ನಿನ್ನಯಾ ಆ ಕಣ್ಣ ನೋಟ
(ಆಪ್ ಕೀ ನಜರೋಂ ನೆ ಸಮಝಾ)
ನಿನ್ನಯಾ ಆ ಕಣ್ಣ ನೋಟ
ನಿನ್ನವಳೇ ನಾನೆಂದಿದೆ
ಎದೆಯ ಬಡಿತವೇ ಕ್ಷಣಕೆ ನಿಲ್ಲು
ಗುರಿಯ ತಲುಪಿದೆ ಎಂದಿದೆ...sss //ನಿನ್ನಯಾ ಆ ಕಣ್ಣ ನೋಟ//
ಹಾಂ ನನಗಿದು ಸಮ್ಮತ
ನಿನ್ನಯ ಈ ಅಭಿಮತ
ಏನೇ ಹೇಳು ಕಂಬನೀ
ಬಿಸಲಲಿರುವುದೇ ಇಬ್ಬನೀsss
ನಿನ್ನನಗಲಿ ಹೇಗೆ ಇರಲಿ
ಶಶಿಯ ಪುಲಕಿತೆ ಶರಧಿ ನಾ sss//ನಿನ್ನಯಾ ಆ ಕಣ್ಣ ನೋಟ//
ನಿನ್ನ ಪಯಣಕೆ ನೆಲೆಯು ನಾನು
ನನ್ನ ಪಯಣಕೆ ನೀನಿರು
ನನ್ನ ನೀನು ಮರೆತರೂ
ಹೇಗೆ ಮರೆಯಲಿ ನಿನ್ನ ನಾ ssss
ಕರಗಿ ಬೆರೆತೆ ನನ್ನ ಉಸಿರಲಿ
ಬಿಡಲಿ ಹೇಗೆ ಉಸಿರು ನಾsss//ನಿನ್ನಯಾ ಆ ಕಣ್ಣ ನೋಟ//
ನಿನ್ನ ಛಾಯೆ ನನ್ನ ಮೇಲೆ
ನನ್ನ ಮಾಯೆ ನಿನ್ನಲಿ
ನನ್ನ ನೀನು ಸೆಳೆದರೇ
ನಿನ್ನ ಸೆಳೆಯದೇ ಇರೆನು ನಾss
ಸೂಜಿಗಲ್ಲಿನದೇನು ತಪ್ಪು
ಸೆಳೆದು ಬಿಡಲದು ಕಬ್ಬಿಣಾsss// ನಿನ್ನಯಾ ಆ ಕಣ್ಣ ನೋಟ//
ಆಜಾದ್ ಸರ್, ನಾನು ತುಂಬಾ ತುಂಬಾ ಇಷ್ಟ ಪಡುವ ಹಾಡಿದು.
ReplyDeleteಎಷ್ಟೋ ಸಲ, ಮುಂದೆ ನನ್ನ ಬಾಳ ಸಂಗಾತಿಯಾಗುವಳಿಗೆ ಈ ಹಾಡು ಗೊತ್ತಿರುತ್ತ ಅಂತ ಯೋಚಿಸಿದ್ದು ಇದೆ..!
ಅದ್ಭುತ ಹಾಡು..
ಅನುವಾದವು ಮನಸಿಗೆ ಸ್ಯಾನೆ ಹಿಡಿಸಿತು..
:) :)
ಅನಿಲ್ ಇದು ಭಾವಾನುವಾದ.ಶೈಲಿ ಅದೇ....ನಿನ್ನ ಹುಡುಗಿಗೆ ಈ ಹಾಡು ಗೊತ್ತಿರದಿದ್ದರೆ..ನಾವು ನಿನ್ನ ಮದುವೆ ಗೊತ್ತಾಗೋಕೆ ಮುಂಚೆನೆ ಹುಡ್ಗಿಗೆ ಈ ಹಾಡು ಕೇಳಿಸಿ ನಿನಗಾಗಿ ಹಾಡೋಹಾಗೆ ಮಾಡಬಹುದು....
ReplyDeleteಅಜಾದ್ ಭೈಯ್ಯಾ , ಕವಿತೆ ಸೂಪರ್ .ಆದ್ರೆ ಹಾಡಿನ ಲಯಕ್ಕೆ ತಕ್ಕ ಹಾಗೆ ಕೆಲವು ಪದಗಳ ಬದಲಾವಣೆ ಅಗತ್ಯವಿದೆ ಅನ್ನಿಸಿತ್ತದೆ.ಮತ್ತೊಮ್ಮೆ ಪ್ರಯತ್ನಿಸಿದಾಗ ಸರಿ ಅನ್ನಿಸಿತು.ಈ ಹಾಡೂ ಕೂಡ ನನ್ನ ಮೆಚ್ಚಿನ ಹಾಡು.ನನ್ನ ಗೆಳೆಯನ ತಂಗಿಗೆ ಈ ಹಾಡಿನ ಬಗ್ಗೆ ನಿಮ್ಮ ಕವಿತೆ ಯನ್ನು ಕೊಟ್ಟು ಹಾಡಿಸ್ತೀನಿ ಅವಳು ಲತಾ ಮಂಗೇಶ್ಕರ್ ತರಾನೆ ಹಾಡ್ತಾಳೆ.ಇತ್ತೀಚಿಗೆ "ಲತಾ ನೆನಪಿನ ಗುಚ್ಛ" ಕಾರ್ಯಕ್ರಮ ನೀಡಿದ್ದಳು.ನಿಮಗೆ ಜೈ ಹೋ. ಮತ್ತಷ್ಟು ಬರಲಿ ಇದು ನನ್ನ ಡಿಮಾಂಡು.
ReplyDelete--
ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]
ಬಾಲು ನಾನು ಈ ಹಾಡನ್ನಹಾಕಿ ಜೊತೆಗೆ ಹಾಡಿ ಸಾಹಿತ್ಯ ರಚಿಸಿದ್ದು...ಅಕ್ಷರಗಳನ್ನು ಅಳವಡಿಕೆಗೆ ತಂದರೆ ... ಸರಿಯಾಗೇ ಬರಬಹುದು...ನಿಮ್ಮ ಪ್ರೋತ್ಸಾಹಕ್ಕೆ ದನ್ಯವಾದ
ReplyDeleteಭಾವಾನುವಾದ ಪಸ೦ದಾಗಿದೆ. ರಾಗದಿ೦ದ ಹಾಡುವ೦ತಿದೆ. Very good. ಇನ್ನಷ್ಟು ಬರೀರಿ ಮಾರಾಯ್ರೇ, ಎಡ್ಡೆ ಉ೦ಡು
ReplyDeleteಎಲ್ಲಾ ಈರ್ನ ಆಶೀರ್ವಾದ ಅಣ್ಣೆರ್...ಹಹಹ .. ಇದು ನಿಮ್ಮ ಆನಿವರ್ಸರಿಗೆ ಉಪಯೋಗ ಆಯ್ತಾ...? ತಿಳ್ಸಿ...
ReplyDeleteಜಲನಯನ,
ReplyDeleteಮತ್ತೊಂದು ಕರಾವೋಕೆ!ಮಧುರ ಚಿತ್ರಗೀತೆಯ ಸಮರ್ಥ ಭಾಾನುವಾದ ಮಾಡಿದ್ದೀರಿ. ಅಭಿನಂದನೆಗಳು.
ಅಜಾದ್,
ReplyDeleteನಾನು ಹಾಗೆ ರೇಡಿಯೋದಲ್ಲಿ ಕೇಳಿದ ಹಾಡನ್ನು ನೀವು ಮತ್ತೆ ವಿಡಿಯೋ ತೋರಿಸಿ ಅದರ ಕನ್ನಡ ಭಾವಾನುವಾದ ಮಾಡಿದ್ದೀರಿ. ಜೊತೆಗೆ ಲಯಬದ್ಧವಾಗಿದೆ. ನಮಗೆ ಕೊಟ್ಟಿದ್ದಕ್ಕೆ ಧನ್ಯವಾದಗಳು ಮತ್ತು ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು.
ಸುನಾಥಣ್ಣ ...ಹಾಡು ಕೇಳ್ತಿದ್ದೆ..ಬಹಳ ಹಿಡ್ಸಿದ ಹಾಡ್ ಅದಕ್ಕೆ ಇದನ್ನ ಯಾಕೆ ಪ್ರಯತ್ನಿಸಬಾರದು ಅನ್ನಿಸ್ತು...ಧನ್ಯವಾದ..
ReplyDeleteThis comment has been removed by the author.
ReplyDeleteಶಿವು ಧನ್ಯವಾದ..ನಿಮ್ಮ ಪ್ರೋತ್ಸಾಹಕ್ಕೆ...ಹಳೆಯ ಹಾಡುಗಳಿಗೆ ಸಾಹಿತ್ಯ ಹಾಕುವ ನನ್ನ ಹುಚ್ಚು ಪ್ರಯತ್ನಗಳು ಈ ಮಧ್ಯೆ ಹೆಚ್ಚಾಗಿವೆ..
ReplyDeleteಏನಯ್ಯಾ ಗುರು...!
ReplyDeleteಒಂದರ ಮೇಲೊಂದು ಬಾಣ ಬಿಡ್ತಾನೆ ಇದ್ದಿಯಾ?
ಮತ್ತದೆ ಹಳೆ ನೆನಪುಗಳು..
ಆದೇ..
ಕಾಡುವವ...
ಮರೆಯಲಾಗದ ಕಣ್ಣುಗಳು..!!
ನಿನ್ನ ಸಾಲುಗಳೊಂದಿಗೆ ಅದೇ ಧಾಟಿಯಲ್ಲಿ ಹಾಡಿಕೊಂಡೆ...
ಸೊಗಸಾಗಿದೆ... ಸಲಿಸಾಗಿದೆ...
(ಇನ್ನೊಂದು ಹಾಡಿದೆ..
"ಕ್ಯಾ ಖೂಬ್ ಲಗತಿ ಹೋ..
ಬಡಿ ಸುಂದರ್ ದಿಕತಿ ಹೋ.."
ಇದು ಧರ್ಮಾತ್ಮ ಸಿನೇಮಾದ ಹಾಡು..
ಇದನ್ನು ಯಾವಾಗಲಾದರೂ ಕನ್ನಡಕ್ಕಿಳಿಸು.)
ಇನ್ನಷ್ಟು ಹಳೆಯ ನೆನಪುಗಳನ್ನು ಮಾಡಿಸು ಮಾರಾಯಾ...
ದೋಸ್ತೋಂಕಿ ಫರ್ಮಾಯಿಶ್ ಕೀ ದಾಸ್ತಾಂ ಔರ್ ಪಾಗಲ್ ಹೋನೆ ಚಲೇ
ReplyDeleteನಾನು ಹೇಳಿದ್ದೇನ್ಲೇ ಮಾಡ್ದೇ..ಆ ಹಾಡಿಗೂ ಒಂದು ಸಾಹಿತ್ಯ ಹಾಕಲೇ....ಹಹಹ ಪ್ರಕಾಶೂ ಖಂಡಿತಾ....
ಸುಂದರ ಭಾವಾನುವಾದ ಭಯ್ಯಾ. ತುಂಬಾ ಸುಂದರ ಹಾಡು ಅದು....:)
ReplyDeleteಹೌದು ಹೌದು..ಅಕ್ಕ ಹೇಳಿದ್ದನ್ನ ಭಾವನಿಗೆ ಹೇಳೊದನ್ನ್ ಭಾವಾನುವಾದ ಅನ್ನೊದಾದ್ರೆ...ಸರಿ ಇದು...ಹಹಹ ತಮಾಶೆಗೆ ಹೇಳ್ದೆ...ಧನ್ಯವಾದ ಚೇತು ನಿನ್ನ ಕಾಮೆಂಟ್ ಗೆ..
ReplyDeleteಆಜಾದ್ ,
ReplyDeleteಕರಾವೋ ಕೆ ಕಿಂಗ್ ಆಗ್ತಾ ಇದೀರಾ? ಹಾ ಹಾ ಹ್ಹ ... ಚೆನ್ನಾಗಿದೆ ಅನುವಾದ .
ಚಿತ್ರಾ...ಕಿಂಗೋ ಕಾಂಗೋ...ಅಂತೂ ಅದರ ಶೈಲಿಗೆ ಮತ್ತು ಭಾವಕ್ಕೆ ಸಾಹಿತ್ಯ ರಚಿಸುವ ಪ್ರಯತ್ನ ಮಾಡ್ತಿದ್ದೇನೆ.ನಿಮಗೆ ಇಷ್ಟವಾದರೆ ಅದು ನನಗೆ ಬೋನಸ್...ಧನ್ಯವಾದ...ಹೌಂಸಲಾ ಅಫ್ಜಾಯೀದು...
ReplyDeleteTumba tumba chennagide...ishtavaaytu :)
ReplyDeleteಕವಿತಾ..ಜಲನಯನಕ್ಕೆ ಸ್ವಾಗತ... ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ
ReplyDeleteAzad Sir,
ReplyDeletenanna mecchina geetegalalli ondu...anuvada chennagide, padh ke bahut achha laga....
Ashikji, eh meri bhi masand mein se ek geet hai...aur iska bhaavanuvaad aapko acchaa laga yeh sunke khusi hui...shukriya,,,dhanyavad.
ReplyDelete