ಅಂಜಿದೊಡೆಂತಯ್ಯಾ??
ನೆಲನಡುಗಿತು ಜಲದ ಒಳಗೆ
ಜಲವು ಸೆಳೆಯಿತು ತನ್ನ ಬಲೆಗೆ
ಮನುಜನೊಂದು ಹುಲ್ಲುಕಡ್ಡಿ
ತರಗೆಲೆಯುದುರಿ ಚದುರಿದಂತೆ
ಭಸ್ಮ ಚಾಚಿ ಅನಿಲಾಗ್ನಿ ಕೆನ್ನಾಲಗೆ
ಎಲ್ಲೋ ಅದುರಿತು ಸಾಗರದೊಳಗೆ
ಭೂ ಪದರಗಳ ತಿಕ್ಕಾಟ ಘಳಿಗೆ
ತಲದ ತಳಮಳ ಅಲೆಯ ಆರ್ಭಟ
ಜಲರಾಶಿಯೇ ಕದಲಿತು ಎಲ್ಲ ಪಲ್ಲಟ
ನಿಸರ್ಗಕಿದು ಸಹಜ ದಿನದ ನಡಿಗೆ
ಭೂಗರ್ಭವೆಲ್ಲಾ ಘನದ್ರವದ ದಲ
ದ್ರವ ಮೇಲೆಬಂದಂತೆ ಘನ ನೆಲ
ಒಳಗುದಿಗೆ ಕೊತಕೊತವು ಸಹಜ
ಘನ ಅದರಂತೆ ನಡುಗಿದರೆ ಮನುಜ
ಪ್ರಕೃತಿಕೇಗೆ ಹೇಳು ನಿನ ಮೇಲೆ ಛಲ?
ಅಣ್ಣನವರ ವಚನ ಎಷ್ಟು ಸಮಂಜಸ
ಬೆಟ್ಟದ ಮೇಲೊಂದ ಮನೆಯಮಾಡಿ!!?
ನಿಸರ್ಗವೇ ಹೊರಗಿಟ್ಟ ದ್ವೀಪಗಳಿವು
ಜಪಾನ್, ಇಂಡೋನೇಶಿಯಾ ಹವಾಯಿ
ಯಾಕಿಲ್ಲೇ ಹೆಚ್ಚು ನಿಸರ್ಗದ ಕವಾಯಿ?
ಅಲ್ಲಿದ್ದ ಮೇಲೆ ಅನುಭವಿಸಬೇಕು ಎಲ್ಲಾ
ಮೃಗಗಳಿಗಂಜಿದೊಡೆಂತಯ್ಯಾ???
Aajad sir,
ReplyDeleteTv yalli Japaan bhukampada chitranagalannu nodi mana kalukitu, Prakrti maateya munisu innadaru shantavaagali....Kavana Chennagide.....
ಜಪಾನ್ ದುರಂತವನ್ನು ಕವನದಲ್ಲಿ ಸರಿಯಾಗಿಯೇ ಸೆರೆ ಹಿಡಿದಿದ್ದೀರಿ.
ReplyDeleteನಿಸರ್ಗನಿಯಮಗಳಿಗೆ ಮನುಷ್ಯ ತಲೆಬಾಗಲೇ ಬೇಕಲ್ಲವೆ? ಸತ್ಯವನ್ನು ಕವನದಲ್ಲಿ ಸೆರೆ ಹಿಡಿದಿದ್ದೀರಿ.
ReplyDeleteಧನ್ಯವಾದ ಅಶೋಕ್...ನಿಸರ್ಗದಮೇಲೆ ಮಾನವನ ಅತ್ಯಾಚಾರ ನಡೆಯದು...ಎನ್ನಲಿದೆಯೇ ಹೆಚ್ಚುತ್ತಿರುವ ನಿಸರ್ಗ ಮುನಿಸು...ಹೌದು ಅದರ ಮುಂದೆ ಮಾನವ ಹುಲು..
ReplyDeleteಡಾಕ್ಟ್ರೇ, ಇದು ದುರಂತವೋ ಅಥವಾ ಹೆಚ್ಚುತ್ತಿರುವ ಪ್ರಕೃತಿ ಅತಿರೇಕಗಳ ಮೂಲಕ ಮಾನವನಿಗೆ ಚೇತಾವನಿಗಳ ಪ್ರಾರಂಭವೋ...ನೋಡಬೇಕು...
ReplyDeleteಸುನಾಥಣ್ನ...ತಕ್ಷಣ ಹೊಳೆದದ್ದು ಒಂಥರಾ ಆಶು ಕವಿತೆ...ಇಷ್ಟವಾಗಿದ್ದರೆ ಧನ್ಯ...
ReplyDeletekavana chennagide.... beekaravaagide e prakruthi vikopagaLu :(
ReplyDeleteಧನ್ಯವಾದ ಸುಧಿ...ಮಾನವ ವರ್ವ ಶಕ್ತ ಎಂದು ಕೊಳ್ಳೋದೇ ಒಂದು ಮೂರ್ಖತನ.
ReplyDeleteಅದ್ಭುತ ಚಿಂತನೆ ನಾಗರಾಜ್‍ರವರೇ ಉತ್ತಮವಾಗಿದೆ.. ಜಪಾನಿನ ಪ್ರಕೃತಿ ವಿಕೋಪದಲ್ಲಿ ಮೃತರಾದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಳ್ಳುವೆ..
ReplyDeleteಆಜಾದು...
ReplyDeleteನನನಗೆ ಜಪಾನ್ ದೇಶ ಕಂಡರೆ ಬಹಳ ಇಷ್ಟ...
ಅಣು ಬಾಂಬ್ ಬಿದ್ದರೂ...
ತಮ್ಮ ದೇಶವನ್ನು ಸ್ವಂತ ದುಡಿಮೆಯಿಂದ ತಮ್ಮ ದೇಶವನ್ನು ಹೆಮ್ಮೆಯಿಂದ ಕಟ್ಟಿದರು...
ಆ ದೇಶ ಮತ್ತೆ ಎದ್ದು ಬರಲಿ...
ನಮ್ಮೆಲ್ಲರ ಶುಭ ಹಾರೈಕೆಗಳು...
ಪ್ರದೀಪ್, ಎಲ್ಲೋ ನಾಗರಾಜ್ ಬ್ಲಾಗಿಗೆ ಕಾಮೆಂಟ್ ಹಾಕ್ತಾ ನನ್ನ ಬ್ಲಾಗಲ್ಲಿ ಅದನ್ನ ಪೇಸ್ಟ್ ಮಾಡಿದ್ದೀರಾ ಅಂದ್ಕೊಂಡೆ...ಆದ್ರೆ ಜಪಾನಿನ ಸುನಾಮಿ ಬಗ್ಗೆ ಅವರು ಬರೆದಿಲ್ಲ...ಹಾಗಾಗಿ ...ಹಹಹ ಯಾವುದಕ್ಕೂ ಧನ್ಯವಾದ.
ReplyDeleteಹೌದು ಪ್ರಕಾಶು, ದೇಶಾಭಿಮಾನ ಏನು ಎನ್ನೋದನ್ನ ಕಲೀಬೇಕು ನಾವು...ದೇಶಕ್ಕಾಗಿ ಏನು ಮಾಡಲೂ ಸಿದ್ಧ. ಅವರಿಗೆ ಶುಭವಾಗಲಿ...
ReplyDeletetouching sir
ReplyDeletelate agi comment madta irodakke kshamisi
cricket jwara bandu ella bittu bittidde
nidhaana kelage bartaa idini hahhaha
Japan earth quake nodoke agolla sir
really its one of the worst disaster for them.
ಜಪಾನ್ ದುರ೦ತದ ಹಿನ್ನೆಲೆಯಲ್ಲಿ ನಿಮ್ಮ ಆಶು ಕವನ ಸಕಾಲಿಕವಾಗಿದೆ. ಹೌದು, ಅವರ ದೇಶಪ್ರೇಮದ ಕಿ೦ಚಿತ್ ಭಾಗವಾದರೂ ನಮ್ಮಲ್ಲಿ ಇದ್ದಿದ್ದರೆ .... ಏನೇನೋ ಆಗುತ್ತಿತ್ತು. ಅಲ್ಲವೇ?
ReplyDeleteನನ್ನ ಮಗನ ಅಚ್ಚುಮೆಚ್ಚು ದೇಶಗಳಲ್ಲಿ ಜಪಾನ್ ಸಹ ಒಂದು.
ReplyDeleteಜಪಾನ್ ಬೇಗ ಚೇತರಿಸಿಕೊಂಡು ಮೇಲೆ ಬರಲಿ....
ಕವನ ಚೆನ್ನಾಗಿ ಕಟ್ಟಿದ್ದೀರ...
ಸರ್, ಮನುಷ್ಯ ತನ್ನ ಹತ್ತಿರ Technology ಇದೆ ಎಂದರೆ ...ಪ್ರಕ್ರತಿ ತಾನೇನು ಕಡಿಮೆ ಇಲ್ಲ ಎಂದು ಹೇಳುತ್ತಿದೆ.
ReplyDeleteಅಜಾದ್,
ReplyDeleteಜಪಾನ್ ನನ್ನ ಮೆಚ್ಚಿನ ದೇಶಗಳಲ್ಲಿ ಒಂದು ಕೂಡ. ಅದು ಬೇಗ ಈ ಭವಣೆ ಮತ್ತು ಹೊರಬರುತ್ತದೆ ಎನ್ನುವ ಆಶಯ ನನ್ನದು. ಕವನದಲ್ಲಿ ಎಲ್ಲಾ ವಿಚಾರಗಳನ್ನು ಸೇರಿಸಿ ಬರೆದಿದ್ದೀರಿ...
ಡಾಕ್ಟ್ರೇ..ನನಗೂ ಬಹಳ ಶಾಕಿಂಗ್ ಆಗಿತ್ತು..ಲೈವ್ ನೋಡಿದೆ ಬಿ.ಬಿ.ಸಿ ಯಲ್ಲಿ...ನಮಗೆ ರಜಾ ಇತ್ತು ಹಾಗಾಗಿ ನ್ಯೂಸ್ ನೋಡ್ತಿದ್ದೆ...ಜಪಾನಿಗಳಿಗೆ ಅಣುಸ್ಥಾವರಗಳ ಸ್ಪೋಟವೂ ತಲೆನೋವು ತಂದಿದೆ...ಎಲ್ಲ ಜಪಾನಿಯರಿಗೆ ಬೇಗ ಈ ಆಘಾತದಿಂದ ಹೊರಬರೋ ಶಕ್ತಿ ಬರಲಿ ಎಂದು ಹಾರೈಸೋಣ.
ReplyDeleteಪರಾಂಜಪೆ ಸರ್..ನಿಜಕ್ಕೂ ಅವರ ದೆಶಪ್ರೇಮ ಉದಹರಣೀಯ...ನಮ್ಮಲ್ಲಿ ಹತ್ತು ಪರ್ಸೆಂಟ್ ಬಂದರೂ ಅವರ ಗುಣ ಸಾಕು..ನಮ್ಮ ಪ್ರತಿಭೆಯ ನಿಜರೂಪ ಮತ್ತು ರಾಜಕಾರಣಿಗಳ ಕಳ್ಳಾಟ ಎಲ್ಲಾ ಬಯಲು...
ReplyDeleteಮಹೇಶ್ ಅವರ ಕಾರ್ಯ ಕ್ಷಮತೆಯನ್ನ ಮೆಚ್ಚಲೇಬೇಕು...ಅಲ್ವಾ..ಹೌದು ಬೇಗ ಚೇತರಿಸಿಕೊಳ್ಳಲಿ...
ReplyDeleteಆಶಾವ್ರೆ ಧನ್ಯವಾದ..ಹೌದು ತಾನೊಂದು ಬಗೆದರೆ ಮಾನವ ಪ್ರಕ್ರೂತಿಯೊಂದು ಬಗೆವುದು...
ReplyDeleteಶಿವು, ಜಪಾನಿಯರ ಕಲೆಯಾಗಲಿ, ಅವರ ಬುದ್ಧಿಮತ್ತೆಯಾಗಲಿ ದೇಶಪ್ರೇಮವಾಗಲಿ ಎಲ್ಲಾ ಅನುಕರಣೀಯ..ಅವರ ಈ ವಿಷಮ ಘಳಿಗೆ ಬೇಗ ಕಳೆದು ಮಂಗಳವಾಗಲಿ ಎಂದು ಆಶಿಸೋಣ...
ReplyDeleteJapanu matte yeddelali yendu aashisuttene...
ReplyDeleteರವಿಕಾಂತ್ ಸರ್..ನಿಮ್ಮ ಮಾತು ನಿಜ ಜಪಾನಿಗೆ ಆ ಶಕ್ತಿ ಮತ್ತು ಮನೋಭಿಲಾಶೆ ಎರಡೂ ಇವೆ...
ReplyDeletechennaagide sir nimma aashukavite.vandanegalu.
ReplyDeleteಧನ್ಯವಾದ ನಿಮ್ಮ ಕಲರವಕ್ಕೆ ...ಅಲ್ಲಿ ಅಲ್ಲೋಲಕಲ್ಲೋಲ ಇನ್ನೂ ನಿಂತಿಲ್ಲ ಈಗ ಅಣು-ವಿಕಿರಣಗಳ ಭಯ...ಎಂತಹಾ ಹಾನಿ...ಅಪಾಯ ನೋಡಿದ್ರಾ...
ReplyDeleteishtella naditha idru kuda japan deshada jana dhairya kaledukondilla....avaranna mecchabeku...
ReplyDelete