Sunday, October 30, 2011

ಕಿರಣ......

ಚಿತ್ರ: ದಿಗ್ವಾಸ್ ಹೆಗಡೆ

ಕಿರಣ
ಮರೆಯಾಗಹೊರಟ ಸೂರ್ಯ
ಅಡಗಿ ದಿಗಂತದಿ, ಆಯ್ತು ದಿನವೆಲ್ಲವೂ
ಧರಿತ್ರಿಯ ಒಂದೆಡೆಯ ಕಾರ್ಯ
ನಿರಂತರ ಅವಗೆ, 
ಇಲ್ಲ ರಾತ್ರಿ, ಇಲ್ಲ ನೆಳಲು, 
ಇಲ್ಲ ತಂಪು, ಇಲ್ಲ ಕಡಲು.
ಒಡಲೊಳಗಿಹ ಕೆಂಡದುಂಡೆ
ಹೊರ ಉಗುಳುವ ಜೀವ ಕಿರಣ
ಆವಿಯಾಗಿಸಿ ಮಾಡಿ ನೀರಹರಣ
ಜಲವುಂಡ ಸಾಗರವೇ ಹಂಡೆ
ಒಬ್ಬ ಸೂರ್ಯ ಬ್ರಹ್ಮಾಂಡದಿ
ಎಷ್ಟೋ ಭೂಮಿಗಳ ಬೆಳಗಿಹ
ಎಷ್ಟೋ ಸಾಗರಗಳ ತೊಯ್ದಿಹ
ಆದರೂ, ಸುಮ್ಮನೆ ಮರೆಯಾಗುವ
ದಿಗಂತದಿ ಚಿನ್ನದೋಕುಳಿಯಾಡಿ
ಒಂದೆಡೆ ತಂಪಿಗೆ ಒಂದೆಡೆ ಕಂಪಿಗೆ
ಒಂದೆಡೆ ಚುಮುಚುಮು ಛಳಿಯಪ್ಪುಗೆ
ಭ್ರಮರ ಹಾತೊರೆವ ಹೂ ಕಂಪಿಗೆ
ಜೀವ ಜಾಲದ ಹೂರಣ ಅವನಲ್ಲಿ
ಮರಗಿಡ ಚರಾಚರ ಇವೆ ಬಳಿಯಲ್ಲಿ
ಬೆಳಕೂ ಅವನೇ ಕತ್ತಲೂ ಅವನೇ
ಶಕ್ತಿಸಾರದ ಮೂಲವೂ ಅವನೇ

27 comments:

 1. ಅಜಾದ್ ಸರ್;ಸೂರ್ಯನ ಬಗ್ಗೆ ಸುಂದರ ಕವನ.ಅಭಿನಂದನೆಗಳು.

  ReplyDelete
 2. ಚಂದದ ಚಿತ್ರಕ್ಕೆ ಸುಂದರ ಕವನ... ಸೂಪರ್ !!
  ಹೊಸದೊಂದು ಜುಗಲ್ ಬಂದಿ ಶುರುವಾಗಲಿ ಜೈ ಹೋ !!

  ReplyDelete
 3. ಡಾಕ್ಟ್ರೇ ಧನ್ಯವಾದ...ದಿಗ್ವಾಸ್ ಇನ್ನೊಂದು ಚಿತ್ರವೂ ಹೀಗೇ ಮನಸೆಳೆಯಿತು...ಅದಕ್ಕೂ ಬರೆದೆ ನನ್ನ ಭಾವನಮನ ಆದ್ರೆ ಕಂಪ್ಯೂಟರ್ ಕೈ ಕೊಡ್ತು ಸೇವ್ ಮಾಡೋಕೆ ಮುಂಚೆ..ಹಹಹ...

  ReplyDelete
 4. ಪ್ರಕಾಶ..ನನಗೆ ನಿನ್ನ ಮಾತಿಂದ ಡಾ.ಸತ್ಯ ಕುವೆಂಪುರವರ ಬಗ್ಗೆ ಬರೆದಿರೋ ಇತ್ತೀಚಿನ ಬ್ಲಾ ಲೇಖನ ನೆನ್ಪಾಯ್ತು..ಅವರಿಗೆ ರೋಗಾವಸ್ಥೆಯಲ್ಲೂ ಹಕ್ಕಿಯ ನೋಡಿ ಕವನಿಸುವ ಮನವಾಯ್ತಂತೆ...ಹಾಗೆ ನಿಸರ್ಗ ಏನೆಲ್ಲಾ ಭಾವನೆ ಹುಟ್ಟು ಹಾಕುತ್ತೆ ಅನ್ನೋಕೆ ನಿನ್ನ, ದಿಗ್ವಾಸ್, ಶಿವು, ಇಂತಹವರ ಚಿತ್ರಗ್ರಹಣೆ ಸಾಕ್ಷಿ ಹಾಗೆಯೇ ಅವನ್ನು ನೋಡಿ ನಮ್ಮ ಭಾವ ನಮನಕ್ಕೆ ಹಾದಿ....ಧನ್ಯವಾದ

  ReplyDelete
 5. ವಿಜಯಶ್ರೀ ...ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ..

  ReplyDelete
 6. ಸುಗುಣ ನಿಮಗೂ...ಥ್ಯಾಂಕ್ಸ್...ಮನು ಪ್ರಯೋಗಗಳು ಕಾಣ್ತಿಲ್ಲ...ಸ್ಕೂಲ್ ಟೆಸ್ಟುಗಳ ಬ್ಯುಸಿಯಲ್ಲಿದ್ದಾನೆ ಅನ್ಸುತ್ತೆ...ಹಹಹ

  ReplyDelete
 7. ಅಂದದ ಚಿತ್ರ, ಸುಂದರ ಭಾವ ಲಹರಿ... ಬೆಳಕೂ ಅವನೇ ಕತ್ತಲೂ ಅವನೇ... ಶಕ್ತಿಸಾರದ ಮೂಲವೂ ಅವನೇ... ಇಷ್ಟವಾಯ್ತು... :)

  ReplyDelete
 8. ಸು೦ದರ ಚಿತ್ರ...ಸೊಗಸಾದ ಸಾಲುಗಳು..!

  ReplyDelete
 9. ಜಲನಯನ,
  ದಿಗ್ವಾಸರ ಚಿನ್ನದಂತಹ ಚಿತ್ರಕ್ಕೆ ನಿಮ್ಮ ಕವನ ಚಿನ್ನದ ಚೌಕಟ್ಟಿನಂತಿದೆ!

  ReplyDelete
 10. ಚಂದದ ಚಿತ್ರಕ್ಕೆ ಚಂದದ ಕವನ..ದಿಗ್ವಾಸ್ ಸರ್ ಚಿತ್ರ ಸೆರೆ ಹಿಡಿಯೋ ಬಗೆಯೇ ಅದ್ಭುತ...
  ಸೂಪರ್..

  ReplyDelete
 11. ಕಾವ್ಯಾ...ಧನ್ಯವಾದ...ಶಕ್ತಿಸಾರದ ಮೂಲ ಅವನೇ ಅಲ್ಲವೇ ಕಿರಣ...??

  ReplyDelete
 12. ಮನಮುಕ್ತಾವರೇ ದಿಗ್ವಾಸ್ ಚಿತ್ರ ನಿಜಕ್ಕೂ ಸೂಪರ್...ಅದರ ಪ್ರಜ್ವಲತೆ ಭಾವವನ್ನು ಕಲಕುತ್ತೆ...ಧನ್ಯವಾದ

  ReplyDelete
 13. ಧನ್ಯವಾದ ಸುನಾಥಣ್ಣ, ಆ ಪರಿಸರ ನಮಗೆ ದೂರ ಅಷ್ಟೇ ನೈಜ ಪರಿಸರ ಕೊಟ್ಟಿದ್ದು ದಿಗ್ವಾಸ್ ಚಿತ್ರ ಹಾಗಾಗಿ ನನ್ನ ಪುಟ್ಟ ಪ್ರಯತ್ನ..

  ReplyDelete
 14. ಸುಶ್ಮಾ, ಧನ್ಯವಾದ..ಚಿತ್ರ ನೋಡಿದೊಡನೇ ಭಾವ ಮೂಡುತ್ತೆ..ಅದನ್ನ ಬರೆದಿಡಬೇಕಾದ್ದು ನಮ್ಮ ಮೊದಲ ಕೆಲ್ಸ...ಧನ್ಯವಾದ

  ReplyDelete
 15. ಚೆನ್ನಾಗಿದೆ ಸರ್ ನಿಮ್ಮ ಸಾಲುಗಳು..

  ReplyDelete
 16. ಚೆನ್ನಾಗಿದೆ ಸರ್ ಸುಂದರ ಸಾಲುಗಳ ನಡುವೆ ಅಂದದ ಚಿತ್ರ...

  ReplyDelete
 17. ಸೀತಾರಾಂ ಸರ್ ಧನ್ಯವಾದ ನಿಮ್ಮಭಿಮಾನಕ್ಕೆ...

  ReplyDelete
 18. ಗಿರೀಶ್ ಬರ್ತಾ ಇರಿ ಹೀಗೇ ನಮ್ಮ ಹುಮ್ಮಸ್ಸಿಗೆ ...ಧನ್ಯವಾದ ಪ್ರತಿಕ್ರಿಯೆಗೆ..

  ReplyDelete
 19. ಚಿತ್ರ ಭಾವ ಕಲಕಿ ಭಾಷೆಯನ್ನು ನೀಡಿದ್ದು..ಕವನ ತಾನಾಗೇ ಹೊರಟಿದ್ದು...ನಾನು ಮಾತ್ರಾ ಕೀಲಿಮಣೆಯಲಿ ಕೂತು ಟೈಪಿಸಿದ್ದು...ಹಹಹ ಧನ್ಯವಾದ ತರುಣ್ ನಿನ್ನ ಪ್ರೋತ್ಸಾಹಕ್ಕೆ..ಪ್ರತಿಕ್ರಿಯೆಗೆ

  ReplyDelete
 20. chitra dhashte chennagidhe kavana

  ReplyDelete
 21. ಅಕಟಕಟಾ....ಏನಿದೇನಿದು...ದಿಗ್ವಾಸನೋ ದೂರ್ವಾಸನೋ..ಎನಗೊಂದು ಶಾಪವಂ ಕೊಟ್ಟು ತಾನ್ತೆಗೆದ ಚಿತ್ರಕೊಂದ್ಕವನಂ ಬರೆಯೆಂದಂದು ಮರೆಯಾದುದರ ಮರ್ಮದೊಳರ್ಥ ಈಗ ವೇದ್ಯಾವಾಗಿಹುದು...ಎನ್ನ ಕವನದುಲ್ಲೇಖ ಆ ಚಿತ್ರೋತ್ತಮತೆಯ ಪ್ರಶಂಸಾನಂತರವಾಗುತಿಹುದು, ನಾ ಬರೆದೆನೋ..ಇಲ್ಲ ನಾನೇ ಬರೆ-ಎಳೆದುಕೊಂಡೆನೋ..ನೀನೇ ಹೇಳಾ ದಿಗ್ವಾಸಾ.....

  ಅಹಹಹ...ಧನ್ಯವಾದ ಸಿಂಧು...ನಿಜ ದಿಗ್ವಾಸರ ಚಿತ್ರ ಕಂಡು ಉದಯಿಸಿದ್ದು ಕವನ..

  ReplyDelete
 22. ಆಜಾದ್ ಸರ್... ಒ೦ದು ಚಿತ್ರಕ್ಕೆ ಇಷ್ಟೊ೦ದು ಹೊಗಳುವಿಕೆಗೆ ಚಿತ್ರ ತೆಗೆದವನು ಖ೦ಡಿತ ಭಾಧ್ಯಸ್ಥನಲ್ಲ...ನಿಜವಾಗ್ಲೂ ಹೇಳ್ತೀನಿ ನಮ್ಮ ಸುತ್ತಲಿನ ಪ್ರಕ್ರತಿ ವೈಚಿತ್ರ್ಯ ಹಾಗಿದೆ...ಅದನ್ನು ನೋಡುವ ಚಿತ್ರವಾಗಿ ಸೆರೆ ಹಿಡಿಯುವ ಅನುಕೂಲವನ್ನು ದೇವರು ಕೊಟ್ಟಿದ್ದಾನಲ್ಲ...ಅದಕ್ಕೆ ನಾನು ಋಣಿ..ಧನ್ಯವಾದಗಳು...ಕವನ ತು೦ಬಾ ಚೆನ್ನಾಗಿದೆ...

  ReplyDelete
 23. ದಿಗ್ವಾಸ್ ನಿಮ್ಮ ಬೇಟೆ (ಚಿತ್ರಗಳದ್ದು) ಮುಂದುವರೆಯಲಿ ..ಅವೇ ನಮಗೆ ಸ್ಫೂರ್ತಿ..ಒಂದು ಚಿತ್ರ ಹಲವು ಭಾವ ಚಿತ್ರಕ್ಕೆ ಸಿಗೋ ಬಹುಮಾನ ಅಲ್ವಾ...

  ReplyDelete
 24. ಸೂರ್ಯನ ಬಗ್ಗೆ ಭಾವ ಲಹರಿ ಚೆನ್ನಾಗಿದೆ ಸರ್

  ReplyDelete