುವ ಯಾವುದೋ ಕವನದ ಸಾಲುಗಳು ನೆನಪಾಯಿತು.ಧನ್ಯವಾದಗಳು.

    ReplyDelete
  8. ವಾಹ್ ಭೈಯ್ಯಾ ...... ತುಂಬಾ ತುಂಬಾ ತುಂಬಾ ತುಂಬಾ ಸಿಕ್ಕಾಪಟ್ಟೆ ಇಷ್ಟಾ ಆಯ್ತು .. :)

    ReplyDelete
  9. ಆಜಾದ್...

    ಭಾವಗಳ ಸಂಗಮ ಈ ಕವಿತೆ...
    ನಿಮ್ಮ ....
    ಭಾವ ಚಿತ್ತದ..
    ಭಾವ ಚಿತ್ರ ಇದು...!

    ಸೊಗಸಾದ ಕವನಕ್ಕೆ ಅಭಿನಂದನೆಗಳು...

    ReplyDelete
  10. ಎಂತು ಎಂದು ಕೇಳುತ್ತಲೇ ಭಾವಪೂರ್ಣ ಕವನವನ್ನು ಅದೆಷ್ಟು ಚೆನ್ನಾಗಿ ಬರೆದಿರುವಿರಿ!!

    ReplyDelete
  11. ಅಜಾದ್,

    ಭಾವನೆಗಳು ಮನದಲ್ಲಿ ತುಂಬಿದಾಗ ಮಾತುಗಳು ಹೊರಗೆ ಬರಲೆಂತು? ಅಲ್ವಾ...

    ಚೆನ್ನಾದ ಕವನ.

    ReplyDelete
  12. ಮಂಜು ಕವಿದಿರುವಾಗ
    ಸಂಜೆ ಕತ್ತಲಡವಿಯಲಿ
    ತಡ-ತಡವಿ ಎಡವಿ ಮುನ್ನಡೆವಾಗ
    ಕಲ್ಲಮುಳ್ಳಹಾದಿಯಲಿ
    ಹುಲ್ಲಮೆತ್ತೆಯೆಂದೆಣಿಸಿ
    ನಿನ್ನ ಬಳಿಗೋಡಿ ಬರುವುದೆಂತು?

    Wov enta salugalu..... tumbane ista aythu

    Pravi

    ReplyDelete
  13. ಡಾ. ಕೃಷ್ಣಮೂರ್ತಿಯವರಿಗೆ ಧನ್ಯವಾದಗಳು..

    ReplyDelete
  14. ರಂಜು, ನಿನಗೆ ಇಷ್ಟ ಆಗಿದ್ದಕ್ಕೆ ನೀನು ಮನತುಂಬಿ ಕಾಮೆತ್ತಿಸಿದ್ದಕ್ಕೆ ಧನ್ಯವಾದ

    ReplyDelete
  15. ಪ್ರಕಾಶ್, ಭಾವನೆಗಳ ಬೆನ್ನು ಹತ್ತಿ ಅವನ್ನು ಅರಿತುಕೊಂಡು ಅವಕ್ಕೆ ಕಡಿವಾಣ ಹಾಕಿದ್ರೆ ಸಿಗೋದೇ ಲೇಖನ, ಕವನ, ಕಥನ, ವಿಮರ್ಶೆ ಅಲ್ಲವೇ.... ನಿಮ್ಮ ಮನತುಂಬಿ ಬರೆದ ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದ

    ReplyDelete
  16. ಸುಬ್ರಮಣ್ಯರೇ..ಎಂತು...ಒಂದು ಶೂಲಪ್ರಾಯ ಪ್ರಶ್ನೆ....ತಪ್ಪಿಸಿಕೊಂಡು ಉತ್ತರಿಸಿದರೆ ಜೀವನ ಇಲ್ಲ ಜಂಜಾಟ...ಧನ್ಯವಾದ

    ReplyDelete
  17. ಜ್ಯೋತಿಯವರಿಗೆ ಧನ್ಯವಾದ ಕವನ ಮೆಚ್ಚಿದ್ದಕ್ಕೆ...ಪ್ರತಿಕ್ರಿಯಿಸಿದಕ್ಕೆ

    ReplyDelete
  18. ಶಿವು..ಭಾವನೆಗಳು ಮನತುಂಬಿದಾಗ ಮಾತು ಹೊರಡದು..ಅಕ್ಷರ ಮೂಡುತ್ತವೆ ಲೇಖಕನಾದರೆ ...ಚಿತ್ರ ಮೂಡುತ್ತದೆ..ಚಿತ್ರಕಾರನಾದರೆ...ನೀವಾದರೆ..ಕ್ಯಾಮರಾ ಹಿಡಿದು ನಿಂತೇ ಬಿಡ್ತೀರಿ...ಚಿತ್ರಗ್ರಹಣಕ್ಕೆ...ಧನ್ಯವಾದ.

    ReplyDelete
  19. ಸೀತಾರಂ ಸರ್, ಧನ್ಯವಾದ...ನಿಮ್ಮ ಮಾತಿಗೆ

    ReplyDelete
  20. ಪ್ರವೀಣ್..ನಿಮ್ಮ ಪ್ರೋತ್ಸಾಹದ ಮಾತಿಗೆ ಧನ್ಯವಾದಗಳು.

    ReplyDelete
  21. ಸುಂದರ ಕವನ ಭಯ್ಯಾ..ತುಂಬಾ ಇಷ್ಟವಾಯ್ತು.

    ReplyDelete
  22. ಸೂಪರ್ ತುಂಬಾ ಇಷ್ಟವಾಯಿತು ಸಾಲುಗಳು........ಭಾವನೆ ಬಹಳ ಚೆನ್ನಾಗಿದೆ

    ReplyDelete
  23. ಓ ಮನಸೇ ನೀನೇಕೆ ಹೀಗೆ ಬಲುಸುಂದರ ಪ್ರತಿಕ್ರಿಯೆ ನೀಡುವೆ...ಶುಕ್ರಿಯಾ....

    ReplyDelete
  24. ಮನಸು ಮೇಡಂ ...ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ...

    ReplyDelete
  25. ಸುಂದರ ಸಾಲುಗಳು.
    ಎಂದಿನಂತೆ ಮುದ್ದಾದ ಕವನ!

    ReplyDelete
  26. ಪ್ರವೀಣ್...ಧನ್ಯವಾದ..ಭಾವನೆ ನಿಮ್ಮನ್ನು ತಟ್ಟಿದ್ದರೆ ಅದೇ ಕವನದ ಸಾರ್ಥಕತೆ..

    ReplyDelete
  27. ಸೂಪರ್ ಸಾರ್... ತುಂಬಾ ಚೆನ್ನಾಗಿದೆ..

    ReplyDelete
  28. Thanks Ravikanth ...late aagi nodide nimma comments...

    ReplyDelete