Thursday, January 26, 2012



ಜೈ ಭಾರತಾಂಬೆ


ಕೇಸರಿಯ ಶೌರ್ಯವದು,
ಹಸಿರುಟ್ಟ ಹರಿತವದು
ಶಾಂತಿಯಾ ಮಂತ್ರವದು,
ನಡುನೆಡೆವ ಚಕ್ರವದು
ಜೈ ಜೈ ಜೈ ಭಾರತಾಂಬೆ

ಇಲ್ಲುಂಟು ಏನಿಲ್ಲ
ಎಲ್ಲುಂಟು ಏಕಿಲ್ಲ
ನೀರುಂಟು ಇಂಗಿಲ್ಲ
ದಾಹವಿದು ಸತ್ತಿಲ್ಲ
ಜೈ ಜೈ ಜೈ ಭಾರತಾಂಬೆ

ದೇಶವಿದು ಸಿರಿವಂತ
ಸಾವ್ರಾರು ಹಣವಂತ
ಸುಡುವರು ಜೀವಂತ
ಬಡವರದು ಧಾವಂತ
ಜೈ ಜೈ ಜೈ ಭಾರತಾಂಬೆ

ಕಿತ್ತಿಲ್ಲಿ ತಿನ್ನುವವರು
ಹತ್ತಿಲ್ಲಿ ಉರಿಸುವವರು
ಸಾಲದಲಿ ಬೆಳೆವವರು
ಆದರಿಲ್ಲೆಲ್ಲ ಉಳ್ಳವರು
ಜೈ ಜೈ ಜೈ ಭಾರತಾಂಬೆ

ಖಾಕಿಲಿ ನಿಯ್ಯತ್ತೇ ಖಾಲಿ
ಕಾವಿಲಿ ಭಕ್ತಿಯದು ಜೋಲಿ
ಖಾದಿಯಲಿ ಗಾಂಧಿಗೇ ಗೋಲಿ
ಹೊಲವನ್ನೇ ಮೇಯುವುದು ಬೇಲಿ
ಜೈ ಜೈ ಜೈ ಭಾರತಾಂಬೆ

ಉಗ್ರಾಣದಿ ತುಂಬಿ ಹೆಗ್ಗಣ
ಗ್ರಾಮದಲ್ಲೀಗಿಲ್ಲ ದಿಬ್ಬಣ
ಗಣಿನೆಲವ ಮಾರಿ ಕಬ್ಬಿಣ
ರಾಜಕಾರಣಿಯದೀಗ ರಿಂಗಣ
ಜೈ ಜೈ ಜೈ ಭಾರತಾಂಬೆ

ಹೀಗಿದ್ದೂ ದಿಕ್ಕೆಡದಂತೆ ಹರಸು
ಹಿಗ್ಗಿದೆಯ ಕುಗ್ಗದಂತೆ ಬೆಳೆಸು
ಹಸಿರುಸಿರಾಡುವಂತೆ ಉಳಿಸು
ಪ್ರತಿ ರಕ್ತದಲಿ ದೇಶಪ್ರೇಮವ ಬೆರೆಸು
ಜೈ ಜೈ ಜೈ ಭಾರತಾಂಬೆ

13 comments:

  1. ಗಣರಾಜ್ಯೋತ್ಸವದ ಶುಭಾಶಯಗಳು ಸರ್...

    ಜೈ ಕರ್ನಾಟಕ...ಜೈ ಭಾರತ ಮಾತೆ...

    ReplyDelete
  2. ನಿಮಗೂ ಗಣತಂತ್ರದಿನದ ಹಾರ್ದಿಕ ಶುಭಕಾಮನೆಗಳು ಸುಶ್ಮಾ... ಧನ್ಯವಾದ ನಿಮ್ಮ ಮೊದಲ ಧ್ವಜ ನಮನಕ್ಕೆ.

    ReplyDelete
  3. ಗಣರಾಜ್ಯವು ಹೆಗ್ಗಣರಾಜ್ಯವಾಗುತ್ತಿರುವದನ್ನು ಸೂಚಿಸಿದ್ದೀರಿ. ಮತ್ತೆ ಇದು ಗಣರಾಜ್ಯವಾಗಲಿ ಎಂದು ಹಾರೈಸೋಣ. ಗಣರಾಜ್ಯದ ಹಾರ್ದಿಕ ಶುಭಾಶಯಗಳು.

    ReplyDelete
  4. ಸುನಾಥಣ್ಣ...ಧನ್ಯವಾದಗಳು...ನಿಮಗೂ ಗಣಾರಾಜ್ಯೋತ್ಸವ ಶುಭಾಶಯಗಳು....

    ReplyDelete
  5. ಖಾಕಿಲಿ ನಿಯ್ಯತ್ತೇ ಖಾಲಿ
    ಕಾವಿಲಿ ಭಕ್ತಿಯದು ಜೋಲಿ
    ಖಾದಿಯಲಿ ಗಾಂಧಿಗೇ ಗೋಲಿ
    ಹೊಲವನ್ನೇ ಮೇಯುವುದು ಬೇಲಿ

    ಅದ್ಭುತ ಸಾಲುಗಳು ಸರ್..

    ReplyDelete
  6. ಸಂಧ್ಯಾ...ಧನ್ಯವಾದ..ನಿಮ್ಮ ಪತಿಕ್ರಿಯೆಗೆ.......

    ReplyDelete
  7. ನಿಮ್ಮ ಎಲ್ಲ ಕವನಗಳು ಎಂದಿಗೂ ಸೂಪರ್... ಅಭಿನಂದನೆಗಳು..
    ಗಣರಾಜ್ಯ ದಿನದ ಶುಭಾಷಯಗಳು...
    ನನ್ನ ತಾಣಕ್ಕೆ ಒಮ್ಮ ಭೇಟಿ ನೀಡಿ..

    ReplyDelete
  8. ಕೀರ್ತಿ..ಧನ್ಯವಾದ ನಿಮ್ಮಭಿಮಾನಕ್ಕೆ ಮತ್ತೆ ನಿಮ್ಮ ಪ್ರತಿಕ್ರಿಯೆಗೆ...

    ReplyDelete
  9. ಆಜಾದೂ...

    ಕವನ...
    ಕವನದ ಆಶಯ ತುಂಬಾ ಚೆನ್ನಾಗಿದೆ....

    ReplyDelete
  10. ಥ್ಯಾಂಕ್ಸ್ ಪ್ರಕಾಶೂ...

    ReplyDelete
  11. ತುಂಬಾ ಚೆನ್ನಾಗಿದೆ ಮತ್ತು ಮೊನಚಾಗಿದೆ.
    ನಿಮ್ಮ ಹಾರೈಕೆ ನಿಜವಾಗಲಿ
    ಸ್ವರ್ಣಾ

    ReplyDelete
  12. ಸ್ವರ್ಣಾ ಧನ್ಯವಾದ ನಿಮ್ಮ ಅಭಿಪ್ರಾಯ ಮತ್ತು ಪ್ರತಿಕ್ರಿಯೆಗೆ.

    ReplyDelete
  13. JAI HOOOOOOO ದೇಶವಿದು ಸಿರಿವಂತ
    ಸಾವ್ರಾರು ಹಣವಂತ
    ಸುಡುವರು ಜೀವಂತ SUPERB LINES

    ReplyDelete