Saturday, October 9, 2010

ತೋರು ನಾಡು ದೇಶ ಏನೆಂದು

ಚಿತ್ರ ಕೃಪೆ: http://www.tailoredtanning.co.uk/vitamind.htm


ನೇಸರನೇರುವತ್ತ ಕತ್ತಲು ಸರಿಯುತಿದೆ
ಎಲ್ಲೋ ಯಾರೋ ಮಲಗಿ ಏಳುವಂತಿದೆ
ಘೋರವರಿತ ಬೆಚ್ಚಿಕನಸ ಕರಗುವಂತಿದೆ
ಎತ್ತಲೆತ್ತಲೋ ಇತ್ತು ಕತ್ತಲುರುಳುವಂತಿದೆ

ಸೂರ್ಯಹೊರಳಲು ಸಾಕು ನರಿ ಊಳಿಡಲು
ತೋಳಗಳ ಹಿಂಡು ಕುರಿದೊಡ್ಡಿಗೆ ನುಸುಳಲು
ನಾಯಿಗಳು ಮಲಗಿವೆ ತಿಂದು ಕವಿದು ಅಮಲು
ತಿಂದ ಧಣಿಗಳು ಮತ್ತೆ ತಿನ್ನಲೆಂದೇ ಬಿಟ್ಟು ಬಿಳಲು

ಕೊಟ್ಟು ಮತ ಆಸೆ ಆಮಿಶವೆಲ್ಲಕೆ ಬಲಿಯಾಗಿ ಅಂದು
ನಿಮ್ಮ ನಿಂತ ನೆಲಕುಸಿಯೆ ಸರಿಯಿಲ್ಲವೇ ಇಂದು?
ವಿದ್ಯೆವಿವೇಕವಿದ್ದೂ ಅವಿವೇಕಿಯ ಗೆಲಲು ಬಿಟ್ಟದ್ದು
ರೈತನ ಕೊಲುವರು ಗಣಿ ಅರಣ್ಯ ದೋಚುವರೆನ್ನುವುದು
ಹೊಣೆಗೇಡಿತನಕ್ಕೆಡೆಯಿಲ್ಲ ಅಳುವುದು ಸಲ್ಲ, ಬಿದ್ದರೆ ಗುದ್ದು

ಏನಿಲ್ಲ ನಮ್ಮಲ್ಲಿ, ಬುದ್ಧಿ, ಶಕ್ತಿ, ನಿಸರ್ಗ ಸಂಪತ್ತು?
ಎಂತಹ ವಿಪತ್ತಿಗೂ ಇದೆ ಎದೆಯೊಡ್ಡುವ ತಾಕತ್ತು
ಎಲ್ಲ ಶಕ್ತಿ ಒಟ್ಟುಗೂಡಿಸುವ ಯೋಜನೆಯೊಂದು ಸಾಕು
ಕತ್ತಲಜೊತೆ ಗುದ್ದಾಟ, ಸಾಕು ನಿರಂತರ ಕಸರತ್ತು
ತಡಬೇಡ ತಿಳಿಯಲಿ ನಾಡು ದೇಶ ಏನೆಂದು ಜಗತ್ತು

49 comments:

  1. ಅಜಾದ್ ಸರ್;ಪ್ರಸ್ತುತ ರಾಜಕೀಯ ವಿದ್ಯಮಾನಗಳಿಗೆ ಕನ್ನಡಿ ಹಿಡಿದಂತಿದೆ ನಿಮ್ಮ ಕವನ.ಧನ್ಯವಾದಗಳು.

    ReplyDelete
  2. ಸರ್, ಕವನ ಚೆನ್ನಾಗಿದೆ ವಾಸ್ತವ ರಾಜಕೀಯತೆ ಎದ್ದು ತೋರುತ್ತಿದೆ.... ಬುದ್ದಿ ಇದ್ದರೂ ಹೇಳಿಕೆ ಮಾತು, ಹಣ ಎಲ್ಲವೂ ಕೆಲಸ ಮಾಡುತ್ತೆ. ಈ ರಾಜಕೀಯದಿಂದ ಕರ್ನಾಟಕದ ಜನತೆಗೆ ನಷ್ಟವೇ ಹೊರತು... ರಾಜಕಾರಣಿಗಳಿಗಲ್ಲ.....

    ReplyDelete
  3. ಈಗಿನ ರಾಜಕೀಯ ಎದ್ದು ತೋರುತ್ತಿದೆ ನಿಮ್ಮ ಕವನದಲ್ಲಿ....
    ಬೊಂಬಾಟ್...

    ReplyDelete
  4. ಸದ್ಯದ ರಾಜಕೀಯದಿಂದ ನಾವು ಅನುಭವಿಸುತ್ತಿರುವ ವ್ಯಥೆ ನಿಮ್ಮ ಕವನದಲ್ಲಿ ಬಿಂಬಿಸಿದೆ.
    ಎಲ್ಲ ರಾಜಕಾರಣಿಗಳು ನರಮಾಂಸಭಕ್ಷಕ ಪಿಶಾಚಿಗಳೇ ಆದಾಗ, ಪ್ರಜೆಗಳಿಗೆ ರಕ್ಷಣೆ ಹೇಗೆ ಸಾಧ್ಯ, ಜಲನಯನ?

    ReplyDelete
  5. ಅಜಾದ್,
    ಈಗಿನ ನರಿ-ತೋಳಗಳಿಗೆ ಸೂರ್ಯ ಹೊರಳುವವರ್ಗೂ ಕಾಯುವ ಅಗತ್ಯವಿಲ್ಲ ! ಎಲ್ಲವೂ ಹಾಡೇ ಹಗಲೇ... ನಡೆಯುತ್ತಿರುವಾಗ ಹಗಲೇನು ? ಇರುಳೇನು ?
    ಆದರೆ, ನಾಡು , ದೇಶ ಏನೆಂದು ತೋರುವವರ ಅಗತ್ಯವಿದೆ. ಹಗಲಿರುಳೆನ್ನದೆ ಕಂಡ ಕಂಡಿದ್ದೆಲ್ಲ ಹರಿದು ತಿನ್ನಲು ಕಾಯುತ್ತಿರುವ ತೋಳಗಳ ಗುಂಪನ್ನು ಎದುರಿಸಿ ಓಡಿಸುವ ಎದೆಗಾರಿಕೆ ಬೇಕಾಗಿದೆ

    ReplyDelete
  6. ಅಜಾದ್ ಸರ್, ನಿಮ್ಮ ಭಾವನೆಗಳಿಗೆ ನಮ್ಮ ಬೆ೦ಬಲವಿದೆ.

    ಅನ೦ತ್

    ReplyDelete
  7. ಡಾಕ್ಟ್ರೇ ಥ್ಯಾಂಕ್ಸ್ ನಿಮ್ಮ ಅಭಿಮತಕ್ಕೆ..ಹೇಸಿಗೆ ಎನಿಸುತ್ತೆ ನಮ್ಮ ಜನಪ್ರತಿನಿಧಿಗಳು ನಡೆದುಕೊಳ್ಳುವ ರೀತಿ ನೋಡಿ...ಅಲ್ಲವೇ...? ಇನ್ನೂ ಎಲ್ಲಿಗೆ ಮುಟ್ಟುತ್ತೋ..?

    ReplyDelete
  8. ಮನಸು ಮೇಡಂ ಪ್ರತಿ ಸರ್ತಿಯ ನಮ್ಮ ಕನ್ನಡ ರಾಜ್ಯೋತ್ಸವ ನಡೆಯಬೇಕೆನ್ನುವಾಗ ಏನಾದರೂ ಒಂದು ನಡೆದಿರುತ್ತೆ ನಾಡಿನಲ್ಲಿ...

    ReplyDelete
  9. ಮಹೇಶ್ ನಾಳೆಯ ಗತಿವಿಧಿಗಳಾದ ಮೇಲೆ ...ನಾಡಿನಲ್ಲಿ ನೆಮ್ಮದಿ ನೆಲಸಿದರು ಸಾಕು,,,ಧನ್ಯವಾದ ಅನಿಸಿಕೆಗೆ

    ReplyDelete
  10. ಸುನಾಥಣ್ಣ...ಯಾರನ್ನು ನಂಬುವುದು ಯಾರ ಆಶ್ರಯಿಸುವುದು...?
    ಯಾರಿಗೆ ಯಾರುಂಟು ಎರವಿನ ಸಂಸಾರ ಹಾಡು ..ಈಗಿನ ಸ್ಥಿತಿಗೆ ಉತ್ತಮ ..ಹೊಂದುತ್ತೆ..

    ReplyDelete
  11. ಚಿತ್ರಾ ನಿಜ ನಿಮ್ಮ ಮಾತು...ನಮ್ಮಲ್ಲಿ ನಿಜ ಕಾಳಜಿ ತೋರಿಕೆ ಕಾಳಜಿಯ ಮಧ್ಯೆಯ ವ್ಯತ್ಯಾಸ ಗುರುತಿಸುವ ಶಕ್ತಿ ಬಂದ ದಿನ ವ್ಯ್ವವಸ್ಥೆ...ಸರಿಮಾಡಬಹುದಾದ ಪ್ರಯತ್ನಕ್ಕೆ ಬಲ ಬರುತ್ತೆ

    ReplyDelete
  12. ಅನಂತ್ ಸರ್...ಧನ್ಯವಾದ ನಿಮ್ಮ ದನಿ ನಮ್ಮ ದನಿ ಎಲ್ಲ ದನಿಗಳ ಸ್ವರ ಒಂದೇ ಆದಾಗ ಎಲ್ಲ ಸಾರ್ಥಕವಾಗುವುದರಲ್ಲಿ ಸಂಶಯವಿಲ್ಲ

    ReplyDelete
  13. ರಾಜಕೀಯ ನಾಟಕಗಳನ್ನು ನೋಡಿದ್ರೆ ಯಾರು ಸಭ್ಯರೆಂಬುದೇ ಹೇಳಕ್ಕಾಗೊಲ್ಲ.ರಾಜಕೀಯ ನಾಟಕಗಳನ್ನು ನೋಡಿದ್ರೆ ಯಾರು ಸಭ್ಯರೆಂಬುದೇ ಹೇಳಕ್ಕಾಗೊಲ್ಲ..ನಿಮ್ಮ ಕಡೆಯ ಪ್ಯಾರಾ ಅರ್ಥವತ್ತಾಗಿದೆ!!ನಾಡನ್ನು ಕಾಪಾಡುವ ಸ್ಥಿತಿಗೆ ಯಾರು ಹೊಣೆಗಾರರು ಅಂತ ತಿಳಿತಿಲ್ಲ!!

    ReplyDelete
  14. ಸುಮನಾ.ನಿಮ್ಮ ಬರೋಣಕ್ಕೆ ನನ್ನ ನಮನ....ಖಂಡಿತಾ ಇದು ಮೌಲ್ಯಗಳ ಅದಃ ಪತನವೇ ಸರಿ...ಹೇಗಾದರೂ ಸರಿ ಅಧಿಕಾರ ಹಿಡಿಯಬೇಕು...!!
    ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  15. ಕವನದ ಸಾಲುಗಳು ತುಂಬಾ ಸೊಗಸಾಗಿ ಮೂಡಿಬಂದಿವೆ ಈಗಿನ ರಾಜಕೀಯದ ಸ್ತಿತಿ -ಗತಿಗಳನ್ನು ಅರಿಯುವಂತಿವೆ ನಿಮ್ಮ ಸಾಲುಗಳು . ಅಷ್ಟೂ ವಿಷಯವನ್ನು ಕೇವಲ ನಾಲ್ಕು ವಾಖ್ಯ ಗಳಲ್ಲಿ ತಿಳಿ ಹೇಳಿದ್ದಕ್ಕೆ ಧನ್ಯವಾದಗಳು

    SATISH N GOWDA

    http://nannavalaloka.blogspot.com/

    ReplyDelete
  16. ಚನ್ನಾಗಿ ಮೂಡಿ ಬಂದಿದ್ದೆ ಸರ್ ಕವನ

    ಶುಭವಾಗಲಿ

    ReplyDelete
  17. ಸರ್,
    ಸುಂದರ, ಅರ್ಥಪೂರ್ಣ, ಭಾವಪೂರ್ಣ ಕವನ. ವಾಸ್ತವ್ಯಕ್ಕೆ ಕನ್ನಡಿ ಹಿಡಿದಂತಿದೆ

    ReplyDelete
  18. nice kavana... samayakke takka kavana

    ReplyDelete
  19. ಇಂದು ನಮ್ಮ ದೇಶದ ಸ್ಥಿತಿಯನ್ನು ಕವಿತೆಯಲ್ಲಿ ಬಿಂಬಿಸಿದ್ದೀರಿ.ಅದ್ಭುತ ಕವಿತೆ ಸುಂದರ ಸೂರ್ಯಾಸ್ತದ ಚಿತ್ರ . ನಿಮ್ಮ ಕವಿತೆಯ ಆಶಯ ನಮ್ಮದೂ ಕೂಡ ಆಗಿದೆ.

    ReplyDelete
  20. ನಿಜ.. ನಿಜ.. ಈಗಿನ ರಾಜಕೀಯಕ್ಕೊ೦ದು ಕನ್ನಡಿ ಹಿಡಿದ ಹಾಗಿದೆ.

    ReplyDelete
  21. ಆಜಾದ್ ಸರ್ , ಬಹಳ ಇಷ್ಟವಾಯಿತು, ನಿಮ್ಮ almost ಪ್ರಾಸಬದ್ಧ ಕವನವನ್ನೂ ನೋಡಿ ಖುಷಿಯಾಯಿತು, ರಾಜಕೀಯ ಬಿಡಿ, ಇವತ್ತು ಕಂಡಿದ್ದೇ ? ಇವತ್ತಂತೂ ನೋಡಿದಿರಲ್ಲ ? ಕವನ ಚೆನ್ನಾಗಿದೆ, ಧನ್ಯವಾದಗಳು

    ReplyDelete
  22. ಸತೀಶ್ ಧನ್ಯವಾದ ರೀ...ಇದು ನಮ್ಮ ವ್ಯವಸ್ಥೆ ಇದರ ಅವಸ್ಥೆಯೂ ನಮ್ಮದೇ ಅಲ್ಲವಾ..? ಧನ್ಯವಾದ ಪ್ರತಿಕ್ರಿಯೆಗೆ

    ReplyDelete
  23. ಮಂಜು...ನಿನ್ನ ಮಾತಿಗೆ ನನ್ನ ಅನುಮೋದನೆ...ಥ್ಯಾಂಕ್ಸು ..ಕಾಮೆಂಟಿಗೆ..

    ReplyDelete
  24. ಅಶೋಕ್ ದೊಂಬರಾಟದ ಕುಣಿತ ನಾವೇ ಪ್ರಾರಂಭಿಸಿದ್ದು ಕುಣಿಯಬೇಕು ಅನಿವಾರ್ಯ...ಹಹಹ ಧನ್ಯವಾದ ಪ್ರತಿಕ್ರಿಯೆಗೆ

    ReplyDelete
  25. ಮನಸು ಮೇಡಂ ಈ ಮಧ್ಯೆ ಬಹಳ ಬ್ಯುಸಿ ಆಗಿಬಿಟ್ರಿ...ಹೊಸತು ನಿಮ್ಮ ಮನಸಲ್ಲಿ ಕಾಣ್ಲಿಲ್ಲ....ಬಿಡಿ ರಾಜಕೀಯ ಜಟಾಪಟಿ ಇದ್ದದ್ದೆ... ಧನ್ಯವಾದ ಪ್ರತಿಕ್ರಿಯೆಗೆ

    ReplyDelete
  26. ಬಾಲು ಸನ್ ಡೇ ಸ್ಪೆಷಲ್ ಜೋರಿತ್ತಾ ಪ್ರಕಾಶನ ಮನೆಲಿ... ಧನ್ಯವಾದ ಪ್ರತಿಕ್ರಿಯೆಗೆ..ನಿಮ್ಮ ಮಾತು ನಿಜ,,,ಇರೋ ವಿಷಯ ಎಲ್ಲೂ ಬೇರೆ ಏನಿಲ್ಲ ಎಲ್ಲಾ ಒಂದೇ...

    ReplyDelete
  27. ಮನಮುಕ್ತಾ ನಿಮ್ಮ ಮುಕ್ತ ಅಭಿಪ್ರಾಯಕ್ಕೆ ನನ್ನ ಸಹಮತ,,, ಧನ್ಯವಾದ ಪ್ರತಿಕ್ರಿಯೆಗೆ..

    ReplyDelete
  28. ವಿ.ಆರ್.ಬಿ ಸರ್...ಪ್ರಾಸಕ್ಕೆ ನಾನು ಹೆಚ್ಚು ಅಂಟಿಕೊಂಡೆ ಎನಿಸ್ವುದೇ ನಿಮಗೆ..? ಇದರಿಂದ ವ್ಯತ್ಯಯ ಭಾವ ಪ್ರಕಟಣೆಯಲ್ಲಿ ಆಗುತ್ತಿದೆ ಎನ್ನುವುದಾದ್ರೆ ಖಂಡಿತಾ ತಿಳಿಸಿ ನಿಮ್ಮಂತಹ ತಿದ್ದುವ ಆತ್ಮೀಯರು ಸಿಗುವುದು ಅಪರೂಪ...ಅಂದಹಾಗೆ ಹೌದು ಅದೊಂದು ಅತಿ ಘೋರ...ನಾಡು ತಲೆ ತಗ್ಗಿಸಬೇಕು,,,ನಾಡ ಮಕ್ಕಳಿಂದ...ಮನ ಚೀರುತ್ತೆ...ನಿಮ್ಮ ಮುಕ್ತ ಅಭಿಮತಕ್ಕೆ ಧನ್ಯವಾದ

    ReplyDelete
  29. ನಮ್ಮಲ್ಲಿ ಎಲ್ಲಾ ಇದೆ. ಸರಿಯಾದ ಬಳಕೆಯಾಗುತ್ತಿಲ್ಲ. ರಾಜಕೀಯ ಇಚ್ಛಾಶಕ್ತಿ ಕೊರತೆ, ನಾನು, ನನಗೆ ಮಾತ್ರ ಎಂಬ ಸ್ವಾರ್ಥ ಇರುವುದರಿಂದ ಯಾವ ಅಭಿವೃದ್ಧಿಯಾಗುತ್ತಿಲ್ಲ

    ReplyDelete
  30. ಅಜಾದ್ ಅವರೇ,

    ಪ್ರಸ್ತುತ ವಿದ್ಯಮಾನಗಳ ಕನ್ನಡಿಯಂತೆ ಇದೆ ನಿಮ್ಮ ಕವನ..

    ಎಲ್ಲಾ ಇದ್ದರೂ ಇಚ್ಚಾ ಶಕ್ತಿ ಇಲ್ಲದಿದ್ದರೆ ಆಗುವುದೇನು ಎನ್ನುವುದಕ್ಕೆ ನಾಡು ನೋಡಿದ ಘಟನೆಗಳೇ ಸಾಕ್ಷಿ

    ReplyDelete
  31. ದೇಶದ ಸ್ಥಿತಿ ಗತಿ ಎಲ್ಲಿ ವಿಚಾರಿಸಿದರೂ ಕೊನೆಗೆ ಬರುವುದು ರಾಜಕೀಯಕ್ಕೆ

    ರೋಸಿ ಹೋಗಿದೆ ಇವರ ಕಣ್ಣು ಮುಚ್ಚಾಲೆ ಆಟ ಅಲ್ಲವೇ ಸರ್?

    ReplyDelete
  32. ದೀಪಸ್ಮಿತಾವ್ರೆ...ಧನ್ಯವಾದ ನಿಮ್ಮ ಅನಿಸಿಕೆಗೆ ಪ್ರತ್ಯುತ್ತರ ಬರೆಯುವ ವೇಳೆಗೆ ಮತೆ ೧೪ ಕ್ಕೆ ದೊಂಬರಾಟದ ಶೋ ಅಂತೆ...ಮದಾಡಿ ಮಹರಾಜರು ಠರಾವು ಹೊರಡಿಸಿದ್ದಾರೆ...

    ReplyDelete
  33. ಅಪ್ಪ-ಅಮ್ಮರಿಗೆ ಧನ್ಯವಾದ...ಯಾರಿಗೆ ಯಾರಿಂಟು...ನೀರಮೇಲಣ ಗುಳ್ಲೆ ಆಗ್ತಿದೆ ಮೌಲ್ಯವಿರುವ ರಾಜಕಾರಣ...

    ReplyDelete
  34. ಡಾಕ್ಟ್ರೇ...ಬಹಳ ಬೇಜಾರಾಗುತ್ತೆ ...ತಲೆ ತಗ್ಗಿಸ್ಬೇಕು...ಬೇರೆಯವರು ..ಏನಪ್ಪಾ ನಿಮ್ಮ ಕರ್ನಾಟಕದಲ್ಲಿ ಹೀಗಾಡ್ತಾ ಇದ್ದಾರೆ...ಅಂತ ವ್ಯಂಗ್ಯ ಮಾಡಿದ್ರೆ...ಛೇ ಅನ್ಸುತ್ತೆ...its the same rotten system

    ReplyDelete
  35. ಸಕಾಲಿಕ ಹಾಗೂ ವೈಚಾರಿಕ..ಕವನ
    ..ನನ್ನ ಮನಸಿನಮನೆ'ಗೆ ಬನ್ನಿ..

    ReplyDelete
  36. ಅಜಾದ್,

    ಸದ್ಯದ ರಾಜಕೀಯ ವ್ಯಕ್ತಿಗಳ ಆಟಗಳನ್ನು ನೋಡಿದರೆ ಅವರಿಗೆ ಸ್ವಲ್ಪವಾದರೂ ಮಾನ ಮರ್ಯಾದೆ ಇದೆಯಾ ಅನ್ನಿಸುತ್ತದೆ. ಅವರ ದೊಂಬರಾಟ ಮತ್ತು ಅದರಿಂದ ನಮ್ಮ ದೇಶಕ್ಕೆ ಒದಗಿದ ಸ್ಥಿತಿಯನ್ನು ಕವನದಲ್ಲಿ ಚೆನ್ನಾಗಿ ಬರೆದಿದ್ದೀರಿ..

    ReplyDelete
  37. ಗುರು...ಧನ್ಯವಾದ ಹೌದು...ಇನ್ನೂ ನಾಟಕ ಬಹಳ ನಡಿಯೋದಿದೆ...

    ReplyDelete
  38. ದಿವ್ಯಾ...ನಿಜವಾಗಿಯೂ ಹೇಳ್ತಿದ್ದೀಯಾ...ನನಗೆ ಡೌಟು...ಹಹಹ...ಚಿತ್ರ ಚನಾಗಿದೆ ಅಂದ್ರೆ ,,ಅದು ಮೂಲಕ್ಕೆ ಸಲ್ಲಿಸ್ತೀನಿ ಬಿಡು

    ReplyDelete
  39. ಧನ್ಯವಾದ ಶಿವು...ಎಲ್ಲ ಮಾಯವೋ ಜಗವೇ ಮಾಯವೋ...ಹಹಹಹ್ ದೊಂಬರಾಟ ಇನ್ನೂ ಎಲ್ಲಿವರೆಗೆ ಸಾಗುತ್ತೋ ಸುಮ್ಮನೆ ನೋಡೋದಷ್ಟೇ ನಮ್ಮ ಭಾಗ್ಯ...

    ReplyDelete
  40. ರಾಜಕೀಯ ದೊಂಬರಾಟವೇ ಹೌದು........
    ಚೆನ್ನಾಗಿ ಹೇಳಿದ್ದೀರಾ, ಆದರೆ ಅವರಿಗೆಲ್ಲಿ ಅರ್ಥವಾಗುತ್ತೆ?

    ReplyDelete
  41. ಈಗಿನ ರಾಜಕೀಯ ಎದ್ದು ತೋರುತ್ತಿದೆ ನಿಮ್ಮ ಕವನದಲ್ಲಿ....
    ಬೊಂಬಾಟ್...

    ReplyDelete
  42. ಪ್ರವೀಣ್...ವಿಪರ್ಯಾಸ ಎನಿಸೋದು..ಇದೇ ಸರ್ಕಾರ ಆಮಿಷ ಒಡ್ಡಿ ಹಲವಾರಿ ವಿಪಕ್ಷ ಆಯ್ಕೆಯಾದ ಸದಸ್ಯರನ್ನು ರಾಜೀನಾಮೆಕೊಡಿಸಿ ಆಪರೇಶನ್ ಮಾಡಿ ಈಗ ಆದ್ದದ್ದು ಅನ್ಯಾಯ ಅಧರ್ಮ ಎನ್ನುವುದು..ಹೆಂಡಕುಡಿದವ ರಮ್ ಕುಡಿದವನ್ನ ಕುಡುಕ ಅನ್ನೊಹಾಗಿದೆ...ಹಹಹಹ....ಧನ್ಯವಾದ ಪ್ರತಿಕ್ರಿಯೆಗೆ

    ReplyDelete
  43. ವಸಂತ್ ನಿಜ ಇದಕ್ಕೆ ನೀತಿ ನೇಮ ಯಾವುದೂ ಇಲ್ಲ...ಆಡಿದ್ದೇ ಆಟ..ಮಾಡಿದ್ದೇ ಮಾಟ...ಧನ್ಯವಾದ

    ReplyDelete
  44. ಸತೀಶ್...ಹೊಲಸು ಎಲ್ಲಿದೆ ಅಂದ್ರೆ ವಿಧಾನಸೌಧದಲ್ಲಿದೆ ಅನ್ನೋ ನಂಬಲಸಾಧ್ಯ ಉತ್ತರ ಕೊಡಬೇಕಾಗಿದೆ..

    ReplyDelete
  45. azad sir... super agide sir... indina namma rajakaranigalu, avara 3 bitta nadate galinda, namma desha, samajakke odagiruva stitiyannu chenagi tumba novinda heliddiri ansutte sir..

    chenagide... :)

    ReplyDelete
  46. ತರುಣ್ ಮೂರೂ ಬಿಟ್ಟವರು ಎಲ್ಲವನ್ನೂ ಬಿಡ್ತಾರೆ ಅನ್ನೋದಕ್ಕೆ ಮೊನ್ನೆ ನಡೆದ ವಿ.ಸೌ.ವಿ.ವಿ. ಸಾಕ್ಷಿ....ಹಹಹ...ಅಲ್ವಾ...? ಯವ್ವಿ ಯವ್ವಿ ಯವ್ವಿ...ಇದೇನು ಯಾವ ವಿ.ವಿ. ಅಂದ್ಕೋಬೇಡಿ..ಇದು ವಿಧಾನ ಸೌಧ ವಿವಿಧ ವಿನೋದಾವಳಿ....

    ReplyDelete
  47. ತುಂಬಾ ಮಾರ್ಮಿಕವಾಗಿ ಮತದಾರನನ್ನು ಅವನ ಪ್ರಾರಬ್ಧಕ್ಕೆ ಅವನು ಹೇಗೆ ಕಾರಣ ಎನ್ನುವದನ್ನು ಕವನಿಸಿ, ಮುಂದಿನ ಎಚ್ಚರಿಕೆಯ ದಾರಿ ಸೊಗಸಾಗಿ ವಿವರಿಸಿದ್ದೀರಿ.

    ReplyDelete
  48. ಅಜಾದ್ ಸರ್,
    ಕವನದ ಆಶಯ ಬಹಳ ಬಹಳ ಇಷ್ಟವಾಯ್ತು. ಇದು 2010 ರ ಕವನವಾದರು ಈಗಿನ ಸಧ್ಯ ಸ್ಥಿತಿಗೂ ಅಷ್ಟೇ ಸೂಕ್ತ. ಬಹುಶ ಇದನ್ನ ಐವತ್ತು ವರ್ಷಗಳ ಹಿಂದೆ ಬರೆದಿದ್ದರು ಪರಿಸ್ಥಿತಿ ಹೀಗೆ ಇದ್ದು ಆ ಸ್ಥಿತಿಗೂ ಸೂಕ್ತವಾಗಿರುತ್ತಿತ್ತೇನೋ!!

    ReplyDelete