Thursday, January 27, 2011

ಜಾಣ ಮೀನು

ಸ್ನೇಹಿತರೆ 
ಜಲನಯನದ ಮೊದಲ ಪುಟದ ಮೊದಲ ಪ್ರಸ್ತುತಿ ಕೆಲ ಮಾರ್ಪಾಡುಗಳ ಕವನ ನಿಮ್ಮ ಮುಂದೆ... ಇಂದಿನ ಪ್ರಸ್ತುತ ರಾಜ-ಅಕಾರಣಗಳ ವಿಪರ್ಯಾಸಗಳಲ್ಲಿ ನಲ್ಗುತ್ತಿರುವುದು  ಅಮಾಯಕ ಜನತೆ, ಅವರ ಆಶೋತ್ತರಗಳನ್ನು ತಮ್ಮ ಸ್ವಾರ್ಥದ ಬೆಳವಣಿಗೆಗೆ ಬಳಸುತ್ತಿರುವ ಜನ ಪ್ರತಿನಿಧಿಗಳು, ಬೇಕಾಗಿಯೋ, ಬೇಡದೆಯೋ, ಸಂದರ್ಭಕ್ಕೆ ಕೊಗೊಮ್ಬೇಯಾದೆಯೆಂಬ ಮರೀಚಿಕೆಗೊಳಗಾಗಿಯೋ ವರ್ತಿಸುವ ಅಧಿಕಾರಿಗಳು ಒಟ್ಟಿನಲ್ಲಿ ನಾಡು ದೇಶ ಸಿರಿಯಿಂದ ಕೂಡಿದ್ದೂ ಬಡತೆಯ ನೆತ್ತಿ ಪಟ್ಟಿ ..ಎಲ್ಲವನ್ನು ಸೂಚ್ಯವಾಗಿಸುವ ಪ್ರಯತ್ನ.  
ಜಾಣ ಮೀನು
ಅಲೆಮೇಲೆ ಅಲೆಯೋ
ಅಲೆಮಾರಿ ಮೀನು
ನೆಲೆ ಕಂಡ ಸೆಲೆಯಲಿ
ಮೆಲ್ಲನೆ ನುಸುಳಿತು ಬೋನು
ಕಂಡರಿಯದ ಬಲೆಯದು
ತಿಳಿಯದ ಕೆಲ ಮೀನು
ಅರಿಯದೆ ಸಿಕ್ಕಿಕೊಂಡವು ಹಲವು
ಅಡಗಿ ಕುಳಿತಿತ್ತು ಅಲ್ಲೇ ಸಾವು
ಅಲ್ಲೇ ಇದ್ದವು ಜಾಣ ಮೀನು
ಸಿಕ್ಕ ಮೀನ ತಿಂದವು 
ಕೊಂಡೂ ಹೋದವು
ಇನ್ನೂ ಕೆಲ ಸ್ವತಂತ್ರ ಮೀನ
ಚೂಪುಹಲ್ಲು ಬಲೆಯ ಹರಿದವು
ಜಿಗಿದವು ಜೊತೆ ಜೊತೆ
ಬಲೆಗಾರಗೆ ಸಿಕ್ಕಿ ಬಿದ್ದದ್ದು  
ತಿಂದು ಮೈಮರೆತ ದೊಡ್ಡ ಮೀನು
ದಿಕ್ಕುತೋಚದ ಕಂಗೆಟ್ಟ ಪುಟ್ಟ ಮೀನು


40 comments:

 1. tumbaa chennagide meeenina kavana
  dodda meenu, chikka meenu
  ondannu innondu tindavu

  ReplyDelete
 2. ಡಾಕ್ಟ್ರೇ...ನಿಜ ಆದ್ರೆ ಅಲ್ಲಿ ಅದು ಪ್ರಕೃತಿ ನಿಯಮ
  ಇಲ್ಲಿ ನಮ್ಮ ಅರಾಜಕಾರಣಿಗಳದ್ದು ..!!?? ವಿಕೃತ ನಿಯಮ...ನೋಡಿ ಎಂಥ ಧಾಂಧಲೆ, ಹಗರಣ...ಎಲ್ಲ ಮಾಡಿಸೋರು ನಾವೇ ಅಲ್ಲವೇ..?? ಇವರನ್ನು ಚುನಾಯಿಸಿ...??!!

  ReplyDelete
 3. chandada kavana..... raajakaaranigaLa kathe kooda heege thane.. ondu vyathyaasavendare alli niyamagaLilla... gaaLi beesida kade thoorikoLLo haage :)

  ReplyDelete
 4. ಚಂದದ ಕವನ .. ವಿಡಂಬನಾತ್ಮಕವಾಗಿದೆ ..

  ReplyDelete
 5. ಜಲನಯನ,
  ತುಂಬ ಅರ್ಥಗರ್ಭಿತ ಕವನವನ್ನು ಕೊಟ್ಟಿದ್ದೀರಿ. ರಾಜಕೀಯದ ಬಲಿಷ್ಠ ಮೀನುಗಳು ಬಲೆಯನ್ನೇ ಹರಿದು ಹಾಕುತ್ತವೆ. ನಿದ್ದೆಯಲ್ಲಿದ್ದ ಕೆಲವು ಸಿಕ್ಕು ಬೀಳುತ್ತವೆ!

  ReplyDelete
 6. ಅಜಾದ್ ಸರ್;ಒಳ್ಳೆಯ ಉಪಮೆಯ ಸುಂದರ ಕವನ.

  ReplyDelete
 7. ಧನ್ಯವಾದ ಸುಧೀಶ್...ಇದೊಂದು ಪ್ರಯತ್ನ ಮೊದಲೇ ಆಗಿದ್ದು..ಆದ್ರೆ ಅದಕ್ಕೆ ಸ್ವಲ್ಪ ಮಾರ್ಪಾಡು ಮಾಡಿ ಮತ್ತೆ ಪೋಸ್ಟ್ ಮಾಡಿದೆ...

  ReplyDelete
 8. ಶ್ರೀಧರ್ ಧನ್ಯವಾದ...ನಿಮ್ಮ ಪ್ರತಿಕ್ರಿಯೆಗೆ

  ReplyDelete
 9. ಸುನಾಥಣ್ಣ..ಮೀನಿಗೆ ನಿಯಮವಿದೆ...ಅದಕ್ಕೆ ಹಸಿವಿದ್ದರೆ ಮಾತ್ರ ಬೇರೆ ಮೀನನ್ನು ತಿನ್ನುತ್ತದೆ (ಮತ್ಸ್ಯಾಹಾರಿ ಮೀನು) ಆದರೆ ನಮ್ಮ ರಾಕ್ಷಸರೂಪಿ ಜನ ಅಮಾಯಕರನ್ನು ಬಲಿತೆಗೆದುಕೊಳ್ಳುತ್ತಾರೆ,,,ತಮಗೆ ಬೇಕಾಗಿಲ್ಲದಿದ್ದರೂ ಅವಶ್ಯಕತೆಗಿಂತ ಹೆಚ್ಚು ಸಂಪತ್ತನ್ನು ಕೂಡಿಡ್ತಾರೆ

  ReplyDelete
 10. ಡಾಕ್ಟ್ರೆ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ...

  ReplyDelete
 11. ವಿಜಯಶ್ರೀ, ಧನ್ಯವಾದ....ಜಲನಯನದ ಉಗಮ ನೋಡಿದ್ರೆ ಈ ಕವನ ಸಿಗ್ತಿತ್ತು ನಿಮಗೆ,,,,ಆದ್ರೆ ನಾನು ಸ್ವಲ್ಪ ಇದನ್ನು ಸ್ವಲ್ಪ ಮಾರ್ಪಡಿಸಿ ಮತ್ತೆ ನಿಮ್ಮ ಮುಂದೆ ತಂದಿದ್ದೀನಿ...

  ReplyDelete
 12. ಆಜಾದ್ ಅವರೇ,
  ಸಮಯೋಚಿತವಾದ ಕವನ.
  ಮೀನಿನ ಬದಲು ತಿಮಿಂಗಲುಗಳು ಅಂದರೆ ಉತ್ತಮವೇನೋ :)

  ReplyDelete
 13. ಆಜ಼ಾದ್ ಸರ್,
  ಫೋಟೊ ತುಂಬಾ ಚೆನ್ನಾಗಿದೆ..... ಕವನವೂ ತುಂಬಾ ಚೆನ್ನಾಗಿದೆ..... ಜೀವನದ ಪಾಠ ಮೀನಿನ ಮೂಲಕ ಹೇಳಿದ್ದೀರಾ....

  ReplyDelete
 14. ಅಪ್ಪ-ಅಮ್ಮನಿಗೆ ಧನ್ಯವಾದ, ಮೀನಿನ ಬದಲಿಗೆ ತಿಮಿಂಗಲಗಳು,,,ಹಹಹ ಹೌದು..ಆದ್ರೆ ಅವು ನೀರಿಂದ ಹೊರಗಿವೆ ಅದೇ ವಿಶಾದ..ಬಲೆಯನ್ನೂ ಬೀಸೋಕೆ ಆಗೊಲ್ಲ...

  ReplyDelete
 15. ದಿನಕರ್ ಫೋಟೋ ಎರವಲು...ಭಾವ ಪ್ರಕಟಕ್ಕೆ...ಮೀನನ್ನು ಹೋಲಿಕೆಗೆ ಯಾಕಂದ್ರೆ ಅವುಗಳ ನುಂಗುವಿಕೆಯೇ ಉಪಮೆ ನಮ್ಮಲ್ಲಿ ...ಅವನೊಬ್ಬ ತಿಮಿಂಗಲ ನುಂಗೋದ್ರಲ್ಲಿ ಎನ್ನೊಲ್ವೇ ..ಹಾಗಾಗಿ.. ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

  ReplyDelete
 16. ಆಜಾದು....

  ಇದೇ.. ನಮ್ಮ ಪರಪಂಚ..
  ಇದು ಹೀಗೇ ಇರ್ತದೆ ...

  ಮಸ್ತ್ ಸಾಲುಗಳು... ಜೈ ಹೋ.. !

  ReplyDelete
 17. ವಾಸ್ತವ ರಾಜಕೀಯಕ್ಕೆ ಹೇಳಿದಂತಿದೆ.... ಮೀನುಗಳ ಕಥೆಯೂ ಹಾಗೆಯೆ.. ಕವನವೂ ತುಂಬಾ ಚೆನ್ನಾಗಿದೆ

  ReplyDelete
 18. ಅರ್ಥಪೂರ್ಣ ಸಾಲುಗಳು..ಚೆನ್ನಾಗಿದೆ.

  ReplyDelete
 19. chennagide meenina ootaa
  beliya kaata
  endu antya ?
  ee rajkaaranigal aata
  jaan meenu tappisikonditu
  pedda meenu bale sikkitu
  aadare illi
  kettavaru bega sigalaararu
  lokayuktaru olleyavarannu bidalaararu
  kaaran avare swalp confuge aagiruvaru..
  chennagide kavan sir..

  ReplyDelete
 20. ಫೋಟೋ & ಕವನ ಚೆನ್ನಾಗಿದೆ sir...

  ReplyDelete
 21. ಪ್ರಕಾಶ ಮೀನಿನಮೂಕವೇದನೆ ಬಲೆಯಲ್ಲಿ ಸಿಕ್ಕಾಗ...ಲೋಕಾಯುಕ್ತರ ಬಲೆಗೆ ಬಿದ್ದ ಮೀನಿಗೆ ಅಮಾಯಕ ಬಿದ್ರೆ (ಕೋತಿ ಮೊಸರು ಮೇಕೆ ಬಾಯಿ ಗೊತ್ತಲ್ಲಾ)...ಹಹಹ ಥ್ಯಾಂಕ್ಯೂ ಕಣೋ...

  ReplyDelete
 22. ಮನಸು ಮೇಡಂ ಧನ್ಯವಾದ...

  ReplyDelete
 23. ಮನಮುಕ್ತಾ ...ಧನ್ಯವಾದ ಮೀನು ತಿಮಿಂಗಲ ಶಾರ್ಕ್ ಎಲ್ಲಾ ನಿಲ್ಲ್ ನಮ್ಮ ಮನುಷ್ಯ ಜಾತಿಯ ಮುಂದೆ...

  ReplyDelete
 24. ಪ್ರದೀಪ್ ನಿಮ್ಮ ಪ್ರತಿಕ್ರಿಯೆಗೆ ನಮನ,....

  ReplyDelete
 25. ಕೀರ್ತಿ, ಜಾಣ ಮೀನು ಎಲ್ಲಾ ಕಡೆನೂ ತಪ್ಪಿಸ್ಕೊಳ್ಳುತ್ತೆ,,,ಅದು ಕಳ್ಳ ಮೀನು ಆಗಿರಬಹುದು ಅಥವಾ ಚಾಣಾಕ್ಷನೂ ಆಗಿರಬಹುದು..ಆದ್ರೆ ಪಾಪ ಕಡೆಗೆ ಮಾನವನ ಕ್ರೂರ ದೃಷ್ಠಿಯಲ್ಲಿ ಸಿಕ್ಕಿ ಬೀಳುತ್ತೆ,,,,

  ReplyDelete
 26. ಗಿಳಿಯರ್, ಬಹುಶಃ ನಿಮ್ಮದು ಮೊದಲಿ ಭೇಟಿಯಿರಬೇಕು...ಸ್ವಾಗತ ನಿಮಗೆ..ಜಲನಯನಕ್ಕೆ ಮತ್ತು ಧನ್ಯವಾದ ಪ್ರತಿಕ್ರಿಯೆಗೆ

  ReplyDelete
 27. ಶಶಿ, ಫೋಟೋ ನನ್ನದಲ್ಲ ಆದ್ರೂ ಭಾವಕ್ಕೆ ಪೂರಕ ಅನ್ನಿಸ್ತು ಅದಕ್ಕೆ ತಗೊಂಡೆ...ಧನ್ಯವಾದ ಪ್ರತಿಕ್ರಿಯೆಗೆ

  ReplyDelete
 28. ತೇಜಸ್ವಿನಿ, ಕೆಲ ಕಳ್ಳ ಮೀನುಗಳು..ತಮ್ಮ ತಲೆಯ ಮೇಲೆ ಒಂದು ಮೀನನ್ನು ಸಿಕ್ಕಿಸಿದ ಗಾಳದ ತರಹದ ಅಂಗ ಹೊಂದಿರುತ್ತವೆ...ಅದನ್ನು ಮೀನು ಎಂದುಕೊಂಡು ತಿನ್ನಲು ಬರುವ ಮೀನು ದೊಡ್ಡ ಬಾಯಿ ತೆರೆದ ಮೀನಿನ ಬಾಯಿಯಬಳಿ ಇದ್ದು ..ಸಮಯ ನೋಡಿ ಗಬಕ್....ಹಹಹ ಇಂತಹ ಹಲವಾರು ರಾಜಕಾರಣಿಗಳು...ಈ ಮಾನವ ಸಾಗರದಲ್ಲಿ....ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

  ReplyDelete
 29. ಇನ್ನು ಎಂತೆಂತ ಮೀನು ಗಳಿವಿಯೋ ಯಾರಿಗೆ ಗೊತ್ತು ಸರ್ :)

  ಕವನ ಮಾತ್ರ ಚನ್ನಾಗಿದೆ :-)

  ReplyDelete
 30. ವಿಚಲಿತ ನಿಮ್ಮ ಪ್ರತಿಕ್ರಿಯೆ..(?) ಗೆ ಧನ್ಯವಾದ.

  ReplyDelete
 31. ಮಂಜು ಥ್ಯಾಂಕ್ಸ್...ಹೌದು ಸುಮಾರು ೩.೫ ಸಾವಿರ ಜಾತಿಯ ಮೀನುಗಳಿವೆ...ಯಾವಮೀನು ಹ್ಯಾಗೋ...??

  ReplyDelete
 32. ಫೋಟೊ ಮತ್ತು ಕವನ ತುಂಬಾ ಚೆನ್ನಾಗಿವೆ. ಮೀನು ಪ್ರತಿಮೆಯಾಗಿ ವಾಸ್ತವವನ್ನು ತೆರೆದಿಟ್ಟಿದೆ. ನನ್ನ ಬ್ಲಾಗ್ ಗೊಮ್ಮೆ ಬನ್ನಿ.

  ReplyDelete
 33. ನಮಸ್ಕಾರ ಪ್ರಭಾರವರೇ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...ಇದೋ ಬಂದೆ...

  ReplyDelete
 34. "ದಿಕ್ಕುತೋಚದ ಕಂಗೆಟ್ಟ ಪುಟ್ಟ ಮೀನು"
  ಈ ಸಾಲಿನಂತೆ ಇದೆ ನಮ್ಮ ಪಾಡು ....

  ReplyDelete