Saturday, October 1, 2011

ಪ್ರಕಾಶನ- ಕಥೆಯ ಇನ್ನೊಂದು ..ಸಾಧ್ಯ ...ಮುಕ್ತಾಯ.....

ಪ್ರಕಾಶನ ಕಥೆ.....ಹೀಗೆ.....ಹೀಗೂ ಆಗಬಹುದು.....

ನನ್ನ ಕೆನ್ನೆಯ ಕಪ್ಪು ಮಚ್ಚೆಯ ಬಗೆಗೆ ನನಗೆ ಹೆಮ್ಮೆಯಾಯಿತು...


" ನೀನು..
ನಿನ್ನ ಕೆನ್ನೆ... ಈ ಮಚ್ಚೆ ನನಗೆ ಬಲು ಇಷ್ಟ.. ಕಣೆ..."


ಹುಡುಗ ಕಿವಿಯಲ್ಲಿ ಉಸುರಿದ...
ಮೈ ಬಿಸಿಯಾಗ ತೊಡಗಿತು.................

ಇಲ್ಲಿಂದ......ಜಲನಯನದ.....ಪುಟ್ಟ ..ಮುಕ್ತಾಯ....ಯಾಕಂದ್ರೆ ಸುಂದರ ಕ್ಷಣಗಳು ಎಷ್ಟು ಪುಟ್ಟದ್ದು ಎನಿಸುತ್ತವೆಯೋ ಅಷ್ಟೇ ದೀರ್ಘ ಮತ್ತು ಮಧುರವಾಗಿರುತ್ತವೆ....ಅವರವರ ಭಾವಕ್ಕೆ ....ಅಲ್ವಾ...??.....ಸರಿ...ಕಥೆಗೆ ಬರ್ತೀನಿ..............ಮುಂದಕ್ಕೆ.....

ನನ್ನ ಕೆನ್ನೆಯನ್ನು ಅವನೆದೆಗೆ ಒತ್ತುವಂತೆ ಅವನೆದೆಯಲ್ಲಿ ಮುಖ
ಹುದುಗಿಸಿದೆ...ಅವನು ತನ್ನ ಬಲಿಷ್ಠ ಬಾಹುಗಳಿಂದ ನನ್ನ ಬಂಧಿಸಿದ...
ತೋಳ್ತೆಕ್ಕೆಯಲಿ ಅವನ ಬಿಸಿಯುಸಿರಲಿ...ಕಣ್ಮುಚ್ಚಿ ....ಮೈ ಮರೆತೆ....
ಆಹಾ ಎಂಥ ಹಿತವಾಗಿತ್ತು..! ಅವನ ತೋಳ್ಬಿಗಿತ....!!!ಎಲ್ಲೋ ತೇಲಿದ ಹಾಗೆ.....

..............................................................................

ಒಂದು ವಿಷಯ ಕೇಳಲು ಮರೆತು ಬಿಟ್ಟಿದ್ದೆ...
ನಡುಗುವ ಧ್ವನಿಯಲ್ಲಿ..

" ಒಂದು ವಿಷಯ ಕೇಳಲಾ...?"

"ಕೇಳು..ಪುಟ್ಟಣ್ಣಿ.."

ಅವನು ಪುಟ್ಟಣ್ಣಿ.. ಅಂತ ಕರೆದದ್ದು ಇಷ್ಟವಾಯಿತು...
ಅಪ್ಯಾಯಮಾನವಾಯಿತು...
"ನೋಡಿ..
ನೀವೂ ಕೂಡ ತುಂಬಾ ಚಂದವಿದ್ದಿರಿ..
ಮದುವೆಗೆ ಮುನ್ನ ಯಾವುದಾದರೂ ಗೆಳತಿ ಇದ್ದಳಾ...?"

"ಛೇ.. ಛೇ... ನಾನು ಅಂಥವನಲ್ಲ..."

"ನಿಮ್ಮ ಕಾಲೇಜಿನಲ್ಲಿ..."

"ನಾನು ನಾಚಿಕೆ ಸ್ವಭಾವದವನು..
ಕಾಲೇಜಿನ ದಿನಗಳಲ್ಲಂತೂ ಪುಸ್ತಕದ ಹುಳುವಾಗಿದ್ದೆ..

ರಾಜ್ಯಕ್ಕೆ ನಾನು ಎರಡನೆ Rank ಗೊತ್ತಾ...?"


ನೀಲಿ ಕಣ್ಣಿನ ಹುಡುಗನ ಧ್ವನಿ ಕೇಳಲು ಇಷ್ಟ...

"ನಿಮ್ಮ ಆಫೀಸಿನಲ್ಲಿ ಚಂದದ ಹುಡುಗಿಯರು ಇಲ್ವಾ?"

"ಇದ್ದಾರೆ..
ಆದರೆ ನನ್ನ ಕೆಲಸ ನನಗೆ ಬಹಳ ಮುಖ್ಯ...
ಆಫೀಸಿನಲ್ಲಿ ನಾನು ಬಹಳ ಕಠಿಣವಾಗಿರುತ್ತೇನೆ"

"ನಿಮ್ಮ ಸಂಬಂಧಿಕರಲ್ಲಿ.. ಅಂದದ ಹುಡುಗಿಯರು ಇಲ್ವಾ?"

"ಹಾಂ...
ಒಬ್ಬಳಿದ್ದಾಳೆ..
ನನ್ನ ಅತ್ತಿಗೆಯ ತಂಗಿ.."

ನನಗೆ ಕುತೂಹಲ... !!

" ಹೇಗಿದ್ದಾಳೆ..??"

" ಚಂದ ಇದ್ದಾಳೆ...
ಒಂದು ವಿಷಯ ಹೇಳಿ ಬಿಡುತ್ತೇನೆ...
ಅವಳಿಗೂ ನಿನ್ನ ಹಾಗೆಯೇ..
ಕೆನ್ನೆ ಮೇಲೆ ಮಚ್ಚೆಯಿದೆ..
ನನ್ನ ಅದೃಷ್ಟ.. ಕೆನ್ನೆ ಮಚ್ಚೆಯ ಹುಡುಗಿಯೇ ನನಗೆ ಸಿಕ್ಕಿದ್ದಾಳೆ..."

ಹೌದಾ... !!
ಅಬ್ಭಾ ಗಂಡಸೆ.. !!
ನನಗೆ ಅನುಮಾನ ಬರತೊಡಗಿತು...!

"ಅವಳು ಮದುವೆಗೆ ಮುನ್ನ ನಿಮ್ಮನೆಗೆ ಬರುತ್ತಿದ್ದಳಾ?"

"ಬರುತ್ತಿದ್ದಳು..."

"ನೀವಿಬ್ಬರೇ ಏಕಾಂತದಲ್ಲಿ ಭೇಟಿಯಾಗಲಿಲ್ವಾ?"

"ಛೇ.. ಛೇ.. ಹಾಗೇನಿಲ್ಲ"

"ಅದು ಹೇಗೆ ಸಾಧ್ಯ..?
ಸಂಬಂಧಿಕರೆಂದ ಮೇಲೆ ಭೇಟಿಯಾಗಿರಬೇಕಲ್ಲವೆ?"

"ಅವಳಿಗೆ ...
ಅತ್ತಿಗೆಯ ಮದುವೆಯಾಗುವ ಮೊದಲೆ ನಿಶ್ಚಯವಾಗಿತ್ತು...
ನನ್ನ ಅತ್ತಿಗೆಯ ಮದುವೆಯಾಗಿ ಆರು ತಿಂಗಳಲ್ಲಿಯೇ ಅವಳ ಮದುವೆಯೂ ಆಯಿತು.."

"ಅವಳಿಗ ಎಲ್ಲಿದ್ದಾಳೆ...? ಏನು ಮಾಡುತ್ತಾಳೆ...?"

" ಅವಳೂ ಕೆಲಸ ಮಾಡುತ್ತಾಳೆ..
ನಮ್ಮ ಆಫೀಸಿನ ಪಕ್ಕದ ಬಿಲ್ಡಿಂಗಿನಲ್ಲಿ ಅವಳ ಆಫೀಸಿದೆ.."

ನನಗೆ ಕೋಪ ಬರತೊಡಗಿತು...

ಇವರಿಬ್ಬರೂ ದಿನಾಲೂ ಭೇಟಿಯಾಗ ಬಹುದಲ್ವಾ?..

ಛೇ..!!

"ಇದನ್ನೆಲ್ಲ.... ನೀವು ಮೊದಲೇ ಯಾಕೆ ಹೇಳಲಿಲ್ಲ..?"
"ಇದರಲ್ಲಿ ಮುಚ್ಚಿಡುವ ಸಂಗತಿ ಏನಿದೆ..?
ಅವಳ ಚಂದ ಇಷ್ಟಪಟ್ಟೆ ಅಷ್ಟೆ...
ಬಯಸಲಿಲ್ಲ..
ನಾನು ಇಷ್ಟಪಟ್ಟು ಬಯಸಿದ್ದು ನಿನ್ನನ್ನು...
ಪ್ರೀತಿಸ್ತಾ ಇರೋದು ನಿನ್ನನ್ನು..."

" ಇದನ್ನು ನಾನು ಹೇಗೆ ನಂಬಲಿ...? "
ನನ್ನನ್ನು ಹಿಡಿದುಕೊಂಡಿದ್ದ ಕೈಗಳು ಸಡಿಲವಾಗತೊಡಗಿತು..
ಹುಡುಗನ ಧ್ವನಿ ಗಡುಸಾಯಿತು...
ಬಹಳ ಕಠಿಣವಾಗಿ ಹೇಳಿದ...

"ನಾನು ಮೊದಲೇ ಹೇಳಿದ್ದೇನೆ..
ನಂಬಿಕೆ..
ವಿಶ್ವಾಸ ಇರಬೇಕು ಅಂತ...
ನನಗೆ ಇದೆಲ್ಲ ಇಷ್ಟವಾಗೊಲ್ಲ..."

ಆತ ...
ಮುಖತಿರುಗಿಸಿ ಮತ್ತೊಂದು ಕಡೆ ಮುಖ ಮಾಡಿ ಮಲಗಿದ...

ನನಗೂ.. ಅಸಾಧ್ಯ ಕೋಪ ಬಂತು....
ನಾನು .....
ಇನ್ನೊಂದು ಕಡೆ ಮುಖ ಮಾಡಿ ಮಲಗಿದೆ...

ಇಲ್ಲಿಂದ ಮತ್ತೆ.....ಜಲನಯನದ ಪಯಣ...........

........ಕಿವಿಯಲ್ಲಿ..ಯಾರೋ ಪಿಸುಗುಟ್ಟಿದಂತೆ...... “ಏಯ್ ಚಿನ್ನಾ.... ಪುಟ್ಟಣ್ಣಿ....
ಏನು ...? ಇಷ್ಟೊಂದು ಗಾಢ ನಿದ್ದೇನಾ...?? ನಿಂತಲ್ಲೇ ನನ್ನ ಅಪ್ಪಿದವಳು...
ಹಾಗೇ...ಕಣ್ಮುಚ್ಚಿ ನಿಂತದ್ದು... ನಿನ್ನ ಈ ಮುಚ್ಚಿದ ಸುಂದರ ಗುಲಾಬಿ ದಳದಂತಹ
ಕಣ್ರೆಪ್ಪೆ..ನಿನ್ನ ಈ ಸುಂದರ ಮಚ್ಚೆ..., ನಿನ್ನ ಮಧುರ ತುಟಿಗಳು...ನೋಡುತ್ತಾ ನಾನೂ
ಮೈ ಮರೆತೆ.... ನಿನ್ನನ್ನು ಅನಾಮತ್ ಎತ್ತಿ.. ಹಾಗೇ ...ಕೋಮಲ ಹೂವಿನ
ಮಾಲೆಯನ್ನು ಇಡುವ ಹಾಗೆ ಹಾಸಿಗೆಮೇಲಿಟ್ಟು.....ನಾನೂ ಮಲಗಿದೆ. ಮದುವೆಯ
ಓಡಾಟ ತಡ ರಾತ್ರಿಯವರೆಗೂ ನಡೆದ ರಿಸಿಪ್ಷನ್..... ನೀನೂ ನನ್ನಂತೆ
ಆಯಾಸಗೊಂಡು ಮುಗುಳ್ನಗೆಯ ಸುಖ ನಿದ್ದೆಯಲ್ಲಿದ್ದೆ.. ನಿನ್ನ ಆ ಮುದ್ದುಮುಖವನ್ನು
 ನೋಡುತ್ತಾ ನಾನೂ ನಿದ್ರಿಸಿದ್ದು ನನಗೂ ಅರಿವಾಗಿರಲಿಲ್ಲ..... ಈಗಷ್ಟೆ.. ಅಮ್ಮ
ಬಾಗಿಲು ಬಡಿದಂತಾಗಿ ಎಚ್ಚರ ಆಯ್ತು.....”

“ಹೌದಾ....ಅಯ್ಯೋ..... ನನ್ನ ಎತ್ತಿ ಮಲಗಿಸಿದ್ರಾ...??!!”
ಕೇಳಿದೆ ನಾಚಿಕೊಂಡೇ

ಹಾಗಾದ್ರೆ.....ಹಾಗಾದ್ರೆ....ಇವರ ಅತ್ತಿಗೆ ತಂಗಿ..? ಸ್ವೀಟ್ ಹಾರ್ಟು....???!!!

ಅಯ್ಯೋ ಬರೀ ನನ್ನ ಹುಚ್ಚು ಕನಸು.........

ಅವರ ಮುಖ ನೋಡಿದೆ.... ಮಗುವಿನ ಮುಗ್ಧತೆ ..ಮತ್ತು ತನ್ನ ಮುದ್ದು ಮಡದಿಯನ್ನೇ
ಮೆಚ್ಚುಗೆಯಿಂದ ನೋಡುತ್ತಿದ್ದ ಅವರ ಧನ್ಯತಾಭಾವ.... ನನ್ನೆಲ್ಲ ಕನಸಿನ ಕಲ್ಪನೆಗಳಿಗೆ
ತೆರೆಯೆಳೆಯಿತು.... ಛೇ...ಇಂತಹವರ ಬಗ್ಗೆ ನನ್ನ ಹುಚ್ಚು ಮನಸು ಏಕೆ ಅಂತಹಾ
ಯೋಚನೆ ಮಾಡಿತು..?? ...ತಲೆಕೊಡವಿದೆ..

ಹಾಸಿಗೆ ಬಿಟ್ಟೇಳುವ ನನ್ನನ್ನು ಹಾಗೇ ತನ್ನತ್ತ ಎಳೆದುಕೊಂಡು
ಅಪ್ಪಿಕೊಂಡರು....ಮತ್ತದೇ ಸುಖ ...!! ಅವರ ತೆಕ್ಕೆಯಲ್ಲಿ ಮತ್ತೆ
ಕರಗಿಹೋದೆ.....!!!!!!!!!!!


28 comments:

  1. ಹ್ಮಂ .. ಮೊದಲ ರಾತ್ರಿಯೇ ಜಗಳ ಕಾಯೋದು ಇಷ್ಟ ಆಗ್ಲಿಲ್ಲ ಅಲ್ಲ ನಿಮಗೆ ? ಹ ಹ ಹ ಹ ...

    ಕಥೆಗೊಂದು ಸುಖಾಂತ್ಯ ಕೊಟ್ಟಿದೀರಾ !ಚೆನಾಗಿದೆ . ಆದರೂ ಕನಸಲ್ಲೇ ಆದರೂ ಅದ್ಯಾಕೆ ಹಾಗೆ ಯೋಚನೆ ಮಾಡ್ಬೇಕು ಅವಳು ಅಂತ ......

    ReplyDelete
  2. ನನಗೂ ಇಷ್ಟ ಇಲ್ಲಾ...ಆದ್ರೆ ಪ್ರಕಾಶ ಬರೆದು ಆಗಿದೆ...ಅದಕ್ಕೆ ಒಂದು..ತಿರುವು ಕೊಡೋದು ಅಗತ್ಯ ಇತ್ತು...ಸರಿ ಕನಸಲ್ಲೇ ಯೋಚಿಸ್ಲಿ...ಅಂತ ಅಷ್ಟೇ....ನಾನೇ ಬರೆದಿದ್ರೆ.??..??..ಹಹಹಹ...
    ನಿನ್ನ ಕಾಮೆಂಟ್ ಎಲ್ಲಿ ಬರ್ತಿತ್ತು ಚಿತ್ರಾ..???

    ReplyDelete
  3. antya chennaagide..... ellavU sukhaantya aagirolla alvaa sir......

    svalpa uppu huLi khaara iratte alvaa.... sir...?

    hha hha...

    ReplyDelete
  4. ಬೊಂಬಾಟ್ ಸರ್, :-)
    ನಿಮ್ಮದನ್ನೇ ೨ನೇ ಭಾಗ ಅಂತ ನಿರ್ಧರಿಸಿ, ನನ್ನ ಕಥೆಯನ್ನು ೬ನೇ ಭಾಗವಾಗಿ ಒಪ್ಪಿಕೊಳ್ಳುತ್ತೇನೆ.

    ನನ್ನ ಭಾಗ ಓದಿರಿ:
    www.badari-notes.blogspot.comಬೊಂಬಾಟ್ ಸರ್, :-)
    ನಿಮ್ಮದನ್ನೇ ೨ನೇ ಭಾಗ ಅಂತ ನಿರ್ಧರಿಸಿ, ನನ್ನ ಕಥೆಯನ್ನು ೬ನೇ ಭಾಗವಾಗಿ ಒಪ್ಪಿಕೊಳ್ಳುತ್ತೇನೆ.

    ನನ್ನ ಭಾಗ ಓದಿರಿ:
    www.badari-notes.blogspot.com

    ReplyDelete
  5. ಅಜಾದ್ ಸರ್ ಕತೆಯ ತಿರುವು ನೀಡಿರುವ ಸುಖಾಂತ್ಯಾ ಚೆನ್ನಾಗಿದೆ. ಪ್ರಕಾಶ್ ಹೆಗ್ಡೆ ಕತೆಗೆ ಹೊಸ ರೂಪ ಕೊಟ್ಟಿದ್ದೀರ ಬೊಂಬಾಟ್ ಆಗೈತೆ ಸಾ ..........ರಸಿಕರು ನೀವು ನಿಮ್ಮ ಕತೆಯಲ್ಲಿ ಬಳಸಿರುವ ಪದಗಳು ಹಾಗೆ ಹೇಳುತ್ತಿವೆ .!!!!!!!!!!!!!! ನಿಮ್ಮ ರಸಿಕತೆ ಹೀಗೆ ಇರ್ಲಿ ಅಂತಾ ಶಾಪಾ ಹಾಕ್ತೀನಿ ನಿಮ್ಗೆ.

    ReplyDelete
  6. ಆಜಾದು....

    ಖುಷಿ ಆಯ್ತು ಕಣೊ....!

    ನನಗೂ ಸಹ ಸುಖಾಂತ್ಯ ಕೊಡೊ ಮನಸ್ಸಿಲ್ಲ ಅಂದ್ಕೊಬೇಡ ಮಾರಾಯಾ...

    ಸುಖಾಂತ್ಯ ಎಲ್ಲರೂ ಬಯಸೋದು...
    ಒಂದು ವೇಳೆ ನಾನು ಬರೆದ ಕಥೆ ಸುಖಾಂತ್ಯವಾಗಿದ್ದರೆ ಈ ರೀತಿ ಖೊಖ್ಕೋ ಶುರುವಾಗುತ್ತಿತ್ತಾ?

    ಗೆಳೆಯಾ...

    ನೀನೂ ಕಥೆ ಬರಿ...

    ಚೆನ್ನಾಗಿದೆ ನಿನ್ನ ಶೈಲಿ....

    ReplyDelete
  7. ದಿನಕರ್...ಇಲ್ಲಿ ನಡೀತಿರೋದು ಕೇವಲ ಮದುವೆ ಮತ್ತೆ ಆ ರಾತ್ರಿಯ ಘಟನೆಗಳ ಸುತ್ತಲಿನ ಪರಿಸರ....ಮೊದಲೇ ಒಬ್ಬರೊನ್ನೊಬ್ಬರ ನೋಡಿರದ ವಧೂ-ವರರ ಮಧ್ಯೆ ಚರ್ಚೆ ಜಗಳ ವಿರಸ...ನನ್ನ ಅನಿಸಿಕೆ ಪ್ರಕಾರ ಅಸಾಧ್ಯ...ಹಾಗಾಗಿ...ಕಲ್ಪನಾಲೋಕಕ್ಕೆ ಆ ಭಾಗವನ್ನು ತಳ್ಳಿ...ಜೀವನ ಇನ್ನೂ ಮುಂದಿದೆ ಅನ್ನೋದನ್ನ ಹೇಳೋ ಪ್ರಯತ್ನ... ಅಂತ್ಯ ಎನ್ನುವಂತಹುದು ಇಲ್ಲಿ ಸಾಧ್ಯವಿಲ್ಲ... ಉಪ್ಪು ಹುಳಿ ಖಾರ ಇಲ್ಲದ ಜೀವನ ಜೀವನವೇ..?? ಖಂಡಿತಾ ಹೌದು...ಆದ್ರೆ ಕೇವಲ ಎರಡೇ ದಿನದ ಘಟನೆಗಳು ಜೀವನ ಆಗಲಾರವು ಅಲ್ವಾ???
    ಇದು ನನ್ನ ಅನಿಸಿಕೆ.....ಮಾತ್ರ...
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ

    ReplyDelete
  8. ಬದರಿ ಮಾತು ನಿಜ...ಹಾಗೂ ಅವರ ಕಥೆಯೂ ವಿನೂತನ ದಿಕ್ಕನ್ನು ಹಿಡಿದಿದೆ...ನೋಡೋಣ ಇನ್ನೂ ಯಾರ ಬತ್ತಳಿಕೆಗೆ ಯಾವ ರಂಗು ಬರುತ್ತೋ...

    ReplyDelete
  9. ಡಾಕ್ಟ್ರೇ..ಧನ್ಯವಾದ....

    ReplyDelete
  10. ಬಾಲು...ಥ್ಯಾಂಕ್ಸ್...ನಿಮ್ಮ ಕಥೆ ಮತ್ತೆ ಪ್ರವೀಣ ಹಾಗೂ ದಿನಕರ್ ಕಥೆಗಳಲ್ಲಿ ಸ್ವಲ್ಪ ಸಾಮ್ಯವಿದೆ...ನನ್ನದು ಕೇವಲ ಒಂದು ಅನಿಸಿಕೆ ಅಷ್ಟೇ...

    ReplyDelete
  11. ಪ್ರಕಾಶೂ..ನಿನ್ನ ಕಥೆ ಜಾಡು ..ಕಲ್ಪನೆಗಳಿಗೆ ಈಡು...ಹಾಗಾಗಿ ಅದಕ್ಕೆ ಒಮ್ದು ಸ್ವಾಭಾವಿಕ ಎನಿಸುವ ತಿರುವು ಕೊಡುವ ಪ್ರಯತ್ನ ನನ್ನದು...ನನ್ನ ಒಂದೇ ಅಂಶದ ವಾದ ಅಂದ್ರೆ...ಎಂದೂ ಕಂಡಿರದ ವಧೂ-ವರರಲ್ಲಿ...ಮೊದಲ ರಾತ್ರಿ ಈ ಮಟ್ಟಕ್ಕೆ ವಿರಸ ಬರುವಂತಹ ಹಂತ ತಲುಪುವುದಿಲ್ಲ ಎನ್ನುವುದು.. ಅದರ ಆಧಾರದಲ್ಲಿ ನಿನ್ನ ಆ ವಿರಸಮಯ ಘಟನೆಗಳಿಗೆ ಕಲ್ಪನೆಯ ಹೊದಿಕೆ ಹೊದಿಸಿ...ಇದೂ ಸಾಧ್ಯ ಜೀವನದಲ್ಲಿ...ಆದರೆ..ಇನ್ನೂ ಪರಸ್ಪರ ಅರಿಯೋಣ ಎನ್ನೋ ಭಾವ ತರಿಸೋ ಪ್ರಯತ್ನ.....ನನ್ನ ಪ್ರಯತ್ನ ಕೇವಲ ನಿನ್ನ ಕಥೆಯಿಂದ ಪ್ರೇರಿತವಾದದ್ದು....ಹಾಗಾಗಿ ಆ ಉತ್ತೇಜಕ ಶಕ್ತಿ ತಂದ ಶ್ರೇಯ ನಿನ್ನ ಕಥೆಗೆ ಸಲ್ಲುತ್ತೆ...ಜೈ ಹೋ...

    ReplyDelete
  12. ಜಲನಯನ,
    ಸುಖಾಂತ್ಯಕ್ಕಾಗಿ ಧನ್ಯವಾದಗಳು.

    ReplyDelete
  13. ಅಜಾದ್,
    ಇದನ್ನು ನೀವು ಎರಡನೆ ಭಾಗವಾಗಿ ಹಾಕಬೇಕಿತ್ತು. ಇಲ್ಲಿಂದ ಮುಂದಕ್ಕೆ ಮೂರು ಜನರು ಮುಂದುವರಿಸಿದ್ದಾರೆ. ಇರಲಿ. ಪ್ರಯತ್ನ ಚೆನ್ನಾಗಿದೆ. ಇನ್ನೂ ಮುಂದಿದೆಯಲ್ಲ...ಅದನ್ನು ಬೆಳೆಸಿ...

    ReplyDelete
  14. ಸರ್....ಅಂತೂ ಕತೆಗೊಂದು ಸುಖಾಂತ್ಯ ಸಿಕ್ಕಿತು... ಚನ್ನಾಗಿದೆ...

    ReplyDelete
  15. ಸುನಾಥಣ್ಣ ಧನ್ಯವಾದಗಳು....ಒಂದು ಪ್ರಯತ್ನ ಯಾಕಂದ್ರೆ ನನಗೆ ಸರ್ವೇ ಜನಾಃ ಸುಖಿನೋ ಭವಂತು ಎನ್ನುವುದರಲ್ಲಿ ಹೆಚ್ಚು ಒಲವು....ಹಹಹಹ

    ReplyDelete
  16. ಶಿವು ನಿಮ್ಮ ಕಾಮೆಂಟ್ ಬಜ್ ನಲ್ಲೂ ನೋಡಿದೆ...ನಾನು ಸ್ವಲ್ಪ ಪೋಸ್ಟ್ ಮಾಡೋದು ಲೇಟ್ ಆಯ್ತು...ಅದಕ್ಕೆ ನನ್ನ ಪ್ರಯತ್ನದ ಭಾಗ ....ಔಟ್ ಅಫ್ ಫ್ರೇಂ ನಿಮ್ಮ ಫೋಟೋಗ್ರಫಿ ಭಾಷೆಲಿ ಹೇಳೋದಾದ್ರೆ...ಹಹಹಹ ಧನ್ಯವಾದ

    ReplyDelete
  17. ಸುಶ್ಮಾ...ನೀವಾದ್ರೂ ನನ್ನ ಪಕ್ಷಕ್ಕೆ ಬಂದ್ರಲ್ಲಾ ಧನ್ಯವಾದ...

    ReplyDelete
  18. sir eega odide nimma kate chennagide...

    ReplyDelete
  19. ಆಜಾದ್ ಸರ್, ಇಷ್ಟ ಆಯ್ತು.... ಚಿತ್ರಾ ಹೇಳಿದಂತೆ ಕನಸಿನಲ್ಲೋ ಅವಳು ಯೋಚಿಸಿದ್ದು ತಪ್ಪು.. ಹಾ ಹಾ ಹಾ...
    ಆದರೆ ಪ್ರಕಾಶಣ್ಣನ ಕಥೆ ನಿಮ್ಮಿಂದ ಸುಖಾಂತವಾಗಿದ್ದು ಖುಷಿ ಆಯ್ತು...

    ReplyDelete
  20. ಇಡು ಸರಿಯೇ....
    ಆದರೂ ಕಥೆ ಕಥಯ೦ತಿಲ್ಲ...!!!೧

    ReplyDelete
  21. ಧನ್ಯವಾದ ಸುಗುಣ...ನನ್ನ ಬ್ಲಾಗ್ ಮುಂಚೆಯೇ ನೋಡಿದ್ದರೆ ನನಗೆ ಸಾಥ್ ಸಿಗ್ತಿರಲಿಲ್ಲ...ನನ್ನ ಜಾಡಿಗೆ,,,

    ReplyDelete
  22. ಕಾವ್ಯಾ...ಆದ್ರೆ ಏನು ಮಾಡೊದು ಕನಸಲ್ಲಿ ಅನಾಹುತ ಆಗಬಹುದೇನೋ ಎಂಬ ಅಂಜಿಕೆ ದೂರಮಾಡ್ಕೊಳ್ಳೊಕೆ ಅನ್ಸುತ್ತೆ...ಹಹಹ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ

    ReplyDelete
  23. ಇದು ಕಥೆಯೇ..? ನನಗೆ ವ್ಯಥೆ ಮಾಡೋ ಮನಸಿಲ್ಲ ಸೀತಾರಾಂ ಸರ್...ಧನ್ಯವಾದ..ನೀವೂ ಸೇರಿದ್ರಿ ನಮ್ಮ ಸಾಲಿಗೆ...!!

    ReplyDelete
  24. ಅಜಾದ್ ಸರ್,,,
    ಚೆನ್ನಾಗಿ ಇದೆ ನಿಮ್ಮ ಕಥೆಯ ಸುಖಾಂತ್ಯ .....

    ReplyDelete
  25. Nice ending.
    I like it Sir.

    ReplyDelete
  26. ಧನ್ಯವಾದ ಗುರು....ನಿಮ್ಮ ಕಥೆ ಬರ್ಲಿಲ್ಲ...ಕ್ಯೂಲಿ....?? ಯಾಕೋ...????

    ReplyDelete
  27. ಸಿಂಧು ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...ಮತ್ತೆ ಸ್ವಾಗತ ನಿಮಗೆ ಜಲನಯನಕ್ಕೆ...

    ReplyDelete