Wednesday, January 19, 2011

ಕರವೋಕೆ,,,,,,ಪ್ರಿಯರಿಗೆ....

ಕೊಂದೆ ಕಣ್ಣಲ್ಲೇ ನನ್ನ (ಲೇಕೆ ಪಹಲಾ ಪಹಲಾ ಪ್ಯಾರ್ ಶೈಲಿ)


ಕೊಂದೆ ಕಣ್ಣಲ್ಲೇ ನನ್ನ
ಬಿಟ್ಟು ನೋಟದ ಹೂಬಾಣ
ಕದ್ದೆ ಮನಸನ್ನು ಚಲುವಾ
ನಾ ಬಿಡಿಸುವೆ ಬಿಂಕಾನಾ//೨//
ಓ ನನ್ನ ಕನಸಲು ನೀನೇನೇ
ನನ್ನ ಮನಸಿನರಾಣೀನೆ
ಬಂದು ನನಸಲ್ಲೂ ನೆಲಸು
ನಾ ಮುಡಿಸುವೆ ಹೂವನ್ನ//ಕೊಂದೆ ಕಣ್ಣಲ್ಲೆ//

ಮುಂಗುರುಳ ಉರುಳ ನೀ
ಹಾಕಬೇಡ ಚಂಚಲೇ
ಕೊಲ್ಲಬೇಡ ನನ್ನನು
ಸಾಯುವ ಮೊದಲೇ// ಮುಂಗುರುಳ ಉರುಳ ನೀ// ೨//
ಹಾಯ್ ..ನಿನ್ನೀ ನಯನದ ಹೂ ಬಾಣ
ತೆಗೆದರೆ ನನ್ನಯ ಈ ಪ್ರಾಣ
ಮತ್ತೆ ಹುಟ್ಟಿ ಬರುವೆ ನಾ ನಿನಗಾಗಿ ಓ ಚಿನ್ನಾ// ಕೊಂದೆ ಕಣ್ಣಲ್ಲೇ ನನ್ನ//೨//

ಕಣ್ಣಲ್ಲೇ ತುಂಬಿಕೊಂಡೆ
ಕಾಣಲೆಂದೇ ಕನಸನ್ನ
ನನಸಲ್ಲಿ ಬಂದು ನೀನು
ನಿಜ ಮಾಡು ಕನಸನ್ನ//ಕಣ್ಣಲ್ಲೇ ತುಂಬಿಕೊಂಡೆ//೨//
ಹಾಯ್...ಕೋಪ ಮಾಡಿದರೂ ಚನ್ನಾ
ಅದರುವ ತುಟಿಗಳು ಬಲು ಚನ್ನ
ನಿನ್ನಕೆಂಪಾದ ಕೆನ್ನೆಯೂ ಕರೆದಿದೆ ಇನಿಯನ್ನ//ಕೊಂದೆ ಕಣ್ಣಲ್ಲೆ ನನ್ನ// ೨//

ಮುಸಿ ಮುಸಿ ನಗುತಾಳೆ
ಕೇಳಿ ಸವಿ ಮಾತನ್ನೇ
ತಡೆಯಲಾಗದಂತೆ ನಗು
ತುಟಿ ತಡೆದು ಮನದನ್ನೆ//ಮುಸಿ ಮುಸಿ ನಗುತಾಳೆ//೨//
ಹಾಯ್...ಮನಸಲಿ ಮಂಡಿಗೆ ನೀ ತಿಂದು
ಮೊಗದಲಿ ಹುಸಿ ಮುನಿಸು ಬಂದು
ಕಡೆಗೆ ನಕ್ಕೇ ಬಿಡುತಾಳೆ ನನ್ನವಳೋ ಇವಳು//ಕೊಂದೆ ಕಣ್ಣಲ್ಲೆ ನನ್ನ//೨//
ಮೂಲ ಹಾಡು ಇಲ್ಲಿದೆ ನೋಡಿ
http://www.youtube.com/watch?v=SFqGQ54WT9Y


37 comments:

 1. ಆಜಾದು...

  ಮಸ್ತ್ .. ಮಸ್ತ್.. !!

  ತುಂಬಾ ಚೆನ್ನಾಗಿದೆ ಕಣೊ...

  ನಾನೂ ಕೂಡ ಆ ಹಾಡಿನ ಧಾಟಿಯಲ್ಲಿ ಹಾಡುವ ಪ್ರಯತ್ನ ಮಾಡಿದೆ...

  ಜೈ ಹೋ...!

  ReplyDelete
 2. sir super agi bandi de sir...

  ondu sundar songna tunege super agi holle artabaddavagi barediddira sir.. its too good...

  danyavaadagalu sir...

  ReplyDelete
 3. ಚೆನ್ನಾಗಿದೆ,

  ಇಂತಿ ನಿಮ್ಮ ಪ್ರೀತಿಯ ಗುಬ್ಬಕ್ಕ.

  ReplyDelete
 4. "ಲೇಕೆ ಪಹಲಾ ಪಹಲಾ ಪ್ಯಾರ್" ಈ ಹಾಡು ನನ್ನ ಇಷ್ಟದ ಹಾಡೂ ಕೂಡ ಹೌದು. ಈ ಹಾಡಿಗೆ ಕನ್ನಡ ಪದಗಳ ಜೋಡಣೆ ಚೆನ್ನಾಗಿದೆ.ನಿಮಗೆ ಥ್ಯಾಂಕ್ಸ್.

  --
  ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

  ReplyDelete
 5. ಆಜಾದ್ ಸರ್,
  ಸುಂದರವಾಗಿದೆ. ನಿಮ್ಮ ಈ ರೀತಿಯ ಕವನಗಳು ಪದೇ ಪದೇ ಗುನುಗುವಂತೆ ಮಾಡುತ್ತವೆ.

  ReplyDelete
 6. ಜಲನಯನ,
  ಗಣಕ ಯಂತ್ರದ ತೊಂದರೆಯಿಂದಾಗಿ, ಒಂದು ವಾರ ಅಂತರಜಾಲಕ್ಕೆ ಬರಲಾಗಿರಲಿಲ್ಲ. ಈ ದಿನ ಮೊದಲಲ್ಲಿ ನಿಮ್ಮ ಕವನವನ್ನು ಓದಿದೆ(ಹಾಡಿಕೊಂಡೆ). ಖುಶಿಯಾಯಿತು.
  ಧನ್ಯವಾದಗಳು.

  ReplyDelete
 7. ಅಜಾದ್,
  ಕೊಂದೆ ಕಣ್ಣಲ್ಲೇ ಹಾಡಿಕೊಂಡು ಖುಷಿಯಾಯ್ತು..
  ಸುಂದರ ಹ್ಹಿನ್ನಲೆ ಸಂಗೀತಕ್ಕೆ ಒಪ್ಪುವಂತ ಸಾಲುಗಳು

  ReplyDelete
 8. 'ಕೊಂದೆ ಕಣ್ಣಲ್ಲೇ ನನ್ನನ್ನು'ಹಾಡು ತುಂಬಾ ಚೆನ್ನಾಗಿದೆ ಅಜಾದ್ ಸರ್.ನೀವು ಹೇಳಿದ ಧಾಟಿಯಲ್ಲಿ ಹಾಡಲು ಪ್ರಯತ್ನಿಸುತ್ತಿದ್ದೀನಿ.

  ReplyDelete
 9. ಪ್ರಕಾಶಾ ಈ ಹಾಡು ಬರೆದಾಗ ನಿನ್ನ ನೆನಪು ಬಂತು...ಹಹಹ...ಅದಕ್ಕೆ ಇಂಬು ಕೊಡೋಹಾಗೆ ಪ್ರತಿಕ್ರಿಯೆಯಲ್ಲಿ ನಿನ್ನದೇ ಮೊದಲು...ಧನ್ಯವಾದ ದೋಸ್ತಾ...

  ReplyDelete
 10. ತರುಣ್ ಥ್ಯಾಂಕ್ಸ್..ನಿನ್ನ ಪ್ರತಿಕ್ರಿಯೆಗೆ...
  ಹಳೆಯ ಹಾಡುಗಳ ಗಹನತೆ ಹಾಡನ್ನು ಭಾವಾರ್ಥಕ್ಕೊಳಪಡಿಸೋಕೆ ಮನಸಾಗುತ್ತೆ...ಇಂದಿನ ಹಾಡುಗಳಲ್ಲಿ ಆ ಆಳ ಇಲ್ಲ

  ReplyDelete
 11. ಸತೀಶ್, ಧನ್ಯವಾದ..ಆದ್ರೆ ಣಿವು ನನ್ನ ಹಿಂದಿನ ಕರವೋಕೆಗೆ ನಿಮ್ಮ ಪೂರಕ ಸಲಹೆ ಕೊಡ್ಲಿಲ್ಲ....
  ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...

  ReplyDelete
 12. ಬಾಲು ಧನ್ಯವಾದ ..ಇವನ್ನು ನಾನು ಹಾಡಿ ನಂತರ ಬರೆದಿದ್ದನ್ನು ತಿದ್ದಿದ್ದೇನೆ..ಆಅದ್ರೂ ಇವುಗಳಲ್ಲಿ ತಿದ್ದುಪಡಿ ಇದ್ರೆ ಯಾರೂ ತಿಳಿಸಬಹುದು...

  ReplyDelete
 13. ಸೌಮ್ಯ, ಧನ್ಯವಾದ..ಗುನುಗುನಿಸಲು ಹಾಡು ಲಯ ಬದ್ಧವಾದ್ರೆ ಅದೂ ಹಳೆಯ ಲಯ ಈಗ್ಲೂ ಇಂಪು...ಅದಕ್ಕೆ ಈ ಪ್ರಯತ್ನ...ಮೆಚ್ಚಿದ್ದಕ್ಕೆ ಮತ್ತೊಮ್ಮೆ ಧನ್ಯವಾದ

  ReplyDelete
 14. ಸುನಾಥಣ್ಣ ...ನಿಮ್ಮ ಪ್ರೋತ್ಸಾಹಕ್ಕೆ ನನ್ನಿ...ತಿದ್ದುಪಡಿ ಇದ್ರೆ ಖಂಡಿತಾ ತಿಳ್ಸಿ ನಿಮ್ಮ ಮಾತು ನಮಗೆ ಮಾರ್ಗದರ್ಶನ...

  ReplyDelete
 15. ಪರಾಂಜಪೆ ಸರ್, ನೀವು ಬೆಳಿಗ್ಗೆ ಬಜ್ ನಲ್ಲಿದ್ದಾಗ ಕೇಳೋಣ ಅಂತಿದ್ದೆ...ನಿಮ್ಮ ಅಭಿಪ್ರಾಯ ..ಟಿಪ್ಪಣಿ ಖಂಡಿತಾ ತಿಳಿಸಿ..

  ReplyDelete
 16. ಪಾತರಗಿತ್ತಿಗೆ...ಧನ್ಯವಾದ..ನಿಮ್ಮ ಮೆಚ್ಚಿಕೆಗೆ ಮತ್ತು ನನ್ನ ಸಾಹಿತ್ಯಕ್ಕೆ ಕಂಠಕೊಟ್ಟಿದ್ದಕ್ಕೆ...ನಿಮ್ಮ ಸಲಹೆ ಇದ್ರೆ ಖಂಡಿತಾ ತಿಳ್ಸಿ...

  ReplyDelete
 17. ಡಾಕ್ಟ್ರೇ, ನಿಮ್ಮ ಲಾಖೋಂ ಎಹಾಂ ಹೈ ದಿಲ್ ವಾಲೆ....ನನಗೆ ಹಿಡಿಸಿದ್ದು..ಅದಕ್ಕೂ ಸಾಹಿತ್ಯ ಜೋಡಿಸಿದ್ದೇನೆ..ಕಳುಹಿಸ್ತೇನೆ ನಿಮಗೆ...ಧನ್ಯವಾದ..

  ReplyDelete
 18. ಧನ್ಯವಾದ ಕೀರ್ತಿ,,,ನಿಮ್ಮ ಪ್ರೋತ್ಸಾಹಕ್ಕೆ...

  ReplyDelete
 19. ವಿಜಯಶ್ರೀ, ಒಂದೇ ಶಬ್ದ...ನೈಸ್...ಎಷ್ಟೊಂದು ಹೇಳದಮಾತನ್ನು ಹೇಳಿದೆ...???!! ಧನ್ಯವಾದ

  ReplyDelete
 20. ಡಾಕ್ಟ್ರೇ, ಹಾಡೂ ಬರುತ್ತೆ ಅಂದ್ಕೊಂಡಿದ್ದೆ,,..ಥ್ಯಾಂಕ್ಸ್ ನಿಮ್ಮ ಪ್ರತಿಕ್ರಿಯೆಗೆ

  ReplyDelete
 21. ಸಿನಿಮಾ ಹಾಡಿನಂತೆ ಅದ್ಭುತವಾದ ಸಾಲುಗಳು ಜಲನಯನ ಸರ್ ಧನ್ಯವಾದಗಳು..


  ವಸಂಗತ್

  ReplyDelete
 22. ಅಜಾದ್,

  ಹಾಡಿನ ರೂಪದಲ್ಲಿ ಬರೆದ ಈ ಪದ್ಯ ತುಂಬಾ ಚೆನ್ನಾಗಿದೆ. ಸರಿಯಾಗಿ ಒಂದು ರಾಗವನ್ನು ಹಾಕಿದರೆ ಸೊಗಸಾಗಿ ಹಾಡಬಹುದೇನೋ ಅನ್ನಿಸುತ್ತೆ. ನೀವೇ ಒಂದು ರಾಗ ಹಾಕಿ ಹಾಡಿ ಅದನ್ನು ವಿಡಿಯೋ ಮಾಡಿ ಅದನ್ನು ಬಜ್‍ನಲ್ಲಿ ಹಾಕಿಬಿಟ್ಟರೆ ಪೂರ್ತಿ ಆದಂತೆ ಆಯಿತಲ್ಲ...
  ಪ್ರಯತ್ನಿಸಿ.

  ReplyDelete
 23. ಒಳ್ಳೆ ಟ್ಯೂನ್ ಹಾಕಿದರೆ ಸುಂದರ ಭಾವಗೀತೆಯಾಗಬಹುದು ಸರ್

  ReplyDelete
 24. ವಸಂತ್ ಧನ್ಯವಾದ ನಿಮ್ಮ ಪ್ರೋತ್ಸಾಹದ ಮಾತಿಗೆ...

  ReplyDelete
 25. ಶಿವು, ನಿಮ್ಮ ಮಾತು ನಿಜಕ್ಕೂ ಸೀರಿಯಸ್ಸಾಗುವಂತೆ (ಐ ಮೀನ್ ಗಂಭಿರ‍ ಅಗುವಂತೆ) ನನ್ನನ್ನು ಮಾಡಿದ್ದಂತೂ ನಿಜ,,,,ಅಹಹಹ ಪ್ರಯತ್ನಿಸುತ್ತೇನೆ ನೋಡೋಣ,

  ReplyDelete
 26. ದೀಪಸ್ಮಿತ ನಿಮ್ಮ ಮಾತಿಗೆ ಧನ್ಯವಾದ..
  ಹೌದು ನನಗೂ ಅನ್ನಿಸ್ತು ಹಾಗೆಯೇ ಯಾರಾದ್ರೂ ಪ್ರಯತ್ನಿಸುತ್ತಾರಾ ನೋಡೋಣ..

  ReplyDelete
 27. mUla haaDina dhaaTiyalli haaDikonDare majaa baratte ... tumbaa sogasaagide sir...

  ReplyDelete
 28. ನನ್ನನ್ನು ವಿಚಲಿತಗೊಳಿಸಿದಿರಿ ನಿಮ್ಮ ಸುಮ್ಮನೇ ಹೀಗೇ ..ಕಾಮೆಂಟಿಗೆ...ಧನ್ಯವಾದ

  ReplyDelete
 29. ದಿನಕರ್, ಹಾಡನ್ನು ಹಾಡಿ ಸಾಧ್ಯವಾದರೆ ಬಜ್ ನಲ್ಲಿ ಹಾಕ್ತೇನೆ...ಹಹಹಹ....ಥ್ಯಾಂಕ್ಸ್ ನಿಮ್ಮ ಪ್ರತಿಕ್ರಿಯೆಗೆ

  ReplyDelete
 30. ಧನ್ಯವಾದ ಕೀರ್ತಿ...ನಿಮ್ಮ ಪ್ರತಿಕ್ರಿಯೆಗೆ...

  ReplyDelete