Wednesday, July 13, 2011

(ಚಿತ್ರ ಕೃಪೆ: /www.daijiworld.com)

ಕನ್ಡ ಮಾದ್ಯ್ಮಾ

ಮಾದ್ಯ್ಮಾ ಮಾದ್ಯ್ಮಾಅಂತ್ವಟ್ಗುಟ್ಟವ್ರೆ
ಇಂಗ್ಲೀಸೋರೋದ್ರೂ ಕನ್ಡ ಮರ್ತ್ಬುಟ್ಟವ್ರೆ
ಕನ್ನಡ್ದಾಗೆ ಕಲ್ಯೋಕೂ ಕಲ್ಸಾಕೂ
ಆಗಾಣಿಲ್ಲ ಅಂತಾರ್ಯ್ಯಾಕೋ..?
ಪಂಪ, ರನ್ನ, ಪುರಂದರಕನ್ಕ ಕುಮಾರ್ವ್ಯಾಸ
ಇಂಗ್ಲೇಂಡ್ನಾಗ್ ಕುಣುದ್ರಾ ಆಕ್ಕೊಂಡು ಯಾಸ..?


ಆಡ್ಮುಟ್ದೇಯಿರೋ ಸೊಪ್ಪಿಲ್ಲಾಂತಾರೆ
ಎಲ್ಲಾ ಇಸ್ಯ ನನ್ನಂತೋನ್ಗೂ ತಿಳ್ಯಂಗ್
ಮೆದ್ಲಿಗೇ ಕೈ ಆಕಿ ಯೋಳಿಲ್ವಾ ಸರ್ವಜ್ಞ ?
ಮಾತ್ನಾಗೆ ಲೇಕನ್ದಾಗೆ ಲೋಕಾನ ತಿದ್ದುದ್ರು
ಇಂಗ್ಲೀಸ್ಗಂದಾನೆ ಇರ್ನಿಲ್ಲ ಅವ್ರಿರ್ಗೆಲ್ಬಂತು ಇಜ್ಞ??


ಬುಡ್ಬಿಡಿ, ಮನೆಮಾತ್ನೇ ನೆಟ್ಗ್ ಅಡಾಣಿಲ್ಲ
ಪರ್ದೇಸಿ ಬಾಸೆ ಏರಿ ಅತ್ತಾಣಿಲ್ಲ
ಕುಣೀಲಾರ್ದ್ಸೂಳೆ ಡೊಂಕಂತಾಳೆ ನೆಲಾವ
ನೆಟ್ಗೋದ್ಬರ್ದು ಮಾತಾಡಾದ್ಕಲೀರಿ ಕನ್ಡಾವ

20 comments:

  1. ಕವಿತೆ ರೂಪದಲ್ಲಿ ವ್ಯಕ್ತವಾಗಿರುವ ಕಾನನದ ಅಭಿಮಾನ..!

    ನನ್ನ ಪ್ರಕಾರ ಕಿರಿಯ ಪ್ರಾಥಮಿಕ ಶಿಕ್ಷಣದ ನಂತರ ಪ್ರೌಡ ಶಿಕ್ಷಣದಿಂದ ಆಂಗ್ಲ ಭಾಷೆ ಕಲಿಕೆ ಒಳ್ಳೆಯದೇ ಅನಿಸುತ್ತೆ..!

    ReplyDelete
  2. ಹೌದು ಮಂಜು ಆಂಗ್ಲ ಶಿಕ್ಷಣಕ್ಕೆ ನನ್ನ ವಿರೋಧವಿಲ್ಲ ಆದರೆ ಅದೇ ಭರದಲ್ಲಿ ತಾಯಭಾಷೆಯನ್ಣೂ ಕಡೆಗಣಿಸಬಾರದು ಅಲ್ವಾ..? ಧನ್ಯವಾದ

    ReplyDelete
  3. ಸರ್ಯಾಗ್ ಬರ್ದೀದಿಯಾ ಕಣಣ್ಣೋ !‌:)

    ReplyDelete
  4. good one sir but whether ears open to hear this??

    ReplyDelete
  5. ಸುಬ್ರಮಣ್ಯ..ಏನ್ ಕೇಳ್ದೇ ಕಣಪಾ..ಬಜ್ಜ್ ನಾಗೇ..ಅಂಗೇಯ ಅತ್ಕೊಂಬುಡ್ತು...ಬರ್ದೇ ಬುಟ್ಟೆ ಒಂದ್ ಅಂಗೇಯಾ...ಇಂಗ್ಲೀಸು ಇಂಗ್ಲೀಸು ಅಂತಾರಲ್ಲಾ ಅಂತ ರೋಸೋಯ್ತು....ಊಂ ಮತ್ತೆ...

    ReplyDelete
  6. ತುಂಬ ಒಳ್ಳೇ ಕವ್ನಾ ಸ್ವಾಮಿ! ಕನ್ನಡಾ ಮನ್ಸುಗೋಳೆಲ್ಲ ಕುಣಿದಾಡೋ ಅಂಗೆ ಬರ್ದೀರಿ!

    ReplyDelete
  7. ಸುನಾಥಣ್ಣ...ಧನ್ಯವಾದ...ಕನ್ನ್ನಡ ಎನ್ನಡಾ ಅನ್ನೋ ಮನಸು ಏನೂ ಆಗಿಲ್ಲ ಅನ್ನೋಥರ ಇರುತ್ತೆ...ಅಲ್ವಾ>..? ಇದರಲ್ಲಿ ನಾಡು ನುಡಿಯ ಹೆಸರಲ್ಲಿ ಗದ್ದುಗೆ ಏರೋರು ಮೊದಲ ಪಂಕ್ತಿ....

    ReplyDelete
  8. ಚೇತು...ನನಗೆ ಹಳ್ಳಿ ಭಾಷೆ ಬಹಳ ಮನಃಪೂರ್ವಕ ಅನ್ಸುತ್ತೆ ಅದು ಗ್ರಾಮಾಂತರ ಬೆಂಗಳೂರಾಗ್ಲಿ, ಮಂಡ್ಯ ಮೈಸೂರ್ ಹಾಸನ ಆಗ್ಲಿ, ಧಾರವಾಡ ಬಿಜಾಪುರ ಆಗಲಿ, ಮಂಗಳೂರು ಉಡುಪಿ ಆಗ್ಲಿ, ಕಾರವಾರ್ ಕುಂದಾಪುರ ಸಿರ್ಸಿ ಆಗಲಿ...ಎಲ್ಲವೂ ಬಹು ಸುಂದರ..ಮಿಶ್ರಣವಿಲ್ಲದ ಅಪ್ಪಟ ಮನದ ಮಾತು....ಧನ್ಯವಾದ...

    ReplyDelete
  9. chennagi barediddeeri sir.. aadare English jote kannaDanu kalitare oLLeyadu...

    ReplyDelete
  10. ಸರ್,
    ಕನ್ನಡವನ್ನ ಉಳಿಸಿ.. ಬೆಳೆಸಿ ಎನ್ನುವ ನಿಮ್ಮಂತ ಗಡಿನಾಡ ಕನ್ನಡಿಗರಿಗೆ ನಮೋ ನಮಃ

    ReplyDelete
  11. ಸುಗುಣ ಇಂಗ್ಲೀಷ್ ಕಲೀಬೇಡಿ ಅಂತ ಅಲ್ಲ ನನ್ನ ವಾದ...ಕನ್ನಡ ಮರೀಬೇಡಿ ಅನ್ನೋ ಕಳಕಳಿ...ನಾವು ನೆಟ್ಟಗೆ (ಕೆಲವು ಹಾಸುಹೊಕ್ಕಾಗಿರೋ ಪದಗಳನ್ನು ಬಿಟ್ಟು) ಕನ್ನಡ ಮಾತನಾಡ್ತೀವಾ ಅನ್ನೋದನ್ನ ನಮ್ಮನ್ನ ನಾವೇ ಕೇಳ್ಕೋಬೇಕು,,,ನಾನೂ ಇಂಗ್ಲೀಷನ್ನ ೮ ನೇ ರತಗತಿಯಿಂದ ಓದಿದವನೇ...ನನ್ನ ಜೊತೆ ಕಾಂಪಿಟೇಟಿವ್ ಎಕ್ಸಾಮ್ ನಲ್ಲಿ ಕಾನ್ವೆಂಟಲ್ಲೋದಿದವ್ರು ಎಷ್ಟೋ ಜನ ಪಾಸೇ ಆಗ್ಲಿಲ್ಲ...ಅಂದ್ರೆ ಮನಸ್ಸಿದ್ರೆ ಮಾರ್ಗ...ಅದಕ್ಕೆ ಕನ್ನಡ ಸಮರ್ಥ ಅಲ್ಲಾ ಅನ್ನೋದು ತಪ್ಪುವಾದ..ಧನ್ಯವಾದ

    ReplyDelete
  12. ಆಶಾವ್ರೇ ಧನ್ಯವಾದ ಕಣ್ರೀ...ಇದು ಒಂದು ಪುಟ್ಟ ಪ್ರಯತ್ನ...ಅಷ್ಟೇ...

    ReplyDelete
  13. ಉಮೇಶ್ ಸರ್ ನಿಮ್ಮ ಪ್ರತಿಕ್ರಿಯೆ ಗಮನಿಸಿರ್ಲಿಲ್ಲ...ಕ್ಷಮಿಸಿ...ನಿಮ್ಮ ಮಾತು ನಿಜ ಯಾರಾದ್ರೂ ನೋಡ್ತಾರಾ....ನೀವೇ ನೋಡಿದ್ರಲ್ಲಾ ಅದೇ ನನಗೆ ಬೋನಸ್...ಧನ್ಯವಾದ

    ReplyDelete
  14. ಗುರು...ಧನ್ಯವಾದ...

    ReplyDelete
  15. Olleya kavana sir..:)

    Nimmava,
    Raghu

    ReplyDelete
  16. ಧನ್ಯವಾದ ರಾಘು..

    ReplyDelete
  17. ವಸಂತ್ ಪ್ರತಿಕ್ರಿಯೆಗೆ ಧನ್ಯವಾದ..ಕನ್ನಡದ ಅಭಿವೃದ್ಧಿ ಕಡೆ ಗಮನ ಹರಿಸೋರು ಕಡಿಮೆ ಅದೇ ಕನ್ನಡ ಸರಿಸೋದಕ್ಕೆ ಹೆಚ್ಚು ಗಮನ....

    ReplyDelete
  18. chennaagi bardideera :)

    ReplyDelete