Saturday, January 1, 2011

ದೀಕ್ಷೆ

ಈ ವರ್ಷ ಪ್ರತಿ ವರ್ಷ
ಹೊಸ ಹೊಸತು ತರಲಿ
ಈ ಬೆಳಗಿನಾನಂದ ಪ್ರತಿ ಬೆಳಗೂ ಇರಲಿ

ಕನ್ನಡತೆ ನನ್ನಡತೆ
ಎಲ್ಲರಲೂ ಬರಲಿ
ದಿನದೀಕ್ಷೆ ಬೇಕಿಲ್ಲ ಎಲದಿನವೂ ಇರಲಿ

ನಿನ್ನಿಂದ ಆನಂದ
ನಂದನವ ಬೆಳೆಸು
ಚಂದನದ ನಾಡಲ್ಲಿ ಕನ್ನಡವನುಳಿಸು

ನಾಡಲ್ಲಿ ನೋಡಿಂದು
ಅಳುತಿಹಳು ತಾಯಿ
ಉಳುವವನ ಗೇಯ್ಮೆಯಲಿ ನಡುವನದೇ ಬಾಯಿ

ಒಳಹೊರಗೂ ಪ್ರತಿಭೆಯಿದೆ
ಪ್ರಜ್ವಲಿಸಿ ಮೆರೆಸು
ಮೆರೆದಿಹರು ನಮ್ಮವರು, ಹೆಸರಿಂದು ಉಳಿಸು

ಆಳುವವ ಬೀಳುತಿಹ
ಗೋಳಾಯ್ತು ಹಗಲು
ನೀನಾರಿಸಿ ಕಳಿಸಿರುವೆ ನಿನದಾಯ್ತು ಸೋಲು

ನಿನ ಕೈಲೇ ಇದೆಯಲ್ಲ
ಎಲ್ಲದಕೂ ಕೀಲಿ
ಒತ್ತಿ ಬಿಡು, ಬಿತ್ತಿ ಬಿಡು, ಹಾಕಿಬಿಡು ಬೇಲಿ

28 comments:

  1. ಜಲನಯನ,
    ಹೊಸ ವರ್ಷಕ್ಕೆ ಸಂಕಲ್ಪ ಹಾಗು ದೀಕ್ಷೆ ಬೇಕೇ ಬೇಕು. ಅದರೊಟ್ಟಿಗೆ ದೇವನ ಅನುಗ್ರಹವೂ ಬೇಕು. ಇದೆಲ್ಲ ಈ ವರ್ಷ ಸಿದ್ಧಿಸಲಿ ಎಂದು ಹಾರೈಸೋಣ.

    ReplyDelete
  2. ಅಜಾದ್ ಸರ್,
    ಎಲ್ಲ ಸಂಕಲ್ಪ, ದೀಕ್ಷೆಗಳು ಸಿದ್ಧಿಸಲಿ,
    ಹೊಸವರ್ಷದ ಸುಭಾಶಯಗಳು........

    ReplyDelete
  3. hosa varshakke olleya kavana
    hosa varshada shubhaashayagalu

    ReplyDelete
  4. ಸುನಾಥಣ್ಣ ಧನ್ಯವಾದ..ಹೌದು ಎಲ್ಲ ಉಪದೇಶಿಸುವವರು ಅದರಂತೆ ನಡೆವಲ್ಲಿ ೫೦ % ಆಸಕ್ತಿ ತೋರಿದರೂ ಕಲ್ಯಾಣ ವಾದಂತೆ

    ReplyDelete
  5. ಪ್ರವೀಣ್...ಅಬ್ಬಾ...ಅಂತೂ ಬಂದೇ ಬಿಟ್ಟೆ....ನಿನಗೆ ಸಮಯ ಸಿಕ್ತಿಲ್ಲ ಅಂತ ಪಕ್ಕು ಮಾಮ ಹೇಳ್ತಿದ್ದ ...ಧನ್ಯವಾದ ನಿನ್ನ ಪ್ರತಿಕ್ರಿಯೆಗೆ....ಹೊಸವರ್ಷದ ಶುಭಾಶಯಗಳು

    ReplyDelete
  6. ಡಾ. ಗುರು..ಧನ್ಯವಾದ ಮತ್ತು ಹೊಸ ವರ್ಷದ ಹಾರ್ದಿಕ ಶುಭಕಾಮೆನೆಗಳು..
    ನ್ಯೂ ಇಯರ್ ರೆಸಲ್ಯೂಶನ್ ಅನ್ನೋದನ್ನ ಕೇಳಿ ಹೀಗೆ ಅನಿಸಿದ್ದನ್ನ ಬರೆದೆ...

    ReplyDelete
  7. ಅಜಾದ್,
    ನಿಮ್ಮ ದೀಕ್ಷೆ ಮತ್ತು ಅದರ ಬಗ್ಗೆ ಬರೆದ ಕವನ..ಎರಡೂಚೆನ್ನಾಗಿದೆ. ಬರೆದಂತೆ ನಿಮ್ಮ ಬಾಳಲಿ ನಡೆಯಲಿ ಅಂತ ಹೊಸ ವರ್ಷಕ್ಕೆ ಹಾರೈಸುತ್ತೇನೆ.

    ReplyDelete
  8. nimma resolutions ella IDErali. nimagU hosa vaRshada SubhASayagaLu.

    ReplyDelete
  9. ಶಿವು, ಧನ್ಯವಾದ..ದೀಕ್ಷೆ..ಸಂಕಲ್ಪ ಎಲ್ಲಾ ಬಿಡಿ.. ಅಲ್ಪನಾವು ಮಡಿದ್ರೂ ಆದೀತು ಕಾಯಕಲ್ಪ...ನಿಮ್ಮ ಹೊಸವರ್ಷದ ಸಂಕಲ್ಪಾನೋ ದೀಕ್ಷೇನೋ...ಅಥವಾ ಹೇಮಾಶ್ರೀ..ತಗೊಳ್ರಿ ಈ ಡೇಕ್ಷಾ ಅಂದರೆ ಕಷ್ಟ...ಹಹಹ

    ReplyDelete
  10. ಉದಯ್, ಹೊಸ ವರ್ಷದ ಹಾರ್ದಿಕ ಶುಭಾಶಗಳು..ನನ್ನ ದಿಕ್ಷೆ ಅದರಲ್ಲೇ ಇದೆಯಲ್ಲಾ ಎಲ್ಲಿದ್ದರೂ ಕನ್ನಡೆಸುವುದು....ಹಹಹ ಧನ್ಯವಾದ...

    ReplyDelete
  11. ಆಜಾದ್ ಸರ್, ತಮಗೂ ತಮ್ಮ ಮನೆಯ ಎಲ್ಲರಿಗೂ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು. ನೀವು ಇಚ್ಛಿಸುವ ಕಾರ್ಯಗಳು ಸುಗಮವಾಗಿ ಸಾಗಲಿ, ನಿಮ್ಮ ಮನೆ-ಮನ ಸುಖ-ಸಂತೋಷ ಸಮೃದ್ಧಿಯಿಂದ ಭರಿತವಾಗಲಿ, ಜ್ಞಾನಮಾರ್ಗದಲ್ಲಿ ಹೆಜ್ಜೆ ಮುಂದಡಿಯಿಡುತ್ತಲೇ ಇರುವ ನಿಮಗೆ ಹೊಸದಾಗಿ ಹೇಳಲು ಶಕ್ತನಲ್ಲ, ಆದರೂ ಹೇಳಿದ್ದು ಕೇವಲ ನಿಮಿತ್ತಮಾತ್ರ, ಶುಭಾಶಯ ಕವನ ಚೆನ್ನಾಗಿದೆ,ಧನ್ಯವಾದಗಳು.

    ReplyDelete
  12. ನಿಮ್ಮೊಲವಿನ ಮಾತಿಗೆ ಧನ್ಯವಾದ ವಿ.ಆರ್.ಬಿ ಸರ್. ಜ್ಞಾನಸಾಗರದಲ್ಲಿ ಈಜುವುದು ಸುಲಭ ಮುಳುಗುವುದು ಕಷ್ಟವಂತೆ...ಅಂದರೆ ಅಲ್ಲಿನ ಅಗಾಧತೆ ನಮ್ಮನ್ನು ಮುಳುಗಬಿಡುವುದಿಲ್ಲ. ಕಲಿತಷ್ಟೂ ಅನಿಸುವುದು ನನಗೆ ತಿಳಿದಿರುವುದು ಎಷ್ಟು ಕಡಿಮೆ ಎಂದು...!!!ನಿಜ ನಿಮ್ಮ ಮಾತು..ಧನ್ಯವಾದ.

    ReplyDelete
  13. Good resolution...

    chennagide kavana Azad maama....

    ReplyDelete
  14. naanu dheekshe ittukolluva antha maadiddene hosa varushakke... nimma kavana ishta aayithu :)

    ReplyDelete
  15. ಮೈ-ದನಾ... ಏನು...?? ರೆಸ್ಲ್ಯೂಶನ್ ಮಾಡ್ಕೊಳ್ಳದೇ ಓತ್ಲಾ ಹೊಡಿಯೋ ಇರಾದೆನಾ...?? ಹಹಹಹ್...ಹೊಸ ವರ್ಷದ ಶುಭಾಶಯಗಳು ಇಬ್ರಿಗೂ...ಸಾರಿ ಮೂವರಿಗೂ...

    ReplyDelete
  16. ಸುಧೇಶ್ ಧನ್ಯವಾದ..ಹೊಸ ವರ್ಷದ ಹಾರ್ದಿಕ ಶುಭಾಶಯಗಳು...ಏನು ಹೊಸ ವರ್ಷದ ರೆಸಲ್ಯೂಷನ್ನು..ಇದ್ರೆ ಜಾರಿ ಮಾಡಿ ಇಲ್ಲಾಂದ್ರೆ ಜಾರಿಕೊಳ್ಳಿ...ಹಹಹಹ

    ReplyDelete
  17. ಕವಿತೆಯ ಸಾಲಿನ ಪ್ರತಿ ಪದವೂ ನನಗೆ ಇಷ್ಟವಾಯಿತು. ನಿಮ್ಮ ಕನಸಿನ ಬಯಕೆಗಳೆಲ್ಲಾ ಈ ವರ್ಷ ಈಡೇರಲಿ.ನಿಮ್ಮ ಮನೆಯವರಿಗೆಲ್ಲಾ ನನ್ನ ಶುಭಾಶಯಗಳು.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  18. ಬಾಲು ನಿಮ್ಮ ಆತ್ಮೀಯತೆಗೆ ಧನ್ಯವಾದ...ನಿಮಗೂ ನಿಮ್ಮ ಕುಟುಂಬದವರೆಲ್ಲರಿಗೂ ಹಾರ್ದಿಕ ಶುಭಕಾಮನೆಗಳು.

    ReplyDelete
  19. ನಿಮ್ಮ ನಮ್ಮೆಲ್ಲರ ಸಂಕಲ್ಪಗಳು ಈಡೇರಲಿ...

    ReplyDelete
  20. ಗುರು, ಧನ್ಯವಾದ ನಿಮ್ಮ ಹಾರೈಕೆಗೆ..ನಿಮ್ಗೂ ಶುಭಾಶಯಗಳು....

    ReplyDelete
  21. ಹೊಸ ವರ್ಷದ ಶುಭಾಶಯಗಳು! :)

    ReplyDelete
  22. holleya bhayake.. chenagide sir.. prati salinallu bhava tumbide...

    ಹೊಸ ವರ್ಷದ ಶುಭಾಶಯಗಳು!

    danyavadagalu.. :)

    ReplyDelete
  23. ಕನ್ನಡತೆ ನನ್ನಡತೆ
    ಎಲ್ಲರಲೂ ಬರಲಿ.

    ಚೆನ್ನಾಗಿವೆ ಈ ಸಾಲುಗಳು. ನಿಮ್ಮ ಹಾರೈಕೆ ನಿಜವಾಗಲಿ.

    ReplyDelete
  24. ಪ್ರದೀಪ್ ಧನ್ಯವಾದ ನಿಮ್ಮ ಅನಿಸಿಕೆಗೆ..ನಿಮಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು

    ReplyDelete
  25. ತರುಣ್ ನಿನ್ನ ಪ್ರತಿಕ್ರಿಯೆಗೆ ಧನ್ಯವಾದ..ಹೇಗಾಯ್ತು ಹೊಸ ವರ್ಷದ ಆರಂಭ...? ಮತ್ತೆ ನಿನ್ನ ಸಂಕಲ್ಪ ದೀಕ್ಷೆ ಏನು,,,> ಶುಭವಾಗಲಿ.

    ReplyDelete
  26. ಸತೀಶ್..ಹೌದು..ಕನ್ನಡತೆ ನನ್ನಡತೆ...ಎಲ್ಲಕಡೆ ಹರಡಲಿ...ಧನ್ಯವಾದ..ನಿಮಗೂ ಹಾರ್ದಿಕ ಶುಭಕಾಮನೆಗಳು.

    ReplyDelete
  27. ಗೆಳೆಯಾ...

    ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು...

    ನಿನ್ನೆಲ್ಲ ಆಸೆ...
    ಕನಸುಗಳು... ಸಾಕಾರವಾಗಲಿ...

    ಪ್ರೀತಿಯಿಂದ...

    ReplyDelete
  28. ಧನ್ಯವಾದ ಪ್ರಕಾಶು...
    ನಿನಗೂ ಹೊಸ ವರ್ಷದ ಹಾರ್ದಿಕ ಶುಭಕಾಮನೆಗಳು....

    ReplyDelete