Saturday, December 4, 2010

ನವಂಬರ್ ಸಂಭ್ರಮ

ಸ್ನೇಹಿತರೇ, ಹಿತರೇ...
ನಮ್ಮ ಬೆಡಗಿನ ನಗರಿ, ರಾಜಧಾನಿ ಬೆಂಗಳೂರಿನಲ್ಲಿ ಮರೆಯಾಗುತ್ತಿರುವ ಕನ್ನಡಪರ ಕಾಳಜಿ ನನಗೆ ಈ ರಚನೆಗೆ ಪ್ರೇರಣೆಯಾಯಿತು....ನಾವು ಕಾಲೇಜಿನಲ್ಲಿದ್ದ ಸಮಯದಲ್ಲಿ ಕಡೇ ಪಕ್ಷ ಅಕ್ಟೋಬರ್ ನಿಂದ ಪ್ರಾರಂಭವಾಗುತ್ತಿದ್ದ ಸಂಭ್ರಮ, ಮಂಟಪ ಮತ್ತು ಕಲಾ ವೇದಿಕೆಗಳು, ಕೆ.ಎಸ್.ಆರ್.ಟಿ.ಸಿ ಸಿಂಗಾರಗಳು ಡಿಸೆಂಬರ್ ಅಂತ್ಯದವರೆಗೂ, ಕ್ರಿಮಸ್ ಸಂಭ್ರದ ಜೊತೆಗೂಡುತ್ತಿದ್ದುದು ನೆನಪಿದೆ...ಆದ್ರೆ ಈಗ ನವಂಬರ್ ತಿಂಗಳ ಕಡೆಯ ವಾರವೇ ಕನ್ನಡ ಎಲ್ಲಿ ಹೋಯ್ತು ಅನ್ನೋನೆ ಯೋಚನೆ ಕಾಡುತ್ತೆ....ನಿಮ್ಮ ಪ್ರತಿಕ್ರಿಯೆ..ಟೀಕೆಗೆ ನಾನು ಸಿದ್ಧ......


ನವಂಬರ್ ಸಂಭ್ರಮ

ನವಂಬರ್ ಬಂದ್ರಾಯ್ತು

ಹರಿಯುತ್ತೆ ಕನ್ನಡದ ಮಹಾಪೂರ

ಎಲ್ಲಿರುತ್ತೋ ಕಟ್ಟೆಯೊಡೆಯುತ್ತೆ

ನುಗ್ಗುತ್ತೆ ಗಲ್ಲಿ ಗಲ್ಲಿ ನಿಲ್ಲೊಲ್ಲ ಅನ್ನುತ್ತೆ

ಕೆಂಪು-ಹಳದಿ ಕಹಳೆ ಮೊಳಗುತ್ತೆ

ದೇಣಿಗೆ ಚಂದಾ ಕೊಡುಗೆ ಕೇಳುತ್ತೆ

ಹಾದಿ ಬೀದಿಲೆಲ್ಲಾ, ಗಂಧದಗುಡಿ,

ಹಚ್ಚೇವು ಕನ್ನಡದ ದೀಪ ಮೊಳಗುತ್ತೆ

ಇಂಗ್ಲೀಷ್ ನಾಮಫಲಕಕ್ಕೆ ಬೀಳುತ್ತೆ ಲತ್ತೆ

ಒಂದೇ, ಎರಡೇ, ಬೆಂಗ್ಳೂರೇ ಕನ್ನಡಮಯ

ಐಟಿ ಬಿಟಿ ಗಲ್ಲಿಗಳು ಬಿಕೋ ಅಗುತ್ವೆ

ಡಿಸೆಂಬರ್ ಬರುತ್ತೆ..

ಚಳಿಗೆ ಬೆಂಗ್ಲೂರ್ ನಡಗುತ್ತೆ
ಕನ್ನಡಾನೂ ನಿಧಾನಕ್ಕೆ ಮರೆಯಾಗುತ್ತೆ

ಗಲ್ಲಿಗಳು ಮತ್ತೆ ತುಂಬ್ಕೋತಾವೆ

ಮತ್ತೆ ಎನ್ನ, ಎವಿಡ, ಎಕ್ಕಡ ವಾಟ್ ಗಳು

ಟಾಕ್ ಎನಿಥಿಂಗ್ ಬಟ್ ನಾಟ್ ಕನ್ನಡ ಗಳು
ಜನವರಿ ತುಂಬಾ ಕೇಕ್ ಗಳು

ಫೆಬ್ರವರಿಲಿ ವ್ಯಾಲಂಟೈನ್ ಡೇಟ್ಸಗಳು

ಮಾರ್ಚ್ ಏಪ್ರಿಲ್ ಎಕ್ಸಾಮ್ ಟೆನ್ಶನ್ ಗಳು

ಜೂನ್ ಜುಲೈ ರೆಸಾರ್ಟ್ ಮಸ್ತಿಗಳು

ಮತ್ತೆ ಇಲ್ಲದ ಮಳೆ ಅಥವ ಅತಿ ಕೊಚ್ಚೆಗಳು

ರಚ್ಚೆ ಹಿಡಿಸೋ ಪೆಚ್ಚು ರಾಜಕೀಯಗಳು

ಮರೆತಹಾಗೆ ಆಗಿರುತ್ತೆ ,,,ಎಲ್ಲಿದೆ.. ಕನ್ನಡ?
ಮತ್ತೆ ಧೂಳು ಕೊಡವಿ ಹೊರಬರೋ ಫ್ಲಾಗ್ಗಳು

ಕನ್ನಡ ಸಿಡಿಗಳು, ಆಡಿಯೋಗಳು

ಯಾಕಂದ್ರೆ ಬಂತಲ್ಲಾ..ನವೆಂಬರ್ರು?

ಮತ್ತದೇ ರಾಜ್ಯೋತ್ಸವ !!!

22 comments:

  1. ಜಲನಯನ,
    ವಾಸ್ತವಕ್ಕೆ ಕನ್ನಡಿ ಹಿಡಿದ ಕವನ. ಕವನದ ಛಂದ ಹಾಗು ಲಯ ಕವನದ ತಿರುಳಿಗೆ ಅನುರೂಪವಾಗಿವೆ.

    ReplyDelete
  2. ನಿತ್ಯ ಪ್ರಥಮ ಸುನಾಥಣ್ಣನಿಗೆ ಧನ್ಯವಾದಗಳು, ಹೋದ ನವಂಬರ್ ಕಡೆಯವಾರ ನಾನು ಕುವೈತಿಗೆ ವಾಪಸ್ಸಗುತ್ತಿದ್ದೆ..ಬೆಳಗಿನ ಜಾವ ಟ್ಯಾಕ್ಸಿಗೆ ಫೋನ್ ಮಾಡಿದಾಗ ಟ್ಯಾಕ್ಸಿ ಚಾಲಕ ಬಂದಾಗ ನಾನು ಸ್ನಾನದ ಮನೆಲಿದ್ದೆ...ನನ್ನ ಮಗಳಿಗೆ ಚಾಲಕ ತಮಿಳಲ್ಲಿ ಮಾತನಾಡಿಸಿದ್ದಕ್ಕೆ ಅವಳು ನೀನಲ್ಲ ಕನ್ನಡದವರಿಗೆ ಅಪ್ಪ ಫೋನ್ ಮಾಡಿದ್ದು ಅಂತ ಅವನನ್ನ ವಾಪಸ್ ಕಳ್ಸೋದ್ರಲ್ಲಿದ್ದಾಗ..ನಾನು ಬಂದೆ ...ಹಹಹ ಕ್ಯಾಬ್ ಆಪ್ರೇಟರ್ ಹತ್ರ ಇದ್ದದ್ದೇ ಮೂರು ಚಾಲಕರು ಒಬ್ಬ ತಮಿಳವ ಮಿಕ್ಕವರು ಮಲೆಯಾಳಿಗಳು...ನನ್ನ ಮಗಳು ತನಗೆ ಬರೋಹಾಗೆ ಕನ್ನಡ ಇಂಗ್ಲೀಷಲ್ಲಿ ಹೇಳ್ತಿದ್ರೂ ಅವನು ತಮಿಳಲ್ಲೇ ಮಾತನಾಡಿದನಂತೆ......ಯಾಕೆ ಹೀಗಾಗುತ್ತಿದೆ ....ನಮ್ಮ ಊರು ನಮ್ಮ ಭಾಷೆಲಿ ಯಾವಾಗ ವ್ಯವಹರಿಸುತ್ತೆ,..? ಅರ್ಥ ಆಗ್ತಿಲ್ಲ...

    ReplyDelete
  3. ಏನಾದರೂ ಕೊಳ್ಳಲು ಅ೦ಗಡಿಗಳಿಗೆ ಹೋದರೆ ನಾವು ಕನ್ನಡದಲ್ಲಿ ಪ್ರಾರ೦ಭಿಸಿದರೂ ಕೂಡ ಇ೦ಗ್ಲಿಷ್ ನಲ್ಲೇ ಮಾತನಾಡಿಸುತ್ತಾರೆ.
    ತರಕಾರಿ ಕೊಳ್ಳಲು ಹೋದರೆ ತಮಿಳಿನಲ್ಲೊ ತೆಲಗಿನಲ್ಲೊ ಮಾತನಾಡುತ್ತಾರೆ. ಈಗಿನ ಮಕ್ಕಳ೦ತೂ ಇ೦ಗ್ಲಿಷ್ ಬಿಟ್ಟು ಬೇರೆ ಭಾಷೆಯೇ ಬರದ ಹಾಗಿದ್ದಾರೆ!
    ಒ೦ದೊ೦ದು ಸಲ ನಾನು ಬೆ೦ಗಳೂರಿನಲ್ಲೇ ಇದ್ದೇನೆಯೇ ಎನ್ನುವ ಅನುಮಾನ ಬ೦ದುಬಿಡುತ್ತದೆ.

    ಕವನ ಚೆನ್ನಾಗಿದೆ...

    ReplyDelete
  4. ಸು೦ದರವಾಗಿ ಬೈದಿದ್ದೀರಿ....!!!!!

    ಪ೦ಚರ೦ಗಿ ಗಾಳಿ ಕುವೈತಿಗೂ ಬೀಸಿದೆಯಾ.....:)-:)-:)

    ReplyDelete
  5. ಕವಿತಾ ವಿಶ್ಲೇಷಣೆ ಮತ್ತು ನಿಮ್ಮ ಅನುಭವ ಎರಡೂ ೧೦೦ ಕ್ಕೆ ೧೦೦ ಒಪ್ಪುತ್ವೆ ನಮ್ಮ ಬೆಂದಕಾಳೂರಿಗೆ... ಅನುಮಾನ ಬರೋದು ಸಹಜ ಅನ್ನೋ ಮಟ್ಟಕ್ಕೆ ನಮ್ಮವರದೇ ನಿರ್ಲಕ್ಷ್ಯವೂ ಬೆಳೆಯುತ್ತಿರುವುದು ನಮ್ಮ ದುರದೃಷ್ಟ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

    ReplyDelete
  6. ವಿಜಯಶ್ರೀ...ಒಮ್ಮೊಮ್ಮೆ ಅನಾಥರಂತಾಗುತ್ತೇವೆ ಪರಭಾಷಿಗಳ ನಡುವೆ..ಅಂತಹ ಎಷ್ಟೋ ಸಂದರ್ಭಗಳನ್ನು ನೋಡಿದ್ದೇನೆ ಅನುಭವಿಸಿದ್ದೇನೆ...
    ಪಂಚರಂಗಿಯ ರಂಗು ಇಲ್ಲಿಗೆ ಇನ್ನೂ ತಟ್ಟಿಲ್ಲ...ಬಿಡಿ...

    ReplyDelete
  7. ಕೆಲವೊಂದು ಸಾಲುಗಳು ಕನ್ನಡ ರಾಜ್ಯೋತ್ಸವಕ್ಕೆ ರಾತ್ರೋರಾತ್ರಿ ಹುಟ್ಟಿಕೊಳ್ಳುವ ಸಂಘಗಳಿಗೆ ಕೈಪಿಡಿ ಅಂತಿದೆ :)

    ಕಾಸ್ಮೋಪಾಲಿಟನ್ ನಡುವೆ ನಮ್ಮತನ-ನಮ್ಮ ಭಾಷೆಗೆ ಖಂಡಿತ ಜಾಗ ಬೇಕಿದೆ

    ReplyDelete
  8. azad sir,
    vaastava vaagide... tumbaa kaTu satya alvaa sir...

    ReplyDelete
  9. ಪಾತರಗಿತ್ತಿ....ನನ್ನ ಜಲನಯನಕ್ಕೆ ಸ್ವಾಗತ,,,
    ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.,,

    ReplyDelete
  10. ದಿನಕರ್, ಸ್ವಾಗತ ನಿಮ್ಮ ಪ್ರತಿಕ್ರಿಯೆಗೆ..ನನ್ನ ಕೆಲಸಗಳ ಒತ್ತಡದಿಂದ ಎಲ್ಲಾ ಬ್ಲಾಗ್ ಗಳ ಅಂಗಳಕ್ಕೆ ಬರಲಾಗುತ್ತಿಲ್ಲ್ಲ...ಏನಾದ್ರೂ ಹೊಸ ಪೋಸ್ಟ್ ಇದ್ರೆ ಬಜ್ ನಲ್ಲಿ ಅಥ್ವಾ ಜಿ-ಮೈಲಲ್ಲಿ ಲಿಂಕ್ ಹಾಕಿ,,,

    ReplyDelete
  11. ಕನ್ನಡ ನಾಡಿನಲ್ಲಿ ಕನ್ನಡ ಎನ್ನಡ ಎಕ್ಕಡ ಆಗಲು ನಾವೇ ಕಾರಣ. ನಾವು ಅಭಿಮಾನ ಶೂನ್ಯರು .ನವೆಂಬರ್ ಕನ್ನಡ ರಾಜ್ಯೋತ್ಸವದ ಆಚರಣೆ ನಂತರ ಆಗುವ ಕನ್ನಡಿಗರ ಬದಲಾವಣೆಗಳನ್ನು ಹಂತ ಹಂತ ವಾಗಿ ಬಿಡಿಸಿದ್ದೀರ , ಚೆನ್ನಾಗಿದೆ. ನಾವು ಅಳಿಯ ಬೇಕಾದದ್ದು ಬಹಳಷ್ಟಿದೆ.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  12. :) EllarigU gottiruva kahi satyavidu.. aadare yaarU saripadisalaagadanthaddu!!

    ReplyDelete
  13. dhanyavaada Baalujee...nimma abhimaana pratikriyege

    ReplyDelete
  14. ತೇಜಸ್ವಿನಿ...ಹಹಹ ನೋಡಿ ಹೇಗಿದೆ..??ಬಾಲುಗೆ ರಿಪ್ಲೈ ಮಾಡೋವಾಗ ನನ್ನ ಕನ್ನಡ ಟೈಪಿಂಗ್ ಕೈ ಕೊಡ್ತು...ಮತ್ತೆ ಸ್ವಲ್ಪ ಸಮಯದ ನಂತರ ನಿಮ್ಅಗೆ ಪ್ರತಿಕ್ರಿಯೆ ಹಾಕುವಾಗ ವಾಪಸ್....ಹಹಹ ಧನ್ಯವಾದ ನಿಮ್ಮ ಅಭಿಪ್ರಾಯ ಮತ್ತು ಕಾಮೆಂಟ್ ಮಾಡಿದ್ದಕ್ಕೆ.

    ReplyDelete
  15. neevu annodu nija sir

    kannada kevala november 1 ge maatra anista ide

    ReplyDelete
  16. ಡಾಕ್ಟ್ರೇ, ಪ್ರತಿ ಸರ್ತಿ ಬೆಂಗಳೂರಿಗೆ ಹೋದಾಗ ಇದೇ ಅನುಮಾನ ಬಲವಾಗ್ತಾ ಹೋಗುತ್ತೆ...ಒಂದಿನ ಹುಡುಕಬೇಕಾಗಬಹುದು..ಎಲ್ಲಿದ್ದಾರೆ ಕನ್ನಡಿಗರು ಅಂತ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  17. hmmm... naalku varusha bengaloorinalli iddu e kahisathyavannu nodiddene anubhavisiddene... nimma kavana sathyavaadhudhu...

    ReplyDelete
  18. ಸುಧೇಶ್ ಧನ್ಯವಾದ...ಹೌದು ಬೆಂಗಳೂರು ಅಂತ ಆಂಗ್ಲ ಸ್ಲಾಂಗ್ ನ ಬ್ಯಾಂಗಲೂರ್ ಬದಲಾಯಿತೇ ಹೊರತು ಅದರ ಭಾಷೆಯ ಗತಿ ಅಧೋಗತಿಯಾಯ್ತು...

    ReplyDelete
  19. ಕವನ ಹೊಸ ಅರ್ಥ ಕೊಡುವ ಮೂಲಕ . ಕನ್ನಡಿಗರ ಬದುಕನ್ನ ಅನಾವರಣ ಗೊಳಿಸಿದೆ .ಚಳಿಗೆ ನಡುಗುತ್ಹಿರುವುದು ಈಡಿ ಕನ್ನಡಿಗರ ಬದುಕು .

    ReplyDelete
  20. ಶಿವಪ್ರಸಾದ ಧನ್ಯವಾದ ಮೊದಲಿಗೆ ಜಲನಯನಕ್ಕೆ ಸ್ವಾಗತ...ನಿಮ್ಮ ಪ್ರತಿಕ್ರಿಯೆ ಎಲ್ಲ ಕನ್ನಡ ಕಾಳಜಿ ಇರುವವರ ಮನದಾಳದ ಮಾತು...

    ReplyDelete
  21. azad sir..

    satya sangatiya vicharannu nimmade ada sundara padagalinda heliddira...

    idu nija sir kannad aandare adu November anno hage agogide..

    ReplyDelete
  22. ಪ್ರೀತಿಯ ಆಜಾದ್ ಸರ್,
    ಉತ್ಕೃಷ್ಟ ಬ್ಲಾಗ್ ನಿಮ್ಮದು!
    ಶುಭವಾಗಲಿ.
    ಬ್ಲಾಗ್ ಲೋಕವನ್ನು ನನಗೆ, ನನ್ನನ್ನು ಬ್ಲಾಗ್ ಲೋಕಕ್ಕೆ ಪರಿಚಯಿಸಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು.
    ಅಭಿಮಾನದಿಂದ,
    ಅದಮ್ಯಾಯುಷ್ಯ

    ReplyDelete