Saturday, December 10, 2011

ಭಾವ ಕಲಕಿದ ಛಾಯಾಚಿತ್ತಾರ ಮತ್ತೊಂದು.....

Foto: Prakash Hegde

ಓಹ್..ನಿನ್ನ ನೋಡಿದರೆ...!!!

ಹಳ್ಳಿಯ ಕೆರೆ,
ಹುಲ್ಲಿನ ಹೊರೆ,
ಕೆರೆಸೇರು ತೊರೆ
ಎಲ್ಲಾ ನೆನಪಾಗುತ್ತೆ.
ಸ್ನೇಹಿತ ಅಮ್ಮನ ವ್ಯಥೆ
ಕೆರೆಹೊಕ್ಕ ಎಮ್ಮೆ ಕಥೆ
ಹೂಳೆತ್ತೋ ಕಂಬಾರ
ಮೀನಕದ್ದೋಡಿದ ಚೋರ
ಚಿತ್ರ ಹಾದು ಹೋಗುತ್ತೆ.

ಓಹ್ ನಿನ್ನ ನೋಡಿದರೆ....!!!
ಚೇರ್ಮನ್ನರ ಭೂಕಬಳಿಕೆ
ಮರೆಯಾದ ಕೃಷಿಗಳಿಕೆ
ಬತ್ತಿ ಮಾಯವಾದ ತೊರೆ
ಗುಳೇ ಹೊರಟ ರೈತ ನೆರೆ

ತಲೆ ಎತ್ತುವ ಮಹಲುಗಳು
ರೆಸಾರ್ಟ್ ರಾಜಕೀಯಗಳು
ಅಲ್ಲಿಯೇ ಕೂಲಿಯಾದ ರೈತಗಳು
ಎಲ್ಲಾ ಎಲ್ಲಾ ನೆನಪಾಗುತ್ತೆ...
ಕಣ್ಣೆವೆ ಹೀಗೇ ಅನಾಯಾಸ
ಒರಸಿಕೊಂಡರೂ ನಿಲ್ಲದೇ
ಮತ್ತೆ ಮತ್ತೆ ತೇವವಾಗುತ್ತೆ.

13 comments:

  1. "ಚೇರ್ಮನ್ನರ ಭೂಕಬಳಿಕೆ
    ಮರೆಯಾದ ಕೃಷಿಗಳಿಕೆ
    ಬತ್ತಿ ಮಾಯವಾದ ತೊರೆ
    ಗುಳೇ ಹೊರಟ ರೈತ ನೆರೆ"...ವಾಹ್! ನಿಜವಾಗಿಯೂ ಹಳ್ಳಿಯ ರೈತನ ಜೀವನದ ಚಿತ್ರಣ ಮನ ಕರಗಿಸುವಂತೆ ಮೂಡಿ ಬಂದಿದೆ!

    ReplyDelete
  2. ಯಾವುದೋ ಒಂದು ಚಿತ್ರ,ಯಾವುದೋ ಒಂದು ಹಾಡು ,ಮನದ ಮೂಲೆಯಲ್ಲಿನ ನೋವಿನ ಎಳೆಯೊಂದನ್ನು ಹೊರತರಬರಬಹುದು!ಮನಮುಟ್ಟುವ ಕವನ.

    ReplyDelete
  3. ಚೆನ್ನಾಗಿ ಬಂದಿದೆ ಕವನ ! ಅತೀ ಪ್ರಸ್ತುತ ಎನಿಸುತ್ತದೆ !
    ಈಗೆಲ್ಲಿ ಆ ಕೆರೆ ? ಹರಿಯುವ ತೊರೆ ? ಎಲ್ಲ ಮಾಯವೇ ! ಅದರ ಜಾಗದಲ್ಲಿ ತಲೆಯೆತ್ತುವ ಬಹುಮಹಡಿ ಕಟ್ಟಡಗಳ ಹೆಸರು ಮಾತ್ರ " ಲೇಕ್ ವ್ಯೂ " , ರಿವರ್ ವ್ಯೂ " ಇತ್ಯಾದಿ .....
    ಹ್ಮ್ .. ಹಳೆಯದೆಲ್ಲ ಮತ್ತೆ ನೆನಪಾಗುತ್ತದೆ !!!!

    ReplyDelete
  4. ಪ್ರದೀಪ್ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ........

    ReplyDelete
  5. ಡಾಕ್ಟ್ರೇ, ನಿಜ ಹಳ್ಳಿ ಗದ್ದೆ ಹೊಲಗಳಿಗೆ ಈಗ ವಕ್ರಿಸಿರೋದು ಎಸ್.ಇ.ಜೆಡ್ ಅನ್ನೋ ಭೂತ ....ಪಾಪದ ರೈತರನ್ನ ಕೇಳೊರಿಲ್ಲ...

    ReplyDelete
  6. ಅಬ್ಬಾ....!!! ನನ್ನ ಲೇಖನಕ್ಕೂ ಒಂದು ಸಾರ್ಥಕತೆ ಬಂತಪ್ಪಾ...ಚಿತ್ರಾ ಪ್ರತಿಕ್ರಿಯೆ ಬಂದ್ಮೇಲೆ...ಯಾಕಂದ್ರೆ ಬರೋದೇ ಅಪರೂಪ ಇವರು...ಹಹಹ...ಧನ್ಯವಾದ ಮೇಡಂ..

    ReplyDelete
  7. ಭಾವಜೀವಿಗೆ ಇದು ಸಹಜವಾದದ್ದೇ!

    ReplyDelete
  8. ಸುನಾಥಣ್ಣ... ಈ ಸಲ ಹುಟ್ಟೂರಿಗೆ ಹೋಗುವ ಅವಕಾಶ ಸಿಕ್ತು.. ಅಲ್ಲಿ ಕಂಡದ್ದು ನೋಡಿ ನಿಜಕ್ಕೂ ಕಣ್ಣೀರು ಬಂತು.. ನಮ್ಮ ಊರು ನಂದಗುಡಿ ಎಸ್ ಇ.ಜೆಡ್ ನ ಕಲಹದಲ್ಲಿದೆ.. ಆದರೂ ಕೆಲ ಅಕ್ಕ ಪಕ್ಕದ ಊರಿನೆ ರೈತರ ಕಥೆ ಚಿಂತಾಜನಕ...
    ಧನ್ಯವಾದ ..ಅದ್ರಲ್ಲೂ ಮನದಭಾವ ಒದಿ ಪ್ರತಿಕ್ರಿಯೆ ನೀಡಿದ್ದಕ್ಕೆ..

    ReplyDelete
  9. ಆಶಾವ್ರೇ ಬಹಳ ದಿನಗಳ ನಂತರ....!!! ಧನ್ಯವಾದ.

    ReplyDelete
  10. ಮರೆಯಾಗುತ್ತಿರುವ ಹಳ್ಳಿ ಬದುಕನ್ನು ಚೆನ್ನಾಗಿ ವ್ಯಕ್ತ ಪಡಿಸಿದ್ದೀರ ಸರ್... :)

    ReplyDelete
  11. ಧನ್ಯವಾದ ಕಾವ್ಯ...ನಮ್ಮ ಊರು ನೆನಪಾಯ್ತು ಪ್ರಕಾಶನ ಫೋಟೋ ಕಂಡು...

    ReplyDelete
  12. chandha barediddeera....kushi aaythu odhi

    ReplyDelete