ಚಿತ್ರ ಕೃಪೆ: http://www.funlogg.com/
ಚಂಚಲ ನಯನೆ
(ಚಂದನ್ ಸಾ ಬದನ್ ಚಂಚಲ್ ಚಿತವನ್...ಧಾಟಿ)
ಚಂದನದ ಮನ ಚಂಚಲ ನಯನ
ಮೆಲ್ಲಮೆಲ್ಲನೆ ಮೆರೆವ ಹುಸಿನಗುವು
ಎನ್ನ ದೂಷಿಸಬೇಡಿ ಓ ಜನರೇ
ಮರುಳಾದರೆ ಕಂಡು ಆ ವದನ... II ಚಂದನದ ಮನ II
ಆ ಕಾಮನ ಬಿಲ್ಲು ಈ ಹುಬ್ಬು
ಕೆಣ್ ಎವೆಯ ಅಂಚಿನ ಕಡುಗಪ್ಪು
ಹಣೆಯ ಸಿರಿ ಈ ಸಿಂಧೂರ
ತುಟಿಯಾಗಿವೆ ಸುಡುವ ಕೆಂಡಗಳು
ಸೋಕಿದರೂ ಬರಿ ನಿನನೆರಳು
ಬೆಂಗಾಡಲೂ ಅರಳುವ ಕುಸುಮಗಳು...II ಚಂದನದ ಮನ II
ತನುವೂ ಸುಂದರ ಮನವೂ ಸುಂದರ
ಸುಂದರತೆಯ ಮೂರುತಿ ಈ ಚೆಲುವೆ
ಬೇರಾರಿಗೋ ಹೇಗೋ ನಾನರಿಯೆ
ನನಗಂತೂ ನಿನ್ನದೇ ಸವಿ ನೆನಪು
ಈಗಾಗಲೇ ಬಹಳ ಕಾದಿರುವೆ
ಇನ್ನೂ ನನ್ನನ್ನು ನೀ ಕಾಡದಿರು...II ಚಂದನದ ಮನII
ಮೂರುದಿನದ ಚೂರು-ಪಾರು
ಹುಟ್ಟು ಸಾವು ಎರಡರ ಮಧ್ಯೆ
ಇವೆಯೆಂದರು ಕೇವಲ ದಿನ ಮೂರು
ಆಗಲೂ ಬಹುದು ಎಂದವರು ಅವು ನೂರು
ಪಡೆದರು ಜೀವನದಿ ಚೂರು-ಪಾರು
ಮೂರೇ ಎಂದವರಿಗೆ ಸಿಕ್ಕಿದ್ದು, ಅನಿಸಿದ್ದು
ಅಲ್ಪ ಸ್ವಲ್ಪ ಚೂರು ಮತ್ತೆ ಸಿಕ್ಕಂತೆ ಪಾರು
ಒಂದೇ ಎಂದವರಿಗೆ ಎಲ್ಲಿಯ ಚೂರು?
ಯಾರದೋ ಪಾಲು ಆಗಿರುವಳು, ಪಾರು
ವಾಹ್ ಭಯ್ಯಾ, ಬಹುತ್ ಖೂಬ್
ReplyDeleteಬಹುತ್ ಖೂಬ್ ಸರ್
ReplyDeleteಸುಂದರ ಸಾಲುಗಳ ಚಿತ್ತಾರ
superb lines sir ... :) gunuguniside manadalli nimma saalugala :)
ReplyDeleteಪರಾಂಜಪೆ ಸರ್, ಥ್ಯಾಂಕ್ಸ್, ಶುಕ್ರಿಯಾ ಮೆಹರ್ಬಾನಿ...
ReplyDeleteಡಾ. ಗುರು..ಧನ್ಯವಾದ ..ಇದು ಪ್ರಕಾಶನ ವಿಶೇಷ ಕೋರಿಕೆಮೇಲೆ ಬರೆದ ಹಾಡು...
ReplyDeleteಸೌಮ್ಯ ಗುನುಗುವುದಕ್ಕೇ ಅಲ್ಲ..ನೀವು ಹಾಡಲೂ ಬಹುದು...ಕರವೋಕೆ ಮ್ಯೂಜಿಕ್ಕಿಗೆ ..ನಾನು ಹಾಡಿದ್ದೀನಿ...ಇದನ್ನ.,, ಧನ್ಯವಾದ....
ReplyDeletesuper sir ...........
ReplyDeleteಜಲನಯನ,
ReplyDeleteಸುಂದರವಾದ ಹಿಂದಿ ಹಾಡನ್ನು ಕನ್ನಡದಲ್ಲಿ ರೂಪಾಂತರಿಸಿದ್ದಕ್ಕೆ ಧನ್ಯವಾದಗಳು.
ಹಾಡನ್ನು ಗುನುಗಿಕೊಂಡು ಸಂತೋಷಪಟ್ಟೆ.
ಸತೀಶ್ ಧನ್ಯವಾದ...
ReplyDeleteಸುನಾಥಣ್ಣ, ಧನ್ಯವಾದ ನನ್ನ ಜಲನಯನದಲ್ಲಿ ಇಂತಹ ಕೆಲವು ಪ್ರಯತ್ನ ಮಾಡಿದ್ದೀನಿ ನೋಡಿರಬೇಕು ನೀವು...ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ
ReplyDeleteಅಜಾದ್,
ReplyDeleteಈ ಹಿಂದಿ ಹಾಡನ್ನು FM ರೇಡಿಯೋದಲ್ಲಿ ಕೇಳುತ್ತಿರುತ್ತೇನೆ. ನೀವು ಚೆನ್ನಾಗಿ ಕನ್ನಡದಲ್ಲಿ ಅನುವಾದಿಸಿಕೊಟ್ಟಿದ್ದೀರಿ. ಅದಕ್ಕಾಗಿ ಧನ್ಯವಾದಗಳು.
ನಯನೆ ಚೆನ್ನಾಗಿದ್ದಾಳೆ. ನನ್ನ ಅಭಿಪ್ರಾಯವೆನೆಂದರೆ ಇದನ್ನು ಪ್ರಯತ್ನ ಪಟ್ಟಿದ್ದರೆ ಇನ್ನೂ ಚೆನ್ನಾಗಿ ಬರೆಯಬಹುದಿತ್ತೇನೋ. ಥ್ಯಾಂಕ್ಸ್.
ReplyDeleteಸುಂದರ ಪದಗಳ ಚಂದದ ಚಿತ್ತಾರ ನಿಮ್ಮ ಈ ಕವಿತೆ. ಲಹರಿ ಚೆನ್ನಾಗಿದೆ.
ReplyDelete--
ಪ್ರೀತಿಯಿಂದ ನಿಮ್ಮವ ಬಾಲು.
ಶಿವು ಧನ್ಯವಾದ..ಹಹಹ ಹೌದು ಇದು ನನ್ನ ಪ್ರಯತ್ನ...ಅಷ್ಟೆ..ಇದನ್ನು ಮತ್ತೂ ನಯಗೊಳಿಸಬಹುದು ಎನ್ನೋದು ನನ್ನ ಅನಿಸಿಕೆ ...
ReplyDeleteಸತೀಶ್, ಥ್ಯಾಂಕ್ಸು...ನಿಮಗೆ ಸ್ವಾಗತ ... ಇದನ್ನು ಮತ್ತೂ ನಯಗೊಳಿಸುವುದಕ್ಕೆ ನಿಮಗೆ ಆಮಂತ್ರಣ....ಇದು ಜಂಟಿ ಗೀತೆಯಾಗಲಿ....
ReplyDeleteಬಾಲು...ಧನ್ಯವಾದ ನಿಮ್ಮ ಅನಿಸಿಕೆಗೆ...
ReplyDeletechannagidae salugalu
ReplyDeleteವಸಂತ್ ನಿಮ್ಮ ಪ್ರತಿಕ್ರಿಯೆ ಹಾಗೂ ಪ್ರೋತ್ಸಾಹ ಹೀಗೇ ಬರುತ್ತಲಿರಲಿ...ಧನ್ಯವಾದ
ReplyDeleteಶ್ರೀಕಾಂತ್, ಧನ್ಯವಾದ ನಿಮ್ಮ ಪ್ರತಿಕ್ರಿಯೆ ಮತ್ತು ಪ್ರೋತ್ಸಾಹಕ್ಕೆ...
ReplyDeleteಆಜಾದು...
ReplyDeleteಬಹಳ ಸೊಗಸಾಗಿದೆ...
ಭಾವಾನುವಾದ ಅನ್ನುವದಕ್ಕಿಂತ..
ಸ್ವಂತ ಕವನ ಅನ್ನ ಬಹುದು...
ಇದರ ಸಂಗಡ ಆ ಹಾಡನ್ನೂ ಕೇಳಿಸಿದರೆ ಇನ್ನೂ ಸೊಗಸಿತ್ತು...
ಜೈ ಹೋ..
ಕೊನೆಯ ಸಾಲಿನ ಕವನ ನಾನು ನನ್ನ ಸಂಗ್ರಹದಲ್ಲಿ ಇಟ್ಟುಕೊಂಡಿದ್ದೇನೆ..
ಮಸ್ತ್ ಸಾಲುಗಳು...
ಅಭಿನಂದನೆಗಳು...
super agide sir... swanteya hadinante anuvaada maadiddira.. naanu hindi songs keltidde adare arta agodilla arta maadisidakke danyavada sir :)..
ReplyDeletesuper.......
ReplyDeleteಆಜಾದ್ ,
ReplyDeleteಚಂದದ ಹಾಡನ್ನು ಸುಂದರವಾಗಿ ಕನ್ನಡೀಕರಿಸಿದ್ದೀರ. ಇಷ್ಟವಾಯ್ತು. ಸುಂದರಿಯ ಕಣ್ಣುಗಳನ್ನು ಮತ್ತು ಸಿಂಧೂರವನ್ನು ನೋಡಲು ಆಗಲೇ ಇಲ್ಲ :-)
ಎರಡನೇ ಕವನ ಕೂಡ ತುಂಬಾ ಅರ್ಥಪೂರ್ಣವಾಗಿದೆ ! ಆದರೆ , ಎರಡು ವಿಭಿನ್ನ ರೀತಿಯ ಕವನಗಳನ್ನು ( ಒಂದು ಪ್ರೇಮ ಗೀತೆ , ಇನ್ನೊಂದು ಫಿಲಾಸಫಿ ) ಒಟ್ಟಿಗೆ ಹಾಕಿದ್ದೀರಲ್ಲ ಈ ಬಗೆ ಅರ್ಥವಾಗಲಿಲ್ಲ !
ಪ್ರಕಾಶು, ನೆನಪಿರ್ಲಿಕ್ಕಿಲ್ಲ ನಿನಗೆ, ನಿನ್ನ ಫರ್ಮಾಯಿಶ್ ಇದು. ಅದಕ್ಕೆ ಈ ಹಾಡನ್ನು ಭಾವಾನುವಾದ (ಅಥವಾ ಅಕ್ಕಾನುವಾದ ಅಂದ್ರೂ ಸರಿ)ಮಾಡಿ ಹಾಕಿದ್ದು...ಇದರ ಕರವೋಕೆ ಹಾಕ್ತೀನಿ ...ಸಾಧ್ಯ ಆದ್ರೆ..ಥ್ಯಾಂಕ್ಸ್ ದೋಸ್ತ್ ನಿನ್ನ ಜರ್ರಾ ನವಾಜಿಸ್ ಗೆ...
ReplyDeleteತರುಣ್ ಧನ್ಯವಾದ ಹಳೆಯ ಹಿಮ್ದಿ ಹಾಡುಗಳು ನಮ್ಮ ಕನ್ನಡದ ಹಳೆಯ ಹಾಡುಗಳ ತರಹವೇ ಒಳ್ಲೆಯ ಭಾವ ಮತ್ತು ಗೂಢಾರ್ಥ ಇರುತ್ತವೆ, ಅದಕ್ಕೆ ಇದನ್ನು ಅನುಭಾವಿಸಿದ್ದು..ಧನ್ಯವಾದ ಇಷ್ಟವಾಗಿದ್ದಕ್ಕೆ
ReplyDeleteಮನಸು ಮೇಡಂ ..
ReplyDeleteಒರಿಜಿನಲ್ ಹಾಡು ಕೇಳಿ ನಿಮ್ಮ ಅನಿಸಿಕೆ ಮತ್ತೆ ಹಾಕಿ...ಅದು ಮುಕೇಶ್ ಹಾಡು..
ಧನ್ಯವಾದ ನಿಮ್ಮ ಮಾತಿಗೆ
ಚಿತ್ರಾ, ಮಿಸ್ಟೇಕ್ ನನಗೂ ನಂತರವೇ ಗೊತ್ತಾಗಿದ್ದು..ಆದ್ರೆ ಚಿತ್ರ (ನೀನನಲ್ಲ) ಫೋಟೋ ತುಂಬಾ ಒಪ್ಪೋ ಹಾಗಿತ್ತು ಅದಕ್ಕೇ ಬಿಟ್ಟೆ..ಸಿಂಧೂರ ಇದಕ್ಕೇ ಹಾಕ್ತೀನಿ,,..ಹಹಹ..(ಅಯ್ಯೋ ಕೇಸ್ ಹಾಕಿದ್ರೆ ಕಷ್ಟ..ಬೇಡಪ್ಪಾ...)..
ReplyDeleteಮೊದಲನೇದನ್ನ ಓದಿ ವಾಸ್ತವಕ್ಕೆ ಬರೋಕೆ ಎರಡನೇ ಕವನ ..ಸಿಗರೇಟು ಸೇದೋರಿಗೆ ಸ್ಟಾಚುಟರಿ ವಾರ್ನಿಂಗ್ ಥರ,,,ಹಹಹ
ವಾಹ್ ಆಜಾದ್ ಭಾಯ್..
ReplyDeleteಸುಂದರವಾದ ಸಾಲುಗಳಲ್ಲಿ ಸುಂದರವಾದ ಹಾಡನ್ನು ಅನುವಾದಿಸಿದ್ದೀರಿ.
ಧನ್ಯವಾದಗಳು !
ಕ್ಯಾ ಬಾತ್ ಹೈ? ಆಪ ಕೀ ಯೇ ’ಕವನ್’ ಬಹುತ್ ಅಚ್ಚಾ ಹೈ ಜೀ ಬಹುತ್ ಅಚ್ಚಾ ಹೈ! ಅಂತೂ ಪರಾಂಜಪೆ ಮತ್ತು ನಾನು ಕುಣಿದಹಾಗೇ ನೀವೂ ಹಾಡು ಹೇಳಿಕೊಂಡು ಕುಣಿಯುತ್ತೀರಿ ಅಂತಾಯ್ತು! ಧನ್ಯವಾದಗಳು
ReplyDeleteಅಪ್ಪ-ಅಮ್ಮ ನಿಗೆ ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ...
ReplyDeleteವಿ.ಆರ್.ಬಿ ಸರ್ ನೀವು, ಪರಾಂಜಪೆಯವರು ಹಾಡಿಕೊಂಡು ಕುಣಿಯೋದಾದ್ರೆ ನಾನು ಹಾಡೋಕೂ ಸೈ...ಹಹಹ ನಿಮ್ಮಂಥ ಜಿಂದಾದಿಲ್ ಸ್ನೇಹಿತರಿಗಾಗಿ ಅಷ್ಟೂ ಮಾಡೋಕಾಗಲ್ವೇ...?? ಜೈ ಹೋ...ಪ್ರತಿಕ್ರಿಯೆಗೆ...
ReplyDeletebhai...
ReplyDeletetumbaa chennaagide...nanna atyanta ishtavaada haadugalalli idoo ondu..tumbaa thanx..nenapisiddakke..:):)
ಚೇತನಾ...ಥ್ಯಾಂಕ್ಸು...ಹೌದು ಇದು ನನಗೂ ಬಹಳ ಇಷ್ಟವಾದ ಹಾಡು...
ReplyDeleteತು೦ಬ ಚ೦ದದ ಫೋಟೋ ಮತ್ತು ಕವನ... ಇಷ್ಟ ಆಯಿತು...
ReplyDeleteಧನ್ಯವಾದ ಸುಧೇಶ್..ನಿಮ್ಮ ಅಭಿಪ್ರಾಯ ಮತ್ತು ಪ್ರತಿಕ್ರಿಯೆ ಎರಡಕ್ಕೂ...
ReplyDelete