Sunday, May 29, 2011

ಚಿತ್ರ ಕೃಪೆ: ಅಂತರ್ಜಾಲ

ಹೆಂಡ್ತಿ – ಪ್ರೇಯಸಿ

ಹೆಂಡ್ತಿ ಟೀವಿ ಇದ್ದಂಗೆ..
ಸ್ಟೇಸನ್ನು ಬತ್ತೈತೆ ಅದ್ರ ಜನ್ಕ ಆಕ್ದಂಗೆ
ಒಂದ್ವಿಸ್ಯ ಯೋಳಾಕೆ ಸುತ್ತು ಬಳ್ಸು
ಮದ್ ಮದ್ಯೆ ಜಾಯೀರಾತು ಹಳ್ಸು
ಅತ್ ನಿಮ್ಸದ್ ಕತೆ ..ಎಳಿತಾನೇ ಇರ್ತಾರೆ
ಅತ್ ವರ್ಸ ಆದ್ರೂ ಮುಗಿಯೊಲ್ಲ ಅಂತಾರೆ

ಆದ್ರೆ ,..ಅವ್ಳು ಪ್ರೇಯ್ಸಿ.. ಬಿಡಿ ಕೇಳ್ ಬ್ಯಾಡಿ!
ಎಂಗಿದ್ರೂ ಏನಂದ್ರೂ ಮಾಡ್ತಾಳೆ ಮೋಡಿ
ಮುಂಚೆ ದುಡ್ಡಿರೋರ್ಗೆ ಸಿಗ್ತಿತ್ತು ಆ ಗತ್ತು
ಈವಾಗ ಎಲ್ಲಾರ್ಗೂ ಮೊಬೈಲ್ ದೇ ಮತ್ತು
ಅವ್ಳೂ ಅಂಗೆಯಾ ಮೊಬೈಲ್ ಇದ್ದಂಗೆ
ನೋಕಿಯಾ, ಎಲ್ಜಿ, ಸಾಮ್ಸಂಗ್ ಎಚ್ ಟಿ ಸಿ ಓಗಿ
ಬೆಳ್ಳಾಗೇ ಆಡ್ಸೋ ಐ ಪೋನ್ ಬಂದಂಗೆ


23 comments:

  1. ಹ್ಹ ಹ್ಹ ಹ್ಹಾ! ಒಳ್ಳೇ ಹೋಲಿಕೆ.. ಅಂದ್ಹಂಗೆ ಆಜ಼ಾದ್ ಸಾರ್... ನಿಮ್ದು ಪೋಸ್ಟ್-ಪೇಯ್ಡಾ? ಪ್ರೀ-ಪೇಯ್ಡಾ?

    ReplyDelete
  2. ಹ್ಹ ಹ್ಹ..ಆಹಾ!!

    ReplyDelete
  3. hahahah...ಪ್ರದೀಪ್...ಒಳ್ಲೆ ಅನಾಲಜಿ...ನಂದು ಪ್ರೀ ಪೇಯ್ಡು...ಯಾಕಂದ್ರೆ ಎಷ್ಟು ಉಪಯೋಗಿಸ್ಬೇಕು ಅಂತ ಗೊತ್ತಿರುತ್ತೆ...ಹಹಹಹ

    ReplyDelete
  4. ವೆಂಕಟ್ರಮಣ.. ಸ್ವಾಗತ ನಿಮಗೆ ಮೊಬೈಲಿನ ಬಯಲಿಗೆ...ಭಯವಿಲ್ಲದೆ ಬನ್ನಿ...ಪ್ರೀ ಪೇಯ್ಡ್ ಇಲ್ಲ ಪೋಸ್ಟ್ ಪೇಯ್ದ್..ನೋ ಪ್ರಾಬ್ಲಂ...

    ReplyDelete
  5. ಧನ್ಯವಾದ ವಸಂತ್...ನಿಮ್ಮ ಪ್ರತಿಕ್ರಿಯೆಗೆ ...ಮತ್ತೆ ಜಲನಯನಕ್ಕೆ ಮೊದಲ ಭೇಟಿ ಅಂದ್ಕೋತೇನೆ...ಸ್ವಾಗತ ನಿಮಗೆ..

    ReplyDelete
  6. ಜಲನಯನ,
    ಹೆಂಡತಿ ಮತ್ತು ಪ್ರೇಯಸಿ ನಡುವಿನ ವ್ಯತ್ಯಾಸವನ್ನು ಎಷ್ಟು ಚೆನ್ನಾಗಿ ಹೇಳಿದ್ದೀರಪ್ಪಾ!
    ಸ್ವಾನುಭವ ಅಲ್ಲ ಅಂತ್ಕೋತೀನಿ!!

    ReplyDelete
  7. ಹಹಹಹ್ ಸುನಾಥಣ್ಣಾ......ನಿಮಗೆ ಡೌಟು ಬರೋಹಾಗೆ ಮೂಡಿದೆ ಅಂದ್ರೆ ಕವನಕ್ಕೆ ಧನ್ಯತೆ...ಆದ್ರೆ...ಸ್ವಾನುಭವ ಅಂತೂ ಖಂಡಿತಾ ಅಲ್ಲ....ಧನ್ಯವಾದ...ನಿಮ್ಮ ಪ್ರೋತ್ಸಾಹಕ್ಕೆ...ನಾಟ್ ಫಾರ್ ಮೊಬೈಲು....ಹಹಹ

    ReplyDelete
  8. ಸುಧೇಶ್...ಮೊಬೈಲ್ ಹೊಸ ಮಾಡಲ್ ನೋಡಿದ್ರೆ ಮೊನ್ನೆ ತಾನೆ ತಗೊಂಡ ಮಾಡಲ್ಲು ಹಳೆದು ಅನ್ಸುತ್ತೆ...ಅದೇ ಟೀ.ವಿ. ಯಾವಾಗ್ಲೋ ತಗೊಂಡುದ್ದು...ಹಾಗೇ ಕುಂತಿರುತ್ತೆ ....ಹಹಹಹ್

    ReplyDelete
  9. hahah en sir idu yavaga gottaytu hendati mattu preyasi naDuvina vyatyasa haha

    ReplyDelete
  10. ಹಹಹ ...ಟೀವಿ ಹಳೆದಾಗಿ...ಹೊಸ ಹೊಸ ಮಾಡಲ್ ಮೊಬೈಲುಗಳು ಓಡಾಡ್ತಾ ಇದ್ರೆ ಎಲ್ಲಾ ಟಿವಿ ಇರೋರ ಮನಸಲ್ಲಿ ಎದ್ದೇಳೋ ಅಲೆಗಳ ಜಾಡು ಹಿಡಿದೆ ಅಷ್ಟೆ...ಹಹಹಹ್...ಅಂದಹಾಗೆ ಟಚ್ ಫೋನ್ ಐ-ಫೋನ್ ಸಿಕ್ತಾನೆ ಇಲ್ಲ ಬಹಳ ಡಿಮ್ಯಾಂಡು....

    ReplyDelete
  11. idu tumba anyaaya hendateerige.adaroo comparision chennaagide
    :)

    ReplyDelete
  12. ಅಜಾದ್...
    ಹೆಂಡ್ತಿ ಮತ್ತು ಪ್ರೇಯಸಿಯ ಹೋಲಿಕೆ ಸೂಪರ್..ಹೊಸ ಮಾಡಲ್ಲುಗಳಂತೆ ಪ್ರೇಯಸಿಯರು ಎನ್ನುವ ಮಾತು ತುಂಬಾ ಚೆನ್ನಾಗಿದೆ.

    ReplyDelete
  13. ರೂಪಾ..ಅನ್ಯಾಯ ಎಲ್ಲಿ ಬಂತು...ಟಿ.ವಿ. ಟಿವಿನೇ...ಅದರ ಸ್ಥಾನ ಏನೇ ಅಪ್ ಡೇಟ್ ಮಾಡಿದ್ರೂ ಮೊಬೈಲ್ ತುಂಬೋಕೆ ಆಗೊಲ್ಲ...ತುಂಬಿದ್ರೂ ಅದನ್ನ ಮೊಬೈಲ್ ಅಂತಾನೇ ಕರೆಯೋದು...ಗುರುತಿಸೊದು...ಹಹಹಹ

    ReplyDelete
  14. ಶಿವು...ಧನ್ಯವಾದ...ಮಾಡಲ್ ಗಳ ಮೂಡುಗಳ ಮೋಡ..ಬಲು ಚಂಚಲ..ಇಂದು ಇಲ್ಲಿ ನಾಳೆ ಅಲ್ಲಿ..ಹಹಹಹ....ಟಿವಿ ಟಿವಿನೇ ಅಲ್ವಾ...ಸರಿಸಮಯಾವ್ದೂಇಲ್ಲ...

    ReplyDelete
  15. ಚೆನ್ನಾಗಿದಿದೆ ಸಾರ್ ಹೋಲಿಕೆಗಳು .. ಅಂದ ಹಾಗೆ ಹೆಂಡತಿ ಮನೆಯ land line ಇದ್ದ ಹಾಗೆ... ಮನೆ ಮನದಲ್ಲಿಯೆ ಕಣ್ಣೆದೆರು ಇರುತ್ತೆ... ಆದರೆ ಪೇಯಿಸಿ ಕಳೆದು ಹೋಗುವ ಹೆಚ್ಹು..{ಮೊಬೈಲ್ ನ ಹಾಗೆ}

    ReplyDelete
  16. ಗ್ರಾಮೀಣ ಸೊಗಡಿನ ಭಾಷೆ ಚೆನ್ನಾಗಿದೆ. ನಿಮ್ಮ ಜೊತೆ-ಜೊತೆಯಾಗಿ ಹೆಜ್ಜೆ ಹಾಕುತ್ತಿರುವ ಸ೦ಗಾತಿಯನ್ನೇಕೆ ವಸ್ತುಗಳೊಡನೆ ಹೋಲಿಸಿ ಹಿ೦ಸಿಸುತ್ತೀರಿ?

    ReplyDelete
  17. ಆಶಾವ್ರೇ ನಿಜ...ಮನೆಲಿರೋದು ಜೋಪಾನ..ಹಾದಿ ಬೀದಿದು..ಅಧ್ವಾನ ಹಹಹ...ನಿಜ..ನಿಜ...

    ReplyDelete
  18. ಪ್ರಭಾಮಣಿಯವರೇ..ಧನ್ಯವಾದ..ನಿಮ್ಮ ಅನಿಸಿಕೆಗೆ...ಆದ್ರೆ..ನಾನು ಅಹಿಂಸಾವಾದಿ.. ಮನೆ ಮಂದಿ ಬಗ್ಗೆ ಹೇಳಿದ್ರೆ...ಹಾಗಾಗಿ ಹಿಂಸಿಸೋ ಪ್ರಶ್ನೆನೇ ಇಲ್ಲ...

    ReplyDelete
  19. ಆಜಾದು...!

    ಕವನ ಮಸ್ತ್ ಬೊಂಬಾಟು...

    ಪ್ರೀಪೇಯ್ಡು.. ಪೋಸ್ಟ್ ಪೇಯ್ಡು..
    ಭಾಭಿಗೆ ಒಮ್ಮೆ ಹೇಳ್ತೀನಿ ನೋಡು...

    ReplyDelete
  20. ಚೆನ್ನಾಗಿದೆ ಸರ್..

    ReplyDelete
  21. ಹೆಂಡ್ತಿ ಟೀವಿ ಇದ್ದಂಗೆ..
    ಅವಳ ಬಾಯಿ ಮೊಬೈಲ್ ಇದ್ದಂಗೆ.. :)
    ನೈಸ್ ಕವನ...

    ನಿಮ್ಮವ,
    ರಾಘು.

    ReplyDelete