Monday, October 18, 2010

ವಂಡರ್-ಕಣಯ್ಯಾ...ವಂಡರ್ರು...!!!

.

ವಂಡರ್-ಕಣಯ್ಯಾ...ವಂಡರ್ರು...!!!
ಮಗ ಹೇಳ್ದ...”ಅಲ್ಲಪ್ಪ ವೆಂಡರ್ ಕಣ್ಣು...!! “ನಾನಂದೆ “ಹೌದಾ... ??”


“ಹೌದು ವೆಂಡರ್ ಅಂದ್ರೆ ಮಾರಾಟಗಾರ ಅಂತಲ್ಲವಾ..?? ಹಂಗಂದ್ರೆ...??!!”


ಅದೇ ಕಣಯ್ಯ ನಮ್ಮ ಮನೆಗೆ ಪೇಪರ್ ಹಾಕೋ ಶಿವು “ಏನೋ ಬರ್ದಿದ್ದೀನಿ..ಒಂದು ಬುಕ್ಕು....ಓದಿ ಸಾ...ಅದನ್ನೇಯ್ಯಾ ಮೊನ್ನೆ ಬಿಡುಗಡೆ ಮಾಡ್ಸಿದ್ದು..ನಿಮ್ಮನ್ನ ಇನ್ವೈಟ್ ಮಾಡಿದ್ದು...” ಅಂತ ಹೇಳಿದ್ದನಲ್ಲಾ...ಆ ಪುಸ್ತಕಾನೇ...ಹೂಂ ಮತ್ತೆ...


ನಾನು ಯೋಚನೆಮಾಡತೊಡಗಿದೆ......


ಅಲೆ ಇವನಾ..ಅಲ್ಲ ಕಣ್ ಕಣ್ ಬಿಟ್ಕೊಂಡ್ ತಿಂಗಳಾ ತಿಂಗಳಾ ಪೇಪರ್ ದುಡ್ಗೆ ಮನೆ ಹತ್ರ ಬರ್ತಿದ್ದೋನಿಗೆ,,,ಫೋಟೋಗ್ರಫಿ ಪ್ರಶಸ್ತಿ ಬಂದೈತೆ ಅಂದಾಗ .”ಏಯ್..ಏನೋ ಬಿಡು ಯಾರೂ ಇರ್ಲಿಲ್ಲವೇನೋ ಒಳ್ಲೆ ಫೋಟೋಗ್ರಾಫರ್ಸು ಕಾಂಪಿಟೆಶನಲ್ಲಿ” ಅಂದ್ಕೊಂಡೆ...ಆವೊತ್ತು...ಮತ್ತೆ ಅದೇ ಶಿವು..ಇಂಗ್ಲೀಷೋರ್ನೂ ಮೆಚ್ಚಿಸೋ ಹಾಗೆ ಫೋಟೋ ತೆಗ್ದು ಮತ್ತೆ ತಗೊಂಡಾಗ ಪ್ರಶಸ್ತೀನಾ..


ಊಂ...ಏನೋ ಐತಪ್ಪ ಈ ಹುಡ್ಗನ ಹತ್ರ ಪ್ರತಿಭೆ ಥರದ್ದು ಅನ್ಸಿತ್ತು...ಮತ್ತೆ ಮತ್ತೆ ಸುಮಾರು ಪ್ರಶಸ್ತಿ ಬಂದಿದ್ದು ..ನೋಡಿ ಹೌದಪ್ಪ ..!! ಒಪ್ಕೋ ಬೇಕಾದ್ದೇ ಅನ್ನಿಸ್ತು....


ಅದೆಲ್ಲ ಸರಿ ಮೊನ್ನೆ ಮೊನ್ನೆ ಬರಿಯೋಕೆ ಶುರು ಮಾಡಿದ್ದಿನಿ ಅಂದಂಗಿತ್ತು...ಮತ್ತೆ ನೋಡಿದ್ರೆ......... ???


ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್[ರಿ], ಧಾರವಾಡ ಇವರು ನೀಡುವ ಬೇಂದ್ರೆ ಗ್ರಂಥ ಬಹುಮಾನ-೨೦೧೦, ಕ್ಕೆ ಕೆ.ಶಿವು ರವರ “ವೆಂಡರ್ ಕಣ್ಣು” ಆಯ್ಕೆಯಾಗಿದೆ


ಅಂತ ಸುದ್ದಿ..ಓದಿ....ಓ...!!!! ತಕಳಪ್ಪಾ...ಇಲ್ಲೂ ಬಾರಿಸ್ಬಿಟ್ಟ ಸಿಕ್ಸರಾ....!!! ಅನ್ಸಿ...ಫೋನಾಯಿಸಿಯೇ ಬಿಟ್ಟೆ...


ನಮಸ್ಕಾರ ಶಿವು (ನನಗೇ ಗೊತ್ತಿಲ್ಲದೇ..ಸ್ವಲ್ಪ ಗಾಂಭೀರ್ಯ ಮತ್ತೆ ಗೌರವ ತುಂಬಿತ್ತು ನನ್ನ ದನಿಯಲ್ಲಿ..!!)..ಅಭಿನಂದನೆಗಳು..ಕಣಪ್ಪಾ.....


ನಮಸ್ಕಾರ ಸಾ...(ಅದೇ ಮುಗ್ಧ ಮುಖ ಕಣ್ಣಮುಂದೆ ಬಂದಿತ್ತು) ಸೈಂಟಿಸ್ಟ್ ರಾಮಣ್ಣನೋರು ಅಲ್ವಾ.. ಎಲ್ಲಾ ನಿಮ್ಮ ಆಶೀರ್ವಾದ ಸಾ...ಏನೋ,, ಬರ್ದೆ..ಅವರಿಗೆ ಇಷ್ಟ ಆಯ್ತು...ಎಲ್ಲಾ ಹಿರಿಯರ ಆಶೀರ್ವಾದ...... ತುಂಬಾ ಥ್ಯಾಂಕ್ಸು ಸಾ ಫೋನ್ ಮಾಡಿದ್ದಕ್ಕೆ ...ನಿಮ್ಮಂತೋರ ಆಶೀರ್ವಾದ ಹೀಗೇ ನಮ್ಮ ಮೇಲೆ ಇರ್ಲಿ ಸಾ...


ಹೌದು..ಸಂಶಯವೇ ಬೇಡ...ಅದೇ..ಶಿವು..ಹಾಗೇ ಇದ್ದಾನೆ...ಅದೇ ವಿನಯ..ಮುಗ್ಧತೆ...ಅನ್ನಿಸಿತು ನನಗೆ ..ಇಲ್ಲಾಂದ್ರೆ..ಒಂದು ಮಾಮೂಲಿ ಬಹುಮಾನ ಬಂದ್ರೆ ಸಾಕು ಈಗಿನ ಯುವಕರ ತಲೆ ಒಂದು ಕಡೆ ನಿಲ್ಲೊಲ್ಲ....


ಆಯ್ತಪ್ಪ..ಶುಭವಾಗಲಿ...ನಿನ್ನ ಕೃಷಿ ಹೀಗೇ ಫಲ ನಿಡ್ತಾ ಇರ್ಲಿ....


ಫೋನಿಟ್ಟೆ.....ಟೇಬಲ್ ಮೇಲೆ ಇಟ್ಟಿದ್ದ ಶಿವು ನ “ವೆಂಡರ್ ಕಣ್ಣು” ಕೈಗೆತ್ತಿಕೊಂಡೆ......


20 comments:

 1. azaad sir,
  shivu sir ge subhaashaya korida pari tumbaa chennaagide.... nimma barahakke, mattu shivu sir ge subhaashayagaLu sir....

  ReplyDelete
 2. Shivu avara prathibhege innondu gari :) thumba kushi aayithu... nimma baraha kooda....

  ReplyDelete
 3. ಅಜಾದ್,

  ನೀವು ಫೋನ್ ಮಾಡಿದಾಗ ನಾನು ಯಾರೋ ಅಂದುಕೊಂಡುಬಿಟ್ಟೆ. ಜೊತೆಯಲ್ಲಿ ಉದಯ್ ಹೆಗಡೆ ಇನ್ನಿತರು ಇದ್ದರಲ್ಲಾ ಅದಕ್ಕೆ ಗೊತ್ತಾಗಲಿಲ್ಲ. ನೀವು ವಿಶ್ ಮಾಡಲಿಕ್ಕೆ ಫೋನ್ ಮಾಡಿದ್ದು ಖುಷಿಯಾಯ್ತು. ಅದಕ್ಕಾಗಿ ನನ್ನ ಪುಸ್ತಕ ಮತ್ತು ನನ್ನ ಬಗ್ಗೆ ಒಂದು ಚೆನ್ನಾದ ಲೇಖನವನ್ನೇ ಬರೆದಿರೋದು ನೋಡಿದ್ರೆ ನಿಮ್ಮ ಅಭಿಮಾನಕ್ಕೆ ಬೆಲೆ ಕಟ್ಟಲಾಗದು. ನನ್ನ ಪುಸ್ತಕಕ್ಕೆ ಬಂದಿರುವ ಪ್ರಶಸ್ಥಿ ಒಂಥರ ನಮ್ಮ ಬ್ಲಾಗ್ ಲೋಕಕ್ಕೆ ಬಂದ ಪ್ರಶಸ್ಥಿಯೆಂದು ಭಾವನೆ. ಏಕೆಂದರೆ ನಾನು ಜಿ.ಎಮ್ ಮೋಹನ್ ರವರಿಂದ ಬ್ಲಾಗ್ ಲೋಕಕ್ಕೆ ಬಂದೆ. ನಾಗೇಶ್ ಹೆಗಡೆಯವರ ಪ್ರೋತ್ಸಾಹದಿಂದ ಈ ಪುಸ್ತಕವನ್ನು ಬರೆದೆ. ಆದ್ರೆ ಅದೆಲ್ಲವನ್ನು ಬರೆದಿದ್ದು ಮೊದಲು ಬ್ಲಾಗಿನಲ್ಲಿ. ಬ್ಲಾಗಿನಲ್ಲಿ ನೀವೆಲ್ಲಾ ಓದಿ ಇಷ್ಟಪಟ್ಟು ಪ್ರೋತ್ಸಾಹ ನೀಡದಿದ್ದಲ್ಲಿ ನಾನು ಇಷ್ಟು ಬರೆಯುತ್ತಿರಲಿಲ್ಲವೇನೋ...ಬ್ಲಾಗ್ ಕಾರಣದಿಂದಾಗಿ ನೀವೆಲ್ಲರೂ ಸಿಕ್ಕಿದ್ದೀರಿ...ನಿಮ್ಮೆಲ್ಲರ ಪ್ರೋತ್ಸಾಹದ ಕಾರಣದಿಂದಾಗಿ ಪುಸ್ತಕ...ಪುಸ್ತಕದ ಕಾರಣದಿಂದಾಗಿ ಅದಕ್ಕೊಂದು ಪ್ರಶಸ್ಥಿ.....ಈಗ ಹೇಳಿ ಪ್ರಶಸ್ಥಿ ಯಾರದು?
  ಖಂಡಿತ ಇದು ಎಲ್ಲಾ ಬ್ಲಾಗಿಗರದ್ದು ಎಂದು ನನ್ನ ಭಾವನೆ. ಇದು ನಮ್ಮ ಬ್ಲಾಗ್ ಬರಹಗಾರರಿಗೆ ಸ್ಫೂರ್ತಿ ನೀಡುವುದು ಖಂಡಿತ. ಅದರಿಂದ ಮತ್ತಷ್ಟು ಬರಹದ ಕೃಷಿ ಬ್ಲಾಗ್ ಲೋಕದಲ್ಲಾಗಲಿ ಎನ್ನುವುದು ನನ್ನ ಆಸೆ...

  ಒಟ್ಟಾರೆ ಬ್ಲಾಗ್ ಗೆಳೆಯರಿಗೆ ಜೈ ಹೋ...

  ReplyDelete
 4. ಇದು ತು೦ಬಾ ಸ೦ಭ್ರಮದ ವಿಚಾರ.. ಶಿವು ಸರ್ ಗೆ ಅಭಿನ೦ದನೆಗಳು.ನಿಮಗೆ ವ೦ದನೆಗಳು.

  ReplyDelete
 5. congratulation shivu sir... azad sir nimmade hosa ritiyalli ondu kushiya vicharavannu namagella tilisuvadura jotege... shivu avarige nimma abhinandaneyannu tilisisddiya... shivu sir hige matastu gari nimma sadhaneya mukuttakke herali..

  ReplyDelete
 6. pratibhege takka prashamse.lekhana tumbaa channaagide sir,dhanyavaadagalu.

  ReplyDelete
 7. Congrats Shivu:)..scientist ge Jai:)
  Naanoble innu Vendor kannu odilla:(..bejaaraagtide

  ReplyDelete
 8. ಆಜಾದ್ ಭಾಯಿ,ಇಂದು ಬಜ್ ತೆರೆದಾಗ ಸುದ್ದಿ ಗೊತ್ತಾತು.ನೀವು ಶಿವು ಅವರಿಗೆ ಅಭಿನಂದನೆ ಸಲ್ಲಿಸಿದ ರೀತಿ
  ವಿಶಿಷ್ಟವಾದದ್ದು. ನಿಮ್ಮೂಲಕ ನಾನೂ ಶಿವು ಅವರಿಗೆ ಇನ್ನೊಮ್ಮೆ ಅಭಿನಂದನೆ ಹೇಳುತ್ತೇನೆ.

  ReplyDelete
 9. ಬಹಳ ಚೆನ್ನಾಗಿ ಶಿವೂ ಗೆ ಅಭಿನ೦ದನೆ ತಿಳಿಸಿದ್ದೀರಿ. ಖುಷಿ ಆಯ್ತು.

  ReplyDelete
 10. ತುಂಬಾ ಸಂತಸದ ವಿಷಯ ಅಜಾದ್ ಸರ್

  ಅಭಿನಂದನೆಗಳು ಶಿವು ಸರ್

  ReplyDelete
 11. This comment has been removed by the author.

  ReplyDelete
 12. ಒಳ್ಳೆಯ ಸುದ್ದಿ.. ಚೆನ್ನಾಗಿ ಬರೆದಿದ್ದೀರಿ...
  ಶಿವು ಅವರಿಗೆ ಅಭಿನ೦ದನೆಗಳು.

  ReplyDelete
 13. ಶಿವು,
  ಪ್ರಶಸ್ತಿಗಾಗಿ ಹೃತ್ಪೂರ್ವಕ ಅಭಿನಂದನೆಗಳು.

  ReplyDelete
 14. ಆಜಾದು...

  ಇದು ಶಿವು ಅವರ ಪ್ರತಿಭೆ ಮತ್ತು ಪರಿಶ್ರಮಕ್ಕೆ ಸಿಕ್ಕ ಗೌರವ...

  ಅವರಿಗೆ ಇನ್ನಷ್ಟು ಯಶಸ್ಸು ಸಿಗಲಿ...

  ಜೈ ಹೋ ಶಿವು ಭಾಯ್ !!

  ReplyDelete
 15. ಅಜಾದ್ ಸರ್ ನಿಮ್ಮ ನೆನಪಿನ ಬುಟ್ಟಿಯಿಂದ ಬಂದ ಶಿವೂ ಬಗೆಗಿನ ವಿಚಾರ ಚೆನ್ನಾಗಿದೆ. ಗೆಳೆಯ ಶಿವೂ ನಮ್ಮೆಲ್ಲರ ಹೆಮ್ಮೆ ಅವರಿಗೆ ಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಷಯ. ನೀವು ಡಿಸೆಂಬರ್ ನಲ್ಲಿ ಬನ್ನಿ ಎಲ್ಲ ಸೇರಿ ಈ ಸಂತೋಷವನ್ನು ಆಚರಿಸೋಣ.

  ReplyDelete
 16. Congrats.. Shivu.. tilisikotta ajad sir ge Dhanyavaada :)....

  ReplyDelete
 17. ತುಂಬಾ ಚೆನ್ನಾಗಿ ಅಭಿನಂದಿಸಿದ್ದಿರಾ...
  ಶಿವುರವರಿಗೆ ನಮ್ಮ ಅಭಿನಂದನೆಗಳು.

  ReplyDelete