ಪರದೇಸಿ
(ಎಕ್ ಪರದೇಸಿ ಮೇರಾ ದಿಲ್ ಲೇಗಯಾ...ಜಾತೆ ಜಾತೆ....ಶೈಲಿ)
ಒಬ್ಬ ಪರದೇಸಿ ನನ್ನ ಹೃದಯ ಕದ್ದನು
ಹೋಗ್ತಾ ಹೋಗ್ತಾ ಸವಿ ಸವಿ ನೋವಾ ಕೊಟ್ಟನು/೨/
ಯಾವ ಪರದೇಸಿ ನಿನ್ನ ಹೃದಯ ಕದ್ದನು
ದಪ್ಪ ದಪ್ಪ ಕಣ್ಣುಗಳಿಗೆ ಮುತ್ತನಿಟ್ಟನು....//ಒಬ್ಬ ಪರದೇಸಿ ನನ್ನ//
ನನ್ನ ಪರದೇಸಿಯ ಪರಿಯನೆಂತು ಹೇಳಲಿ
ವಜ್ರದಂಥ ದೇಹ ಅವನ್ದು ಮಿಂಚು ಅವನ ಕಣ್ಣಲಿ
ನನ್ನ ಚಿತ್ತ ಬುದ್ಧಿಯನ್ನು ಕೊಂಡು ಹೋದನು
ಹೋಗ್ತಾ ಹೋಗ್ತಾ ಸವಿ ಸವಿ ನೋವಾ ಕೊಟ್ಟನು
ಯಾವ ಪರದೇಸಿ ನಿನ್ನ ಹೃದಯ ಕದ್ದನು
ದಪ್ಪ ದಪ್ಪ ಕಣ್ಣುಗಳಿಗೆ ಮುತ್ತನಿಟ್ಟನು....//ಒಬ್ಬ ಪರದೇಸಿ ನನ್ನ//
ನಿನ್ನ ಕನಸ ಹೊತ್ತು ಎಷ್ಟೋ ಜನ ಹುಚ್ಚರಾದ್ರು
ಕೊಟ್ಟು ಬಿಡು ದರುಶನ ಬಂದು ಒಮ್ಮೆಯಾದ್ರೂ
ನಯನದ ಪ್ರಕಾಶ ಅವನೇ ಕದ್ದು ಹೋದನು
ಹೋಗ್ತಾ ಹೋಗ್ತಾ ಸವಿ ಸವಿ ನೋವಾಕೊಟ್ಟನು..
ಯಾವ ಪರದೇಸಿ ನಿನ್ನ ಹೃದಯ ಕದ್ದನು
ದಪ್ಪ ದಪ್ಪ ಕಣ್ಣುಗಳಿಗೆ ಮುತ್ತನಿಟ್ಟನು....//ಒಬ್ಬ ಪರದೇಸಿ ನನ್ನ//
ಕರೆದು ನಿಲಿಸಲೇ ನಿನ್ನ ಕಣ್ಣ ಮುಂದೆ ಅವನಾ
ನಿಲ್ಸಿದರೆ ಮುಂದೆ ನಿನ್ನ ಕೊಡುವೆಯಾ ಬಹುಮಾನ್
ಬಹುಮಾನ ಏನ ಕೊಡಲಿ ಎಲ್ಲಾ ಕದ್ದನು
ಹೋಗ್ತಾ ಹೋಗ್ತಾ ಸವಿ ಸವಿ ನೋವಾ ಕೊಟ್ಟನು
ಯಾವ ಪರದೇಸಿ ನಿನ್ನ ಹೃದಯ ಕದ್ದನು
ದಪ್ಪ ದಪ್ಪ ಕಣ್ಣುಗಳಿಗೆ ಮುತ್ತನಿಟ್ಟನು....//ಒಬ್ಬ ಪರದೇಸಿ ನನ್ನ//
ಚೆನ್ನಾಗಿದೆ ಭಯ್ಯಾ
ReplyDeleteನಿಮ್ಮ ಪ್ರೋತ್ಸಾಹವಯ್ಯಾ ಕೊನೆತನಕ ಪರಾಂಜಪಯ್ಯಾ
ReplyDeleteಆಜಾದು...
ReplyDeleteಮಸ್ತ್ ಕಣೊ..
"ಹೋಗ್ತಾ ಹೋಗ್ತಾ ಸವಿ ಸವಿ ನೋವ ಕೊಟ್ಟನು"
ಇಂಥಹ ಸರಳ.. ಸಹಜ ಸಾಲುಗಳು..
ಈ ಕವನದ ಗಮ್ಮತ್ತು...
ಜೈ ಹೋ !!
ಥ್ಯಾಂಕ್ಸ್ ಕಣೋ...ಪ್ರಕಾಶು...ದಪ್ಪ ದಪ್ಪ ಕಣ್ಣುಗಳಿಗೆ ಮುತ್ತನಿಟ್ಟನು...
ReplyDeleteಹಹಹಹ ....
ಪರದೇಸಿ ಸ್ಟೈಲ್ ನಲ್ಲೇ ಬರೆದಿದ್ದೀರಿ... ಸರಳವಾಗಿ ಚೆನ್ನಾಗಿದೆ
ReplyDeletevery nice one sir...
ReplyDeletenovu savi savi novu
ReplyDeleteಅಯ್ಯೋ ಇದೇನಪ್ಪಾ...?? ಪರದೇಸಿ ಇಸ್ಟೈಲ್ ಅಂತ ನಾನು ಪರದೇಶ್ದಾದಿರೋ ಪರದೇಸಿ ಅಂತ ಜಗಜ್ಜಾಹೀರು ಮಾಡ್ತಿದ್ದೀರಾ...ಹಹಹ..ಥ್ಯಾಂಕ್ಸ್..
ReplyDeleteಪ್ರದೀಪ್ ಧನ್ಯವಾದ..ರೀ...
ReplyDeleteಹೌದು ಸೀತಾರಾಮ್ ಸರ್..ಹೋಗೋವಾಗ ಮನಸ ಕದ್ದೋರು ಕೊಡೋ ನೋವು ಸವಿ ಸವಿ ನೋವಲ್ವಾ??
ReplyDeleteಧನ್ಯವಾದ
Ajaad sir...
ReplyDeletenanu moola hadannu kelilla ( hindi astakkaste adke :)) .. but idu sooper...
pravi
ಪ್ರವೀಣ್ ಧನ್ಯವಾದ..ಈ ಕಾರಣಕ್ಕೆ ನನಗೆ ಹಿಂದಿಯ ಕರವೋಕೆ ಸಾಹಿತ್ಯ ರಚಿಸೋ ಆಸೆ ಆಗಿದ್ದು...
ReplyDeleteಆಜಾದ್ ಅವರೆ(:)
ReplyDeleteನಾನುಹಾಡನ್ನ ಹಾಡೊಕೆ ಟ್ರ್ಯ್ ಮಾಡಿದೆ
ಕರೆಕ್ಟ್ ಆಗಿ ಬಂತು
ಪ್ರಾಸ ರಾಗ ಚೆನ್ನಾಗಿ ಬಂತು
ಭಾವಾನೂ ಒರಿಜಿನಲ್ ಸಾಂಗ್‍ಗೆ ಸರಿಯಾಗಿದೆ
Very nice translation. Congrats.
ReplyDeleteಹೌದು ತಗೊರಿ ರೂಪಾ..ನಿಮ್ಮ ಮಾತು ಒಪ್ಪಿದೆ,,,
ReplyDeleteಹಾಡಿದ್ರೆ ರೆಕಾರ್ಡ್ ಮಾಡಿ ಕಳ್ಸೀಪಾ ಅದನ್ನ ಲಿಂಕ ಮಾಡ್ತೇನೆ...ಧನ್ಯವಾದ ಒಟ್ಟಾರೆ...
ಸುನಾಥಣ್ಣ ಧನ್ಯವಾದ...ಈ ಹಾಡು ಬಹುಶಃ ನಿಮ್ಮ ಕಾಲೇಜ್ ದಿನಗಳಲ್ಲಿ ಬಹಳ ಫೇಮಸ್ ಆಗಿತ್ತು ಅನ್ಸುತ್ತೆ...
ReplyDeleteaaha mechchiva haadu..
ReplyDeleteಧನ್ಯವಾದ ಕೀರ್ತಿ...ಜೈ ಹೋ....
ReplyDeleteಜಲನಯನ,
ReplyDeleteಈ ಚಲನಚಿತ್ರ ಬಂದಾಗ ನಾನು ಬಹುಶಃ ಪ್ರಾಥಮಿಕ ಶಾಲೆಯಲ್ಲಿ ಇದ್ದೆ ಅಂತ ಕಾಣುತ್ತೆ!
ಅಜಾದ್,
ReplyDeleteಮತ್ತೊಂದು ಹಾಡನ್ನು ಕೇಳಿಸುವುದಲ್ಲದೇ ಅನುವಾದದ ಕವನ..ಎರಡೂ ಸೂಪರ್..ಅಂದಹಾಗೆ ಇದು ತುಂಬಾ ಹಳೇ ಹಾಡು ಅಲ್ವಾ..
ಹೌದು ಸುನಾಥಣ್ನ...ಇದು ರಿಲೀಸ್ ಆಗಿ ಒಂದು ವರ್ಷಕ್ಕೆ ನಾನು ಹುಟ್ಟಿದ್ದು....ಹಹಹ..ಬಹುಶಃ ನೀವು ಸ್ಕೂಲಲ್ಲಿದ್ರಿ....
ReplyDeleteಚಿತ್ರ:ಫಾಗುನ್
ವರ್ಷ: ೧೯೫೮
ಧನ್ಯವಾದ ನಿಮ್ಮ ಅಪ್ಡೇಟ್ ಗೆ...
ಶಿವು, ಹಳೆ ಚಿತ್ರಗಳಲ್ಲಿರುತ್ತಿದ್ದ ಹಾಡಿನ ಬಹು ಮಾರ್ಮಿಕ ಮತ್ತು ಅರ್ಥಪೂರ್ಣ ಸಾಹಿತ್ಯದ ಜೊತೆಗೆ ಸಿಂಪಲ್ ಮತ್ತು ಸೂಪರ್ ಸಂಗೀತ ನನಗೆ ತುಂಬಾ ಇಷ್ಟ ಆ ಕಾರಣಕ್ಕೆ ಈ ಪ್ರಯತ್ನಗಳು,,,ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ
ReplyDelete