Wednesday, September 28, 2011

ಮತ್ತೊಂದು ಕರವೋಕೆ...ದೇಶ-ನಾಡಿಗೆ

 ನನ್ನ ನೆಚ್ಚಿನ ದೇಶ ಭಕ್ತಿಯ ಗೀತೆಗಳಲ್ಲಿ ಒಂದು...

”ನಯಾ ದೌರ್” ಹಿಂದಿ ಚಿತ್ರದ ಹಾಡು ,...ಈ ಕರವೋಕೆಗೆ ಪ್ರೇರಣೆ...


 
ಭಾರತಿ - ತನುಜಾತೆ

ಈ ದೇಶವು ವೀರ ಜವಾನರದು, ರಣ ಧೀರರದು ಧೀಮಂತರದು
ಈ ದೇಶದ ಜಯವನು, ಈ ದೇಶದ ಜಯವನು ಬಯಸೋಣ
ಈದೇಶದ ಸೇವೆಗೆ ದುಡಿಯೋಣ....ಓ...ಓ... 
//ಪ// ಈ ದೇಶವು ವೀರ ಜವಾನರದು //ಪ//

ಇಲ್ಲಿ ವೀರರ ಶೌರ್ಯಕೆ ಎಣೆಯಿಲ್ಲ, ಇಲ್ಲಿ ದೇಶ ದ್ರೋಹಿಗೆ ಮಣೆಯಿಲ್ಲ
ಪರಂಗಿ ಮಣಿದರು ... ಪರಂಗಿ ಮಣಿದರು ಅಹಿಂಸೆಗೆ,
ಬಾಪೂಜಿ ಕನಸಿನ ಸ್ವರಾಜ್ಯಕೆ.. ಓ...sss. ಓ.sssss
//ಪ// ಈ ದೇಶವು ವೀರ ಜವಾನರದು //ಪ//

ಇಲ್ಲಿ ಹಿಂದು ಮುಸ್ಲಿಂ ಕ್ರೈಸ್ತರು, ಜೈನ ಬೌದ್ಧ ಸಿಂಧಿ ಸಿಕ್ಖರು
ಎಲ್ಲಾ ಸೋದರರಂತೆ.. ಎಲ್ಲಾ ಸೋದರರಂತೆ ಸಾಗಿಹರು,
ದೇಶ ಪ್ರೇಮವ ಮೆರೆದಿಹರು...ಓ...sss. ..ಓ.sss
//ಪ// ಈ ದೇಶವು ವೀರ ಜವಾನರದು //ಪ//

ಕನ್ನಡ ತೆಲುಗು ತಮಿಳು ಮಲೆಯ, ದಕ್ಷಿಣದ ಸವಿ ಭಾಷೆಗಳು
ಮರಾಠಿ ಬಂಗಾಲಿ..... ಮರಾಠಿ ಬಂಗಾಲಿ ಗುಜ್ರಾತಿ ಒರಿಯಾ
ನಮ್ಮ ಸುತ್ತಲ ಭಾಷೆಗಳು........ಓ.ssss ..ಓ....sss
//ಪ// ಈ ದೇಶವು ವೀರ ಜವಾನರದು //ಪ//

ಸಾಹಿತ್ಯ ಸಂಸ್ಕೃತಿಯ ಬೀಡು ಇದು, ಶಾಸ್ತ್ರಿಯ ಕನ್ನಡ ನುಡಿಯಿದು
ಜ್ಞಾನಪೀಠಗಳ...  ಜ್ಞಾನಪೀಠಗಳ ಸಿರಿಯಿದು
ಮಾಹಿತಿ ತಂತ್ರದ ಸೆಲೆಯಿದು......ಓ..sssss ಓ...sss
//ಪ// ಈ ದೇಶವು ವೀರ ಜವಾನರದು //ಪ//

17 comments:

  1. ಒಳ್ಳೆಯ ಗೀತೆ.ತುಂಬಾ ಇಷ್ಟವಾಯಿತು ಆಜಾದ್ ಸರ್.ಬ್ಲಾಗಿಗೆ ಒಮ್ಮೆ ಬನ್ನಿ.

    ReplyDelete
  2. ಜಲನಯನ,
    ಕರಾವೋಕೆ ರಾಗದ ಮೇಲೆ ಮಧುರ, ಸ್ವತಂತ್ರ ಗೀತೆಗಳನ್ನು ರಚಿಸುತ್ತಿದ್ದೀರಿ. ಈ ಗೀತೆಯಂತೂ ತುಂಬ ಉದ್ದೀಪಕವಾಗಿತ್ತು. ಅಭಿನಂದನೆಗಳು.

    ReplyDelete
  3. ಧನ್ಯವಾದ ಡಾಕ್ಟ್ರೇ...ಖಂಡಿತಾ ಬರ್ತೀನಿ ತಗೋರಿ..ಆದ್ರೆ..ಮಜ್ಜಿಗೆ ಮಾತ್ರಾ ಬ್ಯಾಡಪ್ಪಾ.....ಹಹಹಹ

    ReplyDelete
  4. ದಿನಕರ್ ಧನ್ಯವಾದ ...ಐ ಟೂ ಲೈಕ್ಡ್ ಇಟ್,,,

    ReplyDelete
  5. ಸುನಾಥಣ್ಣ..ಇದು ಹೀಗೇ ಅನ್ಸಿದ್ದು...ನನಗೆ ಮೂಲ ಬಹಳ ಹಿಡಿಸಿದ ಗೀತೆ..ಹಾಗಾಗಿ ಪ್ರಯತ್ನ ಪಟ್ಟೆ.. ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ...

    ReplyDelete
  6. ವ್ಹಾ ಜೀ ವ್ಹಾ..............
    ಕರವೋಕೆ ಸರದಾರನಿಗೆ ಜೈ ಹೋ ...................!

    ReplyDelete
  7. ಅಜಾದ್,
    ಈ ಹಳೆಯ ಹಿಂದಿ ಹಾಡು ತುಂಬಾ ಚೆನ್ನಾಗಿದೆ..ಅದನ್ನು ಕನ್ನಡಿಕರಿಸಿರುವುದು ತುಂಬಾ ಸೊಗಸಾಗಿದೆ..

    ReplyDelete
  8. This comment has been removed by the author.

    ReplyDelete
  9. wow super sir.. sakkattu istada haadu nannge idu.. adannu kannadadallu saha chennagi barediddeeri thumba dhanyavadagaLu

    ReplyDelete
  10. ಮನದಾಳದಿಂದ ಪ್ರವೀಣನಿಗೆ ಅಷ್ಟೇ ಮನದಾಳ್ದ ಧನ್ಯವಾದಗಳು...

    ReplyDelete
  11. ಶಿವು ನನಗೂ ತುಂಬಾ ಇಷ್ಟವಾದ ಹಾಡು,..ಒಂದು ಚಿಕ್ಕ ಪ್ರಯತ್ನ ಅಷ್ಟೇ... ಥ್ಯಾಂಕ್ಸೂ...

    ReplyDelete
  12. ಸುಗುಣ...ಇದರ ಪೂರ್ಣ ಸ್ವರೂಪ ಕನ್ನಡಕ್ಕೆ ಹಾಕಿದ್ದೇನೆ,,,ಆದ್ರೆ ಗಾಂಧಿ ಜಯಂತಿ ಹತ್ರ ಬಂತಲ್ಲಾ ಅದಕ್ಕೇ ಸ್ವಲ್ಪ ರಾಷ್ಟ್ರೀಯ ಭಾವ ಪ್ರಕಟಮಾಡೋ ಪ್ರಯತ್ನ ಅಷ್ಟೇ...ಧನ್ಯವಾದ.

    ReplyDelete
  13. ಮಾಡಿದ ಪ್ರತಿ ಪ್ರಯತ್ನವನ್ನೂ ಅದೆಷ್ಟು ಸುಂದರವಾಗಿ ಮಾಡುತ್ತಿರಿ ಸರ್..?ಬಹಳನೇ ಹಿಡಿಸಿತು...ಚೆನ್ನಾಗಿದೆ sir...

    ReplyDelete
  14. ಸುಶ್ಮಾ ಧನ್ಯವಾದ...ನಿಮ್ಮ ಅಭಿಮಾನಕ್ಕೆ ತಲೆ ಬಾಗುತ್ತೇನೆ...

    ReplyDelete
  15. ಆಜಾದು....

    ವಾಹ್ !!

    ಮೂಲ ಹಾಡಿಗೆ ತಕ್ಕ ಸಾಹಿತ್ಯ...! ತುಂಬಾ ಇಷ್ಟವಾಯಿತು.... ಜೈ ಹೋ !

    ReplyDelete
  16. ಧನ್ಯವಾದ ಕಣೋ...ನಿನ್ನ ಕಾಮೆಂಟ್ ಬೇಕಿತ್ತು...ಜೈ ಹೋ...

    ReplyDelete