Thursday, June 30, 2011

ಬೆಳಕು - ಕತ್ತಲಿನಾಟ

(ಚಿತ್ರ: ಪ್ರಕಾಶ್ ನ ಬ್ಲಾಗ್ ಛಾಯಾ ಚಿತ್ತಾರ)

ಬೆಳಗು ಮಿಣುಕು ದೀಪ ಆವರಿಸಿದಂತೆ ಕತ್ತಲು
ಜಗಮಗಿಸುತ್ತವೆ ತುಂಬಿಸಿ ಬೆಳಕ ಸುತ್ತಲೂ
ಮುಳುಗುವ ಸೂರ್ಯ ಮರಳಿಬರಲು ನಾಂದಿ
ಸಂಜೆಯ ದಿಗಂತದಲಿ ಚೆಲ್ಲಿ ಸೋನಾ ಚಾಂದಿ

ಬೆಳಕು ರಾತ್ರಿಯಲಿ ನಿರಂತರ ಕತ್ತಲಿನಾಟ
ಕತ್ತಲಲಿ ಆದದ್ದು ಸೂರ್ಯನಡಿಗೆಯಲೂ ಕಾಟ
ಝೊಪಡಿಗಳು ಯುಗಕಳೆದರೂ ಕಾಣುತ್ತಿಲ್ಲ ಬೆಳಕು
ಖೋಪಡಿಗಳು ಉರುಳಿದವು ಹೋಗುತ್ತಿಲ್ಲ ಕೊಳಕು

ಅಮಲಲಿ ಓಲಾಡುವರು ಉಳ್ಳವರು ತೆವಲಿನಲಿ
ರಾತ್ರಿಯಲೂ ಗೇಯ್ವರು ಇಲ್ಲದವರು ಬೆವರಿರಲಿ
ಕಂಠಕ್ಕೂ ತುಳುಕುವ ಮದಿರೆ ಚೆಲ್ಲಾಡುವರು ಅವರು ಅನ್ನ
ಬಾಸುಂಡೆ ಬಿದ್ದರೂ ದುಡಿಮೆ ಅನಿವಾರ್ಯ ಇವರೊಡ್ಡಿ ಬೆನ್ನ

24 comments:

  1. nija bayya....samajada eradu virudda mukhagalu kattalu mattu belaku alva...ondede sukhada suppottige ..innondede kashta kaarpanyagala aakrandana. devara srkushtiye vichitra.
    chandada kavana...

    ReplyDelete
  2. ಇದು ಕಠೋರ ವಾಸ್ತವ!

    ReplyDelete
  3. ಚೇತು ..ನಿನ್ನ ವಿಮರ್ಶಾತ್ಮಕ ಪ್ರತಿಕ್ರಿಯೆಗೆ ಧನ್ಯವಾದ...ವಾಸ್ತವಗಳನ್ನು ಮತ್ತು ವಿರೋಧಾಭಾಸಗಳನ್ನು ಬಿಂಬಿಸುವ ಪ್ರಯತ್ನ...

    ReplyDelete
  4. ಸುನಾಥಣ್ಣ.. ನಮ್ಮ ಜಾಗತೀಕರಣದ ಅಂಧ ವೈಚಾರಿಕತೆಗಳಲ್ಲಿ ಎರಡು ದಡಗಳ ನಡುವಿನ ಅಂತರ ಹೆಚ್ಚುತ್ತಿರುವುದನ್ನು ಗಮನಿಸುತ್ತಿಲ್ಲ ಎಂದೇ ನನ್ನ ಅನಿಸಿಕೆ...ಕೃಷಿ ಕೃಷವಾಗ್ತಿದೆ...ಮಧ್ಯಮ ವರ್ಗ ಅಧಮವಾಗುತ್ತಿದೆ...ಹಳ್ಳಕ್ಕೇ ನೀರು ಹರಿಯುತ್ತಿರುವುದು ವಿಪರ್ಯಾಸ....
    ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...

    ReplyDelete
  5. ತು೦ಬಾ ಚೆನ್ನಾಗಿದೆ ನಿಮ್ಮ ಕವನ ಜಲನಯನೇಶ್ವರಾ ..................

    ಮಹಲಮೇಲಿನ ಜನರು ಅರಿಯರು ನೆಲದ ಮೇಲಿನ ತಲ್ಲಣ
    ಕೂಲಿಕಾರನ ಮಗನಿಗಿಲ್ಲಿ ಉಡಲು ಇಲ್ಲ ಚಲ್ಲಣ
    ಕತ್ತಲಾದೊಡೆ ಮಹಲಿನಲ್ಲಿ ಮದಿರೆಸ೦ಭ್ರಮ ರಿ೦ಗಣ
    ಜೋಪಡಿಯ ಕಿರುಕೋಣೆಯಲ್ಲಿ ಹಸಿವಿನ ಆಕ್ರಂದನ
    ಬಾನಿನೆತ್ತರ ಮಹಲ ತಡಿಯಲಿ ಭೂಮಿಮಟ್ಟದ ಗುಡಿಸಲು
    ಮಹಲು ಬೆಳಗುವ ತವಕದಲ್ಲಿ ಸೂರ್ಯನಿಗೂ ಇರುಕಲು
    ಏಕೆ೦ದರೆ ದೀಪದಡಿ ಇರುವುದು ಎ೦ದೆ೦ದೂ ಕತ್ತಲು

    ReplyDelete
  6. koneya paragraph anthu katu satyada sangathi !!!

    ReplyDelete
  7. ಪ್ರೇಮ ಗೀತೆಗಳಿವೆ, ಭಾವಗೀತೆಗಳಿವೆ . . .ಬೇರೆ ಬೇರೆ ಗೀತೆಗಳಿವೆ. ಇದೊಂದು ವಾಸ್ತವ ಗೀತೆ ಅನ್ನಬಹುದು.
    "ಸಂಜೆಯ ದಿಗಂತದಲಿ ಚೆಲ್ಲಿ ಸೋನಾ ಚಾಂದಿ" ತುಂಬಾ ಇಷ್ಟ ಆಯ್ತು ಈ ಸಾಲು.

    ReplyDelete
  8. ಕತ್ತಲೆ ಬೆಳಕು, ಒಂದನ್ನು ಬಿಟ್ಟು ಇನ್ನೊಂದಿಲ್ಲ. ಪ್ರಕೃತಿ ಇರಬಹುದು, ಸಮಾಜ ಇರಬಹುದು. ಮೋಜು ಮಾಡುವವರು ಒಂದುಕಡೆ, ಒಪ್ಪೊತ್ತಿಗಾಗಿ ಒದ್ದಾಡುವವರು ಇನ್ನೊಂದೆಡೆ. ಕಟು ವಾಸ್ತವ

    ReplyDelete
  9. ಅಶಾವ್ರೆ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  10. ಪರಾಂಜಪೆಯವರೇ..ನಿಮ್ಮ ಕವನದ ಪೂರಕ ಭಾವನೆ ಸೂಪರ್...ಹೌದು...ವಿಪರೀತಗಳಿಗೆ ದಾರಿಯಾದರೆ ಏನು ಅನಾಹುತಾ ಆಗಬಹುದು ಅನ್ನೋದು ಈಗಾಗ್ಲೇ ಗೋಚರ ಆಗ್ತಿದೆ...ಧನ್ಯವಾದ

    ReplyDelete
  11. ಗಿರೀಶ್ ವಾಸ್ತವಗಳನ್ನು ಬಿಂಬಿಸುವ ಚಿಕ್ಕ ಪ್ರಯತ್ನ...

    ReplyDelete
  12. ನಾಗ್...ಕವನ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದ...

    ReplyDelete
  13. ದೀಪಸ್ಮಿತಾವ್ರೆ...ಉಳ್ಳವರ-ಇಲ್ಲದವರ ನಡುವಿನ ಮುಸುಕಿನ ಗುದ್ದಾಟ ಶುರುವಾಗಿದೆ...ಮೊನ್ನೆ ಮೈಸೂರಿನ ಇಬ್ಬರು ಕಾಲೇಜ್ ಯುವಕರನ್ನು ಅಪಹರಿಸಿ ಕೋಟಿಗಟ್ಟಲೆ ಕೇಳಿ ಮತ್ತೆ ಕೊಲೆ ಮಾಡಿರೋದು ಇದಕ್ಕೆ ನಿದರ್ಶನ..

    ReplyDelete
  14. ವಾವ್! ತುಂಬಾ ಚೆನ್ನಾಗಿದೆ ಸಾರ್.. ಈ ಚಿತ್ರಕ್ಕೆ ಬಹಳ ಹೊಂದುವ ಸಾಲುಗಳು!

    ReplyDelete
  15. ವಾವ್....ಒಂದೆ ಫೋಟೊಗೆ ಎರಡೆರಡು ಕವನಗಳು....
    ಚೆನ್ನಾಗಿದೆ ಸರ್.....
    ಕೊನೆ ಸಾಲುಗಳು ಬಹಳ ಹಿಡಿಸಿತು...

    ReplyDelete
  16. ಪ್ರದೀಪ್ ಧನ್ಯವಾದ....

    ReplyDelete
  17. ಮಹೇಶ್...ಸಂಜೆ ಕೆಲ ನಗರದ ಸ್ಥಳಗಳಲ್ಲಿ ಹಾಗೇ ಹೋಗಿ ಬಂದರೆ ಇದು ಗೋಚರ ಆಗೋದು ಸಹಜ.... ವಾಸ್ತವ ಅಲ್ವಾ...??

    ReplyDelete
  18. ತುಂಬಾ ಚೆನ್ನಾಗಿದೆ ಕವನ, ವಾಸ್ತವದ ಕರಿನೆರಳು.....

    ReplyDelete
  19. ಸುಗುಣಾವ್ರೆ,,,,ಧನ್ಯವಾದಾರೀ...ಹೌದ್ ನೋಡ್ರಿ ಎಪ್ಪಾ ಈಗ ರೈತರಿಗೆ ಕಾಟ ಸುರುವಾಗೈತಿ....

    ReplyDelete
  20. arthagarbhit kavite.. abhinandane..

    ReplyDelete
  21. ಧನ್ಯವಾದ ಕೀರ್ತಿ..ನಿಮ್ಮ ಅಭಿಪ್ರಾಯ ಮತ್ತು ಪ್ರೋತ್ಸಾಹ ಎರಡಕ್ಕೂ

    ReplyDelete
  22. ವಿಪರ್ಯಾಸದಿ೦ದ ಕೂಡಿ ಮನಸ್ಸನ್ನು ಕಲಕುವ ಸು೦ದರ ಕವನ. ಧನ್ಯವಾದಗಳು ಆಜಾದ್ ಅವರೇ,

    ReplyDelete
  23. ಧನ್ಯವಾದ ಪ್ರಭಾ ಮೇಡಂ... ನಿಮ್ಮ ಪ್ರತಿಕ್ರಿಯೆ ಮತ್ತು ಪ್ರೋತ್ಸಾಹದ ಮಾತಿಗೆ.

    ReplyDelete