Thursday, September 23, 2010

ಅಬ್ಬಬ್ಬಾ ಖಾರ.!!!...ಕಣ್ಣು ಮೂಗಲ್ಲಿ ನೀರು ಸುರಿಸೊಷ್ಟು...!!!!


ಚಿತ್ರ ಕೃಪೆ: 4.bp.blogspot.com

.
.ಸ್.ಸ್....ಅಸ್ಸೋ....ಅಬ್ಬಬ್ಬಾ...ಖಾರ..ಖಾರ.....!!!

ಯಾವುದಾದ್ರೂ ತಿಂಡಿ ಖಾರವಾಗಿದ್ರೆ ಅದು ಸಹಿಸೋಕೂ ಆಗದಷ್ಟು ಅಂದ್ರೆ.....ಮೇಲಿನ ಉದ್ಗಾರ ನಿಮಗೆ ಹೊಸದೇನಲ್ಲ...ನೀವೂ ಅನುಭವಿಸಿರ್ತೀರಾ, ಇಲ್ಲ ಅಪ್ಪಿ ತಪ್ಪಿ ಉಪ್ಪಿಟಿನಲ್ಲೋ ಮತ್ಯಾವುದೋ ತಿಂಡಿಯಲ್ಲೋ ಹಸಿರು ಬಟಾಣಿ ಅಥವಾ ಹಸಿರು ಹುರುಳಿಕಾಯಿ ಅಂತ ಅಂದ್ಕೊಂಡು ಹಚ್ಚಿದ ಮೆಣಸಿನಕಾಯಿಯನ ತಿಂದು ಬಾಯ್ಬಾಬಿ ಬಿಟ್ಟು ನೀರು ಕುಡಿದಿರ್ತೀರ...ಕಣ್ಣೊರೆಸಿರ್ತೀರ...ಮೂಗಲ್ಲಿನ ನೀರು ಬೀಳ್ಸಿರ್ತೀರ...ಅಲ್ವಾ...?!!

ಹೌದು.., ಖಾರ ಅಂದ್ರೆ ತಕ್ಷಣ ಕಣ್ಣಿನ ಮುಂದೆ ನಿಲ್ಲೋದು ಮೆಣಸಿನಕಾಯಿಯ ಚಿತ್ರ.

ಖಾರ...?? ಏನಿದು...?? ಇಂಗ್ಲೀಷರಿಗೆ ಇದನ್ನ ವರ್ಣಿಸೋಕೆ ಆಗದೆ ’ಹಾಟ್’ ಅಂತಾರೆ..!!

ಅಯ್ಯೋ..ಮೂದೇವಿ ಬಿಸಿ ಎಂತದ್ದು..??!! ಖಾರ ಅನ್ನೋಕಾಗಲ್ವಾ ಅಂತ ಊರಿಗೆ ಬಂದಿದ್ದ ನನ್ನ ವಿಲಾಯಿತಿ ಸ್ನೇಹಿತ ಚೋಟು ಮೆಣಸಿನ ಕಾಯಿ ಚೂರನ್ನು ತಪ್ಪಿ ತಿಂದು ಕೆಂಪು ಕೆಂಪು..ಆಗಿ ಬಾಯಿ..ಬಾಯಿ...ಆಂ...ಎನ್ನುತ್ತಾ ಹಾಟ್ ಹಾಟ್ ಎಂದಾಗ ಅಜ್ಜಿ ಎಂತ ಹೇಳುತ್ತೆ ಅದು ? ಎಂದಿದ್ದಕ್ಕೆ ಬಿಸಿ..ಬಿಸಿ ಅಂತ ಯಥಾವತ್ ತರ್ಜುಮೆ ಮಾಡಿದ್ದೆ ...ಆಗ ಹೇಳಿದ್ದು ಅಜ್ಜಿ...

ಹಾಂ ವಿಷಯಕ್ಕೆ ಬರೋಣ...,

ಖಾರ..ಎಲ್ಲಿಂದ ಬರುತ್ತೆ?

ಖಾರ, ಎಲ್ಲರೂ ತಿಳಿದ ಹಾಗೆ ಒಂದು ಸ್ವಾದವಲ್ಲ...ಇದನ್ನು ಟೇಸ್ಟ್ ಎನ್ನಲಾಗದು ...ಕಪ್ಪು ಹೇಗೆ ಒಂದು ವರ್ಣ ಅಲ್ಲವೋ ಹಾಗೆ. ಖಾರದಾಯಕ ಗುಣ “ಕ್ಯಾಪ್ಸಾಸಿನ್” ಎಂಬ ರಾಸಾಯನಿಕ ತತ್ವದಿಂದ ಬರುತ್ತದೆ. ಚರ್ಮ ಮತ್ತು ವಿಶೇಷತಃ ನಾಲಿಗೆಯ ಮೇಲಿನ ’ಶಾಖ’ಕ್ಕೆ ಸ್ಪಂದಿಸುವ ಕೋಶಿಕೆಗಳನ್ನು ಕೆಣಕುವ ಗುಣ ಈ ರಾಸಾಯನಿಕ ಅಂಶಕ್ಕೆ ಇರುತ್ತದೆ ಇದು ಅಂತಹ ಕೋಶಿಕೆ ಮತ್ತು ನರತಂತುಗಳ ಮೂಲಕ ಮಿದುಳಿಗೆ ತಪ್ಪು-ಕಲ್ಪಿತ ಸಂದೇಶವನ್ನು ರವಾನೆ ಮಾಡುವುದರಿಂದ “ಖಾರ” ದ ಸ್ವಾದಾನುಭವವಾಗುತ್ತದೆ. ಇದು ಬೆವರುವಿಕೆ (ಶಾಖದ ಪರಿಣಾಮ)ಯನ್ನು ಪ್ರಚೋದಿಸುತ್ತದೆ ಈ ಕ್ರಿಯೆಗೆ ’ಎಂಡಾರ್ಫಿನ್’ ಎಂಬ ಸ್ರಾವಕ ಕಾರಣವಾಗಿರುತ್ತದೆ. ಹಾಗಾಗಿ ಖಾರ ಉರಿಯನ್ನು ಉಂಟುಮಾಡುವುದಲ್ಲದೇ ಎಂಡಾರ್ಫಿನ್ ಉತ್ಪತ್ತಿ ಮತ್ತು ಬೆವರುವಿಕೆಗೆ ದಾರಿ ಮಾಡುತ್ತದೆ.

ಹಿಂದಿನ ದಿನಗಳಲ್ಲಿ ಖಾರತ್ವ ಅಳೆಯೋಕೆ ಆಸ್ವಾದಕರನ್ನು ಅಥವಾ ಸ್ವಾದ ವಿಶೇಷಜ್ಞರನ್ನ ನೇಮಿಸಿ ಅವರು ಸ್ವಾದ ನೋಡಿ ಎಷ್ಟು ಖಾರ ಎನ್ನುವುದನ್ನು ಅಳತೆಪಟ್ಟಿಯ ಆಧಾರದಲ್ಲಿ, ಅಂದರೆ ಹೋಲಿಕೆ ಆಧಾರ, ಖಾರವಿಲ್ಲ, ಕಡಿಮೆ ಖಾರ, ಸ್ವಲ್ಪ ಖಾರ, ಮಧ್ಯಮ ಖಾರ, ಹೆಚ್ಚು ಖಾರ ಅತಿ ಹೆಚ್ಚು ಖಾರ, ಅಸಹ್ಯ ಖಾರ ಹೀಗೆ ವರ್ಗೀಕರಣದ ಮೂಲಕ ಅಳತೆಪಟ್ಟಿ ತಯಾರಿಸಲಾಗುತ್ತಿತ್ತು. ಕ್ರಿ.ಶ.1912 ರಲ್ಲಿ ವಿಲ್ಬರ್ ಸ್ಕೋವಿಲೆ ಎಂಬ ಅಮೆರಿಕಾ ತಜ್ಞ ಖಾರದಾಯಕ ಗುಣ ’ಕ್ಯಾಪ್ಸಾಸಿನಾಯ್ಡ್ಸ’ ಎಂಬ ಅಂಶ/ಘಟಕದ ಪ್ರಮಾಣದ ಮೇಲೆ ಅವಲಂಬಿಸಿರುತ್ತದೆಂದು ಸಾಧಿಸಿದ. ಆ ನಂತರ ಯಾವುದೇ ಸಸ್ಯಜನ್ಯ ಅಥವಾ ’ಕ್ಯಾಪ್ಸಾಸಿನಾಯ್ಡ್ಸ’ ಅಂಶವುಳ್ಳ ತಿಂಡಿ, ಆಹಾರ ಪದಾರ್ಥ, ತರಕಾರಿ ಇತ್ಯಾದಿಗಳ ಖಾರತ್ವವನ್ನು ’ಕ್ಯಾಪ್ಸಾಸಿನಾಯ್ಡ್ಸ’ ಪ್ರಮಾಣದ ಅಧಾರದ ಮೇಲೆ ಸ್ಕೋವಿಲೆ ಖಾರಾಂಶ (ಸ್ಕೋವಿಲೆ ಹೀಟ್ ಯೂನಿಟ್ಸ್, SHU) ಗಳು ಎಂದು ಹೇಳಲಾಗುತ್ತದೆ.

ಇನ್ನು ಮೆಣಸಿನಕಾಯಿ, ಖಾರ ಅಂದ್ರೆ ಮೆಣಸಿನಕಾಯಿಯೇ ಅಲ್ಲವೇ...? ಇದರಲ್ಲಿ ಹಲವಾರು ವಿಧಗಳು, ಬಣ್ಣಗಳು, ರೂಪಗಳು,,,, ಹಸಿಕಾಯಿ, ಒಣಕಾಯಿ, ಬೀಜ, ಇತ್ಯಾದಿ.

ಪ್ರಪಂಚದಲ್ಲಿ ಅತಿ ಖಾರವಾದ ಮೆನಸಿನಕಾಯಿ ಭಾರತದಲ್ಲಿ ಸಿಗುತ್ತದೆಂದರೆ ನಂಬುತ್ತೀರಲ್ಲವೇ...ಆದ್ರೆ ಅದು ಬಿಸಿಲ ತಾಪದ ರಾಜಸ್ಥಾನದಲ್ಲಿಯೋ ಅಥವಾ ಖಾರ ತಿನ್ನೊದಕ್ಕೇ ಹೆಸರಾದ ಕರ್ನಾಟಕದ ಬಳ್ಳಾರಿ, ಬ್ಯಾಡಗಿಯಿಂದಲೋ ದೊರೆಯುವಂಥದಲ್ಲ....ಹಸಿರುಸಿರಾಡುವ ಪೂರ್ವೋತ್ತರ ರಾಜ್ಯಗಳಾದ ನಾಗಾಲ್ಯಾಂಡ್, ಮಣಿಪುರ, ಅಸ್ಸಾಂ ಗಳಲ್ಲಿ ದೊರೆಯುತ್ತವೆ. ಇವುಗಳನ್ನು “ನಾಗಾ ಜೋಲಾಕಿಯ” ಮೆಣಸಿನ ಕಾಯಿ ಎನ್ನುತ್ತಾರೆ. “ಗಿನ್ನೆಸ್ ದಾಖಲೆ ಪುಸ್ತಕ” ದಲ್ಲಿ ಈ ಮೆಣಸಿನಕಾಯನ್ನು ವಿಶ್ವದಲ್ಲೇ ಅತಿ ಹೆಚ್ಚು ಖಾರದ ಮೆಣಸಿನಕಾಯಿ ಎಂದು ಮಾನ್ಯತೆ ನೀಡಲಾಗಿದೆ. ಮಾರುಕಟ್ಟೆಯಲ್ಲಿ ತರಕಾರಿ ಮಾರುವ ’ಇಮಾ’ ಗಳು ಹಿಕ್ಕಳದ ಸಹಾಯದಿಂದ ಅವನ್ನು ಹಿಡಿದು ತೂಕಕ್ಕೆ ಹಾಕುತ್ತಾರೆ. ಅತಿ ಖಾರವನ್ನು ಇಷ್ಟಪಡದ ಮಂದಿ “ನಾಗಾ ಜೋಲಾಕಿಯ” ಮೆಣಸಿನ ಕಾಯಿತೊಟ್ಟಿಗೆ ದಾರಕಟ್ಟಿ ಒಲೆಯ ಮೇಲ್ಭಾಗದಲ್ಲಿ ತೂಗುಬಿಟ್ಟು ಸಾಂಬಾರೊಳಕ್ಕೆ ಕೇವಲ ಮುಳುಗಿಸಿ ಎತ್ತುವುದರಿಂದ ಸಾಕಷ್ಟು ಖಾರ ಸಾಂಬಾರಿಗೆ ಹಾಕಿದಂತಾಗುತ್ತದಂತೆ !!!

ಈಗ ನಮ್ಮ “ನಾಗಾ ಜೋಲಾಕಿಯಾ” ದ ಖಾರತ್ವದ ಸ್ಕೋರು ಎಷ್ಟು ನೋಡೋಣವೇ...???

ಕ್ಯಾಪ್ಸಾಸಿನ್ ಶುದ್ಧ ಪುಡಿ                                            15-16 ದಶ ಲಕ್ಷ ಎಸ್.ಎಚ್.ಯು.

ನಾಗಾ ಬಿಹು ಜೊಲೊಕಿಯಾ                                       0.85 – 1.07 ದಶ ಲಕ್ಷ ಎಸ್.ಎಚ್.ಯು.

ಗುಂಟೂರು, ಜಮೈಕನ್ ಹಾಟ್ ಮೆಣಸಿನಕಾಯಿ              0.10 – 0.35 ದಶ ಲಕ್ಷ ಎಸ್.ಎಚ್.ಯು

ಭಾರತದ ಮತ್ತು ಥಾಯ್ ಮೆಣಸಿನಕಾಯಿ                      0.05 – 0.10 ದಶ ಲಕ್ಷ ಎಸ್.ಎಚ್.ಯು

ಪೆಮಿಂಟೋ ಅಥವಾ ಚೆರ್ರಿ ಮೆಣಸಿನಕಾಯಿ                           100 – 500 ಎಸ್.ಎಚ್.ಯು.

ಕ್ಯಾಪ್ಸಿಕಂ ದಪ್ಪ (ಬೆಲ್) ಮೆಣಸಿನಕಾಯಿ                                  0  ಎಸ್.ಎಚ್.ಯು

47 comments:

 1. ಅಜಾದ್ ಸರ್,
  ಒಳ್ಳೆಯ ಮಾಹಿತಿ,
  ನಮ್ಮ ಕಡೆಯೂ 'ಜೀರಿಗೆ ಮೆಣಸು' ಎಂಬ ತುಂಬಾ ಸಣ್ಣ ಗಾತ್ರದ ಮೆಣಸು ಇದೆ. ಅದರ ಖಾರ ಅಂದರೆ ಬಹುಶ ಹೇಳಲು ಸಾಧ್ಯವಿಲ್ಲ! ಅನುಭವಿಸಿಯೇ ತೀರಬೇಕು!

  ReplyDelete
 2. ಆಜ಼ಾದ್ ಸರ್.. ಖಾರದ ಮೆಣಸಿನ ಕಾಯಿಗೂ ಇಷ್ಟೊಂದ್ ವಿಶೇಷಗಳಿವೆ ಅಂತ ತಿಳಿಸಿದ ನಿಮಗೆ ಧನ್ಯವಾದಗಳು...

  ReplyDelete
 3. ಪ್ರವೀಣ್...ಖಾರದ ಬಗ್ಗೆ ನಮ್ಮಲ್ಲಿ ಒಂದು ಚರ್ಚೆ ಬಂತು ಆಗ ನನ್ನಲ್ಲಿ ಮಾಹಿತಿ ಹಂಚಿಕೊಳ್ಳೋಣ ಅನಿಸಿ ಹಾಕಿದೆ

  ReplyDelete
 4. ಪ್ರಗತಿ, ಧನ್ಯವಾದ...ಹೌದು,,ಖಾರಕ್ಕೆ ಮೆಣಸು/ಮೆಣಸಿನಕಾಯಿಯ ಅನ್ವರ್ಥತೆ..ಮಾಹಿತಿ ಕೊಟ್ಟೆ ಅಷ್ಟೆ...

  ReplyDelete
 5. ಧನ್ಯವಾದಗಳು ಸರ್ ಇಷ್ಟು ದಿನಾ ಮಿರ್ಚಿ ತಿಂದು ಮಾತ್ರ ಗೊತ್ತಿತ್ತು ಮೆಣಸಿನ ಕಾಯಿಯ ಬಗ್ಗೆ ತಲೆ ಕೆಡಿಸಿ ಕೊಂಡಿರಲಿಲ್ಲ ಮಹತ್ವಪೂರ್ಣ ಮಾಹಿತಿ ... ( ಅಂತೂ ಮೀನು ವಿಜ್ಞಾನಿಯ ಜೊತೆ ಮೆಣಸು ವಿಜ್ಞಾನಿಯೂ ಆದಿರಿ ! )

  ReplyDelete
 6. ಆಜಾದು....

  ನಮ್ಮಕಡೆ "ಮೇಲು ಮುಖದ ಮೆಣಸು" ಅಂತ ಸಿಗುತ್ತದೆ...

  ಬಹಳ ಕೆಟ್ಟದಾದ ಖಾರ ಅದು !!

  ತಿಂದ ಮರುದಿನ ಬೆಳಿಗ್ಗೆ "ಅಜ್ಜಿ, ತಾತ " ಎಲ್ಲರೂ ನೆನಪಾಗುತ್ತಾರೆ. !!

  ಉತ್ತಮವಾದ ಮಾಹಿತಿ...

  ಜೈ ಹೋ...

  ReplyDelete
 7. ಆಜಾದ್ ಭಾಯ್,
  ಉತ್ತಮ ಮಾಹಿತಿ, ನಾನು ಖಾರಪ್ರಿಯ, ನಾಗ ಜೋಲಾಕಿಯ ಅದೆಷ್ಟು ಖಾರ ಇದೆ ಎ೦ದೊಮ್ಮೆ ನೋಡಬೇಕೆನಿಸಿತು ನಿಮ್ಮ ಬರಹ ಓದಿ.,

  ReplyDelete
 8. ಅಜಾದ್ ಭಾಯಿ,
  ಮೆಣಸಿನ ಕಾಯಿಯ ಬಗ್ಗೆ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ..ಧನ್ಯವಾದಗಳು.

  ReplyDelete
 9. ಅಜಾದ್,
  ಖಾರದ ಬಗ್ಗೆ ಇಷ್ಟೇಲ್ಲಾ ಇದೆಯಾ? ನೀವು ತಿಳಿಸಿದ ಎಲ್ಲಾ ಮೆಣಸಿನಕಾಯಿಗಳನ್ನು ನೋಡಬೇಕೆನಿಸುತ್ತದೆ.
  ನನಗಂತೂ ಇದು ಸಕತ್ ಹಾಟ್ ಲೇಖನ ಎನ್ನಿಸಿತು.

  ReplyDelete
 10. ಖಾರದ ಆಳ ಅರಿವಿನ ಬಗ್ಗೆ ತಿಳಿಸಿದ್ದೀರಿ..

  ReplyDelete
 11. ಪ್ರಕಾಶ ಒಮ್ಮೆ ಮಣಿಪುರ ಮೀನು ಮಾರ್ಕೆಟ್ ಸರ್ವೆಗೆ ಹೋಗಿದ್ದೆ.. ಇಮಾಗಳ ಮೀನುಮಾರುವ ಕಟ್ಟೆಗಳ ಪಕ್ಕದ ಕಟ್ಟೆಗಳು ಮೆಣಸಿನಕಾಯಿ ಕಟ್ಟೆ ಇತ್ತು..ನಮ್ಮ ಸ್ಯಾಂಪಲ್ ಕೊಂಡು ಹಾಕಲು ಪ್ಲಾಸ್ಟಿಕ್ ಚೀಲ ಪಕ್ಕದ ಕಟ್ಟೆಯ ಇಮಾ ಕೊಟ್ಟಳು..ಅದಕ್ಕೆ ಮೆಣಸಿನಕಾಯಿ ಖಾರ ತಗುಲಿದ್ದು ಗಮನಿಸಿರಲಿಲ್ಲ..ಯಾವಗಲೋ ಮೂಗು ಒರೆಸಿಕೊಂಡಿದ್ದೆ..ಸಿಕ್ಕಾಪಟ್ಟೆ ಉರಿ ಶುರುವಾದಾಗ ನನ್ನ ಮಣಿಪುರಿ ಮಿತ್ರ ಓ ಅದು ಪಕ್ಕದ ಕಟ್ಟೆಯ ಪ್ಲಾಸ್ಟಿಕ್ ಚೀಲ ಅಲ್ಲವಾ ಎಂದಾಗಲೇ,,,ಬರೀ ಖಾರ ತಾಗಿದ್ದರಿಂದಲೇ ಅಷ್ಟೊಂದು ಉರಿ..ಇನ್ನು ತಿಂದರೆ...ಬಾಪ್ ರೇ ಬಾಪ್... ಧನ್ಯವಾದ ನಿನ್ನ ಪ್ರತಿಕ್ರಿಯೆಗೆ

  ReplyDelete
 12. ವೆಂಕಟೇಶ್ ..ಧನ್ಯವಾದ..ಆರ್ಗಾನೋಲೆಪ್ಟಿಕ್ ಎವಾಲ್ಯುಯೇಷನ್ ಅಫ್ ಫಿಶ್ ಪ್ರಿಪರೇಶನ್ಸ್ ಅನ್ನೋ ಪಾಠ ಬ್ಂದಾಗ ಖಾರದ ವಿಶೇಷ ಪ್ರಸ್ತಾಪ ಬರುತ್ತೆ...ಅಲ್ಲದೇ ಇದೊಂದು ಸಂಬಂಧಿತ ವಿಷಯ ನಮಗೆ...ಹಾಗಾಗಿ ಆಸಕ್ತಿ...ಅಷ್ಟೆ...ಧನ್ಯವಾದ

  ReplyDelete
 13. ಡಾ. ಗುರು ವಿಜ್ಞಾನದ ಗಹನತೆಗಳಲ್ಲಿ ಒಂದು ಹನಿಯೂ ಅಮೂಲ್ಯ ಅಲ್ಲವೇ...ಧನ್ಯವಾದ

  ReplyDelete
 14. ಪರಾಂಜಪೆ ಸರ್, ಪ್ರಯತ್ನಿಸಿ...ಶುಭವಾಗಲಿ....ಹಹಹ...ಆ ದೃಶ್ಯ ಕಲ್ಪಿಸಿಕೊಂಡೇ ನನ್ನ ಮೂಗು ಕೆಂಪಾಯ್ತು...ಹಹಹ ಅಷ್ಟೊಂದು ಖಾರ ಅದು

  ReplyDelete
 15. ಮನಮುಕ್ತಾ ನಿಮಗೂ ಇದರ ರುಚಿ ನೋಡುವ ಆಸಕ್ತಿ ಇದೆಯೇ..? ಹಹಹ ಪ್ರಯತ್ನಿಸಿ..ನಿಮ್ಮ ಅನಿಸಿಕೆಗೆ ಧನ್ಯವಾದ

  ReplyDelete
 16. ಶಿವು..ಇದು ಬಹಳ ಖಾರ...ನೋಡಲು ಅಡ್ಡಿ ಇಲ್ಲ... ಅಸ್ಸಾಂ, ಮಣಿಪುರ ನಾಗಾಲ್ಯಾಂಡ್ ರಾಜ್ಯಗಳಲ್ಲಿ ಸಿಗುತ್ತೆ...
  ಒಮ್ಮೆ ಪ್ರಯತ್ನಿಸಿ ಅಲ್ಲಿಂದ ಬರುವ ಸ್ನೇಹಿತರಿಂದ...

  ReplyDelete
 17. ಗುರುಪ್ರಸಾದ್...ನಿಮ್ಮದು ಮಂಡ್ಯಾನಾ...ನನಗೆ ಮೊದಲ ತುತ್ತು ನೀಡಿದ ಮಣ್ಣು ಅದು..ಪೂಜ್ಯ ನನಗೆ...ವಿ.ಸಿ.ಫಾರಂ ನಲ್ಲಿರೂ ಕೃಷಿ ವಿ.ವಿ.ಸಂಶೋಧನಾ ಕೇಂದ್ರದಲ್ಲಿ ಕೆಲ್ಸ ಮಾಡಿದ್ದೇನೆ...
  ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

  ReplyDelete
 18. ಮೆಣಸಿನ ಕಾಯಿ ಮೆಣಸಿನ ಕಾಯಿ ಉರಿ ಉರಿ ಮೆಣಸಿನ ಕಾಯಿ
  ಮಾಹಿತಿ ಕೊಟ್ಟಿದಕ್ಕೆ ಧನ್ಯವಾದ :)

  ReplyDelete
 19. ಜಲನಯನ,
  ಖಾರದ ಬಗೆಗೆ ಬಹು ಸಿಹಿಯಾದ ಲೇಖನ ಬರೆದಿದ್ದೀರಿ!

  ReplyDelete
 20. ಅಬ್ಬಬ್ಬಾ.... ಅದೇನು ಖಾರ ... ಉಫ್ಹ್ ... ಓದಿಯೇ ಕಣ್ಣು -ಮೂಗಲ್ಲಿ ನೀರು ಸುರಿಯೋ ತರ ಆಗ್ತಿದೆ.
  ಖಾರ ಖಾರದ ಬರಹ .. ಆದರೂ ತುಂಬಾ ರುಚಿಕಟ್ಟು !
  ನಮ್ಮಲ್ಲಿ ಸಿಗುವ ' ಸೂಜಿ ಮೆಣಸಿನ ಕಾಯಿ' ಚಿಕ್ಕದಾಗಿದ್ದು ಅತ್ಯಂತ ಖಾರವಾಗಿರುತ್ತೆ ! ಇಡೀ ಒಂದು ತೆಂಗಿನ ಕಾಯಿಯ ಚಟ್ನಿಗೆ ಒಂದೇ ಒಂದು ಮೆಣಸಿನ ಕಾಯಿ ಸಾಕು ಮೂಗಲ್ಲಿ ನೀರು ಬರಲು ! ಮಜಾ ಎಂದರೆ , ಈ ಮೆಣಸಿನ ಕಾಯಿಯನ್ನು ಕೊಬ್ಬರಿ ಎಣ್ಣೆಯಲ್ಲಿ ಕುಡಿಸಿ ತಯಾರಿಸಿದ ತೈಲವನ್ನು ನಮ್ಮಜ್ಜಿ ಅವರ ಕೈ ಕಾಲು ನೋವಿಗೆ ಹಚ್ಚಿ ಕೊಳ್ಳುತ್ತಿದ್ದರು . ನೋಯುತ್ತಿರುವ ಜಾಗವಲ್ಲದೆ ಸ್ವಲ್ಪ ಆಚೀಚೆ ತಾಗಿದರೂ ಕುಣಿದಾಡುವಷ್ಟು ಉರಿಯುತ್ತಿತ್ತು ಅದು. ಆದರೆ ಅತ್ಯಂತ ಪರಿಣಾಮಕಾರಿ ನೋವು ಶಾಮಕ ಎಂದು ಅಜ್ಜಿ ಹೇಳುತ್ತಿದ್ದರು !
  ತುಂಬಾ ಮಾಹಿತಿ ಕೊಟ್ಟಿದ್ದೀರಾ ಮೆಣಸಿನ ಖಾರದ ಬಗ್ಗೆ !

  ReplyDelete
 21. ಮಂಜು ಮೆಣಸಿನ ಕಾಯ್ ಉರಿಯನ್ನ ಓದಿದ್ದಕ್ಕೆ ಧನ್ಯವಾದ...ಸ್ವಲ್ಪ ಎಣ್ಣೆ ಕುಡಿದುಬಿಡು...ಯಾಕಂದ್ರೆ ಎಣ್ಣೆಯಲ್ಲಿ ಕ್ಯಾಪ್ಸಾಸಿನ್ ಕರಗುತ್ತೆ..ಹಾಗಾಗಿ ಬೇಗ ಉರಿ ಕಡಿಮೆಯಾಗುತ್ತೆ

  ReplyDelete
 22. ಸುನಾಥಣ್ಣ...ಧನ್ಯವಾದ..ವಿಜ್ಜಾನದ ಹಲವಾರು ಆಯಾಮಗಳ ಸೂಕ್ಷ್ಮತೆಗಳ ಸಾಗರದ ಬಿಂದು..ಹಂಚಿಕೊಳ್ಳುವ ಉದ್ದೇಶದಿಂದ ಹಾಕಿದ್ದು ಬ್ಲಾಗ್ ಪೋಸ್ಟು...ಎಂದಿನಂತೆ ಪ್ರೋತ್ಸಾಹದ ನಿಮ್ಮ ಮಾತಿಗೆ ಧನ್ಯವಾದ

  ReplyDelete
 23. ಚಿತ್ರಾ...ನಾಗಾ ಜೊಲೊಕಿಯಾ ಬಗ್ಗೆ ಓದಿಯೇ ಕಣ್ಣಲ್ಲಿ ನೀರು ಬಂದಿದ್ರೆ....ಆ ಮೆಣಸಿನ ಕಾಯನ್ನು ಒಮ್ಮೆ ಟೇಸ್ಟ್ ಮಾಡಿ ನೋಡು...
  ಥ್ಯಾಂಕ್ಸ್ ನಿನ್ನ ಅಭಿಪ್ರಾಯಕ್ಕೆ

  ReplyDelete
 24. ಅಜಾದ್ ಸರ್;ಖಾರದ ಬಗ್ಗೆ ಸಖತ್ ಹಾಟ್ ಮಾಹಿತಿ.ಅದರಲ್ಲಿಯ ಕ್ಯಾಪ್ಸಿಸಿನ್ ಅಂಶವನ್ನು ನೋವಿನ ನಿವಾರಣೆಗೆ counter irritant ಆಗಿ ಉಪಯೋಗಿಸುತ್ತಾರೆ.ಮಾಹಿತಿಗೆ ಧನ್ಯವಾದಗಳು.

  ReplyDelete
 25. sir olle mahiti nididdira....menasina kai article chenagide... menasina kaiginta namma kananda hudugiru inna jaasti kara irdarante nijanaa ? :):). just kidding... :)

  ReplyDelete
 26. ತೇಜಸ್ವಿನಿ ಧನ್ಯವಾದ ನಿಮ್ಮ ಬಜ್ ನೋಡಿ ಈ ವಿಷಯ ನೆನಪಾಯ್ತು....

  ReplyDelete
 27. ತರುಣ್ ಧನ್ಯವಾದ ನಿಮ್ಮ ಅನಿಸಿಕೆಗೆ....ಹುಡುಗೀರು...ಹಾಟ್ ಆದ್ರೆ ಹುಡುಗ್ರು ಕೂಲ್ ಆಗಿಬಿಡ್ತಾರೆ..ಹಹಹಹ

  ReplyDelete
 28. song for u jalanayan sir:
  khaarad vishay ni helideyo shishya
  kannirin artha aalisid mensaa
  balu jaanar jaan ee jalanayan
  bareyuv vishy balu berene shishya

  ReplyDelete
 29. ಹಲೋ ಕೀರ್ತಿ...ಏನಿದು..? ಕವನದ ಅತ್ಮೀಯತೆಯಲ್ಲಿ ಪ್ರತಿಕ್ರಿಯೆಯ ತನನ...ಧನ್ಯವಾದ..ಇದು ಸ್ನೇಹ ಮತ್ತು ಬಾಂಧವ್ಯದ ಖಾರ...ಹಹಹ...

  ReplyDelete
 30. ಸಕತ್ತು ಹಾಟು ಮಗಾ......ಹಹಹ....ಇದು ನಾಗಾ ಜೊಲೊಕಿಯಾ...ಹಾಟು...ಮಗಾ...ಥ್ಯಾಂಕ್ಸ್ ನಿಮ್ಮ ಹಾಟ್ ಪ್ರತಿಕ್ರಿಯೆಗೆ ಮಯೇಸ್ ಮಾಮ...

  ReplyDelete
 31. ಖಾರದ ಬಗ್ಗೆ ಇಷ್ಟೆಲ್ಲಾ ವಿಷಯಗಳನ್ನು ತಿಳಿಸಿಕೊಟ್ಟಿದ್ದಕ್ಕೆ ವಂದನೆಗಳು.
  ಚೆನ್ನಾಗಿದೆ ನಿಮ್ಮ ಬ್ಲಾಗ್

  ReplyDelete
 32. ಅಪ್ಪ-ಅಮ್ಮನಿಗೆ (ಈ ರೂಪದಲ್ಲಾದರೂ ಆಗಾಗ್ಗೆ ಭಾಗ್ಯ ಸಿಗ್ತಿದೆ) ಧನ್ಯವಾದಗಳು, ಜನಲನಯನಕ್ಕೆ ಬಂದುದಕ್ಕೆ ಮತ್ತು ಪ್ರತಿಕ್ರಿಯೆಗೆ...

  ReplyDelete
 33. ಮೆಣಸಿನ ಕಯಿಗೊ ಬಂತು ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ..... ಒಳ್ಳೆಯ ಮಾಹಿತಿ ಧನ್ಯವಾದಗಳು ಸರ್

  ReplyDelete
 34. ಸತೀಶ್ ಗೌಡ...ಧನ್ಯವಾದ..ಹೌದು ಮೆಣಸಿನಕಾಯಿಯ ಈ ವೈವಿಧ್ಯತೆಗೆ ಮೌಲ್ಯ ಸಿಕ್ಕಿದ್ದು ಗಿನ್ನೆಸ್ ಪುಸ್ತಕದ ಮೂಲಕ....

  ReplyDelete
 35. Aajaad Sir,

  Kharada bagge tumba sogasaagi barediddiri, uttama maahiti kottiddiri dhanyavadagalu..

  ReplyDelete
 36. ಆಜಾದ್ ಸರ್,
  ಎಲ್ಲಿಂದ ಇದನ್ನೆಲ್ಲಾ ಕಲೆಕ್ಟ್ ಮಾಡಿದಿರಿ ಸರ್.....ತುಂಬಾ ಖಾರವಾಗಿದೆ ವಿವರಣೆ......

  ReplyDelete
 37. ಖಾರದ ಮೆಣಸಿನ ಕಾಯಿ ಬಗ್ಗೆ ಹಿಂದೊಮ್ಮೆ "ಟ್ರಾವೆಲ್ & ಲಿವಿಂಗ್" ಚಾನೆಲ್ ನಲ್ಲಿ ನೋಡಿದ ಕಾರ್ಯಕ್ರಮದ ನೆನಪಾಯಿತು.. :)


  ಮತ್ತೆ, ಖಾರ ಕೂಡ ಒಂದು ಸ್ವಾದವೇ ಸಾರ್..ಹಾಗೆ ಕಪ್ಪು ಕೂಡ ಒಂದು ಬಣ್ಣವೇ... ಅತಿಯಾದರೆ ಅಮೃತವೂ ವಿಷ ಅಂತಾರಲ್ಲ ಹಾಗೆ ಅತಿಯಾದರೆ ಖಾರ, ಸಿಹಿ, ಹುಳಿ ಎಲ್ಲವೂ ಸ್ವಾದವಲ್ಲ ಅಂತ ಅನಿಸುತ್ತೆ... ಮಿತವಾಗಿದ್ದರೆ ಎಲ್ಲವೂ ಒಳಿತು.. ಅಲ್ಲವೇ?

  ಖಾರಕ್ಕೆ ಇಂಗ್ಲಿಷ್ ನಲ್ಲಿ ಹಾಟ್ ಅನ್ನೋದಕ್ಕಿಂದ Spicy ಅನ್ನಬಹುದು ಅಲ್ವೇ? :-)

  ReplyDelete
 38. ಅಶೋಕ್...ಧನ್ಯವಾದ...ಈ ಮೆಣಸಿನ ಕಾಯಿಯ ದೂರದ ಘಾಟು ಬಡಿಸಿಕೊಂಡಿದ್ದೇನೆ...ಹಾಗಾಗಿ ಇದನ್ನು ರುಚಿ ನೋಡೋದು ...ನೋ ವೇ....ಹಹಹ ಧನ್ಯವಾದ

  ReplyDelete
 39. ದಿನಕರ್...ನಾನು ಮಣಿಪುರದಲ್ಲಿ ೯ ವರ್ಷ ಇದ್ದ್ದಿದ್ದು ಅದೂ ಕೃಷಿ ವಿಜ್ಞಾನಿಗಳ ಜೊತೆಯವನಾಗಿ...ಹಾಗಾಗಿ ಬತ್ತಳಿಕೆಯಲ್ಲಿದ್ದ ಬಾಣಗಳೇ ಇವು...ಹಹಹ..ಧನ್ಯವಾದ

  ReplyDelete
 40. This comment has been removed by the author.

  ReplyDelete
 41. ರವಿಕಾಂತ ಸರ್
  ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...
  ಖಾರ ಶಾಖದ ಅನುಭವ ಎಂದೇ ಹೇಳಲಾಗುತ್ತೆ....
  ಅದಕ್ಕೇ ಇರಬೇಕು ಇಂಗ್ಲೀಷಲ್ಲಿ ಹಾಟ್ ಅಂತಾರೆ....

  ReplyDelete
 42. ಸತೀಶ್...ಖಾರದ ಘಾಟು ನಿಮಗೂ ಬಡೀತಾ...ಹಹಹ....ಹೌದು ನೋಡಿ ಈ ನಾಗ ಜೊಲಾಕಿಯಾ ಅಷ್ಟು ಫೇಮಸ್ಸು...ಹಹಹ

  ReplyDelete
 43. ಭೈಯ್ಯಾ ಒಳ್ಳಯ ಮಾಹಿತಿ ನೀಡಿದ್ದಿರಿ ಧನ್ಯವಾದಗಳು .
  ಈ ಎರಡು ರೀತಿಯ ಮೆಣಸು ನಮ್ಮ ಮನೆಯಲ್ಲೂ ಇತ್ತು .ಒಂದು ಆಕರದಲ್ಲಿ ಉದ್ದವಿತ್ತು ..
  ಇನ್ನೊಂದು pumpkin shape ನಲ್ಲಿ ಇತ್ತು ( ಕಾಶಿಗೆ ಹೋದವರು ತಂದ ಬೀಜದಿಂದ ಮಾಡಿದ ಸಸಿ ಅಂತಾ ಅಜ್ಜಿ ಹೇಳಿದ ನೆನಪು ) .. ಇದಕ್ಕೆ "ಕುಟುಂಬ ಮೆಣಸು" ಅಂತಾ ಕರೀತಾರೆ ನಮ್ಮ ಕಡೆ . ಬಹುಷಃ ಇದೇ ಇರಬೇಕು (ಫೋಟೋ ನೋಡಿ ಅನ್ಕೊಂಡೆ :P ).

  ಒಮ್ಮೆ ಬೆಟ್ಟ್ ಕಟ್ಟಿ ಸುಮ್ನೆ ನಾಲಿಗೆಯಲ್ಲಿ ರುಚಿ ನೋಡಿದ್ದೇ ಅಸ್ಟೆ .. ಇಲ್ದಿರೋ ಕಡೆಯೆಲ್ಲ ನೀರು ಇಳಿಯಕ್ಕೆ ಶುರು ಆಗಿತ್ತು .. ಸುಮಾರು 2 - 3 ಘಂಟೆಗಳ ಕಾಲ ಒಂದು ಕೈಲಿ ನೀರು ಒನ್ನೊಂದು ಕೈಲಿ ಸಕ್ಕರೆ ಡಬ್ಬ .. . ಅಸ್ಟೆ ಅರ್ಧ ದಿನ ನಾಲಿಗೆ ಸ್ಪರ್ಷಾನೆ ಕಳೆದುಕೊಂಡ ಹಾಗೇ ಅನುಭವ ಆಗಿತ್ತು :P
  ಮೊದಲು ಹಸಿರಾಗಿದ್ದು ,ಹಣ್ಣಾದಾಗ ಪೂರ್ತಿಯಾಗಿ ರೆಡ್ ಆಗತ್ತೆ ಗಿಡದ ತುಂಬಾ ಕಾಯಿ ಬಿಡತ್ತೆ .. ನೋಡಕ್ಕೆ ಮಾತ್ರ ತುಂಬ ಚೆಂದ :) ಅಪ್ಪಿ ತಪ್ಪಿನು ಟ್ರೈ ಮಾಡಕ್ಕೆ ಹೋಗಬೇಡಿ :D

  ReplyDelete