Sunday, October 3, 2010

ಆಕಾಶ ಗಂಗೆಯಲ್ಲಿ ಮತ್ತೊಂದು ಭೂಮಿ!!

ಚಿತ್ರ ಕೃಪೆ:ಅಂತರ್ಜಾಲ

“ಗ್ಲೀಜಿ-581 G” ಎಂಬ ಭೂಮಿಯಂತಹ ಗ್ರಹ ಸೌರವ್ಯೂಹದಿಂದ ಸುಮಾರು 20 ಪ್ರಕಾಶವರ್ಷ (ಲೈಟಿಯರ್ಸ್) ದೂರದಲ್ಲಿ ಇದೆಯೆಂದು ದಿನಾಂಕ 29 ಸೆಪ್ಟಂಬರ್ ನ ವಾಶಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ನಾಶನಲ್ ಸೈನ್ಸ್ ಫೌಂಡೇಶನ್ ನ ಎಡ್ವರ್ಡ್ ಸೀಡೆಲ್ ಪ್ರಕಾರ ಈ ಗ್ರಹ ಜೀವಿಗಳನ್ನು ಹೊಂದಿದೆ ಎನ್ನುವುದು ತಿಳಿದು ಬಂದರೆ ಮಾನವ ಕಂಡು ಹಿಡಿದ ವೈಜ್ಞಾನಿಕ ವಿಸ್ಮಯಗಳಲ್ಲಿ ಇದು ಪ್ರಮುಖವಾಗುತ್ತದೆ. ಈ ಗ್ರಹ ಭೂಮಿಗಿಂತ ಮೂರು ಅಥವಾ ನಾಲ್ಕು ಪಟ್ಟು ಹೆಚ್ಚು ತೂಕವಿದ್ದು ತನ್ನ ಕಕ್ಷೆಯ ಮೇಲೆ ತಿರುಗುವುದು ಬಹುಶಃ ಅನುಮಾನವಾಗಿದೆ ಹಾಗಾಗಿ ಈ ಗ್ರಹದ ಒಂದು ಭಾಗ ಯಾವಾಗಲೂ ಸೂರ್ಯ (ಅಲ್ಲಿನ ಸೂರ್ಯ..ನಮ್ಮ ಸನ್ ಅಲ್ಲ..ಹಹಹ!!!) ನ ಕಡೆ ಇದ್ದು ಬೆಳಕಿರುತ್ತೆ ಮತ್ತೊಂದು ಪಾರ್ಶ್ವ ಕತ್ತಲಲ್ಲಿ...!! ಇದರಿಂದ ಸೂರ್ಯನೆಡೆಯ ಭಾಗದ ಶಾಖ ಸುಮಾರು 160 ಡಿಗ್ರಿ ಸೆಲ್ಸಿಯಸ್ ಇದ್ದು ಕತ್ತಲ ಭಾಗದಲ್ಲಿ -12 ರಿಂದ 21ಡಿ.ಸೆ. ಇರಬಹುದೆಂದು ಅಂದಾಜಿಸಲಾಗಿದೆ. ಗುರುತ್ವಾಕರ್ಷಣ ಶಕ್ತಿಯಿರುವ ಗ್ರಹವಾಗಿದ್ದು ಇಲ್ಲಿ ಘನಭಾಗವಿದ್ದು ಭೂಮಿಯಂತಿರಬಹುದು ಮತ್ತು ನೀರೂ ಇರಬಹುದು ಎಂದು ಅಂದಾಜಿಸಲಾಗಿದೆ. ಇನ್ನೊಂದು ಅಂಶ ಗೊತ್ತೆ...ಈ ಭೂಮಿ ತನ್ನ ಸೂರ್ಯನಿಂದ ಬಹು ಹತ್ತಿರವಿದ್ದು ಅದರ ಸುತ್ತ ಪ್ರದಕ್ಷಿಣೆಗೆ ಕೇವಲ 37 ದಿನ ಬೇಕಾಗುತ್ತೆ..!!! ಅಂದರೆ ಆ ಭೂಮಿಯ ಒಂದು ವರ್ಷ ನಮ್ಮ 37 ದಿನಕ್ಕೆ ಸಮ....!!!!ಈ ಗಾಗಲೇ ನಮ್ಮ ರಾಜ್ಯದ ಹಲವಾರು ಸಹೋದರರು ಅಪ್ಪ-ಮಕ್ಕಳು ತಮ್ಮ ಅಸ್ಟ್ರೋನಾಟ್ ಸೂಟುಗಳನ್ನ ರೆಡಿಮಾಡಿಸ್ಕೋತಾ ಇದ್ದಾರಂತೆ...ಯಾವುದೇ ಭೂ ಕಾಯಿದೆ ಇಲ್ಲ...ಗಣಿ ಕಾಯಿದೆ ಇಲ್ಲ ಎಲ್ಲಾ ಫ್ರೆಶ್ ಫ್ರೆಶ್...ಯಾರಿಗುಂಟು..ಯಾರಿಗಿಲ್ಲ.....ಜೈ-ಗ್ಲೀಜಿ,,,,,

48 comments:

 1. very interesting sir...... :) ಗ್ಲೀಜಿ ಹೇಗಿರಬಹುದು ? ಅಲ್ಲಿ ಧರ್ಮಗಳ ನಡುವೆ ತಿಕ್ಕಾಟ ಇರಲಿಕ್ಕಿಲ್ಲ.. ಅಲ್ಲಿ ಮಾನವ ಇದ್ದಾರೆ ಅವನನ್ನು ಏನಂತ ಕರೆಯುವುದು ? ವಿದೇಶಿ( ಸರಿಯಾಗಲಿಕ್ಕಿಲ್ಲ ನಮ್ಮ ಭೂಮಿಯವನಲ್ಲವಲ್ಲ )..! ಭೂಮಿಯಿಂದ ಅಲ್ಲಿ ಹೋಗಿ ವಾಸಿಸುವವರನ್ನು ಏನೆಂದು ಕರೆಯುವುದು NRE ?? so many questions are arising now...... wow... ತುಂಬಾ ಒಳ್ಳೆಯ information ಕೊಟ್ಟಿದ್ದಕ್ಕೆ ಧನ್ಯವಾದಗಳು ... :)

  ReplyDelete
 2. ಈ ವಿಚಾರ ಮೊನ್ನೆ ಟೀವಿಯಲ್ಲಿ ನೋಡುತ್ತಿದ್ದಾಗ, ನನಗೂ ಮೊದಲಿಗೆ ಹೊಳೆದಿದ್ದು ಅದೇ, ನೀವು ಕೊನೆಯ ಪ್ಯಾರಾದಲ್ಲಿ ಹೇಳಿದ್ದು. ನಾನಾಗಲೇ ಅ೦ದುಕೊ೦ಡಿದ್ದೆ , ಈ ಕಟ್ಟಾ, ಯೆಡ್ಡಿ, ರೆಡ್ಡಿ ಗಳು ಅಲ್ಲಿಗೂ ಹೋಗಿಒ೦ದಷ್ಟು ಜಾಗಕ್ಕೆ ಬೇಲಿ ಸುತ್ತಿ ತಮ್ಮದು ಅ೦ತ ಎಸ್ಟಾಬ್ಲಿಶ್ ಮಾಡಿ ಬರಬಹುದು ಅ೦ತ. ನಿಮ್ಮ-ನಮ್ಮ ಯೋಚನಾ ಲಹರಿಯ ಸಾಮ್ಯಕ್ಕೆ ಮತ್ತೊಂದು ಪುರಾವೆ.

  ReplyDelete
 3. oLLedaytu sir... raajakaaraNigaLu bega hogtare haha

  ReplyDelete
 4. nice info...
  ಜೈ ಗ್ಲೀಜಿ....

  ReplyDelete
 5. ಅಜಾದಣ್ಣ,
  ಒಳ್ಳೇ ಮಾಹಿತಿ...ಹಾಸ್ಯ ವಿಡ೦ಬನೆಗಳ ಜೊತೆಯಲ್ಲಿ..ಥ್ಯಾ೦ಕ್ಸ್. :)

  ReplyDelete
 6. sooooo sweet nice infarmeshon thank u jalanayana sir......

  ReplyDelete
 7. nimma baraha odi naanoo alli ondu 30x40 site tegedukolluva yochane maaDuttiddene..ha ha..

  belakiruva kade 160 degree C andare alli hogalu kashtavaagabahudu...aadare kattaliruva jaagadalli uLiyabahudu..dinavidee kattalu..sakkat nidde hodeyabahudu...ha ha ha...

  Tumbaa chennaagide Azad bhai..nice info..:)

  ReplyDelete
 8. aadare ondu problem Azad bhai..

  varshakke 37 dina andre namage eeginakinta 10 pattu jaasti varsha aaguttalla....!!!! :(

  ReplyDelete
 9. ನಾನು ಆಗಲೇ ಗಣಿಗಾರಿಕೆ ಪರವಾನಿಗೆಗೆ ಮತ್ತು ಭೂ ಶೋಧನೆಗೆ ಅರ್ಜಿ ಗುಜರಾಯಿಸಲು ತಯಾರಾಗಿದ್ದೇನೆ.

  ReplyDelete
 10. ಒಳ್ಳೆ ಮಾಹಿತಿ .ಜೈ-ಗ್ಲೀಜಿ

  ReplyDelete
 11. ಸೌಮ್ಯ...ಅರೆರೆ ಯಾಕೋ ಎಡವಟ್ಟಾಯ್ತಲ್ಲ...ಏನೆಲ್ಲಾ ಯೋಚನೆ ಮಾಡ್ತಿದ್ದೀರಿ..?? ನಿಮ್ಮ ಆಲೋಚನೆಗಳ ವಾಸನೆ ನಮ್ಮ ಬ್ರದರ್ಸ್ ಗೆ ಅಥವಾ ಅಪ್ಪ-ಮಗನ ಅಪೂರ್ವ ಜೋಡಿಗೆ ಗೊತ್ತಾದರೆ ಕಷ್ಟ...ಹಾಂ ಅಲ್ಲಿ ಹೋಗಿ ಬಂದರೆ ಗ್ಲೀಜಿ ರಿಟರ್ನ್ಡ ಅಂತ ಬೋರ್ಡ ಹಾಕ್ಕೋ ಬಹುದು...ಹ್ಹಹಹಹ

  ReplyDelete
 12. ಹಹಹಹ ಪರಾಂಜಪೆ ಸರ್, ನಿಜ ನೋಡಿ ಸಾಬೀತಾಗ್ತಿದೆ.. ನಿಮ್ಮ ಯೋಚನಾ ಲಹರಿ ನನ್ನ ಲಹರಿಯೊಂದಿಗೆ ನಡೀತಿದೆ ಅಂತ...ಹೌದು ಅಂದಹಾಗೆ ಈ ಮಹಾಶಯರುಗಳು ಹೋಗ್ತಾರೆ ಅಂತ ಗೊತ್ತಾಗಿ ತೇಲಗಿ ಈ ಗಾಗಲೇ ಎಲ್ಲಾ ಪೇಪರ್ಸ್ ರೆಡಿ ಮಾಡಿಕೊಂಡಿದ್ದಾನಂತೆ...ಹಹಹಹ

  ReplyDelete
 13. ಮನಸು ಮೇಡಂ ರಾಜಕಾರಣಿಗಳನ್ನ ಒಟ್ಟಾಗಿ ಪ್ಯಾಕ್ ಮಾಡಿ ಕಳುಹಿಸಿದ್ರೆ ಚನಾಗಿರುತ್ತೆ...ಇಲ್ಲಿ ನಾವಾದ್ರೂ ಸ್ವಲ್ಪ ನೆಮ್ಮದಿಯಿಂದ ಇರಬಹುದು,,,ಏನಂತೀರಿ...?

  ReplyDelete
 14. ಮಯೇಸಣ್ಣ ಜೈ ಗ್ಲೀಜಿ...ಯಾಕೋ ಎಲ್ಲರಗಿಂತ ಮುಂಚೆ ನೀನೇ ಜೈ ಅನ್ನೋದು ಅನುಮಾನಾಸ್ಪದ ಆಗಿದೆ...

  ReplyDelete
 15. ಮನಮುಕ್ತಾ, ಓಹ್ ಇನ್ನೊಬ್ಬಳು ತಂಗಿ ನನಗೆ...ಸರಿ..ಬಿಡು ನಿನಗೆ ಒಮ್ದು 20-30 60x40 ಸೈಟುಗಳನ್ನ ಬರೆದು ಕೊಡ್ತೀನಿ,,,ಹೋಗಿ ಹಾಯಾಗಿರು ಇಲ್ಲ ಬ್ರಾಂಚ್ ಓಪನ್ ಮಾಡ್ಕೋ,,,ಏನಂತೀ...ತಂಗ್ಯಮ್ಮ...???

  ReplyDelete
 16. ಸತೀಶ್, ಇದು ನಿಜ ಅಂದ್ರೆ ಗೊತ್ತಾದ್ರೆ ಹೇಗೆ ಅಲ್ಲಿಗೆ ಹೋಗೋದು ಅನ್ನೋ ಚಿಂತೆ ಈಗಾಗ್ಲೆ ಹಗರಣದಲ್ಲಿ ಸಿಕ್ಕುಹಾಕಿಕೊಂಡಿರೋರಿಗೆ ಯೋಚನೆಯಾಗಿದೆಯಂತೆ....ಹಹಹ

  ReplyDelete
 17. ಡಾಕ್ಟ್ರೇ, ಅಲ್ಲಿನ ಘನವಸ್ತುಗಳ ಗುಣ ನಮ್ಮ ಬೆಳ್ಳಿ ಬಂಗಾರ ವಜ್ರ ಇತ್ಯಾದಿಗೆ ಗಣಿಗೆ ಯೋಗ್ಯ ಅಂತ ಗೊತ್ತಾದ್ರೆ ..ಅಲ್ಲಿ ಏನು ಆಗುತ್ತೋ ಅಂತ ಆತಂಕ ಆಗ್ತಿದೆ ನನಗೆ...ಹಹಹ

  ReplyDelete
 18. This comment has been removed by the author.

  ReplyDelete
 19. ಚೇತನಾ ನಿಮ್ಮ ಆಸಕ್ತಿಗೆ ಸೋತೆ,,,!! ಹಹಹ ಮೊದಲ ಯೋಚನೆ ಮತ್ತೆ ಯೋಚನೆ ಆದ್ರೆ ನೀವು ಬಹ್ರೈನಿನವರು ಎ.ಸಿ ಮಾಡ್ಕೋಬಹುದು 160 ಏನೂ ಹೆಚ್ಚಲ್ಲ....ಆದ್ರೆ ಕತ್ತಲಲ್ಲಿ ಇರೋದು ಸುಲಭ, ನೋಡಿ ಏನು ಮಾಡೊದು ಸಾಧ್ಯಾನೋ...

  ಮತ್ತೆ ಬಂದು ಇನ್ನೊಂದು ಲೇಡೀಸ್ ಗೆ ತುಂಬಾ ಆತಂಕ ತರೋ ವಿಷಯ ಗಮನಕ್ಕೆ ತಂದ್ರಿ ಹಹಹ...ಹೌದು ಒಂದು ವರ್ಷ ಇದ್ರೆ ಹತ್ತು ವರ್ಷ ಇದ್ದ ಹಾಗೆ...ಅಬ್ಬಬ್ಬಾ...ಇದು ಮಾತ್ರಾ ಬೇಡಪ್ಪ ಅಂತೀರಲ್ಲಾ,,,,

  ReplyDelete
 20. ತೇಜಸ್ವಿನಿ...ಧನ್ಯವಾದ...ನಿಮ್ಮ ಅನಿಸಿಕೆಗೆ...

  ReplyDelete
 21. This comment has been removed by the author.

  ReplyDelete
 22. ಗಣಿಗಾರಿಕೆಗೆ ನನ್ನ ಕಡೆಯಿಂದ ನಿಮಗೆ ಶುಭಾಷಯಗಳು....ಜೈ ಗ್ಲೀಜಿ,,,,

  ReplyDelete
 23. ಶಶಿ...ಗ್ಲೀಜಿಗೆ ಒಂದು ಸೈಟ್ ಸೀಯಿಂಗ್ ಟ್ರಿಪ್ ಇಟ್ಕೊಳ್ಳೋ ಪ್ಲಾನ್ ಮಾಡ್ತಿದ್ದೀರಾ..?
  ಶುಭವಾಗಲಿ...ಅಲ್ಲಿ ಎಲ್ಲಾ ಫ್ರೆಶ್ ಅಂತೆ...ಆಕ್ಸಿಜನ್ ಕೆಫೆ ತರಹ ಫ್ರೆಶ್ ಅಂತೆ...ಹಹಹಹ

  ReplyDelete
 24. ಒಳ್ಳೆಯ ಮಾಹಿತಿ ಯುಕ್ತ ಬರಹ,,, ಇದರ ಬಗ್ಗೆ ನಾನು ಪೇಪರ್ ನಲ್ಲಿ ನೋಡಿದ್ದೆ.... ನೋಡೋಣ ಅಲ್ಲಿ ಏನಾದ್ರು,,, ಮಾನವನ ಹೋಲುವ ಜೀವಿಗಳು ಸಿಗಬಹುದೇನೋ ಅಂತ....

  ReplyDelete
 25. ಜಲನಯನ,
  ಈ ಗ್ರಹವು ತನ್ನ ಸುತ್ತಲೂ ತಿರುಗುವದಿಲ್ಲವೆಂದು ತಿಳಿದು ಆಶ್ಚರ್ಯವೆನಿಸಿತು. ಎಲ್ಲ ಗ್ರಹಗಳಿಗೂ ಈ ಒಂದು ಚಲನೆ ಇರುತ್ತದೆ ಎನ್ನುವದು ನನ್ನ ಗ್ರಹಿಕೆಯಾಗಿತ್ತು. ಉತ್ತಮ ಮಾಹಿತಿಗಾಗಿ ಧನ್ಯವಾದಗಳು.

  ReplyDelete
 26. hha hha... sir,
  idaanna noDi kandita yaddi, reddi hogi bandirtaare allige..... illaandre yaarannadru kaLsirtaare.....

  olleya info sir... thank you...

  ReplyDelete
 27. hmm utamavda mahiti addarita lekana sir... nimma koleya eradu salugalu ee lekanavannu matastu uttam giolisive.... innondu visya sir namma yaddi siddalingana group (raghu vjeyendra, katta reddi) yeela seri bari “ಗ್ಲೀಜಿ-581 G” naa full karidi madoke all ready notify- denotify madko bittidarante sir... :)

  ReplyDelete
 28. ಅಧ್ಬುತ ..! ಉತ್ತಮ ಮಾಹಿತಿ ಸರ್

  ReplyDelete
 29. ಒಳ್ಳೆ ನ್ಯೂಸ್ ಕೊಟ್ಟೀದೀರಾ, ನಂಗೂ ಯಾರಾದ್ರೂ ಸ್ಪಾನ್ಸರ್ ಮಾಡುದ್ರೆ ನಾನೂ ಬರ್ತೀನಿ.

  ReplyDelete
 30. ಉತ್ತಮ ಮಾಹಿತಿಯನ್ನು ಒದಗಿಸಿದ್ದೀರಿ ಅಜಾದ್ ಸರ್. "ತನ್ನ ಕಕ್ಷೆಯ ಮೇಲೆ ತಿರುಗುವುದು ಬಹುಶಃ ಅನುಮಾನವಾಗಿದೆ" ಎ೦ದು ತಿಳಿಸಿದ್ದೀರಿ. ಸೌರವ್ಯೂಹದ ಗ್ರಹಗಳಲ್ಲಿ ಅಚಲತೆ ಇರುವುದಿಲ್ಲ ಎ೦ದು ಓದಿದ ನೆನಪು. ಮು೦ದಿನ ದಿನಗಳಲ್ಲಿ ಹೆಚ್ಚು ವಿಚಾರಗಳು ತಿಳಿಯಬಹುದು ಎ೦ದು ಆಶಿಸೋಣ.
  ದನ್ಯವಾದಗಳು
  ಅನ೦ತ್

  ReplyDelete
 31. Thumba interesting :)

  baalyadhalli aakaasha aandre thumba kuthoohala ittu.... aa dhinagaLu nenapaadavu e baraha oduttiddaaga :)

  ReplyDelete
 32. ಅಜಾದ್,

  ಮಾಹಿತಿಪೂರ್ವಕ ಲೇಖನ.

  ಅಲ್ಲಿ ಹೋಗಿ ಗಣಿಗಾರಿಕೆ ಎಂದೊಡನೆ, ಯಾಕೋ ’ಅವತಾರ್’ ನೆನಪಾಯ್ತು..

  ReplyDelete
 33. ಗುರು ನೀರಿನಂತಹ ದ್ರಾವಣದ ಸಾಧ್ಯತೆ ಇದೆ ಎನ್ನುತ್ತಾರೆ...ಹಾಗಾಗಿ ಜೀವ ಇರಲೂಬಹುದು ಎನ್ನುವ ಶಂಕೆ...ಧನ್ಯವಾದ...

  ReplyDelete
 34. ಸುನಾಥಣ್ಣ...ಹೌದು ನನಗೂ ನಿಮ್ಮಷ್ಟೇ ಆಶ್ಚರ್ಯ ಅಯ್ತು ಈ ಗ್ರಹ ತನ್ನ ಕಕ್ಷೆಯಲ್ಲಿ ಸುತ್ತೊಲ್ಲ ಅನ್ನೋದಕ್ಕೆ...ಹಲವಾರು ಇಂತಹ ಅಥವಾ ಇನ್ನೂ ದೊಡ್ಡ ಗ್ರಹಗಳೂ ಕಣ್ಣಿಗೆ (ನಮ್ಮ ಟೆಲಿಸ್ಕೋಪ್ ಕಣ್ಣಿಗೆ) ಬಿದ್ದಿರ್ಲಿಲ್ಲ..ಆದ್ರೆ ಈಗ ಹೊಸ ಜನರೇಶನ್ ಟೆಲಿಸ್ಕೋಪ್ ಹೈ ಆಕ್ಯುರೆಸಿ ರೇಡಿಯಲ್ ವೆಲಾಸಿಟಿ ಸ್ಯಾಟಲೈಟ್ ಸರ್ಚರ್ (HARPS) ಅನ್ನು ಚಿಲಿಯ ಲಾ ಸಿಲಾ ಪರ್ವತದ ಮೇಲೆ ಸ್ಥಾಪಿಸಿದ ನಂತರ ತುಂಬಾ ಚಿಕ್ಕ ಆಕಾಶಕಾಯಗಳು ಕಾಣಲಾರಂಭಿಸಿವೆಯಂತೆ....ಬಹುಶಃ ಇದರ ಮೂಲಕ ಈ ಗ್ರಹ ಸುತ್ತುವುದಿಲ್ಲ ಎನಿಸಿರಬಹುದೇ...?
  ಆದ್ರೆ ಇಂತಹ ಹಲವಾರು ಗ್ರಹಗಳು ಇರಬಹುದೆಂದು ಅಂದಾಜಿಸಲಾಗುತ್ತಿರುವುದು ಇನ್ನೂ ಸೋಜಿಗದ ಸಂಗತಿ...
  ಸುನಾಥಣ್ಣ ಈ ಲಿಂಕನ್ನು ನೋಡಿ
  http://www.time.com/time/health/article/0,8599,1815406,00.html

  ReplyDelete
 35. ದಿನಕರ್...ಚಡ್ಡಿಯನ್ನು ಉದುರಿಸೋ ಬುದ್ಧಿಯೊರೋ ಜೀವಿಗಳೂ ಅಲ್ಲ್ಲಿ ಇರಬಹುದು ಅನ್ನೋ ಶಂಕೆಯೂ ಇದೆ...ಯಾವುದಕ್ಕೂ ಒಂದಿಬ್ಬರು ಹೋಗಿ ಬಂದರೆ ಗೊತ್ತಾಗುತ್ತೆ....ಹಹಹಹ

  ReplyDelete
 36. ತರುಣ್
  ಧನ್ಯವಾದ...೨೦ ಪ್ರಕಾಶವರ್ಷ.... ನಮ್ಮ ಜೀವನ ಸಮಯ ಸಾಕಾಗೊಲ್ಲ...ಹಹಹ

  ReplyDelete
 37. ಮಂಜು...ಒಮ್ದು ಟ್ರಿಪ್ ಹಾಕಿಬಿಡೋಣ ಏನಂತೀಯ...?

  ReplyDelete
 38. ಸತೀಶ್...ಸ್ಪಾನ್ಸರ್ ಹುಡಿಕ್ಕೊಂಡ್ ಕೂತ್ರೆ ಕೆಲ್ಸ ಸಾಗೊಲ್ಲ ...ಲಿಫ್ಟ್ ತಗೊಳ್ಳಿ ರೆಡ್ಡಿಗಳು ಹೊರಟಿದ್ದಾರೆ....

  ReplyDelete
 39. ಅನಂತ್ ರಾಜ್ ಸರ್...ಹೌದು ಇದು ಬಹುಪಾಲು ತಿರುಗದ ಗ್ರಹವಂತೆ...
  ಆದರೆ ಇದು ಇರುವುದು ೨೦ ಪ್ರಕಾಶ ವರ್ಷ ದೂರ ಅಂದರೆ 9,500,000,000,000 x 20 ಕಿ.ಮೀ. ದೂರ...!!! ನಮ್ಮ ಅತಿವೇಗದ ರಾಕೆಟ್ ಕ್ರಮಿಸೋ ದೂರ ೪೫೦೦ ಮೈಲಿ ಪ್ರತಿ ಘಂಟೆಗೆ...ಅಂದರೆ 20 ಪ್ರಕಾಶ ವರ್ಷ ಕ್ರಮಿಸಲು ನಾವು ಊಹಿಸಲೂ ಸಾಧ್ಯವಿಲ್ಲ...ಸ್ಥೂಲವಾಗಿ ಹೇಳುವುದಾದರೆ ನಮ್ಮ ರಾಕೆಟ್ ಗೆ ಪ್ರಕಾಶ ಸೆಕೆಂಡ್ ಕ್ರಮಿಸಲು ಎರಡು ದಿನ ಬೇಕು....ಬಿಡಿ...ನಮ್ಮ ಜೀವಿತಾವಧಿಯೇ...ಸಾಲದು...

  ReplyDelete
 40. ಸುಧೇಶ್ ಧನ್ಯವಾದ...ಇದು ನೆಟ್ ನಲ್ಲಿ ಅತಿ ಹೆಚ್ಚು ಹುಡುಕಾಟದ ವಿಷಯವಾಗಿದೆಯಂತೆ...ಹಹಹಹ

  ReplyDelete
 41. ಅಪ್ಪ-ಅಮ್ಮ ನಿಗೆ ಧನ್ಯವಾದ....ಹೌದು...ನಿಮ್ಮ ಮಾತು ನಿಜ,,,

  ReplyDelete
 42. ಜೈ-ಗ್ಲೀಜಿ.. :))

  ReplyDelete
 43. ಶ್ರವಣ್ ಜಯ್ ಗ್ಲೀಜಿ....ನಮ್ಮ ಶಾಸಕರು ಅಲ್ಲಿಗೆ ಹೋಗ್ಬೇಕು ಅಂತ ಇದ್ದರಂತೆ...ಹಹಹಹ್

  ReplyDelete
 44. ಗ್ಲೀಜಿಯ೦ಥಾ ವಾಸತಾಣವನ್ನು ಪರಿಚಯಿಸಿ ಸೈಟು ಕೊಡಿಸುವ ಆಶ್ವಾಸನೆಯನ್ನೂ ಕೊಡುತ್ತಿದ್ದೀರಿ! ೧೬೦ಡಿಗ್ರಿ ಗೆ ಹೊ೦ದಿಕೊಳ್ಳಲು practice ಮಾಡಿಕೊಳ್ಳಬೇಕು ಅಷ್ಟೇ! ಮಾಹಿತಿ ಪೂರ್ಣ ಲೇಖನಕ್ಕಾಗಿ ಧನ್ಯವಾದಗಳು. ನನ್ನ ಬ್ಲಾಗ್ ಗೆ ಒಮ್ಮೆ ಭೇಟಿ ನೀಡಿ.

  ReplyDelete
 45. ಪ್ರಭಾಮಣಿಯವರೇ...ಧನ್ಯವಾದ ನಿಮ್ಮ ಜಲನಯನದ ಭೇಟಿಗೆ...ಹಾಗೇ ನಿಮ್ಮ ಪ್ರತಿಕ್ರಿಯೆಗೆ...ಖಂಡಿತಾ ಬರ್ತೇನೆ,,,ಈಗ ಲಿಂಕ್ ಸಿಕ್ಕಿದೆಯಲ್ಲಾ ...ಸೇವ್ ಮಾಡ್ಕೋತೇನೆ...

  ReplyDelete
 46. Azad sir,

  Tumbaa uttama lekhana, upayukta maahiti, ee kudure vyaparada raajakaranigalu Goa Chennai resort badalige illige hogbekittu alva???

  ReplyDelete