Saturday, June 19, 2010

ವಿಸ್ವಾಮಿತ್ರನ ಎಡ್ವಟ್ಟು

“ನಮ್ಸ್ಕಾರ ಕಣಣ್ಣೋ ವಿಸ್ವಾಮಿತ್ರಣ್ಣ...ಸಂದಾಕಿದ್ದೀಯಾ..? ಏನು ಎರಡ್ತಿಂಗ್ಳು ಸರ್ಕಾರಿ ಮೇಜ್ವಾನಿ ಆಯ್ತಂತೆ...?? ಎಂಗಿತ್ತು...?? ಅದೂ ನಿನ್ನ ತಗೊಂಡೋಗಿ ಎಂಗ್ಸರ್ ಕ್ವಾಣ್ಯಾಕ್ಕೆ ಆಕುದ್ರಂತೆ..? ಅದ್ಕೇಯಾ ಯೋಳಿದ್ದು ಕೂದ್ಲು ಆ ಪಾಟಿ ಬುಡ್ಬ್ಯಾಡಾ ಅಂತ ಕೇಳ್ದ್ಯಾ ನನ್ ಮಾತ್ನ...ಅಲ್ಲ ...ಮೀಸೆ ಬೋಳಿಸ್ಬಿಟ್ಟು..ಆ ಪಾಟಿ ಊದ್ದಕ್ಕೆ ಕೂದ್ಲು ಬಿಟ್ಟು ..ನಿಲುವಂಗಿ ಆಕ್ಕಂಡ್ರೆ...ಅದ್ಯಾವ್ನನ್ ಮಗ ನಿನ್ನ ಗಂಡ್ಸು ಅಂದಾನು....? ಆ ಪ್ಯಾದ್ಗುಳ್ಗೆ ಎಂಗ್ ಗೊತ್ತಾದದು...?! ಪಾಪ...!!”

ವಿಸ್ವಾಮಿತ್ರನಿಗೆ ಕೋಪ ನೆತ್ತಿಗೇರಿತ್ತು....ಎಷ್ಟು ರೋಪಿತ್ತು ..??!! ಆರು ತಿಂಗಳಿಗೆ ಮುಂಚೆ....ಎಲ್ಲಾರೂ...ಆ ಪೋಲೀಸು ಆಫೀಸರ್ರು ಬಂದಿರ್ಲಿಲ್ಲವಾ..ನನ್ನ ಪ್ರಮೋಶನ್ ನಿಂತೋಗಿದೆ..ಮಿನಿಸ್ಟ್ರು ಎಡವಟ್ಟು ಕೆಲಸ ಮಾಡ್ತಾ ಇದಾರೆ, ನೀವಾದರೂ ಸ್ವಲ್ಪ ಶಿಫಾರಸು ಮಾಡಿ ಸ್ವಾಮೀಜಿ ಅಂತ ಉದ್ದಕ್ಕೆ ನನ್ನ ಕಾಲು ನೆಕ್ತಾ ಬಿದ್ದಿರಲಿಲ್ಲವಾ ಎದ್ದೇಳು ಅನ್ನೋತನಕ...?? ಧ್ಯಾನ ದಲ್ಲಿದ್ರೂ ಈ ಮೂರು ತಿಂಗಳಲ್ಲಿ ತನ್ನ ಮಾನ ಮೂರು ಕಾಸಿಗೆ ಹರಾಜಾದ ಮಾಹಿತಿ ದಪ್ಪ ದಪ್ಪ ಅಕ್ಷರಗಳಲ್ಲಿ ಅಚ್ಚು ಹಾಕಿದ್ದ ..ಹತ್ತಿರ ಬಿದ್ದಿದ್ದ‘ಘಂಟಾನಾದ‘ ಪತ್ರಿಕೆಯ ಮೇಲೆ ಕಣ್ಣಾಡಿಸಿದ್ದ ..ವಿಸ್ವಾಮಿತ್ರ. ಹೌದು ಅವನೇ..ಅದೇ ವರದಿಗಾರ..ನನ್ನ ಖಾಸ ಕೋಣೆಗೆ ಬಂದು..ವಿಲಾಯಿತಿ ..ದ್ರಾಕ್ಷಾರಸವನ್ನು ಜೊಲ್ಲು ಸುರಿಸಿಕೊಂಡು ಕುಡಿದವ, ಕುಡಿದದ್ದು ಸಾಲ್ದು ಅನ್ನೋ ಹಾಗೆ ಕಪ್ ನೆಕ್ಕಿದ್ದ ನಿರ್ಭಯ ಕುಮಾರ್...!!!?? ಛೇ ನಾಯಿಗಾದರೂ ನಿಯತ್ತಿರುತ್ತೆ ..ಇವರಿಗಿಲ್ಲದಾಯಿತೇ...?? ಅಕಟಕಟ...!!!


ಕಣ್ಣು ತೆರೆದು ತನ್ನ ಗೆಳೆಯ ... ಸಿಂಗ್ರುನ ನೋಡಿದ ವಿಸ್ವಾಮಿತ್ರ.....ಹೌದು...ಕ್ಲಾಸ್ ಮೇಟು ಸಿಂಗ್ರು ಇವನಿಗಿಂತಾ ಎರಡು ವರ್ಷ ಜೂನಿಯರ್ರು...ಆದ್ರೂ ಕ್ಲಾಸ್ ಮೇಟು ಹ್ಯಾಗೆ ಅಂತೀರಾ..? ನಮ್ ವಿಸ್ವಾಮಿತ್ರ 8, 9 ನೇ ಕ್ಲಾಸಿನಲ್ಲಿ ಒಂದೊಂದು ಸಲ ಡುಮ್ಕಿ ಹೊಡೆದಿದ್ದಕ್ಕೆ ಸಿಂಗ್ರು ಕ್ಲಾಸ್ ಮೇಟ್ ಆದ....ಎಸ್ಸೆಸೆಲ್ಸಿ ಬೆಟ್ಟ ಹತ್ತಾಕಾಗ್ದೆ...ವಿಸ್ವಾಮಿತ್ರ ಹಿಮಾಲಯ ಹತ್ತಿ ಬಂದಮೇಲೇನೆ ಈ ಅವತಾರ!!.....ಶ್ರೀ..ಶ್ರೀ..ವಿಸ್ವಾಮಿತ್ರ ಗುರು ಆಗಿದ್ದು....ಸಿಂಗ್ರ ..ಬಿ,ಇ, ಮಾಡಿ ಪಕ್ಕದ ನಲ್ಲಗೆರೆ ಡ್ಯಾಮ್ ನ ಪ್ರಾಜೆಕ್ಟ್ ಇಂಜನೀಯರ್ ಆಗಿದ್ರೂ ಮಿತ್ರನ್ನ ..ಸಾರಿ...ಗುರೂಜೀನ ನೋಡಿ ಆಶೀರ್ವಾದ ಪಡಕೊಂಡು ಹೋಗ್ತಿದ್ದ...ಖಾಸಗಿಯಲ್ಲಿ ಇಬ್ರೇ ಇದ್ದಾಗ...ವಿಸ್ವಾಮಿತ್ರನ ಜೊತೆ ಅದೇ ಹಳ್ಳಿ ಭಾಷೇಲೇ ಇಬ್ರೂ ಮಾತನಾಡ್ತಿದ್ದದ್ದು. ಹಾಗೂ ಇಬ್ರೇ ಇದ್ದಾಗ ವಿಸ್ವಾಮಿತ್ರ ಹೇಳಿದ್ದುಂಟು...ಸಿಂಗ್ರು ನಮ್ಮ ಗುಟ್ಟು ನಮ್ಮಲ್ಲೇ ಇರ್ಲಪ್ಪ... ಅಂತ.....

ವಿಸ್ವಾಮಿತ್ರ ಹೇಳಿದ ...ನೋಡೋ ಸಿಂಗ್ರ....ಆ ಮಿನಿಸ್ಟ್ರು ನನ್ ತಾವ ಎಸ್ಟ್ ದಪ ಬಂದಿಲ್ಲ .. ಏನೋ ಒಂದ್ ಸಣ್ಣ ಎಡವಟ್ಟು ಆಗೋಯ್ತು...ಗುಟ್ಟಾಗಿರ್ಬೇಕಾದದ್ದು ಬಯಲಾಗೋಯ್ತು...ನಾಯಿ ಎಂಜಲ್ ಕಾಸಿಗೆ ಆಸೆ ಬಿದ್ದು ನನ್ನ ಕಚ್ಚಿಬಿಡ್ತು...ನನ್ನ ಸೆಲ್ ಗೆ ಮಿನಿಸ್ಟ್ರು ಬಂದಿದ್ದಾಗ ಗುಟ್ಟಾಗಿ ಯೋಳಿದ್ದೆ...ಅತ್ಗ್ಯಮ್ಮನಿಗೆ ಯೋಳಿಬಿಡ್ತೀನಿ ನನಗೆ ನೀನೀಗ ಸಹಾಯ ಮಾಡ್ದೆ ಇದ್ರೆ..ಅಂತ...ಅದಕ್ಕವನು ಏಯ್..ಬಿಡ್ ಬಿಡು ಅಳ್ಳಕ್ಕೆ ಬಿದ್ದಿದ್ದೀಯಾ ಆಳಿಗೊಂದು ಕಲ್ಲು ಆಕ್ತಾವ್ರೆ...ನನ್ನೆಂಡ್ರಿಗೂ ಯೋಳೀವ್ನಿ...ಎಲ್ಲಾರ ವಿರುದ್ಧಾನೂ ಆಪಾದ್ನೆ ಮಾಡ್ತಾ ಅವ್ನೆ ಆ ಗುರು..ನನ್ ಬಗ್ಗೆ ಯೋಳಿದ್ರೆ ನಂಬ್ಗಿಂಬೀಯಾ ಅಂತ....ನಿನ್ ಮಾತು ಯಾರೂ ನಂಬಾಕಿಲ್ಲ ಈವಾಗ....ಅಂತ ಲೇವಡಿ ಮಾಡಿಬುಟ್ಟ... ತನ್ನ ಅಳಲನ್ನ ಸ್ನೇಹಿತನ ಹತ್ರ ತೋಡಿಕೊಂಡ ವಿಸ್ವಾಮಿತ್ರ.

ಹೌದು..ಇದು ಸುಮಾರು ಆರು ತಿಂಗಳಿಗೆ ಮುಂಚೆ ಬಹಳ ಪ್ರಸಿದ್ಧವಾಗಿದ್ದ ಶ್ರೀ ಶ್ರೀ ವಿಶ್ವಾಮಿತ್ರ ಗುರೂಜಿ ಕಥೆಯ ತುಣುಕಿದು...ಎಂಥೆಂಥ ಕಚಡಾ ಕೆಲಸ ಮಾಡೋ ಅಧಿಕಾರಿಗಳು ರಾಜಾರೋಷವಾಗಿ ಓಡಾಡ್ತಾರೆ...ಸಿಕ್ಕಿಬಿದ್ರೆ ಸಸ್ಪೆಂಡ್ ಆಗ್ತಾರೆ...ಆಮೇಲೆ ಹೇಗೋ ಸಸ್ಪೆನ್ಶನ್ ರಿವೋಕ್ ಮಾಡಿಸ್ಕೊಂಡು ಅಲ್ಲೇ ಬಮ್ದು ಮತ್ತೆ ಮೆರೀತಾರೆ...ಜನರ ಓಟನ್ನ ತಿನ್ನೋದೂ ಅಲ್ದೇ ಅಧಿಕಾರದ ಕುರ್ಚಿ ಹಿಡಿಯೋ ರಾಜಕಾರಣಿ ಮಾಡಬಾರದ್ದನ್ನೆಲ್ಲ ಮಾಡ್ತಾನೆ...ಕೊಲೆ ಸುಲಿಗೆ..ಹೆಣ್ಣು ಮಕ್ಕಳ ಅಸಹಾಯಕತೆನಾ ಕ್ಯಾಶ್ ಮಾಡ್ತಾನೆ...ಆದ್ರೂ...ಮೆರೀತಾನೆ...ಮತ್ತೆ ದುಡ್ಡು ಸುರೀತಾನೆ ಅದೇ ಮಂದಿ ಓಟ್ ತಗೋತಾನೆ ಮತ್ತೆ ಅದೇ ಗದ್ದುಗೆ ಹಿಡೀತಾನೆ...ಇವರೆಲ್ಲರ ತಪ್ಪುಗಳಿಗೆ...ಹೋಲಿಸಿದರೆ ನಮ್ಮ ವಿಸ್ವಾಮಿತ್ರಂದು ಬಹಳ ಜುಜುಬಿ ...ಆದ್ರೂ ....

ನಿಜ ಹಳ್ಳಕ್ಕೆ ಬಿದ್ದವನಿಗೆ ಆಳಿಗೊಂದು ಕಲ್ಲು....... ಆದ್ರೆ ವಿಶ್ವಾಮಿತ್ರ ತಪ್ಪು ಮಾಡಿಲ್ಲ ಅನ್ನೋದಲ್ಲಾ ನನ್ನ ವಾದ...ಇಂತಹ ತಪ್ಪಿಗೆ ಈ ತರಹದ ಶಿಕ್ಷೆಯಾದರೆ....ಅಮಾಯಕ ಜನರ ಪ್ರಾಣ ಹೀರಿ ಮತೀಯ ಗಲಭೆ ಮಾಡಿಸೋ ರಾಜಕಾರಣಿಗೆ ಯಾಕಿಲ್ಲ ಶಿಕ್ಷೆ... ತಿಂದು ತಿಂದು ಹಂದಿಯಾಗಿ ಮೆರೆಯೋ .. ಲೋಕಾಯುಕ್ತರು ಹಿಡಿದ್ರೂ...ಶಿಕ್ಷೆಯಿಲ್ಲ ಅಂತ ತಿಳ್ಕೊಂಡು ಲಂಗು ಲಗಾಮಿಲ್ಲದೇ ಮೆರೆಯೋ ಅಧಿಕಾರಿಗಳಿಗೆ ಯಾಕಿಲ್ಲ ಶಿಕ್ಷೆ...?? ಯೋಚಿಸಬೇಕಾದ್ದೇ ಅಲ್ವೇ..?

33 comments:

  1. ಏನ್ ಡಾಕ್ಟ್ರೆ, ಈ ದಪ ಮಗೀನ ಬಿಟ್ಬುಟ್ಟು, ವಿಸ್ವಾಮಿತ್ರನ್ನ ಹಿಡ್ಕೊಂದೀರಲ್ಲ......
    ಬೋ ಪಸಂದಾಗದೆ ನಿಮ್ಮ ಚಿಂತನೆ, ಎಲ್ಲಾರುವೆ ಯೋಚಿಸ್ಬೇಕಾದ್ದೆ ವಿಷ್ಯ......!!

    ಅಂದಹಾಗೆ ನೀವ್ ಹೇಳಿರೋ ಹೆಸರಲ್ಲಿ ನನ್ ಹೆಸರು ಇಲ್ರೀ, ಮತ್ತೆ ಇನ್ನಷು ಹೆಸರು ಹೇಳ್ರಿ ನೋಡೋಣ....!!!
    ಹಿ ಹ್ಹಿ ಹ್ಹಿ ಹ್ಹೀ ಹ್ಹೀ .....! :)

    ReplyDelete
  2. ಇನ್ನೂ ನಾಲ್ಕಾರು ಪೀಳಿಗೆಗಳು ಕಳೆದರೂ ಈ ಭ್ರಷ್ಟಾಚಾರದ ಭಾರತ ಬದಲಾಗೋದಿಲ್ಲ ಅನ್ನೋದು ಸತ್ಯ. ಬದಲಾವಣೆಗೆ ಘನಘೋರ ತಪವೇ ನಡಯಬೇಕೇನೋ..!!??
    ಆದರೂ..."ಬದಲಾವಣೆ ಜಗದ ನಿಯಮ"...Lets have hopes !.

    ReplyDelete
  3. ವ್ಯವಸ್ಥೆಗಳನ್ನು ಮಾಡಿಕೊಂಡಿರೋ ಜನರೇ ಭ್ರಷ್ಟಾಚಾರಕ್ಕೆ ಬಿದ್ದಿರುವಾಗ ಅದನ್ನ ತಡೆಗಟ್ಟುವುದು ಕಷ್ಟವೇ ಸರಿ.... ಸುಬ್ರಮಣ್ಯರವರ ಮಾತಿನಂತೆ ಬದಲಾವಣೆ ಜಗದ ನಿಯಮ ಕಾದು ನೋಡುವ ಎಂದಾದರೂ ಬದಲಾಗುವುದೇನೋ ಎಂದು..!!!

    ReplyDelete
  4. houdu sir..... badalaavane jagada niyama... kaayoNa....... uttama baraha......

    ReplyDelete
  5. ಎಸ್ಸೆಸ್ಕೇರೀ...ಬ್ಯಾಡ್ರೀ ತಲೆ ತಿನ್ಬ್ಯಾಡ್ರೀ...ಹಹಹ...ನೀವೇ ಹೇಳೀಪಾ,,,
    ಹಹಹ ನಿಮ್ಮ ಮಾತು ನಿಜ ಬದಲಾವಣೆ ಇಲ್ಲ ಜನರಿಂದ ಆಗ್ಬೇಕು (ಕ್ರಾಂತಿ) ಇಲ್ಲ ಜಗದಿಂದ ಆಗ್ಬೇಕು....ಧನ್ಯವಾದರೀ..
    ಅಂದಹಾಗೆ ಇಂಡಿಯಾ (ಬೆಂಗಳೂರಿಗೆ ೧೦ ದಿನದ ಮಟ್ತಿಗೆ ಬರ್ತಿದ್ದೇನೆ..ಸಂಪರ್ಕ:9945823883)..

    ReplyDelete
  6. ಸುಬ್ರಮಣ್ಯ.., ಮನಸು ಮೇಡಂ ನಿಮ್ಮಿಬ್ಬರ ಮಾತೂ ದಿಟ ಕಣ್ರೀ...ಕಾದು ನೋಡೋಣವೇ...ಬದಲಾವಣೆ ಆಗುತ್ತೋ ಏನೋ...?

    ReplyDelete
  7. ದಿನಕರ್, ಧನ್ಯವಾದ...ಮೊನ್ನೆ ಟೀವೀ ನ್ಯೂಸ್ ನೋಡ್ತಾ ಈ ವಿಷ್ಯ ತಲೆಗೆ ಬಂತು...ಹಾಗೇ ಬಿಟ್ತೆ ಎಲ್ಲರ ತಲೇಗೂ....ಹಹಹ...ಜೂನ್ ೨೧ ರಿಂದ ಜುಲೈ ೪ ನಾಡಿನಲ್ಲಿರ್ತೇನೆ...ಸಾಧ್ಯವಾದರೆ ಕಾಲ್ ಮಾಡ್ತೇನೆ.

    ReplyDelete
  8. ಚೆನ್ನಾಗಿ ಹೇಳಿದ್ದೀರ...ಈಗಿನ ವ್ಯವಸ್ಥೆಯನ್ನು....

    ReplyDelete
  9. khandita caal maadi sir..... nannalloo nimma number ide.... nanoo try maadtene......

    ReplyDelete
  10. ಹ್ಮ್ಂ..... ಆನೆ ಕದ್ದರೂ ಕಳ್ಳ.... ಅಡಿಕೆ ಕದ್ದರೂ ಕಳ್ಳನೇ. ರಾಜಕಾರಣಿಗಳು ದೊಡ್ಡ ಕಳ್ಳರಾದರೆ "ನಿತ್ಯಾನಂದದಲ್ಲಿರುವ" ಬೇರೆ ಕಳ್ಳರು. ಆದರೆ ಇಬ್ಬರೂ ಒಂದೇ. ಒಬ್ಬರೂ ಮುಗ್ಧ ಜನರ ಭಾವನೆಗಳೊಡನೆ, ಹಣದೊಡನೆ ಆಡುವವರೇ. ಹಾಗಾಗಿ ಎಲ್ಲರೂ ಒಂದೇ...

    ReplyDelete
  11. ಮಹೇಶ್ ನಿಜ ..ಕಚ್ಚುತ್ತೆ ಅನ್ನೋ ಒಂದೇ ಹೆದರಿಕೆಗೆ ಹಾವು ಹುಳುಗಳನ್ನು ಕೊಲ್ಲುವ ನಾವು ಖಂಡಿತಾ ಕಚ್ಚೋದೇ ಇದರ ಗುಣ ಆಗಿರೋ ರಾಜಕಾರಣಿ, ಅಧಿಕಾರಿ ಗಳಿಂದ ಮುಕ್ತಿ ಸಿಗುತ್ತಿಲ್ಲ ಅದೇ ವಿಪರ್ಯಾಸ. ಧನ್ಯವಾದ

    ReplyDelete
  12. ರಾಘವರೇ, ಸ್ವಾಗತ ನನ್ನ ಬ್ಲಾಗಿಗೆ...ನಿಮ್ಮ ಅನಿಸಿಕೆಗೆ ಧನ್ಯವಾದ...ವ್ಯವಸ್ಥೆಯ ಅವಸ್ಥೆ ಹೇಳತೀರದು...ಬಿಡಿ...

    ReplyDelete
  13. Dinakar, sure...I will try and will respond..

    ReplyDelete
  14. ತೇಜಸ್ವಿನಿ...ಆನೆ ಮತ್ತು ಅಡಿಕೆ ಕದಿಯುವ ಗುಣಕ್ಕೆ ಯಾವುದೇ ಮೌಲ್ಯ ನೀಡುವುದಿಲ್ಲ...ನಿಜ ಕೆಟ್ಟದ್ದು ಕೆಟ್ಟದ್ದೇ...
    ಶಿಕ್ಷೆಯಾಗದೇ ತಪ್ಪಿಸಿಕೊಳ್ಳುವವರ ಬಗ್ಗೆ ಮತ್ತು ಅಂತಹ ವ್ಯವಸ್ಥೆಯ ಬಗ್ಗೆ ನನ್ನ ಆಕ್ರೋಶ...ನಿಮ್ಮ ಪ್ರತಿಕ್ರಿಯೆಗೆ...ಧನ್ಯವಾದ..

    ReplyDelete
  15. ಆಜಾದ್ ...

    ಹ್ಹಾ..ಹ್ಹಾ...!

    ಇದು ಕಲ್ಪನೆ ಅಂತ ಅನ್ನಿಸ್ತಾನೇ.. ಇಲ್ಲ..
    ಇಂದಿನ ಪರಿಸ್ಥಿತಿಯ ವಾಸ್ತವ ಚಿತ್ರಣ.. !!

    ReplyDelete
  16. Sir,
    ಒಳ್ಳೆ ಬರಹ.. ನಿಜ ಚಿಕ್ಕದಾಗಲಿ ದೊಡ್ಡದಾಗಲಿ, ತಪ್ಪು ತಪ್ಪೆ. ಆದ್ರೆ ಶಿಕ್ಷೆ ಮಾತ್ರ ಸರಿಯಾಗಿ ಆಗುತ್ತಿಲ್ಲವೆನ್ನುವುದು ಬೇಸರದ ವಿಷಯ.

    ReplyDelete
  17. ನನ್ನ ಪ್ರಕಾರ ಬ್ರಹ್ಮಚರ್ಯದಿಂದ ನೇರವಾಗಿ ಸನ್ಯಾಸ ದೀಕ್ಷೆ ತೆಗೆದುಕೊಳ್ಳುವುದೇ ತಪ್ಪು. ಗೃಹಸ್ತಾಶ್ರಮಕ್ಕೆ ಇರುವ ಮೌಲ್ಯವನ್ನ ಕಡೆಗಣಿಸಿ ತಮಗೆ ಬೇಕಾದಂತೆ ತಿದ್ದುಪಡಿ ಮಾಡಿದುದರ ಪರಿಣಾಮ ಇದು.

    ತನಗೆ ತಿಳಿದಿರುವಂತಹ ಮೌಲ್ಯಗಳನ್ನ, ಜ್ಞಾನವನ್ನ ಹತ್ತು ಜನರಿಗೆ ಹಂಚಲು ದೈಹಿಕವಾಗಿ ಸನ್ಯಾಸವನ್ನ ತೆಗೆದುಕೊಳ್ಳಬೇಕೆ?, ಯಾಕೆ?

    ಸಂಸಾರವೆಂಬ ಸಾಗರವನ್ನ ದಾಟುವುದಕ್ಕೆ ಸಂಸಾರಿಯಲ್ಲದವನಿಂದಲೇ ಉಪದೇಶ ಪಡೆಯಬೇಕೆ?

    ಹೀಗೆ ಅನಗತ್ತ್ಯ ನಿರ್ಬಂಧಗಳನ್ನ ಮತ್ತೊಬ್ಬರಿಂದ ಆಶಿಸುವುದು ಎಷ್ಟು ಸರಿ?

    ಅಷ್ಟಕ್ಕೂ ನಿತ್ಯಾನಂದ ಇಚ್ಛೆಗೆ ವಿರುದ್ಧವಾಗಿ ತನ್ನ ಕಾಮನೆಗಳನ್ನ ತೀರಿಸಿಕೊಂಡನೆ? ಪರಸ್ಪರ ಒಪ್ಪಿಗೆಯಿಂದ ಆದ ಸಂಬಂಧ ಅದು-ಅದರಿಂದ ಜನರಿಗೆ ಅದ ಅನ್ಯಾಯವೇನು? ಅಷ್ಟಕ್ಕೂ ಅದರ ಹಿನ್ನಲೆ ನೋಡಿದರೆ, ಬಾಲ್ಯದ ಗೆಳತಿಯ ಮೇಲಿನ ಮೋಹ ಅವಳನ್ನ ಮತ್ತೆ ನೋಡಿದಾಗ ಮರುಕಳಿಸಿದ್ದು, ಸಹಜವಲ್ಲವೇ? ನಿತ್ಯಾನಂದನ ಮಾತುಗಳು / ಪ್ರವಚನಗಳು ಈ ಘಟನೆಯಿಂದಾಗಿ ಸುಳ್ಳಾಗಿ ಬಿಟ್ಟವ? ತಾನು 'ಸರ್ವಸಂಗ ಪರಿತ್ಯಾಗಿ' ಅಂತ ಅನುಯಾಯಿಗಳಲ್ಲಿ ಘೋಷಿಸಿದ್ದರೆ, ನಿತ್ಯಾನಂದ ಅದಕ್ಕನುಗುಣವಾಗಿ ನಡೆದುಕೊಳ್ಳಲಿಲ್ಲ ಎಂಬ ಒಂದು ತಪ್ಪನ್ನ ಮಾತ್ರ ಹೊರಿಸಬಹುದಷ್ಟೇ ಹೊರತು ಬೇರೇನೂ ಅಲ್ಲ ಅಂತ ನನ್ನ ಅನಿಸಿಕೆ. ಅವಕಾಶ ಸಿಕ್ಕಿದಾಗ ವ್ಯಭಿಚಾರಕ್ಕೆ ಯಾರು ತನ್ನನ್ನ ತಾನೇ ಬಲಿಕೊಡುವುದಿಲ್ಲವೋ ಅವರಿಗೆ ಮಾತ್ರ 'ಇದು ತಪ್ಪು' ಅಂತ ಹೇಳುವ ನೈತಿಕ ಹಕ್ಕಿರುವುದು. "Character of a person is constituted by what he does when no one sees him", ಬೆರಳುಗಳು ನಮ್ಮ ಕಡೆಗೂ ಬೊಟ್ಟುಮಾಡುವುದಿಲ್ಲವೇ?

    ReplyDelete
  18. ಎಲ್ಲಾ ಮಾಯೆಯೊ ಪ್ರಭುವೆ ಎಲ್ಲಾ ಮಾಯೆಯೊ!
    ಎಲ್ಲ ಕಳ್ಳರು ಒ೦ದೇಯಾ! ಆದರೆ ಅವರಿಗೆ ಶಿಕ್ಷೆಯಾಗದ ನಮ್ಮ ವ್ಯವಸ್ಥೆ ಬಗ್ಗೆ ಹೇಸಿಗೆ ಬರುತ್ತೇ!
    ಕ್ರಾ೦ತಿಗಾಗಿ ಕಾಯೋಣ. ಚೆ೦ದದ ಆಣಕು ಲೇಖನ.

    ReplyDelete
  19. ಅಜಾದ್ ಸರ್ ತಮ್ಮ ಲೇಖನ ಎಂದಿಗೂ ಸಾಮಾಜಿಕ ಕಳಕಳಿಯೀದ ಕೂಡಿರುತ್ತದೆ. ಎಲ್ಲವೂ ಹೊಸತನದೊಂದಿದೊಡಗೂಡಿರುತ್ತದೆ

    ReplyDelete
  20. ಸ್ವಾಮಿ........
    ಇದು ರಾಜಕೀಯ ಪ್ರಪಂಚ. ಇಲ್ಲಿ ಬಲ ಇಲ್ಲದವ ಮತ್ತೂ ಬಲ ಕಳೆದುಕೊಳ್ಳುತ್ತಾನೆ, ಉಳ್ಳವ ಬಲವಂತನಾಗುತ್ತಾನೆ.
    ನಿಮ್ಮ ಮಾತು ಸರಿಯಾಗೇ ಇದೆ. ಹಳ್ಳಕೆ ಬಿದ್ದವನ ಮೇಲೆ ಆಳಿಗೊಂದು ಕಲ್ಲು......

    ReplyDelete
  21. ಜಲನಯನ ,

    ಹೊಸ ವರಸೆಯಲ್ಲಿ ಭ್ರಷ್ಟಾಚಾರದ ವರದಿ..
    ಚೆನ್ನಾಗಿದೆ..

    ReplyDelete
  22. ಅಜಾದ್,

    ಈಗಿನ ಪರಿಸ್ಥಿತಿಯನ್ನು ನಿಮ್ಮದೇ ಶೈಲಿಯಲ್ಲಿ ಖುಷಿಕೊಡುವ ಭಾಷೆಯಲ್ಲಿ ಬರೆದಿದ್ದೀರಿ..ತುಂಬಾ ಚೆನ್ನಾಗಿ ಬರೆದಿದ್ದೀರಿ..ಓದಿ ನಗು ಬಂತು. ಜೊತೆಯಲ್ಲಿಯೇ ಅದರಲ್ಲಿನ ಸಾಮಾಜಿಕ ಕಳಕಳಿಯೂ ಇಷ್ಟವಾಯಿತು.

    ReplyDelete
  23. ಪ್ರಕಾಶ್, ತಡವಾಗಿ ಉತ್ತರ ನೀಡ್ತಾ ಇದ್ದೀನಿ..ಬೇಸರ ಇಲ್ಲ ..ಅಲ್ವಾ..? ಕಾರಣ ನಿಮಗೆ ಗೊತ್ತು...
    ಹೌದು ಇದು ಕಲ್ಪನೆ ಅಲ್ಲ..ವಾಸ್ತವ...ನಂತರವಂತೂ ...ಅಧೋಗತಿಯಾಗಿದೆ...ನಮ್ಮ ಪ್ರಾಮಾಣಿಕ ಲೋಕಾಯುಕ್ತರ ರಾಜೀನಾಮೆ ಇದಕ್ಕೆ ಹಿಡಿದ ಕನ್ನಡಿ.

    ReplyDelete
  24. ಶರವಣರೇ, ಶರಣು ನಿಮ್ಮ ಅನಿಸಿಕೆಗೆ...ಇದು ಮಾಯಾ ಕುದುರೆಯನ್ನು ಹತ್ತಿ ಬೇಟೆಯಾಡುವ ನಿರ್ದಯಿ ರಾಜಕಾರಣಿಗಳ ಲೋಕ...ಅವರನ್ನು ಹತ್ತಿಕ್ಕುವುದು ಕನಸೇ ಸರಿ

    ReplyDelete
  25. ಗೀತೆ...ಮೊದಲಿಗೆ ನನ್ನ ಜಲನಯನಕ್ಕೆ ನಿಮ್ಮ ಸ್ವಾಗತ...ನಂತರ ನಿಮ್ಮ ಸುದೀರ್ಘ ಮತ್ತು ಬಹು ವಿಶ್ಲೇಷಿತ ಪ್ರತಿಕ್ರಿಯೆ ನನ್ನ ಲೇಖನದ ಭಾವವನ್ನು ಇನ್ನೊಂದು ರೀತಿಯಲ್ಲಿ ಹೇಳಿದ್ದೀರಿ ಧನ್ಯವಾದ.. ನಿಮ್ಮಲ್ಲಿಗೆ ಬರುತ್ತೇನೆ...ಸದ್ಯಕ್ಕೆ ನಾಡಿನತ್ತ ಬಂದಿದ್ದೇನೆ ಹಾಗಾಗಿ ಬ್ಲಾಗ್ ಸರಿಯಾಗಿ ನೋಡಲಾಗುತ್ತಿಲ್ಲ

    ReplyDelete
  26. ಸಿತಾರಾಮ್ ಸರ್, ನಿಮ್ಮ ಮಾತು ೧೦೦-೧೦೦ ದಿಟ.... ಮಾಯಾ ಲೋಕದ ಮಾಯಾವಿಗಳ ಹುಮ್ಬತನಕ್ಕೆ ಇನ್ನೂ ಏನೋನು ಆಗಬೇಕಿದೆಯೋ..? ಎಲ್ಲ್ಲ ಅವನೇ ಬಲ್ಲ..

    ReplyDelete
  27. ಸಾಗರಿಯವರೇ, ಧನ್ಯವಾದ ನಿಮ್ಮ ಅನಿಸಿಕೆಗೆ.

    ReplyDelete
  28. ಪ್ರವೀಣ್, ನಿಮ್ಮ ಮಾತು ಸತ್ಯ...ಇದ್ದಕ್ಕಿದ್ದಂತೆ ಹೇಳೋ ಎದೆಗಾರಿಕೆಯೇ ಇಲ್ಲವಾಗಿದೆ...ಯಾಕಮ್ದ್ರೆ ...??? ಗೊತ್ತಲ್ಲಾ ಲೋಕಾಯುಕ್ತರಂಥವರೇ ...ಹ್ಯಾಂಡ್ಸ್ ಅಪ್ ಆದರೆ ಜನಸಾಮಾನ್ಯ..???

    ReplyDelete
  29. ಗುರು, ಧನ್ಯವಾದ ಕಣ್ರೀ...ನಿಮ್ಮ ಅನಿಸಿಕೆಗೆ...

    ReplyDelete
  30. ಶಿವು, ಎಲ್ಲ ಸರಿಮಾಡೋ ಆಶ್ವಾಸನೆ ಮಾಡಿ ಬಮ್ದ ಪ್ರಭುಗಳೇ ಎಲ್ಲಾ ತಪ್ಪು ಮಾಡುವಾಗ..ತಪ್ಪು ಮಾಡಲೇ ಇರುವವರಿಗೆ ರೆಕ್ಕೆ ಪುಕ್ಕ ಬರೋದು ಸಹಜ ಅಲ್ವಾ...?

    ReplyDelete
  31. ವಸಂತ್, ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಅನಿಸಿಕೆಗೆ ಮತ್ತು ಅಭಿಮಾನಕ್ಕೆ...ಜಲನಯನಕ್ಕೆ ಸ್ವಾಗತ...

    ReplyDelete
  32. ಆಜಾದ್ ಸರ್,
    ತಡವಾಗಿ ಪ್ರತಿಕ್ರಿಯಿಸುತಿದ್ದೇನೆ. ಕ್ಷಮೆ ಇರಲಿ....

    ವರ್ತಮಾನ ಪರಿಸ್ಥಿತಿಯ ನಿಜವಾದ ಚಿತ್ರಣ. ಬರಹ ತುಂಬಾ ಇಷ್ಟ ಆಯಿತು...ಧನ್ಯವಾದಗಳು

    ReplyDelete