Monday, March 7, 2011

ಕೋರಿಕೆ ಸಾವು ಅಥವಾ ಇಚ್ಛಾಮರಣ (ಯೂಥನೇಸಿಯಾ)

ಮಾರ್ಚ್ ೭ ರಂದು ಸರ್ವೋಚ್ಛ ನ್ಯಾಯಾಲಯದ ಮಹತ್ತರ ತೀರ್ಪು: ಅರುಣಾ ಶಾನ್ ಭಾಗ್ ರವರ ದಯಾಮರಣದ ಕೋರಿಕೆ ಅರ್ಜಿ ತಿರಸ್ಕೃತ.
ಈ ವಿಷಯ ಹಲವರ ಮನದಲ್ಲಿ ವಿಷಯಗಳ ಗೊಂದಲ ಮೂಡಿಸಿರಬೇಕು, ಅದರಲ್ಲೂ ಜನಸಾಮಾನ್ಯನಿಗೆ ಇದು ಏನು..??!! ಎಂಬ ಸೋಜಿಗ.
ಅರುಣಾ ಶಾನ್ ಭಾಗ್ ಸುಮಾರು ೩೫ ವರ್ಷಗಳಿಂದ ಬದುಕಿಯೂ ಸತ್ತಂತಿರುವ ಸ್ಥಿತಿಯಲ್ಲಿ ಮುಂಬೈನ ಕೆ,ಇ.ಎಮ್. ಆಸ್ಪತ್ರೆಯಲ್ಲಿ ೬೪ ವರ್ಷ ವಯಸ್ಸಿನ ಅರುಣಾ ನರಳುತ್ತಾ ಹಾಸಿಗೆಯಲ್ಲಿ ಬಿದ್ದಿರುವ ಸ್ಥಿತಿ ಎಂತಹವರಿಗೂ ಅಯ್ಯೋ ಅನಿಸದಿರುವುದು ಅಸಾಧ್ಯ. ಸುಮಾರು ೨೯-೩೦ ವಯಸ್ಸಿನ ದಾಯಿ (ನರ್ಸ್) ಆಗಿ ಕೆಲಸ ಮಾಡುತ್ತಿದ್ದ ರೋಗಿಗಗಳ ಸೇವೆಯಲ್ಲಿ ನಿರತಳಾಗಿದ್ದ ಕರ್ನಾಟಕ ಉತ್ತರಕನ್ನಡ ಜಿಲ್ಲೆಯ ಈ ಹೆಣ್ಣುಮಗಳನ್ನು ಕಾಮ ಪೀಪಾಸು ವಾರ್ಡ್ ಬಾಯ್ ಒಬ್ಬ ಅತ್ಯಾಚಾರವೆಸಗುವ ಪೈಶಾಚಿಕ ಕೃತ್ಯದಲ್ಲಿ ಆಕೆಯ ಕೊರಳನ್ನು ನಾಯಿ ಸರಪಳಿಯಿಂದ ಬಿಗಿದ ಕಾರಣ ಆಕೆ ಮಿದುಳಿಂದ ಸಂವೇದನಾ ಸಂಪರ್ಕ ಕಳೆದುಕೊಂಡುದಲ್ಲದೇ ಮಾತೂ ಹೊರಡದಾಯಿತು. ಆಕೆಯ ಮೇಲೆ ಅತ್ಯಾಚಾರ ನಡೆದ ಮಾನಸಿಕ ಆಘಾತ ಆಕೆಯನ್ನು ಮಾತನಾಡದಂತೆ ತಡೆದಿರಬಹುದು ಎಂದು ತಿಳಿಯಲಾಗಿತ್ತು..ಆದರೆ ಅದು ಮಿದುಳಿನಿಂದ ಯಾವುದೇ ಪ್ರತಿಸ್ಪಂದನಾ ಕ್ರಿಯೆಗಳು ನಡೆಯದಾದಾಗ ಇದು ಕೊರಳ ಬಿಗಿತದಿಂದ ಮಿದುಳಿಗೆ ಆಮ್ಲಕನಕ ದೊರೆಯದೇ ಆದ ವೈದ್ಯಕೀಯ ಸಮಸ್ಯೆಯೆಂದು ತಿಳಿಯಿತು. ಡಾಕ್ಟರೊಬ್ಬರನ್ನು ಮದುವೆಯಾಗುವ ಸಂಭ್ರಮದಲ್ಲಿದ್ದ ಹೆಣ್ಣು ನಿರ್ಜೀವಕೊರಡಿನಂತೆ ೩೫ ವರ್ಷಗಳಿಂದ ಆಸ್ಪತ್ರೆಯ ಹಾಸಿಗೆಯಲ್ಲಿ ಬಿದ್ದಿದೆ. ಈ ಹೆಣ್ಣಿನ ಅನಿರ್ವಚನೀಯ ವೇದನೆಯನ್ನು ಮನಗಂಡ ಅರುಣಾಳ ಸ್ನೇಹಿತೆ ಮತ್ತು ಪತ್ರಕರ್ತೆ ಪಿಂಕಿ ವಿನಾನಿ ಅರುಣಾಳ ದಯಾಮರಣ ಕೋರಿ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದಳು. ಕಾನೂನಿನ ತೊಡಕುಗಳು ಅಥವಾ ಪೂರ್ಣ ವಿಶ್ಲೇಷಿತ ಕಾನೂನು ನಿಯಮಾವಳಿಗಳ ಅಭಾವದಿಂದ ಮತ್ತು ಇಂತಹ ತೀರ್ಪಿನ ದುರುಪಯೋಗಗಳ ಸಾಧ್ಯತೆಯನ್ನು ತಡೆಯಲು ಈ ಮನವಿಯನ್ನು ತಿರಸ್ಕರಿಸಲಾಯಿತು.
ದಯಾಮರಣ ಈಗ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪ್ರಚಲನೆಯಲ್ಲಿದೆ. ದಯಾಮರಣ, ಕೋರಿಕೆ ಸಾವು ಅಥವಾ ಯೂಥನೇಸಿಯಾ ಎಲ್ಲಾ ಇದೇ ಪ್ರಕಾರದ ಅಪ್ರಾಕೃತಿಕ ಮರಣಕ್ಕೆ ಹೆಸರು. ಅಪಘಾತಗಳು, ಆಘಾತಗಳು ಮುಂತಾದುವು ಮನುಷ್ಯನ ಬಲು ವೇದನೆಯ ಮಿದುಳು ನಿಷ್ಕ್ರಿಯತೆಯಿಂದ ಕೂಡಿದ ಹಲವು ಅಂಗವೈಕಲ್ಯ ಅಥವಾ ನಿರುಪಯೋಗಿಯಾಗುವ ಸ್ಥಿತಿಯನ್ನು ಅನಾರೋಗ್ಯದ ಅಂತಿಮ ಸ್ಥಿತಿ (terminal illess) ಎನ್ನುತ್ತಾರೆ. ಇಂತಹ ಅವಸ್ಥೆಯಲ್ಲಿ ರೋಗಿಗೆ ಇಹದ ಯಾವುದೇ ಸ್ಪಂದನೆಯಿರುವುದಿಲ್ಲ ಹಲವರಿಗೆ ಯಾರನ್ನೂ ಗುರುತಿಸುವ ಶಕ್ತಿಯೂ ಇರುವುದಿಲ್ಲ, ಉಸಿರಾಟ ಆಮ್ಲಜನಕದ ಬಾಹ್ಯಪೂರೈಕೆಯಿಂದ ನಡೆಯುತ್ತದೆ. ಹಲವಾರು ಅಂಗಗಳು ಸರಿಯಾಗಿ ಕೆಲಸ ಮಾಡದೇ ಅದಮ್ಯ ವೇದನೆ ಅನುಭವಿಸುತ್ತಾರೆಯಾದರೂ ಅದನ್ನು ಹೇಳಿಕೊಳ್ಳುವ ಸ್ಥಿಯಲ್ಲಿರುವುದಿಲ್ಲ. ಅವರ ಹಿಂಸೆಯನ್ನು ನೋಡಲಾಗದೇ, ಅವರಿಗೆ ಮತ್ತೆ ಆರೋಗ್ಯಪ್ರದಾನ ಮಾಡಬಲ್ಲ ಎಲ್ಲಾ ಸಾಧ್ಯತೆಗಳೂ ಶೂನ್ಯವಾದಾಗ ಅವರಿಗೆ ಶಾಂತ ಮರಣ ಮತ್ತು ಹಿಂಸೆಯಿಂದ ಬಿಡುಗಡೆ ನೀಡಲು ದಯಾಮರಣ ಎಂಬ ಸಿಧ್ಹಾಂತ ಹುಟ್ಟಿಕೊಂಡಿತು. ಈ ಎಲ್ಲ ವಿಷಯ ಗಮನಿಸಿದರೆ ನನಗೆ ಭೀಷ್ಮ ಪಿತಾಮಹರ ಇಚ್ಛಾಮರಣದ ಪೌರಾಣಿಕ ಘಟನೆ ನೆನಪಾಗುತ್ತದೆ.

ನಿಜವಾಗಿಯೂ ವೇದನೆಯಿಂದ ಯಾತನೆಯಿಂದ ಒಂದು ಜೀವಕ್ಕೆ ಮುಕ್ತಿ ನೀಡುವುದಾದರೆ ದಯಾಮರಣ ಯಾಕಾಗಬಾರದು....?

ಏನಂತೀರಿ...?

ಯೂಥನೇಸಿಯಾ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಕೊಂಡಿಯನ್ನು ಕ್ಲಿಕ್ಕಿಸಿ......
http://www.euthanasia.com/index.html


36 comments:

 1. ನಿಜ ಸರ್, ತುಂಬಾ ಬೇಜಾರಾಗುತ್ತೆ ಈ ವಿಷಯ ಓದಿ. ಈ ಕೃತ್ಯ ಮಾಡಿದ ಪಿಶಾಚಿ ಆರಾಮಾಗಿ ಓಡಾಡಿಕೊಂಡಿದ್ದಾನೆ. ಇಂಥ ಸಂದರ್ಭದಲ್ಲಿ ದಯಾಮರಣ ನಿಜಕ್ಕೂ ಸೂಕ್ತ. ಆ ಜೀವಕ್ಕೆ ಈ ಬಾಳಿನಿಂದ ಮುಕ್ತಿಯಾದರೂ ಸಿಗುತ್ತಿತ್ತು

  ReplyDelete
 2. ಈ ಕೇಸಿನ ಬಗ್ಗೆ ಹಿ೦ದೆ ಓದಿದ್ದೆ... ಇವತ್ತು ತೀರ್ಪು ಎ೦ದು ಗೊತ್ತಿರಲಿಲ್ಲ.... ಅರುಣಾಗೆ ದಯಾಮರಣ ಸಿಗಬೇಕು ಎ೦ದು ಅವತ್ತೇ ಅನಿಸಿತು... ಎ೦ತಾ ಹೇಯ ಕೃತ್ಯ.... :(

  ReplyDelete
 3. ಕುಲದೀಪ್ ಸರ್, ನನಗೂ ಹಾಗೇ ಅನ್ನಿಸ್ತು..ಅರುಣಾಳ ಅವರ್ಣಣೀಯ ವೇದನೆಯಿಂದ ಆಕೆಗೆ ಮುಕ್ತಿ ಕೊಡಿಸಬೇಕಾಗಿತ್ತು...ಇದನ್ನು ವೈದ್ಯ ಮತ್ತು ಅರುಣಾಳ ಬಂಧು ಬಳಗದ ನಿರ್ಧಾರಕ್ಕೆ ಬಿಟ್ಟಿದ್ದರೆ ಚನ್ನಾಗಿತ್ತು...ಧನ್ಯವಾದ..

  ReplyDelete
 4. ಹೌದು ಸುಧೇಶ್ ನಿಜಕ್ಕೂ ಬಹಳ ವೇದನೆಯಾಗುತ್ತೆ ಆ ಹೆಣ್ಣಿನ ಕಥೆ ಓದಿದ ಯಾರಿಗಾದ್ರೂ..

  ReplyDelete
 5. ಅಜಾದ್ ಭಯ್ಯಾ, ನನಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಟೆಕ್ನಾಲಜಿ ಎಷ್ಟೆಲ್ಲಾ ಮುಂದುವರೆದಿದೆ ಅನ್ನುತ್ತಾರೆ. ಈಕೆಗೆ ಮರು ಜನ್ಮ ಸಾಧ್ಯವಿಲ್ಲವ? ಸೋ ಸ್ಯಾಡ್.

  ReplyDelete
 6. ಸತೀಶ್ ಟೆಕ್ನಾಲಜಿ ಎಷ್ಟು ಮುಂದುವರೆದಿದ್ದರೂ ಸದ್ಯಕ್ಕಿರುವ ಸಾಧ್ಯತೆಗಳಲ್ಲಿ ಮಿದುಳಿನ ಕ್ರಿಯಾಶೀಲತೆಯನ್ನು ಪುನಶ್ಛೆತನಗೊಳಿಸುವುದು ಅಸಾಧ್ಯ...ಅದಕ್ಕೇ ಮೆದುಳಿಗೆ ಆಮ್ಲಜನಕದ ಕೊರತೆ ಬಾರದಂತೆ ಮಾಡುವುದು ಬಹು ಮುಖ್ಯವಾಗಿರುತ್ತದೆ..ಒಮ್ಮೆ ಕೆಟ್ಟದ್ದೇ ಆದರೆ ಅದನ್ನು ಮರುಕಳಿಸುವುದು ಬಹುಶಃ ಸಾಧ್ಯವಾಗಲಿಕ್ಕಿಲ್ಲ ಅದೇ ಕಾರಣಕ್ಕೆ ಬ್ರೈನ್ ಡೆತ್ ಎನ್ನುವ ಸ್ಥಿತಿ ಎನ್ನುತ್ತಾರೆ...ಮಿದುಳಿನ ಬಹು ಸಂಕೀರ್ಣ (ಕಾಂಪ್ಲೆಕ್ಸ್) ಕ್ರಿಯೆಗಳನ್ನು ಇನ್ನೂ ಮಾನವ ಅರಿತಿಲ್ಲ..

  ReplyDelete
 7. Ajaad Sir,

  naanu odida prakara aakeya hesaru Aruna. 1973 ralli avla mele atyacharavaagittu haagu avla vayassu aaga 24. Iga aakeya vayassu 62, kaleds 38 varshagalinda avalu coma dalli iddalu....

  ReplyDelete
 8. ಆಜ಼ಾದ್ ಭಯ್ಯಾ..

  ಅರುಣಾಳ ವಿಷಯ ಓದಿ ಖೇದವಾಯ್ತು..ನ್ಯಾಯಾಲಯ ದಯಾಮರಣ ಕೊಡಲು ನಿರಾಕರಿಸಿದುದರ ಮುಖ್ಯ ಕಾರಣ ಆಕೆಗೆ ಇನ್ನೂ Brain death ಆಗಿಲ್ಲ ಅಂತ. ಒಂದು ವರದಿಯ ಪ್ರಕಾರ ಆಕೆ ಖುಷಿಯಾದಾಗ ಸಂತೋಷವನ್ನೂ,ಇಷ್ಟವಿಲ್ಲದ ಆಹಾರವನ್ನು ಕೊಟ್ಟಾಗ ಅಥವಾ ದುಃಖವಾದಾಗ ಮುಖದಲ್ಲಿ ಬೇಸರವನ್ನೂ, ಸಿಡಿಮಿಡಿಯನ್ನೂ ವ್ಯಕ್ತಪಡಿಸುತ್ತಾಳ೦ತೆ.

  Passive Euthanasia, Active Euthanasia ಎಂದು ೨ ಪ್ರಕಾರದ Euthanasia ಗಳು ಇವೆ. Passive Euthanasia ಅಂದರೆ ವ್ಯಕ್ತಿಯನ್ನು ಬದುಕಿಸಲು ಉಪಯೋಗಿಸಿದ ವೆಂಟಿಲೇಟರ್ ನಂತಹ ಉಪಕರಣಗಳನ್ನು ತೆಗೆದುಹಾಕುವುದು. Active Euthanasia ಎಂದರೆ ಬದುಕಿರುವ ವ್ಯಕ್ತಿಗೆ ಮರಣ ದಯಪಾಲಿಸಲು ವಿಷ ಪೂರಿತ ಇಂಜೆಕ್ಶನ್ ನಂತಹ ಸಾಧನಗಳನ್ನು ಬಳಸುವುದು. ಬಹುಶಃ ಅರುಣಾಳ ಉದಾಹರಣೆ ಎರಡನೆ ರೀತಿಯದಾದುದರಿಂದ ನ್ಯಾಯಾಲಯ ದಯಾ ಮರಣವನ್ನು ನಿರಾಕರಿಸಿದೆ ಎಂದು ನನ್ನ ಅಭಿಪ್ರಾಯ.

  ವೆಬ್ ದುನಿಯಾ ದ ಪ್ರಕಾರ ಅತ್ಯಾಚಾರವೆಸಗಿದ ವ್ಯಕ್ತಿ AIDS ನಿಂದ ಸತ್ತಿದ್ದಾನೆ.
  http://publication.samachar.com/topstorytopmast.php?sify_url=http://kannada.webdunia.com/newsworld/news/national/1103/07/1110307005_1.htm

  ಅದೇನೇ ಇರಲಿ, ನರಳುವ ಜೀವಕ್ಕೆ ನರಳುವಿಕೆಯಿಂದ ಮುಕ್ತಿ ಸಿಗಬೇಕಿತ್ತು.

  ReplyDelete
 9. ದಯನೀಯ ಸ್ಥಿತಿ..ಅರುಣಾಳದ್ದು..
  ತು೦ಬಾ ವ್ಯಥೆಯಾಗುತ್ತದೆ..ಆದಷ್ಟು ಬೇಗ ಆಕೆಯ ನೋವಿಗೆ ಮುಕ್ತಿ ಸಿಗಲಿ.

  ReplyDelete
 10. ಸರ್,

  ಆಕೆಗೆ ಸಂಪೂರ್ಣ ಅರಿವಿದೆ ತನಗಾಗುತ್ತಿರುವ ನೋವಿನ.. ತನ್ನೊಂದಿಗೆ ಘಟಿಸಿದ ದುರ್ಘಟನೆಯ.... ಎಲ್ಲವನ್ನೂ ಆಕೆ ಸಹಿಸುತ್ತಿದ್ದಾಳೆ... :(

  ಒಂದಂತೂ ಸತ್ಯ. ಹುಟ್ಟು ಸಾವು ನಮ್ಮ ಕೈಲಿಲ್ಲ. ನಮ್ಮ ಕೈಯೊಳಗಿರುವುದು ಕೇವಲ ಅಲ್ಪಕಾಲದ ಬದುಕು. ಈ ಬದುಕಿನ ಅತಿ ಸುಂದರ ಭಾಗವನ್ನೇ ಕಳೆದುಕೊಂಡವಳು ಈ ನತದೃಷ್ಟೆ. ಅವಳನ್ನು ಈ ಸ್ಥಿತಿಗೆ ನೂಕಿದ ಆ ಪಶುವಿಗೇನು ಶಿಕ್ಷೆ ಆಯಿತು? ಆತ ಮಾತ್ರ ಚೆನ್ನಾಗಿಯೇ ಬದುಕುತ್ತಿದ್ದಾನೆ. ಇನ್ನೂ ಸತ್ತಿಲ್ಲ... :(

  (ಸಣ್ಣ ತಿದ್ದುಪಡಿ. ಆಕೆ ಈ ಕ್ರೌರ್ಯಕ್ಕೆ ಬಲಿಯಾಗುವಾಗ ೨೩ ವರುಷದವಳಾಗಿದ್ದಳು. ಈಗ ಆಕೆಗೆ ೬೦. ೩೭ ವರುಷಗಳಿಂದ ಹಾಗೇ ಇದ್ದಾಳೆ.)

  ReplyDelete
 11. ಇದಂತೂ ಬೇಸರದ ಸಂಗತಿ.... ನಮ್ಮ ದೇಶದಲ್ಲಿ ತಪ್ಪಿಗೆ ಶಿಕ್ಷೆ ಯಾವಾಗ ಸಿಗುತ್ತೋ ಗೊತ್ತಿಲ್ಲ... ಸಾವು ನಾವು ಬಯಸಿದಾಗ ಬರುವುದಾದರೆ ಚೆನ್ನಾಗಿರುತ್ತೇನೋ.. ಆದರೆ ಹುಟ್ಟು ಸಾವು ಯಾರ ಕೈಯಲ್ಲೂ ಇಲ್ಲವೆಂದೆನಿಸುತ್ತೆ...

  ReplyDelete
 12. ಜಲನಯನ,
  ದಯಾಮರಣದ ಪ್ರಶ್ನೆ ಇರಲಿ, ಅರುಣಾಳ ಬದುಕು ಸಾವಿಗೆ ಸಮಾನವಾಗಿರುವದರಿಂದ, ಆ ಅತ್ಯಾಚಾರಿಗೆ ಗಲ್ಲಿನ ಶಿಕ್ಷೆ ಕೊಡುವದೇ ಯೋಗ್ಯವಾಗಿದೆ.

  ReplyDelete
 13. ಆಜಾದ್,

  ಉತ್ತಮ ಲೇಖನ ! ಮಹಿಳಾ ದಿನಂದಂದು ಅಸಹಾಯಕ ಮಹಿಳೆಯೊಬ್ಬಳ ಬಗ್ಗೆ ಬರೆದಿದ್ದೀರಾ.
  ಅರುಣಾಳಂತಹ ಇನ್ನೆಷ್ಟು ಜೀವಗಳು ಹೀಗೆ ನರಳುತ್ತಿವೆಯೋ ! ಯಾರದೋ ರಾಕ್ಷಸೀ ಕೃತ್ಯಕ್ಕೆ ಹೀಗೆ ಜೀವವೊಂದು ಬಲಿಯಾಗಿದ್ದು ಸಂಕಟ ತರುತ್ತದೆ .ಆತನಿಗೆ ಶಿಕ್ಷೆ ಸಿಕ್ಕಿತೋ ಇಲ್ಲವೋ , ಯಾವ ತಪ್ಪೂ ಇಲ್ಲದೆ ಈಕೆ ಜೀವಂತ ಶವವಾಗ ಬೇಕಾಯಿತು !

  ದಯಾಮರಣ ಅರುಣಾಳಂಥವರಿಗೆ ಬಿಡುಗಡೆಯ ಹಾದಿಯಾಗಬಲ್ಲದು ಎನ್ನುವುದರಲ್ಲಿ ಮಾತಿಲ್ಲ .ದೈಹಿಕವಾಗಿ ಅತ್ಯಂತ ನೋವು ಅನುಭವಿಸುತ್ತಿರುವ , ಬದುಕುವ ಬಗ್ಗೆ ಯಾವ ಆಶಾ ಕಿರಣವೂ ಇಲ್ಲದ , ತಮ್ಮಿಂದ ಕುಟುಂಬದವರಿಗಾಗುತ್ತಿರುವ ಮಾನಸಿಕ ಹಾಗೂ ಆರ್ಥಿಕ ಹೊರೆಯ ಬಗ್ಗೆ ಯೋಚಿಸಿ ಮಾನಸಿಕವಾಗಿಯೂ ಕುಗ್ಗಿ ಹೋಗುವ ಅದೆಷ್ಟೋ ಜೀವಗಳಿಗೆ ದಯಾಮರಣ ಒಂದು ಉಡುಗೊರೆಯೇ .

  ಆದರೆ , ನಮ್ಮ ದೇಶದಲ್ಲಿ ಇದನ್ನು ದುರುಪಯೋಗ ಮಾಡಿಕೊಳ್ಳುವವರೆ ಹೆಚ್ಚು ! ಈ ಬಗ್ಗೆ ಯೋಚಿಸಿದಾಗ ಒಮ್ಮೆ ಮೈ ನಡುಗುತ್ತದೆ . ದುಷ್ಕರ್ಮಿಗಳಿಗೆ ದಾರಿ ಮಾಡಿ ಕೊಟ್ಟಂತಾಗದೆ ಎಂಬ ಸಂಶಯವೂ ಸುಳಿಯುತ್ತದೆ . ನಾವು ಜವಾಬ್ದಾರಿಯುತವಾಗಿ ನಡೆದುಕೊಂಡಲ್ಲಿ ಮಾತ್ರ " ದಯಾಮರಣ" ದ ಉದ್ದೇಶ ಸಫಲವಾಗುವುದು .

  ReplyDelete
 14. ಅಶೋಕ್ ಮಾನಸಿಕ ಮತ್ತು ದೈಹಿಕ ಯಾತನೆಯ ಸ್ಥಿತಿಯನ್ನು ತಲುಪಿದವರು ಅದರಲ್ಲೂ ಸ್ವಾಭಿಮಾನಿಗಳಿಗೆ ಈ ರೀತಿಯ ಜೀವನ ಖಂಡಿತಾ ಇಷ್ಟವಾಗುವುದಿಲ್ಲ......ಅವರು ಸಾವನ್ನು ಅಪ್ಪಿಕೊಳ್ತಾರೆ...
  ಜೀವನ ಮತ್ತೆ ನೀಡಬಹುದು ಅನ್ನೋದಾದ್ರೆ ಸುಶ್ರೂಶೆ ಖಂಡಿತಾ ಹಣ ಖರ್ಚೂ ಮಾಡಬಹುದು ಆದರೆ ..ಬರೀ ಹಿಂಸೆ ಕಟ್ಟಿಟ್ತ ಬುತ್ತಿ ಅನ್ನೋದಾದ್ರೆ... ದಯಾಮರಣ ಬಹಳ ಉತ್ತಮ...
  ಅರುಣಾಳ ವಯಸಿನ ಬಗ್ಗೆ ಮತ್ತಷ್ಟು ಮಾಹಿತಿ ಸಿಕ್ಕನಂತರ ನಿಮ್ಮ ಮತ್ತು ಇತರ ಸ್ನೇಹಿತರ ಮಾತಿಗೆ ಉತ್ತರಿಸುವೆ.

  ReplyDelete
 15. Novininda mukthi sigutte.. avalu novu anubhavisuvudannu bittu berenu madalu samarthalaLLa andaga dayamarana Yaakagabaradu... onderadu dina aasptateryalli iddare jeeva bayige banda haage agutte.. antaddaralli 37 varshadinda?? yochisalikkko asdhya... idara bagge deerga charche agi ondu tiddupadi taruva avashyakathe ide

  Pravi

  ReplyDelete
 16. ಸರ್ ನಾನು ಏನು ಹೇಳ್ಬೇಕು ಅಂತ ಗೊತ್ತಾಗ್ತಾ ಇಲ್ಲಾ ತುಂಬಾ ಚಿಕ್ಕವನು ತುಂಬಾ ನೋವಾಗುತ್ತೆ ಅಳುನೆ ಬರ್ತಾ ಇದೇ ಎಲ್ಲರ ಕಾಮೆಂಟ್ಸ್ ನೋಡಿ ಕಣ್ಣಲ್ಲಿ ನೀರು ತುಂಬಿದೆ "ದಯಾಮರಣ" ಅನ್ನೋ ಪದ ನೆನಪಿ ಕೊಂಡರೆ ನನಗೆ ಭಯ ಆಗುತ್ತೆ ಆದ್ರೆ ಅರುಣ ಅನ್ನೋ ಪಾತ್ರಗಳು ನಾನು ಕೇವಲ ಚಲನ ಚಿತ್ರಗಳಲ್ಲಿ ಪುಸ್ತಕಗಳಲ್ಲಿ ನೋಡಿದ್ದೇ ಓದಿದ್ದೆ ಆದ್ರೆ ನಿಮ್ಮ ಈ ಲೇಖನ ಓದಿದಮೇಲೆ ನನಗೆ ಮಾತೆ ಹೊರಡುತ್ತಾ ಇಲ್ಲಾ :-( ನಾನು ತುಂಬಾ ಸ್ಮೂತ್ ಇಂಥಹ ಲೇಖನ ಗಳನ್ನ ಓದಿದ್ರೆ ತುಂಬಾ ತಲೆಗೆ ಹಚ್ಚಿಕೊಳ್ತೀ ಯೋಚಿಸ್ತೀನಿ ಕೆಲವೊಮ್ಮೆ ಅದರಲ್ಲೇ ಮುಳಿಗಿ ಬಿಡ್ತೀನಿ ......! ಈ ಥರ ಜೀವನ ಯಾರಿಗೂ ಬೇಡ ಸರ್ :-(

  ReplyDelete
 17. ಇತ್ತೀಚೆಗೆ ನೋಡಿದ ಗುಜಾರಿಶ್ ಸಿನಿಮಾ ನೆನಪಾಯ್ತು :(

  ReplyDelete
 18. ಆಜಾದ ಸರ್ , ವಿಧಿ ಯಾರಿಗೆ ಯಾವಾಗ ಏನು ತಂದಿಡುತ್ತೋ ಯಾರಿಗೂ ಅದು ತಿಳಿದಿಲ್ಲ, ಅದಕ್ಕೆ ಹಲವು ಸರ್ತಿ ನಾನು ಬರೆಯುವುದಿದೆ, ಯಾಕೆ ಸುಮ್ನೇ ಕಚ್ಚಾಡ್ತೀರಿ-ಇರುವಷ್ಟು ದಿನ ನೆಮ್ಮದಿಯಿಂದ ಸಹಬಾಳ್ವೆ ಮಾಡಿ ಅಂತ, ಕೆಲವರು ವೇದಾಂತಿ ಅಂತಾರೆ, ಇನ್ನು ಕೆಲವರು ಅದೇ ಕಥೆ ಅಂತಾರೆ, ಆದರೆ ಅದೇ ಬೇಕಾಗಿರುವುದು ಈ ಜಗಕ್ಕೆ ಅಲ್ವೇ ? ದಯಾಮರಣ ಕೊಡುವುದು ಸರಿಯೇನೋ ಆದ್ರೂ ಆಕೆ ಮತ್ತೆ ಹುಟ್ಟಿ ಅದೇ ಥರ ಅನುಭವಿಸುವ ಪರಿ ಬಾರದಿರಲಿ. ಇದನ್ನೆಲ್ಲಾ ನೋಡುವಾಗ ಹಲವು ಬಾರಿ ನಮ್ಮಲ್ಲಿ ಮೂಡುವ ಪ್ರಶ್ನೆ ಹೀಗೂ ಉಂಟೇ ? ಲೇಖನ ಸಕಾಲಿಕ, ಸುಂದರ.

  ReplyDelete
 19. ಅರುಣಾಳ ಯಾತನಾಮಯ ಸ್ಥಿತಿ .. ತು೦ಬಾ ದುಃಖವಾಗುತ್ತದೆ.

  ReplyDelete
 20. ಆಕೆಯದು ತನ್ನ ತಪ್ಪಿಲ್ಲದ ದಯನೀಯ ಸ್ಥಿತಿ. ಇ೦ಥಾ ಪೈಶಾಚಿಕ ಕೃತ್ಯಗಳಿಗೆ ಕೊನೆಯಿಲ್ಲವೇ?

  ReplyDelete
 21. ಬಹಳ ವೇದನೆ ಕಥೆ....

  ReplyDelete
 22. ಚೇತನಾ,,ಯಾರದೋ ತಪ್ಪಿಗೆ ಮತ್ಯಾರೋ ಅನುಭವಿಸೋ ಈ ಯಾತನೆ ಮನಸಿಗೆ ನೋವು ಮಾಡುವಂತಹುದು.ದಯಾಮರಣದ ದುರುಪಯೋಗದ ಬಗ್ಗೆ ಹೆಚ್ಚು ಕಾಳಜಿ ನ್ಯಾಯಾಲಯಕ್ಕೆ ಇದರಿಂದ ಹೆಚ್ಚು ಅಮಯಾಯಕರು ದುರಾಶೆಯ ಬಲಿಯಾಗಬಹುದು ಎನ್ನುವ ಭಯ..ಹಾಗಾಗಿ ಈ ತೀರ್ಪು ಕೋರಿಕೆಗೆ ವಿರುದ್ಧವಾಗಿದೆ ಎನ್ನಬಹುದು. ಧನ್ಯವಾದ ನಿಮ್ಮ ಅನಿಸಿಕೆಗೆ.

  ReplyDelete
 23. ವಿಜಯಶ್ರೀ, ನಿಮ್ಮ ಅನಿಸಿಕೆ ನಿಜ,,, ಅರುಣಾಳಂತಹವರ ಜೀವನ ಮರಣಕ್ಕಿಂತಾ ವೇದನೀಯ ಮತ್ತು ಇತರರಿಗೂ ಮನಸಿನ ಹಿಂಸೆ..ಇಂತಹ ಸ್ಥಿತಿಯಲ್ಲಿ ನನ್ನ ಮಾವನವರನ್ನೇ ನೋಡಿದ್ದೇನೆ..ಎಲ್ಲೋ ಒಂದು ಕಡೆ.. ಆಕೆಗೆ ನ್ಯಾಯಕ್ಕಿಂತ ಅನ್ಯಾಯವನ್ನೇ ಮಾಡಿದೆ ನ್ಯಾಯಾಲಯ....

  ReplyDelete
 24. ತೇಜಸ್ವಿನಿ, ಘಟನೆಗಳಿಗೆ ಬಲಿಯಾಗುವುದು ಎಂದರೆ ಇದಕ್ಕಿಂತ ಉತ್ತಮ ಉದಾಹರಣೆ ಸಿಗದು. ಅರುಣಾಳ ಸ್ಥಿತಿಗೆ ಕಾರಣನಾದನಿಗೆ ಮರಣದಂಡನೆಯಾದರೂ....ಆಕೆ ಅನುಭವಿಸಿದ ಹಿಂಸೆಯ ಕೂದಲೆಳೆಯಷ್ಟೂ ನೋವು ಅವನಿಗಾಗಿರುವುದಿಲ್ಲ... ವಿಪರ್ಯಾಸ ಅಲ್ಲವೇ... ??

  ReplyDelete
 25. ಸುನಾಥಣ್ಣ ..ಅತ್ಯಾಚಾರಿ ಏಡ್ಸ್ ನಿಂದ ಸತ್ತ ಎನ್ನುವ ವದಂತಿಯಿದೆ..ಆದರೆ ಅವನಿಗೆ ಮರಣ ದಂಡನೆ ಕೊಟ್ಟರೂ ...ಆಕೆ ಅನುಭವಿಸಿದ ವೇದನೆಗೆ ಕೊನೆಯಿಲ್ಲವಲ್ಲಾ ..? ಅದೇ ಒಂದು ಮನನೋಯುವ ವಿಷಯ....

  ReplyDelete
 26. ಸುಗುಣ.. ನಿಮ್ಮ ಪ್ರತಿಸ್ಪಂದನೆಗೆ ಧನ್ಯವಾದ... ನನ್ನ ಬ್ಲಾಗ್ ಲೇಖನಗಳನ್ನು ಮನ ಉಲ್ಲಸಿತಗೊಳಿಸಲು ಮತ್ತು ಮಾಹಿತಿಗೆ ಎಂದುಕೊಂಡಿದ್ದೆ..ಆದರೆ ಇದನ್ನು ಬರೆಯಲೇ ಬೇಕಾಯಿತು ಮನನೊಂದು.....

  ReplyDelete
 27. ಚಿತ್ರಾ..ನಿನ್ನ ಸ್ಪಂದನೆ ಮತ್ತು ಪ್ರತಿಕ್ರಿಯೆ ನಾನು ಒಪ್ಪುತ್ತೇನೆ..., ಅರುಣಳಿಗೆ ಜೀವನವೆ ಬಹಿಶಾಪ ಆಗಿಬಿಟ್ಟಿದೆ. ಇದನ್ನು ಅವಳಿಗೆ ಸಂಬಂಧಪಟ್ಟ ಎಲ್ಲಾರೂ ಸೇರಿ ಚರ್ಚಿಸಿ ಪರಾಮರ್ಶಿಸಿ ೩೫ ವರ್ಷಗಳ ನಂತರ ಕೋರಿಕೆ ಸಲ್ಲಿಸಿದ್ದಾರೆಂದರೆ ನಿಜಕ್ಕೂ ಅರುಣಳ ಜೀವಕ್ಕಿಂತ ಅವಳ ಮರಣ ಅವಳಿಗೆ ಹಿತವಾಗಬಹುದು ಎನಿಸಿರಬೇಕು... ಧನ್ಯವಾದ ನಿನ್ನ ಪ್ರತಿಕ್ರಿಯೆಗೆ

  ReplyDelete
 28. ಪ್ರವೀಣ್..ನೋವಿನ ಉಪಶಮನ ಜೀವವನ್ನು ಉಳಿಸಲು ಡಾಕ್ಟರ್ ಮಾಡುತ್ತಾರೆ.. ಆದರೆ ನೋವೇ ಜೀವನ ಎನ್ನುವುದಾದರೆ ಮನುಷ್ಯ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ..ಇಲ್ಲಿ ಅರುಣಾಳಿಗೆ ಆ ಅವಕಾಶವೂ ಇಲ್ಲ... ಮನಮಿಡಿಯುತ್ತೆ ..ಆಕೆಗಾಗಿ ನೋವಿಂದ

  ReplyDelete
 29. ಮಂಜು...ನಾನೂ ಭಾವುಕನಾದೆ ಈ ಬಗ್ಗೆ ಟೀವಿಯಲ್ಲಿ ನೋಡಿ ಮತ್ತು ನೆಟ್ ನಲ್ಲಿ ನೋಡಿ... ನಿನ್ನ ಸ್ಪಂದನೆ ಸಹಜ ಇಂತಹ ಕಥೆ ಕೇಳುವ ಎಲ್ಲಾರಿಗೂ...

  ReplyDelete
 30. ವಿದ್ಯಾ ಮೊದಲಿಗೆ ಸ್ವಾಗತ ನಿಮಗೆ ಜಲನಯನಕ್ಕೆ...ನಮ್ಮ ಬ್ಲಾಗ್ ಬಳಗಕ್ಕೆ... ಧನ್ಯವಾದ ನಿಮ್ಮ ಪ್ರತಿಸ್ಪಂದನೆಗೆ...

  ReplyDelete
 31. ಮನಮುಕ್ತಾ, ವೇದನೆ ಒಂದೆರಡು ನಿಮಿಷದ್ದಾದರೂ ನಮಗೆ ಸಹಿಸಲಾಗದು ಇನ್ನು ಇಂತಹ ದೀರ್ಘ ಪೀಡನೆಯನ್ನು ಸಹಿಸುತ್ತಿರುವ (ನಮಗೆ ಹಾಗೆನ್ನಿಸಲು ಆಕೆ ಹೇಳುತ್ತಿಲ್ಲವಲ್ಲಾ...???!!!) ಆಕೆಯ ನೋವು..!! ಬಣ್ಣಿಸಲಾಗದು

  ReplyDelete
 32. ವಿ,ಆರ್ ಬಿ.ಸರ್.
  ನಿಜ ಇದ್ದಾಗ ಎಲ್ಲರಿಗೆ ಸಹ್ಕಾರಿಯಾಗಿ ಆದಷ್ಟೂ ಸಹಾಯಕರಾಗಿ ಆಪ್ತರಾಗಿಯಲ್ಲದಿದ್ದರೂ ಕೇಡನ್ನು ಬಗೆಯದೇ ಇದ್ದರೆ ಸಾಕು... ನಿಮ್ಮ ಮಾತನ್ನು ಪೂರ್ಣ ಒಪ್ಪುತ್ತೇನೆ.. ಮಾನವ ಧರ್ಮ ಮತ್ತು ಮಾನವೀಯತೆಯ ಮುಂದೆ ಎಲ್ಲಾ ಅರ್ತಹೀನ ಎನಿಸುತ್ತೆ. ಧನ್ಯವಾದ ನಿಮ್ಮ ಮನದ ಮಾತಿಗೆ.

  ReplyDelete
 33. ಪ್ರಭಾಮಣಿಯವರೇ...ಧನ್ಯವಾದ ನಿಮ್ಮ ಪ್ರತಿಸ್ಪಂದನೆಗೆ... ಈಕೆಯ ಪೀಡನೆಗೆ ಬೇಗ ಮುಕ್ತಿ ಸಿಗಲಿ ಎನ್ನುವ ಪ್ರಾರ್ಥನೆ ಮಾಡುವುದೊಂದೇ ನಮಗಿರುವ ದಾರಿ

  ReplyDelete
 34. ಮಹೇಶ್ ಇದು ಒಂದು ದೀರ್ಘ ಬವಣೆಯ ಪೀಡನೆಯ ವೇದನೆಯ ಅನುಭವಿಸಿದವರಿಗೇ ತಿಳಿಯುತ್ತೆ ಅನ್ಸುತ್ತೆ ಇದರಿಂದ ಮುಕ್ತಿ ಹೇಗೆ ?? ಎಂದು...??

  ReplyDelete
 35. ಅಜಾದ್,
  ದಯಾಮರಣದ ಬಗ್ಗೆ ಇದು ನಿಜಕ್ಕೂ ಉತ್ತಮ ಲೇಖನ. ಸದ್ಯ ಈ ಕೃತ್ಯವೆಸಗಿದವನನ್ನು ಬಿಟ್ಟು ಈ ವಿಚಾರದ ಬಗ್ಗೆ ತುಂಬಾ ಚರ್ಚೆಯಾಗುತ್ತಿದೆ...ಆಕೆಯ ನೋವಿನ ವೇದನೆಯನ್ನು ಹಂಚಿಕೊಳ್ಳಲು ನಮ್ಮಿಂದ ಸಾಧ್ಯವಿಲ್ಲ. ದಯಾಮರಣ ಒಳ್ಳೆಯದು ಅಂತ ನನ್ನ ಭಾವನೆ.

  ReplyDelete
 36. ಶಿವು ನಿಮ್ಮ ಅನಿಸಿಕೆಗೂ ನಮ್ಮಲ್ಲಿ ಎಲ್ಲಾರ ಅನಿಸಿಕೆಗೂ ಸಾಮ್ಯವಿದೆ ಅದರಲ್ಲೂ ಅರುಣಾಳ ಕರುಣಾಜನಕ ಕಥೆಯ ಹಿನ್ನೆಲೆಯಲ್ಲಿ.... ದುರುಪಯೋಗವಾಗುತ್ತೆ ಎನ್ನುವುದು ಸಬೂಬು ಅಂಥವರಿಗೆ...ಇದಕ್ಕೆ ಸೂಕ್ತ ಪರಿಹಾರೋಪಾಯ ಅಗತ್ಯ

  ReplyDelete