Monday, February 14, 2011


(ಚಿತ್ರ ಕೃಪೆ: ಅಂತರ್ಜಾಲ, web foto)

ಪ್ರೀತಿಯೋ ಪ್ರೇಮವೋ.?
ಬಿಟ್ಟ ಕಣ್ಣ ಹೊಳಪ
ನಕ್ಕು ಬಾಯಲಿ ಬಳಪ
ಚೊಕ್ಕ ಚೋಲಿಯ ಸೆಳೆತ
ಆಗಿದ್ದು ನಮ್ಮ ಕಣ್ಣ ಮಿಳಿತ
ಅದು ಮುಗ್ಧ ಬಾಲ್ಯದ ಭಾವ
ಪ್ರೀತಿಯೋ ಪ್ರೇಮವೋ ಯಾವುದು..?

ಬೆಳೆದಂತೆ ಮಗದೊಂದು ಮಿಡಿತ
ಅವಳತ್ತಳು ಬಿದ್ದರೆ ನನಗೆ ಹೊಡೆತ
ಕಾಣದಾಗೆ ಒಂದಿನ ಏನೋ ತುಡಿತ
ಹೀಗೂ ನಡೆದಿದ್ದು ಕಿಶೋರ ದಿನ
ಅರ್ಥವಿತ್ತೇ ಅದಕ್ಕೂ ಆದಿನ
ಪ್ರೀತಿಯೋ ಪ್ರೇಮವೋ ಅದು..?

ನಮಗೆ ಮರೆಯದ ಅದೊಂದು ಘಟ್ಟ
ಇಬ್ಬರೂ ಬೆಳೆದು ನಿಂತು ಎದೆಮಟ್ಟ
ಸಫಲಿಸದೆ ವಿದ್ಯೆ, ಇದ್ದಲ್ಲೇ ನಿಂತಳು
ಗೆದ್ದರೂ ತೇವಗೊಂಡವು ನನ್ನ ಕಂಗಳು
ಅನಿಸತೊಡಗಿತ್ತು ಅರ್ಥವಾಗದ್ದು ಏಕೆ ಹೀಗೆ?
ಪ್ರೀತಿಯೋ ಪ್ರೇಮವೋ ಇದು..?

ಕಳೆದು ಹತ್ತಾರು ವರುಷ, ಸಿಕ್ಕಳಂದು ಷಮಾ
ಕಣ್ಣು ಸೇರಿದ್ದು, ಗುರುತಿಸಿದ್ದು ನೆನಪುಗಳ ಜಮಾ
ಯಾವುದೋ ಹೊಲದ, ಎಲ್ಲೋ ಹೊಸೆದ, ಬತ್ತಿಯ ಹೊತ್ತು
ಅಪ್ಪ-ಅಮ್ಮನ ಮಾಡಿದ ಗಾಜ ಬುರುಡೆಯ ಸುತ್ತು
ಷಮಾಳ ಆಸೆಗಳಿಗೆ ಕಿಡಿ, ನೆನಪಿಗೆ ಹತ್ತಿ ಧೂಳು
ಆಗಿ ಬಾಲ, ಕಿಶೋರ, ಪ್ರೌಢ ಮನಸುಗಳ ಹೋಳು
ಪ್ರೀತಿಯೋ, ಪ್ರೇಮವೋ ..ಅಂದು...?

ಧಾರೆ ಜೀವನದಿ ಹಿರಿಯರಾಣತಿ ಹರಿವಿನೊಂದಿಗೆ ತಾನು
ಅರಿಯದ, ಅರಿವಾದ ಅರಿತರೇನೂ ಮಾಡಲಾಗದ ನಾನು
ಮಾಲ್ ನ ಜಂಗುಳಿಯಲಿ ನಿಂತಂತೆ ಮರುಕಳಿಸಿ ನೆನಪು
ಬಂದರು ಷಮಾಳ ಅವರು, ಜೊತೆಗೆ ಬೆಳೆದ ಮಕ್ಕಳಿಬ್ಬರು
ನನ್ನವಳು ತನ್ನೆತ್ತರಕೆ ಬೆಳೆದ ಮಗಳ ಜತೆಗೆ ನಾವು ಮೂವರು
ಇದಲ್ಲವೇ ಜೀವನ? ವಿರೋಧಗಳ ನಡುವೆಯೂ ಬಾಳು ?
ಸಹನಾತೀತ ಕ್ಷಣ, ಕಳೆದರೆ- ಅನಿಸದು ಹಿಂದಿನದು ಗೋಳು.
ಇದಲ್ಲವೇ ಪ್ರೀತಿ ಪ್ರೇಮ ಎಂದೂ ಎಂದೆಂದೂ..?

30 comments:

  1. ಜಲನಯನ,
    ಮುಗ್ಧ ಬಾಲ್ಯದಿಂದ ಹಿಡಿದು ಪ್ರೌಢಾವಸ್ಥೆಯವರೆಗಿನ ಬದುಕಿನಲ್ಲಿ, ಎರಡು ಜೀವಿಗಳ ನಡುವೆ ಇರುವ, ಎಲ್ಲ ಸಂಬಂಧವನ್ನು ಮೀರಿದ ಆತ್ಮೀಯತೆಯನ್ನು ತುಂಬ ಚೆನ್ನಾಗಿ ಕವನಿಸಿದ್ದೀರಿ. ಇದಲ್ಲವೆ ಪ್ರೀತಿ, ಪ್ರೇಮ?
    ಸೊಗಸಾದ ಕವನಕ್ಕೆ ಅಭಿನಂದನೆಗಳು.

    ReplyDelete
  2. ಅಜಾದ್ ಸರ್,
    ಬಾಲ್ಯದ ಮುಗ್ಧ ಸ್ನೇಹ
    ಹರೆಯದ ಪ್ರೌಢ ಪ್ರೇಮ
    ಭಯ ಭಕ್ತಿಯ ಗ್ರುಹಸ್ಥಾಶ್ರಮ.........

    ನಾವಂದುಕೊಂಡಂತೆ ನಡೆಯದ ಜೀವನ ಚಕ್ರ!

    ಸೂಪರ್ ಸರ್....

    ReplyDelete
  3. ತುಂಬಾ ಚೆನ್ನಾಗಿದೆ.. ಈ ಸಾಲುಗಳು ತುಂಬಾ ಹಿಡಿಸಿದವು..
    ಬಂದರು ಷಮಾಳ ಅವರು, ಜೊತೆಗೆ ಬೆಳೆದ ಮಕ್ಕಳಿಬ್ಬರು
    ನನ್ನವಳು ತನ್ನೆತ್ತರಕೆ ಬೆಳೆದ ಮಗಳ ಜತೆಗೆ ನಾವು ಮೂವರು!
    ನಾನು ಹೊಸದಾಗಿ ಬರೆದ ಕಥೆಯೊಂದರಲ್ಲೂ ಇಂಥದ್ದೇ ಸನ್ನಿವೇಷವಿದೆ.. ಒಮ್ಮೆ ಬ್ಲಾಗ್‍ಗೆ ಬಂದು ಓದಿ. ಧನ್ಯವಾದಗಳು.

    ReplyDelete
  4. ತು೦ಬಾ ಇಷ್ಟ ಆಯಿತು ಕವನ ಅಜಾದ್ ಸರ್..... ಯಾವುದೋ ಘಟ್ಟದಲ್ಲಿ ಮೊಳಕೆ ಒಡೆಯುವ ಪ್ರೀತಿ ಬದುಕಿನಲ್ಲಿ ಸದಾ ಹಸಿರಾಗೇ ಇರುತ್ತದಲ್ಲವೇ...? ತು೦ಬಾ ಚೆನ್ನಾಗಿ ಬರೆದಿದ್ದೀರಿ :)

    ReplyDelete
  5. ಜೀವನದ ಪ್ರತಿ ಘಟ್ಟಕ್ಕೂ ಅನುವಯಿಸುವಂತಿದೆ ನಿಮ್ಮ ಕವನ ಇಷ್ಟವಾಯಿತು....

    ReplyDelete
  6. ಅದ್ಭುತವಾಗಿದೆ ಸರ್

    ReplyDelete
  7. ಜೀವನ ಯಾನದ ಹಲವು ಮಜಲುಗಳ ಪ್ರೀತಿಯ ಚಿತ್ರಣ, ಚೆನ್ನಾಗಿ ಮೂಡಿದೆ. ಕವಿತೆ ಇಷ್ಟವಾಯಿತು. ಜೈಹೋ

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  8. ... ... ಸ್ನೇಹವೋ ಯಾಕಿಲ್ಲ?

    ReplyDelete
  9. jeevanada vibhinna yaanada kavana chennaagide sir....

    pritiyo... premavo....?

    ReplyDelete
  10. ಹುಟ್ಟಿನಿಂದ ಹಿಡಿದು ಜೀವನದ ಪ್ರತಿ ಘಟ್ಟವನ್ನು(ಅವಸ್ತೆ :P) ಅಚ್ಚುಕಟ್ಟಾಗಿ ಕವನದೊಳಗೆ ಇಟ್ದ್ದಿದ್ದಿರಲ್ಲ ಭೈಯ್ಯ ನಿಮಗೆ ಜೈ ಹೋ

    ReplyDelete
  11. ಜೀವನದ ಪ್ರತಿಯೊಂದು ಘಟ್ಟವನ್ನು ಅತೀ ಚೆನ್ನಾಗಿ ಬರೆದಿದ್ದಿರಿ...
    ತುಂಬಾ ಚೆನ್ನಾಗಿದೆ..

    ReplyDelete
  12. ಸು ನಾಥಣ್ಣ ಎಲ್ಲಾ ಜೀವನಾವಸ್ಥೆಗಳಲ್ಲೂ ಗಂಡು-ಹೆಣ್ಣಿನ ನಡುವೆ ಆಕರ್ಷಣೆ ಇದ್ದೇ ಇರುತ್ತೆ ..ಇದನ್ನು ಹಲವಾರು ಹೆಸರುಗಳಿಂದ ಕರೆಯಬಹುದು...ಬಾಲ್ಯದ್ದು ಕಿಶೋರದ್ದು, ಪ್ರೌಢದ್ದು, ವಯಸ್ಕ, ಮಧ್ಯವಯಸ್ಕ, ಇಳಿವಯಸ್ಕ ಮತ್ತು ವೃದ್ಧಾಪ್ಯದ...ಹೀಗೆ...ನನ್ನ ಪ್ರಯತ್ನ ಇದನ್ನು ಬಿಂಬಿಸುವುದೇ ಆಗಿತ್ತು...ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.

    ReplyDelete
  13. ಹೌದು ಪ್ರವೀಣ...ಮೊದಲನೇ ಮೆಟ್ಟಿಲಿಗೆ ಬಾರಪ್ಪಾ...ನಂತರ ಕೆಳಗಡೆ ನೋಡುವಿಯಂತೆ...ಹಹಹ ಹೌದು ನಿನ್ನ ಮಾತು ನಿಜ ಎಲ್ಲಾ ಒಂದೊಂದು ಮೌಲ್ಯಕ್ಕೆ ಕಟ್ಟುಬಿದ್ದಿವೆ.

    ReplyDelete
  14. ಹೌದು ಪ್ರದೀಪ್ ನಿಮ್ಮ ಕಥೆ ಓದಿದೆ..ಇಂಥಹುದೇ ಸನ್ನಿವೇಶ...ಧನ್ಯವಾದ ನಿಮ್ಮ ಅನಿಸ್ನಿಸಿಕೆಗೆ

    ReplyDelete
  15. ಹೌದು ಸುಧೇಶ್ ಪ್ರೀತಿ ಹುಟ್ಟೋಕೆ ಸಮಯ ಸಂದರ್ಭ ಇರೊಲ್ಲ ಅನ್ನೋದು ನಿಮ್ಮ ಯುವ ಹೃದಯಕ್ಕೂ ಅನಿಸಿದ್ದು ಅಸಹಜವಲ್ಲ,,,,ಹಹಹ ಧನ್ಯವಾದ

    ReplyDelete
  16. ಧನ್ಯವಾದ ಸುಗುಣ ನಿಮ್ಮ ಅಭಿಪ್ರಾಯಕ್ಕೆ,,,

    ReplyDelete
  17. ಮಂಜು ಥ್ಯಾಂಕ್ಸ್

    ReplyDelete
  18. ಬಾಲು..ಜೀವನದಿ ಹರಿವು ಹೋದೆಡೆ ಒಮ್ದೊಂದು ಭಾವ ಯೌವನ ಪ್ರೇಮಕ್ಕಿಂತ ಕಾಮವಾದರೆ ಪ್ರೌಢ ಎರಡರ ಸಮಾನ ರೂಪ, ಗೃಹಸ್ತ ಮರ್ಯಾದೆಯಲ್ಲಿ ಬಂಧಿತ ಮಧ್ಯವಯಸ್ಸು ಜವಾದಾರಿ ಮತ್ತು ಮಮತೆಯ ಪ್ರೇಮ...ಹೀಗೆ...ಧನ್ಯವಾದ ನಿಮ್ಮ ಅಭಿಪ್ರಾಯಕ್ಕೆ

    ReplyDelete
  19. ಸತೀಶ್ ಧನ್ಯವಾದ..ನಿಮ್ಮ ಪ್ರತಿಕ್ರಿಯೆಗೆ

    ReplyDelete
  20. ದಿನಕರ್ ಹೌದು ಪ್ರೀತಿ ಪ್ರೇಮಗಳ ಪರಿಧಿಗಳು ಹಲವಾರು ...ಧನ್ಯವಾದ

    ReplyDelete
  21. ರಂಜು...ಅಚ್ಚು ಕಟ್ಟಿನೊಳಗೆ...ಮೆಚ್ಚು ಪ್ರೀತಿ ಪ್ರೇಮಗಳು...ಹೌದಲ್ವಾ?

    ReplyDelete
  22. ಆಶಾವ್ರೇ, ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  23. ಆಜಾದ್,
    ಜೀವನದ ವಿವಿಧ ಮಜಲುಗಳಲ್ಲಿ ಮೂಡಿಬರುವ ಭಾವನೆಗಳು ನಿಮ್ಮ ಸಾಲುಗಳಲ್ಲಿ ಹಿತಮಿತವಾಗಿ ಅಡಕವಾಗಿವೆ.

    ವಂದನೆಗಳು.

    ReplyDelete
  24. ಅಪ್ಪ-ಅಮ್ಮನಿಗೆ ಧನ್ಯವಾದ..ಹೌದು ತಮ್ಮದೇ ಆದ ವ್ಯಾಖ್ಯಾನಗಳಲ್ಲಿ ಬದ್ಧವಾದ ಈ ಹಂತಗಳ ನೆನಪೇ ನಿಜಕ್ಕೂ ರೋಮಾಂಚಕಾರಿ.

    ReplyDelete
  25. ತುಂಬಾ ಚೆನ್ನಾಗಿದೆ .. ಜೀವನದ ವಿವಿಧ ಹಂತಗಳ ಪ್ರೀತಿಯನ್ನ ತುಂಬಾ ಚೆನ್ನಾಗಿ ತಿಳಿಸಿದ್ದಿರಿ ..

    ReplyDelete
  26. ಮಂಜುನಾಥ್ ಧನ್ಯವಾದ ನಿಮ್ಮ ಅಭಿಪ್ರಾಯ ಮತ್ತು ಪ್ರತಿಕ್ರಿಯೆಗೆ.

    ReplyDelete
  27. ಸೊಗಸಾಗಿದೆ..
    ನಾನು ಮುಗ್ದ ಮನಸುಗಳ ಪ್ರೇಮಕಥೆ ಬರೀತಿದೀನಿ ನೋಡಿ..

    ReplyDelete
  28. Aajad sir,

    tumbaane chennagide, ella jeevanada vivida hantagalannu tumbaa sundaravagi varnisiddiri, Dhanyavadagalu...

    ReplyDelete
  29. ಹಲೋ ಗುರು, ಪ್ರೇಮಕಥೆ ಓದ್ದೆ..ಇಲ್ಲೀ ಮಟ್ಟಾ ಬಂದ್ರಲ್ಲಾ ಬೋ ಕುಸಿ ಆಯ್ತು...ಹಹಹ ಧನ್ಯವಾದ ಗುರು ನಿಮ್ಮ ಪ್ರತಿಕ್ರಿಯೆಗೆ

    ReplyDelete
  30. ಅಶೋಕ್ ಧನ್ಯವಾದ..ಬಹಳ ಸಮಯದ ನಂತರ ..?? ಬಾಲ್ಯದ ಪ್ರೀತಿ ಪ್ರೇಮವೇ ಒಮ್ದು ರೀತಿ ಅಲ್ಲವಾ..??

    ReplyDelete