Tuesday, February 22, 2011

ಮತ್ತೊಂದು ಕರವೋಕೆ..ಪ್ರಿಯರಿಗೆ...



ನನ್ನ ಆ ಹುಡುಗಿ


(ದಿಲ್ ಕೆ ಝರೋಕೋಂ ಮೆ ತುಝ್ ಕೋ ಬಿಠಾಕರ್)


ಮನಸಿನ ತುಂಬೆಲ್ಲ ನಿನ್ನ ನಾ ಭರಿಸಿ
ವಧುವಂತೆ ನಿನ್ನ ನೆನಪನ್ನು ಸಿಂಗರಿಸಿ
ಬಚ್ಚಿಟ್ಟುಕೊಳ್ಳುವೆನೇ, ಹುಡುಗಿ
ಹೃದಯದಲಿ ಮನದನ್ನೆ//೨//


ನಾಳೆ ನನಗೆ ನೀನು ಪರಕೀಯಳಾದ್ರೂ
ನಿನರೂಪ ಮನಸಿಂದ ಹೋಗದು ಎಂದೂ
ಹೂ ಪಲ್ಲಕಿಯಲಿ ನಿನ್ನ ಬೀಳ್ಕೊಟ್ರೂ
ನಿನ್ನ ನೆನಪು ಈ ಮನಬಿಟ್ಟು ಬರದು// ನಾಳೆ ನನಗೆ...//೨//
ಮನಸಿನ ತುಂಬೆಲ್ಲ ನಿನ್ನ ನಾ ಭರಿಸಿ.....//ಪ//


ನಿನ್ನ ಅಧರದ್ವಯ ಮಧುಪಾತ್ರೆ ಬಾಲೆ
ಈಗಲೂ ನನಗದು ನಶೆಯ ಮಧುಶಾಲೆ
ನಿನ್ನಯ ಮುಂಗುರುಳ ಘನಛಾಯೆ ಇನ್ನೂ
ನನ್ನನ್ನು ಕಾಡುವ ಬಲು ಮೋಹ ಮಾಯೆ// ನಿನ್ನ ಅಧರದ್ವಯ ಮಧುಪಾತ್ರೆಬಾಲೆ//೨//

ಮನಸಿನ ತುಂಬೆಲ್ಲ ನಿನ್ನ ನಾ ಭರಿಸಿ.....//ಪ//


ನೀನನ್ನ ಪ್ರೀತಿಯ ಧಿಕ್ಕರಿಸಿದೆಯಾದ್ರೂ
ಅದಕಾಗಿ ನಿನಮೇಲೆ ಆಕ್ಷೇಪವಿರದು
ಕಣ್ಣಲಿ ನಿನ್ನಯ ಪ್ರತಿಬಿಂಬ ತುಂಬಿ
ಜಪಿಸುವೆ ನಿನ ನಾಮ ಜೀವನ ಪೂರ್ತಿ//ನೀ ನನ್ನ ಪ್ರೀತಿಯ ಧಿಕ್ಕರಿಸಿದೆಯಾದ್ರೂ//೨//


ಮನಸಿನ ತುಂಬೆಲ್ಲ ನಿನ್ನ ನಾ ಭರಿಸಿ
ವಧುವಂತೆ ನಿನ್ನ ನೆನಪನ್ನು ಸಿಂಗರಿಸಿ
ಬಚ್ಚಿಟ್ಟುಕೊಳ್ಳುವೆನೇ, ಹುಡುಗಿ
ಹೃದಯದಲಿ ಮನದನ್ನೆ//೨//

24 comments:

  1. AZad Sir...

    Very Nice..

    ನೀನನ್ನ ಪ್ರೀತಿಯ ಧಿಕ್ಕರಿಸಿದೆಯಾದ್ರೂ
    ಅದಕಾಗಿ ನಿನಮೇಲೆ ಆಕ್ಷೇಪವಿರದು
    ಕಣ್ಣಲಿ ನಿನ್ನಯ ಪ್ರತಿಬಿಂಬ ತುಂಬಿ
    ಜಪಿಸುವೆ ನಿನ ನಾಮ ಜೀವನ ಪೂರ್ತಿ//ನೀ ನನ್ನ ಪ್ರೀತಿಯ ಧಿಕ್ಕರಿಸಿದೆಯಾದ್ರೂ/ ee saalugalu tumbaa ishta adavu...Dhanyavadgalu....

    ReplyDelete
  2. tumba chennagide sir kavana... tumbane ista aytu

    ReplyDelete
  3. ಅಶೋಕ್ ಧನ್ಯವಾದ ಇದು ನನ್ನ ಗುನುಗುನಿಸುವ ಹಾಡುಗಳಲ್ಲಿ ಒಂದು...ಇಷ್ಟ ಆಗಿದ್ದಕ್ಕೆ ಶುಕ್ರಿಯಾ...

    ReplyDelete
  4. ಸುಗುಣ, ರಫೀ ಮತ್ತು ಶಮ್ಮಿಕಪೂರ್ ಅಪೂರ್ವ ಸಂಗಮ ..ಅವರ ಚಿತ್ರಗಳ ಹಾಡುಗಳೆಲ್ಲಾ ಬಹು ಸಂಗೀತಮಯ ಮತ್ತು ಹಾಡಿಕೊಳ್ಳೋಕೆ ಮನಸಾಗೋವು...ಧನ್ಯವಾದ ನಿಮ್ಮ ಅನಿಸಿಕೆಗೆ

    ReplyDelete
  5. ವಾವ್ ಅಜಾದ್ ಸರ್ , ಬ್ರಹ್ಮಚಾರಿ ಚಿತ್ರದ ಈ ಹಾಡನ್ನು ನೆನಪು ಮಾಡಿದ್ದೀರಿ.ರಫಿ ಹಾಡಿನ ಮೋಡಿ ,ಶಮ್ಮಿಕಪೂರ್ ನಟನೆ ಸೂಪರ್ .ಈ ಹಾಡಿನ ಲಯಕ್ಕೆ ಕನ್ನಡ ಪದಗಳನ್ನು ಅಲಂಕರಿಸಿ ಸುಂದರ ಕವಿತೆ ರಚಿಸಿ ಹಾಡಿನ ನೆನಪನ್ನು ಹಸಿರುಗೊಳಿಸಿದ್ದೀರಾ, ನಿಮಗೆ ಜೈ ಹೋ. ನಿಮ್ಮ ಈ ಕವಿತೆಯನ್ನು ಮೂಲ ಹಾಡಿನ ಜೊತೆಯಲ್ಲಿ ಸಂಗೀತದೊಡನೆ ಮನೆಯಲ್ಲಿ ಹಾಡಿದೆ ಖುಷಿಯಾಯಿತು.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  6. ಆಜಾದ್ ಅವರೇ,

    ಅದ್ಭುತ ಹಾಡಿಗೆ ನ್ಯಾಯಯುಕ್ತವಾದ ಅನುವಾದ !
    ಇಷ್ಟವಾಯ್ತು

    ReplyDelete
  7. ಹೇ ಜಲನಯನ!
    ಈ ಹಾಡು ಇವತ್ತು ಯಾಕೋ ನೆನಪಾಗ್ತಾ ಇತ್ತು. ನಿಮ್ಮ ಬ್ಲಾಗಿಗೆ ಬಂದರೆ, ಎಂಥಾ coincidence! ತುಂಬಾ ಥ್ಯಾಂಕ್ಸ್, ಆ ಹಾಡನ್ನು ಮತ್ತೇ ಕೇಳಿಸಿದ್ದಕ್ಕೆ.
    ನಿಮ್ಮ ಅನುವಾದವೂ ಯಥಾವತ್ತಾಗಿ, ಸುಂದರವಾಗಿ ಬಂದಿದೆ.

    ReplyDelete
  8. ಸುನಾಥರು ಹೇಳಿದ್ದನ್ನು ಮತ್ತೆ ಹೇಳುತ್ತಿದ್ದೇನೆ, ಕವನ ಬಹುತ್ ಪಸಂದ್ ಹೈ ಭೈಯ್ಯಾ, ಶುಭಹಾರೈಕೆಗಳು

    ReplyDelete
  9. ವಾಹ್ ವಾಹ್ ಕ್ಯಾ ಬಾತ್ ಹೆ! ...

    ReplyDelete
  10. ವಿದ್ಯಾ ತುಂಬಾ ಥ್ಯಾಂಕ್ಸ್ ನನ್ನ ಜಲನಯನಕ್ಕೆ ಬಂದಿರಿ ಕವನ ಇಷ್ಟಪಟ್ಟಿರಿ,,,

    ReplyDelete
  11. ಬಾಲು ...ಹಹಹ ಓಹೋ ಹಾಡು ಹಾಡಿದ್ರಾ ಹಂಗಾದ್ರೆ ಮುಂದಿನ ಮೀಟಲ್ಲಿ ನಿಮ್ಮ ಹಾಡು ಗ್ರ್ಯಾರಂಟಿ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  12. ಮಹೇಸಣ್ಣ ಏನಣ್ಣ..ಯಾವ್ದಾದ್ರೂ ಪ್ರಸಂಗ ನೆಪ್ಪಾಯ್ತಾ ಎಂಗೆ...? ಧನ್ಯವಾದ

    ReplyDelete
  13. ಅಪ್ಪ-ಅಮ್ಮನಿಗೆ ಧನ್ಯವಾದ...

    ReplyDelete
  14. ಸುನಾಥಣ್ಣ ..ನನಗೂ ಈ ಹಾಡು ಇಷ್ಟವಾದದ್ದು..ಹೌದು ರಫಿ ಮತ್ತು ಶಮ್ಮಿ ಜೋಡಿ ಆ ಕಾಲದಲ್ಲಿ ಬಹಳ ಹಿಟ್ ಆದದ್ದು.

    ReplyDelete
  15. ವಿ.ಆರ್.ಬಿ ಸರ್..ಬಹಳ ಅಪರೂಪ ನಿಮ್ಮ ದರ್ಶನ...ನಿಮ್ಮ ಅಭಿಮಾನಕ್ಕೆ ತಲೆಬಾಗ್ತೇನೆ...ಧನ್ಯವಾದ...

    ReplyDelete
  16. ಮಹಾಬಲರೇ...ವಾವ್ ಕ್ಯಾ...ದಾದ್ ಹೈ...!! ನಿಮ್ಮ ಪ್ರೋತ್ಸಾಹಕ್ಕೆ ನನ್ನಿ...

    ReplyDelete
  17. ದೋಸ್ತಾ...

    ಈ ಹಾಡು ನಾನು ಯಾವಾಗಲೂ ಗುನುಗುವ ಹಾಡು..

    ಅದರ ಸಾಲುಗಳು...
    ಅರ್ಥಗಳು...
    ರಫೀಯ ಸುಮಧುರ.. ನೋವಿನ ಭಾವದ ಕಂಠ.. !!

    ವಾಹ್ !!

    ನಿನ್ನ ಅನುವಾದವಂತೂ ತುಂಬಾ ತುಂಬಾ ಮಸ್ತ್ ಇದೆ...

    ಹೆಚ್ಚಿಗೆ ಹೇಳಿದರೆ... "ಮಿತ್ರರಿಬ್ಬರ ಮಾತು" ಅಂತಾಗಿ ಬಿಡ್ತದೆ...

    ಚಾಟ್ ಗೆ ಬಾ... ಈ ಹಾಡಿನ ಬಗೆಗೆ ಇನ್ನೂ ಒಂದಷ್ಟು ಹೇಳ್ತಿನಿ....
    ಹಳೆಯ ನೆನಪುಗಳನ್ನು...

    ಜೈ ಹೋ !!

    ReplyDelete
  18. ಜೈ ಹೋ...ಹ್ಹಹಹಹಹ ಖಂಡಿತಾ,,,ಹಳೆಯ ಹಾಡುಗಳ ಮತ್ತು ಆ ಜೋಡಿಗಳ ಕರಾಮತ್ತು ..ವಾವ್...ರಫಿ ಅಂದ್ರೆ ಶಮ್ಮಿಕಪೂರ್ ಅನ್ನೋ ಕಾಲ ಇತ್ತು ...ಝೂಮ್ ಹಾಡುಗಳು...ಧನ್ಯವಾದ ನಿನ್ನ ಪ್ರತಿಕ್ರಿಯೆಗೆ ಪ್ರಕಾಶ..

    ReplyDelete
  19. ಮನಸಿನ ತುಂಬೆಲ್ಲ ನಿನ್ನ ನಾ ಭರಿಸಿ
    ವಧುವಂತೆ ನಿನ್ನ ನೆನಪನ್ನು ಸಿಂಗರಿಸಿ
    ಬಚ್ಚಿಟ್ಟುಕೊಳ್ಳುವೆನೇ, ಹುಡುಗಿ
    ಹೃದಯದಲಿ ಮನದನ್ನೆ

    ee salugalu tumba ishtavaaytu.. chennagide sir kavan..

    ReplyDelete
  20. ಕೀರ್ತಿ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ...ಮೊದಲ ಸಾಲುಗಳು ಮನದ ಸಾಲುಗಳು ಹಾಗಾಗಿ ನಿಮಗೂ ಇಷ್ಟ ಆಗಿದ್ದು ಸಂತೋಷ

    ReplyDelete
  21. ಬಹಳ ಚೆಂದದ ಕವಿತೆ ಬಯ್ಯಾ ....ತುಂಬಾ ಇಷ್ಟವಾಯ್ತು.

    ReplyDelete