ಚಿತ್ರ: ಹಿಂದೂಸ್ತಾನ್ ಟೈಮ್ಸ್ (Fotos: Hindustan Times)
ಗೊತ್ತಿಲ್ಲ ಮಗು... ಆದರೆ ಬರುತ್ತೆ ಆ ದಿನ...
ತಾತಾ ಭಾರತದ ನಾಗರೀಕತೆ ಅದ್ವಿತೀಯ ಅಂತೆ
ಹೌದು ಪುಟ್ಟಿ
ನಮ್ಮ ರಾಜ ಮಹರಾಜರು ಪ್ರಜಾಹಿತಚಿಂತಕರಾಗಿದ್ದರಂತೆ
ಹೌದು ಪುಟ್ಟಿ ಕೆಲವರು ಹೆಚ್ಚು ಮತ್ತೆ ಕೆಲವರು ಕಡಿಮೆ
ಆದರೆ ಈಗಿನ ನಮ್ಮ ಆಳುವವರು ಯಾಕಜ್ಜಾ ತುಂಬಾ ಹೆಚ್ಚು ಕಮ್ಮಿ..
ನನಗೆ ಗೊತ್ತಿಲ್ಲ ಮಗು... ಅದಕ್ಕೇ ನಾನು ಕೂತೀನಿ....
ಅಜ್ಜಾ..
ಹೇಳು ಪುಟ್ಟೀ..
ಭ್ರಷ್ಠಾಚಾರ ನಿನಗೊಬ್ಬನಿಗೇ ಕೆಟ್ಟದ್ದು ಯಾಕೆ?
ಇಲ್ಲಾ ಪುಟ್ಟಿ..ನಿನಗೂ ಕೆಟ್ಟದ್ದೇ ಅಲ್ವಾ ಅದಕ್ಕೇ..
ಇಲ್ಲಿ ಕುಂತಿರೋರೆಲ್ಲರಿಗೂ ಕೆಟ್ಟದ್ದು ಅದಕ್ಕೇ..
ಬರಲು ಆಗದೆ, ದಿನದ ಹೊಟ್ಟೆಪಾಡಿಗೆ ಹೋಗುವವರಿಗೂ
ಕಡೆಗೆ ನಿನ್ನಪ್ಪ ನಿನ್ನ ಅಣ್ಣನ ಕೆಲ್ಸಕ್ಕೆ ಲಂಚ ಕೊಡ್ಲಿಲ್ವಾ ಅದಕ್ಕೇ..
ಎಲ್ಲಾರಿಗೂ ಕೆಟ್ಟದ್ದೇ.....
ಮತ್ತೆ ಮಂತ್ರಿಗಳಿಗೆ ಅಧಿಕಾರಿಗಳಿಗೆ ..??
ನನಗೆ ಗೊತ್ತಿಲ್ಲ ಮಗೂ.. ಅದಕ್ಕೇ ಕೂತೀನಿ..
ನಂಗೊಂದ್ ಮಾತ್ ಹೇಳಜ್ಜಾ
ಏನ್ ಪುಟ್ಟಿ.?
ನಮ್ಮ ಆಳೋರನ್ನ ನಾವು ಆರಿಸೋದಲ್ವಾ?
ಹೌದು ಪುಟ್ಟಿ ನಿಜ ನಿನ್ ಮಾತು..
ಮತ್ತೆ ಅವರು ನಾವು ಹೇಳೋದನ್ನ..ಮತ್ತೆ
ನಮಗೆ ಒಳ್ಳೆದಾಗೊದನ್ನ ಮಾಡ್ಬೇಕಲ್ವಾ,,?
ಹೌದು ನೂರಕ್ಕೆ ನೂರು ನಿಜ ಪುಟ್ಟಕ್ಕ...
ಮತ್ತೆ ಕೋಟ್ಯಾಂತರ ಜನದ ಒಳಿತ್ಗೆ...
ಭ್ರಷ್ಠಾಚಾರ ತಡೆಗೆ ಕಾನೂನು ಮಾಡೋಕೆ ಮೀನ ಮೇಷ ಯಾಕೆ..?
ಗೊತ್ತಿಲ್ಲ ನನ್ ಕಂದಾ... ಅದಕ್ಕೆ ಕೂತೀನಿ..
ನಿನ್ನನ್ನೂ ಕೂರ್ಸೀನಿ.. ಎಷ್ಟೋ ಕೋಟ್ಯಾಂತರ ಜನ್ರನ್ನ ಕೂರ್ಸೀನಿ...
ಒಂದೇ ನಿರೀಕ್ಷೆಲಿ..... ಬರುತ್ತೆ ಆ ದಿನ ಅಂತ....
ಆಜಾದೂ..
ReplyDeleteಇದು ನಮ್ಮೊಳಗಿನ ಮಾತು...
ಕಟು ವಾಸ್ತವ ..
ಕಹಿ ಸತ್ಯ...
ಬ್ರಷ್ಟಾಚಾರ ಕೂಡ ಒಂದು ಥರಹದ "ಭಯೋತ್ಪಾದನೆ"..
ಒಳ್ಳೆಯ ಪ್ರಬಲ ಲೋಕಪಾಲ ಕಾನೂನು ತರಲು ಯಾಕೆ ಹಿಂಜರಿಕೆ? ಅಂಜಿಕೆ?
ಎಷ್ಟು ಸ್ಪಷ್ಟವಾದ ಮಾತುಗಳು... ಮೆಚ್ಚಿದೆ ನಿಮ್ಮ ರಚನೆಯನ್ನು ... ನಿಮ್ಮ ಹೆಸರು ಗೊತ್ತಿಲ್ಲ... ಆದರೆ ಜಲನಯನ .. ಸುಂದರ ತಾಣ... ಸೊಗಸಾದ ಬರಹಗಳು... :)
ReplyDeleteಆಜಾದಣ್ಣ ಅಜ್ಜನ ಜೊತೆಗೆ ನಾವೂ ಕುಂತೀವಿ. ನಿಮ್ಮ ಲೇಖನಿಯ ಛಾಟಿ ನಮ್ಮ ತೂಕಡಿಕೆಯ ಹರಿಸಲೀ...
ReplyDeleteಸಾಮಾಜಿಕ ಸುಧಾರಣೆಯು ಸರ್ವಕಾಲೀನ ವ್ರಣ!
ಅದು ಒಂದೇ ಏಟಿಗೆ ಸಂಹಾರವಾಗ ಬಲ್ಲದಲ್ಲ ಸೈತಾನನಲ್ಲ,
ಭ್ರಷ್ಟತೆಯು ವ್ಯವಸ್ಥೆಯ ಕೋವೆ ಕೋವೆಯಲ್ಲೂ ಶುದ್ಧೀಕರಣಗೊಳ್ಳ ಬೇಕಾದ ಕ್ಯಾನ್ಸರ್!
ಜಲನಯನ,
ReplyDeleteಹರಿತವಾದ ವಿಡಂಬನೆ.
ನಮ್ಮ ರಾಜಕಾರಣಿಗಳಿಗೆ ತಾಗೀತೆ ಇದು?
ಗೊತ್ತಿಲ್ಲ, ಪುಟ್ಟಿ!
ಪ್ರಕಾಶೂ ಕೊನೆಗೆ ಕೊಟ್ರು ಪುಢಾರುಗಳು ಕೈಯ್ಯಾ... ಅಲ್ಲಾ ಸಿಬಿಐ ನ ಹೊರಗಿಟ್ಟ್ರೆ ಎಲ್ಲಾ ಸಿಬಿಐ ಕೈಲೇ ಮಾಡಿಸ್ಬಹುದು ಅನ್ನೋ ಹುನ್ನಾರ...ಛೇ ಕಚಡಾ ನಾಲೆ ಜನ...
ReplyDeleteಪ್ರಶಾಂತ್ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ... ನನ್ನ ಪ್ರೊಫೈಲ್ ನೋಡಿ ನನ್ನ ಹಿನ್ನೆಲೆ ಗೊತ್ತಾಗುತ್ತೆ. ಜಲನಯನಕ್ಕೆ ಸ್ವಾಗತ.
ReplyDeleteಬದರಿ ಧನ್ಯವಾದ ನಿಮ್ಮ ಅನಿಸಿಕೆಗೆ...
ReplyDeleteಸುನಾಥಣ್ಣ ಗೊತ್ತಾಯ್ತಲ್ಲ ರಾಜಕಾರಣಿಗಳು ಎಮ್ಮೆ ಚರ್ಮಿಗಳು... ಸಿ ಬಿ ಐ ನ ಲೋಕಾಯುಕ್ತದ ಹೊರಗಿಟ್ರೆ ಪಾರಾಗೋಕೆ ಚಾನಲ್ ಸಿಕ್ಕಹಾಗೆ...ಹಹಹ ತೋರಿಸೇ ಬಿಟ್ರು ತಮ್ಮ ಬುದ್ಧಿನಾ...
ReplyDeleteಅಜಾದ್ ಸರ್;ಚಂದದ,ಚೊಕ್ಕ ಬರಹ.ಇಷ್ಟವಾಯಿತು.ಬೀಚಿಯವರ ಪುಸ್ತಕ 'ತಿಮ್ಮನ ತಲೆ'ನೆನಪಾಯಿತು.ಭ್ರಷ್ತಾಚ್ರವಿಲ್ಲದ ದಿನಗಳು ಬೇಗನೆ ಬರಲಿ.ನಮಸ್ಕಾರ.
ReplyDeleteನಿಜ ಬಯ್ಯ....ರಾಜಕಾರಣಿಗಳು ಅಂದರೇನೆ ಅಸಹ್ಯಿಸಿಕೊಳ್ಳುವ ಮಟ್ಟಕ್ಕಿಳಿದುಬಿಟ್ಟಿದ್ದಾರೆ ನಮ್ಮ ಭಾರತವನ್ನಾಳುವ ಮಂತ್ರಿಗಳು. ಸ್ವಾತಂತ್ರ ಸಂಗ್ರಾಮ ದ ಮಾದರಿಯಲ್ಲೇ ಹೋರಾಟ ನಡೆದಾಗ ಮಾತ್ರ ಈ ಬ್ರಷ್ಟಾಚಾರ ಪಿಶಾಚಿಯನ್ನು ಓಡಿಸಲು ಸಾಧ್ಯವಾಗಬಹುದೇನೋ ಅಲ್ವಾ.
ReplyDeleteನಾವುಗಳು ಎಷ್ಟು ಹೇಳಿದರೂ ರಾಜಕಾರಣಿಗಳ ಬಾಲ ಡೊಂಕೆ... ನಿಮ್ಮ ವಿಡಂಬನಾತ್ಮಕ ಶೈಲಿ ಇಷ್ಟವಾಯಿತು. ಮುಂದುವರಿಯಲಿ ಇಂತಹ ಕವನಗಳು.
ReplyDeleteಸಕಾಲಿಕ ಲೇಖನ... ರಾಜಕೀಯ ವ್ಯವಸ್ಥೆ ತೀರಾ ಕಳಪೆಯಾಗಿಬಿಟ್ಟಿದೆ... :(
ReplyDeleteಡಾ. ಟಿಡಿಕೆ. ಧನ್ಯವಾದ ನಿಜಕ್ಕೂ ಭ್ರಷ್ಠರ ಯೋಜನೆಗಳು ಕುಟಿಲತೆಗಳು ವಿಭಿನ್ನ... ಸಿಬಿಐ ಮರೆಯಲ್ಲಿ ನುಣುಚಿಕೊಳ್ಳೋ ರಾಜಕಾರಣಿಗಳು...ಛೇ ಅನ್ಸುತ್ತೆ.
ReplyDeleteಜನಶಕ್ತಿ ಒಂದಾದರೆ ಏನಾದರೂ ಮಾಡಬಹುದು... ಧನ್ಯವಾದ ಬೆಹನಾ...
ReplyDeleteಧನ್ಯವಾದ ಸುಗುಣ... ಬಾಲ ಕಟ್ ಮಾಡಿದ್ರೆ ಮಾತ್ರ ಸಾಧ್ಯ ಸುಧಾರಣೆ...
ReplyDeleteಕಾವ್ಯ ಧನ್ಯವಾದ ಹೌದು ಕಳಪೆ ಕೊಳಚೆ ನಿಧಾನವಾಗಿ ತೊಳೆಯೋದು ಮಾತ್ರ ಸಾಧ್ಯ.
ReplyDeleteಪುಟ್ಟಿ ಮತ್ತು ಅಣ್ಣಾ ರವರ ಸ೦ಭಾಷಣೆ ಚೆನ್ನಾಗಿದೆ. ಪ್ರಸ್ತುತ ಸನ್ನಿವೇಶಕ್ಕೆ ಹೊ೦ದುವ೦ತಿದೆ. ಅಭಿನ೦ದನೆಗಳು. ನನ್ನ ಬ್ಲಾಗ್ ಗೆ ಭೇಟಿ ಕೊಡಿ.
ReplyDeleteಧನ್ಯವಾದ ಪ್ರಭಾಮಣಿ ಮೇಡಂ... ಇನ್ನೂ ಏನೇನು ಇದೆಯೋ ಮುಂದೆ ಗೊತ್ತಿಲ್ಲ.. ಇವರ ಆಂದೋಲನ ಬೇರೆ ದಿಶೆ ಹಿಡಿಯದೇ ಗುರಿಯತ್ತ ಸಾಗಿದ್ರೆ ಅದೇ ನಮಗೆಲ್ಲಾ ಸಿಗೋ ಜಯ.
ReplyDeletekatu satyavanna sundaravigi haritavaada vidmbane inda heliddiraa.. sir..
ReplyDeletekevala rajakaranigalla.. namma janagalu tamma javbdariyannu haribekide.. avagale elladakku ondu mutki or antya sigalikke sadya...
danyavadagalu...
ಪುಟ್ಟಿಯ ದಿಟ್ಟ ಪ್ರಶ್ನೆಗೆ..ಅಣ್ಣನ ಉತ್ತರ...ನಿಜಕ್ಕೂ ನೈಸ್...ಬಹಳ ಇಷ್ಟವಾಯ್ತು...
ReplyDeleteನೀವು ಬರೆದಿರೋ ಶೈಲಿ ಇನ್ನೂ ಇಷ್ಟವಾಯ್ತು..
ಚೆನ್ನಾಗಿದೆ...
ಧನ್ಯವಾದ ತರುಣ್..ಹೌದು ನಮ್ಮ ಜವಾಬ್ದಾರಿ ಅರಿತ್ಕೋಬೇಕು...ಎಲ್ಲರೂ ಲಂಚ ಕೊಡೊಲ್ಲ ಅಂತ ತೀರ್ಮಾನಿಸ್ಇದರೆ ಲಂಚ ತಗೊಳ್ಳೋನು ಯಾರ ಕೆಲ್ಸ ಮಾಡ್ತಾನೆ...???
ReplyDeleteಸುಶ್ಮಾ, ಧನ್ಯವಾದ... ಮಕ್ಕಳ ಕೆಲ ಪ್ರಶ್ನೆಗಳಿಗೆ ನಾವು ನಿರುತ್ತರಿಗಳಾಗೋದು ಸಹಜ...
ReplyDeleteಧನ್ಯವಾದ ವಸಂತ್, ಹೊಸ ವರ್ಷದ ಹಾರ್ದಿಕ ಶುಭಾಶಯಗಳು....
ReplyDeleteಇಂದಿಗೂ ನಿರೀಕ್ಷೆಯಲ್ಲಿ....
ReplyDeleteಹುಸಿ ಆಗದಿರಲಿ ನಮ್ಮ ನಿಮ್ಮ ನಿರೀಕ್ಷೆಗಳು....
ಜೈ ಅಣ್ಣ ಹಜಾರೆ.....
ಹೊಸ ವರುಷದಂದು ಅಣ್ಣಾ ಹಜಾರೆಯವರ ಕನಸು ನನಸಾಗಲಿ ಮತ್ತು ನಿಮಗೂ ಹೊಸ ವರುಷದ ಹಾರ್ದಿಕ ಶುಭಾಷಯಗಳು..
ReplyDeleteಇಷ್ಟವಾಯಿತು....ಚೆನ್ನಾಗಿದೆ....ಜೈ ಅಣ್ಣ...
ReplyDeleteಕೀರ್ತಿ ಧನ್ಯವಾದ ಅಣ್ಣಾ ಭ್ರಷ್ಟಾಚಾರದ ಹೋರಾಟ ಬೇರೆ ದಿಕ್ಕು ಬದಲಾಯಿಸದೇ ಮುನ್ನಡೆದರೆ ಅದೇ ನಮ್ಮೆಲ್ಲರ ಜಯ.
ReplyDeleteಆಶಾವ್ರೆ ಧನ್ಯವಾದ ಜೈ ಅಣ್ಣ...
ReplyDeleteಧನ್ಯವಾದ ಮಂಜು...ಹೊಸ ವರ್ಷದ ಹಾರ್ದಿಕ ಶುಭಾಶಯಗಳು ನಿಮಗೆಲ್ಲಾ.
ReplyDelete