Friday, January 20, 2012


ಕಾರ್ಟೂನ್ ಕೃಪೆ: ಕ್ಲಿಪ್ ಆರ್ಟ್.ಕಾಂ (ಅಂತರ್ಜಾಲ)

ಎಸ್ರೇ ಇಲ್ದೋರ್ಪಾಡು
ನನ್ನ ಸ್ನೇ-ಹಿತ ಹೇಳ್ದ
“ಬರೀ ಮಗಾ ನೀನೂ ಕವನಾನ”
ನಾನೂ ಗೀಚ್ದೆ, ಬಿಸಾಕ್ದೆ,
ಗೀಚ್ದೆ ಮಗ್ಚಾಕ್ದೆ, ಕಡೆಗೆ....
“ಸೂಪರ್ ಕಣೋ ಅಂದ ಸ್ನೇ-ಹಿತ”
ಕಳ್ಸು “ಸಂಪದ”ಕ್ಕೆ
ಮೆಲ್ಲಗೆ ’ಮಲ್ಲಿಗೆ’ಗೆ
ಇಲ್ಲ ’ಮಯೂರ’ ಕ್ಕೆ ಅಂದ.
ಕಳಿಸ್ದೆ...ಕಾದೆ..ಕಾದೆ..ಶಬರಿ
ಕಾದ್ಕೊಂಡ್ ಮುದ್ಕಿ ಆದಂಗೆ..
ವಿಶಾದಾನೂ ಇಲ್ಲ..
ಭೇಷ್ವಾದ ನೂ ಇಲ್ಲ...
ಆಮೇಲೇ ಯಾರೋ ಹೇಳಿದ್ರು,
ಓಗ್ಲಿ ಬಿಡೋ ಅವು ಸೇರಿರ್ತಾವೆ-ಕ.ಬು.
ನನ್ನ ಸ್ನೇ-ಹಿತ ಮತ್ತೆ ಹೇಳ್ದ
“ನಿಜಕ್ಕೂ ಚನ್ನಾಗಿ ಬರೀತಿಯ
ಕಳ್ಸು ಇನ್ನೂ ಒಂದಷ್ಟು”
ಬರ್ದೆ, ಕಳಿಸ್ದೆ, ಅವ್ಗಳದೂ ಅದೇ ಪಾಡು
ಸೇರಿದ್ವು ಅವ್ಗಳ ಪೂರ್ವಿಕರಂಗೆ
ನಮ್ಮಂಥವರ ಕವನ ಸೇರೋ ಕಸದ ಗೂಡು.
ಮತ್ತೆ ಹೇಳ್ದ ಸ್ನೇ-ಹಿತ
ಅದ್ಕೆ ನಾನಂದೆ
ಲೋ ನಿಮ್ಮಂಥೋರ್ಗೆ ಲಕ್ಕು
ನಮ್ಮಂತೋರು ಅಳಬೇಕು ಬಿಕ್ಕು
ಕವನ, ಕಥೆ ಎಲ್ಲಾ ಪ್ರಕ್ಟ ಆಗ್ತವೆ
ಏನಾದ್ರೂ ಬರೆದ್ರೆ ನೀವ್ಗಳು
ನಾವರ್ಕಂಡ್ ಬರ್ದ್ರೂ ಕ.ಬು ಸೇರ್ತವೆ
ಏನೇಳ್ಳಿ..ಬುಡು ಇದ್ ನಮ್ಗೋಳು.
ಮತ್ತೆ ಏಳ್ದ ಸ್ನೇ-ಹಿತ..
ಇವ್ನ್ಯಾಕೊ ಬಿಡಂಗಿಲ್ಲ ಅಂತ
ನಾನೇ ಎಲ್ಲಾ ಕವ್ನಾ ಸೇರ್ಸಿ
ಪ್ರಕ್ಟ ಮಾಡ್ಸೇಬಿಟ್ಟೆ ನಂದೇ ಆದ
ಒಂದು ಕವನ ಸಂಕಲ್ನಾ..
ಯತ್ವಾಸ ಒಂದೇಯಾ,,,
ಅವಾಗ್ಕೂ...ಈವಾಕ್ಕೂ..
ಬಿಡ್ಬಿಡ್ಯಾಗೋಗ್ತಿದ್ವು ಕ.ಬು. ಆವಾಗ
ಒಗ್ಗಟ್ಟಾಗಿ ಪುಸ್ತ್ಕಾಗಿ
ಜೊತ್-ಜೊತ್ಯಾಗವೆ ಕ.ಬು.ಲಿ ಈವಾಗ 

16 comments:

 1. ನಿಮ್ಮ ಕವನಗಳು ಕ.ಬು. ಸೇರಲ್ಲ ಸರ್ :)
  ಈ ಸಾಲುಗಳು ಚೆನ್ನಾಗಿವೆ
  ಸ್ವರ್ಣಾ

  ReplyDelete
 2. ಯಾಕ್ ಸರ್ ಹೀಗಂತೀರಿ?

  ReplyDelete
 3. ಧನ್ಯವಾದ ... ಸುವರ್ಣರವರೇ.. ನಿಮ್ಮಲ್ಲಿಗೆ ಬಂತು ನಿಮ್ಮ ಪ್ರತಿರ್ಕಿಯೆಗೆ ಅರ್ಹವಾಯಿತು ಈ ಕವನ ಅದೇ ಇದರ ಸಾರ್ಥಕತೆ ಅಲ್ವಾ...??

  ReplyDelete
 4. ಗುರು...ಸುಮ್ಮನೆ ಹಾಗೇ ಬರೆದದ್ದು.... ಇದಕ್ಕೆ ಯಾರೂ ಕಾರಣರಲ್ಲ...ಹಹಹ ಧನ್ಯವಾದ.

  ReplyDelete
 5. ಹಾಗೆ ಸುಮ್ಮನೆ ಬರೆದ್ದಿದ್ದು ಅಂದರೂ ಚೆನ್ನಾಗಿಯೇ ಇದೆ ಸರ್....
  ಬಹುಶಃ ಕೆಲ ವರ್ಷಗಳ ಹಿಂದಿನ ಯುವ ಲೇಖಕರಿಗೆ ಇಂತಹ ಪಾಡು ಇದ್ದಿರಲಿಕ್ಕೂ ಸಾಕು... ಆದರೆ ಈಗ ಬ್ಲಾಗ್ ಲೋಕದಲ್ಲಿ ಪತ್ರಿಕೆಗಳಿಗೆ ಕಳಿಸಿ ಕಾಯೋ ಪೇಚಾಟ ಇಲ್ಲ... ನಮ್ಮ ಕುಶಿಗೆ ನಮ್ಮ ಬ್ಲಾಗ್... ಒಂದಿಬ್ಬರು ಪ್ರತಿಕ್ರಿಯಿಸಿ ಬೆನ್ನು ತಟ್ಟಿದರೆ ಅದೇ ಸಾಕು..ಆಕಾಶಕ್ಕೆ ಮೂರೇ ಗೇಣು..

  anyway ಕವನ ಚೆನ್ನಾಗಿದೆ ಸರ್...

  ReplyDelete
 6. ಸುಶ್ಮಾ, ಇದು ಕೆಲ ಯುವ ಲೇಖಕರು (ಇಲ್ಲಿ ಬರೀ ಕವನ ಕವಿತೆಗೆ ಕಥೆಗೆ ಸೀಮಿತ ಮಾಡಿಲ್ಲ ನನ್ನ ಅನಿಸಿಕೆ..ಇದು ವೈಜ್ಞಾನಿಕ ವಿಷಯ ಮಂಡನಾ ಲೇಖನಗಳಿಗೂ ಅನ್ವಯಿಸುತ್ತೆ)ಹಾಗಾಗಿ ಒಟ್ಟಾರೆ ವಸ್ತುಸ್ಥಿತಿಯ ಬಿಂಬವಾಗಿ ಮೂಡಿಸೋ ಪ್ರಯತ್ನ ಅಷ್ಟೇ..ಧನ್ಯವಾದ

  ReplyDelete
 7. ಜಲನಯನರೆ,
  ಕವನ ಸೂಪರ್ ಆಗಿದೆ.

  ReplyDelete
 8. super sir
  ka bu chennagide :)

  bareyuttiri, kalisuttiri :)

  ReplyDelete
 9. ಧನ್ಯವಾದ ಸುನಾಥಣ್ಣ... ಹಾಗೇ ಸುಮ್ಮನೆ...

  ReplyDelete
 10. ಡಾ.ಗುರು ಧನ್ಯವಾದ...ಬರೆ ಬರೆ ಬರೆಯುತ್ತಿರು...ನಿಮ್ಮ ಅಭಿಮಾನ ಹೀಗೇ ಇರಲಿ...

  ReplyDelete
 11. ಕವನ ಬರೆದು ಗೀಚಿ ಬ್ಲಾಗಿಗೆ ಹಾಕಿ.ಬ್ಲಾಗಿನ ಸ್ನೇಹಿತರು ಖುಷಿ ಪಡುತ್ತಾರೆ.ಚೆಂದದ ಕವನ.

  ReplyDelete
 12. ಡಾಕ್ಟ್ರೇ ಅದೇಯಾ ಮಾಡ್ತಿರೋದು ಮೂರ್ವರ್ಸದಿಂದಾ.... ಹಹಹ ನಿಮ್ಮಂತೋರು ಬತ್ತಾರೆ ಅಂತಲೇ ಬರ್ಯೋದು... ಧನ್ಯವಾದ ಅಂಗೇಯಾ...

  ReplyDelete
 13. ಸಂದಾಕಿದೆ ಕವ್ನ, ನಗೀ ಮೂಡ್ತದ ಓದೋನ್ ಮಕದಾಗ......

  ReplyDelete
 14. ಧನ್ಯವಾದ ಪ್ರವರ ಕೆ.ವಿ. ನನ್ನಲ್ಲಿಗೆ ಬಂದು ಪ್ರೋತ್ಸಾಹಿಸಿದ್ದಕ್ಕೆ)

  ReplyDelete
 15. ತುಂಬ ತುಂಬ ಅಂದ್ರೆ ತುಂಬ ಇಷ್ಟವಾಯ್ತು..

  ReplyDelete
 16. ಧನ್ಯವಾದ ಕೀರ್ತಿ...ನಿಮ್ಮ ಅಭಿಮಾನ ಹೀಗೇ ಇರಲಿ

  ReplyDelete